Tag: ಪಕ್ಷಿಧಾಮ

  • ಪ್ರವಾಸಿಗರಿಗೆ ದರ ಏರಿಕೆ ಶಾಕ್‌ – ರಂಗನತಿಟ್ಟು ಪಕ್ಷಿಧಾಮದಲ್ಲಿ ಟಿಕೆಟ್‌ ದರ ಹೆಚ್ಚಳ

    ಪ್ರವಾಸಿಗರಿಗೆ ದರ ಏರಿಕೆ ಶಾಕ್‌ – ರಂಗನತಿಟ್ಟು ಪಕ್ಷಿಧಾಮದಲ್ಲಿ ಟಿಕೆಟ್‌ ದರ ಹೆಚ್ಚಳ

    – ವಿದೇಶಿಗರ ಟಿಕೆಟ್‌ ದರ 600 ರೂ.ಗೆ ಏರಿಕೆ

    ಮಂಡ್ಯ: ವಿಶ್ವವಿಖ್ಯಾತ ಕೃಷ್ಣರಾಜ ಸಾಗರ (KRS) ಬೃಂದಾವನದ ದರ ಹೆಚ್ಚಳ ಬೆನ್ನಲ್ಲೇ, ಪಕ್ಷಿ ಕಾಶಿ ಎಂದೇ ಹೆಸರುವಾಸಿಯಾಗಿರುವ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ರಂಗನತಿಟ್ಟು ಪಕ್ಷಿಧಾಮದ (Ranganathittu Bird Sanctuary) ಪ್ರವೇಶ ದರ ಹಾಗೂ ಬೋಟಿಂಗ್ ದರ ಹೆಚ್ಚಳ ಮಾಡಿ ಪ್ರವಾಸಿಗರಿಗೆ ಮತ್ತೊಂದು ಬರೆ ಎಳೆದಿದೆ.

    ರಂಗನತಿಟ್ಟು ಪಕ್ಷಿಧಾಮವನ್ನ ಮೈಸೂರು ವನ್ಯಜೀವಿ ವಿಭಾಗ (Mysuru Wiledlife Department) ನಿರ್ವಹಣೆ ಮಾಡುತ್ತಿದ್ದು, ಆಗಸ್ಟ್ 1ರಿಂದ ದರ ಹೆಚ್ಚಿಸಿ ಪ್ರವಾಸಿಗರ ಜೇಬಿಗೆ ಕತ್ತರಿ ಹಾಕಿದೆ. ಕಾವೇರಿ ಜಲಾನಯದ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದ ಕಾರಣ ನದಿಗೆ ಅಪಾರ ಪ್ರಮಾಣದ ನೀರು ಹರಿಸಿದ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿಂದ ಪಕ್ಷಿಧಾಮಕ್ಕೆ ಪ್ರವೇಶ ಹಾಗೂ ಬೋಟಿಂಗ್ ವ್ಯವಸ್ಥೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಮಳೆ (Rain) ಪ್ರಮಾಣ ಕಡಿಮೆಯಾಗಿದ್ದು, ನಿರ್ಬಂಧ ತೆರವುಗೊಳಿಸಲಾಗಿದೆ. ಇದನ್ನೂ ಓದಿ: RCB ವಿಜಯೋತ್ಸವದ ವೇಳೆ ಕಾಲ್ತುಳಿತ ದುರಂತ – ಸಿಎಂ, ಡಿಸಿಎಂ, ಗೃಹ ಸಚಿವರ ರಾಜೀನಾಮೆಗೆ ಆರ್‌.ಅಶೋಕ್‌ ಆಗ್ರಹ

    ಕಾವೇರಿ ನದಿಯಿಂದ ಸುತ್ತುವರಿಯಲ್ಪಟ್ಟಿರುವ ಶ್ರೀರಂಗಪಟ್ಟಣ (Srirangapatna) ದ್ವೀಪ ನಗರ ಎಂದೇ ಹೆಸರಾಗಿದೆ. ಪ್ರವಾಸಿಗರ ನೆಚ್ಚಿನ ತಾಣ ವಿಶ್ವವಿಖ್ಯಾತ ಕೃಷ್ಣರಾಜ ಸಾಗರ ಸೇರಿದಂತೆ ಚಾರಿತ್ರಿಕ ಮಹತ್ವ ಹೊಂದಿರುವ ಪ್ರಸಿದ್ಧ ಸ್ಥಳಗಳು ಇಲ್ಲಿವೆ. ಆದ್ದರಿಂದ ಇಲ್ಲಿಗೆ ನೆರೆ ರಾಜ್ಯಗಳಿಂದಷ್ಟೇ ಅಲ್ಲದೇ ನಿತ್ಯ ದೇಶ ವಿದೇಶಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇದನ್ನೂ ಓದಿ: ಆ.17ಕ್ಕೆ ಬಿಜೆಪಿಯಿಂದ ಧರ್ಮಸ್ಥಳ ಚಲೋ

    ಮೈಸೂರು ದಸರಾ ಸಮೀಪಿಸುತ್ತಿದ್ದಂತೆ ಪಕ್ಷಿಧಾಮದ ಪ್ರವೇಶ ದರ ಹಾಗೂ ಬೋಟಿಂಗ್ ದರ ಹೆಚ್ಚಳ ಮಾಡಿರುವುದು ಪ್ರವಾಸಿಗರನ್ನ ಕೆರಳಿಸಿದೆ. ಮೈಸೂರು ದಸರಾಕ್ಕೆ ಬರುವ ಬಹುತೇಕರು ನೆಚ್ಚಿನ ಪ್ರವಾಸಿ ಸ್ಥಳಗಳಾದ ಶ್ರೀರಂಗಪಟ್ಟಣ ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಕಟುಂಬದ ಜತೆ ಒಂದಷ್ಟು ಸಮಯ ಕಳೆಯಲು ಬರುವವರಿಗೆ ದರ ಹೆಚ್ಚಳವಾಗಿರುವುದು ತಮ್ಮ ಕಿಸಿಗೆ ಕತ್ತರಿ ಬೀಳಲಿದೆ.

    ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಕೃಷ್ಣರಾಜ ಸಾಗರ (ಕೆಆರ್‌ಎಸ್) ಬೃಂದಾವನ ಪ್ರವೇಶ ದರ ಹೆಚ್ಚಳ ಮಾಡಿ ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ನಡುವೆಯೇ ಪ್ರಸಿದ್ದ ಪಕ್ಷಿಧಾಮ ರಂಗನತಿಟ್ಟು ಪಕ್ಷಿಧಾಮ ಪ್ರವೇಶ ದರ ಹಾಗೂ ಬೋಟಿಂಗ್ ದರವನ್ನ ಹೆಚ್ಚಳ ಮಾಡಿದೆ. ಇದು ಪ್ರವಾಸಿಗರಿಗೆ ಬರೆ ಎಳೆದಂತಾಗಿದೆ. ಇದನ್ನೂ ಓದಿ: ಎಥೆನಾಲ್‌ ಪೆಟ್ರೋಲ್‌ನಿಂದ ಮೈಲೇಜ್‌ ಕುಸಿತವಾಗಲ್ಲ, ವಿಮೆ ರದ್ದಾಗಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

    ಎಂಟ್ರಿ ಟಿಕೆಟ್‌ ದರ ಯಾರಿಗೆ ಎಷ್ಟು?
    ವಯಸ್ಕರಿಗೆ 75 ರೂ. ಇದ್ದ ಪ್ರವೇಶ ದರವನ್ನ 80 ರೂ. ಗಳಿಗೆ ಹೆಚ್ಚಿಸಲಾಗಿದೆ. ಇನ್ನೂ ವಿದ್ಯಾರ್ಥಿಗಳು ಹಾಗೂ ಮಕ್ಕಳಿಗೆ 25 ರೂ. ಇದ್ದ ಪ್ರವೇಶ ದರವನ್ನು 40 ರೂ.ಗೆ ಹೆಚ್ಚಳ ಮಾಡಲಾಗಿದೆ. ವಿದೇಶಿಗರಿಗೆ 500 ರೂ. ಇದ್ದ ಪ್ರವೇಶ ದರವನ್ನು ಪ್ರಸ್ತುತ 600 ರೂ.ಗೆ ಹೆಚ್ಚಳ ಮಾಡಲಾಗಿದೆ. ವಿದೇಶಿ ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ 250 ರೂ. ಇದ್ದ ಪ್ರವೇಶ ದರವನ್ನು 300ಕ್ಕೆ ಹೆಚ್ಚಳ ಮಾಡಿ ಆದೇಶಿಸಿದೆ. ಬ್ಯಾಟರಿ ಆಪರೇಟೆಡ್ ವಾಹನದ ದರವನ್ನು 75 ರಿಂದ 100 ಮಕ್ಕಳಿಗೆ 35 ರಿಂದ 50 ರೂ. ಹೆಚ್ಚಿಸಲಾಗಿದೆ. ಮೋಟಾರ್ ಸೈಕಲ್ 15 ರಿಂದ 20, ಆಟೋ ರಿಕ್ಷಾ ದರವನ್ನ ಮಾತ್ರ ಯತಾವತ್ತಾಗಿರಿಸಿದೆ. ಕಾರು, ಜೀಪು 60 ರಿಂದ 70ರೂ.ಗೆ ಹೆಚ್ಚಿಸಿದೆ.

  • ಕೆಆರ್‌ಎಸ್‌ನಿಂದ 50 ಸಾವಿರ ಕ್ಯೂಸೆಕ್‌ ನೀರು ಹೊರಕ್ಕೆ – ರಂಗನತಿಟ್ಟು ಪಕ್ಷಿಧಾಮದ ನಡುಗಡ್ಡೆಗಳು ಮುಳುಗಡೆ

    ಕೆಆರ್‌ಎಸ್‌ನಿಂದ 50 ಸಾವಿರ ಕ್ಯೂಸೆಕ್‌ ನೀರು ಹೊರಕ್ಕೆ – ರಂಗನತಿಟ್ಟು ಪಕ್ಷಿಧಾಮದ ನಡುಗಡ್ಡೆಗಳು ಮುಳುಗಡೆ

    ಮಂಡ್ಯ: ವಿಶ್ವ ಪ್ರಸಿದ್ಧ ಕೃಷ್ಣರಾಜ ಸಾಗರ(ಕೆಎಆರ್‌ಎಸ್‌) ಜಲಾಶಯದಿಂದ 50,573 ಕ್ಯೂಸೆಕ್ ನೀರನ್ನು ನದಿಗೆ ಬಿಡುಗಡೆ ಮಾಡಲಾಗಿದ್ದು ಶ್ರೀರಂಗಪಟ್ಟಣದಲ್ಲಿರುವ ರಂಗನತಿಟ್ಟು ಪಕ್ಷಿಧಾಮದ ನಡುಗಡ್ಡೆಗಳು ಮುಳುಗಡೆಯಾಗಿದೆ.

    ಪಕ್ಷಿಧಾಮದಲ್ಲಿರುವ 40 ಕ್ಕೂ ಹೆಚ್ಚು ನಡುಗಡ್ಡೆಗಳು ಮುಳುಗಡೆಯಾಗಿವೆ. ನಡುಗಡ್ಡೆಗಳು ಮುಳುಗಡೆಯಾಗಿರುವ ಕಾರಣ ಗೂಡು, ಮೊಟ್ಟೆ, ಮರಿಗಳನ್ನು ರಕ್ಷಣೆ ಮಾಡಿಕೊಳ್ಳಲು ಪಕ್ಷಿಗಳು ಪರದಾಡುತ್ತಿವೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೋಟಿಂಗ್ ಸಂಪೂರ್ಣ ಬಂದ್ ಮಾಡಲಾಗಿದೆ.

    ಕೆಆರ್‌ಎಸ್‍ನಿಂದ ಹೊರಹರಿವು ಹೆಚ್ಚಾಗುತ್ತಿದ್ದಂತೆ, ಶ್ರೀರಂಗಪಟ್ಟಣ ಸುತ್ತಮುತ್ತ ಪ್ರದೇಶಗಳು ಜಲಾವೃತವಾಗಿವೆ. ನಿಮಿಷಾಂಬಾ ದೇವಾಲಯ, ಸ್ನಾನಘಟ್ಟ, ಸಂಗಮದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗಿದೆ. ಪ್ರವಾಸಿಗರಿಗೆ ನದಿಯ ಹತ್ತಿರಕ್ಕೆ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ.

    ಜಲಾಶಯದ ನೀರಿನ ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು ಇಂದು ಬೆಳಗ್ಗೆ 122.60 ಅಡಿ ನೀರು ಸಂಗ್ರಹವಾಗಿದೆ. 50,467 ಕ್ಯೂಸೆಕ್ ಒಳ ಹರಿವು ಇದ್ದು 50,573 ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಗರಿಷ್ಠ 49.452 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಇರುವ ಜಲಾಶಯದಲ್ಲಿ 46.434 ಟಿಎಂಸಿ ನೀರು ಸಂಗ್ರಹಗೊಂಡಿದೆ. ಇದನ್ನೂ ಓದಿ: ಲಂಕಾ ಪ್ರತಿಭಟನೆ: ಪ್ರಧಾನಿಯ ಬೆಡ್‌ರೂಂನಲ್ಲಿ WWE ಪ್ರದರ್ಶನ

    ಕಳೆದ ವಾರ 10 ಸಾವಿರ ಕಡಿಮೆ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿತ್ತು. ಆದರೆ ಈಗ ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ 50 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ಜಲಾಶಯಕ್ಕೆ ಬರುತ್ತಿದ್ದು ಅಷ್ಟೇ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿದೆ. ಸಾಧಾರಣವಾಗಿ 122 ಅಡಿ ನೀರು ಸಂಗ್ರಹವಾದ ಬಳಿಕ ಎಷ್ಟು ಒಳ ಹರಿವು ಇದೆಯೋ ಅಷ್ಟೇ ಪ್ರಮಾಣದಲ್ಲಿ ನೀರನ್ನು ಬಿಡುಗಡೆ ಮಾಡಲಾಗುತ್ತದೆ.

    ಎರಡು ವರ್ಷಗಳ ಹಿಂದೆ ಕೆಆರ್‌ಎಸ್‌ ಡ್ಯಾಂನಿಂದ 1 ಲಕ್ಷ ಕ್ಯೂಸೆಕ್ ನೀರು ಹರಿಬಿಟ್ಟಿದ್ದ ಕಾರಣ ಇಲ್ಲಿನ 40ಕ್ಕೂ ಹೆಚ್ಚು ನಡುಗಡ್ಡೆಗಳು ಹಾನಿಯಾಗಿದ್ದವು. ಇದಾದ ನಂತರ ಅರಣ್ಯ ಇಲಾಖೆ ಇಲ್ಲಿನ ನಡುಗಡ್ಡೆಗಳನ್ನು ಮತ್ತೆ ನಿರ್ಮಾಣ ಮಾಡಿತ್ತು. ಇದೀಗ ಈ ಬಾರಿಯೂ ಹೆಚ್ಚಿನ ಪ್ರಮಾಣದಲ್ಲಿ ಕೆಆರ್‌ಎಸ್‌ ಡ್ಯಾಂನಿಂದ ನೀರು ಹರಿಬಿಟ್ಟರೆ ಮತ್ತೆ ಅದೇ ರೀತಿಯ ವಾತಾವರಣ ನಿರ್ಮಾಣವಾಗುವ ಸಾಧ್ಯತೆಯಿದೆ. ಕಾವೇರಿ ಕೊಳ್ಳದ ಜನರಿಗೂ ಸಹ ಪ್ರವಾಹದ ಭೀತಿ ಎದುರಾಗಿದ್ದು, ಈಗಾಗಲೇ ಕಾವೇರಿ ನೀರಾವರಿ ನಿಗಮ ಕಾವೇರಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕೆಂದು ಸೂಚನೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ರಂಗನತಿಟ್ಟು ಪಕ್ಷಿಧಾಮದಲ್ಲಿ ಪಕ್ಷಿಗಳ ಕಲರವ – ಪ್ರವಾಸಿಗರಿಗೆ ರಸದೌತಣ

    ರಂಗನತಿಟ್ಟು ಪಕ್ಷಿಧಾಮದಲ್ಲಿ ಪಕ್ಷಿಗಳ ಕಲರವ – ಪ್ರವಾಸಿಗರಿಗೆ ರಸದೌತಣ

    ಮಂಡ್ಯ: ಬೇಸಿಗೆ ಬಂತು ಅಂದ್ರೆ ಸಾಕು ಜನರು ಬೀಚ್‍ಗಳ ಕಡೆ ಮುಖ ಮಾಡ್ತಾರೆ. ಆದ್ರೆ ರಂಗನತಿಟ್ಟು ಪಕ್ಷಿಧಾಮ ಬೇಸಿಗೆಯಲ್ಲೂ ತನ್ನ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಸೆಳೆಯುತ್ತಿದೆ.

    ನೀರಿನ ಮಧ್ಯೆ ಬಣ್ಣ-ಬಣ್ಣದ ಪಕ್ಷಿಗಳ ಕಲರವ, ಗೂಡು ನಿರ್ಮಾಣಕ್ಕೆ ಕಡ್ಡಿಗಳನ್ನು ತರುತ್ತಿರುವ ಕೆಲ ಪಕ್ಷಿಗಳು, ತನ್ನ ಮರಿಗಳನ್ನು ಸಂರಕ್ಷಣೆ ಮಾಡುತ್ತಿರುವ ತಾಯಿ, ಸಂತಾನೋತ್ಪತ್ತಿ ಮಾಡುತ್ತಿರುವ ಜೋಡಿ ಹಕ್ಕಿಗಳು, ಮೀನಿನ ಭೇಟೆಗಾಗಿ ಹೊಂಚು ಹಾಕುತ್ತಿರುವ ಮತ್ತಷ್ಟು ಪಕ್ಷಿಗಳು, ಈ ಮಧ್ಯ ಭಯ ಹುಟ್ಟಿಸುವ ಹಾಗೆ ಮಲಗಿರುವ ಮೊಸಳೆಗಳು, ನೀರಿನಲ್ಲಿ ಮುಳುಗೇಳುತ್ತಿರುವ ನೀರು ನಾಯಿ. ಈ ದೃಶ್ಯ ಕಾಣಲು ಸಿಗುವುದು ರಂಗನತಿಟ್ಟು ಪಕ್ಷಿಧಾಮದಲ್ಲಿ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮ ಬೇಸಿಗೆಗಾಲದಲ್ಲೂ ಪಕ್ಷಿಗಳ ಕಲರವ ಹಾಗೂ ಕಾವೇರಿ ತಾಯಿಯಿಂದ ಕಂಗೊಳಿಸುತ್ತಿದೆ. ಇದನ್ನೂ ಓದಿ: ತುಂಬು ಗರ್ಭಿಣಿ ಪತ್ನಿಯನ್ನು ಬಿಟ್ಟು ಉಕ್ರೇನ್ ಹೇಗೆ ತೊರೆಯಲಿ..?- ಭಾರತೀಯನ ಅಳಲು

    ಸದ್ಯ ರಂಗನತಿಟ್ಟು ಪಕ್ಷಿಧಾಮಕ್ಕೆ ಡಿಸೆಂಬರ್ ತಿಂಗಳಿನಿಂದ ಮೇ ತಿಂಗಳವರೆಗೆ ದೇಶ-ವಿದೇಶದಿಂದ ಆಹಾರಕ್ಕಾಗಿ ಹಾಗೂ ಸಂತಾನೋತ್ಪತ್ತಿಗಾಗಿ ಬರುತ್ತವೆ. ಹೀಗಾಗಿ ಈ ಆರು ತಿಂಗಳ ಕಾಲ ರಂಗನತಿಟ್ಟು ಪಕ್ಷಿಧಾಮದಕ್ಕೆ ಪ್ರಕೃತಿ ದೇವತೆಯೇ ಧರಗೆ ಇಳಿದು ಬಂದ ಹಾಗೆ ಭಾವಿಸುತ್ತದೆ. ಈಗ ಪೆಲಿಕಾನ್, ಓಪನ್ ಬಿಲ್ ಸ್ಟಾರ್ಕ್, ಸ್ಫೂನ್ ಬಿಲ್, ಕಾರ್ಮಾರೆಂಟ್, ಐಬಿಸ್, ಇಗ್‍ರೀಟ್, ಕಿಂಗ್ ಫಿಶರ್, ಪೆಂಟೆಂಡ್ ಸ್ಟಾಕ್ ಸೇರಿದಂತೆ 170 ಬಗೆಯ ಲಕ್ಷಾಂತರ ಪಕ್ಷಿಗಳು ರಂಗತಿಟ್ಟಿನ 25 ನಡುಗಡ್ಡೆಗಳಲ್ಲಿ ವಾಸ ಮಾಡುತ್ತಿವೆ. ಇದಲ್ಲದೇ ರಂಗನತಿಟ್ಟಿನಲ್ಲಿ 100ಕ್ಕೂ ಹೆಚ್ಚು ಮೊಸಳೆಗಳು ಸಹ ವಾಸವಾಗಿದ್ದು, ಅಲ್ಲಲ್ಲಿ ಕಾಡು ನಾಯಿಗಳು ನೀರಿನಲ್ಲಿ ಮುಳುಗೇಳುವ ದೃಶ್ಯಗಳು ಸಹ ಗೋಚರಿಸುತ್ತಿದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ರಂಗನತಿಟ್ಟು ಪಕ್ಷಿಧಾಮಕ್ಕೆ ಹರಿದು ಬರುತ್ತಿದ್ದಾರೆ.

    ಇಷ್ಟು ದಿನ ಕೊರೊನಾ ಸಂಖ್ಯೆ ಹೆಚ್ಚಿದ್ದ ಕಾರಣ ರಂಗನತಿಟ್ಟು ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು. ಇದೀಗ ಕೊರೊನಾ ಸಂಖ್ಯೆ ಕಡಿಮೆಯಾಗಿರುವುದು ಮತ್ತು ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಕಾಲ ಇದಾಗಿರುವುದರಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಬೋಟಿಂಗ್ ಮೂಲಕ ಪಕ್ಷಿ ಸೌಂದರ್ಯದ ಜೊತೆಗೆ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ. ರಂಗನತಿಟ್ಟಿನಲ್ಲಿ ಇಷ್ಟಲ್ಲದೇ ಉದ್ಯಾನವನ, ಮಕ್ಕಳು ಆಡವಾಡುವ ಉಪಕರಣಗಳು ಸಹ ಇದೆ. ಒಮ್ಮೆ ರಂಗನತಿಟ್ಟು ಪಕ್ಷಿಧಾಮ ಪ್ರವೇಶ ಮಾಡಿದ್ರೆ ಸುಮಾರು ನಾಲ್ಕು ಗಂಟೆಳಾದ್ರು ಸಹ ಪಕ್ಷಿಧಾಮವನ್ನು ಸುತ್ತಲೂ ಬೇಕಾಗಿಬರುತ್ತದೆ. ಇಲ್ಲಿಗೆ ಬಂದಂತಹ ಪ್ರವಾಸಿಗರಂತು ಫುಲ್ ಎಂಜಾಯ್ ಮಾಡ್ತಾ ಇದ್ದಾರೆ. ಇದನ್ನೂ ಓದಿ: ನವೀನ್ ಕುಟುಂಬಸ್ಥರಿಗೆ 1 ಲಕ್ಷ ರೂ. ಚೆಕ್ ವಿತರಿಸಿದ ಸಲೀಂ ಅಹಮದ್

    ಒಟ್ಟಾರೆ ಒಂದು ಕಡೆ ರಂಗನತಿಟ್ಟಿನಲ್ಲಿ ಪಕ್ಷಿಗಳ ಕಲರವ ನೋಡುಗರಿಗೆ ಮುದ ನೀಡುತ್ತಿದ್ದು, ಇನ್ನೊಂದು ಕಡೆ ಕೊರೊನಾ ಕಡಿಮೆಯಾಗಿರುವುದರಿಂದ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ರಂಗನತಿಟ್ಟು ಪಕ್ಷಿಧಾಮದ ಕಡೆ ಮುಖ ಮಾಡುತ್ತಿದ್ದಾರೆ.

  • ಜಲಮಾಲಿನ್ಯದಿಂದ ವಿನಾಶದ ಅಂಚಿಗೆ ತಲುಪಿದ ಪಕ್ಷಿಧಾಮ – ವಿದೇಶಿ ಹಕ್ಕಿಗಳ ಕಲರವ ಮರೀಚಿಕೆ

    ಜಲಮಾಲಿನ್ಯದಿಂದ ವಿನಾಶದ ಅಂಚಿಗೆ ತಲುಪಿದ ಪಕ್ಷಿಧಾಮ – ವಿದೇಶಿ ಹಕ್ಕಿಗಳ ಕಲರವ ಮರೀಚಿಕೆ

    ಚಿತ್ರದುರ್ಗ: ಅದೊಂದು ಬರದನಾಡಿನ ಪಕ್ಷಿಧಾಮ. ಅಲ್ಲಿಗೆ ಪ್ರತಿವರ್ಷ ವಿದೇಶಿ ಹಕ್ಕಿಗಳು ವಲಸೆ ಬರುತ್ತವೆಂಬ ಹೆಗ್ಗಳಿಕೆ ಗಳಿಸಿದ್ದ ಚಿತ್ರದುರ್ಗ ತಾಲೂಕಿನ ಮಲ್ಲಾಪುರದ ಕೆರೆಯಂಗಳದ ಪಕ್ಷಿಧಾಮ ಈ ಬಾರಿ ಖಾಲಿಖಾಲಿಯಾಗಿದೆ.

    ಬೆಳ್ಳಂಬೆಳಗ್ಗೆ ಚಿಲಿಪಿಲಿ ಎನ್ನುತ್ತಿದ್ದ ವಿದೇಶಿ ಹಕ್ಕಿಗಳ ಕಲರವ ನಾಪತ್ತೆಯಾಗಿದೆ. ಈ ಕೆರೆಗೆ ಚಿತ್ರದುರ್ಗ ನಗರದ ಯೂಜಿಡಿನೀರು ಹರಿದು ಬರುವ ಮೂಲಕ ಪ್ಲಾಸ್ಟಿಕ್ ತ್ಯಾಜ್ಯ ಕೆರೆಯಲ್ಲಿ ಭರ್ತಿಯಾಗಿದೆ. ಹೀಗಾಗಿ ದುರ್ನಾಥ ಬೀರುತ್ತಿರುವ ಕೆರೆ ಸಂಪೂರ್ಣ ಮಲೀನವಾಗಿ ನೀರು ಹಚ್ಚ ಹಸುರಾಗಿದೆ. ಇದರಿಂದಾಗಿ ಈ ವರ್ಷ ಪಕ್ಷಿಗಳ ಸದ್ದಿಲ್ಲದೇ ಆಕರ್ಷಕ ಪಕ್ಷಿಧಾಮ ಬಿಕೋ ಎನ್ನುತ್ತಿದೆ.

    ಪ್ರತಿವರ್ಷ ವಿವಿಧೆಡೆಯಿಂದ ವಿದೇಶಿ ಹಕ್ಕಿಗಳು ವಲಸೆ ಬರುತ್ತಿದ್ದವು. ಇಲ್ಲಿನ ನೈಸರ್ಗಿಕ ಸೊಬಗನ್ನು ಹೆಚ್ಚಿಸುತಿದ್ದವು. ಹೀಗಾಗಿ ಈ ದೃಶ್ಯವನ್ನು ಸವಿಯಲು ಪ್ರವಾಸಿಗರು ಧಾವಿಸುತ್ತಿದ್ದರು. ಅಲ್ಲದೆ ಇಲ್ಲಿನ ನಾಗರೀಕರು ಸಹ ವಾಯುವಿಹಾರಕ್ಕೆ ಬರುತ್ತಿದ್ದರು. ಆದರೆ ಈ ಬಾರಿ ಒಂದು ಪಕ್ಷಿಯ ಸಹ ಕೆರೆಯತ್ತ ಸುಳಿದಿಲ್ಲ ಅಂತ ಪಕ್ಷಿ ಪ್ರಿಯರಾದ ಬಸವರಾಜ್ ಕಿಡಿಕಾರಿದ್ದಾರೆ. ಇದನ್ನೂ ಓದಿ: ಘಮ ಘಮಿಸುವ ಚಿಕನ್ ಮಸಾಲ ಮಾಡುವ ವಿಧಾನ

    ಈ ಕೆರೆ ತುಂಬಿದಾಗ ಜಮೀನುಗಳಿಗೆ ನುಗ್ಗುವ ನೀರಿನಿಂದಾಗಿ ಬರದನಾಡಿನ ರೈತರ ಬೆಳೆಗಳು ಸಹ ನಾಶವಾಗ್ತಿವೆ. ಹೀಗಾಗಿ ಯೂಜಿಡಿ ನೀರನ್ನು ಶುದ್ಧೀಕರಿಸಿ ಕೆರೆಗೆ ಬಿಡುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಅಂತ ಇಲ್ಲಿನ ರೈತ ಹೊರಕೇರಪ್ಪ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಆಕರ್ಷಕ ನೈಸರ್ಗಿಕ ಪಕ್ಷಿಧಾಮ ಉಳಿಸಬೇಕು. ಮುಂದಿನ ಪೀಳಿಗೆಗೆ ಈ ಸೊಬಗನ್ನು ವೀಕ್ಷಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಆದರೆ ಬರದನಾಡಲ್ಲಿ ಸ್ವಯಂ ನಿರ್ಮಾಣವಾದ ನೈಸರ್ಗಿಕ ಪಕ್ಷಿಧಾಮ ವಿನಾಶದ ಅಂಚಿಗೆ ತಲುಪಿರೋದು ಬೇಸರಮೂಡಿಸಿದೆ ಎಂದು ಅಸಮಧಾನ ಹೊರಹಾಕಿದ್ದಾರೆ.

  • ಪಕ್ಷಿಗಳ ಟ್ರ್ಯಾಕಿಂಗ್ – ಕೊಕ್ಕರೆ ಬೆಳ್ಳೂರಿನಲ್ಲಿ ವಿನೂತನ ಪ್ರಯತ್ನ

    ಪಕ್ಷಿಗಳ ಟ್ರ್ಯಾಕಿಂಗ್ – ಕೊಕ್ಕರೆ ಬೆಳ್ಳೂರಿನಲ್ಲಿ ವಿನೂತನ ಪ್ರಯತ್ನ

    ಮಂಡ್ಯ: ಅರಣ್ಯ ಇಲಾಖೆ ಈಗ ಹೊಸದೊಂದು ಪ್ರಯೋಗಕ್ಕೆ ಮುಂದಾಗಿದ್ದು, ಹೆಜ್ಜಾರ್ಲೆ ಪಕ್ಷಿಗಳಿಗೆ ನಂಬರ್ ಟ್ಯಾಗ್ ಹಾಗೂ ಜಿಪಿಎಸ್ ಅಳವಡಿಸುವ ಮೂಲಕ ಅವುಗಳ ಸಂಚಾರ ಕ್ರಮ ಅಧ್ಯಯನಕ್ಕೆ ನಿರ್ಧರಿಸಿದೆ.

    ಮದ್ದೂರು ತಾಲೂಕಿನ ಕೊಕ್ಕರೆ ಬೆಳ್ಳೂರು ಪ್ರಸಿದ್ಧ ಪಕ್ಷಿಧಾಮ. ಸಂತಾನೋತ್ಪತ್ತಿಗಾಗಿ ದೇಶ ವಿದೇಶಗಳಿಂದ ಪಕ್ಷಿಗಳು ಇಲ್ಲಿಗೆ ಬರುತ್ತವೆ. ಹೆಚ್ಚಾಗಿ ಬರುವ ಹೆಜ್ಜಾರ್ಲೆ(ಪೆಲಿಕಾನ್) ಮತ್ತು ಬಣ್ಣದಕೊಕ್ಕರೆ(ಪೆಂಡೆಂಟ್ ಸ್ಟ್ರೋಕ್)ಗಳು ಕೊಕ್ಕರೆ ಬೆಳ್ಳೂರಿನಲ್ಲಿ ಸಂತಾನಾಭಿವೃದ್ಧಿ ಮುಗಿಸಿ ಬೇರೆಡೆ ಹೋಗುತ್ತವೆ. ಈಗ ಇಂತಹ ಹೆಜ್ಜಾರ್ಲೆಗಳಿಗೆ ಜಿಪಿಎಸ್ ಅಳವಡಿಸುವ ಮೂಲಕ ಅವು ಸಂಚಾರ ಕ್ರಮ ತಿಳಿಯಲು ಅರಣ್ಯ ಇಲಾಖೆ ಮುಂದಾಗಿದ್ದು, ಪ್ರಾಯೋಗಿಕವಾಗಿ 10-12 ಪಕ್ಷಿಗಳಿಗೆ ನಂಬರ್ ಟ್ಯಾಗ್ ಹಾಕಲಾಗಿದೆ.

    ಪಕ್ಷಿಗಳ ಸಂತಾನಾಭಿವೃದ್ಧಿ ವೇಳೆ ಮರದಿಂದ ಕೆಳಗೆ ಬೀಳುವ ಮರಿಗಳನ್ನ ರಕ್ಷಿಸಿ ಪೋಷಿಸುವ ಅರಣ್ಯ ಇಲಾಖೆ 3-4 ತಿಂಗಳ ಆರೈಕೆ ಬಳಿಕ ಅವುಗಳನ್ನು  ಹಾರಲು ಬಿಡುತ್ತವೆ. ಈ ವೇಳೆ ಪಕ್ಷಿಗಳ ಕಾಲು-ರೆಕ್ಕೆಗಳಿಗೆ ಪೆಟಾಜಿಯಲ್ ನಂಬರ್ ಗಳನ್ನು ಹಾಕಲಾಗಿದೆ. ಇದನ್ನೂ ಓದಿ: ಆ.15ರ ನಂತರ ಲಾಕ್ ಆಗುತ್ತಾ ಬೆಂಗಳೂರು? – ಟಫ್ ರೂಲ್ಸ್ ಬಗ್ಗೆ ಅಶೋಕ್ ಸುಳಿವು

    ಕಳೆದ ಮಾರ್ಚ್‍ನಲ್ಲಿ 4 ಹೆಜ್ಜಾರ್ಲೆ ಮರಿಗಳಿಗೆ ಕೆ-01, ಕೆ-02, ಕೆ-03, ಕೆ-04 ಎಂಬ ನಂಬರ್ ಹಾಕಿ ಬಿಡಲಾಗಿದೆ. ಹಾಗೆಯೇ ಏಪ್ರಿಲ್‍ನಲ್ಲಿ 9 ಬಣ್ಣದ ಕೊಕ್ಕರೆಗಳಿಗೆ ಎಪಿಯು/ಕೆ-5551, ಎಪಿಎಸ್/ಕೆ-5552, ಎವೈನ್/ಕೆ-5554 ಎಂದು ನಂಬರ್ ಟ್ಯಾಗ್ ಹಾಕಿ ಬಿಡುಗಡೆಗೊಳಿಸಲಾಗಿದೆ. ಈ ನಂಬರ್ ಟ್ಯಾಗ್‍ಗಳಿಂದ ಸಂತಾನೋತ್ಪತ್ತಿ ಬಳಿಕ ತೆರಳಿದ ಪಕ್ಷಿಗಳು ಮತ್ತೆ ಕೊಕ್ಕರೆ ಬೆಳ್ಳೂರಿಗೆ ಬರುತ್ತವಾ ಅಥವಾ ಬೇರೆ ಯಾವುದಾದರೂ ಸ್ಥಳಗಳಿಗೆ ತೆರಳುತ್ತವಾ ಎಂಬುದನ್ನು ಟ್ಯಾಗ್ ಗಮನಿಸಿದವರಿಂದ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

    ಕೊಕ್ಕರೆ ಬೆಳ್ಳೂರಿಗೆ ಎಲ್ಲಿಂದ ಪಕ್ಷಿಗಳು ಬರುತ್ತವೆ? ಸಂತಾನೋತ್ಪತ್ತಿ ಬಳಿಕ ಆ ಪಕ್ಷಿಗಳು ಎಲ್ಲಿಗೆ ತೆರಳುತ್ತವೆ ಎಂಬುದನ್ನ ಅಧ್ಯಯನ ಮಾಡಲು ಹೆಜ್ಜಾರ್ಲೆ ಹಾಗೂ ಬಣ್ಣದ ಕೊಕ್ಕರೆಗಳಿಗೆ ಜಿಪಿಎಸ್ ಅಳವಡಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. 4 ಲಕ್ಷ ರೂ. ಮೌಲ್ಯದ ಜಿಪಿಎಸ್ ಉಪಕರಣಗಳನ್ನು  ತರಿಸಿಕೊಳ್ಳಲಾಗುತ್ತಿದ್ದು,  ಪಕ್ಷಿಗಳಿಗೆ ಜಿಪಿಎಸ್ ಅಳವಡಿಸುವುದರಿಂದ ಅವುಗಳ ಸಂಚಾರ ಕ್ರಮ ತಿಳಿಯಲು ಸಹಕಾರಿಯಾಗಲಿದೆ.

  • ರಾಯಚೂರಿನ ಎರಡು ಸುತ್ತಿನ ಕೋಟೆಯ ಕಂದಕದಲ್ಲಿ ಗೀಜಗ ಹಕ್ಕಿಗಳ ಕಲರವ

    ರಾಯಚೂರಿನ ಎರಡು ಸುತ್ತಿನ ಕೋಟೆಯ ಕಂದಕದಲ್ಲಿ ಗೀಜಗ ಹಕ್ಕಿಗಳ ಕಲರವ

    – ಗೂಡು ಕಟ್ಟುವ ರೊಮ್ಯಾಂಟಿಕ್ ಕಥನ ಇಲ್ಲಿದೆ

    ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ ಈಗ ಎಲ್ಲಿ ನೋಡಿದರು ಬಣ್ಣ ಬಣ್ಣ. ಹಸಿರು ಮೈಹೊದ್ದುಕೊಂಡ ದೃಶ್ಯ ಮಳೆಗಾಲದಲ್ಲೂ ಕೂಡ ಅಪರೂಪ. ಆದರೆ ನಗರದ ಐತಿಹಾಸಿಕ ಎರಡು ಸುತ್ತಿನ ಕೋಟೆ ಪಕ್ಷಿಧಾಮವಾಗಿ ಮಾರ್ಪಟ್ಟಿದೆ. ಹಕ್ಕಿಗಳ ಕಲರವ ಕಣ್ಮನ ಸೆಳೆಯುತ್ತಿದೆ. ಜಿಲ್ಲೆಯ ಕೆರೆಗಳಿಗೆ ಬೇಸಿಗೆಯಲ್ಲಿ ವಲಸೆ ಹಕ್ಕಿಗಳು ಸಾಮಾನ್ಯವಾಗಿ ಬರುತ್ತವೆ. ಆದರೆ ಈ ಬಾರಿ ಚಳಿಗಾಲದಲ್ಲಿ ಸ್ಥಳೀಯ ಹಕ್ಕಿಗಳ ಕಲರವವೇ ಜೋರಾಗಿದೆ. ನಗರದ ಕೇಂದ್ರ ಬಸ್ ನಿಲ್ದಾಣ ಬಳಿ ಕೋಟೆಯ ಕಂದಕ ಪ್ರದೇಶದಲ್ಲಿ ಗೀಜಗ ಹಕ್ಕಿಗಳು ಗೂಡಗಳನ್ನು ಕಟ್ಟಿ ಚಿಲಿಪಿಲಿಗುಟ್ಟುತ್ತಿವೆ.

    ಕಂದಕದ ತುಂಬಾ ಚರಂಡಿ ನೀರು ಹರಿಯುತ್ತಿದ್ದರೂ ಹಕ್ಕಿಗಳಿಗೆ ಅದೇ ಆಸರೆಯಾಗಿದೆ. ಹಳದಿ ಬಣ್ಣದ ತಳಿಯ ಗೀಜಗ, ನೇಕಾರ ಹಕ್ಕಿ, ಬಯಾ ಹಕ್ಕಿಗಳು ನೋಡುಗರನ್ನು ಆಕರ್ಷಿಸುತ್ತಿವೆ. ಮುಂಗಾರು ಮಳೆ ಪ್ರಾರಂಭವಾಗುವ ಮುನ್ನ ಗಂಡುಹಕ್ಕಿಗಳು ಗೂಡುಗಳನ್ನು ಕಟ್ಟಲು ಆರಂಭಿಸುತ್ತವೆ. ನೀರು ಹತ್ತಿರ ಇರಬೇಕು, ಸಾಕಷ್ಟು ಆಹಾರ ಸಿಗುತ್ತಿರಬೇಕು, ಇತರ ಪಕ್ಷಿ ಪ್ರಾಣಿಗಳಿಂದ ಅಪಾಯ ಇರಬಾರದು ಅಂತಹ ಸ್ಥಳ ಹುಡುಕಿ ಗೂಡು ಕಟ್ಟುವುದು ಗಿಜಗಹಕ್ಕಿಯ ಜಾಣತನ. ಹತ್ತಿ, ತೆಂಗಿನ ನಾರು, ಈಚಲು ನಾರು, ಭತ್ತದ ಹುಲ್ಲು ನಾರಿನಿಂದ ಗೂಡು ಕಟ್ಟುತ್ತವೆ. ಗಿಡದ ರೆಂಬೆ ಕೊಂಬೆಗಳ ತುದಿಯಲ್ಲಿ, ನೀರಿನ ಕಡೆ ಭಾಗಿದ ಕಡೆಗಳಲ್ಲಿ ಗೂಡುಗಳನ್ನ ಕಟ್ಟುತ್ತವೆ. ಶಂಕಾಕಾರದಲ್ಲಿ ಗೂಡು ಕಟ್ಟಿ ತುದಿಯಲ್ಲಿ ಬಾಲದ ರೀತಿಯಲ್ಲಿ ಗೂಡು ಹೆಣೆದಿರುತ್ತವೆ. ಬೇರೆ ಪಕ್ಷಿಗಳು ಗೂಡು ಪ್ರವೇಶಿಸುವುದನ್ನು ತಡೆಯಲು ಈ ರೀತಿ ಮಾಡಿರುತ್ತವೆ. ಸಾಮಾನ್ಯವಾಗಿ ಹಕ್ಕಿಗಳು ಸಂತಾನೋತ್ಪತ್ತಿ ಬಳಿಕ ಗೂಡು ಖಾಲಿ ಮಾಡುತ್ತವೆ ಆದರೆ ಈ ಬಾರಿ ಹಕ್ಕಿಗಳ ಕಲರವ ಮುಂದುವರಿದಿದೆ.

    ಗೀಜಗ ಪಕ್ಷಿಗಳು ಗೂಡು ಕಟ್ಟುವುದು ಒಂದು ರೊಮ್ಯಾಂಟಿಕ್ ಕಥನ ಎಂದು ಪಕ್ಷಿ ಪ್ರೇಮಿ, ನಿವೃತ್ತ ಪ್ರಾಣಿಶಾಸ್ತ್ರ ಉಪನ್ಯಾಸಕ ಪ್ರೋ.ಶಾನು ಕುಮಾರ್ ಹೇಳಿದ್ದಾರೆ. ಗಂಡು ಹಕ್ಕಿ ಅರ್ಧದಷ್ಟು ಗೂಡುಕಟ್ಟಿ ಹೆಣ್ಣು ಹಕ್ಕಿಗಾಗಿ ಕಾಯುತ್ತಿರುತ್ತವಂತೆ. ಹೆಣ್ಣು ಹಕ್ಕಿ ಗೂಡನ್ನು ಪರಿಶೀಲಿಸಿ ಒಪ್ಪಿಗೆ ಕೊಟ್ಟರೆ ಗೂಡು ಕಟ್ಟುವುದನ್ನ ಗಂಡು ಹಕ್ಕಿ ಮುಂದುವರಿತ್ತದೆ. ಇಲ್ಲದಿದ್ದರೆ ಗಂಡು ಹಕ್ಕಿ ಗೂಡುಕಟ್ಟಲು ಮತ್ತೊಂದು ಸ್ಥಳವನ್ನ ಹುಡುಕುತ್ತದೆ. ಇನ್ನೂ ಕೆಲ ಗಂಡು ಹಕ್ಕಿ ಮೂರ್ನಾಲ್ಕು ಗೂಡುಗಳನ್ನು ಅರ್ಧಕ್ಕೆ ಹೆಣೆದಿರುತ್ತವೆ, ಹೆಣ್ಣು ಹಕ್ಕಿ ಆಯ್ಕೆಮಾಡುವ ಗೂಡನ್ನು ಒಟ್ಟಾಗಿ ಪೂರ್ಣ ಕಟ್ಟಿಕೊಳ್ಳುತ್ತವೆ. ಗೂಡು ಪೂರ್ಣಗೊಂಡ ನಂತರ ಸಂತಾನೋತ್ಪತ್ತಿ ಮಾಡುತ್ತವೆ. ಮಳೆ ನೀರು ಒಳಗೆ ಬರದಂತೆ ಗೂಡನ್ನ ಮಣ್ಣಿನಿಂದ ಮೆತ್ತಿ ಕಟ್ಟಿರುತ್ತವೆ. ಮಿಂಚು ಹುಳುಗಳನ್ನ ತಂದಿಟ್ಟುಕೊಂಡು ಬೆಳಕು ಮಾಡಿಕೊಳ್ಳುತ್ತವೆ. 18 ರಿಂದ 20 ದಿನದಲ್ಲಿ ಒಂದು ಗೂಡನ್ನ ಕಟ್ಟುತ್ತವೆ. ಸುಮಾರು ಐವತ್ತು ಸಾವಿರ ಹುಲ್ಲಿನ ಎಳೆಗಳಿಂದ ಗೂಡು ಕಟ್ಟಿಕೊಳ್ಳುತ್ತವೆ.

    ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಗೂಡುಕಟ್ಟಲು ಗೀಜಗ ಹಕ್ಕಿಗಳು ಪ್ರಾರಂಭಿಸುತ್ತವೆ. ಮಳೆಗಾಲ ಮುಗಿದ ಬಳಿಕ ಗೂಡು ಬಿಡುತ್ತವೆ. ಈ ಬಾರಿ ಚಳಿಗಾಲದಲ್ಲೂ ರಾಯಚೂರಿನಲ್ಲಿ ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತಿದೆ.

  • ರಂಗನತಿಟ್ಟುವಿನಲ್ಲಿ ಬೋಟಿಂಗ್ ಸ್ಟಾಪ್, ಸೆಲ್ಫಿ ನಿಷೇಧ

    ರಂಗನತಿಟ್ಟುವಿನಲ್ಲಿ ಬೋಟಿಂಗ್ ಸ್ಟಾಪ್, ಸೆಲ್ಫಿ ನಿಷೇಧ

    ಮಂಡ್ಯ: ಕೆಆರ್‍ಎಸ್ ಅಣೆಕಟ್ಟಿನಿಂದ 1 ಲಕ್ಷ ಕ್ಯೂಸೆಕ್‍ಗೂ ಹೆಚ್ಚಿನ ನೀರು ಹೊರ ಬಿಟ್ಟ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮಕ್ಕೆ ಮೈಸೂರು ಉಪವಲಯ ಅರಣ್ಯಾಧಿಕಾರಿ ಅಲೆಕ್ಸಾಂಡರ್ ಭೇಟಿ ನೀಡಿದ್ದಾರೆ.

    ಪಕ್ಷಿಧಾಮದ ವೀಕ್ಷಣೆ ಮಾಡಿ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪಕ್ಷಿಧಾಮದ ಇತಿಹಾಸ ನೋಡಿದರೆ ಎರಡು ಲಕ್ಷ ಕ್ಯೂಸೆಕ್ ನೀರು ಬಿಟ್ಟರೂ ಯಾವುದೇ ತೊಂದರೆ ಆಗಲ್ಲ. ಕಳೆದ ಸಾಲಿನಲ್ಲಿ ಒಂದು ಲಕ್ಷ ನಲವತ್ತು ಸಾವಿರ ಕ್ಯೂಸೆಕ್ ನೀರು ಬಿಟ್ಟಿದ್ದರು. ಆ ಸಮಯದಲ್ಲಿ ಪಕ್ಷಿಗಳಿಗೆ ಏನೂ ಸಮಸ್ಯೆ ಆಗಿಲ್ಲ. ಪಕ್ಷಿಗಳು ಮರದ ತುದಿಯಲ್ಲಿ ಗೂಡು ಕಟ್ಟುವುದರಿಂದ ಸಮಸ್ಯೆ ಎದುರಾಗಲ್ಲ. ಆದರೆ ಈ ಬಾರಿ ಮುನ್ನೆಚ್ಚರಿಕಾ ಕ್ರಮವಾಗಿ ಬೋಟಿಂಗ್ ಸ್ಟಾಪ್ ಮಾಡಿದ್ದೇವೆ ಎಂದರು.

    ಪ್ರವಾಸಿಗರು ನೋಡಲು ಪಕ್ಷಿಧಾಮಕ್ಕೆ ಬರಬಹುದು. ಆದರೆ ನದಿ ದಡಕ್ಕೆ ಯಾರನ್ನೂ ಬಿಡುವುದಿಲ್ಲ. ಈ ಸಮಯದಲ್ಲಿ ಸ್ಥಳೀಯ ಪಕ್ಷಿಗಳು ಪಕ್ಷಿಧಾಮದಲ್ಲಿ ಇರುತ್ತವೆ. ಆದರೆ ಹೊರಗಿನಿಂದ ಬರುವ ಪಕ್ಷಿಗಳು ಇರುವುದು ಕಡಿಮೆ. ಪ್ರವಾಸಿಗರು ಯಾವುದೇ ವಿಧವಾದ ಸೆಲ್ಫಿ ತೆಗೆದುಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದರು.

    ರಂಗನತಿಟ್ಟು ಪಕ್ಷಿಧಾಮದಲ್ಲೂ ಕಾವೇರಿ ನದಿ ತುಂಬಿ ಹರಿಯುತ್ತಿರುವುದರಿಂದಾಗಿ ಪಕ್ಷಿಧಾಮದಲ್ಲಿ ಬೋಟಿಂಗ್ ಸ್ಥಗಿತಗೊಳಿಸಲಾಗಿದೆ. ಯಾಕಂದರೆ ಬೋಟಿಂಗ್ ಬಳಿ ಮೆಟ್ಟಿಲವರೆಗೂ ನೀರು ಆವರಿಸಿದೆ. ಸದ್ಯಕ್ಕೆ ಪಕ್ಷಿಗಳಿಗೆ ಯಾವುದೇ ಅಪಾಯವಿಲ್ಲ ಎಂದರು.

    ನದಿ ದಡದ ಜಮೀನುಗಳಿಗೆ ನೀರು ನುಗಿದ್ದು, ಕಾವೇರಿ ನದಿ ತುಂಬಿ ಹರಿಯುತ್ತಿದೆ. ಇಂದು ರಜಾ ದಿನವಾದ್ದರಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹೀಗಾಗಿ ಪ್ರವಾಸಿ ತಾಣಗಳಾದ ಎಡಮುರಿ, ಬಲಮುರಿ, ಕೆಆರ್‍ಎಸ್, ಪಕ್ಷಿಧಾಮ ಸೇರಿದಂತೆ ಎಲ್ಲ ಕಡೆ ಬ್ಯಾರಿಕೇಡ್ ಹಾಕಿ ಪ್ರವಾಸಿಗರು ನದಿಗಿಳಿಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಅವರು ತಿಳಿಸಿದರು.

  • ಬಿಸಿಲನಾಡು ರಾಯಚೂರಲ್ಲಿ ವಲಸೆ ಪಕ್ಷಿಗಳ ಕಲರವ

    ಬಿಸಿಲನಾಡು ರಾಯಚೂರಲ್ಲಿ ವಲಸೆ ಪಕ್ಷಿಗಳ ಕಲರವ

    ರಾಯಚೂರು: ಬಿಸಿಲನಾಡು ಎಂದೇ ಕರೆಸಿಕೊಳ್ಳುವ ರಾಯಚೂರು ಈಗ ಪಕ್ಷಿಧಾಮವಾಗಿ ಮಾರ್ಪಟ್ಟಿದೆ. ಇಲ್ಲಿನ ಮರ್ಚಡ್, ಮನ್ಸಲಾಪುರ ಸೇರಿದಂತೆ ಕೆಲವು ಕೆರೆಗಳಿಗೆ ಸಾವಿರಾರು ಪಕ್ಷಿಗಳ ದಂಡು ವಲಸೆ ಬಂದಿದ್ದು, ಅವುಗಳ ಹಾರಾಟ ಆಕಾಶಕ್ಕೆ ಆಭರಣ ಮುಡಿಸುವಂತಿದೆ.

    ಆಹಾರ ಅರಸಿ ವಿವಿಧ ಜಾತಿಯ ಪಕ್ಷಿಗಳು ಉತ್ತರ ಭಾರತ ಸೇರಿದಂತೆ ವಿದೇಶಗಳಿಂದ ಇಲ್ಲಿಗೆ ಬಂದಿವೆ. ಬಣ್ಣಬಣ್ಣದ ವಿಭಿನ್ನ ಪಕ್ಷಿಗಳ ಆಗಮನ ಪಕ್ಷಿ ಪ್ರೇಮಿಗಳು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಸೈನಿಕರಂತೆ ಸಾಲು ಸಾಲಾಗಿ ಹೋಗುವ ಪಕ್ಷಿಗಳು, ತುಂಬಿದ ಕೆರೆಯಲ್ಲಿ ಪುಟ್ಟ ಪುಟ್ಟದಾಗಿ ಕಾಣಸಿಗುವ ಬಾತುಕೋಳಿಗಳು ಪಕ್ಷಿ ಪ್ರೇಮಿಗಳಿಗೆ ಮನರಂಜನೆ ನೀಡುತ್ತಿವೆ.

    ಇಲ್ಲಿಗೆ ಬಂದಿರುವ ಪಕ್ಷಿಗಳು ಪ್ರತಿ ವರ್ಷ ಕೆಲ ಕಾಲ ವಿಶ್ರಾಂತಿ ಪಡೆದು, ಮತ್ತೆ ಇಲ್ಲಿಂದ ಹೊರಡುತ್ತಿದ್ದವು. ಆದರೆ ಈ ಬಾರಿ ಅಕ್ಟೋಬರ್ ತಿಂಗಳಲ್ಲೂ ಇಲ್ಲಿಯೇ ಉಳಿದುಕೊಂಡಿದ್ದು, ಪ್ರವಾಸಿಗರಿಗೆ ಸಂತಸ ತಂದಿದೆ. ಉತ್ತರ ಭಾರತ ಹಾಗೂ ಮಂಗೋಲಿಯಾದಂತಹ ಚಳಿನಾಡಿನಿಂದ ಪಕ್ಷಿಗಳು ವಲಸೆ ಬಂದಿವೆ.

    ಯಾವ ಪಕ್ಷಿಗಳನ್ನು ಕಾಣಬಹುದು?
    ಪೆರಿಗ್ರಿನ್ ಫಾಲ್ಕನ್, ಗ್ರೇಟರ್ ಫ್ಲೆಮಿಂಗ್, ಹ್ಯಾರಿಯರ್, ಗ್ರೇಟರ್ ಸ್ಪಾಟೆಡ್ ಈಗಲ್, ಸ್ಪೂನ್ ಬಿಲ್ಸ್, ರಾಜ ಹಂಸ, ಬಣ್ಣದ ಕೊಕ್ಕರೆ ಸೇರಿದಂತೆ ಹಲವಾರು ಜಾತಿಯ ಪಕ್ಷಿಗಳನ್ನು ಮರ್ಚಡ್ ಹಾಗೂ ಮನ್ಸಲಾಪುರ ಕೆರೆಯಲ್ಲಿ ನೋಡಿ ಆನಂದಿಸಬಹುದಾಗಿದೆ. ಪಕ್ಷಿಗಳ ವೀಕ್ಷಣೆಗಾಗಿ ರಾಜ್ಯದ ವಿವಿಧ ಮೂಲೆಗಳಿಂದ ಜನರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

    ಉಷ್ಣಪ್ರದೇಶವಾದ ದಕ್ಷಿಣ ಭಾರತಕ್ಕೆ ಪಕ್ಷಿಗಳು ಆಹಾರ, ವಿಶ್ರಾಂತಿ ಹಾಗೂ ಸಂತಾನಭಿವೃದ್ಧಿಗಾಗಿ ವಲಸೆ ಬರುತ್ತವೆ. ಇಲ್ಲಿಗೆ ಬರುವ ಪಕ್ಷಿಗಳಿಗೆ ರಾಯಚೂರಿನ ಮರ್ಚಡ್ ಕೆರೆ, ಮಾವಿನ ಕೆರೆ, ಮನ್ಸಲಾಪುರ ಕೆರೆ, ಮಲಿಯಾಬಾದ್ ಕೆರೆಗಳು ಹೇಳಿ ಮಾಡಿಸಿದಂತಿವೆ. ಈ ಪ್ರದೇಶದಲ್ಲಿ ಪಕ್ಷಿಗಳು ಕೇವಲ ವಿಶ್ರಾಂತಿ ಪಡೆದು, ಮುಂದೆ ರಾಮೇಶ್ವರದಲ್ಲಿ ಸಂತಾನಭಿವೃದ್ಧಿ ಮಾಡುತ್ತವೆ. ಆದರೆ ಮಾರ್ಚ್ ತಿಂಗಳಲ್ಲಿಯೇ ಇಲ್ಲಿಂದ ಹೊರಡುತ್ತಿದ್ದ ಪಕ್ಷಿಗಳು, ಇನ್ನೂ ಇಲ್ಲಿಯೇ ಉಳಿದುಕೊಂಡಿರೋದು ನಮಗೆ ಸಂತಸ ತಂದಿದೆ ಎಂದು ಪಕ್ಷಿ ಪ್ರೇಮಿಗಳು ಹೇಳುತ್ತಾರೆ.

    ವಲಸೆ ಪಕ್ಷಿಗಳ ಮಹತ್ವ ತಿಳಿಯದ ಕೆಲ ದುಷ್ಕರ್ಮಿಗಳು ಇವುಗಳನ್ನು ಬೇಟೆಯಾಡಿ ತಿನ್ನುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಪಕ್ಷಿ ಪ್ರೇಮಿಗಳು ಒತ್ತಾಯಿಸಿದ್ದಾರೆ. ನಗರ ಪ್ರದೇಶದಿಂದ ಮರ್ಚಡ್ ಹಾಗೂ ಮನ್ಸಲಾಪುರ ಕೆರೆಗಳು ದೂರವಿದ್ದು, ಇಲ್ಲಿ ಮನುಷ್ಯರ ಓಡಾಟ ಸ್ವಲ್ಪ ಕಡಿಮೆಯಿದೆ. ಈ ಎರಡೂ ಕೆರೆಯಲ್ಲಿ ಹೆಚ್ಚು ಆಳವಲ್ಲದ, ಸದಾ ತಳಮಟ್ಟದ ನೀರು ಇರುವುದರಿಂದ ಪಕ್ಷಿಗಳಿಗೆ ಸುಲಭವಾಗಿ ಆಹಾರ ಸಿಗುತ್ತದೆ. ಹೀಗಾಗಿ ರಾಯಚೂರಿನ ಈ ಕೆರೆಗಳನ್ನು ಪಕ್ಷಿಧಾಮ ಮಾಡಬೇಕು ಎನ್ನುವುದು ಪಕ್ಷಿ ತಜ್ಞರು ಹಾಗೂ ಪಕ್ಷಿ ಪ್ರೇಮಿಗಳ ಅಭಿಪ್ರಾಯವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರೀ ಮಳೆಯಿಂದಾಗಿ ಮಂಡಗದ್ದೆಯಲ್ಲಿ ಮೂಕ ಪಕ್ಷಿಗಳ ರೋಧನೆ!

    ಭಾರೀ ಮಳೆಯಿಂದಾಗಿ ಮಂಡಗದ್ದೆಯಲ್ಲಿ ಮೂಕ ಪಕ್ಷಿಗಳ ರೋಧನೆ!

    ಶಿವಮೊಗ್ಗ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಾ ನದಿಯು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಜಿಲ್ಲೆಯ ಪ್ರಸಿದ್ಧ ಮಂಡಗದ್ದೆ ಪಕ್ಷಿಧಾಮದಲ್ಲಿ ನೀರಿನ ರಭಸಕ್ಕೆ ಸಾವಿರಾರು ಪಕ್ಷಿಗಳು ಕೊಚ್ಚಿ ಹೋಗಿವೆ.

    ಪ್ರಸಿದ್ಧ ಪಕ್ಷಿಧಾಮ ಮಂಡಗದ್ದೆಯಲ್ಲೀಗ ಶೋಕ ಮಡುಗಟ್ಟಿದ್ದು, ಪ್ರತಿ ವರ್ಷ ಸಂತಾನಭಿವೃದ್ಧಿಗೆ ಬರುವ ಸಾವಿರಾರು ಪಕ್ಷಿಗಳು ತುಂಗೆಯ ಅಬ್ಬರಕ್ಕೆ ತತ್ತರಿಸಿ ಹೋಗಿವೆ. ನಿರಂತರ ಮಳೆಯಿಂದಾಗಿ ತುಂಗಾ ನದಿಯು ಅಪಾಯದಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹದಲ್ಲಿ ಇಲ್ಲಿನ ಸಾವಿರಾರು ಪಕ್ಷಿಗಳ ಗೂಡುಗಳು ಕೊಚ್ಚಿಕೊಂಡು ಹೋಗಿವೆ.

    ಪ್ರತಿ ವರ್ಷ ಉತ್ತರ ಭಾರತದಿಂದ ಮೇ ಹಾಗೂ ಜೂನ್ ತಿಂಗಳಲ್ಲಿ ಬರುವ ಜಾಲಪಾದ, ತುಪ್ಪಳದ ಹಕ್ಕಿಗಳು ಇಲ್ಲಿ ಗೂಡು ಕಟ್ಟಿ, ಮೊಟ್ಟೆ ಇಟ್ಟು ಮರಿಗಳೊಂದಿಗೆ ಅಕ್ಟೋಬರ್ ವೇಳೆಗೆ ಹಿಂತಿರುಗುತ್ತವೆ. ಆದರೆ ಈ ವರ್ಷ ಪ್ರವಾಹದಿಂದಾಗಿ ತಳಮಟ್ಟದಲ್ಲಿದ್ದ ಗೂಡುಗಳು ಮೊಟ್ಟೆ-ಮರಿಗಳ ಸಮೇತ ಕೊಚ್ಚಿಕೊಂಡು ಹೋಗಿವೆ.

    ಮೇಲ್ಭಾಗದಲ್ಲಿ ಇರುವ ಕೆಲವು ಗೂಡುಗಳು ಮಾತ್ರ ಉಳಿದುಕೊಂಡಿದ್ದು, ನಿರಂತರ ಮಳೆಯಿಂದಾಗಿ ಪಕ್ಷಿಗಳು ತತ್ತರಿಸಿ ಹೋಗಿವೆ. ಎಂದು ಮಳೆ ನಿಲ್ಲುವುದೋ ಎಂದು ಪಕ್ಷಿಗಳು ಆಕಾಶ ನೋಡುವಂತಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಕ್ಕರೆ ಬೆಳ್ಳೂರಿನಲ್ಲಿ ಮುಂದುವರಿಯುತ್ತಿದೆ ಪಕ್ಷಿಗಳ ಸಾವು!

    ಕೊಕ್ಕರೆ ಬೆಳ್ಳೂರಿನಲ್ಲಿ ಮುಂದುವರಿಯುತ್ತಿದೆ ಪಕ್ಷಿಗಳ ಸಾವು!

    ಮಂಡ್ಯ: ರಾಜ್ಯದ ಪಕ್ಷಿಧಾಮ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಕ್ಕರೆ ಬೆಳ್ಳೂರಿನಲ್ಲಿ ಪಕ್ಷಿಗಳ ಸಾವು ಮುಂದುವರಿದಿದ್ದು, ಆತಂಕಕ್ಕೆ ಕಾರಣವಾಗಿದೆ.

    ಸಂತಾನೋತ್ಪತ್ತಿಗಾಗಿ ವಲಸೆ ಬಂದಿದ್ದ ಕೊಕ್ಕರೆಗಳು ಅಸ್ವಸ್ಥಗೊಂಡು ಮರದ ಮೇಲಿನಿಂದ ಬೀಳುತ್ತಿವೆ. ಮತ್ತೆ ನಾಲ್ಕು ಹಕ್ಕಿಗಳು ಬಿದ್ದಿದ್ದು, ಅದರಲ್ಲಿ ಒಂದು ಪಕ್ಷಿ ಸಾವನ್ನಪ್ಪಿದೆ. ಇನ್ನು ಮೂರು ಹಕ್ಕಿಗಳು ಆಹಾರ ಸೇವಿಸದೇ ಹಾರಲಾಗದೇ ಒದ್ದಾಡುತ್ತಿವೆ. ಕಳೆದ ಒಂದು ವಾರದ ಹಿಂದೆ ನಾಲ್ಕು ಹಕ್ಕಿಗಳು ಸಾವನ್ನಪ್ಪಿದ್ದವು. ಇದೀಗ ಮತ್ತೆ ಹಕ್ಕಿಗಳ ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ.

    ಈ ಹಿಂದೆ ಪಕ್ಷಿಗಳು ಸಾವನ್ನಪ್ಪಿದ್ದಾಗ ಪಕ್ಷಿಗಳ ಸಾವಿನ ಹಿನ್ನೆಲೆಯಲ್ಲಿ ಹಕ್ಕಿಜ್ವರ, ಸೋಂಕಿನಿಂದ ಕೊಕ್ಕರೆ ಮೃತಪಟ್ಟಿರಬಹುದೆಂದು ಶಂಕಿಸಲಾಗಿತ್ತು. ಪಶು ವೈದ್ಯರು ಮೃತಪಟ್ಟ ಕೊಕ್ಕರೆಗಳನ್ನು ಬೆಂಗಳೂರಿನ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸಿಕೊಟ್ಟಿದ್ದರು. ಮೂರು ಕೊಕ್ಕರೆಗಳ ಪೈಕಿ ಎರಡು ಜಂತುಹುಳು ಸಮಸ್ಯೆಯಿಂದ ಸಾವನ್ನಪ್ಪಿರೋದು ಎಂದು ಪರಿಶೀಲನೆ ವೇಳೆ ತಿಳಿದುಬಂದಿತ್ತು.

    ಪಕ್ಷಿಗಳ ಸಾವಿಗೆ ಕಾರಣ ತಿಳಿದು ಬಂದ ಮೇಲೆ ಸೂಕ್ತ ಚಿಕಿತ್ಸೆ ನೀಡಿದ್ದು, ಮತ್ತೆ ಈ ರೀತಿ ಆದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ವೈದ್ಯರು ತಿಳಿಸಿದ್ದರು. ಆದರೆ ಮತ್ತೆ ಹಕ್ಕಿಗಳು ಸಾಯುತ್ತಿದ್ದು, ಸೂಕ್ತ ಕಾರಣ ತಿಳಿದು ಬಂದಿಲ್ಲ. ಸಂತಾನೋತ್ಪತ್ತಿಗಾಗಿ ವಲಸೆ ಬಂದಿರುವ ಪೆಲಿಕಾನ್ ಹಕ್ಕಿಗಳೇ ನಿರಂತರವಾಗಿ ಸಾವಿಗೀಡಾಗುತ್ತಿವೆ. ಇದು ಪಕ್ಷಿ ಪ್ರಿಯರ ಆತಂಕಕ್ಕೆ ಕಾರಣವಾಗಿದ್ದು, ಕೂಡಲೇ ಈ ಬಗ್ಗೆ ವೈದ್ಯಾಧಿಕಾರಿಗಳು ಗಮನ ಹರಿಸಬೇಕೆಂದು ಆಗ್ರಹಿಸಿದ್ದಾರೆ.