Tag: ಪಂಜಾಬ್ ಡಿಜಿಪಿ

  • ಮದ್ಯ ಸೇವಿಸಿ ಗುರುದ್ವಾರ ಪ್ರವೇಶಿಸಿದ ಆರೋಪ- ಪಂಜಾಬ್ ಸಿಎಂ ವಿರುದ್ಧ ದೂರು

    ಮದ್ಯ ಸೇವಿಸಿ ಗುರುದ್ವಾರ ಪ್ರವೇಶಿಸಿದ ಆರೋಪ- ಪಂಜಾಬ್ ಸಿಎಂ ವಿರುದ್ಧ ದೂರು

    ಚಂಡೀಗಢ: ಮದ್ಯ ಸೇವಿಸಿ ಗುರುದ್ವಾರಕ್ಕೆ ಪ್ರವೇಶಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮುಖಂಡ ತಜೀಂದ್ರಸಿಂಗ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ದೂರು ದಾಖಲಿಸಿದ್ದಾರೆ.

    ಅವರು ತಮ್ಮ ದೂರಿನ ಬಗ್ಗೆ ಕ್ರಮ ಕೈಗೊಳ್ಳುವಂತೆ ಪಂಜಾಬ್ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡಿದ್ದಾರೆ. ದೂರಿನ ಸ್ಕ್ರೀನ್‌ಶಾಟ್‌  ಅನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಮಡಿದ್ದಾರೆ. ಭಗವಂತ್ ಮಾನ್ ಅವರಿಗೂ ಟ್ಯಾಗ್ ಮಾಡಿದ್ದು, ನನ್ನ ದೂರಿನ ಬಗ್ಗೆ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇನೆ ಎಂದು ಪಂಜಾಬ್ ಡಿಜಿಪಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಪಂಚರಾಜ್ಯಗಳ ಚುನಾವಣೆ ಸೋಲಿನ ಬಳಿಕ ಎಚ್ಚೆತ್ತ ಕಾಂಗ್ರೆಸ್ – ಗುಜರಾತ್ ಎಲೆಕ್ಷನ್ ಮೇಲೆ ಕಣ್ಣು

    ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯು (SGPC) ಸಹ ಪಂಜಾಬ್ ಸಿಎಂ ಭಗವಂತ್ ಮಾನ್ ಬೈಸಾಖಿ ಆಚರಣೆ ಸಂದರ್ಭದಲ್ಲಿ ತಖ್ತ್ ದಮದಾಮಾ ಸಾಹಿಬ್ ಗುರುದ್ವಾರಕ್ಕೆ ಕುಡಿದ ಸ್ಥಿತಿಯಲ್ಲಿ ಪ್ರವೇಶಿಸಿದ್ದಾರೆ ಎಂದು ಆರೋಪಿಸಿತ್ತು. ಇದಕ್ಕಾಗಿ ಮಾನ್ ಕ್ಷಮೆಯಾಚಿಸಬೇಕು ಎಂದೂ ಸಮಿತಿ ಒತ್ತಾಯಿಸಿತ್ತು.