Tag: ಪಂಜಾಬಿ ಹಾಡು

  • ಓಡುತ್ತಲೇ ಡಾನ್ಸ್ ಮಾಡಿದ್ಲು- ವಿಡಿಯೋ ವೈರಲ್

    ಓಡುತ್ತಲೇ ಡಾನ್ಸ್ ಮಾಡಿದ್ಲು- ವಿಡಿಯೋ ವೈರಲ್

    ನವದೆಹಲಿ: ಜಿಮ್‍ನಲ್ಲಿ ಹಾಡು ಕೇಳುತ್ತಾ ವರ್ಕ್ ಔಟ್ ಮಾಡುವುದನ್ನು ನೋಡಿದ್ದೇವೆ. ಆದರೆ, ಹುಡುಗಿಯೊಬ್ಬಳು ಡ್ಯಾನ್ಸ್ ಮಾಡುತ್ತಲೇ ವರ್ಕ್ ಔಟ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

    ಯುವತಿ ಪಂಜಾಬಿ ಹಾಡಿಗೆ ಟ್ರೆಡ್ ಮೀಲ್ ನಲ್ಲಿ ಹೆಜ್ಜೆ ಹಾಕಿದ್ದಾಳೆ. ಡಾನ್ಸ್ ಮಾಡುತ್ತಿರುವ ವಿಡಿಯೋವನ್ನು ಮೇರಾ ಪಂಜಾಬ್ ಫೇಸ್ ಬುಕ್ ಪೇಜ್‍ನಲ್ಲಿ ಶೇರ್ ಮಾಡಲಾಗಿದೆ.

    ಚಲಿಸುತ್ತಿರುವ ಮ್ಯಾಟ್ ಮೇಲೆ ಹೆಜ್ಜೆ ಹಾಕುವುದು ಕಷ್ಟ, ಅದಲ್ಲೂ ಹೊಸಬರು ಓಡುತ್ತಲೇ ಬಿದ್ದ ಅನೇಕ ಉದಾಹರಣೆಗಳಿವೆ. ಆದರೆ, ಯುವತಿ ಹಾಡಿಗೆ ತಕ್ಕಂತೆ ಸ್ಟೆಪ್ ಹಾಕಿದ್ದು ನೋಡುಗರನ್ನು ನಿಬ್ಬೆರಗಾಗಿಸಿದೆ.

    ಪಂಜಾಬಿಯ ಖ್ಯಾತ ಗಾಯಕಿ ಸುನಂದಾ ಶರ್ಮಾ ಅವರ ಕಂಠಸಿರಿಯಲ್ಲಿ ಕೇಳಿಬಂದ, ಜಾನಿ ತೆರಾ ನಾ.. ಹಾಡಿಗೆ ಯುವತಿ ಹೆಜ್ಜೆ ಹಾಕಿದ್ದಾಳೆ. ಈ ಹಾಡನ್ನು ಸಾಮಾನ್ಯವಾಗಿ ಮದುವೆ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಕೇಳಲಾಗುತ್ತಿತ್ತು. ಆದರೆ ಈಗ ಯುವತಿಯು ಜಿಮ್‍ನಲ್ಲಿ ತನ್ನ ವರ್ಕ್ ಔಟ್ ವೇಳೆ ಕೇಳಿ ಅದಕ್ಕೆ ಸ್ಟೆಪ್ ಹಾಕುವ ಮೂಲಕ ಭಾರೀ ಸದ್ದು ಮಾಡಿದ್ದಾಳೆ. 73 ಸಾವಿರ ಜನರು ಲೈಕ್ ಮಾಡಿದ್ದು, 29 ಸಾವಿರಕ್ಕೂ ಹೆಚ್ಚು ಜನರು ಶೇರ್ ಮಾಡಿಕೊಂಡಿದ್ದಾರೆ.

    https://www.facebook.com/Merapunjab143/videos/179634152745758/