Tag: ಪಂತ್

  • ಡೆಲ್ಲಿ ನಾಯಕನಾಗಿ ಪಂತ್ ಮುಂದುವರಿಕೆ

    ಡೆಲ್ಲಿ ನಾಯಕನಾಗಿ ಪಂತ್ ಮುಂದುವರಿಕೆ

    ದುಬೈ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ರಿಷಭ್ ಮುಂದುವರಿಯಲ್ಲಿದ್ದಾರೆ ಎಂದು ಡೆಲ್ಲಿ ಫ್ರಾಂಚೈಸಿ ಸಹ ಮಾಲೀಕ ಪಾರ್ಥ್ ಜಿಂದಲ್ ಹೇಳಿದ್ದಾರೆ.

    ಈ ಬಾರಿಯ ಐಪಿಎಲ್ ಮೊದಲಾರ್ಧ ಶುರುವಿಗೂ ಮುನ್ನ ಇಂಗ್ಲೆಂಡ್ ತಂಡದ ವಿರುದ್ಧದ ಏಕದಿನ ಪಂದ್ಯದ ವೇಳೆ ಅಯ್ಯರ್ ಗಾಯಗೊಂಡು ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದರು. ವೈದ್ಯರು ಮೂರು ತಿಂಗಳ ವಿಶ್ರಾಂತಿಯನ್ನು ಸೂಚಿಸಿದರು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯನಾಗಿ ರಿಷಭ್ ಪಂತ್ ಆಯ್ಕೆಯಾಗಿದ್ದರು.

    ನಾಯಕನಾಗಿ ಡೆಲ್ಲಿ ತಂಡವನ್ನು ಉತ್ತಮವಾಗಿ ಮುನ್ನಡೆಸಿರುವ ಪಂತ್, ಐಪಿಎಲ್ ನ ಮೊದಲಾರ್ಧದಲ್ಲಿ ತಂಡ ಅಗ್ರಸ್ಥಾನದಲ್ಲಿ ಇರುವಂತೆ ನೋಡಿಕೊಂಡಿದ್ದಾರೆ. ನಾಯಕನಾಗಿ ಬಡ್ತಿ ಪಡೆದ ಮೇಲೆ ತಂಡಕ್ಕಾಗಿ ಗೆಲುವಿನ ಮೇಲೆ ಗೆಲುವು ಸಿಗುವಂತೆ ಉತ್ತಮ ಆಟವಾಡಿದ್ದರು. ಅಲ್ಲದೆ ಉತ್ತಮ ನಾಯಕನಾಗುವ ಲಕ್ಷಣವಿದೆ ಎಂದು ಹಿರಿಯ ಆಟಗಾರರ ಮೆಚ್ಚುಗೆಗೆ ಪಾತ್ರವಾಗಿದ್ದರು.

    ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಫಿಟ್ ಆಗಿ ತಂಡಕ್ಕೆ ಮರಳಿರುವ ಅಯ್ಯರ್‍ಗೆ ಡೆಲ್ಲಿ ತಂಡದ ಮ್ಯಾನೆಜ್‍ಮೆಂಟ್ ಶಾಕ್ ನೀಡಿ ನಾಯಕನ ಬದಲಾವಣೆಯಿಲ್ಲ ಎಂದು ಹೇಳಿದೆ. ತಂಡದ ಆಟಗಾರರಾಗಿ ಮಾತ್ರ ಶ್ರೇಯಸ್ ಅಯ್ಯರ್ ಆಡಬೇಕಿದೆ.