Tag: ಪಂಜಾಬ್ ಗಡಿ

  • ಅಚಾನಕ್ ಗಡಿದಾಟಿದ BSF ಯೋಧನನ್ನು ಬಂಧಿಸಿದ ಪಾಕ್‌

    ಅಚಾನಕ್ ಗಡಿದಾಟಿದ BSF ಯೋಧನನ್ನು ಬಂಧಿಸಿದ ಪಾಕ್‌

    ಚಂಡೀಗಢ: ಪಂಜಾಬ್‌ನ ಫಿರೋಜ್‌ಪುರ ಸೆಕ್ಟರ್‌ನಲ್ಲಿ ಅಚಾನಕ್ಕಾಗಿ ಗಡಿರೇಖೆ ದಾಟಿದ ಬಿಎಸ್‌ಎಫ್ ಜವಾನ್‌ (BSF Jawan) ಒಬ್ಬರನ್ನ ಪಾಕಿಸ್ತಾನ ರೇಂಜರ್‌ಗಳು (Pakistani Rangers) ಬಂಧಿಸಿದ್ದಾರೆ.

    ಪಿ.ಕೆ ಸಿಂಗ್‌ ಬಂಧಿತ ಬಿಎಸ್‌ಎಫ್‌ ಯೋಧ. ಪಿಕೆ ಸಿಂಗ್ 182ನೇ ಬಿಎಸ್‌ಎಫ್ ಬೆಟಾಲಿಯನ್‌ನ ಕಾನ್‌ಸ್ಟೇಬಲ್ ಅಂತ ತಿಳಿದುಬಂದಿದೆ. ಯೋಧನ ಬಿಡುಗಡೆಗೆ ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಬಿಎಸ್‌ಎಫ್‌ ಹಾಗೂ ಪಾಕ್‌ ರೇಂಜರ್‌ಗಳ ತುರ್ತು ಸಭೆ ಕರೆಯಲಾಗಿದೆ. ಇದನ್ನೂ ಓದಿ: ನೀರು ನಿಲ್ಲಿಸೋದು ಯುದ್ಧಕ್ಕೆ ಆಹ್ವಾನಿಸಿದಂತೆ – ಭಾರತದ ಪ್ರತೀಕಾರ ನಿರ್ಧಾರದಿಂದ ಕೋಪಗೊಂಡ ಪಾಕ್‌

    ಭಾರತದ (India) ಪ್ರತೀಕಾರದ ಎಚ್ಚರಿಕೆ ಬೆನ್ನಲ್ಲೇ ಪಾಕ್‌ಗೆ ಆತಂಕ ಶುರುವಾಗಿದೆ. ಭಾರತದ ದಾಳಿ ಮಾಡಿದರೆ ನಾವೂ ಪ್ರತಿದಾಳಿ ಮಾಡ್ತೇವೆ ಅಂತ ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾನೆ. ಅಲ್ಲದೇ, ಪಹಲ್ಗಾಮ್ ಉಗ್ರದಾಳಿಯಲ್ಲಿ ನಮ್ಮ ಕೈವಾಡ ಇಲ್ಲ. ಆರೋಪಕ್ಕೆ ಸಾಕ್ಷಿ ಕೊಡಿ ಅಂತ ವಿದೇಶಾಂಗ ಸಚಿವ ಹೇಳಿದ್ದಾರೆ. ಆದರೂ, ಭಾರತದಿಂದ ದಾಳಿ ಭೀತಿಯಲ್ಲಿ ಎಲ್‌ಒಸಿ ಬಳಿ ಸೈನಿಕರ ಸಂಖ್ಯೆ ಹೆಚ್ಚಿಸಿಕೊಂಡಿದೆ. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಮೃತಪಟ್ಟ ಕನ್ನಡಿಗರ ಕುಟುಂಬಕ್ಕೆ ಮಂತ್ರಾಲಯದಿಂದ ತಲಾ 1 ಲಕ್ಷ ಪರಿಹಾರ

    ವಿಮಾನಗಳ ಹಾರಾಟ ಸ್ಥಗಿತಗೊಳಿಸಿದೆ. ಸಿಂಧೂ ಜಲ ಒಪ್ಪಂದ ರದ್ದು ಯುದ್ಧಕ್ಕೆ ಸಮ. ನಾವೂ ಪ್ರತೀಕಾರಕ್ಕೆ ಸಿದ್ಧ ಅಂತ ಪಾಕಿಸ್ತಾನ ಹೇಳಿದೆ. ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಲಾಗಿದೆ ಅಂತ ತಿಳಿದು ಬಂದಿದೆ. ವ್ಯಕ್ತಿಯೋರ್ವ ಕೇಕ್ ಒಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ.

    ಪಹಲ್ಗಾಮ್ ಪೈಶಾಚಿಕ ದಾಳಿಯ ಹಿಂದೆ ಪಾಕಿಸ್ಥಾನದ ಕೈವಾಡ ಇದೆ ಅಂತ ಪಾಕ್ ಕ್ರಿಕೆಟಿಗ ದಾನಿಶ್ ಕನೇರಿಯಾ ಟ್ವೀಟ್ ಮಾಡಿದ್ದಾರೆ. ಈ ಮಧ್ಯೆ, ನಾನೊಬ್ಬ ಮುಸ್ಲಿಂ ಆಗಿದ್ದಕ್ಕೆ ನಾಚಿಕೆ ಆಗುತ್ತಿದೆ ಎಂದು ದಾಳಿಯನ್ನು ಬಾಲಿವುಡ್ ಗಾಯಕ ಸಲೀಂ ಮರ್ಚೆಂಟ್ ಖಂಡಿಸಿದ್ದಾರೆ. ಇದನ್ನೂ ಓದಿ: Pahalgam Terrorist Attack | ರಾಜನಾಥ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಶುರು – ರಾಹುಲ್‌, ಖರ್ಗೆ ಭಾಗಿ

  • ಪಂಜಾಬ್ ಗಡಿಯಲ್ಲಿ ಐವರು ನುಸುಳುಕೋರರನ್ನು ಹೊಡೆದುರುಳಿಸಿದ ಸೇನೆ

    ಪಂಜಾಬ್ ಗಡಿಯಲ್ಲಿ ಐವರು ನುಸುಳುಕೋರರನ್ನು ಹೊಡೆದುರುಳಿಸಿದ ಸೇನೆ

    ಚಂಡೀಗಢ: ಪಾಕಿಸ್ತಾನ ಪಂಜಾಬ್ ಗಡಿಯಲ್ಲಿ ಭಾರತಕ್ಕೆ ಅಕ್ರಮವಾಗಿ ಒಳನುಸುಳುತ್ತಿದ್ದ ಐವರು ನುಸುಳುಕೋರರನ್ನು ಭಾರತೀಯ ಸೈನಿಕರು ಹೊಡೆದು ಹಾಕಿದ್ದಾರೆ.

    ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಐದು ಜನ ನುಸುಳುಕೋರರು ಪಂಜಾಬ್ ಗಡಿಯಿಂದ ಭಾರತಕ್ಕೆ ಅಕ್ರಮವಾಗಿ ಬರುತ್ತಿರುವುದನ್ನು ಸೈನಿಕರು ನೋಡಿದ್ದಾರೆ. ಈ ವೇಳೆ ಅವರನ್ನು ತಡೆಯಲು ಹೋದಾಗ ಅವರು ಸೈನಿಕರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಆಗ ಭಾರತೀಯ ಸೈನಿಕರು ಕೂಡ ದಾಳಿ ಮಾಡಿದ್ದು, ಐದು ಜನ ನುಸುಳುಕೋರರನ್ನು ಹೊಡೆದು ಹಾಕಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಭಾರತೀಯ ಸೇನೆಯ ಹಿರಿಯ ಅಧಿಕಾರಿ, ಕಳೆದ ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಐದು ಮಂದಿ ನುಸುಳುಕೋರರನ್ನು ಒಂದೇ ಪ್ರಯತ್ನದಲ್ಲಿ ಭಾರತೀಯ ಸೇನೆ ಹೊಡೆದು ಹಾಕಿದೆ. ಪಾಕಿಸ್ತಾನ ಮತ್ತು ಭಾರತದ ಗಡಿ ಪ್ರದೇಶ ಸುಮಾರು 3,300 ಕಿಮೀ ವಿಸ್ತೀರ್ಣದಲ್ಲಿ ಇದೆ. ಇದರಲ್ಲಿ 553 ಕಿಮೀ ಗಡಿ ಪ್ರದೇಶ ಪಂಜಾಬ್‍ನಲ್ಲಿ ಇದೆ ಎಂದು ಹೇಳಿದ್ದಾರೆ.

    ಇಂದು ಮುಂಜಾನೆ 4.45ರ ಸುಮಾರಿಗೆ ಭಿಖಿವಿಂದ್ ಪಟ್ಟಣ ತರಣ್ ತರಣ್ ಹತ್ತಿರವಿರುವ `ದಾಲ್’ ಗಡಿ ಪೋಸ್ಟ್ ಬಳಿ ನುಸುಳುಕೋರರ ಅನುಮಾನಾಸ್ಪದ ಚಲನೆಯನ್ನು ಭಾರತೀಯ ಸೇನೆಯ 103ನೇ ಬೆಟಾಲಿಯನ್‍ನ ಸೈನಿಕರು ಗಮನಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಹೋದ ಸೈನಿಕರು ಅವರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಈ ವೇಳೆ ನುಸುಳುಕೋರರು ಸೇನೆಯ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಐವರು ನುಸುಳುಕೋರರು ಹತರಾಗಿದ್ದಾರೆ.

    ಶುಕ್ರವಾರ ಮಧ್ಯೆರಾತ್ರಿಯಿಂದಲೇ ಗಡಿ ಪ್ರದೇಶದಲ್ಲಿ ಕೆಲವರು ಅನುಮಾನಸ್ಪದವಾಗಿ ಓಡಾಡುತ್ತಿದ್ದರು. ಇದರಿಂದ ಸೇನೆ ಗಡಿ ಪ್ರದೇಶದ ಮೇಲೆ ಕಣ್ಣಿಟ್ಟಿತ್ತು. ಹೀಗಿರುವಾಗ ಮುಂಜಾನೆ ಬಂದೂಕುಗಳನ್ನು ಹಿಡಿದುಕೊಂಡು ಹುಲ್ಲಿನ ನಡುವೆ ಅವಿತುಕೊಂಡು ನುಸುಳುಕೋರರು ಬರುವುದನ್ನು ಸೇನೆ ಗಮನಿಸಿದೆ. ಈ ವೇಳೆ ಗುಂಡಿನ ದಾಳಿ ಮಾಡಿ ನುಸುಳುಕೋರರನ್ನು ಹೊಡೆದು ಹಾಕಿದೆ. ನುಸುಳುಕೋರರು ತಂದಿರುವ ಮದ್ದುಗುಂಡುಗಳಿಗಾಗಿ ಸೇನೆ ಹುಡುಕಾಟ ಮುಂದುವರಿಸಿದೆ.