Tag: ಪಂಜಾಬ್ ಮುಖ್ಯಮಂತ್ರಿ

  • 26,454 ಹುದ್ದೆಗಳ ನೇಮಕಾತಿಗೆ ಪಂಜಾಬ್ ಸರ್ಕಾರ ಅನುಮೋದನೆ

    26,454 ಹುದ್ದೆಗಳ ನೇಮಕಾತಿಗೆ ಪಂಜಾಬ್ ಸರ್ಕಾರ ಅನುಮೋದನೆ

    ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿಂದು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 26,454 ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಲಾಯಿತು.

    ಈಚೆಗೆ ನಡೆದ ವಿಧಾನಸಭೆ ಚುನಾವಣೆಲ್ಲಿ ಪಂಜಾಬ್ ಗೆಲುವು ಸಾಧಿಸಿದ ಎಎಪಿ ಪಕ್ಷವು ಖಾಲಿ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡುವುದಾಗಿ ಭರವಸೆ ನೀಡಿತ್ತು. ಅದರಂತೆ ಇಂದು ವಿವಿಧ ಇಲಾಖೆಗಳಲ್ಲಿ, ವಿವಿಧ ಹಂತಗಳಲ್ಲಿರುವ 26,454 ಹುದ್ದೆಗಳ ನೇಮಕಾತಿಗೆ ಅನುಮೋದನೆ ನೀಡಿದ್ದು, ಹುದ್ದೆಗಳ ಮಾನದಂಡ ಮತ್ತು ವಿವರಗಳನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಹೇಳಿದೆ. ಇದನ್ನೂ ಓದಿ: ನಾನು ಬಾಬರಿ ಮಸೀದಿ ಧ್ವಂಸದಲ್ಲಿ ಭಾಗಿಯಾಗಿದ್ದೆ, ಶಿವಸೇನೆ ನಾಯಕರು ಯಾರೂ ಇರಲಿಲ್ಲ : ಫಡ್ನವೀಸ್

    BhagwantMann

    ಅಲ್ಲದೆ, ಸಿಎಂ ಭಗವಂತ್ ಮಾನ್ ಈ ಹಿಂದೆಯೇ ಘೋಷಿಸಿದಂತೆ ಒಬ್ಬ ಶಾಸಕ ಒಂದು ಪಿಂಚಣಿ ಯೋಜನೆಗೂ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಮಾಜಿ ಶಾಸಕರಿಗೆ ಪಿಂಚಣಿ ನೀಡಲು ರಾಜ್ಯ ಸರ್ಕಾರ ಹೊಸ ನೀತಿಯನ್ನು ತರಲಿದೆ ಎಂದು ಸಭೆ ಹೇಳಿದೆ.

    ಮನೆ ಬಾಗಿಲಿಗೇ ಪಡಿತರ: ಇದೇ ವೇಳೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ರಾಜ್ಯದ 40 ಲಕ್ಷ ಮನೆಗಳ 1.5 ಕೋಟಿ ಫಲಾನುಭವಿಗಳಿಗೆ ತಿಂಗಳಿಗೆ 5 ಕೆಜಿ ಗೋಧಿ ಅಥವಾ ಗೋಧಿ ಹಿಟ್ಟನ್ನು ಮನೆ ಬಾಗಿಲಿಗೆ ತಲುಪಿಸಲು ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿತು. ಇದನ್ನೂ ಓದಿ: ಬಾಬರಿ ಮಸೀದಿ ಕೆಡವಿದಾಗ ನೀವು ಓಡಿಹೋಗಿದ್ದಿರಿ: ಬಿಜೆಪಿಗೆ ಉದ್ಧವ್‌ ಠಾಕ್ರೆ ತರಾಟೆ

    Bhagwant Mann

    ಒಬ್ಬ ಶಾಸಕ-ಒಂದು ಪಿಂಚಣಿ: ಭಗವಂತ್ ಮಾನ್ ಅಧಿಕಾರ ವಹಿಸಿಕೊಂಡ ಕೆಲ ದಿನಗಳಲ್ಲೇ, ಪಂಜಾಬ್ ಮಾಜಿ ಶಾಸಕರು 2 ಬಾರಿ, 5 ಬಾರಿ ಅಥವಾ ಹತ್ತು ಬಾರಿ ಗೆದ್ದಿದ್ದರೂ ಅವರು ಇನ್ನು ಮುಂದೆ ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಅವರು ಸಲ್ಲಿಸಿದ್ದ ಸೇವೆಗೆ ಪ್ರತಿ ಅವಧಿಗೂ ಪಿಂಚಣಿ ಪಡೆಯುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದು. ಇದರಿಂದ ಉಳಿತಾಯವಾಗುವ ಹಣವನ್ನು ಜನರ ಕಲ್ಯಾಣಕ್ಕೆ ವಿನಿಯೋಗಿಸಲಾಗುವುದು ಎಂದು ಹೇಳಿದ್ದರು. ಇದನ್ನೂ ಓದಿ: ಎರಡೂವರೆ ಗಂಟೆ ಸಭೆ – ರಾಜ್ಯದಲ್ಲೂ ಯುವ ಮುಖಗಳಿಗೆ ಮಣೆ?

    Bhagwant Mann

    ಚುನಾವಣೆಯಲ್ಲಿ ಸೋತರೂ ಕೆಲವರು 3.50 ರಿಂದ 5 ಲಕ್ಷ ರೂ. ವರೆಗೂ ಪಿಂಚಣಿ ಪಡೆಯುತ್ತಿದ್ದಾರೆ. ಲಾಲ್‌ಸಿಂಗ್, ಸರ್ವಾನ್‌ಸಿಂಗ್ ಫಿಲೌ ಹಾಗೂ ರಾಜಿಂದರ್ ಕೌರ್ ಭಟ್ಟಾಲ್ ತಿಂಗಳಿಗೆ 3.55 ಲಕ್ಷ ಪಿಂಚಣಿ ಪಡೆಯುತ್ತಿದ್ದಾರೆ. ರವಿಂದರ್ ಸಿಂಗ್, ಬೈಲ್ವಿಂದರ್ ಸಿಂಗ್ 2.75 ಲಕ್ಷ ಹಾಗೂ ಅಕಾಲಿ ದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ 5 ಲಕ್ಷ ಪಿಂಚಣಿ ಪಡೆಯುತ್ತಿದ್ದಾರೆ. ಇದರಿಂದ ಬೊಕ್ಕಸಕ್ಕೆ ಕೋಟ್ಯಂತರ ರೂ. ಆರ್ಥಿಕ ಹೊರೆಯಾಗುತ್ತಿದೆ ಎಂಬುದನ್ನು ಉಲ್ಲೇಖಿಸಿದ್ದರು.

  • ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ನಾಳೆ ರಾಜೀನಾಮೆ

    ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ನಾಳೆ ರಾಜೀನಾಮೆ

    ಚಂಡೀಗಢ: ಪಂಜಾಬ್ ಮುಖ್ಯ ಮಂತ್ರಿ ಚರಣ್‌ಜಿತ್ ಸಿಂಗ್(ಚನ್ನಿ) ನಾಳೆ ಗವರ್ನರ್ ಬನ್ವರಿಲಾಲ್ ಪುರಾಹಿತ್ ಅವರನ್ನು ಭೇಟಿಯಾಗಿ ತಮ್ಮ ರಾಜಿನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಗುರುವಾರ ಮುಂಜಾನೆ ಚರಣ್‌ಜಿತ್ ತಮ್ಮ ಚಂಡೀಗಢದಲ್ಲಿರುವ ನಿವಾಸಕ್ಕೆ ಆಗಮಿಸಿದ್ದಾರೆ.

    ಪಂಚರಾಜ್ಯ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಚರಣ್‌ಜಿತ್ ಸ್ಪರ್ಧಿಸುತ್ತಿರುವ ಎರಡು ಕ್ಷೇತ್ರಗಳಾದ ಚಮಕೌರ್ ಸಾಹಿಬ್ ಹಾಗೂ ಭದೌರ್ ಕ್ಷೇತ್ರಗಳಲ್ಲಿ ಸದ್ಯ ಹಿನ್ನೆಡೆಯಾಗಿದೆ. ಇದನ್ನೂ ಓದಿ: ಪಂಜಾಬ್ ಫಲಿತಾಂಶ: 3ನೇ ಸ್ಥಾನಕ್ಕೆ ಕುಸಿದ ಸಿಧು

    ಇದೀಗ ಪಂಜಾಬ್‌ನಲ್ಲಿ ಕಾಂಗ್ರೆಸ್ ಸೋಲುವುದು ಬಹುತೇಕ ಖಚಿತವಾಗಿದ್ದು, ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ರಾಜಿನಾಮೆ ನೀಡಲಿದ್ದಾರೆ. ಇದನ್ನೂ ಓದಿ: ಪಂಜಾಬ್‍ನಲ್ಲಿ ಎಎಪಿ ಮುನ್ನಡೆ – ಭಗವಂತ್ ಮಾನ್ ಮನೆಯಲ್ಲಿ ಸಂಭ್ರಮಾಚರಣೆ ಶುರು

    ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಮುನ್ನಡೆ(ಎಎಪಿ) ಕಂಡಿದ್ದು, ಕ್ಲೀನ್ ಸ್ವಿಪ್ ಸಾಧನೆಯತ್ತ ಸಾಗಿದೆ.

  • ಪಂಜಾಬ್ ಸಿಎಂ ಪತ್ನಿಗೆ ಬಂತು ‘ಬ್ಯಾಂಕ್’ ಕಾಲ್ – 23 ಲಕ್ಷ ರೂ. ಹೋಯ್ತು

    ಪಂಜಾಬ್ ಸಿಎಂ ಪತ್ನಿಗೆ ಬಂತು ‘ಬ್ಯಾಂಕ್’ ಕಾಲ್ – 23 ಲಕ್ಷ ರೂ. ಹೋಯ್ತು

    ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪತ್ನಿ ಪ್ರೀನೀತ್ ಕೌರ್ ಸೈಬರ್ ವಂಚನೆಗೆ ಬಲಿಯಾಗಿದ್ದು, 23 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ.

    ಪಟಿಯಾಲಾದ ಕಾಂಗ್ರೆಸ್ ಸಂಸದೆಯೂ ಆಗಿರುವ ಪ್ರೀನೀತ್ ಕೌರ್ ಅವರನ್ನು ಕೆಲ ದಿನಗಳ ಹಿಂದೆ ವಂಚಿಸಲಾಗಿತ್ತು. ಜಾರ್ಖಂಡ್‍ನ ರಾಂಚಿಯಲ್ಲಿ ಆರೋಪಿಯ ಫೋನ್ ಕರೆಗಳನ್ನು ಟ್ರೇಸ್ ಮಾಡಿ ಆತನನ್ನು ಬಂಧಿಸುವಲ್ಲಿ ಪಂಜಾಬ್ ಪೊಲೀಸರ ತಂಡ ಯಶಸ್ವಿಯಾಗಿದೆ. ಆತನನ್ನು ಜಾರ್ಖಂಡ್‍ನಿಂದ ಕರೆ ತರಲಾಗುತ್ತಿದೆ ಎಂದು ಪಟಿಯಾಲಾದ ಹಿರಿಯ ಎಸ್‍ಪಿ ಮಂದೀಪ್ ಸಿಂಗ್ ಸಿಧು ತಿಳಿಸಿದ್ದಾರೆ.

    ವಂಚಿಸಿದ್ದು ಹೇಗೆ?
    ಕೆಲ ದಿನಗಳ ಹಿಂದೆ ಪ್ರೀನೀತ್ ಕೌರ್ ಅವರು ಸಂಸತ್ ಅಧಿವೇಶನಕ್ಕೆ ದೆಹಲಿಗೆ ತೆರಳಿದ್ದರು. ಆಗ ಅವರು ಕರೆಯೊಂದನ್ನು ಸ್ವೀಕರಿಸಿದ್ದಾರೆ. ನಾನು ರಾಷ್ಟ್ರೀಕೃತ ಬ್ಯಾಂಕ್‍ನ ಮ್ಯಾನೇಜರ್ ಎಂದು ವ್ಯಕ್ತಿಯೊಬ್ಬ ಫೋನ್ ಕರೆಯಲ್ಲಿ ಹೇಳಿದ್ದಾನೆ. ಸಂಬಳವನ್ನು ನಿಮ್ಮ ಖಾತೆಗೆ ಹಾಕಬೇಕು ದಯವಿಟ್ಟು ನಿಮ್ಮ ಬ್ಯಾಂಕ್ ಖಾತೆಯ ವಿವರವನ್ನು ತಿಳಿಸಿ ಎಂದು ನಯವಾಗಿ ಕೇಳಿದ್ದಾನೆ.

    ಆರೋಪಿಯು ಬ್ಯಾಂಕ್ ಮ್ಯಾನೇಜರ್ ರೀತಿ ಮಾತನಾಡಿ ಸಂಸದೆಯನ್ನು ಯಾಮಾರಿಸುವಲ್ಲಿ ಯಶಸ್ವಿಯಾಗಿದ್ದಾನೆ. ಅಲ್ಲದೆ, ಅವರಿಂದ ಬ್ಯಾಂಕ್ ಅಕೌಂಟ್ ನಂಬರ್, ಎಟಿಎಂ ಪಿನ್, ಸಿವಿವಿ ನಂಬರ್ ಹಾಗೂ ಸಂಸದ ಮೊಬೈಲ್‍ಗೆ ಬಂದಿದ್ದ ಓಟಿಪಿ(ಒನ್ ಟೈಮ್ ಪಾಸ್ವರ್ಡ್) ಸಹ ಪಡೆದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಾಹಿತಿ ಪಡೆದು ವ್ಯಕ್ತಿ ಕಾಲ್ ಕಟ್ ಮಾಡುವಷ್ಟರಲ್ಲಿ ಬ್ಯಾಂಕ್ ಅಕೌಂಟ್‍ನಿಂದ 23 ಲಕ್ಷ ರೂ. ತೆಗೆಯಲಾಗಿದೆ ಎಂದು ಸಂಸದೆ ಪ್ರೀನೀತ್ ಕೌರ್ ಅವರಿಗೆ ಎಸ್‍ಎಂಎಸ್ ಬಂದಿದೆ. ತಕ್ಷಣವೇ ಕೌರ್ ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಪೊಲೀಸರು ಆರೋಪಿಯ ಮೊಬೈಲ್ ಟ್ರೇಸ್ ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.