Tag: ಪಂಜಾಬಿ ಪಾಪ್ ಸಿಂಗರ್

  • ಪಂಜಾಬಿ ಪಾಪ್ ಸಿಂಗರ್ ದಲೇರ್ ಮೆಹಂದಿ ಬಿಜೆಪಿಗೆ ಸೇರ್ಪಡೆ

    ಪಂಜಾಬಿ ಪಾಪ್ ಸಿಂಗರ್ ದಲೇರ್ ಮೆಹಂದಿ ಬಿಜೆಪಿಗೆ ಸೇರ್ಪಡೆ

    ನವದೆಹಲಿ: ನಟ ಸನ್ನಿ ಡಿಯೋಲ್ ಬೆನ್ನಲ್ಲೇ ಖ್ಯಾತ ಪಂಜಾಬಿ ಪಾಪ್ ಸಿಂಗರ್ ದಲೇರ್ ಮೆಹಂದಿ ಅವರು ಇಂದು ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಕೇಂದ್ರ ಸಚಿವ ವಿಜಯ್ ಗೋಯಲ್ ಹಾಗೂ ದೆಹಲಿಯ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿ ಅವರ ಸಮ್ಮುಖದಲ್ಲಿ ದಲೇರ್ ಮೆಹಂದಿ ಬಿಜೆಪಿ ಸೇರಿದರು. ದಲೇರ್ ಮೆಹಂದಿ ಅವರು ತಮ್ಮ ಮೊದಲ ಆಲ್ಬಂ ‘ಬೋಲೊ ತಾರಾ ರಾ’ ಮೂಲಕ ಪ್ರಖ್ಯಾತರಾಗಿರುವ ದಲೇರ್ ಮೆಹಂದಿ ಹಲವು ಹಿಂದಿ ಸಿನಿಮಾಗಳಿಗೆ ಹಾಡಿದ್ದಾರೆ.

    ದಲೇರ್ ಮೆಹಂದಿ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಅಭಿವೃದ್ಧಿಯತ್ತ ಕೊಂಡೆಯ್ಯುತ್ತಿದ್ದಾರೆ. ಹೀಗಾಗಿ ಈ ಬಾರಿ ಬಿಜೆಪಿಗೆ ಎಲ್ಲರೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿಕೊಂಡರು.

    ಈ ವೇಳೆ ವಾಯುವ್ಯ ದೆಹಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹನ್ಸ್ ರಾಜ್ ಹನ್ಸ್, ಚಾಂದನಿ ಚೌಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹರ್ಷವರ್ಧನ್ ಹಾಗೂ ಮಾಜಿ ಕ್ರಿಕೆಟರ್, ಪೂರ್ವ ದೆಹಲಿ ಕ್ಷೇತ್ರದ ಅಭ್ಯರ್ಥಿ ಗೌತಮ್ ಗಂಭೀರ್ ಭಾಗಿಯಾಗಿದ್ದರು.

    ಈ ಮೂಲಕ ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಭಾರೀ ಸಂಖ್ಯೆಯಲ್ಲಿ ಸೆಲೆಬ್ರಿಟಿಗಳು ರಾಜಕೀಯಕ್ಕೆ ಸೇರುತ್ತಿದ್ದಾರೆ. ನಟಿ ಜಯಪ್ರದಾ, ಕ್ರಿಕೆಟರ್ ಗೌತಮ್ ಗಂಭೀರ್, ನಟ ಸನ್ನಿ ಡಿಯೋಲ್ ಬಿಜೆಪಿ ಮನೆ ಸೇರಿದ್ದರೆ, ನಟಿ ಊರ್ಮಿಳಾ ಮಾತೊಂಡ್ಕರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.