Tag: ಪಟಾಕಿ ದುರಂತ

  • ಪಟಾಕಿ ದುರಂತಕ್ಕೆ ಬ್ರೇಕ್ ಹಾಕಲು ಕಟ್ಟುನಿಟ್ಟಿನ ಕ್ರಮ – ನಗರ ಪೊಲೀಸ್ ಆಯುಕ್ತರ ಸೂಚನೆ

    ಪಟಾಕಿ ದುರಂತಕ್ಕೆ ಬ್ರೇಕ್ ಹಾಕಲು ಕಟ್ಟುನಿಟ್ಟಿನ ಕ್ರಮ – ನಗರ ಪೊಲೀಸ್ ಆಯುಕ್ತರ ಸೂಚನೆ

    ಬೆಂಗಳೂರು: ದೀಪಾವಳಿ ಹಬ್ಬಕ್ಕೆ ದಿನಗಣನೆ ಶುರುವಾಗಿದೆ. ಈ ಹಿನ್ನೆಲೆ ಪಟಾಕಿ ದುರಂತಕ್ಕೆ ಬ್ರೇಕ್ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.

    ಸೋಮವಾರ (ಅ.7) ಅಗ್ನಿಶಾಮಕ ಸಿಬ್ಬಂದಿ ಹಾಗೂ ಪಟಾಕಿ ಮಾರಾಟಗಾರರ ಸಭೆಯಲ್ಲಿ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆಯನ್ನ ನೀಡಿದ್ದಾರೆ. ಕಳೆದ ಬಾರಿ ಅತ್ತಿಬೆಲೆಯಲ್ಲಿ ಹಾಗೂ ಮಾರ್ಕೆಟ್ ಭಾಗದಲ್ಲಿ ಪಟಾಕಿ ದುರಂತಗಳು ಆಗದ ಹಾಗೇ ಕಟ್ಟೆಚರ ವಹಿಸಲು ನಿರ್ದೇಶನ ನೀಡಿದ್ದಾರೆ. ಯಾವುದೇ ಪಟಾಕಿ ಮಾರಾಟಗಾರರಿಗೆ ಮುಂಗಡವಾಗಿ ಪಟಾಕಿ ಸಂಗ್ರಹಕ್ಕೆ ಅವಕಾಶ ಇಲ್ಲ. ಬೇಡಿಕೆ ಹೆಚ್ಚಿದೆ ಎಂದು ಪಟಾಕಿ ಓವರ್ ಲೋಡ್ ಸಂಗ್ರಹ ಮಾಡಿಕೊಂಡಿದ್ದು ಕಂಡು ಬಂದರೆ ಕಾನೂನು ಕ್ರಮದ ಎಚ್ಚರಿಕೆಯನ್ನ ನೀಡಿದ್ದಾರೆ.ಇದನ್ನೂ ಓದಿ: ಬಾಡಿಗೆ ಪಡೆದು ಕಾರು ವಂಚನೆ – 46 ಕಾರು ವಶಕ್ಕೆ, ಆರೋಪಿ ಪರಾರಿ

    ಅತಿಯಾಗಿ ಪಟಾಕಿಗಳನ್ನ ಗೋಡೌನ್‌ಗಳಲ್ಲಿ ಸಂಗ್ರಹ ಮಾಡಿಕೊಂಡರೆ ಅನಾಹುತಗಳಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ಅನಾಹುತಗಳಿಗೆ ಆಸ್ಪದ ಕೊಡಬಾರದು ಅನ್ನೋ ಕಾರಣಕ್ಕೆ ಮುಂಚಿತವಾಗಿ ಪಟಾಕಿ ಸಂಗ್ರಹ ಮಾಡಿಕೊಳ್ಳುವುದಕ್ಕೆ ಅವಕಾಶ ಇರುವುದಿಲ್ಲ ಎಂದು ಪಟಾಕಿ ಮಾರಾಟಗಾರರಿಗೆ ಸೂಚನೆ ನೀಡಿದ್ದಾರೆ.

    ಮಾರಾಟಗಾರರು ದೀಪಾವಳಿ ಹಬ್ಬಕ್ಕೆ 5 ದಿನ ಮುಂಚಿತವಾಗಿ ತಂದು ಐದು ದಿನಗಳ ಒಳಗಾಗಿ ಸ್ಟಾಕ್ ಖಾಲಿ ಮಾಡಿಕೊಳ್ಳಬೇಕು. ಸೆ.18 ರಿಂದ 22ರ ತನಕ ಒಟ್ಟು ಐದು ದಿನ ಪಟಾಕಿ ಮಾರಾಟ ಮಾಡುವುದಕ್ಕೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ. ಅನಧಿಕೃತವಾಗಿ ಗೋಡೌನ್‌ಗಳಲ್ಲಿ ಪಟಾಕಿ ಸಂಗ್ರಹಣೆ ಬಗ್ಗೆ ಬೀಟ್ ಪೊಲೀಸರು ಪರಿಶೀಲನೆ ನಡೆಸುತ್ತಾರೆ. ಒಂದು ವೇಳೆ ಪಟಾಕಿ ಸಂಗ್ರಹ ಮಾಡಿಕೊಂಡಿರುವುದು ಕಂಡು ಬಂದರೆ ಅಂತಹ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುತ್ತದೆ ಸೂಚನೆ ನೀಡಿದ್ದಾರೆ.ಇದನ್ನೂ ಓದಿ: ಡೈರಿಯಲ್ಲಿ ಅವ್ಯವಹಾರ ಆರೋಪ –  ಅಧ್ಯಕ್ಷೆ, ಕಾರ್ಯದರ್ಶಿ ಮನೆ ಮುಂದೆ ಹಾಲು ಸುರಿದು ಗ್ರಾಮಸ್ಥರ ಪ್ರತಿಭಟನೆ

  • ಪಟಾಕಿಗೆ ಆಕಸ್ಮಿಕ ಬೆಂಕಿ – ಕುರ್ಚಿ ಸಮೇತ ಹಾರಿ ಬಿದ್ದು ಯುವಕ ಸಾವು

    ಪಟಾಕಿಗೆ ಆಕಸ್ಮಿಕ ಬೆಂಕಿ – ಕುರ್ಚಿ ಸಮೇತ ಹಾರಿ ಬಿದ್ದು ಯುವಕ ಸಾವು

    ಚಿಕ್ಕಮಗಳೂರು: ಆಕಸ್ಮಿಕವಾಗಿ ಬೆಂಕಿ ತಗಲಿ ಪಟಾಕಿಗಳು (Firecrackers) ಸಿಡಿದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ತರಿಕೆರೆಯ (Tarikere) ಸುಣ್ಣದ ಹಳ್ಳಿಯಲ್ಲಿ ನಡೆದಿದೆ. ಯುವಕ ಕುರ್ಚಿ ಅಡಿಯಲ್ಲಿ ಪಟಾಕಿ ಚೀಲ ಇಟ್ಟುಕೊಂಡು ಕುಳಿತಿದ್ದ. ಈ ವೇಳೆ ಆಕಸ್ಮಿಕವಾಗಿ ಕಿಡಿ ತಾಕಿದ್ದು ಪಟಾಕಿಗಳು ಸಿಡಿದಿವೆ.

    ಮೃತ ಯುವಕನನ್ನು ಪ್ರದೀಪ್ (30) ಎಂದು ಗುರುತಿಸಲಾಗಿದೆ. ಯುವಕ ಪಟಾಕಿಗಳು ಸಿಡಿದ ಪರಿಣಾಮ 5 ಅಡಿ ಎತ್ತರಕ್ಕೆ ಹಾರಿ ಬಿದ್ದಿದ್ದಾನೆ. ಈ ವೇಳೆ ದೇಹದ ಸೂಕ್ಷ್ಮ ಭಾಗಗಳಿಗೆ ತೀವ್ರ ಪೆಟ್ಟಾಗಿದೆ. ಇದರಿಂದ ಯುವಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಘಟನೆಯಲ್ಲಿ ಮತ್ತೋರ್ವ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಅಲ್ಲದೇ ಮೂವರು ಮಕ್ಕಳಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಬ್ಯಾಡಗಿಯಲ್ಲಿ ಖಾಸಗಿ ಬಸ್ ಪಲ್ಟಿ – ಪ್ರಯಾಣಿಕರಿಗೆ ಗಾಯ

    ಪಟಾಕಿ ಸಿಡಿದ ರಭಸಕ್ಕೆ ಮನೆಯ ಗಾಜುಗಳು ಸಹ ಪುಡಿ-ಪುಡಿಯಾಗಿವೆ. ತರೀಕೆರೆ ಪೊಲೀಸ್ (Police) ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ತನಿಷಾ ಕುಪ್ಪಂಡ ಕೇಸ್: ಒರಿಜನಲ್ ವಿಡಿಯೋ ಕೇಳಿದ ಪೊಲೀಸ್

  • ಅತ್ತಿಬೆಲೆ ಪಟಾಕಿ ದುರಂತ- ನಾಲ್ವರು ಅಧಿಕಾರಿಗಳ ಅಮಾನತು

    ಅತ್ತಿಬೆಲೆ ಪಟಾಕಿ ದುರಂತ- ನಾಲ್ವರು ಅಧಿಕಾರಿಗಳ ಅಮಾನತು

    ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತಕ್ಕೆ (Fire Crackers incident Attibele) ಸಬಂಧಿಸಿದಂತೆ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.

    ಆನೇಕಲ್ ತಾಲೂಕಿನ ಹಿಂದಿನ ತಹಶೀಲ್ದಾರ್ ಶಶಿಧರ್ ಮಾಡ್ಯಾಳ್, ಉಪ ತಹಶೀಲ್ದಾರ್ ಶ್ರೀಧರ್, ರಾಜಸ್ವ ನಿರೀಕ್ಷಕ ಅತ್ತಿಬೆಲೆ, ಗ್ರಾಮ ಆಡಳಿತಾಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.

    ಅತ್ತಿಬೆಲೆ ಅಗ್ನಿ ಅವಘಡಕ್ಕೆ ಅಧಿಕಾರಿಗಳೇ ಹೊಣೆ ಎಂದು ವರದಿ ಬಂದಿತ್ತು. ಪಟಾಕಿ ಅಂಗಡಿಗೆ 1ಸಾವಿರ ಕೆ.ಜಿ ಮಾತ್ರ ಸ್ಟಾಕ್ ಇಡಲು ಅವಕಾಶ ನೀಡಲಾಗಿತ್ತು. ಪರವಾನಿಗೆ ನೀಡುವಾಗ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ಪರವಾನಿಗೆ ನೀಡಿರುವ ಹಿನ್ನಲೆಯಲ್ಲಿ ಈ ಅವಘಡಕ್ಕೆ ಕಾರಣವೆಂದು 4 ಜನ ಅಧಿಕಾರಿಗಳನ್ನ ಸೇವೆಯಿಂದ ಅಮಾನತು ಮಾಡಿ ಆದೇಶಿಸಲಾಗಿದೆ. ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ – ಸ್ಥಳಕ್ಕೆ ಸಿಎಂ, ಡಿಸಿಎಂ ಭೇಟಿ

    ಮಂಗಳವಾರ ಅಮಾನತಿನ ಬಗ್ಗೆ ಡಿಸಿ, ಎಸ್‍ಪಿಗೆ ಸಿಎಂ ಸೂಚನೆ ನೀಡಿದ್ದರು. ಇದೀಗ ಸಿಎಂ ಸೂಚನೆ ಬೆನ್ನಲ್ಲೆ ಅಧಿಕಾರಿಗಳ ಅಮಾನತು ಮಾಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಲ್ಲಿ ಪಟಾಕಿ ಬ್ಯಾನ್ ಆಗುತ್ತಾ?

    ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಲ್ಲಿ ಪಟಾಕಿ ಬ್ಯಾನ್ ಆಗುತ್ತಾ?

    ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ (Diwali Festival) ಬಂದ್ರೆ ಎಲ್ಲೆಲ್ಲೂ ಪಟಾಕಿ (Firework) ಸದ್ದಿನದ್ದೇ ಆರ್ಭಟ. ಅದರಲ್ಲೂ ಈ ಬಾರಿ ಅತ್ತಿಬೆಲೆಯ ಬಾಲಾಜಿ ಕ್ರ‍್ಯಾಕರ್ಸ್‌ನ ಬೆಂಕಿ ಅವಘಡದಿಂದ ಬೆಂಗಳೂರಿನಲ್ಲಿ ಪ್ರಮುಖ ಏರಿಯಾಗಳಲ್ಲಿ ಪಟಾಕಿ ಬ್ಯಾನ್ ಮಾಡುವ ಚರ್ಚೆಗಳು ನಡೆಯುತ್ತಿವೆ.

    ಶನಿವಾರ ಅತ್ತಿಬೆಲೆಯ ಬಾಲಾಜಿ ಕ್ರ‍್ಯಾಕರ್ಸ್ಗೆ ಬೆಂಕಿ ಬಿದ್ದು 14 ಮಂದಿ ಸಜೀವ ದಹನವಾಗಿದ್ರು. ಪಟಾಕಿ ಅಂಗಡಿಗಳು ಸುರಕ್ಷತ ನಿಯಮ ಪಾಲಿಸದಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ನಿಯಮಗಳನ್ನ ಗಾಳಿಗೆ ತೂರಿರುವ ಎಲ್ಲಾ ಅಂಗಡಿಗಳನ್ನ ತಪಾಸಣೆಗೊಳಪಡಿಸುವಂತೆ ಜಿಲ್ಲಾಧಿಕಾರಿ ಆದೇಶ ಕೂಡ ನೀಡಿದ್ದರು. ಇದೀಗ ತಹಶೀಲ್ದಾರರು ಪಟಾಕಿ ಗೊಡೌನ್‌ಗಳ ಮೇಲೆ ರೇಡ್ ನಡೆಸುತ್ತಿದ್ದು, ಡಿಸಿ, ಎಸಿ ತಹಶೀಲ್ದಾರ್ ಗಳ ಸಭೆಯಲ್ಲಿ ಮಹತ್ವದ ವಿಷಯವನ್ನ ಚರ್ಚಿಸಲಾಗಿದೆ. ಇದನ್ನೂ ಓದಿ: ವಿಶ್ವ ಹಿಂದೂ ಪರಿಷತ್‍ಗೆ ತುಂಬಿತು 60 ವರ್ಷ- ಉಡುಪಿ ಶ್ರೀಕೃಷ್ಣನ ನಗರ ಕೇಸರಿಮಯ

    ಈ ಬಾರಿ ಬೆಂಗಳೂರಲ್ಲಿ ಪಟಾಕಿ ಬ್ಯಾನ್ ಮಾಡಬೇಕು. ಆ ಮೂಲಕ ಮುಂಜಾಗೃತಾ ಕ್ರಮಗಳನ್ನ ಕೈಗೊಳ್ಳದ, ನಿಯಮ ಪಾಲಿಸದ ಪಟಾಕಿ ಅಂಗಡಿಗಳ ಮಾಲೀಕರಿಗೆ ಬಿಸಿ ಮುಟ್ಟಿಸಬೇಕು ಅನ್ನೋ ನಿಟ್ಟಿನಲ್ಲಿ ಜಿಲ್ಲಾಡಳಿತದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಹಮಾಸ್ ಉಗ್ರರ ನಡೆಗೆ ಮೋದಿ ಖಂಡನೆ- ಇಸ್ರೇಲ್ ಪರ ನಿಂತ ಭಾರತ

    ಒಂದು ವೇಳೆ ಬೆಂಗಳೂರಿನಾದ್ಯಂತ ಪಟಾಕಿ ನಿಷೇಧಿಸುವುದು ಅಸಾಧ್ಯವೆನಿಸಿದರೆ, ಪ್ರಮುಖ ಬಡಾವಣೆಗಳಲ್ಲಾದರೂ ಪಟಾಕಿ ನಿಷೇಧಿಸಬೇಕು. ಅದೂ ಸಾಧ್ಯವಾಗದಿದ್ದಲ್ಲಿ, ಕಟ್ಟು ನಿಟ್ಟಿನ ನಿಯಮಗಳೊಂದಿಗೆ ದೀಪಾವಳಿ ಆಚರಣೆಗೆ ಅನುವು ಮಾಡಿಕೊಡಬೇಕು ಎಂಬ ನಿರ್ಧಾರದ ಬಗ್ಗೆ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ನ್ಯೂಜಿಲೆಂಡ್‌ಗೆ 99 ರನ್‌ಗಳ ಭರ್ಜರಿ ಜಯ – ಡಚ್ಚರ ಗೇಮ್‌ ಪ್ಲ್ಯಾನ್‌ಗೆ ಅಭಿಮಾನಿಗಳ ಮೆಚ್ಚುಗೆ 

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅತ್ತಿಬೆಲೆ ಪಟಾಕಿ ದುರಂತ – ಸ್ಥಳಕ್ಕೆ ಸಿಎಂ, ಡಿಸಿಎಂ ಭೇಟಿ

    ಅತ್ತಿಬೆಲೆ ಪಟಾಕಿ ದುರಂತ – ಸ್ಥಳಕ್ಕೆ ಸಿಎಂ, ಡಿಸಿಎಂ ಭೇಟಿ

    ಆನೇಕಲ್: ಅತ್ತಿಬೆಲೆಯಲ್ಲಿ (Attibele) ನಡೆದ ಭೀಕರ ಪಟಾಕಿ ದುರಂತದಲ್ಲಿ (Fireworks Tragedy) ಇಲ್ಲಿಯವರೆಗೆ 14 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ದುರ್ಘಟನೆ ನಡೆದ ಸ್ಥಳಕ್ಕೆ ಸಿಎಂ ಡಿಸಿಎಂ ಆಗಮಿಸಿ ಸ್ಥಳ ಪರಿಶೀಲಿಸಿದ್ದಾರೆ.

    ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸ್ಥಳಕ್ಕೆ ಆಗಮಿಸಿದ್ದು, ಅಗ್ನಿಶಾಮಕ ಸಿಬ್ಬಂದಿ ಬಳಸುವ ಶೂ ಧರಿಸಿಕೊಂಡು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸಿಎಂ, ಡಿಸಿಎಂಗೆ ಮಾಜಿ ಸಚಿವ ಎಸ್‌ಟಿ ಸೋಮಶೇಖರ್ ಸಾಥ್ ನೀಡಿದ್ದಾರೆ.

    ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮು ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಪಟಾಕಿ ಸಂಗ್ರಹಕ್ಕೆ ಲೈಸೆನ್ಸ್ ಇರಲಿಲ್ಲ. ಕೇವಲ ಬೇರೆಡೆಗೆ ರವಾನಿಸುವ ಪ್ರೊಸೆಸಿಂಗ್ ಯೂನಿಟ್‌ಗೆ ಮಾತ್ರ ಪರವಾನಗಿ ನೀಡಲಾಗಿತ್ತು. ಆದರೆ ಮಾಲೀಕ ಭಾರೀ ಪ್ರಮಾಣದ ಪಟಾಕಿ ಸಂಗ್ರಹಿಸುವ ದಾಸ್ತಾನು ಮಳಿಗೆಯನ್ನಾಗಿ ಬಳಕೆ ಮಾಡುತ್ತಿದ್ದ. ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ- ಗೋದಾಮು ಮಾಲೀಕ ಅರೆಸ್ಟ್

    ಪಟಾಕಿ ದುರಂತದಲ್ಲಿ ತಮಿಳುನಡು ಮೂಲದ ಗಿರಿ ಬಿನ್ ವೇಡಿಯಪ್ಪನ್, ಸಚೀನ್ ಬಿನ್ ಲೇಟ್ ವೇಡಿಯಪ್ಪನ್, ವಿಜಯರಾಘವನ್, ವಿಳಂಬರತಿ ಬಿನ್ ಸೆಂದಿಲ್, ಆಕಾಶ ಬಿನ್ ರಾಜಾ, ವೆಡಿಯಪ್ಪನ್, ಆದಿಕೇಶವ ಬಿನ್ ಪೆರಿಯಾಸ್ವಾಮಿ, ಪ್ರಕಾಶ್ ಬಿನ್ ರಾಮು, ವಸಂತರಾಜು ಬಿನ್ ಗೋವಿಂದ ರಾಜು, ಅಬ್ಬಾಸ್ ಬಿಸ್ ಶಂಕರ್, ಪ್ರಭಾಕರನ್ ಬಿನ್ ಗೋಪಿನಾಥ್, ನಿತೀಶ್ ಬಿನ್ ಮೇಘನಾಥ್, ಸಂತೋಷ್ ಬಿನ್ ಕುಮಾರ್ ಮೃತಪಟ್ಟಿದ್ದು, ಇನ್ನೊಬ್ಬನ ಹೆಸರು ಗುರುತು ಪತ್ತೆಯಾಗಿಲ್ಲ. ಇದನ್ನೂ ಓದಿ: ಮನ್‌ಮುಲ್ ಮೆಗಾ ಡೈರಿ ಘಟಕದಲ್ಲಿ ಅಗ್ನಿ ಅವಘಡ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅತ್ತಿಬೆಲೆ ಪಟಾಕಿ ದುರಂತ- ಗೋದಾಮು ಮಾಲೀಕ ಅರೆಸ್ಟ್

    ಅತ್ತಿಬೆಲೆ ಪಟಾಕಿ ದುರಂತ- ಗೋದಾಮು ಮಾಲೀಕ ಅರೆಸ್ಟ್

    ಆನೇಕಲ್ (ಬೆಂಗಳೂರು): ಅತ್ತಿಬೆಲೆಯಲ್ಲಿ ನಡೆದ ಪಟಾಕಿ ದುರಂತ (Fire Cracker Tragedy In Attibele) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗೋದಾಮು ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.

    ಪಟಾಕಿ ಸಂಗ್ರಹಕ್ಕೆ ಲೈಸೆನ್ಸ್ ಇರಲಿಲ್ಲ. ಕೇವಲ ಬೇರೆಡೆಗೆ ರವಾನಿಸುವ ಪ್ರೊಸೆಸಿಂಗ್ ಯೂನಿಟ್‍ಗೆ ಮಾತ್ರ ಪರವಾನಿಗೆ ನೀಡಲಾಗಿತ್ತು. ಆದರೆ ಮಾಲೀಕ ಭಾರೀ ಪ್ರಮಾಣದ ಪಟಾಕಿ ಸಂಗ್ರಹಿಸುವ ದಾಸ್ತಾನು ಮಳಿಗೆಯನ್ನಾಗಿ ಬಳಕೆ ಮಾಡ್ತಿದ್ದ. ಪ್ರೊಸೆಸಿಂಗ್ ಯೂನಿಟ್‍ಗೆ 2028ವರೆಗೆ ಪರವಾನಿಗೆ ಇದ್ದು, ಗೋದಾಮಿಗೆ ಅನುಮತಿ ಇರಲಿಲ್ಲ.

    ಅಕ್ರಮವಾಗಿ ದೊಡ್ಡ ಪ್ರಮಾಣದಲ್ಲಿ ಪಟಾಕಿಯನ್ನು ಸಂಗ್ರಹಿಸಿದ್ದ ಕುರಿತು ಗೋದಾಮಿನ ಮಾಲೀಕರ ವಿರುದ್ಧ ಪ್ರತ್ಯೇಕವಾಗಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಮಾಲೀಕ ರಾಮಸ್ವಾಮಿ ರೆಡ್ಡಿಯನ್ನ ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ. 2018 ರಲ್ಲಿ ಪಟಾಕಿ ಅಂಗಡಿಕಷ್ಟೇ ಅನುಮತಿ ಪಡೆದಿದ್ದಾರೆ. ಗೋದಾಮಿಗೆ ಅನುಮತಿ ನೀಡಿಲ್ಲ ಎಂದು ರಾಮಸ್ವಾಮಿ ವಿಚಾರಣೆ ಬಳಿಕ ಬೆಳಕಿಗೆ ಬಂದಿದೆ.

    ಒಟ್ಟಿನಲ್ಲಿ ಪಟಾಕಿ ಅಂಗಡಿ ಅನುಮತಿ ಪಡೆದು ಗೋಡೌನ್ ಮಾಡಿಕೊಂಡಿದ್ದ ಆರೋಪಿ ರಾಮಸ್ವಾಮಿ ವಿರುದ್ಧ ಸ್ಫೋಟಕ ಕಾಯ್ದೆ ಅಡಿಯಲ್ಲಿ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಹಾವೇರಿ, ಅತ್ತಿಬೆಲೆ ದುರಂತಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಲಿ: ಬೊಮ್ಮಾಯಿ

    ಪಟಾಕಿ ದುರಂತದಲ್ಲಿ ತಮಿಳುನಡು ಮೂಲದ ಗಿರಿ ಬಿನ್ ವೇಡಿಯಪ್ಪನ್, ಸಚೀನ್ ಬಿನ್ ಲೇಟ್ ವೇಡಿಯಪ್ಪನ್, ವಿಜಯರಾಘವನ್, ವಿಳಂಬರತಿ ಬಿನ್ ಸೆಂದಿಲ್, ಆಕಾಶ ಬಿನ್ ರಾಜಾ, ವೆಡಿಯಪ್ಪನ್, ಆದಿಕೇಶವ ಬಿನ್ ಪೆರಿಯಾಸ್ವಾಮಿ, ಪ್ರಕಾಶ್ ಬಿನ್ ರಾಮು, ವಸಂತರಾಜು ಬಿನ್ ಗೋವಿಂದ ರಾಜು, ಅಬ್ಬಾಸ್ ಬಿಸ್ ಶಂಕರ್, ಪ್ರಭಾಕರನ್ ಬಿನ್ ಗೋಪಿನಾಥ್, ನಿತೀಶ್ ಬಿನ್ ಮೇಘನಾಥ್, ಸಂತೋಷ್ ಬಿನ್ ಕುಮಾರ್ ಮೃತಪಟ್ಟಿದ್ದು, ಇನ್ನೊಬ್ಬನ ಹೆಸರು ಗುರುತು ಪತ್ತೆಯಾಗಿಲ್ಲ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]