Tag: ಪಟಾಕಿ ಮಾರಾಟ

  • ಪಟಾಕಿ ಸಿಡಿಸಿದ್ದಕ್ಕೆ ಇಬ್ಬರು ಅರೆಸ್ಟ್‌

    ಪಟಾಕಿ ಸಿಡಿಸಿದ್ದಕ್ಕೆ ಇಬ್ಬರು ಅರೆಸ್ಟ್‌

    ನವದೆಹಲಿ: ಪಟಾಕಿ ಮಾರಾಟ ಮತ್ತು ಪಟಾಕಿ ಸಿಡಿಸಿದ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಇಲ್ಲಿಯವರೆಗೆ ಒಟ್ಟು 32 ಮಂದಿಯನ್ನು ಬಂಧಿಸಿದ್ದಾರೆ.

    ಬುಧವಾರ 14 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಇಲ್ಲಿಯವರೆಗೆ ಒಟ್ಟು 37 ಪ್ರಕರಣ ದಾಖಲಾಗಿದೆ. ಬಂಧಿತ 32 ಮಂದಿ ಪೈಕಿ ಇಬ್ಬರನ್ನು ಪಟಾಕಿ ಸಿಡಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.

    ಬುಧವಾರ ಬಂಧಿತರ ಬಳಿಯಿಂದ ಒಟ್ಟು 1,770 ಕೆಜಿ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದ್ದು ಇಲ್ಲಿಯವರೆಗೆ ಒಟ್ಟು 2,794 ಕೆಜಿ ಪಟಾಕಿಗಳನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ದೆಹಲಿ ಸರ್ಕಾರ ನ.7ರಿಂದ 30 ರವರೆಗೆ ಮಾಲಿನ್ಯ ಮತ್ತು ಕೋವಿಡ್‌ 19 ಹರಡುವಿಕೆ ತಡೆಯಲು ಹಸಿರು ಪಟಾಕಿ ಸೇರಿದಂತೆ ಎಲ್ಲ ರೀತಿಯ ಪಟಾಕಿಗಳ ನಿಷೇಧಿಸಿದೆ.

    ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನ. 30ರವರೆಗೆ ಪಟಾಕಿ ಮಾರಾಟ ಮಾಡದಂತೆ ರಾಷ್ಟ್ರೀಯ ಹಸಿರು ಪೀಠ ನಿರ್ಬಂಧ ವಿಧಿಸಿ ಆದೇಶ ಪ್ರಕಟಿಸಿದೆ.