Tag: ಪಟ್ಟಣಗೆರೆ ಶೆಡ್

  • ರೇಣುಕಾಸ್ವಾಮಿ ಹತ್ಯೆ ನಡೆದಿದ್ದ ಜಾಗ ಪಟ್ಟಣಗೆರೆ ಶೆಡ್‌ಗೆ ಬೀಗ!

    ರೇಣುಕಾಸ್ವಾಮಿ ಹತ್ಯೆ ನಡೆದಿದ್ದ ಜಾಗ ಪಟ್ಟಣಗೆರೆ ಶೆಡ್‌ಗೆ ಬೀಗ!

    ಬೆಂಗಳೂರು: ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಕೊಲೆ ನಡೆದ ಬಳಿಕ ಶೆಡ್‌ಗೆ (Pattanagere Shed) ಬೀಗ ಬಿದ್ದಿದೆ. ಫೈನಾನ್ಸ್ ನಲ್ಲಿ ಹಣ ಕಟ್ಟದೇ ಸೀಜ್ ಆದ ವಾಹನಗಳನ್ನ (Seized Vehicles) ಬಿಡಿಸಿಕೊಳ್ಳಲು ನಿತ್ಯ ಜನ ಶೆಡ್‌ಗೆ ಬರ್ತಿದ್ದಾರೆ. ಆದ್ರೆ ವಾಹನಗಳನ್ನ ಬಿಡಿಸಿಕೊಳ್ಳಲಾಗದೇ ವಾಪಾಸ್ ತೆರಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ರಾಜ್ಯದ ಜನ್ರನ್ನ ಬೆಚ್ಚಿಬೀಳಿಸಿದೆ. ಬೆಂಗಳೂರಿನ ಆರ್‌ಆರ್ ನಗರದ (Bengaluru RR Nagar) ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಗಿದೆ ಎಂಬ ಸತ್ಯ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ʻದಾಸʼನಿಗೆ ಕಾನೂನು ಕುಣಿಕೆ ಮತ್ತಷ್ಟು ಬಿಗಿ – ಪೊಲೀಸರಿಂದ 2 ಹಲ್ಲೆ ವೀಡಿಯೋ ಸಂಗ್ರಹ!

    ಈ ಶೆಡ್‌ನ ಬಾಡಿಗೆಗೆ ಫೈನಾನ್ಸ್ ಕಂಪನಿಯ (Finance Company) ನಿರ್ವಹಣೆ ಮಾಡ್ತಿದ್ದು, ಫೈನಾನ್ಸ್ ನಲ್ಲಿ ವಾಹನಗಳನ್ನ ಖರೀದಿಸಿ, ಕಟ್ಟೋಕೆ ಆಗದಿದ್ದಾಗ, ಅಂತಹ ವಾಹನಗಳನ್ನ ಸೀಜ್ ಮಾಡಿ ಇದೇ ಶೆಡ್‌ನಲ್ಲಿ ತುಂಬಿಸಲಾಗುತ್ತೆ. ಇಲ್ಲಿ ಸೀಜ್ ಆಗಿರೋ ನೂರಾರು ಬೈಕ್‌ಗಳು, ಆಟೋ, ಕಾರು, ಲಾರಿ, ಇತರೆ ವಾಹನಗಳಿವೆ. ಇವುಗಳನ್ನ ಮಾಲೀಕರು ಹಣ ಕಟ್ಟಿ ತಮ್ಮ ವಾಹನಗಳನ್ನ ಬಿಡಿಸಿಕೊಂಡು ಹೋಗಲು ಶೆಡ್‌ಗೆ ಬರ್ತಿದ್ದಾರೆ. ಆದ್ರೆ ರೇಣುಕಸ್ವಾಮಿ ಕೊಲೆ ವಿಚಾರಣೆ ಹಾಗೂ ಸಾಕ್ಷ್ಯ ನಾಶ ಆಗಬಾರದೆಂದು ಪೊಲೀಸರು ಶೆಡ್‌ಗೆ ಬೀಗ ಹಾಕಿದ್ದಾರೆ. ಹೀಗಾಗಿ ಫೈನಾನ್ಸ್ ಸಿಬ್ಬಂದಿ ಇತ್ತ ತಲೆ ಹಾಕಿಲ್ಲ. ನಿತ್ಯ ತಮ್ಮ ವಾಹನಗಳನ್ನ ಬಿಡಿಸಿಕೊಂಡು ಹೋಗಲು ಬಂದ ಮಾಲೀಕರು ಖಾಲಿ ಕೈಯಲ್ಲಿ ವಾಪಾಸ್ ಹೋಗ್ತಿದ್ದಾರೆ.

    ಆಟೋ, ದ್ವಿಚಕ್ರ ವಾಹನಗಳಲ್ಲಿ ನಿತ್ಯ 15-20 ಜನ ಶೆಡ್‌ಗೆ ಬರ್ತಾರೆ. ಬ್ಯಾಂಕ್‌ನಲ್ಲಿ ಬಾಕಿಯಿರೋ ಹಣ ಕಟ್ಟಿ, ಇನ್ನೇನು ಬೈಕ್ ಬಿಡಿಸಿಕೊಂಡು ಬರೋಣ ಅಂತ ಎಲ್ಲ ದಾಖಲೆಗಳನ್ನ ಶೆಡ್ ಬಳಿ ತಂದ್ರೂ, ಸಿಬ್ಬಂದಿಯಿಲ್ಲದೇ ನಿರಾಸೆಯಿಂದ ವಾಪಾಸ್ ಆಗ್ತಿದ್ದಾರೆ.

    ನಾವು ನಮ್ಮ ವಸ್ತುವನ್ನ ಬಿಡಿಸಿಕೊಳ್ಳೊಕೆ ಹೀಗೆ ಎಷ್ಟು ದಿನ ಓಡಾಡಬೇಕು? ಅಂತ ವಾಹನದ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ – ಸಂತ್ರಸ್ತನ ವಿರುದ್ಧವೇ ಕೇಸ್‌ ದಾಖಲು

  • ಪಟ್ಟಣಗೆರೆ ಶೆಡ್ ಮಾಲೀಕರಿಗೆ ಬಿಬಿಎಂಪಿ ನೋಟಿಸ್

    ಪಟ್ಟಣಗೆರೆ ಶೆಡ್ ಮಾಲೀಕರಿಗೆ ಬಿಬಿಎಂಪಿ ನೋಟಿಸ್

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಕಿಡ್ನಾಪ್ ಹಾಗೂ ಕೊಲೆ ಪ್ರಕರಣದ ಬಳಿಕ ಪಟ್ಟಣಗೆರೆ ಶೆಡ್ (Pattanagere Shed) ಮುನ್ನೆಲೆಗೆ ಬಂತು. ಈ ಬೆನ್ನಲ್ಲೇ ಪಟ್ಟಣಗೆರೆ ಶೆಡ್‍ಗೆ ಬಿಬಿಎಂಪಿ ಶಾಕ್ ಕೊಟ್ಟಿದೆ.

    ಹೌದು. ರೇಣುಕಾ ಸ್ವಾಮಿಯನ್ನ ಹತ್ಯೆ ಮಾಡಿದ ಪಟ್ಟಣಗೆರೆ ಶೆಡ್ ಮಾಲೀಕರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನೋಟಿಸ್ ನೀಡಿದೆ. 2008 – 09 ರಿಂದ ಆಸ್ತಿ ತೆರಿಗೆ ಪಾವತಿ ಆಗಿಲ್ಲ ಎಂದು ಕೆಂಗೇರಿ ಉಪ ವಲಯದಲ್ಲಿ ಸಹಾಯಕ ಕಂದಾಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

    ನೊಡಿಸ್‍ನಲ್ಲಿ 15 ದಿನಗಳ ಒಳಗೆ ಆಸ್ತಿ ತಮ್ಮದೇ ಅಂತಾ ಘೋಷಿಸಿಕೊಂಡು ತೆರಿಗೆ ಪಾವತಿಸುವಂತೆ ಸೂಚನೆ ಕೊಟ್ಟಿದ್ದಾರೆ. ಒಂದು ವೇಳೆ 15 ದಿನಗಳ ಒಳಗೆ ತೆರಿಗೆ ಪಾವತಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ. ಇದನ್ನೂ ಓದಿ: ದರ್ಶನ್ ಪರ ಜಾಮೀನು ಅರ್ಜಿ ಸಲ್ಲಿಸಿಲ್ಲವೇ? – ವಕೀಲರು ಕೊಟ್ಟ ಉತ್ತರವೇನು?

    ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡಿದ ಆರೋಪದ ಮೇಲೆ ದರ್ಶನ್ ಹಾಗೂ ಗ್ಯಾಂಗ್ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತಂದಿತ್ತು. ಬಳಿಕ ಆರ್ ಆರ್‌ ನಗರದಲ್ಲಿರುವ ಪಟ್ಟಣಗೆರೆ ಶೆಡ್‍ಗೆ ಕರೆದೊಯ್ದು ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಲಾಗಿತ್ತು.

  • ದರ್ಶನ್ ವಿರುದ್ಧ ರೌಡಿ ಶೀಟ್? – ಗೃಹಸಚಿವ ಪರಮೇಶ್ವರ್ ಹೇಳಿದ್ದೇನು?

    ದರ್ಶನ್ ವಿರುದ್ಧ ರೌಡಿ ಶೀಟ್? – ಗೃಹಸಚಿವ ಪರಮೇಶ್ವರ್ ಹೇಳಿದ್ದೇನು?

    ಬೆಂಗಳೂರು: ದರ್ಶನ್ ಪ್ರಕರಣ (Actor Darshan Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡ್ತಿದೆ. ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಸ್ಫೋಟಕ ರಹಸ್ಯಗಳು ಹೊರಬರುತ್ತಿವೆ. ಪ್ರಕರಣದ ವರದಿಯನ್ನು ಗೃಹ ಸಚಿವರು ಮುಖ್ಯಮಂತ್ರಿಗೆ ನೀಡಿದ್ದಾರೆ.

    ಇನ್ನೂ ಈ ಕುರಿತು ಮಾತನಾಡಿರುವ ಸಚಿವ ಜಿ. ಪರಮೇಶ್ವರ್ (G Parameshwara), ಪ್ರಕರಣದ ತನಿಖೆ ನಡೆಯುತ್ತಿದೆ, ಕಾನೂನು ಎಲ್ಲರಿಗೂ ಒಂದೇ ಆಗಿದೆ. ರೇಣುಕಾಸ್ವಾಮಿ, ಪವಿತ್ರಾಗೌಡ (Pavithra Gowda) ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಮೆಸೇಜ್ ಮಾಡಿದ್ದರಂತೆ, ಅದಕ್ಕೆ ಕಾನೂನು ಕ್ರಮ ಕೈಗೊಳ್ಳಬಹುದಿತ್ತು. ಕೊಲೆ ಮಾಡುವ ಹಂತಕ್ಕೆ ಹೋಗುವುದು ಸರಿಯಲ್ಲ ಎಂದಿದ್ದಾರೆ.

    ಇನ್ನೂ ಯಾವುದೇ ಪ್ರಭಾವಿಗಳು ದರ್ಶನ್ ಪರವಾಗಿ ಲಾಬಿ ಮಾಡಿಲ್ಲ. ಈ ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವೂ ಇಲ್ಲ. ನಮ್ಮ ಪೊಲೀಸರೇ ತನಿಖೆ ನಡೆಸುತ್ತಿದ್ದಾರೆ. ರೇಣುಕಾಸ್ವಾಮಿ ಕುಟುಂಬಕ್ಕೆ ನೆರವು ನೀಡುವ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಕುವೈತ್ ಅಗ್ನಿ ದುರಂತದಲ್ಲಿ 40 ಮಂದಿ ಭಾರತೀಯರ ದುರ್ಮರಣ – ಮೋದಿ ಸಂತಾಪ

    ಇದೇ ವೇಳೆ ದರ್ಶನ್ ವಿರುದ್ಧ ರೌಡಿ ಶೀಟ್ ತೆರೆಯುವ ವಿಚಾರ ತೆರೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ದರ್ಶನ್ ಅವರದ್ದು ಇದೇ ಮೊದಲ ಪ್ರಕರಣವಲ್ಲ. ಹಿಂದೆಯೂ ಬೇರೆ ಬೇರೆ ಪ್ರಕರಣ ಕಂಡುಬಂದಿದೆ. ತನಿಖೆ ನಂತರ ಪೊಲೀಸರು ಏನು ಶಿಫಾರಸು ಮಾಡ್ತಾರೆ ನೋಡಬೇಕು. ರೌಡಿ ಶೀಟ್ ತೆರೆಯುವ ವಿಚಾರವನ್ನು ಪೊಲೀಸರು ನೋಡಿಕೊಳ್ತಾರೆ ಎಂದು ತಿಳಿಸಿದ್ದಾರೆ.

    ಇನ್ನೂ ದರ್ಶನ್-ಪವಿತ್ರಾಗೌಡ ಪರ ವಕೀಲ ನಾರಾಯಣಸ್ವಾಮಿ ಮಾತಾನಾಡಿ, ತಮ್ಮ ಕಕ್ಷಿದಾರರಿಬ್ಬರು ಅಮಾಯಕರು. ಅವರಿಗೆ ಏನು ಗೊತ್ತಿಲ್ಲ ಎಂದಿದ್ದಾರೆ. ರಾಜ್ಯಸಭಾ ಸದಸ್ಯರೂ ಆಗಿರುವ ನಟ ಜಗ್ಗೇಶ್ ಎಕ್ಸ್ ಖಾತೆ ಮೂಲಕ ಪ್ರತಿಕ್ರಿಯಿಸಿದ್ದು, `ರಾಮನಾಗು.. ರಾವಣನಾದರೇ ಅಂತ್ಯ ಎಂದಿದೆ ಸನಾತನ ಕೃತಿ.. ಮದಕ್ಕೆ ಕಾರುಣ್ಯದ ಅರಿವಿಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರಸಿದ್ಧರು, ಸೆಲೆಬ್ರಿಟಿಗಳೆಂದು ಬಿಡುವ ಪ್ರಶ್ನೆ ಇಲ್ಲ: ದರ್ಶನ್ ಕೇಸ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ 

  • ರೇಣುಕಾಸ್ವಾಮಿ ಕೊಲೆಯಾದ ಶೆಡ್‌ನಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸ್ಥಳ ಮಹಜರು!

    ರೇಣುಕಾಸ್ವಾಮಿ ಕೊಲೆಯಾದ ಶೆಡ್‌ನಲ್ಲಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸ್ಥಳ ಮಹಜರು!

    – ಆರೋಪಿಗಳ ಸಾಲಿನಲ್ಲಿ ಕೈಕಟ್ಟಿ ನಿಂತಿದ್ದ ನಟ ದರ್ಶನ್

    ಬೆಂಗಳೂರು: ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy) ಅವರನ್ನಿರಿಸಿದ್ದ ಪಟ್ಟಣಗೆರೆಯ ಶೆಡ್‌ನಲ್ಲಿ ಪೊಲೀಸರು ಇಂದು (ಬುಧವಾರ) ಸ್ಥಳ ಮಹಜರು ನಡೆಸಿದ್ದಾರೆ. ಆರೋಪಿ ನಟ ದರ್ಶನ್ (Darshan), ಪವಿತ್ರಾ ಗೌಡ (Pavithra Gowda) ಸೇರಿದಂತೆ ಇತರ ಆರೋಪಿಗಳನ್ನ ಕರೆತಂದು ಕಾಮಾಕ್ಷಿ ಪಾಳ್ಯ ಪೊಲೀಸರು ಸ್ಥಳ ಮಹಜರು ನಡೆಸಿದರು.

    ಪೊಲೀಸ್ ಅಧಿಕಾರಿಗಳು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ತಂಡ (FSL Team) ಸುಮಾರು ಒಂದೂವರೆಗಂಟೆಗೂ ಹೆಚ್ಚು ಕಾಲ ತಪಾಸಣೆ ನಡೆಸಿದೆ. ಕೊಲೆಯಾದ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ್ದ ಸ್ಥಳ, ದಿಕ್ಕು ಹಾಗೂ ಹಲ್ಲೆ ಬಳಿಕ ಆತ ಸಾವನ್ನಪ್ಪಿದ ಸ್ಥಿತಿ, ಮೃತಪಟ್ಟ ನಂತರ ರೇಣುಕಾಸ್ವಾಮಿ ತಲೆ ಮತ್ತು ಕೈಕಾಲುಗಳು ಯಾವ ದಿಕ್ಕಿಗೆ ತಿರುಗಿತ್ತು? ಎಲ್ಲಾ ವಿಷಗಳನ್ನು ಆರೋಪಿಗಳಿಂದ ವಿಚಾರಣೆ ನಡೆಸಿ, ಸ್ಥಳ ಮಹಜರು ನಡೆಸಿದ್ದಾರೆ.

    ಆರೋಪಿಗಳ ಸಮ್ಮುಖದಲ್ಲಿ ಘಟನೆಯನ್ನ ಮರುಸೃಷ್ಟಿ ಮಾಡಿದ್ದ ಪೊಲೀಸರು, ಬಳಿಕ ಅದನ್ನು ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಜೊತೆಗೆ ಹಲ್ಲೆಗೆ ಬಳಸಿದ್ದ ವಸ್ತುಗಳು, ರಕ್ತದ ಕಲೆಗಳು, ಮೃತನ ಕೂದಲು, ಬಟ್ಟೆಯ ತುಂಡುಗಳ ಸಾಕ್ಷ್ಯವನ್ನು ಸಂಗ್ರಹಿಸಿದ್ದಾರೆ. ಸ್ಥಳ ಮಹಜರು ಮುಗಿದ ಬಳಿಕ ಪೊಲೀಸರು ಮತ್ತೆ ಠಾಣೆಗೆ ಆರೋಪಿಗಳನ್ನು ಕರೆದೊಯ್ದಿದ್ದಾರೆ. ಇದನ್ನೂ ಓದಿ: ದರ್ಶನ್ ನನ್ನ ಸ್ನೇಹಿತರು – ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿರೋದು ಶಾಕ್ ಆಗ್ತಿದೆ: ದರ್ಶನ್ ಪುಟ್ಟಣ್ಣಯ್ಯ

    50 ಮೀಟರ್ ವರೆಗೆ ಪ್ರವೇಶ ನಿಷೇಧ:
    ಸ್ಥಳ ಮಹಜರು ವೇಳೆ ಪಟ್ಟಣಗೆರೆಯ ಜಯಣ್ಣ ಅವರಿಗೆ ಸೇರಿದ್ದ ಶೆಡ್ ಮುಂಭಾಗ 50 ಮೀಟರ್ ವರೆಗೂ ಸಾರ್ವಜನಿಕರ ಪ್ರವೇಶ ನಿಷೇಧಗೊಳಿಸಲಾಗಿತ್ತು. ಇದನ್ನೂ ಓದಿ: ನನ್ನ ಮಗ ತಪ್ಪು ಮಾಡಿಲ್ಲ, ಯಾರೋ ಪಿತೂರಿ ಮಾಡಿದ್ದಾರೆ: ರೇಣುಕಾಸ್ವಾಮಿ ಕೊಲೆ ಕೇಸ್‌ ಎ3 ಆರೋಪಿ ತಾಯಿ