Tag: ಪಟ್ಟಣ ಪಂಚಾಯ್ತಿ

  • ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು- ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯನ ಬರ್ಬರ ಕೊಲೆ

    ಭೀಮಾತೀರದಲ್ಲಿ ಮತ್ತೆ ಹರಿದ ನೆತ್ತರು- ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯನ ಬರ್ಬರ ಕೊಲೆ

    ವಿಜಯಪುರ: ಭೀಮಾತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ತಡರಾತ್ರಿ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಭೀಕರ ಕೊಲೆ ನಡೆದಿದೆ.

    ಆಲಮೇಲ ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ ಪ್ರದೀಪ ಎಂಟಮಾನ ಭೀಕರ ಕೊಲೆ ನಡೆದಿದೆ. ರೌಡಿ ಶೀಟರ್ ಆಗಿದ್ದ ಪ್ರದೀಪ ಎಂಟಮಾನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಸ್ನೇಹಿತರೊಂದಿಗೆ ತೆರಳಿದ್ದ. ಇದೇ ವೇಳೆ ನಾಲ್ಕೈದು ದುಷ್ಕರ್ಮಿಗಳಿಂದ ಅಟ್ಯಾಕ್ ನಡೆದಿದೆ.

    ಕಲ್ಲು ಹಾಗೂ ಬಡಿಗೆಗಳಿಂದ ಹೊಡೆದು ಪ್ರದೀಪ ಎಂಟಮಾನ ಕೊಲೆ ಮಾಡಲಾಗಿದ್ದು, ಪ್ರದೀಪ ಎಂಟಮಾನ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಆಲಮೇಲ ಪೊಲೀಸರ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

    ಈ ಸಂಬಂಧ ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನನ್ನ ಹುಟ್ಟಿಸಿದ್ಯಾಕೆ?- ತಾಯಿಯ ಹೆರಿಗೆ ಮಾಡಿಸಿದ್ದ ವೈದ್ಯರ ವಿರುದ್ಧ ಯುವತಿ ಕೇಸ್

  • ನನ್ನ ಸಾವಿಗೆ ಪಕ್ಷದ ಮುಖಂಡರೇ ಕಾರಣ – ಪಟ್ಟಣ ಪಂಚಾಯ್ತಿ ಸದಸ್ಯೆ ಆತ್ಮಹತ್ಯೆಗೆ ಯತ್ನ

    ನನ್ನ ಸಾವಿಗೆ ಪಕ್ಷದ ಮುಖಂಡರೇ ಕಾರಣ – ಪಟ್ಟಣ ಪಂಚಾಯ್ತಿ ಸದಸ್ಯೆ ಆತ್ಮಹತ್ಯೆಗೆ ಯತ್ನ

    ಚಿಕ್ಕಮಗಳೂರು: ನನ್ನ ಸಾವಿಗೆ ನನ್ನ ಪಕ್ಷದ ಮುಖಂಡರೇ ಕಾರಣವೆಂದು ಸ್ಟೇಟಸ್ ಹಾಕಿ ಪಟ್ಟಣ ಪಂಚಾಯ್ತಿ ಸದಸ್ಯೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

    ಜುಬೇದ ಆತ್ಮಹತ್ಯೆಗೆ ಯತ್ನಿಸಿದ ಎನ್.ಆರ್.ಪುರ ತಾಲೂಕಿನ ಮುನ್ಸಿಪಾಲಿಟಿ ಮೆಂಬರ್. ಅಧ್ಯಕ್ಷ ಸ್ಥಾನ ಬಿಟ್ಟು ಕೊಡದಿದ್ದಕ್ಕೆ ಮನನೊಂದು ಜುಬೇದಾ 5-6 ಬಗೆಯ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ.ಇದನ್ನೂ ಓದಿ: ಪ್ರಾಕೃತಿಕ ವಿಕೋಪಕ್ಕೆ ಚೆನ್ನೈ ತತ್ತರ – ಹಿಂದಿಗಿಂತ 5.5 ಪಟ್ಟು ಹೆಚ್ಚು ಮಳೆ

    ಜುಬೇದ ಹಾಲಿ ಅಧ್ಯಕ್ಷೆ ಸುರಯ್ಯಭಾನು ನ.7 ರಂದು ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳ ಒಳ ಒಪ್ಪಂದಂತೆ ರಾಜೀನಾಮೆ ನೀಡಬೇಕಾಗಿತ್ತು. ಆದರೆ ಸುರಯ್ಯಭಾನು ಯೂ ಟರ್ನ್ ಹೊಡೆದು ನಾನು ಆಶ್ರಯ ಸಮಿತಿ ಸಭೆ ಹಾಗೂ ಬಜೆಟ್ ಸಭೆ ನಡೆಸಿಯೇ ರಾಜೀನಾಮೆ ನೀಡುತ್ತೇನೆ ಎಂದು ಪಟ್ಟು ಹಿಡಿದಿದ್ದರು. ಇತ್ತ ಪಕ್ಷದ ಕೆಲ ಮುಖಂಡರುಗಳು ಜುಬೇದಗೆ ಅಧ್ಯಕ್ಷೆ ಮಾಡಲೇಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ಪಕ್ಷ ಕ್ಯಾರೇ ಎನ್ನದೆ ಜುಬೇದ ಅಧ್ಯಕ್ಷೆ ಸ್ಥಾನಕ್ಕೆ ಅಡ್ಡಗಾಲು ಹಾಕಿದ್ದರು ಎನ್ನಲಾಗಿದೆ.

     

    ಸಮಾಜ ಸೇವೆಯಲ್ಲಿ ಜನಮನ ಮನ್ನಣೆ ಪಡೆದಿದ್ದ ಜುಬೇದಗೆ ಅಧ್ಯಕ್ಷ ಸ್ಥಾನ ನೀಡಲು ವಿಳಂಬವಾಗಿದ್ದರಿಂದ ಮನನೊಂದ ಜುಬೇದ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಕೂಡಲೇ ಎನ್.ಆರ್.ಪುರ ಆಸ್ಪತ್ರೆಗೆ ಕೊಂಡೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿದೆ. ಒಟ್ಟಾರೆಯಾಗಿ ಕಾಂಗ್ರೆಸ್ ಮುಖಂಡರಲ್ಲೇ ಜುಬೇದ ಅವರನ್ನು ಅಧ್ಯಕ್ಷೆ ಮಾಡಲು ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂದು ತಿಳಿದುಬಂದಿದೆ.

  • ಹಟ್ಟಿ ಪಟ್ಟಣ ಪಂಚಾಯತಿ ಸಿಬ್ಬಂದಿಗೆ 28 ತಿಂಗಳಿಂದ ಸಂಬಳವಿಲ್ಲ

    ಹಟ್ಟಿ ಪಟ್ಟಣ ಪಂಚಾಯತಿ ಸಿಬ್ಬಂದಿಗೆ 28 ತಿಂಗಳಿಂದ ಸಂಬಳವಿಲ್ಲ

    – ಹೋರಾಟಕ್ಕಿಳಿದ ಪೌರಕಾರ್ಮಿಕರು

    ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣ ಪಂಚಾಯತಿಯಲ್ಲಿ ಕಳೆದ 28 ತಿಂಗಳಿನಿಂದ ಕಾರ್ಮಿಕರ ಸಂಬಳ ಆಗಿಲ್ಲ. ಹೀಗಾಗಿ ಪೌರಕಾರ್ಮಿಕರು, ಸಿಬ್ಬಂದಿ, ಪಟ್ಟಣ ಪಂಚಾಯತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ ಸಂಬಳಕ್ಕಾಗಿ ಒತ್ತಾಯಿಸಿದರು.

    ಪಟ್ಟಣ ಪಂಚಾಯತಿಯಲ್ಲಿ 27 ಜನ ಖಾಯಂ ಪೌರಕಾರ್ಮಿಕರು, 22 ಜನ ದಿನಗೂಲಿ ನೌಕರರಿದ್ದಾರೆ. ಇದರಲ್ಲಿ 2019ರ ಏಪ್ರಿಲ್ ನಿಂದ 22 ಜನ ದಿನಗೂಲಿ ನೌಕರರ ವೇತನ ಆಗಿಲ್ಲ. ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೂ ಸಹ ವೇತನವಾಗಿಲ್ಲ. ಆದರೂ ಎಲ್ಲಾ ಸಿಬ್ಬಂದಿ ಕೋವಿಡ್‍ನಂತಹ ಕಠಿಣ ಸಮಯದಲ್ಲೂ ಸಂಬಳವಿಲ್ಲದೆ ಕೆಲಸ ಮಾಡಿದ್ದಾರೆ.

    ಸಂಬಳ ಇಲ್ಲದೆ ಈಗ ಪರಸ್ಥಿತಿ ಮಿತಿಮೀರಿದ್ದರಿಂದ ಎಂಟು ದಿನದಿಂದ ಕೆಲಸ ಮಾಡುತ್ತಿಲ್ಲ. ಸಂಬಳ ನೀಡುವವರೆಗೆ ಕೆಲಸ ಮಾಡುವುದಿಲ್ಲ ಅಂತ ಪೌರಕಾರ್ಮಿಕರು ಪಟ್ಟುಹಿಡಿದಿದ್ದಾರೆ. ಜಿಲ್ಲಾಧಿಕಾರಿಗಳು ಸಂಬಳ ಬಿಡುಗಡೆ ಮಾಡಿಸಬೇಕು ಅಂತ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬಾಕಿ ವೇತನ ಪಾವತಿಗೆ ಒತ್ತಾಯ: ಹಟ್ಟಿ ಚಿನ್ನದ ಗಣಿ ಕಾರ್ಮಿಕರಿಂದ ಪ್ರತಿಭಟನೆ

  • ರಾಷ್ಟ್ರ ಮಟ್ಟದಲ್ಲಿ ಕಿತ್ತಾಟ, ಪಟ್ಟಣ ಪಂಚಾಯತ್‍ನಲ್ಲಿ ಮೈತ್ರಿ – ಗದ್ದುಗೆ ಹಿಡಿದ ಕೈ, ಕಮಲ

    ರಾಷ್ಟ್ರ ಮಟ್ಟದಲ್ಲಿ ಕಿತ್ತಾಟ, ಪಟ್ಟಣ ಪಂಚಾಯತ್‍ನಲ್ಲಿ ಮೈತ್ರಿ – ಗದ್ದುಗೆ ಹಿಡಿದ ಕೈ, ಕಮಲ

    ಚಾಮರಾಜನಗರ: ರಾಜ್ಯ ಹಾಗೂ ರಾಷ್ಟ್ರದಲ್ಲಿ ಕಿತ್ತಾಡುತ್ತಿರುವ ಬಿಜೆಪಿ ಕಾಂಗ್ರೆಸ್ ಪಕ್ಷಗಳು ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡು ಅಚ್ಚರಿ ಮೂಡಿಸಿವೆ. ಅತಿ ಹೆಚ್ಚು ಸ್ಥಾನಗಳಿಸಿದ್ದ ಜೆಡಿಎಸ್ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಅಧಿಕಾರದ ಗದ್ದುಗೆ ಹಿಡಿದಿವೆ.

    ಒಟ್ಟು 13 ಸದಸ್ಯ ಬಲದ ಹನೂರು ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಜೆ.ಡಿ.ಎಸ್ 6, ಕಾಂಗ್ರೆಸ್ 4 ಹಾಗೂ ಬಿಜೆಪಿ ಮೂರು ಸ್ಥಾನ ಗೆದಿದ್ದವು. ಹೀಗಾಗಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಆದರೆ ಆರು ಸ್ಥಾನಗಳಿಸುವ ಮೂಲಕ ಜೆಡಿಎಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಈ ನಡುವೆ ಬಿಜೆಪಿಯ ಓರ್ವ ಸದಸ್ಯ ಮೃತಪಟ್ಟಿದ್ದರಿಂದ ಒಂದು ಸ್ಥಾನ ಖಾಲಿಯಾಗಿ ಬಿಜೆಪಿ ಎರಡು ಸ್ಥಾನ ಮಾತ್ರ ಹೊಂದಿತ್ತು.

     

    ಇಂದು ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ಮೈತ್ರಿ ಮಾಡಿಕೊಂಡು ಅಧ್ಯಕ್ಷ ಸ್ಥಾನಕ್ಕೆ ಮೈತ್ರಿಕೂಟದಿಂದ ಬಿಜೆಪಿಯ ಚಂದ್ರಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನ ಹರೀಶ್ ಕುಮಾರ್ ಸ್ಪರ್ಧಿಸಿದ್ದರು. ಹಾಗೆಯೇ ಜೆಡಿಎಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಜಮಮ್ತಾಜ್ ಬಾನು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆನಂದ ಕುಮಾರ್ ಕಣಕ್ಕಿಳಿದಿದ್ದರು. ಸ್ವತಃ ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್ ಹಾಗೂ ಹನೂರು ಕಾಂಗ್ರೆಸ್ ಶಾಸಕ ಆರ್.ನರೇಂದ್ರ ಕೈಜೋಡಿಸುವ ಮೂಲಕ ಮೈತ್ರಿಕೂಟದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು.

    ಅಭ್ಯರ್ಥಿಗಳು ಗೆಲ್ಲಲು 8 ಸದಸ್ಯರ ಬೆಂಬಲ ಬೇಕಾಗಿತ್ತು. ಸಂಸದ ಹಾಗೂ ಶಾಸಕರ ಮತ ಸೇರಿ ಬಿಜೆಪಿ ಕಾಂಗ್ರೆಸ್ ಮೈತ್ರಿಕೂಟಕ್ಕೆ 8 ಮತ ಲಭಿಸುವುದರೊಂದಿಗೆ ಅಧ್ಯಕ್ಷರಾಗಿ ಬಿಜೆಪಿಯ ಚಂದ್ರಮ್ಮ, ಉಪಾಧ್ಯಕ್ಷರಾಗಿ ಕಾಂಗ್ರೆಸ್ಸಿನ ಹರೀಶ್ ಕುಮಾರ್ ಆಯ್ಕೆಯಾದರು. ಜೆಡಿಎಸ್ ಅಭ್ಯರ್ಥಿಗಳಿಗೆ ತಲಾ 6 ಮತ ಲಭಿಸಿ ಸೋಲು ಅನುಭವಿಸಬೇಕಾಯ್ತು. ಹನೂರು ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಸ್ಥಳೀಯವಾಗಿ ಬಿಜೆಪಿ ಕಾಂಗ್ರೆಸ್ ಮೈತ್ರಿ ಅನಿವಾರ್ಯವಾಗಿತ್ತು ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸಪ್ರಸಾದ್ ಮೈತ್ರಿಯನ್ನು ಸಮರ್ಥಿಸಿಕೊಂಡಿದ್ದಾರೆ.

    ಇದನ್ನೇ ದೊಡ್ಡ ವಿಷಯವನ್ನಾಗಿ ಮಾಡುವುದು ಬೇಡ, ಹಿಂದೆ ಕೇಂದ್ರದಲ್ಲಿ ಎನ್.ಡಿ.ಎ. ಸರ್ಕಾರಕ್ಕೆ ಫಾರೂಕ್ ಅಬ್ದುಲ್ಲಾ, ಕರುಣಾನಿಧಿ, ಮಮತಾಬ್ಯಾನರ್ಜಿ ಅಂತಹವರೇ ಕೈ ಜೋಡಿಸಿದ್ದರು. ಹಾಗಾಗಿ ಸ್ಥಳೀಯ ಮೈತ್ರಿ ಬಗ್ಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಅವರು ವಿ.ಶ್ರೀನಿವಾಸಪ್ರಸಾದ್ ಹೇಳಿದ್ದಾರೆ. ಜೊತೆಗೆ ನನ್ನ ಬೆಳವಣಿಗೆ ಸಹಿಸಲಾಗದೆ ಹಾಗೂ ನನ್ನನ್ನು ರಾಜಕೀಯವಾಗಿ ಮುಗಿಸಲು ಈ ಎರಡೂ ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡಿವೆ ಜೆ.ಡಿ.ಎಸ್.ಮುಖಂಡ ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ.