Tag: ಪಂಜಾಬ್ ಪೊಲೀಸ್

  • ಪಂಜಾಬ್ ಮಾಜಿ ಡಿಜಿಪಿ, ಪತ್ನಿ ಮಾಜಿ ಸಚಿವೆ ವಿರುದ್ಧ ಪುತ್ರನನ್ನೇ ಹತ್ಯೆಗೈದ ಕೇಸ್‌

    ಪಂಜಾಬ್ ಮಾಜಿ ಡಿಜಿಪಿ, ಪತ್ನಿ ಮಾಜಿ ಸಚಿವೆ ವಿರುದ್ಧ ಪುತ್ರನನ್ನೇ ಹತ್ಯೆಗೈದ ಕೇಸ್‌

    – ಅಪ್ಪನಿಗೆ ನನ್ನ ಪತ್ನಿ ಜೊತೆ ಅಕ್ರಮ ಸಂಬಂಧ ಇದೆ
    – ಪುತ್ರನ ಹಳೆಯ ವಿಡಿಯೋ ವೈರಲ್‌ ಬಳಿಕ ಎಫ್‌ಐಆರ್‌

    ಚಂಡೀಗಢ: ಪಂಜಾಬ್‌ನ ರಾಜಕೀಯ ಹಾಗೂ ಪೊಲೀಸ್‌ ವಲಯಯದಲ್ಲೇ ಬೆಚ್ಚಿಬೀಳಿಸುವ ಪ್ರಕರಣವೊಂದರಲ್ಲಿ ಮಾಜಿ ಸಚಿವೆ ರಜಿಯಾ ಸುಲ್ತಾನ (Razia Sultana) ಹಾಗೂ ಅವರ ಪತಿ ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ (Mohammed Mustafa) ವಿರುದ್ಧ ಮಗನನ್ನೇ ಹತ್ಯೆಗೈದ ಪ್ರಕರಣ ದಾಖಲಾಗಿದೆ. ಪುತ್ರ ಅಖಿಲ್ ಅಖ್ತರ್ (33) ಸಾವಿನ ಹಲವು ದಿನಗಳ ನಂತರ ಹಳೆಯ ವಿಡಿಯೋವೊಂದು ವೈರಲ್‌ ಆಗಿದ್ದು, ಬಳಿಕ ಕೊಲೆ ಪ್ರಕರಣ ದಾಖಲಾಗಿದೆ.

    ಹೌದು. ಅಖಿಲ್ ಅಖ್ತರ್ (Aqil Akhtar) ನಿಗೂಢವಾಗಿ ಮೃತಪಟ್ಟ ಪ್ರಕರಣ ಈಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಅಖಿಲ್ ಅಖ್ತರ್ ಗುರುವಾರ ತಡರಾತ್ರಿ ಪಂಚಕುಲದ ತಮ್ಮ ನಿವಾಸದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕುಟುಂಬ ಸದಸ್ಯರು ಅವರನ್ನ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ವೈದ್ಯರು ಅವರನ್ನ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಮಿತಿಮೀರಿದ ಡ್ರಗ್ಸ್ ಸೇವನೆಯಿಂದ ಅಖಿಲ್ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಹೇಳಿಕೊಂಡಿದೆ. ಯಾವುದೋ ಔಷಧ ಸೇವನೆಯಿಂದ ಆರೋಗ್ಯ ಸಮಸ್ಯೆಗೊಳಗಾಗಿ ಅಖಿಲ್ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ಹೇಳಿದ್ದರು.

    ಮಗನ ಹೆಂಡ್ತಿ ಜೊತೆಯೇ ಅಕ್ರಮ ಸಂಬಂಧ
    ಅಖಿಲ್ ಅಖ್ತರ್ ನಿಗೂಢವಾಗಿ ಮೃತಪಟ್ಟ ಬೆನ್ನಲ್ಲೇ ಅಖಿಲ್ ಪತ್ನಿ ಹಾಗೂ ಆತನ ತಂದೆ ಮಧ್ಯೆ ಅನೈತಿಕ ಸಂಬಂಧವಿತ್ತು ಎಂಬ ಆರೋಪಗಳು ಕೇಳಿಬಂದಿದೆ. ಅಖಿಲ್‌ ರೆಕಾರ್ಡ್‌ ಮಾಡಿದ್ದ ಹಳೆಯ ವಿಡಿಯೋವೊಂದು ವೈರಲ್‌ (Old Video Viral) ಆದ ಪ್ರಕರಣಕ್ಕೆ ಈ ತಿರುವು ಸಿಕ್ಕಿದೆ.

    ವೀಡಿಯೊದಲ್ಲಿ, ʻನನ್ನ ತಂದೆ ಹಾಗೂ ನನ್ನ ಪತ್ನಿಯ ನಡ್ವೆ ಅನೈತಿಕ ಸಂಬಂಧವಿದೆ. ನಾನು ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದೇನೆ. ನನಗೇನು ಮಾಡಬೇಕೆಂದು ತೋಚುತ್ತಿಲ್ಲ. ಅವರು ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಬಹುದು ಎಂದು ನನಗೆ ಪ್ರತಿದಿನ ಆತಂಕವಾಗುತ್ತಿದೆ. ನನ್ನ ತಾಯಿ ರಜಿಯಾ, ಸಹೋದರಿ ನನ್ನ ವಿರುದ್ಧದ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ. ನನ್ನ ತಂದೆಗೆ ನನ್ನ ಮದುವೆಗೆ ಮುಂಚೆಯೇ ನನ್ನ ಪತ್ನಿಯ ಪರಿಚಯವಿತ್ತು ಎಂಬ ಅನುಮಾನ ನನಗಿದೆ. ಅವಳು ನನ್ನನ್ನ ಮದುವೆಯಾಗಲಿಲ್ಲ, ಅವಳು ನನ್ನ ತಂದೆಯನ್ನ ಮದುವೆಯಾದಳು. ನನ್ನ ಕುಟುಂಬದ ಸದಸ್ಯರು ನಾನು ಭ್ರಮೆಯಲ್ಲಿ ಬದುಕುತ್ತಿದ್ದೇನೆ ಎಂದು ಹೇಳುತ್ತಿದ್ದರು. ನನ್ನನ್ನ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ರು. ನಾನು ಮಾನಸಿಕವಾಗಿ ಸ್ಥಿರವಾಗಿಲ್ಲದಿದ್ದರೆ ನನ್ನನ್ನ ವೈದ್ಯರ ಬಳಿಗೆ ಕರೆದೊಯ್ಯಬೇಕಿತ್ತು. ಆದರೆ ಅವರು ನನ್ನನ್ನು ಪುನರ್ವಸತಿ ಕೇಂದ್ರಕ್ಕೆ ಕಳಹಿಸಿದರು ಎಂದು ಅಖಿಲ್ ವಿಡಿಯೋದಲ್ಲಿ ಆರೋಪಿಸಿದ್ದರು.

    ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಉಪ ಪೊಲೀಸ್ ಆಯುಕ್ತೆ ಸೃಷ್ಟಿ ಗುಪ್ತಾ, ಅಖಿಲ್ ಕೇಸ್‌ನಲ್ಲಿ ಕುಟುಂಬದವರ ಪಾತ್ರ ಇದೆ ಅಂತ ನಮಗೆ ದೂರು ಬಂದಿತ್ತು. ಅವರ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳು ಹಾಗೂ ಕೆಲ ವಿಡಿಯೋಗಳು ಇನ್ನಷ್ಟು ಅನುಮಾನ ಹುಟ್ಟುಹಾಕಿದವು. ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ತನಿಖೆಗೆ ವಿಶೇಷ ತಂಡವನ್ನೂ ಕೂಡ ರಚನೆ ಮಾಡಿದ್ದೇವೆ. ತನಿಖಾ ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ನೀಡುವುದಾಗಿ ತಿಳಿಸಿದರು.

    ಮಲೇರ್ಕೋಟ್ಲಾ ಕ್ಷೇತ್ರದ ಮಾಜಿ ಶಾಸಕಿ ರಜಿಯಾ ಸುಲ್ತಾನ ಅವರು 2017-2022ರ ವರೆಗೆ ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. 2022ರ ರಾಜ್ಯ ಚುನಾವಣೆಯಲ್ಲಿ ಅವರು ಮಲೇರ್ಕೋಟ್ಲಾದಲ್ಲಿ ಪರಾಭವಗೊಂಡರು.

  • ಪಂಜಾಬ್ ಪೊಲೀಸರ ಭರ್ಜರಿ ಕಾರ್ಯಾಚರಣೆ – 113 ಡ್ರಗ್ ಪೆಡ್ಲರ್‌ಗಳು ಅರೆಸ್ಟ್

    ಪಂಜಾಬ್ ಪೊಲೀಸರ ಭರ್ಜರಿ ಕಾರ್ಯಾಚರಣೆ – 113 ಡ್ರಗ್ ಪೆಡ್ಲರ್‌ಗಳು ಅರೆಸ್ಟ್

    – 461 ಸ್ಥಳಗಳಲ್ಲಿ ರೇಡ್; 2.09 ಕೆಜಿ ಹೆರಾಯಿನ್, 1.8 ಲಕ್ಷ ರೂ ನಗದು ಸೀಜ್

    ಚಂಡೀಗಢ: ಪಂಜಾಬ್ ಪೊಲೀಸರು (Punjab Police) ಭಾನುವಾರ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಒಂದೇ ದಿನ 113 ಮಂದಿ ಡ್ರಗ್ ಪೆಡ್ಲರ್‌ಗಳನ್ನು (Drug Peddlers) ಬಂಧಿಸಿದ್ದಾರೆ. ಬಂಧಿತರಿಂದ 2.09 ಕೆಜಿ ಹೆರಾಯಿನ್, 530 ಗ್ರಾಂ ಅಫೀಮು, 32,679 ಮಾದಕವಸ್ತು ಮಾತ್ರೆಗಳು ಮತ್ತು ಮಾದಕವಸ್ತುಗಳ ಮಾರಾಟದಿಂದ ಬಂದ 1.8 ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.

    ಪಂಜಾಬ್ ಸರ್ಕಾರದ `ಯುದ್ಧ ನಾಶಿಯಾನ್ ವಿರುಧ್’ (ಮಾದಕವಸ್ತು ವಿರೋಧಿ ಯುದ್ಧ) ಅಭಿಯಾನವು ಭಾನುವಾರ 92ನೇ ದಿನಕ್ಕೆ ಕಾಲಿಟ್ಟಿದೆ. ಅಭಿಯಾನ ಪ್ರಾರಂಭವಾಗಿ 92 ದಿನಗಳಲ್ಲೇ 14,944 ಮಂದಿ ಡ್ರಗ್ ಪೆಡ್ಲರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ. ಡಿಜಿಪಿ ಗೌರವ್ ಯಾದವ್ ಅವರ ನಿರ್ದೇಶನದ ಮೇರೆ ಪಂಜಾಬ್‌ನ ಎಲ್ಲಾ 28 ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಇದನ್ನೂ ಓದಿ: ಫೈನಲ್‌ನಲ್ಲಿ ಸೆಣೆಸಲಿರುವ ಆರ್‌ಸಿಬಿಗೆ ಗಣ್ಯರಿಂದ ಶುಭಾಶಯಗಳ ಮಹಾಪೂರ!

    86 ಗೆಜೆಟೆಡ್ ಅಧಿಕಾರಿಗಳ ನೇತೃತ್ವದಲ್ಲಿ 1,400ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಒಳಗೊಂಡ 200ಕ್ಕೂ ಹೆಚ್ಚು ಪೊಲೀಸ್ ತಂಡಗಳು 461 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಿವೆ. ಈ ಪ್ರಕರಣ ಸಂಬಂಧ 83 ಎಫ್‌ಐಆರ್ ದಾಖಲಾಗಿದೆ. ಈಗಾಗಲೇ 113 ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಲಾಗಿದ್ದು, 382 ಅನುಮಾನಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿದೆ ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಡಿಜಿಪಿ ಅರ್ಪಿತ್ ಶುಕ್ಲಾ ತಿಳಿಸಿದ್ದಾರೆ. ಇದನ್ನೂ ಓದಿ: ಟೆಸ್ಲಾಗೆ 2 ಶೋ ರೂಂ ತೆರೆಯುವ ಆಸಕ್ತಿ ಇದೆ, ಆದ್ರೆ ಭಾರತದಲ್ಲೇ ಕಾರು ಉತ್ಪಾದಿಸುವ ಆಸಕ್ತಿ ಇಲ್ಲ: ಹೆಚ್‌ಡಿಕೆ

    ಪಂಜಾಬ್ ಸರ್ಕಾರವು ಮಾದಕ ದ್ರವ್ಯಗಳನ್ನು ನಿರ್ಮೂಲನೆ ಮಾಡಲು ಉದ್ದೇಶದಿಂದ ಜಾರಿ, ಮಾದಕ ದ್ರವ್ಯಗಳ ನಿಷೇಧ ಮತ್ತು ತಡೆಗಟ್ಟುವಿಕೆ ಎಂಬ ಮೂರು ಹಂತದ ಕಾರ್ಯಾಚರಣೆಯನ್ನು ಜಾರಿಗೊಳಿಸುತ್ತಿದೆ. ವ್ಯಸನ ಮುಕ್ತಿ ಅಭಿಯಾನದ ಭಾಗವಾಗಿ ಸೋಮವಾರ ಪೊಲೀಸರು, 92 ಮಂದಿಯನ್ನು ವ್ಯಸನ ಮುಕ್ತಿ ಮತ್ತು ಪುನರ್ವಸತಿ ಚಿಕಿತ್ಸೆಗೆ ಒಳಪಡಿಸಲು ಮನವೊಲಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಸಚಿವ ಜಾರ್ಜ್ ಪುತ್ರ ರಾಣಾಗೆ ರಿಲೀಫ್ – ನುಗು ಅಭಯಾರಣ್ಯ ರಸ್ತೆಯಲ್ಲಿ ರಾತ್ರಿ ಸಂಚಾರಕ್ಕೆ ಹೈಕೋರ್ಟ್ ಅಸ್ತು

    ಪಂಜಾಬ್ ಪೊಲೀಸರು ತಂಡಗಳಾಗಿ ಫಜಿಲ್ಕಾ, ಫಿರೋಜ್‌ಪುರ, ಶ್ರೀ ಮುಕ್ತ್ಸರ್ ಸಾಹಿಬ್, ಫರೀದ್‌ಕೋಟ್ ಮತ್ತು ಮೋಗಾ ಜಿಲ್ಲೆಗಳ 106 ಔಷಧೀಯ ಕೇಂದ್ರಗಳನ್ನು ತಪಾಸಣೆ ನಡೆಸಿದ್ದಾರೆ. ಮಾದಕ ದ್ರವ್ಯ ಹಾಗೂ ಯಾವುದೇ ವ್ಯಸನಕಾರಿ ಔಷಧಿಗಳನ್ನು ಮಾರಾಟ ಮಾಡುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ.

  • ಮಹಿಂದ್ರಾ ಥಾರ್‌, ರಾಯಲ್‌ ಎನ್‌ಫೀಲ್ಡ್‌, ರೋಲೆಕ್ಸ್ ವಾಚ್‌, 1 ಕೋಟಿ ಮೌಲ್ಯದ ಫ್ಲಾಟ್‌ ಹೊಂದಿದ್ದ ಲೇಡಿ ಕಾನ್‌ಸ್ಟೇಬಲ್‌ ಅರೆಸ್ಟ್‌!

    ಮಹಿಂದ್ರಾ ಥಾರ್‌, ರಾಯಲ್‌ ಎನ್‌ಫೀಲ್ಡ್‌, ರೋಲೆಕ್ಸ್ ವಾಚ್‌, 1 ಕೋಟಿ ಮೌಲ್ಯದ ಫ್ಲಾಟ್‌ ಹೊಂದಿದ್ದ ಲೇಡಿ ಕಾನ್‌ಸ್ಟೇಬಲ್‌ ಅರೆಸ್ಟ್‌!

    – ಆಸ್ತಿ ಕಂಡು ಅಧಿಕಾರಿಗಳೇ ದಂಗು

    ನವದೆಹಲಿ: ಮಹೀಂದ್ರಾ ಥಾರ್‌ (Mahindra Thar), ರಾಯಲ್‌ ಎನ್‌ಫೀಲ್ಡ್‌ ಬೈಕ್‌, 1 ಕೋಟಿಗೂ ಅಧಿಕ ಮೌಲ್ಯದ ಫ್ಲಾಟ್‌ಗಳು, 2 ಐಫೋನ್‌, ರೋಲೆಕ್ಸ್‌ ವಾಚ್‌… ಇದಿಷ್ಟೂ ಯಾವುದೋ ರಿಯಲ್‌ ಎಸ್ಟೇಟ್‌ ಉದ್ಯಮಿಯ ಆಸ್ತಿಯಲ್ಲ. ಬದಲಾಗಿ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧನಕ್ಕೆ ಓಳಗಾಗಿರುವ ಓರ್ವ ಲೇಡಿ ಕಾನ್‌ಸ್ಟೇಬಲ್‌ಗೆ (constable) ಸೇರಿದ ಆಸ್ತಿಯಾಗಿದೆ.

    ಕಳೆದ ಏಪ್ರಿಲ್‌ನಲ್ಲಿ ಮಾದಕ ದ್ರವ್ಯ ಹೊಂದಿದ್ದಕ್ಕಾಗಿ ಸೇವೆಯಿಂದ ವಜಾಗೊಂಡಿದ್ದ ಅಮನ್‌ದೀಪ್‌ ಕೌರ್‌ (Amandeep Kaur ಈಗ ಭ್ರಷ್ಟಾಚಾರ ಪ್ರಕರಣದಲ್ಲಿ ಅರೆಸ್ಟ್‌ ಆಗಿದ್ದಾರೆ. ಆದಾಯ ಮೀರಿದ ಆಸ್ತಿ ಗಳಿಗೆ ಆರೋಪದ ಮೇಲೆ ಪಂಜಾಬ್‌ ವಿಜಿಲೆನ್ಸ್‌ ಬ್ಯೂರೋ ಅವರನ್ನು ಸೋಮವಾರ ಬಂಧಿಸಿದೆ. ನಂತರ ಬಟಿಂಡಾ ಪೊಲೀಸ್‌ ಠಾಣೆಯಲ್ಲಿ ಭ್ರಷ್ಟಾಚಾರ ಪ್ರಕರಣ ದಾಖಲಿಸಲಾಗಿದೆ.

    ಕಳೆದ ಏಪ್ರಿಲ್‌ನಲ್ಲಿ 17.71 ಗ್ರಾಂ ಹೆರಾಯಿನ್‌ ಸಾಗಿಸಿದ್ದಕ್ಕಾಗಿ ಕೌರ್‌ ಅವರನ್ನ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ಬಂಧಿಸಿತ್ತು. ಬಳಿಕ ಅವರನ್ನ ಸೇವೆಯಿಂದ ವಜಾಗೊಳಿಸಲಾಗಿತ್ತು. ನಂತರ ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ (NDPS) ಕಾಯ್ದೆಯಡಿಯಲ್ಲಿ ಬಂಧಿಸಲಾಗಿತ್ತು. ಆದ್ರೆ ಇದೇ ಮೇ 2ರಂದು ಬಟಿಂಡಾದ ನ್ಯಾಯಾಲಯವು ಕೌರ್‌ ಅವರನ್ನ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.

    ಇದೀಗ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಿರುವ ಪಂಜಾಬ್‌ ವಿಜಿಲೆನ್ಸ್‌ (Punjab Vigilance Bureau) ಕೌರ್‌ಗೆ ಸೇರಿದ 1.35 ಕೋಟಿ ರೂ. ಮೌಲ್ಯದ ಆಸ್ತಿಯನ್ನ ಎನ್‌ಡಿಪಿಎಸ್‌ ಕಾಯ್ದೆ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡಿದೆ. ಇದರಲ್ಲಿ 2 ಫ್ಲಾಟ್‌ಗಳು, 1 ಮಹೀಂದ್ರಾ ಥಾರ್‌, 1 ರೋಲೆಕ್ಸ್‌ ವಾಚ್‌, ಮೂರು ಐಫೋನ್‌ಗಳೂ ಸೇರಿವೆ.

    ವಶಪಡಿಸಿಕೊಂಡ ಆಸ್ತಿಗಳು ಎಷ್ಟಿವೆ?
    * ವಿರಾಟ್ ಗ್ರೀನ್, ಬಟಿಂಡಾದಲ್ಲಿರುವ ಭೂಮಿ (217 ಚದರ ಗಜಗಳು): 99,00,000 ರೂ. ಮೌಲ್ಯ
    * ಡ್ರೀಮ್ ಸಿಟಿ, ಬಟಿಂಡಾದಲ್ಲಿರುವ ಭೂಮಿ (120.83 ಚದರ ಗಜಗಳು): ರೂ 18,12,000
    * ಥಾರ್ ಕಾರ್: ರೂ 14,00,000
    * ರಾಯಲ್ ಎನ್‌ಫೀಲ್ಡ್ ಬುಲೆಟ್: ರೂ 1,70,000
    * ಐಫೋನ್ 13 ಪ್ರೊ ಮ್ಯಾಕ್ಸ್: ರೂ 45,000
    * ಐಫೋನ್ ಎಸ್‌ಇ: ರೂ 9,000
    * ವಿವೋ ಫೋನ್: ರೂ 2,000
    * ಬ್ಯಾಂಕ್ ಬ್ಯಾಲೆನ್ಸ್ (ಎಸ್‌ಬಿಐ): ರೂ 1,01,588.53
    * ರೋಲೆಕ್ಸ್ ವಾಚ್: ಬೆಲೆ ತಿಳಿದಿಲ್ಲ

    ಅಮನ್‌ದೀಪ್ ಕೌರ್ 2018 ಮತ್ತು 2024ರ ನಡುವೆ ಒಟ್ಟು 1.08,37,550 ರೂ. ಆದಾಯ ಹೊಂದಿದ್ದರು. ಆದರೆ ಅವರ ಖರ್ಚು 1,39,64,802.97 ರೂ.ಗಳಾಗಿತ್ತು. ಇದು ಅವರ ಆದಾಯ ಮೂಲಕ್ಕಿಂತ 31,27,252.97 ರೂ. ಹೆಚ್ಚಾಗಿತ್ತು. ಈ ಹಿನ್ನೆಲೆ ಕೇಸ್‌ ದಾಖಲಿಸಿ ತನಿಖೆ ನಡೆಸಲಾಗಿತ್ತು.

  • ಅರ್ಜುನ ಪ್ರಶಸ್ತಿ ಪುರಸ್ಕೃತ ಪೊಲೀಸ್‌ ಅಧಿಕಾರಿ ಕೊಲೆ – 48 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪಂಜಾಬ್‌ ಪೊಲೀಸ್‌

    ಅರ್ಜುನ ಪ್ರಶಸ್ತಿ ಪುರಸ್ಕೃತ ಪೊಲೀಸ್‌ ಅಧಿಕಾರಿ ಕೊಲೆ – 48 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪಂಜಾಬ್‌ ಪೊಲೀಸ್‌

    ನವದೆಹಲಿ: ಅರ್ಜುನ ಪ್ರಶಸ್ತಿ ಪುರಸ್ಕೃತ ಪೊಲೀಸ್ ಅಧಿಕಾರಿಯೊಬ್ಬರ ಕೊಲೆ ಪ್ರಕರಣವನ್ನು ಜಲಂಧರ್ ಪೊಲೀಸರು ಸುಧಾರಿತ ತಾಂತ್ರಿಕ ತನಿಖಾ ವಿಧಾನದ ಮೂಲಕ 48 ಗಂಟೆಗಳಲ್ಲಿ ಭೇದಿಸಿದ್ದಾರೆ.

    ಪೊಲೀಸ್ ಅಧಿಕಾರಿ ದಲ್ಬೀರ್ ಸಿಂಗ್ ಡಿಯೋಲ್ ಅವರು, ತಲೆಯ ಮೇಲೆ ಬಿದ್ದಿದ್ದ ಗುಂಡಿನ ಗಾಯದಿಂದ ಬುಧವಾರ ಸಾವನ್ನಪ್ಪಿದ್ದರು. ಆಟೋರಿಕ್ಷಾ ಚಾಲಕನನ್ನು ಬಂಧಿಸುವ ಮೂಲಕ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಆಟೋ ಚಾಲಕ ಮನೆಗೆ ಡ್ರಾಪ್ ಕೊಡುವ ವೇಳೆ ನಡೆದ ಮಾತಿನ ಚಕಮಕಿಯಿಂದ ಪೊಲೀಸ್ ಅಧಿಕಾರಿಯ ಮೇಲೆ ಗುಂಡು ಹಾರಿಸಿದ್ದಾನೆ. ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ನಾನು ಪ್ರಚಾರ ಮಾಡೋದನ್ನು ತಡೆಯಲು ಸಮನ್ಸ್‌: ಕೇಜ್ರಿವಾಲ್‌ ಕಿಡಿ

    ಪೊಲೀಸ್ ಅಧಿಕಾರಿ ಜುಗಲ್ ಕಿಶೋರ್ ಅವರು ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದಾಗ ಕಾಲುವೆ ಬಳಿ ಶವವನ್ನು ನೋಡಿದ್ದಾರೆ. ಕಿಶೋರ್ ತಕ್ಷಣ ತನ್ನ ಸಹೋದ್ಯೋಗಿಗಳಿಗೆ ಕರೆ ಮಾಡಿ ಶೀಘ್ರದಲ್ಲೇ ತನಿಖೆ ನಡೆಸಿದ್ದಾರೆ.

    ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಅವುಗಳ ಪೈಕಿ ಒಂದರಲ್ಲಿ ಡಿಯೋಲ್‌ ಆಟೋರಿಕ್ಷಾದಲ್ಲಿ ಪ್ರಯಾಣಿಸಿರುವುದು ಕಂಡುಬಂದಿದೆ. ಆ ವಾಹನ ಸಂಖ್ಯೆ ನಮೂದಿಸಿಕೊಂಡು ಪೊಲೀಸರು, ಆಟೋ ಹೋದ ಮಾರ್ಗಗಳಲ್ಲಿ ಇದ್ದ ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಆಟೋರಿಕ್ಷಾ ಪತ್ತೆಯಾಗಿದೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಯಂದು ಪಿಂಕ್‌ ಸಿಟಿ ಜೈಪುರದಲ್ಲಿ ಮಾಂಸ, ಮದ್ಯದಂಗಡಿ ಬಂದ್‌

    ಆರೋಪಿ ವಿಜಯ್ ಕುಮಾರ್ ಸರ್ವೀಸ್ ಪಿಸ್ತೂಲ್ ಕಸಿದುಕೊಂಡು ಡಿಯೋಲ್ ಅವರ ತಲೆಗೆ ಗುಂಡು ಹಾರಿಸಿದ್ದಾನೆ. ನಂತರ ಮೃತದೇಹವನ್ನು ಕಾಲುವೆ ಬಳಿ ಎಸೆದು ಹೋಗಿದ್ದಾನೆ. ಮೃತದೇಹದ ಬಳಿ ಮಾರಕಾಸ್ತ್ರ ಪತ್ತೆಯಾಗಿದೆ. ಪೊಲೀಸ್ ಅಧಿಕಾರಿ ತಾನು ಹೇಳಿದ ಜಾಗಕ್ಕೆ ಬಿಡಲು ಚಾಲಕ ನಿರಾಕರಿಸಿದ್ದು, ಜಗಳಕ್ಕೆ ಕಾರಣವಾಯಿತು. ವಾಗ್ವಾದದ ನಡುವೆ ಆರೋಪಿಯು ಡಿಯೋಲ್‌ನಿಂದ ಸರ್ವೀಸ್ ಪಿಸ್ತೂಲ್ ಕಸಿದುಕೊಂಡು ಆತನ ತಲೆಗೆ ಗುಂಡು ಹಾರಿಸಿದ್ದಾನೆ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.

  • ಪಾಕ್ ಉಗ್ರ ಸಂಘಟನೆಯೊಂದಿಗೆ ನಂಟು – ಮೂವರ ಬಂಧನ

    ಪಾಕ್ ಉಗ್ರ ಸಂಘಟನೆಯೊಂದಿಗೆ ನಂಟು – ಮೂವರ ಬಂಧನ

    ಚಂಡೀಗಢ: ಐಎಸ್‌ಐ (ISI) ನಿಯಂತ್ರಿತ ಪಾಕ್ ಮೂಲದ ಭಯೋತ್ಪಾದಕ ಘಟಕದೊಂದಿಗೆ ನಂಟು ಹೊಂದಿದ್ದ ಮೂವರನ್ನು ಪಂಜಾಬ್‌ ಪೊಲೀಸರು (Punjab Police) ಬಂಧಿಸಿದ್ದಾರೆ.

    ಯುಎಪಿಎ ಪ್ರಕರಣಗಳ ಅಡಿಯಲ್ಲಿ ಸಂಗ್ರೂರ್ ಜೈಲಿನಲ್ಲಿರುವ ವ್ಯಕ್ತಿಗಳೊಂದಿಗೆ ಈ ಮೂವರು ಸಂಪರ್ಕದಲ್ಲಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದನ್ನೂ ಓದಿ: ಪ.ಬಂಗಾಳದಲ್ಲಿ ರಿಲಯನ್ಸ್‌ನಿಂದ 20 ಸಾವಿರ ಕೋಟಿ ರೂ. ಹೂಡಿಕೆ: ಅಂಬಾನಿ ಘೋಷಣೆ

    ಬಂಧಿತರಿಂದ 8 ಶಸ್ತ್ರಾಸ್ತ್ರಗಳು, 9 ಮ್ಯಾಗ್ಸಿನ್ಸ್, 30 ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಕ್ಯಾಂಟ್ ಬಟಿಂಡಾ ಠಾಣೆಯಲ್ಲಿ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದೆ.

  • ಪೊಲೀಸ್‌ ಕಾರಿನ ಮೇಲೆ ಕುಳಿತು ಮಹಿಳೆಯ ಭರ್ಜರಿ ಡಾನ್ಸ್‌ – ರೀಲ್ಸ್‌ಗಾಗಿ ಕಾರು ಕೊಟ್ಟ ಅಧಿಕಾರಿ ಅಮಾನತು

    ಪೊಲೀಸ್‌ ಕಾರಿನ ಮೇಲೆ ಕುಳಿತು ಮಹಿಳೆಯ ಭರ್ಜರಿ ಡಾನ್ಸ್‌ – ರೀಲ್ಸ್‌ಗಾಗಿ ಕಾರು ಕೊಟ್ಟ ಅಧಿಕಾರಿ ಅಮಾನತು

    ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ (Social Media) ಈಗ ರೀಲ್ಸ್‌ ಹವಾ ಜಾಸ್ತಿಯಾಗಿದೆ. ಅದರಲ್ಲೂ ಕೆಲ ಯುವತಿಯರು ಹಾಟ್‌ ಉಡುಗೆಗಳನ್ನ ತೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಡ್ಯಾನ್ಸ್‌ (Dance) ಮಾಡಿ ರೀಲ್ಸ್‌ ಕ್ರಿಯೇಟ್‌ ಮಾಡುವುದು ಟ್ರೆಂಡ್‌ ಆಗಿಬಿಟ್ಟಿದೆ. ಹೆಚ್ಚಿನ ವೀವ್ಸ್‌ಗಾಗಿ ಕಂಡ ಕಂಡ ಸ್ಥಳಗಳಲ್ಲಿ ವೀಡಿಯೋ ಮಾಡೋದಕ್ಕೆ ಶುರು ಮಾಡಿದ್ದಾರೆ.

    ಹಾಗೆಯೇ ಪಂಜಾಬ್‌ನಲ್ಲಿ ಮಹಿಳೆಯೊಬ್ಬಳು ರೀಲ್ಸ್‌ಗಾಗಿ ಪೊಲೀಸ್‌ (Punjab Police) ವಾಹನ ಬಳಸಿಕೊಂಡಿದ್ದಾಳೆ. ಪಾಯಲ್‌ ಪರಮ್‌ ಎಂಬ ಮಹಿಳೆ ತನ್ನ ಇನ್‌ಸ್ಟಾಗ್ರಾಮ್‌ ರೀಲ್ಸ್‌ಗಾಗಿ (Insta Reels) ಪೊಲೀಸ್‌ ವಾಹನವನ್ನೇ ಬಳಸಿಕೊಂಡಿದ್ದಾಳೆ. ಈ ವೀಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದಂತೆ ಪೊಲೀಸ್‌ ವಾಹವನ್ನು ರೀಲ್ಸ್‌ ಮಾಡಲು ಅನುಮತಿ ನೀಡಿದ್ದ ಜಲಂಧರ್‌ ಪೊಲೀಸ್‌ ಠಾಣೆಯ ಅಧಿಕಾರಿಯನ್ನ ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಪೊಲೀಸ್‌ ವಾಹವನ್ನು ಬಳಸಿಕೊಂಡು ರೀಲ್ಸ್‌ ಮಾಡಿರುವ ಮಹಿಳೆ ಕಾರಿನ ಮುಂಭಾಗದ ಬಾನೆಟ್‌ ಮೇಲೆ ಕುಳಿತು ಪಂಜಾಬಿ ಹಾಡಿಗೆ ಸಖತ್‌ ಡಾನ್ಸ್‌ ಮಾಡಿದ್ದಾಳೆ. ಇದೇ ವೇಳೆ ಆಕ್ಷೇಪಾರ್ಹ ರೀತಿಯಲ್ಲಿ ಕೈಸನ್ನೆ ಮಾಡಿದ್ದಾಳೆ. ವೀಡಿಯೋ ಕೊನೆಯಲ್ಲಿ ಓರ್ವ ಪೊಲೀಸ್‌ ಅಧಿಕಾರಿಯೂ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಹೈದರಾಬಾದ್‌ ಬಿರಿಯಾನಿ, ಬಟರ್‌ ಚಿಕನ್‌, ಲ್ಯಾಂಬ್‌ ಚಾಪ್ಸ್; ಭಾರತದಲ್ಲಿ ಪಾಕ್‌ ಕ್ರಿಕೆಟಿಗರಿಗೆ ಭರ್ಜರಿ ಬಾಡೂಟದ ಆತಿಥ್ಯ

    ಈ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಮಹಿಳೆ ಹಾಗೂ ಪೊಲೀಸ್‌ ಅಧಿಕಾರಿಯ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಘಟನೆಯ ಕುರಿತು ತನಿಖೆ ಆರಂಭಿಸಿದ ಹಿರಿಯ ಅಧಿಕಾರಿಗಳು ಮಹಿಳೆಗೆ ಪೊಲೀಸ್‌ ವಾಹನ ನೀಡಿದ ಅಧಿಕಾರಿಯನ್ನ ಅಮಾನತುಗೊಳಿಸಿದ್ದಾರೆ. ಇದನ್ನೂ ಓದಿ: ಭಾರತಕ್ಕೆ ಬಂದ ಪಾಕ್‌ ತಂಡಕ್ಕೆ ಕೇಸರಿ ಶಾಲು ಹಾಕಿ ಸ್ವಾಗತ – ಬಾಬರ್‌ ಆಜಂ ಬಿಜೆಪಿ ಯುವನಾಯಕ ಎಂದು ಟ್ರೋಲ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಳೆಯರ ಅಶ್ಲೀಲ ವೀಡಿಯೋಗಳನ್ನಿಟ್ಟುಕೊಂಡು ಬ್ಲಾಕ್‌ಮೇಲ್ – ಅಮೃತ್‌ಪಾಲ್ ಕರಾಳ ಮುಖ ಬಯಲು

    ಮಹಿಳೆಯರ ಅಶ್ಲೀಲ ವೀಡಿಯೋಗಳನ್ನಿಟ್ಟುಕೊಂಡು ಬ್ಲಾಕ್‌ಮೇಲ್ – ಅಮೃತ್‌ಪಾಲ್ ಕರಾಳ ಮುಖ ಬಯಲು

    – ವಿವಾಹಿತರು, ಅವಿವಾಹಿತ ಮಹಿಳೆಯರೊಂದಿಗೆ ಸಂಬಂಧ

    ಚಂಡೀಗಢ: `ವಾರಿಸ್ ಪಂಜಾಬ್ ದೇ’ ಮುಖ್ಯಸ್ಥ, ಖಲಿಸ್ತಾನ್ (Khalistan) ಬೆಂಬಲಿಗ ಅಮೃತ್‌ಪಾಲ್ ಸಿಂಗ್ (Amritpal Singh) ಬಂಧಿಸುವ ಕಾರ್ಯಾಚರಣೆ 6ನೇ ದಿನಕ್ಕೆ ಕಾಲಿಟ್ಟಿದೆ. ಶೋಧ ನಡೆಸುತ್ತಿರುವ ಪಂಜಾಬ್ ಪೊಲೀಸರಿಗೆ ಮತ್ತಷ್ಟು ಸ್ಫೋಟಕ ಮಾಹಿತಿಗಳು ಲಭ್ಯವಾಗಿದೆ.

    ಅಮೃತ್‌ಪಾಲ್ ಸಿಂಗ್, ಹಲವಾರು ಮಹಿಳೆಯರೊಂದಿಗೆ ಚಾಟ್ ಮಾಡುತ್ತಿದ್ದ. ಇದು ವಿವಾಹಿತ ಹಾಗೂ ಅವಿವಾಹಿತ ಮಹಿಳೆಯರೊಂದಿಗೆ ವಿವಾಹೇತರ ಸಂಬಂಧ (Casual Relationships) ಹೊಂದಿದ್ದ ಎಂಬುದನ್ನು ಸೂಚಿಸಿವೆ. ಪಾಲ್ ಮಹಿಳೆಯರ ಅಶ್ಲೀಲ ವೀಡಿಯೋಗಳನ್ನಿಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದ ಎಂದು ಈಗ ತನಿಖೆಯಿಂದ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮರ್ಸಿಡಿಸ್ ಕಾರಿನಲ್ಲಿ ವೇಷ ಬದಲಿಸಿಕೊಂಡು ಮರೆಯಾದ ಅಮೃತಪಾಲ್ – ಕೊನೇ ಬಾರಿ ಕಾಣಿಸಿದ್ದು ಎಲ್ಲಿ?

    ಪಂಜಾಬ್ ಪೊಲೀಸರಿಗೆ (Punjab Police) ಲಭ್ಯವಾದ ಅಮೃತ್‌ಪಾಲ್‌ನ ಚಾಟ್‌ಗಳು ಹಾಗೂ 12 ವಾಯ್ಸ್ ನೊಟ್‌ಗಳನ್ನು ಪರಿಶೀಲಿಸಿದಾಗ ಅನೇಕ ಮಾಹಿತಿಗಳು ಬೆಳಕಿಗೆ ಬಂದಿದೆ. ಲಭ್ಯವಾದ ವಾಯ್ಸ್ನೋಟ್ ಒಂದರಲ್ಲಿ ತಾನು ಮಹಿಳೆಯರೊಂದಿಗೆ ತಾತ್ಕಾಲಿಕ ಸಂಬಂಧ ಬಯಸುವುದಾಗಿ ಹೇಳಿದ್ದಾನೆ. ಹೆಂಗಸರು ಬೇಗ ಸೀರಿಯಸ್ ಆಗುತ್ತಾರೆ, ತನ್ನ ಮದುವೆಯ ಮೇಲೆ ಪರಿಣಾಮ ಬೀರದಿರುವವರೆಗೂ ಸಂಬಂಧ ಹೊಂದಲು ಸಿದ್ಧವಿರುತ್ತೇನೆ ಎಂದು ಅದರಲ್ಲಿ ಹೇಳಿರುವ ಮಾಹಿತಿ ಇದೆ.

    ಅಲ್ಲದೇ ಮಹಿಳೆಯೊಬ್ಬರಿಗೆ ಚಾಟ್ ಮಾಡುವಾಗ, “ನಮ್ಮ ಹನಿಮೂನ್ ದುಬೈನಲ್ಲಿ ಇರುತ್ತೆ” ಎಂದು ಮೆಸೇಜ್ ಮಾಡಿದ್ದಾನೆ, ಅದಕ್ಕೆ ಮಹಿಳೆ ನಗುವಿನ ಇಮೋಜಿಯನ್ನೂ ಕಳಿಸಿದ್ದಾಳೆ. ಪಂಜಾಬ್ ಪೊಲೀಸರಿಂದ ಶೋಧ ಕಾರ್ಯ ಮುಂದುವರಿದಿದೆ. ಇದನ್ನೂ ಓದಿ: ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ – ರಾಹುಲ್‌ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ

    ಅಮೃತಪಾಲ್ ಸಿಂಗ್ ಬಂಧನಕ್ಕೆ ಪಂಜಾಬ್ ಪೊಲೀಸರು ಕಾರ್ಯಾಚರಣೆ ಆರಂಭಿಸಿದ ನಂತರ ಶನಿವಾರ ಬೆಳಿಗ್ಗೆ 11:27ರ ಸುಮಾರಿಗೆ ಜಲಂಧರ್‌ನ ಟೋಲ್ ಬೂತ್ ದಾಟಿ ಹೋಗುವುದು ಪತ್ತೆಯಾಗಿತ್ತು. ಮಾರುತಿ ಬ್ರೆಜಾ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ. ಅದಕ್ಕೂ ಮುನ್ನ ಆತ ಮರ್ಸಿಡಿಸ್ ಎಸ್‌ಯುವಿಯಲ್ಲಿ ಇರುವುದು ಕಂಡುಬಂದಿತ್ತು. ಆ ಕಾರನ್ನು ಆತ ಶಾಹಕೋಟ್‌ನಲ್ಲಿ ಬಿಟ್ಟು ತೆರಳಿದ್ದ. ಅಲ್ಲಿಂದ ಕೆಲವು ಗಂಟೆಗಳ ನಂತರ ತನ್ನ ಸಹವರ್ತಿಯೊಬ್ಬನ ಮಾರುತಿ ಬ್ರೆಜಾ ಕಾರಿನಲ್ಲಿ ಪ್ರಯಾಣಿಸಿದ್ದ. ಕಾರಿನಲ್ಲಿ ಆತ ಬಟ್ಟೆಗಳನ್ನು ಬದಲಿಸಿರುವುದು ಖಚಿತವಾಗಿತ್ತು. ಆತ ಮಾಮೂಲಿಯಾಗಿ ಧರಿಸುವ ಉಡುಪಿನ ಬದಲು ಅಂಗಿ ತೊಟ್ಟಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

  • ಮರ್ಸಿಡಿಸ್ ಕಾರಿನಲ್ಲಿ ವೇಷ ಬದಲಿಸಿಕೊಂಡು ಮರೆಯಾದ ಅಮೃತಪಾಲ್ – ಕೊನೇ ಬಾರಿ ಕಾಣಿಸಿದ್ದು ಎಲ್ಲಿ?

    ಮರ್ಸಿಡಿಸ್ ಕಾರಿನಲ್ಲಿ ವೇಷ ಬದಲಿಸಿಕೊಂಡು ಮರೆಯಾದ ಅಮೃತಪಾಲ್ – ಕೊನೇ ಬಾರಿ ಕಾಣಿಸಿದ್ದು ಎಲ್ಲಿ?

    ಚಂಡಿಗಢ: ಕಳೆದ ನಾಲ್ಕು ದಿನಗಳಿಂದ ಪಂಜಾಬ್ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರುವ ಖಲಿಸ್ತಾನಿ (Khalistan) ಬೆಂಬಲಿಗ ಅಮೃತ್‌ಪಾಲ್ ಸಿಂಗ್ (Amritpal Singh) ದೇಶದಿಂದಲೇ ಪರಾರಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

    ಈವರೆಗೂ ಅಮೃತ್‌ಪಾಲ್ ಸಿಂಗ್ ಸಿಕ್ಕಿಲ್ಲ ಎಂದೇ ಪಂಜಾಬ್ ಪೊಲೀಸರು (Punjab Police) ಹೇಳುತ್ತಿದ್ದಾರೆ. ಈ ನಡುವೆ ಅಮೃತ್‌ಪಾಲ್ ಸಿಂಗ್ ತಪ್ಪಿಸಿಕೊಳ್ಳಲು ಬಳಸಿದ 2ನೇ ವಾಹನವನ್ನು ಮತ್ತು ಆತ ಬಳಸಿದ್ದ ಬಟ್ಟೆಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: 80 ಸಾವಿರ ಪೊಲೀಸರು ಏನ್ ಮಾಡ್ತಿದ್ದಾರೆ – ಅಮೃತ್‌ಪಾಲ್ ಸಿಂಗ್ ಬಂಧಿಸದ ಸರ್ಕಾರದ ವಿರುದ್ಧ ಹೈಕೋರ್ಟ್ ಚಾಟಿ

    ಅಮೃತ್‌ಪಾಲ್ ಸಿಂಗ್ ತನ್ನ ಸಹಚರರೊಡನೆ ಬೈಕಲ್ಲಿ ಪಂಜಾಬ್ ಗಡಿ ದಾಟಿರಬಹುದು ಎಂದು ಅಂದಾಜಿಸಲಾಗುತ್ತಿದೆ. ಒಂದು ವೇಳೆ ಇದು ನಿಜವಾದಲ್ಲಿ ಆತ ನೇಪಾಳದ ಮೂಲಕ ಕೆನಡಾಗೆ ಎಸ್ಕೇಪ್ ಆಗುವ ಸಾಧ್ಯತೆಗಳು ಇವೆ ಎಂದು ವರದಿಗಳು ಹೇಳುತ್ತಿವೆ. ಇದನ್ನೂ ಓದಿ: ರೆಡ್‌ ಕಾರ್ನರ್‌ ನೋಟಿಸ್‌ ಪಟ್ಟಿಯಿಂದ ಔಟ್‌- ಇನ್ನು ಮುಂದೆ ವಿಶ್ವದೆಲ್ಲೆಡೆ ವಂಚಕ ಮೆಹುಲ್‌ ಚೋಕ್ಸಿ ಸಂಚರಿಸಬಹುದು

    30 ವರ್ಷದ ಅಮೃತಪಾಲ್ ಸಿಂಗ್ ಬಂಧನಕ್ಕೆ ಪಂಜಾಬ್ ಪೊಲೀಸರು ಕಾರ್ಯಾಚರಣೆ ಆರಂಭಿಸಿದ ನಂತರ ಶನಿವಾರ ಬೆಳಿಗ್ಗೆ 11.27ರ ಸುಮಾರಿಗೆ ಜಲಂಧರ್‌ನ ಟೋಲ್ ಬೂತ್ ದಾಟಿ ಹೋಗುವುದು ಪತ್ತೆಯಾಗಿದೆ. ಆತ ಮಾರುತಿ ಬ್ರೆಜಾ ಕಾರಿನ ಮುಂದಿನ ಸೀಟಿನಲ್ಲಿ ಕುಳಿತಿದ್ದ. ಅದಕ್ಕೂ ಮುನ್ನ ಆತ ಮರ್ಸಿಡಿಸ್ ಎಸ್‌ಯುವಿಯಲ್ಲಿ (Mercedes SUV) ಇರುವುದು ಕಂಡುಬಂದಿತ್ತು. ಆ ಕಾರನ್ನು ಆತ ಶಾಹಕೋಟ್‌ನಲ್ಲಿ ಬಿಟ್ಟು ತೆರಳಿದ್ದ. ಅಲ್ಲಿಂದ ಕೆಲವು ಗಂಟೆಗಳ ನಂತರ ತನ್ನ ಸಹವರ್ತಿಯೊಬ್ಬನ ಮಾರುತಿ ಬ್ರೆಜಾ ಕಾರಿನಲ್ಲಿ ಪ್ರಯಾಣಿಸಿದ್ದ. ಕಾರಿನಲ್ಲಿ ಆತ ಬಟ್ಟೆಗಳನ್ನು ಬದಲಿಸಿರುವುದು ಖಚಿತವಾಗಿದೆ. ಆತ ಮಾಮೂಲಿಯಾಗಿ ಧರಿಸುವ ಉಡುಪಿನ ಬದಲು ಅಂಗಿ ತೊಟ್ಟಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ಮಧ್ಯೆ, ಪಂಜಾಬ್ ಪೊಲೀಸರ ಕಾರ್ಯವೈಖರಿ ಬಗ್ಗೆ ಪಂಜಾಬ್ ಹೈಕೋರ್ಟ್ (Punjab Highcourt) ಹಲವು ಗಂಭೀರ ಪ್ರಶ್ನೆಗಳನ್ನ ಕೇಳಿದೆ. ಅಮೃತ್‌ಪಾಲ್ ಸಿಂಗ್ ಹೊರತುಪಡಿಸಿ ಉಳಿದವರನ್ನು ಹೇಗೆ ಬಂದಿಸಿದ್ರಿ? ಪೊಲೀಸ್ರು ಚೇಸ್ ಮಾಡಿದರೂ, ಅಮೃತ್‌ಪಾಲ್ ಸಿಂಗ್ ಮಾತ್ರ ತಪ್ಪಿಸಿಕೊಂಡಿದ್ದು ಹೇಗೆ? 80 ಸಾವಿರ ಪೊಲೀಸರು ಏನು ಮಾಡ್ತಿದ್ರು ಎಂದು ಪ್ರಶ್ನೆಗಳ ಸುರಿಮಳೆಗರೆದಿದ್ದು, ಮುಂದಿನ ವಿಚಾರಣೆ 4 ದಿನಗಳ ಬಳಿಕ ನಡೆಯಲಿದೆ.

    ಖಲಿಸ್ತಾನಿ ಬೆಂಬಲಿಗ ಅಮೃತ್ ಪಾಲ್ ಸಿಂಗ್ ಬಂಧನಕ್ಕಾಗಿ ಕಳೆದ 4 ದಿನಗಳಿಂದ ಬಹುದೊಡ್ಡ ಕಾರ್ಯಾಚರಣೆಯನ್ನು ಪಂಜಾಬ್ ಪೊಲೀಸರು ಆರಂಭಿಸಿದ್ದಾರೆ. ಸತತ ಹುಡುಕಾಟದ ಬಳಿಕ ಅಮೃತ್ ಪಾಲ್ ಸಿಂಗ್ ಬಂಧಿಸುವಲ್ಲಿ ವಿಫಲವಾದ ಇಲಾಖೆ ಆತನ ಆಪ್ತರನ್ನು ಬಂಧಿಸಿದೆ. ಅಮೃತ್‌ಪಾಲ್ ಸಿಂಗ್ ಬಂಧನಕ್ಕೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಹಿನ್ನೆಲೆ ರಾಜ್ಯದ ಹಲವು ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಪೊಲೀಸರ ಮುಂದೆ ಶರಣಾದ ಅಮೃತ್‌ಪಾಲ್ ಸಿಂಗ್ ಮಾವನನ್ನು ಅಸ್ಸಾಂನ ದಿಬ್ರುಘಡ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಪಂಜಾಬ್‌ನಲ್ಲಿ ಇಂಟರ್ನೆಟ್ ಸೇವೆಗಳು ಭಾಗಶಃ ಆರಂಭವಾಗಿವೆ. ಕೆಲವೆಡೆ ಗುರುವಾರ ಮಧ್ಯಾಹ್ನದವರೆಗೂ ಸೇವೆ ಬಂದ್ ಮಾಡಲಾಗಿದೆ.

  • ಖಲಿಸ್ತಾನಿ ನಾಯಕರಿಗೆ ISI ಜೊತೆ ಲಿಂಕ್‌ ಇದೆ – ಪಂಬಾಜ್‌ ಪೊಲೀಸರಿಂದ ಸ್ಫೋಟಕ ಮಾಹಿತಿ

    ಖಲಿಸ್ತಾನಿ ನಾಯಕರಿಗೆ ISI ಜೊತೆ ಲಿಂಕ್‌ ಇದೆ – ಪಂಬಾಜ್‌ ಪೊಲೀಸರಿಂದ ಸ್ಫೋಟಕ ಮಾಹಿತಿ

    ಚಂಡೀಗಢ: ವಾರಿಸ್ ಪಂಜಾಬ್ ದೆ ಮುಖ್ಯಸ್ಥ ಅಮೃತ್‌ ಪಾಲ್‌ ಸಿಂಗ್‌ (Amritpal Singh) ಸೇರಿ ಇತರರು ಪಾಕಿಸ್ತಾನದ ಐಎಸ್‌ಐ (Pakistan ISI) ಜೊತೆಗೆ ಲಿಂಕ್‌ ಹೊಂದಿರುವ ಶಂಕೆಯಿದೆ ಎಂದು ಪಂಜಾಬ್‌ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಅಮೃತ್‌ಪಾಲ್‌ ಸಿಂಗ್‌ನನ್ನ ಬಂಧಿಸುವ ಕಾರ್ಯಾಚರಣೆ 3ನೇ ದಿನಕ್ಕೆ ಕಾಲಿಟ್ಟಿದ್ದು, ಪಂಜಾಬ್‌ ಐಜಿಪಿ ಸುಖಚೈನ್ ಸಿಂಗ್ ಗಿಲ್, ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್‌ ಸರ್ವೀಸಸ್‌ ಇಂಟಲಿಜೆನ್ಸ್‌ (ISI) ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಅನುಮಾನ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಸುಖಚೈನ್ ಸಿಂಗ್ ಗಿಲ್, ಐಎಸ್‌ಐ ಜೊತೆಗಿನ ದೃಷ್ಟಿಕೋನದಿಂದಲೂ ಈ ಪ್ರಕರಣವನ್ನ ತನಿಖೆ ನಡೆಸಲಾಗುತ್ತಿದ್ದು, ಇದುವರೆಗೆ ಕಂಡುಬಂದಿರುವ ಅಂಶಗಳ ಪ್ರಕಾರ ಐಎಸ್‌ಐ ಸಹ ಇದರಲ್ಲಿ ಭಾಗಿಯಾಗಿರುವ ಶಂಕೆಯಿದೆ. ಜೊತೆಗೆ ವಿದೇಶಿ ನಿಧಿ ಬಳಕೆಯಾಗಿರುವ ಬಗ್ಗೆಯೂ ಅನುಮಾನವಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಖಲಿಸ್ತಾನಿ ಹೋರಾಟಗಾರ ಅಮೃತ್‌ಪಾಲ್‌ ಸಿಂಗ್‌ ಪರಾರಿ – ಪಂಜಾಬ್‌ ಹಲವೆಡೆ ಇಂಟರ್‌ನೆಟ್‌ ಸ್ಥಗಿತ

    ಸದ್ಯ ರಾಜ್ಯದಲ್ಲಿ ಪರಿಸ್ಥಿತಿ ಸ್ಥಿರವಾಗಿದೆ. ಶಾಂತಿ, ಸೌಹಾರ್ದತೆಗೆ ಭಂಗ ತರುವ ಪ್ರಯತ್ನ ಮಾಡಿದ್ದ 114 ಜನರನ್ನ ಬಂಧಿಸಲಾಗಿದೆ. ಮೊದಲ ದಿನ 78 ಮಂದಿ, 2ನೇ ದಿನ 34 ಮಂದಿ ಹಾಗೂ 3ನೇ ದಿನ ಇಬ್ಬರನ್ನ ಬಂಧಿಸಿದ್ದು, ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಖಲಿಸ್ತಾನಿ ನಾಯಕರು ಮಾನವ ಬಾಂಬರ್‌ಗಳನ್ನ ರೂಪಿಸುತ್ತಿದ್ದಾರೆ – ಗುಪ್ತಚರ ಇಲಾಖೆ ಮಾಹಿತಿ

    ಗುಪ್ತಚರ ಇಲಾಖೆ ಹೇಳಿದ್ದೇನು?
    ಅಮೃತ್‌ಪಾಲ್‌ ಸಿಂಗ್‌ ವ್ಯಸನಮುಕ್ತ ಕೇಂದ್ರಗಳು ಮತ್ತು ಗುರುದ್ವಾರದಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹ ಮಾಡುತ್ತಿದ್ದಾನೆ. ಅಲ್ಲದೇ ಯುವಕರನ್ನ ಆತ್ಮಾಹುತಿ ದಾಳಿಗೆ ತಯಾರಿಸುತ್ತಿದ್ದಾನೆ ಎಂದು ಗುಪ್ತಚರ ಇಲಾಖೆ ಈಗಾಗಲೇ ಮಾಹಿತಿ ನೀಡಿದೆ. ಈ ಬೆನ್ನಲ್ಲೇ ಭದ್ರತಾ ಪಡೆ ಎಚ್ಚೆತ್ತುಕೊಂಡಿದೆ. ಕಳೆದ ವರ್ಷ ಸಿಂಗ್‌ ದುಬೈನಿಂದ ಬಂದಿದ್ದ ಪಾಕಿಸ್ತಾನದ ಐಎಸ್‌ಐ ಮತ್ತು ಖಲಿಸ್ತಾನ್ ಪರ ಸಹಾನುಭೂತಿ ಹೊಂದಿರುವ ಅಮೃತ್‌ಪಾಲ್‌ ಸಿಂಗ್‌, ಯುವಕರನ್ನ ಮಾನವ ಬಾಂಬರ್‌ಗಳಾಗಲೂ ಮನವೊಲಿಸುವ ಕಾರ್ಯ ಮಾಡುತ್ತಿದ್ದಾನೆ ಎಂದು ಗುಪ್ತಚರ ಇಲಾಖೆ ತಿಳಿಸಿತ್ತು.

  • ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿಗಳ ನಡುವೆ ಘರ್ಷಣೆ – ಜೈಲಿನಲ್ಲೇ ಇಬ್ಬರ ಸಾವು!

    ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿಗಳ ನಡುವೆ ಘರ್ಷಣೆ – ಜೈಲಿನಲ್ಲೇ ಇಬ್ಬರ ಸಾವು!

    ಚಂಡೀಗಢ: ಪಂಜಾಬ್‌ನ ಖ್ಯಾತ ಗಾಯಕ ಹಾಗೂ ರಾಜಕಾರಣಿ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ದುರಾನ್ ಮಂದೀಪ್ ತೂಫಾನ್, ಮನಮೋಹನ್ ಸಿಂಗ್ ಮತ್ತು ಕೇಶವ್ ಅವರ ನಡುವೆ ಘರ್ಷಣೆ ನಡೆದಿದ್ದು, ಪ್ರಮುಖ ಆರೋಪಿಗಳಾದ ಮಂದೀಪದ, ಮನಮೋಹನ್ ಸಿಂಗ್ ಸಾವನ್ನಪ್ಪಿದ್ದಾರೆ.

    sidhu moose wala 3

    ಮೂವರು ಆರೋಪಿಗಳನ್ನು ಪಂಜಾಬ್‌ನ ಗೋಯಿಂದ್ವಾಲ್ ಜೈಲಿನಲ್ಲಿ ಇರಿಸಲಾಗಿದ್ದು, ಮೂವರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಜಗಳದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆರೋಪಿ ಕೇಶವ್‌ನನ್ನ ಪೊಲೀಸರು ಅಮೃತ್‌ಸರದ ಗುರುನಾನಕ್ ದೇವ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಅಪಾರ್ಟ್ಮೆಂಟ್‌ನ 10ನೇ ಮಹಡಿಯಿಂದ ಬಿದ್ದು ಯುವತಿ ಆತ್ಮಹತ್ಯೆ

    ಪೊಲೀಸರ ಪ್ರಕಾರ, ಜೈಲಿನಲ್ಲಿ ಆರೋಪಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಘರ್ಷಣೆಗೆ ಬಳಸಿದ ಹರಿತವಾದ ಆಯುಧಗಳನ್ನು ಆರೋಪಿಗಳು ಜೈಲಿನಲ್ಲಿಯೇ ತಯಾರಿಸಿಕೊಂಡಿದ್ದರು ಎನ್ನಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

    sidhu moose wala 4

    ಏನಿದು ಮೂಸೆವಾಲಾ ಹತ್ಯೆ ಕೇಸ್?
    2022ರ ಮೇ 29ರಂದು ಸಿಧು ಮೂಸೆವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಹತ್ಯೆಗೂ ಹಿಂದಿನ ದಿನ ಮೂಸೆವಾಲಾ ಅವರ ಭದ್ರತೆಯನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿತ್ತು. ಸಿಧು ಅವರೊಂದಿಗೆ ಜೀಪಿನಲ್ಲಿ ಪ್ರಯಾಣಿಸುತ್ತಿದ್ದ ಸೋದರ ಸಂಬಂಧಿ ಹಾಗೂ ಸ್ನೇಹಿತರು ಕೂಡಾ ದಾಳಿಯ ವೇಳೆ ಗಾಯಗೊಂಡಿದ್ದರು. ಇದನ್ನೂ ಓದಿ: ಮನ್ ಕಿ ಬಾತ್‌ನಲ್ಲಿ ರಾಜ್ಯದ ಲಾಲಿಹಾಡು ಪ್ರಸಾರ – ʼಮಲಗು ಕಂದʼ ಹಾಡಿಗೆ ಪ್ರಧಾನಿ ಮೋದಿ ಪ್ರಶಂಸೆ

    sidhu moose wala 1 1

    ಸಿಧು ಮೂಸೆವಾಲಾ ಹತ್ಯೆಯ ಹಿಂದೆ ಗ್ಯಾಂಗ್‌ಸ್ಟರ್ ಲಾರೆನಸ್ ಬಿಶ್ನೋಯಿ ಅವರ ತಂಡದ ಕೈವಾಡವಿದೆ ಎಂದು ಹೇಳಲಾಗಿತ್ತು. ಹತ್ಯೆಯಾದ ಕೆಲವೇ ದಿನಗಳಲ್ಲಿ ಈ ಗ್ಯಾಂಗ್‌ನ ಸದಸ್ಯರಾದ ಶಾರ್ಪ್ ಶೂಟರ್ ಅಂಕಿತ್, ಸಚಿನ್ ಭಿವಾನಿ ಎನ್ನುವ ಪ್ರಮುಖ ಆರೋಪಿಗಳನ್ನು ಮೊದಲು ಬಂಧಿಸಿದ್ದರು. ಆನಂತರ ನಾಲ್ವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು.