Tag: ಪಕ್ಷಿ ಗಣತಿ

  • ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಪಕ್ಷಿ ಗಣತಿ- 253 ಪ್ರಬೇಧ ಪತ್ತೆ

    ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಪಕ್ಷಿ ಗಣತಿ- 253 ಪ್ರಬೇಧ ಪತ್ತೆ

    ಚಾಮರಾಜನಗರ: ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ ಪಕ್ಷಿಗಳ ಸಂತತಿ ಹೆಚ್ಚಾಗಿರುವ ಹಿನ್ನೆಲೆ ಅವುಗಳ ನಿಖರ ಮಾಹಿತಿಗಾಗಿ ಮೊದಲ ಬಾರಿಗೆ ನಡೆದ ಎರಡು ದಿನಗಳ ಪಕ್ಷಿ ಗಣತಿ ಅಂತ್ಯಗೊಂಡಿದೆ.

    ಹನೂರು ಹಾಗೂ ಕೊಳ್ಳೇಗಾಲ ತಾಲೂಕು ಸೇರಿದಂತೆ ಮಲೆ ಮಹದೇಶ್ವರ ವನ್ಯಜೀವಿ ಧಾಮದಲ್ಲಿ 7 ಅರಣ್ಯ ವಲಯಗಳ ಒಟ್ಟು 949.469 ಚದರ ಕಿ.ಮೀ. ನಷ್ಟು ಅರಣ್ಯ ಪ್ರದೇಶದಲ್ಲಿ ಪಕ್ಷಿ ಗಣತಿ ನಡೆಯಿತು. ಗಣತಿಯಲ್ಲಿ 500 ಕ್ಕೂ ಅಧಿಕ ಮಂದಿ ಪಕ್ಷಿ ವೀಕ್ಷಕರು ಹಾಗೂ ಪಕ್ಷಿ ತಜ್ಞರು ಭಾಗಿಯಾಗಿದ್ದರು.

    ಪಕ್ಷಿ ಗಣತಿ ಕಾರ್ಯ ಪೂರ್ಣಗೊಂಡಿದ್ದು, 253 ಪ್ರಬೇಧದ ಪಕ್ಷಿಗಳು ಪತ್ತೆಯಾಗಿದೆ. ರಣಹದ್ದುಗಳು, ಮರಕುಟಿಗ, ನೀಲಗಿರಿ ಪಾರಿವಾಳಗಳು ಸೇರಿದಂತೆ 253 ಪ್ರಬೇಧದ ಪಕ್ಷಿಗಳು ಕಂಡುಬಂದಿದೆ.

  • ಬಂಡೀಪುರದಲ್ಲಿ ಪಕ್ಷಿ ಗಣತಿ ಮುಕ್ತಾಯ – ಮೊದಲ ಬಾರಿಗೆ ಕಾಣಿಸಿಕೊಂಡ ಗ್ರೇಟ್ ಹಾರ್ನ್ ಬಿಲ್

    ಬಂಡೀಪುರದಲ್ಲಿ ಪಕ್ಷಿ ಗಣತಿ ಮುಕ್ತಾಯ – ಮೊದಲ ಬಾರಿಗೆ ಕಾಣಿಸಿಕೊಂಡ ಗ್ರೇಟ್ ಹಾರ್ನ್ ಬಿಲ್

    ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೂರು ದಿನಗಳ ಕಾಲ ನಡೆದ ಪಕ್ಷಿ ಗಣತಿ ಮುಕ್ತಾಯವಾಗಿದ್ದು 289 ಪ್ರಬೇಧದ ಪಕ್ಷಿಗಳನ್ನು ಗುರುತಿಸಲಾಗಿದೆ. ಎರಡು ಬಗೆಯ ಅಪರೂಪದ ಪಕ್ಷಿಗಳು ಪತ್ತೆಯಾಗಿವೆ. ಅಲ್ಲದೆ ಇದೇ ಮೊದಲ ಬಾರಿಗೆ ಈ ಅರಣ್ಯದಲ್ಲಿ ಗ್ರೇಟ್‌ ಹಾರ್ನ್‌ಬಿಲ್‌ ಪಕ್ಷಿ ಸಹ ಕಾಣಿಸಿಕೊಂಡಿದೆ.

    ಕರ್ನಾಟಕ ಪಕ್ಷಿ ಗಣತಿಯಡಿ ಸೇರಿಲ್ಲದ ಲೆಸ್ಸರ್ ಫಿಶ್ ಈಗಲ್ ಹಾಗೂ ಟಾನಿ ಬೆಲ್ಲೀಡ್ ಬ್ಯಾಬ್ಲರ್ ಎಂಬ ಪಕ್ಷಿಗಳು ಸಹ ಕಂಡುಬಂದಿವೆ. 1998 ರಲ್ಲಿ ಬಂಡೀಪುರ ಹುಲಿಸಂರಕ್ಷಿತ ಪ್ರದೇಶದಲ್ಲಿ 123 ಪ್ರಬೇಧದ ಪಕ್ಷಿಗಳನ್ನು ಗುರುತಿಸಿ ದಾಖಲಿಸಲಾಗಿತ್ತು. ಆದರೆ 22 ವರ್ಷಗಳ ನಂತರ ನಡೆದ ಪಕ್ಷಿ ಗಣತಿಯಲ್ಲಿ 289 ಪ್ರಬೇಧದ ಪಕ್ಷಿಗಳು ಕಂಡು ಬಂದಿವೆ.

    ಕಳೆದ ಮೂರು ದಿನಗಳಿಂದ ಪಕ್ಷಿತಜ್ಞರು, ಪಕ್ಷಿಪ್ರಿಯರು ಸ್ವಯಂಸೇವಕರು ಹಾಗು ಅರಣ್ಯ ಇಲಾಖೆಯ ಸಿಬ್ಬಂದಿ ನಡೆಸಿದ ಪಕ್ಷಿ ಗಣತಿಯಲ್ಲಿ ಕೆಲವು ಅಪರೂಪದ ಹಾಗು ಅಳಿವಿನಂಚಿನಲ್ಲಿರುವ ಪ್ರಬೇಧದ ಪಕ್ಷಿಗಳು ಪತ್ತೆಯಾಗಿದೆ.