Tag: ಪಕೋಡ

  • ರಸ್ತೆ ಬದಿ ಜನರಿಗೆ ಪಕೋಡ ಹಂಚಿದ ಮಮತಾ ಬ್ಯಾನರ್ಜಿ

    ರಸ್ತೆ ಬದಿ ಜನರಿಗೆ ಪಕೋಡ ಹಂಚಿದ ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ಜಾರ್‌ಗ್ರಾಮ್‌ನಲ್ಲಿ (Jhargram) ರಸ್ತೆ ಬದಿಯ ಟೀ ಸ್ಟಾಲ್‍ನಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ (Bengal Chief Minister) ಮಮತಾ ಬ್ಯಾನರ್ಜಿ (Mamata Banerjee) ಅವರು ಜನರಿಗೆ ಪಕೋಡ ಹಂಚಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಮಮತಾ ಬ್ಯಾನರ್ಜಿ ಅವರ ಸುತ್ತಾ ಬೆಂಗಾವಲು ಪಡೆ ಸುತ್ತುವರಿದಿದ್ದು, ಗ್ರಾಹಕರಿಗೆ ಸಣ್ಣ ನ್ಯೂಸ್ ಪೇಪರ್ ತುಂಡಿನಲ್ಲಿ ಪಕೋಡವನ್ನು ಸುತ್ತಿಕೊಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಅಲ್ಲದೇ ಎಲ್ಲರಿಗೂ ಪಕೋಡ ಸಿಕ್ಕಿದ್ಯಾ ಎಂದು ಹೇಳುತ್ತಿರುವುದನ್ನು ಕೇಳಿಸಿಕೊಳ್ಳಬಹುದಾಗಿದೆ. ಮಮತಾ ಬ್ಯಾನರ್ಜಿ ಅವರು ಬುಡಕಟ್ಟು ಜನಾಂಗದ ಕಾರ್ಯಕ್ರಮಕ್ಕಾಗಿ ಜಾರ್‍ಗ್ರಾಮ್‍ಗೆ ಆಗಮಿದ್ದರು.  ಇದನ್ನೂ ಓದಿ: ಬೆಂಗ್ಳೂರು ಬಳಿ ಟಾಟಾ ಐಫೋನ್ ಉತ್ಪಾದನಾ ಘಟಕ – 60 ಸಾವಿರ ಮಂದಿಗೆ ಉದ್ಯೋಗ

    ಮಮತಾ ಬ್ಯಾನರ್ಜಿ ಅವರು, ಬೀದಿಬದಿಯಲ್ಲಿ ತಿಂಡಿಗಳನ್ನು ಮಾರಾಟ ಮಾಡುತ್ತಿರುವುದು ಇದೇ ಮೊದಲಲ್ಲ. ಈ ಮುನ್ನ ವರ್ಷದ ಆರಂಭದಲ್ಲಿ ಡಾರ್ಜಿಲಿಂಗ್‍ನ ಒಂದು ಸಣ್ಣ ಸ್ಟಾಲ್‍ವೊಂದರಲ್ಲಿ ಮಮತಾ ಬ್ಯಾನರ್ಜಿ ಅವರು ಮೊಮೋವನ್ನು ತಯಾರಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ‘ನೋ ಜಾಬ್’ ಎಂದವರಿಗೆ ಪಕೋಡ, ಜಿಲೇಬಿ ಮಾಡಿ ತೋರಿಸಿದ ಯುಪಿ ಮಂತ್ರಿಗಳು!

    ‘ನೋ ಜಾಬ್’ ಎಂದವರಿಗೆ ಪಕೋಡ, ಜಿಲೇಬಿ ಮಾಡಿ ತೋರಿಸಿದ ಯುಪಿ ಮಂತ್ರಿಗಳು!

    ಲಕ್ನೋ: ನೋ ಜಾಬ್ ಎಂದು ಮೋದಿ ಸರ್ಕಾರವನ್ನು ಟೀಕಿಸುತ್ತಿದ್ದ ಪ್ರತಿಪಕ್ಷಗಳಿಗೆ ಉತ್ತರ ಪ್ರದೇಶದ ಮಂತ್ರಿಗಳು ಪಕೋಡ ಮತ್ತು ಜಿಲೇಬಿ ಮಾಡುವ ಮೂಲಕ ಉತ್ತರ ಕೊಟ್ಟಿದ್ದಾರೆ.

    ಈ ಹಿಂದೆ ಅಲಹಾಬಾದ್ ಎಂದು ಕರೆಯಲ್ಪಡುತ್ತಿದ್ದ ಪ್ರಯಾಗ್‍ರಾಜ್‍ನ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿನ ಸಚಿವರು, ಬೆಂಬಲಿಗರು ಪ್ರಚಾರಕ್ಕಾಗಿ ಅಲ್ಲಿನ ಮಾರುಕಟ್ಟೆಗೆ ಹೋಗಿದ್ದಾರೆ. ಅಲ್ಲಿ ಪೂರಿ, ಚಹಾ ಮತ್ತು ಪಕೋಡ ಮಾಡುವ ಮೂಲಕ ನಿರುದ್ಯೋಗ ಸಮಸ್ಯೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದವರಿಗೆ ಉತ್ತರ ಕೊಟ್ಟಿದ್ದಾರೆ. ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಸಾಮಾನ್ಯ ಜನರಿಗೆ ಅವರು ಮಾಡಿದ ಪಕೋಡಾ ಮತ್ತು ಜಿಲೇಬಿಯನ್ನು ಕೊಟ್ಟಿ ಸಂಭ್ರಮಿಸಿರುವುದು ಫೋಟೋದಲ್ಲಿ ಕಾಣಬಹುದು. ಇದನ್ನೂ ಓದಿ: ರಷ್ಯಾ ಭಾಷೆ ಮಾತಾಡುವ ರಾಯಭಾರಿಗಳನ್ನು ಉಕ್ರೇನ್‍ಗೆ ಕಳುಹಿಸಲಾಗುತ್ತಿದೆ: ಸಿಎಂ

    vh9q6m8

    ಬಿಜೆಪಿ ಎಂಎಲ್‍ಎಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಪೂರಿ, ಚಹಾ ಮತ್ತು ಪಕೋಡ ಮಾಡಿದ ವೀಡಿಯೋ ನೋಡಿದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದಾರೆ. ಈ ವೇಳೆ ಶ್ರೀ ಗುಪ್ತ ಅವರು, ಬಿಜೆಪಿ ಸರ್ಕಾರವು ಜನರಿಗೆ ಸಾವಿರಾರು ಕೆಲಸಗಳನ್ನು ಕೊಟ್ಟಿದೆ. ಅದನ್ನು ಜನರು ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕು. ಈ ಕೆಲಸಗಳಿಗೆ ಯಾರು ದುಡ್ಡು ಕೊಡಬೇಕು ಎಂಬುದಿಲ್ಲ. ಜನರು ಸ್ನ್ಯಾಕ್ಸ್ ಮಾರಾಟ ಮಾಡಿದರೂ ಅದು ಸಹ ಉದ್ಯೋಗವೇ ಎಂದು ಹೇಳಿದ್ದಾರೆ.

    ಇಲ್ಲಿನ ಜನರು ನನ್ನನ್ನು ಪ್ರೀತಿಯಿಂದ ನಮ್ಮ ಅಂಗಡಿಗೂ ಬಂದು ಏನಾದರೂ ಮಾಡಿಕೊಡಿ ಎನ್ನುತ್ತಾರೆ. ಅದೇ ಸಂತೋಷದ ವಿಷಯ ಎಂದು ತಿಳಿಸಿದ್ದಾರೆ.

    ಸಮಾಜವಾದಿ ಪಕ್ಷದ ಜನರು ನಿರುದ್ಯೋಗಿಗಳು. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಕಾಲದಲ್ಲಿ ಪೂರ್ವಾಂಚಲ್ ಎಕ್ಸ್‍ಪ್ರೆಸ್‍ವೇ ನಿರ್ಮಿಸುವಾಗ 15,000 ಕೋಟಿ ವೆಚ್ಚವಾಯಿತು. ಆದರೆ ನಾವು 4,500 ಕೋಟಿ ರೂ. ಕಡಿಮೆ ಬಜೆಟ್‍ನಲ್ಲಿ ವಿಶಾಲವಾದ, ಉತ್ತಮವಾದ, ಉದ್ದವಾದ ಎಕ್ಸ್‍ಪ್ರೆಸ್‍ವೇ ಮಾಡಿದ್ದೇವೆ. ಈ ಕುರಿತು ನೀವು ಸರಿಯಾಗಿ ಯೋಚಿಸಬೇಕು ಎಂದು ಜನರಿಗೆ ಹೇಳಿದರು. ಇದನ್ನೂ ಓದಿ:  ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?

    ಈ ಮಧ್ಯೆ ಮತ್ತೊಬ್ಬ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಅವರು ಪ್ರಯಾಗ್‍ರಾಜ್‍ನಲ್ಲಿ ಪಕೋಡಗಳನ್ನು ಮಾಡಿರುವುದು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  • ಸಂಜೆ ತಿಂಡಿಗೆ  ಹೆಸರುಬೇಳೆ ಪಕೋಡ ಮಾಡಿ

    ಸಂಜೆ ತಿಂಡಿಗೆ ಹೆಸರುಬೇಳೆ ಪಕೋಡ ಮಾಡಿ

    ಳೆಗಾಲ ಶುರುವಾಗಿದೆ. ಚಳಿ ಇರುವುದರಿಂದ ನಾಲಿಗೆ ಕೊಂಚ ಬಿಸಿ ಬಸಿಯಾಗಿ ಏನನ್ನಾದರು ತಿನ್ನಲು ಬಯಸುತ್ತದೆ. ಪ್ರತಿನಿತ್ಯ ಒಂದಲ್ಲಾ ಒಂದು ರುಚಿಕರವಾದ ಅಡುಗೆಯನ್ನು ಮಾಡಿ ಸವಿಯುವ ನೀವು ಇಂದು ಮನೆಯಲ್ಲಿ ಬಿಸಿ ಬಿಸಿಯಾದ ಹೆಸರು ಬೇಳೆ ಪಕೋಡವನ್ನು ಮಾಡಿ.

    ಬೇಕಾಗುವ ಸಾಮಗ್ರಿಗಳು:
    * ಹೆಸರುಬೇಳೆ- 1ಕಪ್
    * ಹಸಿಮೆಣಸಿನಕಾಯಿ-3
    * ಬೆಳ್ಳುಳ್ಳಿ ಪೇಸ್ಟ್- ಅರ್ಧ ಟೀ ಸ್ಪೂನ್
    * ಶುಂಠಿ- ಅರ್ಧ ಟೀ ಸ್ಪೂನ್
    * ಅಡುಗೆ ಎಣ್ಣುಗೆ
    * ಕೊತ್ತಂಬರಿ
    * ರುಚಿಗೆ ತಕ್ಕಷ್ಟು ಉಪ್ಪು
    * ಕೋತ್ತಂಬರಿ ಬೀಜ- 1 ಟೀ ಸ್ಪೂನ್
    * ಮೆಣಸಿನ ಪುಡಿ – ಅರ್ಧ ಟೀ ಸ್ಪೂನ್

    ಮಾಡುವ ವಿಧಾನ:
    * ಪಾತ್ರೆಯಲ್ಲಿ ಹೆಸರುಬೇಳೆಯನ್ನು ಹಾಕಿ, 3-4 ಗಂಟೆಗಳ ಕಾಲ ನೆನೆಯಿಟ್ಟಿರಬೇಕು. ಇದನ್ನೂ ಓದಿ: ನೀವು ಮಾಡಿ ಸಿಹಿ ದೋಸೆ

    * ನಂತರ ಮಿಕ್ಸರ್ ಪಾತ್ರೆಗೆ ನೆನೆಸಿಕೊಂಡ ಹೆಸರುಬೇಳೆ, ಹಸಿಮೆಣಸಿನ ಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣವು ದಪ್ಪ ಸ್ಥಿರತೆಯಿಂದ ಕೂಡಿರಬೇಕು.ಹೆಚ್ಚಾಗಿ ನೀರನ್ನು ಸೇರಿಸಬಾರದು

    * ರುಬ್ಬಿಕೊಂಡ ಮಿಶ್ರಣಕ್ಕೆ ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಉಪ್ಪು, ಮೆಣಸಿನ ಪುಡಿ ಸ್ವಲ್ಪ ಅಡುಗೆ ಎಣ್ಣೆ ಸೇರಿಸಿ ಮಿಶ್ರಗೊಳಿಸಬೇಕು.

    * ಬಾಣಲೆಯಲ್ಲಿ ಎಣ್ಣೆ ಎಣ್ಣೆ ಬಿಸಿಯಾದ ಬಳಿಕ ಪಕೋಡವನ್ನು ಬಿಡಿ. ಪಕೋಡವು ಎರಡು ಬದಿಯಲ್ಲೂ ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ಬರುವ ತನಕ ಫ್ರೈ ಮಾಡಿದರೆ ರುಚಿಯಾ ಬಿಸಿ ಬಿಸಿಯಾದ ಹೆಸರುಬೇಳೆ ಪಕೋಡ ಸವಿಯಲು ಸಿದ್ಧವಾಗುತ್ತದೆ.

  • ರಾಹುಲ್ ಗಾಂಧಿ ಸಮಾವೇಶಕ್ಕೆ ಬರೋರಿಗೆ ಸಿಗುತ್ತೆ ಸಮೋಸಾ, ಬನ್!

    ರಾಹುಲ್ ಗಾಂಧಿ ಸಮಾವೇಶಕ್ಕೆ ಬರೋರಿಗೆ ಸಿಗುತ್ತೆ ಸಮೋಸಾ, ಬನ್!

    ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ಸಮಾವೇಶವೊಂದರಲ್ಲಿ ಪಕೋಡಾ ಮಾರಾಟ ಮಾಡಿದ ಬೆನ್ನಲ್ಲೇ ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಸಮೋಸಾ ಬಂದಿದೆ.

    ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಸಮೋಸಾ ಮಾರಾಟ ಮಾಡೋ ಪ್ರತಿಭಟನೆ ಮಾಡುತ್ತಿಲ್ಲ. ಬದಲಾಗಿ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಬರೋ ಕಾರ್ಯಕರ್ತರು ಹಾಗೂ ಜನರಿಗೆ ಉಚಿತವಾಗಿ ಸಮೋಸಾ ಹಾಗೂ ಬನ್ ದೊರೆಯುತ್ತಿದೆ.

    ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಬರೋ ಕಾರ್ಯಕರ್ತರಿಗಾಗೆ ಲಕ್ಷಾಂತರ ಸಮೋಸಾ ಹಾಗೂ ಬನ್ ವ್ಯವಸ್ಥೆ ಮಾಡಿದ್ದಾರೆ. ಪ್ರತಿಯೊಬ್ಬರಿಗೆ ನಾಲ್ಕು ಬನ್ ಹಾಗೂ 6 ಸಮೋಸಾದ ಪ್ಯಾಕೆಟ್ ನೀಡುತ್ತಿರುವುದು ವಿಶೇಷವಾಗಿದೆ.

  • ಈರುಳ್ಳಿ ಪಕೋಡ ಮಾಡುವ ಸಿಂಪಲ್ ವಿಧಾನ

    ಈರುಳ್ಳಿ ಪಕೋಡ ಮಾಡುವ ಸಿಂಪಲ್ ವಿಧಾನ

    ಚಳಿಗಾಲ ಆರಂಭವಾಗಿದ್ದು, ಬೆಳಗ್ಗೆ ಟೀಗೆ ಸಂಜೆ ಕಾಫಿಗೆ ಬಿಸಿ ಬಿಸಿಯಾಗಿ, ಗರಂಗರಂ ಆಗಿ ಏನಾದರೂ ಕೊಡಿ ಎಂದು ಮನೆಯವರು ಮಕ್ಕಳು ದಿನಾ ಕೇಳುತ್ತಿರುತ್ತಾರೆ. ಆದರೆ ಏನು ಮಾಡಿ ಕೊಡುವುದು ಎಂದು ಚಿಂತೆ ಆಗುತ್ತದೆ. ಅದಕ್ಕಾಗಿ ಸಿಂಪಲ್ ಆಗಿ ಈರುಳ್ಳಿ ಪಕೋಡ ಮಾಡುವ ವಿಧಾನ ಇಲ್ಲಿದೆ ನೋಡಿ.

    ಬೇಕಾಗುವ ಸಾಮಾಗ್ರಿಗಳು
    1. ಈರುಳ್ಳಿ – 2
    2. ಕಡಲೆ ಹಿಟ್ಟು – 1 ಕಪ್
    3. ಅಕ್ಕಿ ಹಿಟ್ಟು – 1/4 ಕಪ್
    4. ಉಪ್ಪು – ರುಚಿಗೆ ತಕ್ಕಷ್ಟು
    5. ಖಾರದ ಪುಡಿ – 2 ಚಮಚ
    6. ಸೋಂಪು -1 ಚಮಚ
    7. ಕರಿಬೇವು
    8. ಹಸಿರು ಮೆಣಸಿನಕಾಯಿ
    9. ಕೊತ್ತಂಬರಿ ಸೊಪ್ಪು
    10. ಶುಂಠಿ
    11. ಎಣ್ಣೆ

    ಮಾಡುವ ವಿಧಾನ
    *  ಮೊದಲಿಗೆ ಬಾಣಲೆಗೆ ಸಣ್ಣೆಗೆ ಉದ್ದುದ್ದ ಹಚ್ಚಿದ್ದ ಈರುಳ್ಳಿ, ಕರಿಬೇವು, ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    *  ನಂತರ ಖಾರದ ಪುಡಿ, ಸೋಂಪು (ಜೀರಿಗೆಯನ್ನು ಬಳಸಬಹುದು) ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿಕೊಳ್ಳಿ.
    *  ಕಡಲೆ ಹಿಟ್ಟು, ಅಕ್ಕಿ ಹಿಟ್ಟು ಹಾಕಿ ಕಲಸಿಕೊಳ್ಳಿ.
    *  ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಸ್ವಲ್ಪ ಬಿಸಿ ಎಣ್ಣೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
    *  ನಂತರ ಸ್ವಲ್ಪ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟನ್ನು ತುಂಬಾ ತೆಳುವಾಗಿ ಮಾಡಿಕೊಳ್ಳಬೇಡಿ.
    *  ನಂತರ ಬೇರೊಂದು ಬಾಣಲಿಗೆ ಎಣ್ಣೆ ಹಾಕಿ ಬಿಸಿ ಮಾಡಿ ಮಿಕ್ಸ್ ಮಾಡಿದ್ದ ಹಿಟ್ಟನ್ನು ಚಿಕ್ಕ ಚಿಕ್ಕದಾಗಿ ಹಾಕಿ ಕಂದು ಬಣ್ಣ ಬರುವವರೆಗೂ ಕರಿಯಿರಿ.
    *  ನಂತರ ಟೀ, ಕಾಫಿ ಜೊತೆಗೆ ಸವಿಯಿರಿ.