Tag: ಪಂಪ್

  • 77,954 ಕಾರುಗಳ ಇಂಧನ ಪಂಪ್‍ನಲ್ಲಿ ದೋಷ – ಉಚಿತ ರಿಪೇರಿ ಮಾಡ್ತಿದೆ ಹೋಂಡಾ ಕಾರ್..!

    77,954 ಕಾರುಗಳ ಇಂಧನ ಪಂಪ್‍ನಲ್ಲಿ ದೋಷ – ಉಚಿತ ರಿಪೇರಿ ಮಾಡ್ತಿದೆ ಹೋಂಡಾ ಕಾರ್..!

    ನವದೆಹಲಿ: 2019 ರಿಂದ 2020ರ ನಡುವೆ ಉತ್ಪಾದಿಸಿದ ಹೋಂಡಾ ಕಾರ್ ಸಂಸ್ಥೆಯ ವಿವಿಧ ಮಾದರಿಯ 77,954 ಕಾರುಗಳ ಇಂಧನ ಪಂಪ್ (ಫ್ಯೂಯೆಲ್ ಪಂಪ್) ಗಳಲ್ಲಿ ದೋಷ ಕಾಣಿಸಿದ್ದು, ಇವುಗಳನ್ನು ಸರಿಪಡಿಸಲು ಹೋಡಾ ಕಾರ್ ಸಂಸ್ಥೆ ಮುಂದಾಗಿದೆ.

    ಹೋಂಡಾ ಸಂಸ್ಥೆ ಒಟ್ಟು 7 ಮಾಡೆಲ್ ಕಾರುಗಳಿಗೆ ಉಚಿತವಾಗಿ ಬದಲಿ ಪಂಪ್ ಅಳವಡಿಕೆ ಮಾಡಿಕೊಡಲಿದ್ದು, ಈ ಅಭಿಯಾನಕ್ಕೆ ಇಂದು ಚಾಲನೆ ಸಿಕ್ಕಿದೆ.

    2019ರ ಜನವರಿ ಆಗಸ್ಟ್ ನಡುವೆ ಉತ್ಪಾದನೆಗೊಂಡ 36,086 ಅಮೇಝ್ ಕಾರು, ಡಬ್ಲ್ಯೂ ಆರ್ ವಿ ಹೆಸರಿನ 7,871, ಜಾಝ್ – 6,235, 2019 ಜನವರಿ-ಸೆಪ್ಟೆಂಬರ್ ನಡುವೆ ನಿರ್ಮಿಸಿದ ಫೋರ್ಥ್ ಜೆನ್ ಸಿಟಿ-20,248, ಸಿವಿಕ್-5,170, 2019 ಜನವರಿ-ಅಕ್ಟೋಬರ್ ನಡುವೆ ನಿರ್ಮಿಸಿದ ಬಿಆರ್-ವಿ – 1737, 2019 ಜನವರಿಯಿಂದ 2020 ಸೆಪ್ಟೆಂಬರ್ ಅವಧಿಯಲ್ಲಿ ನಿರ್ಮಾಣವಾದ 607 ಕಾರುಗಳು ಸೇರಿ ಒಟ್ಟು 77,954 ಕಾರುಗಳ ಫ್ಯೂಯೆಲ್ ಪಂಪ್‍ನಲ್ಲಿ ದೋಷ ಕಾಣಿಸಿಕೊಂಡಿದೆ ಎಂದು ಹೇಳಿದ್ದು, ಇವುಗಳ ಬದಲಾವಣೆ ಕಾರ್ಯ ಆರಂಭವಾಗಿದೆ.

    ಇಂಧನ ಪಂಪ್ ಬದಲಾವಣೆ ಇಂದಿನಿಂದ ಹಂತ ಹಂತವಾಗಿ ಭಾರತದಾದ್ಯಂತ ಇರುವ ತನ್ನ ಡೀಲರ್‍ಶಿಪ್‍ಗಳಲ್ಲಿ ಉಚಿತವಾಗಿ ನಡೆಯಲಿದೆ ಮತ್ತು ಈ ದೋಷಪೂರಿತ ಕಾರುಗಳ ಮಾಲೀಕರನ್ನು ಹೋಂಡಾ ಸಂಸ್ಥೆಯೇ ವೈಯಕ್ತಿಕವಾಗಿ ಪತ್ತೆ ಹಚ್ಚಿ ಫ್ಯೂಯೆಲ್ ಪಂಪನ್ನು ಉಚಿತವಾಗಿ ಬದಲಾಯಿಸಿ ಕೊಡುವುದಾಗಿ ಹೋಂಡಾ ಸಂಸ್ಥೆ ಹೇಳಿದೆ.

    ಇದಕ್ಕಾಗಿ ಹೋಂಡಾ ಕಾರ್ ಸಂಸ್ಥೆಯು ತನ್ನ ವೆಬ್‍ಸೈಟ್‍ನಲ್ಲಿ ಮೈಕ್ರೋಸೈಟ್ ಓಪನ್ ಮಾಡಿದ್ದು, ಗ್ರಾಹಕರು ತಮ್ಮ ಕಾರಿನ 17 ಅಂಕಿಗಳ ವೆಹಿಕಲ್ ಐಡೆಂಟಿಫಿಕೇಶನ್ ನಂಬರ್ ಬಳಸಿ ತಮ್ಮ ಕಾರು ಇದರ ವ್ಯಾಪ್ತಿಗೆ ಒಳಪಡಲಿದೆಯೇ ಎಂದು ಪತ್ತೆ ಹಚ್ಚಬಹುದು.

    2018ರಲ್ಲಿ ಉತ್ಪಾದನೆಗೊಂಡಿದ್ದ 65,651 ಕಾರುಗಳಲ್ಲಿ ಇಂಥದ್ದೇ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಳೆದ ವರ್ಷ ಅವುಗಳ ಇಂಧನ ಪಂಪ್‍ಗಳನ್ನು ಹೋಂಡಾ ಸಂಸ್ಥೆ ಬದಲಿಸಿಕೊಟ್ಟಿತ್ತು.

  • ಗುದನಾಳದಿಂದ ಗಾಳಿ ಪಂಪ್ ಮಾಡಿದ ಸಹೋದ್ಯೋಗಿಗಳು – ವ್ಯಕ್ತಿ ದಾರುಣ ಸಾವು

    ಗುದನಾಳದಿಂದ ಗಾಳಿ ಪಂಪ್ ಮಾಡಿದ ಸಹೋದ್ಯೋಗಿಗಳು – ವ್ಯಕ್ತಿ ದಾರುಣ ಸಾವು

    ಭೋಪಾಲ್: ವಿವಾದವೊಂದಕ್ಕೆ ಸಂಬಂಧಿಸಿದಂತೆ ಸಹೋದ್ಯೋಗಿಗಳು ವ್ಯಕ್ತಿಯ ಗುದನಾಳದಿಂದ ಗಾಳಿ ಪಂಪ್ ಮಾಡಿದ ಪರಿಣಾಮ ಆತ ದಾರುಣವಾಗಿ ಮೃತಪಟ್ಟ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ.

    ಈ ಘಟನೆ 45 ದಿನಗಳ ಹಿಂದೆ ನಡೆದಿದ್ದು, ಶನಿವಾರ ವ್ಯಕ್ತಿ ಮೃತಪಟ್ಟ ಬಳಿಕ ಸಾವಿನ ರಹಸ್ಯ ಬಯಲಾಗಿದೆ ಎಂದು ಶಿವಪುರಿ ಎಸ್‍ಪಿ ರಾಜೇಂದ್ರ ಸಿಂಗ್ ಚಂಡೆಲ್ ತಿಳಿಸಿದ್ದಾರೆ.

    ಘಟನೆಯ ಕುರಿತು ನಮಗೆ ತಿಳಿದಾಗ ಯಾವುದೇ ದೂರು ನೀಡಿರಲಿಲ್ಲ. ಹೀಗಾಗಿ ಪ್ರಕರಣ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದು ಎಸ್‍ಪಿ ಹೇಳಿದ್ದಾರೆ. ಈ ದುರ್ಘಟನೆ ನವೆಂಬರ್ 8ರಂದು ನಡೆದಿರುವುದಾಗಿ ಮೃತ ವ್ಯಕ್ತಿಯ ಸಹೋದರ ಧನಿರಾಮ್ ಧಕಾಡ್ ತಿಳಿಸಿದ್ದಾರೆ.

    ಘಟನೆ ನಡೆದ ದಿನ ಸಹೋದರ ಎಂದಿನಂತೆ ಬೆಳಗ್ಗೆ ಆಫೀಸಿಗೆ ತೆರಳಿದ್ದನು. ಆದರೆ ಮಧ್ಯಾಹ್ನದ ಬಳಿಕ ಸಹೋದರ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿರುವುದಾಗಿ ವ್ಯಕ್ತಿಯೊಬ್ಬರು ಮಾಹಿತಿ ನೀಡಿದರು. ಕೂಡಲೇ ನಾನು ಸಹೋದರನ ಬಳಿ ತೆರಳಿದೆ. ಆಗ ಆತ, ನನಗೆ ಗ್ಯಾಸ್ಟ್ರಿಕ್ ನೋವು ಅಲ್ಲ, ಸಹೋದ್ಯೋಗಿಗಳು ನನ್ನ ಗುದನಾಳದಿಂದ ಕಂಪ್ರೆಸ್ಸರ್ ಮೂಲಕ ಗಾಳಿ ಪಂಪ್ ಮಾಡಿದ್ದಾರೆ ಎಂದು ಬಾಯ್ಬಿಟ್ಟಿದ್ದಾನೆ. ಘಟನೆಯ ತೀವ್ರತೆ ಅರಿತ ಕೂಡಲೇ ಆತನನ್ನು ಅನೇಕ ಆಸ್ಪತ್ರೆಗೆ ಕರೆದೊಯ್ದೆ. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಸಾವನ್ನಪ್ಪಿದನು ಎಂದು ಧಕಾಡ್ ವಿವರಿಸಿದರು.

  • ಪೆಟ್ರೋಲ್, ಡೀಸೆಲ್ ಖರೀದಿಸಿದ್ರೆ ಬೈಕ್, ಲ್ಯಾಪ್‍ಟಾಪ್ ಉಚಿತ!

    ಪೆಟ್ರೋಲ್, ಡೀಸೆಲ್ ಖರೀದಿಸಿದ್ರೆ ಬೈಕ್, ಲ್ಯಾಪ್‍ಟಾಪ್ ಉಚಿತ!

    ಭೋಪಾಲ್: ಹಬ್ಬದ ಸಂದರ್ಭದಲ್ಲಿ ವ್ಯಾಪಾರಿಗಳು ಗ್ರಾಹಕರನ್ನು ಸೆಳೆಯಲು ಉಚಿತ ಕೊಡುಗೆಗಳನ್ನು ಘೋಷಿಸುತ್ತಾರೆ. ಆದರೆ ಮಧ್ಯಪ್ರದೇಶದ ಪೆಟ್ರೋಲ್ ಪಂಪ್ ಮಾಲೀಕರು ಗ್ರಾಹಕರನ್ನು ಸೆಳೆಯಲು ಉಚಿತ ಬೈಕ್, ಲ್ಯಾಪ್‍ಟಾಪ್, ಎಸಿ, ಸ್ವಯಂ ಚಾಲಿತ ವಾಶಿಂಗ್ ಮಷಿನ್ ಸೇರಿದಂತೆ ವಿವಿಧ ಕೊಡುಗೆ ನೀಡುವುದಾಗಿ ಆಫರ್ ಪ್ರಕಟಿಸಿದ್ದಾರೆ.

    ಮಧ್ಯಪ್ರದೇಶ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ವ್ಯಾಟ್ ಹಾಕಿದೆ. ಹೀಗಾಗಿ ನೆರೆಯ ರಾಜ್ಯಗಳಿಗಿಂತ ಬೆಲೆ ಹೆಚ್ಚಾಗಿದೆ. ರಾಜ್ಯದ ಮೂಲಕ ಹಾದು ಹೋಗುವ ಲಾರಿ ಚಾಲಕರು ಪಕ್ಕದ ರಾಜ್ಯದಲ್ಲಿಯೇ ಡೀಸೆಲ್ ತುಂಬಿಸಿಕೊಂಡು ಬರುತ್ತಿದ್ದಾರೆ.

    ಇನ್ನು ಗಡಿಭಾಗದಲ್ಲಿರುವ ಜನರು ಪಕ್ಕದ ರಾಜ್ಯದ ಪಂಪ್‍ಗಳಿಗೆ ಹೋಗಿ ಪೆಟ್ರೋಲ್ ಹಾಗೂ ಡೀಸೆಲ್ ಖರೀದಿಸುತ್ತಿದ್ದಾರೆ. ಇದರಿಂದಾಗಿ ಗ್ರಾಹಕರ ಸಂಖ್ಯೆ ಇಳಿಕೆಯಾಗುತ್ತಿದೆ. ಆಫರ್ ನೀಡಿದರೆ ಗ್ರಾಹಕರನ್ನು ಉಳಿಸಿಕೊಳ್ಳಬಹುದು ಹಾಗೂ ನಮ್ಮ ವ್ಯಾಪಾರವನ್ನು ಹೆಚ್ಚಿಸಬಹುದು ಎನ್ನುವ ಉದ್ದೇಶದಿಂದ ಈ ನಿರ್ಧಾರಕ್ಕೆ ಮಾಲೀಕರು ಬಂದಿದ್ದಾರೆ. ಶಿವಪುರಿ, ಅಶೋಕನಗರ ಸೇರಿದಂತೆ ಕೆಲವು ಗಡಿ ಜಿಲ್ಲೆಗಳ 125 ಪೆಟ್ರೋಲ್ ಪಂಪ್ ಮಾಲೀಕರು ಇಂತಹ ಆಫರ್ ನೀಡುತ್ತಿದ್ದಾರೆ.

    ಏನೇನು ಫ್ರೀ?
    100 ಲೀಟರ್ ಡೀಸೆಲ್ ಖರೀದಿಸುವ ಲಾರಿ ಚಾಲಕರಿಗೆ ಉಚಿತ ಉಪಹಾರ ಹಾಗೂ ಟೀ ನೀಡಲಾಗುತ್ತಿದೆ. 5 ಸಾವಿರ ಲೀಟರ್ ಇಂಧನ (ಪೆಟ್ರೋಲ್ ಅಥವಾ ಡೀಸೆಲ್) ಖರೀದಿಸಿದರೆ ಸೈಕಲ್ ಅಥವಾ ವಾಚ್, 15 ಸಾವಿರ ಲೀಟರ್ ಗೆ ಕಪಾಟು, ಕಪಾಟು, ಸೋಫಾ ಸೆಟ್ ಅಥವಾ 100ಗ್ರಾಂ ಬೆಳ್ಳಿ ನಾಣ್ಯ, 25 ಸಾವಿರ ಲೀಟರ್ ಕೊಂಡರೆ ಸ್ವಯಂಚಾಲಿತ ವಾಷಿಂಗ್ ಮಶೀನ್, 50 ಸಾವಿರ ಲೀಟರ್ ಖರೀದಿಸಿದರೆ ಎಸಿ ಅಥವಾ ಲ್ಯಾಪ್‍ಟಾಪ್, 1 ಲಕ್ಷ ಲೀಟರ್ ಕೊಂಡರೆ ಸ್ಕೂಟರ್ ಅಥವಾ ಮೋಟಾರ್ ಸೈಕಲ್ ಉಚಿತವಾಗಿ ನೀಡಲಾಗುವುದು ಆಫರ್ ಪ್ರಕಟಿಸಿದ್ದಾರೆ.

    ಈ ರೀತಿ ಆಫರ್ ನೀಡಿದ ಮೇಲೆ ವ್ಯಾಪಾರದಲ್ಲಿ ಚೇತರಿಕೆ ಕಂಡುಕೊಂಡಿದ್ದೇವೆ. ರಿಯಾಯಿತಿ ಉದ್ದೇಶದಿಂದಲಾದರೂ ಚಾಲಕರು 100 ಲೀಟರ್ ವರೆಗೆ ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸುತ್ತಿದ್ದಾರೆ ಎಂದು ಪೆಟ್ರೋಲ್ ಪಂಪ್ ಮಾಲೀಕ ಅಂಜುಲ್ ಖಂಡೇವಾಲ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.

    ಮಾಹಿತಿ ಪ್ರಕಾರ ಮಧ್ಯ ಪ್ರದೇಶ ಸರ್ಕಾರವು ಪೆಟ್ರೋಲ್ ಮೇಲೆ ಶೇ.27 ಮತ್ತು ಡೀಸೆಲ್ ಮೇಲೆ ಶೇ.22 ವ್ಯಾಟ್ ಹೇರಿದೆ. ಹೀಗಾಗಿ ನಮ್ಮ ವ್ಯಾಪಾರದ ಮೇಲೆ ಭಾರೀ ಹೊಡೆತ ಬಿದ್ದಿದೆ. ಕೂಡಲೇ ಸರ್ಕಾರ ವ್ಯಾಟ್ ಪ್ರಮಾಣವನ್ನು ಇಳಿಸಬೇಕು ಎಂದು ಪಂಪ್ ಮಾಲೀಕರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv