ಚಂಡೀಗಢ: ಲುಧಿಯಾನದಿಂದ ದೆಹಲಿಗೆ ಹೋಗುತ್ತಿದ್ದ ಗರೀಬ್ ರಥ ಎಕ್ಸ್‌ಪ್ರೆಸ್ ರೈಲಿನಲ್ಲಿ (ರೈಲು ಸಂಖ್ಯೆ 12204) (Garib Rath Express) ಏಕಾಏಕಿ ಬೆಂಕಿ (fire) ಕಾಣಿಸಿಕೊಂಡಿದ್ದು, ಎಸಿ ಕೋಚ್‌ಗಳು ಹೊತ್ತಿಉರಿದ ಪಂಜಾಬ್‌ನಲ್ಲಿ ನಡೆದಿದೆ. ಓರ್ವ ಮಹಿಳಾ ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿದೆ, ಗಾಯಾಳು ಮಹಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಅಧಿಕಾರಿಯ ಪ್ರಕಾರ, ಬೆಂಕಿ ಶಾರ್ಟ್ ಸರ್ಕ್ಯೂಟ್ ನಿಂದ ಉಂಟಾಗಿದೆ. ಪಂಜಾಬ್‌ನ ಸಿರ್ಹಿಂದ್ ರೈಲು ನಿಲ್ದಾಣದಲ್ಲಿ ಬೆಳಗ್ಗೆ 7:30ರ ಸುಮಾರಿಗೆ ರೈಲು ಸಂಖ್ಯೆ 12204 ಅಮೃತಸರ-ಸಹರ್ಸಾ ಗರೀಬ್ ರಥ ಎಕ್ಸ್‌ಪ್ರೆಸ್‌ನ ಕೋಚ್‌ಗೆ ಬೆಂಕಿ ಹೊತ್ತಿಕೊಂಡಿದೆ. ರೈಲಿನ 2-3, ಜಿ -19 ಎಸಿ ಕೋಚ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಪ್ರಯಾಣಿಕರೊಬ್ಬರು ಕೂಡಲೇ ಸರಪಳಿ ಎಳೆದು ರೈಲನ್ನು ನಿಲ್ಲಿಸಿದರು. ತಕ್ಷಣ, ಪೈಲಟ್ (ಚಾಲಕ) ಎಲ್ಲಾ ಪ್ರಯಾಣಿಕರನ್ನು ರೈಲಿನಿಂದ ಇಳಿಯುವಂತೆ ಕೇಳಿಕೊಂಡರು ಮತ್ತು ಬೆಂಕಿಯ ಬಗ್ಗೆ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು. ಸದ್ಯ ಕೋಚ್‌ನಲ್ಲಿದ್ದ ಪ್ರಯಾಣಿಕರನ್ನ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣ ರೈಲ್ವೆ ನಿಲ್ದಾಣದ ಅಧಿಕಾರಿಗಳು, ನೌಕರರು, ಜಿಆರ್‌ಪಿ, ಆರ್‌ಪಿಎಫ್ ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ತಲುಪಿದವು. ಅಗ್ನಿಶಾಮಕ ದಳದವರನ್ನೂ ಸಹ ಘಟನಾ ಸ್ಥಳಕ್ಕೆ ತಂದು ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.
ಚಂಡೀಗಢ: ಪಂಜಾಬ್‌ನ ರೋಪರ್ ರೇಂಜ್‌ನಲ್ಲಿ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಆಗಿ ನೇಮಕಗೊಂಡ ಹಿರಿಯ ಐಪಿಎಸ್ ಅಧಿಕಾರಿಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ. ಐಪಿಎಸ್ ಅಧಿಕಾರಿ ಮನೆಯಿಂದ 5 ಕೋಟಿ ರೂ. ನಗದು, ಮರ್ಸಿಡಿಸ್, ಆಡಿ ಕಾರು ವಶಕ್ಕೆ ಪಡೆದಿದ್ದಾರೆ.
8 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಪ್ರಕರಣ ತನಿಖೆ ವೇಳೆ ಸಿಬಿಐಗೆ ಶಾಕ್ ಎದುರಾಗಿದೆ. ಐಪಿಎಸ್ ಅಧಿಕಾರಿ ಮನೆಯಲ್ಲಿ 5 ಕೋಟಿ ರೂ. ನಗದು, ಐಷಾರಾಮಿ ವಾಹನಗಳು, ಆಭರಣಗಳು ಮತ್ತು ಉನ್ನತ ದರ್ಜೆಯ ವಾಚ್‌ಗಳು ಸೇರಿದಂತೆ ಅಪಾರ ಸಂಪತ್ತು ಪತ್ತೆಯಾಗಿದೆ.
2009 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಡಿಐಜಿ ಹರ್‌ಚರಣ್ ಸಿಂಗ್ ಭುಲ್ಲರ್ ಮತ್ತು ಅವರ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ ಕೃಷ್ಣ ಎಂಬ ವ್ಯಕ್ತಿಯನ್ನು ಬಂಧಿಸಲಾಯಿತು. ಸ್ಥಳೀಯ ಉದ್ಯಮಿಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಇತ್ಯರ್ಥಗೊಳಿಸಲು, ಹರ್‌ಚರಣ್ ಈ ಮಧ್ಯವರ್ತಿಯ ಮೂಲಕ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಎಂದು ಸಿಬಿಐ ತಿಳಿಸಿದೆ.
ಪಂಜಾಬ್‌ನ ಫತೇಘರ್ ಸಾಹಿಬ್‌ನಲ್ಲಿರುವ ಆಕಾಶ್ ಬಟ್ಟಾ ಎಂಬ ವ್ಯಾಪಾರಿ ಐದು ದಿನಗಳ ಹಿಂದೆ ಸಲ್ಲಿಸಿದ ಲಿಖಿತ ದೂರಿನ ಮೇರೆಗೆ ಸಿಬಿಐ ಈ ಪ್ರಕರಣ ದಾಖಲಿಸಿತ್ತು. ಡಿಐಜಿ ಭುಲ್ಲರ್ ಅವರು ಆರಂಭಿಕ ಲಂಚವಾಗಿ 8 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ಪ್ರಕರಣ ಇತ್ಯರ್ಥಗೊಳಿಸಿದ ನಂತರ ಉಳಿದ ಹಣ ನೀಡದಿದ್ದರೆ ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದರೆಂದು ದೂರಲಾಗಿತ್ತು.
ಸಿಬಿಐನ ಎಫ್‌ಐಆರ್ ಪ್ರಕಾರ, ಭುಲ್ಲರ್ ತನ್ನ ಸಹಚರ ಕೃಷ್ಣ ಮೂಲಕ ಲಂಚಕ್ಕೆ ಒತ್ತಾಯಿಸಿದ್ದಾರೆ. ಕೃಷ್ಣ ಪದೇ ಪದೇ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ.
ಪಂಜಾಬ್ (Punjab) ರಾಜ್ಯವು ಬಿಹಾರ, ಉತ್ತರ ಪ್ರದೇಶ, ಒಡಿಶಾ ಮತ್ತು ಜಾರ್ಖಂಡ್‌ನಿಂದ ಬರುವ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರ ಮೇಲೆ ಅವಲಂಬಿತವಾಗಿದೆ. ಏಕೆಂದರೆ ಇಲ್ಲಿ ಕೈಗಾರಿಕೆ, ಕೃಷಿ ಚಟುವಟಿಕೆಗಳು ಹೆಚ್ಚಾಗಿರುವುದರಿಂದ ವಲಸೆ ಕಾರ್ಮಿಕರ ಅವಶ್ಯಕತೆ ಹೆಚ್ಚಿದೆ. ಆದರೆ ಇದೀಗ ಇದ್ದಕ್ಕಿದ್ದಂತೆ ಪಂಜಾಬ್‌ನಲ್ಲಿ ವಲಸೆ ಕಾರ್ಮಿಕರ ಕಾಯ್ದೆ (Inter-State Migrant Workmen Act)ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.
ಹೌದು, ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಸೆಪ್ಟೆಂಬರ್ 9 ರಂದು 5 ವರ್ಷದ ಬಾಲಕನ ಮೃತದೇಹವು ಪತ್ತೆಯಾಗಿತ್ತು. ಬಾಲಕನ ದೇಹದ ಮೇಲೆ ಹಲವು ಗಾಯಗಳ ಗುರುತುಗಳಿದ್ದುದ್ದರಿಂದ ಇದನ್ನು ಕೊಲೆ ಎಂದು ಶಂಕಿಸಲಾಗಿತ್ತು. ಬಳಿಕ ಪೊಲೀಸರು ಹೋಶಿಯಾರ್‌ಪುರದ ಸಬ್ಜಿ ಮಂಡಿ ಪ್ರದೇಶ ಹಾಗೂ ಉತ್ತರ ಪ್ರದೇಶದಿಂದ ಬಂದ ವಲಸೆ ಕಾರ್ಮಿಕನನ್ನು ಈ ಪ್ರಕರಣದ ಆರೋಪಿಗಳೆಂದು ಬಂಧಿಸಿದರು. ಇದಾದ ಬಳಿಕ ತರುವಾಯ ಪಂಜಾಬ್ ವಲಸೆ ಕಾರ್ಮಿಕರ ವಿರುದ್ಧ ಭಾರೀ ಆಕ್ರೋಶದ ವ್ಯಕ್ತವಾಯಿತು. ಅಲ್ಲದೇ ವಲಸೆ ಕಾರ್ಮಿಕರು ಹಳ್ಳಿಗಳಲ್ಲಿ ಉಳಿಯಲು ಅನುಮತಿಯಿಲ್ಲ ಎಂದು ಅಲ್ಲಿನ ಪಂಚಾಯತ್‌ಗಳು ತೀರ್ಮಾನ ಕೈಗೊಂಡಿದೆ. ಹಾಗೆಯೇ ರೈತ ಸಂಘಗಳು, ಕೃಷಿ ಕಾರ್ಮಿಕ ಸಂಘಟನೆಗಳು ಮತ್ತು ಕೈಗಾರಿಕಾ ಸಂಸ್ಥೆಗಳು ಕೂಡ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದವು. ಅಲ್ಲದೇ ಈಗಾಗಲೇ ಅಸ್ತಿತ್ವದಲ್ಲಿರುವ ಪಂಜಾಬ್ ಅಂತರ-ರಾಜ್ಯ ವಲಸೆ ಕಾರ್ಮಿಕರ ಕಾಯ್ದೆ, 1979 ಅನ್ನು ಗಂಭೀರವಾಗಿ ಜಾರಿಗೆ ತರುವಂತೆ ಪಂಜಾಬ್ ಸರ್ಕಾರವನ್ನು ಒತ್ತಾಯಿಸಿದೆ.
ಏನಿದು ಅಂತರರಾಜ್ಯ ವಲಸೆ ಕಾರ್ಮಿಕರ ಕಾಯ್ದೆ?
ಅಂತರರಾಜ್ಯ ವಲಸೆ ಕಾರ್ಮಿಕರ (ಉದ್ಯೋಗ ನಿಯಂತ್ರಣ ಮತ್ತು ಸೇವಾ ಪರಿಸ್ಥಿತಿಗಳು) ಕಾಯ್ದೆ, 1979 ಸಂಸತ್ತು ಜಾರಿಗೆ ತಂದ ಕೇಂದ್ರ ಶಾಸನವಾಗಿದ್ದು, ಸಾಮಾನ್ಯವಾಗಿ ಗುತ್ತಿಗೆದಾರರ ಮೂಲಕ ಉದ್ಯೋಗಕ್ಕಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋಗುವ ಕಾರ್ಮಿಕರಿಗಾಗಿ ಮಾಡಲಾಗಿದೆ. ಇದನ್ನು ಅಕ್ಟೋಬರ್ 2, 1980 ರಂದು ರಾಷ್ಟ್ರವ್ಯಾಪಿ ಜಾರಿಗೊಳಿಸಲು ಸೂಚಿಸಲಾಯಿತು.
ಈ ಕಾಯ್ದೆಯ ಉದ್ದೇಶವೆಂದರೆ ನೇಮಕಾತಿಯನ್ನು ನಿಯಂತ್ರಿಸುವುದು, ಸಂಸ್ಥೆಗಳು ಮತ್ತು ಗುತ್ತಿಗೆದಾರರ ನೋಂದಣಿಯನ್ನು ಖಚಿತಪಡಿಸುವುದಾಗಿದೆ. ಕಾರ್ಮಿಕರಿಗೆ ಸಮಾನ ವೇತನ, ಸ್ಥಳಾಂತರ ಭತ್ಯೆ, ಪ್ರಯಾಣ ಭತ್ಯೆ, ವಸತಿ, ವೈದ್ಯಕೀಯ ಸೌಲಭ್ಯಗಳು ಮತ್ತು ರಕ್ಷಣಾ ಉಡುಪುಗಳಂತಹ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ಖಾತರಿಪಡಿಸುವುದಾಗಿದೆ.
ಪಂಜಾಬ್‌ಗೆ ಕಾಯ್ದೆ ಏಕೆ ಬೇಕು?
ಪಂಜಾಬ್‌ಗೆ ಬಿಹಾರ, ಉತ್ತರ ಪ್ರದೇಶ, ಒಡಿಶಾ ಮತ್ತು ಜಾರ್ಖಂಡ್‌ನಿಂದ ಬರುವ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರ ಆಗಮಿಸುತ್ತಾರೆ. 1970 ರ ದಶಕದ ಆರಂಭದಲ್ಲಿ ಹಸಿರು ಕ್ರಾಂತಿಯ ಆರಂಭದಿಂದ ವಲಸೆ ಕಾರ್ಮಿಕರ ಬರುವಿಕೆ ಹೆಚ್ಚಾಯಿತು. ಆರಂಭದಲ್ಲಿ ಭತ್ತ ಬಿತ್ತನೆಗಾಗಿ ಗ್ರಾಮೀಣ ಪಂಜಾಬ್‌ಗೆ ಬಂದ ನಂತರ, ವಲಸಿಗರು ಕ್ರಮೇಣ ಕಾರ್ಖಾನೆಗಳು ಮತ್ತು ಇತರ ಕೆಲಸ ಮಾಡಲು ಪ್ರಾರಂಭಿಸಿದರು.
2016 ರಲ್ಲಿ ಎಸ್‌ಎಡಿ-ಬಿಜೆಪಿ ಸರ್ಕಾರದ ಪರ್ವಾಸಿ ವಿಂಗ್ ನಡೆಸಿದ ಸಮೀಕ್ಷೆಯು ಪಂಜಾಬ್‌ನ ವಲಸೆ ಕಾರ್ಮಿಕರ ಸಂಖ್ಯೆಯನ್ನು 39 ಲಕ್ಷ ಎಂದು ಅಂದಾಜಿಸಿತ್ತು. ಲುಧಿಯಾನದಲ್ಲಿಯೇ ಅತ್ಯಧಿಕ ಸಂಖ್ಯೆಯಲ್ಲಿ ವಲಸೆ ಕಾರ್ಮಿಕರಿದ್ದಾರೆ ಎಂದು ತಿಳಿದುಬಂದಿತ್ತು. ನಂತರ ಜಲಂಧರ್, ಅಮೃತಸರ, ಮೊಹಾಲಿ, ಬಟಿಂಡಾ, ಫಾಗ್ವಾರಾ ಮತ್ತು ಹೋಶಿಯಾರ್‌ಪುರ್‌ನಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದು ಪತ್ತೆಯಾಗಿತ್ತು.
2020 ರಲ್ಲಿ ಕೋವಿಡ್ -19 ಲಾಕ್‌ಡೌನ್ ಸಮಯದಲ್ಲಿ, 18 ಲಕ್ಷ ವಲಸಿಗರು ತಮ್ಮ ಮನೆಗಳಿಗೆ ಮರಳಲು ಪಂಜಾಬ್ ಸರ್ಕಾರದಲ್ಲಿ ಸೂಚಿಸಿತ್ತು. ಇವರಲ್ಲಿ ಸುಮಾರು 10 ಲಕ್ಷ ಜನರು ಉತ್ತರ ಪ್ರದೇಶದವರು ಮತ್ತು 6 ಲಕ್ಷ ಜನರು ಬಿಹಾರದವರು ಎಂದು ಪಟ್ಟಿ ಮಾಡಿತ್ತು.
ಈ ಕಾಯ್ದೆ ವಲಸೆ ಕಾರ್ಮಿಕರಿಗೆ ಹೇಗೆ ಸಹಾಯ ಮಾಡುತ್ತದೆ?
ಕಾರ್ಮಿಕರನ್ನು ಶೋಷಣೆ ಮತ್ತು ಕಡಿಮೆ ವೇತನದಿಂದ ರಕ್ಷಿಸಲು ಮತ್ತು ದೊಡ್ಡ ಪ್ರಮಾಣದ ಕಾರ್ಮಿಕ ವಲಸೆಯ ಮೇಲೆ ಹೊಣೆಗಾರಿಕೆ ಮತ್ತು ಕಾನೂನು ಮೇಲ್ವಿಚಾರಣೆಯನ್ನು ಕಾಪಾಡಿಕೊಳ್ಳಲು ಈ ಕಾಯ್ದೆ ಅಗತ್ಯವಾಗಿತ್ತು.
ಪಂಜಾಬ್‌ನಲ್ಲಿ ಏಪ್ರಿಲ್ 1983 ರಲ್ಲಿ ಅಂತರರಾಜ್ಯ ವಲಸೆ ಕಾರ್ಮಿಕರ ಕಾಯ್ದೆ ಜಾರಿಗೆ ಬಂದಿತು. ಇದು ವಲಸೆ ಕಾರ್ಮಿಕರ ನೋಂದಣಿ, ದಾಖಲೆ ನಿರ್ವಹಣೆ ಮತ್ತು ರಾಜ್ಯದೊಳಗಿನ ಗುತ್ತಿಗೆದಾರರು ಮತ್ತು ಉದ್ಯೋಗದಾತರ ಕರ್ತವ್ಯಗಳಂತಹ ಪ್ರಾಯೋಗಿಕ ಕಾರ್ಯವಿಧಾನಗಳನ್ನು ಒಳಗೊಂಡಿದೆ.
ಕಾರ್ಯ ನಿರ್ವಹಿಸುವ ವಿಧಾನ
ಐದು ಅಥವಾ ಹೆಚ್ಚಿನ ಅಂತರರಾಜ್ಯ ವಲಸೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಯಾವುದೇ ಸಂಸ್ಥೆ ಅಥವಾ ಗುತ್ತಿಗೆದಾರರು ಪಂಜಾಬ್ ನಿಯಮಗಳ ಅಡಿಯಲ್ಲಿ ನೇಮಕಗೊಂಡ ನೋಂದಣಿ/ಪರವಾನಗಿ ಅಧಿಕಾರಿಯೊಂದಿಗೆ ನೋಂದಾಯಿಸಿಕೊಳ್ಳಬೇಕು. ನೋಂದಣಿ ಮತ್ತು ಪರವಾನಗಿಯನ್ನು ಇ-ಲೇಬರ್ ಪಂಜಾಬ್ ಪೋರ್ಟಲ್ ಮೂಲಕ ನಡೆಸಲಾಗುತ್ತದೆ. ಅಲ್ಲಿ ಸಂಸ್ಥೆಯ ಹೆಸರು ಮತ್ತು ವಿಳಾಸ, ಕಾರ್ಮಿಕರ ಸಂಖ್ಯೆ, ಕೆಲಸದ ಸ್ವರೂಪ ಮತ್ತು ಗುತ್ತಿಗೆದಾರರ ವಿವರಗಳಂತಹ ವಿವರಗಳನ್ನು ಸಲ್ಲಿಸಬೇಕು.
ಗುತ್ತಿಗೆದಾರರು ಹಿಂದಿನ ಯಾವುದೇ ಅಪರಾಧ ನಿರ್ಣಯಗಳು, ಭದ್ರತಾ ಠೇವಣಿಗಳು ಮತ್ತು ಕಾರ್ಮಿಕ ಕಾನೂನುಗಳ ಬಗ್ಗೆ ಮಾಹಿತಿಯನ್ನು ಒದಗಿಸಬೇಕಾಗುತ್ತದೆ. ಕೆಲಸ ಮಾಡುತ್ತಿರುವ ಕಾರ್ಮಿಕರ ಸಂಖ್ಯೆಯನ್ನು ಆಧರಿಸಿ ನಾಮಮಾತ್ರ ಶುಲ್ಕವನ್ನು ವಿಧಿಸಲಾಗುತ್ತದೆ. ಪರವಾನಿಗೆ ಪಡೆದವರು ರಾಜ್ಯದಲ್ಲಿ ಒಂದು ವರ್ಷ ಕೆಲಸ ಮಾಡಲು ಮಾನ್ಯತೆ ಪಡೆದಿರುತ್ತಾರೆ. ಅವಧಿ ಮುಗಿದ ನಂತರ ಪುನರ್ ನವೀಕರಣದ ಅಗತ್ಯವಿರುತ್ತದೆ.
ಈ ಕಾಯ್ದೆಯು ರಾಜ್ಯದಲ್ಲಿ ವಲಸೆ ಕಾರ್ಮಿಕ ವಿರೋಧಿ ನಡೆಗೆ ಹಾಗೂ ವಲಸೆ ಕಾರ್ಮಿಕರ ರಕ್ಷಣೆಗೆ ಹೆಚ್ಚು ಸಹಾಯಕವಾಗಿದೆ. ಈ ಹಿಂದೆಯೇ ಈ ಕಾಯ್ದೆ ಪಂಜಾಬ್‌ನಲ್ಲಿ ಜಾರಿಯಲ್ಲಿದ್ದುದ್ದರಿಂದ, ಇದೀಗ ಕಾಯ್ದೆಯಲ್ಲಿನ ನಿಯಮಗಳನ್ನು ಇನ್ನಷ್ಟು ಕಠಿಣಗೊಳಿಸುವಂತೆ ಅಲ್ಲಿ ಜನರು ಸರ್ಕಾರಕ್ಕೆ ಆಗ್ರಹಿಸುತ್ತಿದ್ದಾರೆ.
ಚಂಡೀಗಢ: 75 ವರ್ಷದ ಅನಿವಾಸಿ ಭಾರತೀಯನನ್ನು ಮದುವೆಯಾಗಲು ಪಂಜಾಬ್‌ಗೆ ಬಂದಿದ್ದ 71 ವರ್ಷದ ಅಮೆರಿಕ ಪ್ರಜೆ ಮಹಿಳೆಯನ್ನು ಹತ್ಯೆ ಮಾಡಲಾಗಿದೆ.
ಜುಲೈನಲ್ಲಿ ಘಟನೆ ನಡೆದಿದೆ. ಮಹಿಳೆಯ ನಾಪತ್ತೆಗೆ ಸಂಬಂಧಿಸಿದಂತೆ ಲುಧಿಯಾನ ಪೊಲೀಸರು ಎಫ್‌ಐಆರ್ ದಾಖಲಿಸಿದ ನಂತರ ಇತ್ತೀಚೆಗೆ ಬೆಳಕಿಗೆ ಬಂದಿದೆ. ರೂಪಿಂದರ್ ಕೌರ್ ಪಂಧೇರ್ ಇಂಗ್ಲೆಂಡ್‌ನವರು. ಚರಣ್‌ಜಿತ್ ಸಿಂಗ್ ಗ್ರೆವಾಲ್ ಅವರ ಆಹ್ವಾನದ ಮೇರೆಗೆ ಭಾರತಕ್ಕೆ ಪ್ರಯಾಣ ಬೆಳೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 24 ರಂದು ಪಂಧೇರ್ ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಇದು ಅವರ ಸಹೋದರಿ ಕಮಲ್ ಕೌರ್ ಖೈರಾರಲ್ಲಿ ಅನುಮಾನ ಮೂಡಿಸಿತ್ತು. ಜುಲೈ 28 ರ ಹೊತ್ತಿಗೆ, ಖೈರಾ ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದರು. ಸ್ಥಳೀಯ ಪೊಲೀಸರು ಈ ವಿಷಯವನ್ನು ಕೈಗೆತ್ತಿಕೊಳ್ಳುವಂತೆ ಒತ್ತಡ ಹೇರಿದರು.
ಕಳೆದ ವಾರವಷ್ಟೇ ಖೈರಾ ಕುಟುಂಬಕ್ಕೆ ಆಕೆಯ ಸಾವಿನ ಸುದ್ದಿ ತಿಳಿಯಿತು. ಅಮೆರಿಕ ಪ್ರಜೆಯ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಮಲ್ಹಾ ಪಟ್ಟಿಯ ಸುಖ್‌ಜೀತ್ ಸಿಂಗ್ ಸೋನು ಎಂಬಾತನನ್ನು ಬಂಧಿಸಿದ್ದಾರೆ. ಪಂಧೇರ್ ಅವರನ್ನು ಅವರ ಮನೆಯಲ್ಲಿ ಕೊಂದು ಶವವನ್ನು ಅಂಗಡಿ ಕೋಣೆಯಲ್ಲಿ ಸುಟ್ಟುಹಾಕಿದ್ದಾಗಿ ಸೋನು ಒಪ್ಪಿಕೊಂಡಿದ್ದಾನೆ.
ಪಂಧೇರ್ ಅವರನ್ನು ಕೊಲ್ಲಲು 50 ಲಕ್ಷ ರೂ. ನೀಡುವುದಾಗಿ ಗ್ರೇವಾಲ್ ಭರವಸೆ ನೀಡಿದ್ದರು. ಅವರ ಸೂಚನೆಯ ಮೇರೆಗೆ ಸೋನು ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪಂಧೇರ್ ಕೊಲೆಗೆ ಹಣಕಾಸಿನ ಉದ್ದೇಶವಿತ್ತು. ಗ್ರೇವಾಲ್ ಭೇಟಿ ನೀಡುವ ಮೊದಲು ಪಂಧೇರ್ ಸಾಕಷ್ಟು ಹಣ ವರ್ಗಾಯಿಸಿದ್ದರು.
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಗ್ರೇವಾಲ್‌ನನ್ನು ಶಂಕಿತ ಆರೋಪಿ ಎಂದು ಹೆಸರಿಸಲಾಗಿದೆ ಎಂದು ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ (ಲುಧಿಯಾನ ಪೊಲೀಸ್ ರೇಂಜ್) ಸತೀಂದರ್ ಸಿಂಗ್ ದೃಢಪಡಿಸಿದ್ದಾರೆ.
ಚಂಡೀಗಢ: ಪಂಜಾಬ್‌ನ (Punjab) ಪ್ರವಾಹ ಪೀಡಿತ ಪ್ರದೇಶಗಳಿಗೆ ಇಂದು (ಸೆ.15) ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಭೇಟಿ ನೀಡಿದರು.
ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ನಿರಂತರ ಮಳೆಯಿಂದಾಗಿ ಪಂಜಾಬ್‌ನ ಹಲವು ಪ್ರದೇಶಗಳು ತೀವ್ರ ಹಾನಿಗೊಳಗಾಗಿವೆ. ಅಮೃತಸರಕ್ಕೆ ಆಗಮಿಸಿದ ಅವರು, ಮೊದಲು ಘೋನೆವಾಲ್ ಗ್ರಾಮಕ್ಕೆ ತೆರಳಿ, ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆ ನಡೆಸಿದರು. ಇದೇ ವೇಳೆ ಅಲ್ಲಿನ ಸ್ಥಳೀಯರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದರು.ಇದನ್ನೂ ಓದಿ: ಪ್ರವಾಹ ಪೀಡಿತ ಹಿಮಾಚಲ ಪ್ರದೇಶಕ್ಕೆ ಮೋದಿ ಭೇಟಿ – ವೈಮಾನಿಕ ಸಮೀಕ್ಷೆ, ಪರಿಸ್ಥಿತಿ ಅವಲೋಕನ
ಇನ್ನೂ ರಾಹುಲ್ ಗಾಂಧಿ ಅವರು ಅಮೃತಸರದ ರಾಮದಾಸ್‌ನಲ್ಲಿರುವ ಐತಿಹಾಸಿಕ ಗುರುದ್ವಾರ ಬಾಬಾ ಬುದ್ಧ ಸಾಹಿಬ್‌ನಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಬಳಿಕ ಗುರುದಾಸ್ಪುರ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಇದೇ ವೇಳೆ ಅಮೃತಸರದ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಪಂಜಾಬ್ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಜ್ವಾ, ಅಮೃತಸರ ಸಂಸದ ಗುರ್ಜೀತ್ ಸಿಂಗ್ ಔಜ್ಲಾ ಮತ್ತು ಪಕ್ಷದ ಇತರ ನಾಯಕರಿದ್ದರು.
ಇತ್ತೀಚಿಗೆ ಸೆ.9ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರವಾಹ ಪೀಡಿತ ಪಂಜಾಬ್‌ಗೆ ಭೇಟಿ ನೀಡಿದ್ದರು. ಈ ವೇಳೆ 1,600 ಕೋಟಿ ರೂ. ಆರ್ಥಿಕ ಸಹಾಯವನ್ನು ಘೋಷಿಸಿದ್ದರು.
ಧಾರಾಕಾರ ಮಳೆಯಿಂದಾಗಿ ಪಂಜಾಬ್ ಭೀಕರ ಪ್ರವಾಹವನ್ನು ಎದುರಿಸಿದ್ದು, ಪಂಜಾಬ್‌ನ 14 ಜಿಲ್ಲೆಗಳಲ್ಲಿ ತೀವ್ರಹಾನಿಯನ್ನುಂಟು ಮಾಡಿದೆ. ಈವರೆಗೂ 45ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ಸುಮಾರು 2,000 ಗ್ರಾಮಗಳು ಮುಳುಗಡೆಯಾಗಿವೆ. ಇನ್ನೂ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯದಲ್ಲಿ ನಿರಂತರ ಮಳೆಯಿಂದ ಉಂಟಾದ ಹಠಾತ್ ಪ್ರವಾಹ ಹಾಗೂ ಭೂಕುಸಿತದಿಂದಾಗಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ.ಇದನ್ನೂ ಓದಿ: ಜಿಎಸ್‍ಟಿ ಬಗ್ಗೆ ಅರಿವು ಮೂಡಿಸಲು ಸಮ್ಮೇಳನ ಆಯೋಜಿಸಿ – ಎನ್‍ಡಿಎ ಸಂಸದರಿಗೆ ಮೋದಿ ಸೂಚನೆ
ಮಂಜುನಾಥ್ ಅವರು ಕುಟುಂಬ ಸಮೇತರಾಗಿ ಸೇನಾ ವಸತಿ ಗೃಹದಲ್ಲೇ ವಾಸವಾಗಿದ್ದರು. ಇದೀಗ ಮಂಜುನಾಥ್ ಅವರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಸ್ವಗ್ರಾಮ ಹಿರೇಕೊಪ್ಪನಲ್ಲೂ ನೀರವ ಮೌನ ಆವರಿಸಿದೆ. ಮಂಜುನಾಥ್ ಅವರ ಪಾರ್ಥಿವ ಶರೀರ ಬುಧವಾರ ಸ್ವಗ್ರಾಮಕ್ಕೆ ಆಗಮಿಸಲಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಶಿಮ್ಲಾ: ಪ್ರವಾಹ (Flood) ಮತ್ತು ಭೂಕುಸಿತಗಳಿಂದ (Landslide) ಉಂಟಾದ ಹಾನಿಯನ್ನು ಪರಿಶೀಲಿಸುವ ಸಲುವಾಗಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಹಿಮಾಚಲ ಪ್ರದೇಶಕ್ಕೆ (Himachal Pradesh) ಭೇಟಿ ನೀಡಿದರು. ಕಾಂಗ್ರಾ ಜಿಲ್ಲೆಯ ಗಗ್ಗಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿಯನ್ನು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಹಾಗೂ ಅಧಿಕಾರಿಗಳು ಬರಮಾಡಿಕೊಂಡರು.
हवाई सर्वेक्षण के जरिए हिमाचल प्रदेश में बाढ़ और लैंडस्लाइड की स्थिति का जायजा लिया। इस कठिन समय में हम प्रदेश के अपने भाई-बहनों के साथ पूरी मजबूती से खड़े हैं। इसके साथ ही प्रभावित लोगों की मदद के लिए कोई कोर-कसर नहीं छोड़ रहे हैं। pic.twitter.com/PS0klVwo5c
ವಿಮಾನ ನಿಲ್ದಾಣದಲ್ಲಿ ಇಳಿಯುವ ಮೊದಲು ಪ್ರಧಾನಿ ಮೋದಿ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ, ಮನೆಗಳು, ರಸ್ತೆಗಳು ಮತ್ತು ಮೂಲಸೌಕರ್ಯಗಳಿಗೆ ಆಗಿರುವ ವ್ಯಾಪಕ ಹಾನಿಯನ್ನು ಅವಲೋಕಿಸಿದರು. ಬಳಿಕ ಪ್ರವಾಹದಿಂದ ಹಾನಿಗೊಳಗಾದ ನಿವಾಸಿಗಳೊಂದಿಗೆ ಸಂವಹನ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಇದನ್ನೂ ಓದಿ: ಭದ್ರಾವತಿಯಲ್ಲಿ ಪಾಕ್ ಪರ ಘೋಷಣೆ; 12 ಸೆಕೆಂಡ್ ವೀಡಿಯೋ ಪರಿಶೀಲಿಸಿ ಕ್ರಮ: ಮಧು ಬಂಗಾರಪ್ಪ
ತಮ್ಮ ಭೇಟಿಯ ಸಮಯದಲ್ಲಿ ಮೋದಿ ರಾಜ್ಯಾದ್ಯಂತ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಸಿಬ್ಬಂದಿಯನ್ನು ಭೇಟಿಯಾದರು. ಇದನ್ನೂ ಓದಿ: ಇಂದು ಉಪರಾಷ್ಟ್ರಪತಿ ಚುನಾವಣೆ – ಸಂಜೆ ಫಲಿತಾಂಶ ಪ್ರಕಟ
हिमाचल प्रदेश में भारी बाढ़ और लैंडस्लाइड से प्रभावित कुछ लोगों से बातचीत की। उनकी पीड़ा के साथ ही त्रासदी से हुआ नुकसान मन को व्यथित करने वाला है। खराब मौसम का संकट झेल रहे हर व्यक्ति तक राहत और सहायता पहुंचे, इसके लिए हम पूरी तरह से प्रतिबद्ध हैं। pic.twitter.com/KfpyriuLwq
ಮಧ್ಯಾಹ್ನ 1:30ರ ಸುಮಾರಿಗೆ ಪ್ರಧಾನಿ ಮೋದಿ ಕಾಂಗ್ರಾಗೆ ಆಗಮಿಸಿದ್ದಾರೆ. ನಂತರ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಸಿದ್ದಾರೆ. ಈ ವೇಳೆ ಕಳೆದ ವಾರದ ಭಾರೀ ಮಳೆಯಿಂದ ಉಂಟಾದ ನಷ್ಟವನ್ನು ಮುಖ್ಯಮಂತ್ರಿ ಸುಖವಿಂದರ್ ಸಿಂಗ್, ಮೋದಿಯವರಿಗೆ ವಿವರಿಸಿದರು. ಹಿಮಾಚಲ ಭೇಟಿ ಬಳಿಕ ಪಂಜಾಬ್ ರಾಜ್ಯಕ್ಕೂ ಮೋದಿ ಭೇಟಿ ನೀಡಲಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಇದನ್ನೂ ಓದಿ: ಜಿಎಸ್‍ಟಿ ಬಗ್ಗೆ ಅರಿವು ಮೂಡಿಸಲು ಸಮ್ಮೇಳನ ಆಯೋಜಿಸಿ – ಎನ್‍ಡಿಎ ಸಂಸದರಿಗೆ ಮೋದಿ ಸೂಚನೆ
ಹಿಮಾಚಲ ಪ್ರದೇಶ ಭೇಟಿಗೂ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮೋದಿ ಪೋಸ್ಟ್ ಮಾಡಿದ್ದು, ಈ ಸಂಕಷ್ಟದ ಸಮಯದಲ್ಲಿ ಪ್ರವಾಹ ಪೀಡಿತರೊಂದಿಗೆ ಕೇಂದ್ರ ಸರ್ಕಾರ ಹೆಗಲು ಕೊಟ್ಟು ನಿಲ್ಲಲಿದೆ ಎಂದು ತಿಳಿಸಿದ್ದರು. ಪ್ರಧಾನಿ ಮೋದಿ ಅವರು ಎರಡೂ ರಾಜ್ಯಗಳ ಅಧಿಕಾರಿಗಳೊಂದಿಗೆ ಈಗಾಗಲೇ ಉನ್ನತ ಮಟ್ಟದ ಚರ್ಚೆ ನಡೆಸಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
– 1.71 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದ ಬೆಳೆಗಳು ನಾಶ – ಹರಿಯಾಣದಲ್ಲೂ ಭಾರೀ ಮಳೆ, ಶಾಲೆಗಳಿಗೆ ರಜೆ ಘೋಷಣೆ
ನವದೆಹಲಿ: ಉತ್ತರ ಭಾರತದಲ್ಲಿ (North India) ನಿರಂತರವಾಗಿ ಮಳೆ (Rain) ಸುರಿಯುತ್ತಿರುವ ಪರಿಣಾಮ ಭಾರೀ ಪ್ರಮಾಣದ ಹಾನಿಯುಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಪಂಜಾಬ್‌ನಲ್ಲಿ (Punjab) ಪ್ರವಾಹದಿಂದಾಗಿ 45 ಜನರು ಸಾವನ್ನಪ್ಪಿದ್ದು, ರಾಜ್ಯದ 23 ಜಿಲ್ಲೆಗಳ 1,655 ಹಳ್ಳಿಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. 20,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಭಾರೀ ಮಳೆಯಿಂದಾಗಿ 1.71 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದ ಬೆಳೆಗಳು ನಾಶವಾಗಿವೆ. ಇನ್ನು ಜಮ್ಮು-ಶ್ರೀನಗರ ಹೆದ್ದಾರಿ ಮತ್ತು ಸಿಂಥಾನ್ ರಸ್ತೆಯ ಹಲವಾರು ಸ್ಥಳಗಳಲ್ಲಿ ಭೂಕುಸಿತ, ಮಣ್ಣು ಕುಸಿತ ಮತ್ತು ಕಲ್ಲುಗಳು ಬೀಳುವುದರಿಂದ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಕಳೆದ ನಾಲ್ಕು ದಿನಗಳಿಂದ ಜಮ್ಮು-ಶ್ರೀನಗರ ಹೆದ್ದಾರಿಯನ್ನು ಮುಚ್ಚಲಾಗಿದೆ. ಮೊಘಲ್ ರಸ್ತೆಯಲ್ಲಿ ಸಂಚಾರವನ್ನು ಪುನಃಸ್ಥಾಪಿಸಲಾಗಿದೆ. ಇದನ್ನೂ ಓದಿ: ಹನಿಮೂನ್ ಮರ್ಡರ್ ಕೇಸ್ | 790 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ – ಕೊಲೆಯಾದ ರಘುವಂಶಿ ಪತ್ನಿಯೇ ಪ್ರಮುಖ ಆರೋಪಿ
ಭದ್ರತಾ ಕಾರಣಗಳಿಂದಾಗಿ ಮಾತಾ ವೈಷ್ಣೋ ದೇವಿಯ ಯಾತ್ರೆಯನ್ನು 11ನೇ ದಿನವೂ ಸ್ಥಗಿತಗೊಳಿಸಲಾಗಿದೆ. ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯಲ್ಲಿ ಭೂಕುಸಿತದ ಸಂಭವಿಸಿದ್ದು, ಕನಿಷ್ಠ ನಾಲ್ಕು ಜನರನ್ನು ಹೊತ್ತ ವ್ಯಾನ್ ತೆರೆದ ಗುಂಡಿಯ ಕೆಳಭಾಗದಲ್ಲಿ ಸಂಗ್ರಹವಾದ ನೀರಿನಲ್ಲಿ 150 ಅಡಿ ಆಳಕ್ಕೆ ಬಿದ್ದಿದೆ. ಹರಿಯಾಣದಲ್ಲೂ ಭಾರಿ ಮಳೆ ಮುಂದುವರಿದ ಪರಿಣಾಮ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ರಾಜಸ್ಥಾನ, ಗುಜರಾತ್‌ನ ಕೆಲ ಭಾಗಗಳಲ್ಲಿ ಇಂದು ಮಳೆ ಮುಂದುವರಿಯಲಿದೆ. ದೆಹಲಿಯಲ್ಲಿ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹ ಸ್ಥಿತಿ ಇನ್ನಷ್ಟು ಹೆಚ್ಚಲಿದೆ. ಇದನ್ನೂ ಓದಿ: ದೆಹಲಿಯಲ್ಲಿ ಅಪಾಯಮಟ್ಟ ಮೀರಿದ ಯಮುನೆ – ಹಲವು ಪ್ರದೇಶಗಳು ಜಲಾವೃತ
ಚಂಡೀಗಢ: ಅತ್ಯಾಚಾರ ಮತ್ತು ವಂಚನೆ ಆರೋಪದ ಮೇಲೆ ಪಂಜಾಬ್‌ನ ಆಪ್ ಶಾಸಕನನ್ನು ಬಂಧಿಸಿ ಕರೆದೊಯ್ಯುವಾಗ ಹರಿಯಾಣದ (Haryana) ಕರ್ನಾಲ್ ಬಳಿ ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಅತ್ಯಾಚಾರ ಆರೋಪದ ಮೇಲೆ ಪಂಜಾಬ್ ಶಾಸಕ ಹರ್ಮೀತ್ ಸಿಂಗ್ ಧಿಲ್ಲೋನ್ ಪಠಾಣಮಜ್ರರನ್ನು (Harmeet Singh Pathanmajra) ಪೊಲೀಸರು ಬಂಧಿಸಿದ್ದರು. ಸ್ಥಳೀಯ ಠಾಣೆಗೆ ಅವರನ್ನು ಕರೆದೊಯ್ಯುತ್ತಿದ್ದಾಗ ಕಾರಿನಲ್ಲಿ ಬಂದ ಅವರ ಬೆಂಬಲಿಗರು ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದರು. ಈ ವೇಳೆ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಬಳಿಕ ಹರ್ಮೀತ್ ಸಿಂಗ್, ತಮ್ಮ ಬೆಂಬಲಿಗರು ಬಂದಿದ್ದ ಸ್ಕಾರ್ಪಿಯೋ, ಎಸ್‌ಯುವಿಯಲ್ಲಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಪ್ರೀಮಿಯಂ ಬ್ರ‍್ಯಾಂಡ್‌ಗಳ ಮದ್ಯದ ದರ ಇಳಿಕೆ ಮಾಡೋ ಚಿಂತನೆ ಇದೆ – ಆರ್.ಬಿ ತಿಮ್ಮಾಪುರ್
ಇದೀಗ ಪೊಲೀಸರು ಫಾರ್ಚೂನರ್ ಅನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಶಾಸಕ ಇನ್ನೊಂದು ಕಾರಿನಲ್ಲಿದ್ದಿದ್ದರಿಂದ ಎಸ್ಕೇಪ್ ಆಗಿದ್ದಾರೆ. ಇದೀಗ ಶಾಸಕನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಜಿರಾಕ್‌ಪುರದ ಮಹಿಳೆಯ ನೀಡಿದ ದೂರಿನಾಧಾರವಾಗಿ ಶಾಸಕ ಹರ್ಮೀತ್ ಸಿಂಗ್ ವಿರುದ್ಧ ಅತ್ಯಾಚಾರ, ವಂಚನೆ ಹಾಗೂ ಜೀವ ಬೆದರಿಕೆ ಪ್ರಕರಣದಡಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶಿ ಫಂಡಿಂಗ್ – ತನಿಖೆಗೆ ಇಡಿ ಎಂಟ್ರಿ
ಹರ್ಮೀತ್ ಸಿಂಗ್, ತಮ್ಮ ವಿರುದ್ಧ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಫೇಸ್‌ಬುಕ್‌ನಲ್ಲಿ ಲೈವ್ ಬಂದು, ದೆಹಲಿಯಲ್ಲಿರುವ ನಾಯಕತ್ವವು ಪಂಜಾಬ್ ಅನ್ನು ಅಕ್ರಮವಾಗಿ ಆಳುತ್ತಿದೆ ಎಂದು ಆರೋಪಿಸಿದ್ದರು.
ಕೇಂದ್ರ ನಾಯಕರ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ನನ್ನನ್ನು ಗುರಿಯಾಗಿಸಿದ್ದಾರೆ. ಅವರು ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿ, ನನ್ನನ್ನು ಜೈಲಿಗೆ ಕಳುಹಿಸಬಹುದು. ಆದರೆ ನನ್ನ ಧ್ವನಿಯನ್ನು ನಿಗ್ರಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ನವದೆಹಲಿ: ಉತ್ತರ ಭಾರತದಲ್ಲಿ ಭಾರೀ ಮಳೆಯು ಮುಂದುವರಿದಿದೆ. ದೆಹಲಿಯಲ್ಲಿ ಎಚ್ಚರಿಕೆ ನೀಡಲಾಗಿದ್ದು, ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇತ್ತ ಪಂಜಾಬ್‌ನಲ್ಲಿ ಸೆ.3ರ ವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ನೋಯ್ಡಾ, ಗುರುಗ್ರಾಮ್ ಮತ್ತು ಗಾಜಿಯಾಬಾದ್ ಸೇರಿದಂತೆ ದೆಹಲಿ-NCR ನಲ್ಲಿ ಇಂದೂ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಹರಿಯಾಣ, ದೆಹಲಿ ಭಾಗದಲ್ಲಿ ಮಳೆ ಹಿನ್ನೆಲೆ ಪ್ರವಾಹ ಸ್ಥಿತಿಯಲ್ಲಿ ಯಮುನಾ ನದಿ ಹರಿಯುತ್ತಿದೆ. ನಿರಂತರ ಮಳೆ ಮುಂದುವರಿದರೆ ಜನವಸತಿ ಪ್ರದೇಶಕ್ಕೆ ನೀರು ನುಗ್ಗುವ ಸಾಧ್ಯತೆ ಇದೆ. ತಗ್ಗು ಪ್ರದೇಶದಲ್ಲಿರುವ ಜನರಿಗೆ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ.
ಪಂಜಾಬ್, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸ್ತುತ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಪಂಜಾಬ್‌ನಲ್ಲಿ ಈವರೆಗೂ 10 ಕ್ಕೂ ಹೆಚ್ಚು ಜಿಲ್ಲೆಗಳು ಜಲಾವೃತಗೊಂಡಿವೆ. ಕನಿಷ್ಠ 29 ಮಂದಿ ಸಾವನ್ನಪ್ಪಿದ್ದಾರೆ. ಪಂಜಾಬ್‌ನಾದ್ಯಂತ 1,300 ಕ್ಕೂ ಹೆಚ್ಚು ಗ್ರಾಮಗಳು ಮುಳುಗಿ ಹೋಗಿದ್ದು, 6,582 ಜನರನ್ನು 122 ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಉತ್ತರ ಪ್ರದೇಶದ 22 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಪ್ರತಾಪ್‌ಗಢ, ಸೋನ್‌ಭದ್ರ, ಮಿರ್ಜಾಪುರ್, ಭದೋಹಿ, ಜೌನ್‌ಪುರ್, ಹರ್ದೋಯಿ, ಫರೂಖಾಬಾದ್, ಕನೌಜ್, ಕಾನ್ಪುರ್ ಗ್ರಾಮಾಂತರ, ಬಾಗ್‌ಪತ್, ಮೀರತ್, ಅಲಿಗಢ, ಮಥುರಾ, ಹತ್ರಾಸ್, ಕಾಸ್‌ಗಂಜ್‌ನಲ್ಲಿ ಮಳೆ ಎಚ್ಚರಿಕೆ ನೀಡಲಾಗಿದೆ. ಈ ಹಿನ್ನೆಲೆ ಇಂದು ಮತ್ತು ನಾಳೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.