Tag: ಪಂಡೋರಾ ಪೇಪರ್ಸ್

  • ಪಂಡೋರಾ ಪೇಪರ್ ರಹಸ್ಯ- ಸಚಿನ್ ತೆಂಡೂಲ್ಕರ್ ಹೆಸರು ಉಲ್ಲೇಖ

    ಪಂಡೋರಾ ಪೇಪರ್ ರಹಸ್ಯ- ಸಚಿನ್ ತೆಂಡೂಲ್ಕರ್ ಹೆಸರು ಉಲ್ಲೇಖ

    ಮುಂಬೈ: ವಿಶ್ವದ ಪ್ರಸಿದ್ಧ ವ್ಯಕ್ತಿಗಳು ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಇದೀಗ ಪಂಡೋರಾ ಪೇಪರ್ ಎಂಬ ರಹಸ್ಯ ಹಣಕಾಸು ಮಾಹಿತಿ ಬಿಡುಗಡೆಯಾಗಿದೆ. ಈ ಮಾಹಿತಿಯಲ್ಲಿ ಕ್ರಿಕೆಟ್ ದೇವರು ಎನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಅವರ ಹೆಸರು ಕೇಳಿಬಂದಿದೆ.

    2016ರಲ್ಲಿ ಸಂಚಲನ ಮೂಡಿಸಿದ್ದ ಪನಾಮಾ ಪೇಪರ್ಸ್ ಬಳಿಕ ಇದೀಗ ಪಂಡೋರಾ ಪೇಪರ್ಸ್ ಬಿಡುಗಡೆಗೊಂಡಿದೆ. ಇದರಲ್ಲಿ ವಿಶ್ವದ ಹಲವಾರು ಪ್ರಸಿದ್ಧ ವ್ಯಕ್ತಿಗಳ ಹೆಸರು ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಊಟ ಕೊಡಿಸ್ತೀನೆಂದು ಕರೆದೊಯ್ದು 500 ರೂ.ಗೆ ಪತ್ನಿಯನ್ನೇ ಮಾರಿಬಿಟ್ಟ!

    ಪಂಡೋರಾ ಪೇಪರ್ ಎಂದರೇನು?
    ವಿಶ್ವದ ಶ್ರೀಮಂತ ವ್ಯಕ್ತಿಗಳು ದೇಶ, ವಿದೇಶಗಳಲ್ಲಿ ಕಂಪೆನಿಗಳನ್ನು ಆರಂಭಿಸಿ ಬಳಿಕ ತೆರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಪಂಡೋರಾ ಪೇಪರ್ಸ್‍ನಲ್ಲಿ ಉಲ್ಲೇಖವಾಗಿದೆ. ಈ ಬಗ್ಗೆ ತನಿಖಾ ಪತ್ರಕರ್ತರ ತಂಡ ನಡೆಸಿದ ತನಿಖೆಯ ವರದಿ ಇಲ್ಲಿದೆ. ಇದನ್ನೂ ಓದಿ: ಕೇರಳದಿಂದ ಪ್ರಯಾಣಿಕರಿಗೆ RTPCR ವರದಿ ಕಡ್ಡಾಯ – ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಅರ್ಜಿ ಸಲ್ಲಿಕೆ

    ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರು ಕೂಡಾ ಪಂಡೋರಾ ಪೇಪರ್ಸ್‍ನಲ್ಲಿದೆ. ಅಲ್ಲದೆ ಅನಿಲ್ ಅಂಬಾನಿ, ಬಯೋಕಾನ್ ಸಂಸ್ಥೆಯ ಕಿರಣ್ ಮುಂಜುದಾರ್ ಶಾ ಪತಿ ಸೇರಿದಂತೆ ಸುಮಾರು 300 ಭಾರತೀಯರನ್ನು ಹೆಸರಿಸಲಾಗಿದೆ. ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಆಪ್ತ ಬಳಗ ಸೇರಿದಂತೆ ಸುಮಾರು 700ಕ್ಕೂ ಹೆಚ್ಚು ಮಂದಿಯ ಮಾಹಿತಿಯಿದೆ ಎಂದು ವರದಿಯಾಗಿದೆ.