Tag: ಪಕ್ಷೇತರ ಅಭ್ಯರ್ಥಿ

  • ಚುನಾವಣಾ ವೆಚ್ಚಕ್ಕೆ ಕಿಡ್ನಿ ಮಾರಲು ಮುಂದಾದ ಪಕ್ಷೇತರ ಅಭ್ಯರ್ಥಿ

    ಚುನಾವಣಾ ವೆಚ್ಚಕ್ಕೆ ಕಿಡ್ನಿ ಮಾರಲು ಮುಂದಾದ ಪಕ್ಷೇತರ ಅಭ್ಯರ್ಥಿ

    ದಿಸ್ಪುರ್: ಪಕ್ಷೇತರ ಅಭ್ಯರ್ಥಿಯೊಬ್ಬರು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಲೋಕಸಭಾ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಆದರೆ ಪ್ರಚಾರಕ್ಕಾಗಿ ಖರ್ಚು ಮಾಡಲು ತಮ್ಮ ಮೂತ್ರಪಿಂಡವನ್ನೇ (ಕಿಡ್ನಿ) ಮಾರಲು ಮುಂದಾಗಿರುವುದು ಬೆಳಕಿಗೆ ಬಂದಿದೆ.

    ಅಸ್ಸಾಂನ ಕೊಕ್ರಝಾರ್ ಜಿಲ್ಲೆಯ ಮೊಡತಿ ಗ್ರಾಮದ ನಿವಾಸಿ 26 ವರ್ಷದ ಸುಕುರ್ ಅಲಿಯೇ ಕಿಡ್ನಿ ಮಾರಲು ಮುಂದಾದ ಅಭ್ಯರ್ಥಿ. ಇವರು ಧುಬ್ರಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಚುನಾವಣಾ ಪ್ರಚಾರದ ವೆಚ್ಚಕ್ಕೆ ಹಣ ಸಂಗ್ರಹಿಸುತ್ತಿದ್ದೇನೆ. ಒಂದು ವೇಳೆ ಹಣ ಸಂಗ್ರಹಿಸಲು ಸಾಧ್ಯವಾಗದಿದ್ದರೆ ಕಿಡ್ನಿ ಮಾರುತ್ತೇನೆ ಎಂದು ಸುಕುರ್ ಅಲಿ ತಿಳಿಸಿದ್ದಾರೆ.

    ಕೆಲವರು ಸ್ವ-ಹಿತಾಸಕ್ತಿಗಾಗಿ ರಾಜಕೀಯ ಪ್ರವೇಶ ಮಾಡುತ್ತಾರೆ. ಅಂತಹ ವ್ಯಕ್ತಿಗಳನ್ನು ಚಿಕ್ಕಂದಿನಿಂದ ನೋಡಿದ್ದೇನೆ. ಬಡವರಿಗೆ ಸಹಾಯ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಹೀಗಾಗಿ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಈ ಕನಸನ್ನು ಈಡೇರಿಸಲು ಕಿಡ್ನಿ ಮಾರಲು ಕೂಡ ಹಿಂದೇಟು ಹಾಕುವುದಿಲ್ಲ ಎಂದು ಅವರು ಹೇಳಿದ್ದಾರೆ.

    ಸುಕುರ್ ಅಲಿ ಅವರು ನಾವಿಕನಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಕೆಲ ವರ್ಷಗಳ ಹಿಂದೆ ತಮ್ಮ ಜಮೀನಿನ ಸ್ವಲ್ಪ ಭಾಗವನ್ನು ಮಾರಿ, ಕೂಲಿ ಕೆಲಸ ಮಾಡುವ ಮೂಲಕ ಹಣ ಸಂಗ್ರಹಿಸಿ ಶಿಬಾಲಿ ನದಿಗೆ ಬಿದಿರಿನ ಸೇತುವೆ ನಿರ್ಮಿಸಿದ್ದರು. ಇದರಿಂದಾಗಿ ಅನೇಕರಿಗೆ ಅನುಕೂಲವಾಗಿತ್ತು. ಆದರೆ ಈಗ ಬೋಟ್‍ನಲ್ಲಿ ಪ್ರಯಾಣಿಸುವವರ ಸಂಖ್ಯೆ ಇಳಿದಿದ್ದು, ಸುಕುರ್ ನಿರುದ್ಯೋಗಿಯಾಗಿದ್ದಾರೆ.

    ಅಸ್ಸಾಂ ರಾಜ್ಯದಲ್ಲಿ ಒಟ್ಟು 14 ಲೋಕಸಭಾ ಕ್ಷೇತ್ರಗಳಿದ್ದು, ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತದ ಚುನಾವಣೆ ಏಪ್ರಿಲ್ 11ರಂದು ನಡೆಯಲಿದೆ. ಎರಡು ಹಾಗೂ ಮೂರನೇ ಹಂತದ ಚುನಾವಣೆ ಕ್ರಮವಾಗಿ 18 ಮತ್ತು 23ರಂದು ನಡೆಯಲಿದೆ.

  • ಬಿಜೆಪಿಗೆ ಹೋಗಲ್ಲ, ಪಕ್ಷೇತರಳಾಗಿ ಸ್ಪರ್ಧೆ ಮಾಡುತ್ತೇನೆ: ಸುಮಲತಾ

    ಬಿಜೆಪಿಗೆ ಹೋಗಲ್ಲ, ಪಕ್ಷೇತರಳಾಗಿ ಸ್ಪರ್ಧೆ ಮಾಡುತ್ತೇನೆ: ಸುಮಲತಾ

    ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ನಾನು ಬಿಜೆಪಿಗೆ ಬರಲ್ಲ. ಪಕ್ಷೇತರಳಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಸುಮಲತಾ ಅಂಬರೀಶ್ ಕಮಲ ಮುಖಂಡರ ಬಳಿ ತಮ್ಮ ಮನದ ಇಂಗಿತ ವ್ಯಕ್ತಪಡಿಸಿದ್ದಾರೆ.

    ಗುರುವಾರ ಮಂಡ್ಯದಲ್ಲಿ ಸುಮಲತಾ ಅವರು ಬಿಜೆಪಿ ಮುಖಂಡ ಶಿವಲಿಂಗಯ್ಯ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದ್ದರು. ಮಾತುಕತೆ ವೇಳೆ ತಮಗೆ ಬೆಂಬಲ ನೀಡುವಂತೆ ಬಿಜೆಪಿ ಮುಖಂಡ ಶಿವಲಿಂಗಯ್ಯ ಅವರನ್ನು ಸುಮಲತಾ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಶಿವಲಿಂಗಯ್ಯ ಅವರು ಬಿಜೆಪಿಗೆ ಸೇರ್ಪಡೆಯಾಗುವಂತೆ ಸುಮಲತಾಗೆ ಆಹ್ವಾನ ನೀಡಿದ್ದಾರೆ. ಎಂದು ಹೇಳಲಾಗುತ್ತಿದೆ.

    ನಾನು ಇನ್ನೂ ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದೇನೆ. ಆದರೆ ಮಂಡ್ಯ ಜನ ಮಾತ್ರ ಸ್ವತಂತ್ರ ಅಭ್ಯರ್ಥಿ ಆಗಿ ಸ್ಪರ್ಧಿಸಲು ಹೇಳುತ್ತಿದ್ದಾರೆ. ಹೀಗಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ. ಸುಮಲತಾ ಅವರಿಗೆ ಬಿಜೆಪಿ ಸಪೋರ್ಟ್ ಮಾಡುವ ಬಗ್ಗೆ ಪಕ್ಷದ ತೀರ್ಮಾನಕ್ಕೆ ನಾವು ಬದ್ಧ. ಪಕ್ಷದ ಹಿತದೃಷ್ಟಿಯಿಂದ ಬಿಜೆಪಿ ಮಂಡ್ಯದಲ್ಲಿ ಅಭ್ಯರ್ಥಿ ಹಾಕಲಿ ಎಂದು ಶಿವಲಿಂಗಯ್ಯ ಅಭಿಮತ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಚಾರಕ್ಕೆ ತೆರಳಿದ್ದ ವೇಳೆ ಮಾಜಿ ಪ್ರಧಾನಿ ದೇವೇಗೌಡರಿಗೆ ತೀವ್ರ ಮುಜುಗರ!

    ಪ್ರಚಾರಕ್ಕೆ ತೆರಳಿದ್ದ ವೇಳೆ ಮಾಜಿ ಪ್ರಧಾನಿ ದೇವೇಗೌಡರಿಗೆ ತೀವ್ರ ಮುಜುಗರ!

    ಮೈಸೂರು: ಅರಮನೆ ನಗರಿಯಲ್ಲಿ ಪ್ರಚಾರ ಕಣಕ್ಕಿಳಿದ ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಬಂಡಾಯದ ಬಿಸಿ ತಟ್ಟಿದೆ.

    ಚಾಮರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ರಂಗಪ್ಪ ಪರ ಪ್ರಚಾರ ಮಾಡುತ್ತಿದ್ದ ದೇವೇಗೌಡರ ಎದುರಲ್ಲೇ ಪಕ್ಷೇತರ ಅಭ್ಯರ್ಥಿ ಹರೀಶ್‍ಗೌಡ ಪರ ಬೆಂಬಲಿಗರು ಜೈಕಾರ ಹಾಕಿದ್ದಾರೆ. ಇದರಿಂದಾಗಿ ರೋಡ್ ಶೋನಲ್ಲಿ ಭಾಗಿಯಾಗಿದ್ದ ದೊಡ್ಡಗೌಡರಿಗೆ ತೀವ್ರ ಮುಜುಗರ ಉಂಟಾದ ಪ್ರಸಂಗ ನಡೆದಿದೆ.

    ಹರೀಶ್ ಗೌಡ ಅವರಿಗೆ ಜೆಡಿಎಸ್ ಟಿಕೆಟ್ ಕೈ ತಪ್ಪಿತ್ತು. ಹೀಗಾಗಿ ಅವರು ಚಾಮರಾಜ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ನಿನ್ನೆ ದೇವೇಗೌಡರು ಪ್ರಚಾರಕ್ಕೆ ಬಂದಿದ್ದ ಸಂದರ್ಭದಲ್ಲಿ ಮುಖಾಮುಖಿಯಾದ ಕಾರ್ಯಕರ್ತರು ಹರೀಶ್ ಗೌಡ ಅವರಿಗೆ ಮಾಜಿ ಪ್ರಧಾನಿ ಎದುರೇ ಜೈಕಾರ ಹಾಕಿದ್ದಾರೆ.

    ಮಾಜಿ ಪ್ರಧಾನಿ ದೇವೇಗೌಡ ಅವರು ಲಕ್ಷ್ಮೀಕಾಂತ್ ನಗರ, ಸುಬ್ರಹ್ಮಣ್ಯ ನಗರ, ಹೆಬ್ಬಾಳು, ಮಂಚೇಗೌಡ  ಕೊಪ್ಪಲು, ಮೇಟಗಹಳ್ಳಿಯಲ್ಲಿ ಮೊದಲಾದ ಕಡೆಗಳಲ್ಲಿ ಪ್ರಚಾರ ನಡೆಸಿದ್ದರು.

  • ಪಕ್ಷದ ಅಭ್ಯರ್ಥಿಯ ವಿರುದ್ಧವೇ ತೊಡೆ ತಟ್ಟಿದ ಹೆಚ್‍ಡಿಕೆ- ಸೋಲಿಸುವಂತೆ ಕರೆ: ಆಡಿಯೋ ಕೇಳಿ

    ಪಕ್ಷದ ಅಭ್ಯರ್ಥಿಯ ವಿರುದ್ಧವೇ ತೊಡೆ ತಟ್ಟಿದ ಹೆಚ್‍ಡಿಕೆ- ಸೋಲಿಸುವಂತೆ ಕರೆ: ಆಡಿಯೋ ಕೇಳಿ

    ಚಿಕ್ಕಬಳ್ಳಾಪುರ: ಪಕ್ಷದ ಅಭ್ಯರ್ಥಿಯ ವಿರುದ್ಧವೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ತೊಡೆ ತಟ್ಟಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ಶಿಡ್ಲಘಟ್ಟ ಶಾಸಕ ರಾಜಣ್ಣ ಅವರಿಗೆ ಕರೆ ಮಾಡಿರುವ ಮಾಜಿ ಸಿಎಂ, ಜೆ.ಡಿ.ಎಸ್ ಅಭ್ಯರ್ಥಿ ಮೇಲೂರು ರವಿ ಸೋಲಿಸಲು ಪಕ್ಷೇತರವಾಗಿ ನಿಲ್ಲುವಂತೆ ತಾಕೀತು ಮಾಡಿರುವ ಆಡಿಯೋವೊಂದು ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಆಡಿಯೋದಲ್ಲಿ ರವಿ ಗೆದ್ದರೆ ಕುಮಾರಸ್ವಾಮಿಗೆ ಏನೂ ಪ್ರಯೋಜನವಿಲ್ಲ. ಹೀಗಾಗಿ 10 ಕೋಟಿ ಖರ್ಚು ಮಾಡಿ ರಾಜಣ್ಣ ಗೆಲ್ಲಿಸಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ರವಿ ಹಣ ಕೊಟ್ಟು ದೊಡ್ಡಗೌಡರ ಬಳಿ ಟಿಕೆಟ್ ಗಿಟ್ಟಿಸಿದ್ದಾನೆ. ಮೇಲೂರು ರವಿ ನನ್ನ ಬಳಿ ಬಂದಿಲ್ಲ.. ನನಗೇನು ಕಿಂಚಿತ್ತು ಗೌರವ ಇಲ್ಲ ಅಂತ ರಾಜಣ್ಣ ಸಂಬಂಧಿ ಬಳಿ ಕುಮಾರಸ್ವಾಮಿ ಮಾತನಾಡಿದ್ದಾರೆ.

  • ಮತದಾರರನ್ನು ಸೆಳೆಯಲು ಮತ್ತೆ ಟೀ ಮಾರಾಟ- 339 ಕೋಟಿ ರೂ. ಆಸ್ತಿ ಘೋಷಿಸಿದ ಅಭ್ಯರ್ಥಿಯಿಂದ ಪ್ರಚಾರ

    ಮತದಾರರನ್ನು ಸೆಳೆಯಲು ಮತ್ತೆ ಟೀ ಮಾರಾಟ- 339 ಕೋಟಿ ರೂ. ಆಸ್ತಿ ಘೋಷಿಸಿದ ಅಭ್ಯರ್ಥಿಯಿಂದ ಪ್ರಚಾರ

    ಬೆಂಗಳೂರು: ಆರಂಭದಲ್ಲಿ ಟೀ ಮಾರಾಟ ಮಾಡಿ ನಂತರ ವಿವಿಧ ಉದ್ಯಮಗಳನ್ನು ನಡೆಸಿ ಈಗ ಕೋಟಿ ರೂ. ಒಡೆಯನಾಗಿರುವ ಪಕ್ಷೇತರ ಅಭ್ಯರ್ಥಿಯೊಬ್ಬರು ತಮ್ಮ ಹಳೆ ಕಸುಬಿನ ಮೂಲಕ ಮತದಾರರ ಮನಗೆಲ್ಲಲು ಮುಂದಾಗಿದ್ದಾರೆ.

    ಹೌದು. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿಗಳಲ್ಲೇ ಅತಿ ಹೆಚ್ಚು ಶ್ರೀಮಂತನಾಗಿರುವ ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಪಿ.ಅನಿಲ್ ಕುಮಾರ್ ಅವರು ಕಾಂಗ್ರೆಸ್ ಪಕ್ಷದ ಟಿಕೆಟ್ ಕೇಳಿದ್ದರು. ಆದರೆ ಕೈ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ನಿಂತಿದ್ದಾರೆ. ಇದನ್ನೂ ಓದಿ: 3ನೇ ಕ್ಲಾಸ್ ಓದಿ ಟೀ ಮಾರಾಟ ಮಾಡುತ್ತಿದ್ದವನ ಆಸ್ತಿ 339 ಕೋಟಿ ರೂ- ಪಕ್ಷೇತರ ಅಭ್ಯರ್ಥಿಯಿಂದ ಆಸ್ತಿ ಘೋಷಣೆ

    ಚುನಾವಣಾ ಆಯೋಗಕ್ಕೆ 339 ಕೋಟಿ ರೂ. ಆಸ್ತಿ ಘೋಷಣೆ ಮಾಡಿರುವ ಅನಿಲ್ ಕುಮಾರ್, ವಿಭಿನ್ನವಾಗಿ ಮತದಾರರ ಮತಗೆಲ್ಲಲು ತಮ್ಮ ಹಳೆಯ ವೃತ್ತಿಯಾದ ಟೀ ವ್ಯಾಪಾರ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.

    ಬೊಮ್ಮನಹಳ್ಳಿಯ ಪ್ರಮುಖ ಪ್ರದೇಶಗಳಲ್ಲಿ ಸೈಕಲ್ ನಲ್ಲಿ ಟೀ ಪಾತ್ರೆ ಇಟ್ಟುಕೊಂಡು ಮತದಾರರಿಗೆ ಟೀ ನೀಡಿ ತನಗೆ ಮತವನ್ನು ಹಾಕುವಂತೆ ವಿನಂತಿಸಿಕೊಳ್ಳುತ್ತಿದ್ದು, ಈ ಮೂಲಕ ಬೊಮ್ಮನಹಳ್ಳಿಯ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಗೆ ಸವಾಲೊಡ್ಡಿದ್ದಾರೆ.