Tag: ಪಂಜಾಬಿ

  • ಶೂಟಿಂಗ್ ವೇಳೆ ಮೂಗಿನಲ್ಲಿ ರಕ್ತಸ್ರಾವ – ನಟಿ ಹಿಮಾಂಶಿ ಆಸ್ಪತ್ರೆಗೆ ದಾಖಲು

    ಶೂಟಿಂಗ್ ವೇಳೆ ಮೂಗಿನಲ್ಲಿ ರಕ್ತಸ್ರಾವ – ನಟಿ ಹಿಮಾಂಶಿ ಆಸ್ಪತ್ರೆಗೆ ದಾಖಲು

    ಮೂಗಿನಿಂದ ವಿಪರೀತ ರಕ್ತಸ್ರಾವ ಆದ ಹಿನ್ನೆಲೆಯಲ್ಲಿ ಪಂಜಾಬಿ ನಟಿ, ಗಾಯಕಿ ಹಿಮಾಂಶಿ ಖುರಾನಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ರೊಮೇನಿಯಾದಲ್ಲಿ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇದ್ದಕ್ಕಿದ್ದಂತೆ ಮೂಗಿನಿಂದ ರಕ್ತ ಸುರಿಯಲು ಶುರುವಾಯಿತು. ಅದು ನಿಲ್ಲದೇ ಇರುವ ಕಾರಣಕ್ಕಾಗಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ರೊಮೇನಿಯಾದಲ್ಲಿ ಇವರ ನಟನೆಯ ‘ಫಟ್ಟೋ ದೇ ಯಾರ್ ಬಡೇ ನೆ’ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಅಲ್ಲಿ ತೀವ್ರ ಶೀತದ ವಾತಾವರಣವಿತ್ತು. ಅಲ್ಲದೇ, ಅದು ಮಳೆಯಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗುತ್ತಿತ್ತು. ಈ ವೇಳೆಯಲ್ಲಿ ಹಿಮಾಂಶಿ ಜ್ವರದಿಂದ ಬಳಲುತ್ತಿದ್ದರು. ಆದರೂ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರಿಂದ ಮೂಗಿನಿಂದ ರಕ್ತಸಾವ್ರ ಶುರುವಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ಹಲವೆಡೆ ಸ್ಫೋಟ – 5 ಸಾವು, 10 ಮಂದಿಗೆ ಗಾಯ

    ಹಿಮಾಂಶಿ ಕೇವಲ ಗಾಯಕಿ ಮತ್ತು ನಟಿ ಮಾತ್ರವಲ್ಲ ಪಂಜಾಬಿ ಬಿಗ್ ಬಾಸ್ ಶೋನಲ್ಲೂ ಅವರು ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಇದೇ ಸಮಯದಲ್ಲೇ ಮತ್ತೋರ್ವ ಸ್ಪರ್ಧಿ ಆಸಿಮ್ ರಿಯಾಜ್ ಜೊತೆ ಅವರು ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗಿತ್ತು. ಹಲವು ವಿಚಾರಗಳಿಂದಾಗಿ ಅವರು ವಿರೋಧಿಗಳನ್ನೂ ಕಟ್ಟಿಕೊಂಡಿದ್ದರು. ಆ ವಿರೋಧಿಗಳು ಇವರ ಕಾರು ಮೇಲೆ ಕಲ್ಲು ತೂರಿದ್ದರು.

    Live Tv
    [brid partner=56869869 player=32851 video=960834 autoplay=true]

  • ನಟ ಸಲ್ಮಾನ್ ಖಾನ್ ಕೊಲೆಗೆ ಮುಂಬೈನಲ್ಲೇ ನಡೆದಿತ್ತು ಸಭೆ : ಪಂಜಾಬ್ ಪೊಲೀಸರು ಬಿಚ್ಚಿಟ್ಟ ಸ್ಪೋಟಕ ರಹಸ್ಯ

    ನಟ ಸಲ್ಮಾನ್ ಖಾನ್ ಕೊಲೆಗೆ ಮುಂಬೈನಲ್ಲೇ ನಡೆದಿತ್ತು ಸಭೆ : ಪಂಜಾಬ್ ಪೊಲೀಸರು ಬಿಚ್ಚಿಟ್ಟ ಸ್ಪೋಟಕ ರಹಸ್ಯ

    ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಕೊಲೆಗೆ ಭಾರೀ ಪ್ಲ್ಯಾನ್ ಮಾಡಲಾಗಿತ್ತು. ಕೊಲೆ ಹೇಗೆ ಮಾಡೋದು, ಯಾರು ಮಾಡೋದು? ಸ್ಥಳದ ಆಯ್ಕೆ ಹೇಗೆ? ಕೊಲೆಯಾದ ನಂತರ ತಪ್ಪಿಸಿಕೊಳ್ಳುವುದು ಎಲ್ಲಿ? ಹೀಗೆ ಅನೇಕ ವಿಚಾರಗಳನ್ನು ಚರ್ಚಿಸಲು ಲಾರೆನ್ಸ್ ಬಿಷ್ಣೋಯ್ (Lawrence Bishnoi) ಅಂಡ್ ಗ್ಯಾಂಗ್ ಮುಂಬೈನಲ್ಲೇ ಸಭೆ ಮಾಡಿದ್ದರು ಎಂದು ಪಂಜಾಬಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಸಲ್ಮಾನ್ ಖಾನ್ ಕೊಲೆ (Murder) ಬೆದರಿಕೆಗೆ ಸಂಬಂಧಿಸಿದಂತೆ ಪಂಜಾಬಿ (Punjabi) ಪೊಲೀಸರು ಬಿಷ್ಣೋಯ್ ತಂಡದ ಸದಸ್ಯ ಕಪಿಲ್ ಪಂಡಿತ್ (Kapil Pandit) ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದರು. ಈ ಸಮಯದಲ್ಲಿ ಅವನು ಸಲ್ಮಾನ್ ಖಾನ್ ಕೊಲೆಗೆ ಸಂಬಂಧಿಸಿದಂತೆ ಹಲವು ಸ್ಪೋಟಕ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾನೆ ಎಂದು ಪಂಜಾಬಿ ಪೊಲೀಸ್ ಮಹಾ ನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ. ಮುಂಬೈನಲ್ಲೇ ಸಭೆ ಮಾಡಿ, ಕೊಲೆಗೆ ಪ್ಲ್ಯಾನ್ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಕೇಳಿದ್ದಾರೆ. ಇದನ್ನೂ ಓದಿ:ಹಿಂದಿ ಕಿರುತೆರೆಯಲ್ಲಿ ಬರಲಿದೆ `ಕೆಜಿಎಫ್ 2′ ಚಿತ್ರ: ರಾಕಿಭಾಯ್ ಎಂಟ್ರಿಗೆ ಕೌಂಟ್ ಡೌನ್

    ಈ ಮೊದಲು ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಸಲ್ಮಾನ್ ತಂದೆಗೆ ಪತ್ರ ಬರೆದಿದ್ದರು ಬಿಷ್ಣೋಯ್ ಅಂಡ್ ಗ್ಯಾಂಗ್.  ಹೇಗೆ ಜೀವ ಉಳಿಸಿಕೊಳ್ಳುತ್ತೀಯಾ ಉಳಿಸಿಕೊ ಎಂದು ಪತ್ರದಲ್ಲಿ ಬರೆಯಲಾಗಿತ್ತು. ಹೀಗಾಗಿ ಈ ಕುರಿತು ಸಲ್ಮಾನ್ ಕೂಡ ದೂರು ನೀಡಿದ್ದರು. ಇವರ ಮನೆಗೆ ಭದ್ರತೆಯನ್ನು ಒದಗಿಸಲಾಗಿತ್ತು. ಅಲ್ಲದೇ, ಗನ್ ಲೈಸನ್ಸ್ ಕೂಡ ಪಡೆದುಕೊಂಡಿದ್ದರು. ಗುಂಡು ನಿರೋಧಕ ಕಾರು ಕೂಡ ಖರೀದಿಸಿದ್ದಾರೆ ಸಲ್ಮಾನ್.

    Live Tv
    [brid partner=56869869 player=32851 video=960834 autoplay=true]

  • ಡಿವೋರ್ಸ್ ಪಡೆಯಲು ಪತ್ನಿಗೆ ಒಂದು ಕೋಟಿ ಜೀವನಾಂಶ ನೀಡಿದ ಗಾಯಕ ಹನಿ ಸಿಂಗ್

    ಡಿವೋರ್ಸ್ ಪಡೆಯಲು ಪತ್ನಿಗೆ ಒಂದು ಕೋಟಿ ಜೀವನಾಂಶ ನೀಡಿದ ಗಾಯಕ ಹನಿ ಸಿಂಗ್

    ಪಂಜಾಬಿ (Punjabi)ಖ್ಯಾತ ಗಾಯಕ, ಬಾಲಿವುಡ್ ನಲ್ಲೂ ತಮ್ಮದೇ ಆದ ಛಾಪು ಮೂಡಿಸಿರುವ ಹನಿ ಸಿಂಗ್ (Honey Singh) ಕೊನೆಗೂ ತಮ್ಮ ಪತ್ನಿ ಶಾಲಿನಿ ತಲ್ವಾರ್ ಅವರಿಗೆ ವಿಚ್ಛೇದನ ನೀಡಿದ್ದಾರೆ. ಕಳೆದ ವರ್ಷವಷ್ಟೇ ಹನಿ ಸಿಂಗ್ ಮೇಲೆ ಅವರ ಪತ್ನಿ ದೈಹಿಕ ಹಿಂಸಾಚಾರದ ಆರೋಪ ಮಾಡಿದ್ದರು. ಪತಿಯಿಂದ ತಮಗೆ ತುಂಬಾ ಹಿಂಸೆ ಆಗುತ್ತಿದೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೆ ಹನಿ ಸಿಂಗ್ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.

    ದೆಹಲಿ (Delhi) ಕೋರ್ಟ್ ನಲ್ಲಿ ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದ ಹನಿ ಸಿಂಗ್ ಮತ್ತು ಅವರ ಪತ್ನಿ ಶಾಲಿನಿ (Shalini)ಯು ನ್ಯಾಯಾಧೀಶರ ಎದುರು ಸೆಟಲ್ ಮೆಂಟ್ ಮಾಡಿಕೊಂಡು, ಪತ್ನಿಗೆ ಜೀವನಾಂಶವಾಗಿ ಒಂದು ಕೋಟಿ ರೂಪಾಯಿ ನೀಡಿದ್ದಾರೆ. ಅದು ಚೆಕ್ ಮೂಲಕ ನೀಡಿದ್ದಾರೆ. 2001ರಲ್ಲಿ ಈ ಜೋಡಿ ವಿವಾಹವಾಗಿದ್ದು, ಆ ನಂತರ ಮನಸ್ತಾಪಗಳು ಬಂದಿದ್ದವು. ಕಳೆದ ವರ್ಷವಂತೂ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಒಬ್ಬರ ಮೇಲೆ ಮತ್ತೊಬ್ಬರು ಆರೋಪ ಮಾಡಿದ್ದರು.  ಇದನ್ನೂ ಓದಿ: ರಾಕೇಶ್ ಸ್ಮಾರ್ಟ್ ಗೇಮ್ ಆಡುತ್ತಿದ್ದಾನೆ- ಸಾನ್ಯಾ ಕೆಂಡಾಮಂಡಲ

    ತಮ್ಮ ಮೇಲೆ ಪತಿ ದೈಹಿಕವಾಗಿ ಹಿಂಸೆ ಮಾಡಿದ್ದಾನೆ ಎಂದು ಶಾಲಿನಿ ಬಹಿರಂಗವಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಪತ್ರವನ್ನು ಬರೆದಿದ್ದರು. ಹನಿ ಸಿಂಗ್ ಕುಟುಂಬದ ಬಗ್ಗೆಯೂ ಆರೋಪಗಳನ್ನು ಮಾಡಿದ್ದರು. ಆನಂತರ ಹನಿ ಸಿಂಗ್ ಕೂಡ ಮಾಧ್ಯಮಗಳ ಮುಂದೆ ಬಂದು ಎಲ್ಲ ಆರೋಪಗಳನ್ನು ನಿರಾಕರಿಸಿದ್ದರು. ಅಲ್ಲದೇ, ಶಾಲಿನಿಯಿಂದ  ದೂರ ಹೋಗುವುದಾಗಿಯೂ ಹೇಳಿಕೊಂಡಿದ್ದರು. ಈ ಮೂಲಕ ಅವರು ಡಿವೋರ್ಸ್ ಗೆ (Divorce) ಅರ್ಜಿ ಸಲ್ಲಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸಿಧು ಮೂಸೆ ವಾಲಾ ಹತ್ಯೆ: ತನಿಖೆ ವೇಳೆ ಶಾಕಿಂಗ್ ವಿಚಾರ ಬಯಲು

    ಸಿಧು ಮೂಸೆ ವಾಲಾ ಹತ್ಯೆ: ತನಿಖೆ ವೇಳೆ ಶಾಕಿಂಗ್ ವಿಚಾರ ಬಯಲು

    ಚಂಡೀಗಢ: ಪಂಜಾಬಿನ ಖ್ಯಾತ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಶಾಕಿಂಗ್ ವಿಚಾರ ಬಯಲಿಗೆ ಬಂದಿದೆ.

    ಮೂಸೆ ವಾಲಾ ಅವರನ್ನು ಎಕೆ 47 ಬಳಸಿ ಹತ್ಯೆ ಮಾಡಲಾಗಿತ್ತು ಎಂದು ಅಂದಾಜಿಸಲಾಗಿತ್ತು. ಆದರೆ ಪೊಲೀಸರು ತನಿಖೆ ಮಾಡುವ ವೇಳೆ ಖಾಲಿ ಗುಂಡು ಸಿಕ್ಕಿದೆ. ಇದನ್ನು ಪೊಲೀಸರು ಪರಿಶೀಲನೆ ಮಾಡಿದಾಗ ಅದು ರಷ್ಯಾದ ಎಎನ್-94 ರೈಫಲ್ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಮೂಸೆ ವಾಲಾ ಅವರನ್ನು ಹಂತಕರು ಪ್ಲಾನ್ ಮಾಡಿ, ಪ್ರತ್ಯೇಕವಾದಿಗಳನ್ನು ಸಂಪರ್ಕಿಸಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರಿಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಶ್ರೀರಂಗಪಟ್ಟಣದಲ್ಲಿ ಹೈ ಅಲರ್ಟ್ – ಜಾಮೀಯಾ ಮಸೀದಿ ಸುತ್ತ 144 ನಿಷೇಧಾಜ್ಞೆ ಜಾರಿ

    ಈ ದುಷ್ಕರ್ಮಿಗಳಿಗೆ ರಷ್ಯಾದ ಎಎನ್-94 ರೈಫಲ್ ಹೇಗೆ ಸಿಕ್ಕಿತು. ಅದರಲ್ಲಿಯೂ ಪಂಜಾಬ್‍ಗೆ ರಷ್ಯಾ ರೈಫಲ್ ಹೇಗೆ ಬಂತು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಯಾಕಂದ್ರೆ ಈ ರೈಫಲ್‍ಗಳನ್ನು ರಷ್ಯಾಸೇನಾ ಪಡೆ ಮಾತ್ರ ಬಳಸುತ್ತದೆ. ಐರಿಷ್ ರಿಪಬ್ಲಿಕ್ ಆರ್ಮಿ ಎಂಬ ಪ್ರತ್ಯೇಕವಾದಿ ಪಡೆಯ ಬಳಿಯೂ ಈ ರೈಫಲ್ ಇವೆ.

    ಕೆನಡಾದಲ್ಲಿರುವ ಗೋಲ್ಡಿ ಬ್ರಾರ್ ಎನ್ನುವ ಗ್ಯಾಂಗ್‍ಸ್ಟರ್ ನೆರವಿನಿಂದ ಹಂತಕರು ಈ ರೈಫಲ್ ಸಂಪಾದಿಸಿರಬಹುದು ಎಂದು ತನಿಖಾ ಸಂಸ್ಥೆಗಳು ಭಾವಿಸುತ್ತಿವೆ. ಆದರೆ ಈ ಕುರಿತು ಖಚಿತ ಮಾಹಿತಿ ದೊರೆತಿಲ್ಲ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.

  • ಗೆಳೆಯನ ಮದ್ವೆಯಲ್ಲಿ ಕುಣಿದು ಕುಪ್ಪಳಿಸಿದ ಕೊಹ್ಲಿ!

    ಗೆಳೆಯನ ಮದ್ವೆಯಲ್ಲಿ ಕುಣಿದು ಕುಪ್ಪಳಿಸಿದ ಕೊಹ್ಲಿ!

    ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ತವರಿಗೆ ಹಿಂದಿರುಗಿದ್ದು, ವಿರಾಟ್ ತಮ್ಮ ಬಿಡುವಿನ ಸಮಯದಲ್ಲಿ ಸ್ನೇಹಿತನ ಮದುವೆ ಸಮಾರಂಭದಲ್ಲಿ ಸಿಕ್ಕಾಪಟ್ಟೆ ಕುಣಿದು ಕುಪ್ಪಳಿಸಿದ್ದಾರೆ.

    ಮುಂಬೈನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪತ್ನಿ ಅನುಷ್ಕಾ ಶರ್ಮಾರನ್ನು ಬರಮಾಡಿಕೊಂಡ ಪತಿ ವಿರಾಟ್, ಪತ್ನಿಯ ಜೊತೆ ಸ್ಥಳೀಯ ಟ್ಯಾಟೂ ಪಾರ್ಲರ್  ಗೆ ಹೋಗಿ, ವಿಶೇಷ ಟ್ಯಾಟೂ ಹಾಕಿಸಿಕೊಂಡರು.

    ಗೆಳೆಯನ ಮದುವೆಯಲ್ಲಿ ವಿರಾಟ್ ಕೊಹ್ಲಿ ಪಂಜಾಬಿ ಹಾಡಿಗೆ ಹೆಜ್ಜೆ ಹಾಕಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿರಾಟ್‍ಗೆ ಶಿಖರ್ ಧವನ್ ಕೂಡ ಸಾಥ್ ನೀಡಿದ್ದು, ಮದುಮಗನ ಜೊತೆ ಇಬ್ಬರೂ ಕುಣಿದು ಕುಪ್ಪಳಿಸಿದ್ದಾರೆ.

    ವಿರಾಟ್ ಕೊಹ್ಲಿ ಅವರ ಡಾನ್ಸ್ ವಿಡಿಯೋವನ್ನ ಇನ್‍ಸ್ಟಾಗ್ರಾಂನ ಫ್ಯಾನ್ ಪೇಜ್‍ನಲ್ಲಿ ಹಂಚಿಕೊಳ್ಳಲಾಗಿದೆ. ವಿರಾಟ್ ಕೊಹ್ಲಿ ಭಾಂಗ್ರ ಶೈಲಿಯ ಸ್ಟೆಪ್ ಹಾಕಿ ಎಲ್ಲರನ್ನು ಹುಬ್ಬೇರುವಂತೆ ಮಾಡಿದ್ದಾರೆ.

    ವಿರಾಟ್ ಕೊಹ್ಲಿ ಅವರ ನೃತ್ಯ ಯಾರಿಗೆ ತಾನೆ ಇಷ್ಟ ಆಗೊಲ್ಲ ಹೇಳಿ? ಕೇವಲ ಕ್ರಿಕೆಟಿಗನಾಗದೇ ತಮ್ಮ ಇನ್ನಿತರ ಕಲೆಗಳ ಸಾಮರ್ಥ್ಯ ವನ್ನ ಯಾವಾಗಲು ತೋರಿಸುತ್ತಾ ಇರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಅಭಿಮಾನಿಗಳು ಇವರ ಡಾನ್ಸ್ ನೋಡಲು ಕಾತುರರಾಗಿರುತ್ತಾರೆ.

    https://www.instagram.com/p/Bf5zZI0FsgK/?utm_source=ig_embed&utm_campaign=embed_profile_upsell_test

    https://www.instagram.com/p/Bf5dne_FURm/?utm_source=ig_embed&utm_campaign=embed_profile_upsell_test