Tag: ಪಂಜರ

  • ವ್ಯಕ್ತಿ ಕಾಲಿಡಿದು ಒಳಗೆ ಎಳೆದುಕೊಳ್ಳಲು ಯತ್ನಿಸಿದ ಗೊರಿಲ್ಲಾ – ಬೋನ್‌ದಲ್ಲಿದ್ರೂ ಫುಲ್ ಸ್ಟ್ರಾಂಗ್

    ವ್ಯಕ್ತಿ ಕಾಲಿಡಿದು ಒಳಗೆ ಎಳೆದುಕೊಳ್ಳಲು ಯತ್ನಿಸಿದ ಗೊರಿಲ್ಲಾ – ಬೋನ್‌ದಲ್ಲಿದ್ರೂ ಫುಲ್ ಸ್ಟ್ರಾಂಗ್

    ಜಕಾರ್ತ: ಪ್ರಾಣಿಗಳ ಜೊತೆ ತಮಾಷೆ ಮಾಡಲು ಹೋಗಿ ಜನರು ಸಂಕಷ್ಟಕ್ಕೆ ಸಿಕ್ಕಿಕೊಳ್ಳುವುದು ಹೊಸದೇನು ಅಲ್ಲ. ಹಿಂದೆ ಝೂನಲ್ಲಿದ್ದ ಸಿಂಹವನ್ನು ರೇಗಿಸಲು ಹೋಗಿ ಒಬ್ಬ ತನ್ನ ಕೈ ಬೆರಳನ್ನೇ ಕಳೆದುಕೊಂಡಿದ್ದ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ, ಗೊರಿಲ್ಲಾವನ್ನು ರೇಗಿಸಿದ್ದಾನೆ. ಕೋಪಗೊಂಡ ಗೊರಿಲ್ಲಾ ಆತನ ಮೇಲೆ ದಾಳಿ ಮಾಡಲು ಯತ್ನಿಸಿದ ಆಘಾತಕಾರಿ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಈ ಘಟನೆ ಇಂಡೋನೇಷ್ಯಾದ ಕಸಾಂಗ್ ಕುಲಿಮ್ ಮೃಗಾಲಯದಲ್ಲಿ ನಡೆದಿದೆ. ಟ್ವಿಟ್ಟರ್ ಬಳಕೆದಾರರು ಈ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ. ಇಂಡೋನೇಷ್ಯಾದ ಕಸಾಂಗ್ ಕುಲಿಮ್ ಮೃಗಾಲಯದಲ್ಲಿ ಟೀನಾ ಎಂಬ ಗೊರಿಲ್ಲಾ ಬೋನ್‌ನಲ್ಲಿ ಇರುತ್ತೆ. ಹಸನ್ ಅರಿಫಿನ್ ಎಂದು ಗುರುತಿಸಲಾದ ವ್ಯಕ್ತಿ ಬೋನ್‌ ಬಳಿಗೆ ಬಂದು ಗೊರಿಲ್ಲಾವನ್ನು ರೇಗಿಸುತ್ತಾನೆ. ಪರಿಣಾಮ ಅವನ ಮೇಲೆ ದಾಳಿ ಮಾಡಲು ಗೊರಿಲ್ಲಾ ಯತ್ನಿಸಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಕೋವಿಡ್ ಸೊಂಕು ಏರಿಕೆ: ರಾಜ್ಯದಲ್ಲಿ 376, ಬೆಂಗಳೂರಿನಲ್ಲಿ 358 ಕೇಸ್ ದಾಖಲು

    ವೀಡಿಯೋದಲ್ಲಿ ಏನಿದೆ?
    ಹಸನ್ ಪಂಜರದ ಬಳಿಗೆ ಬಂದಿದ್ದು, ಗೊರಿಲ್ಲಾವನ್ನು ರೇಗಿಸಿದ್ದಾನೆ. ಸಿಟ್ಟಿಗೆದ್ದ ಗೊರಿಲ್ಲಾ, ಹಸನ್ ಬಟ್ಟೆಯನ್ನು ಬಲವಾಗಿ ಎಳೆಯಲು ಪ್ರಾರಂಭಿಸುತ್ತೆ. ಅವನು ಎಷ್ಟೇ ಕಷ್ಟಪಟ್ಟರು ಗೊರಿಲ್ಲಾ ಕೈಯಿಂದ ಬಟ್ಟೆಯನ್ನು ಬಿಡಿಸಿಕೊಳ್ಳಲು ಆಗಿಲ್ಲ. ಈ ವೇಳೆ ಹಸನ್ ಸ್ನೇಹಿತ ಸಹ ಬಂದಿದ್ದು, ಅವನ ಕೈಯಿಂದಲೂ ಬಿಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಉದ್ರೇಕಗೊಂಡ ಗೊರಿಲ್ಲಾ ತನ್ನ ಎಲ್ಲ ಶಕ್ತಿಯಿಂದ ಹಸನ್ ಕಾಲನ್ನು ಹಿಡಿದು ತನ್ನ ಕಡೆಗೆ ಎಳೆಯಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು.

    ಹಸನ್‍ಗೆ ಸಹಾಯ ಮಾಡಲು ಅವನ ಸ್ನೇಹಿತ ಗೊರಿಲ್ಲಾಗೆ ಒದೆಯಲು ಪ್ರಯತ್ನಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ನಂತರ ಅವರಿಗೆ ಸಹಾಯ ಮಾಡುವುದಕ್ಕೆ ಬೇರೆಯವರನ್ನು ಕರೆಯುತ್ತಾನೆ. ಇದನ್ನೂ ಓದಿ: ಬೀದಿ ನಾಯಿಯನ್ನ ದೊಣ್ಣೆಯಿಂದ ಹೊಡೆದು ಎರಡನೇ ಪ್ಲೋರ್‌ನಿಂದ ಬಿಸಾಕಿದ ಪಾಪಿ – ಪ್ರಕರಣ ದಾಖಲು 

    ಮೃಗಾಲಯದ ಅಧಿಕಾರಿಗಳು ಇನ್‍ಸ್ಟಾಗ್ರಾಮ್‍ನಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಝೂಕೀಪರ್ ಒಬ್ಬರು ಗೊರಿಲ್ಲಾ ಆವರಣದ ಮುಂದೆ ಅಳವಡಿಸಲಾಗಿರುವ ಎಚ್ಚರಿಕೆ ಫಲಕವನ್ನು ತೋರಿಸುತ್ತಿರುವುದು ಕಂಡುಬಂದಿದೆ.

  • ಗಿಳಿಯನ್ನು ಬಿಟ್ಟಿದ್ದಕ್ಕೆ 8 ವರ್ಷದ ಬಾಲಕಿಯನ್ನು ಹೊಡೆದು ಕೊಂದ ಮಾಲೀಕರು

    ಗಿಳಿಯನ್ನು ಬಿಟ್ಟಿದ್ದಕ್ಕೆ 8 ವರ್ಷದ ಬಾಲಕಿಯನ್ನು ಹೊಡೆದು ಕೊಂದ ಮಾಲೀಕರು

    ಇಸ್ಲಾಮಾಬಾದ್: ಮನೆ ಕೆಲಸಕ್ಕೆ ಇದ್ದ ಎಂಟು ವರ್ಷದ ಬಾಲಕಿ ಪಂಜರದಲ್ಲಿ ಇದ್ದ ಗಿಳಿಯನ್ನು ಬಿಟ್ಟಿದ್ದಕ್ಕೆ ಮನೆ ಮಾಲೀಕರು ಆಕೆಯನ್ನು ಹೊಡೆದು ಕೊಂದಿರುವ ಘಟನೆ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದಿದೆ.

    ಮೃತ ಬಾಲಕಿಯನ್ನು ಜೊಹ್ರಾ ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಜೊಹ್ರಾ ಹಕ್ಕಿಗಳಿಗೆ ಆಹಾರ ಹಾಕಲು ಪಂಜರದ ಬಾಗಿಲನ್ನು ತೆರೆದಿದ್ದಾಳೆ. ಈ ವೇಳೆ ಒಂದು ಗಿಳಿ ಮರಿ ತಪ್ಪಿಸಿಕೊಂಡು ಹಾರಿ ಹೋಗಿದೆ. ಇದರಿಂದ ಕೋಪಗೊಂಡ ಮನೆಯ ಮಾಲೀಕರು ಆಕೆಯನ್ನು ಹೊಡೆದು ಸಾಯಿಸಿದ್ದಾರೆ.

    ಜೊಹ್ರಾ ಕೆಲಸ ಮಾಡುತ್ತಿದ್ದ ಮನೆಯವರು ಪ್ರಾಣಿ ಪಕ್ಷಿಗಳನ್ನು ಸಾಕಿ ಅವುಗಳನ್ನು ಮಾರುವ ವ್ಯಾಪಾರ ಮಾಡುತ್ತಿದ್ದರು. ಜೊತೆಗೆ ತಮ್ಮ ಮನೆಯಲ್ಲಿ ಇರುವ ಪುಟ್ಟಮಕ್ಕಳನ್ನು ನೋಡಿಕೊಳ್ಳಲು ಜೊಹ್ರಾಳನ್ನು ಮನೆ ಕೆಲಸಕ್ಕೆ ಇಟ್ಟಿಕೊಂಡಿದ್ದರು. ಈ ವೇಳೆ ಜೊಹ್ರಾ ಗಿಳಿ ಹಾರಿಹೋಗಲು ಬಿಟ್ಟಿದ್ದಾಳೆ ಎಂದು ಮಾಲೀಕರು ಮನಬಂದಂತೆ ಥಳಿಸಿದ್ದಾರೆ. ಪ್ರಜ್ಞಾಹೀನಾಳದ ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸೋಮವಾರ ಸಾವನ್ನಪ್ಪಿದ್ದಾಳೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ರಾವಲ್ಪಿಂಡಿ ಪೊಲೀಸ್ ಅಧೀಕ್ಷಕ ಜಿಯಾ ಉದ್ದೀನ್, ಪ್ರಾಥಮಿಕ ತನಿಖೆಯ ಪ್ರಕಾರ ಆಸ್ಪತ್ರೆಗೆ ಬಾಲಕಿಯನ್ನು ಕರೆದುಕೊಂಡು ಬಂದಾಗ ಆಕೆ ಬದುಕಿದ್ದಳು. ಆದರೆ ಆಕೆಯ ಮುಖ, ಕೈ-ಕಾಲು, ಪಕ್ಕೆಲುಬು ಮತ್ತು ಕಾಲಿನ ಕೆಳಭಾಗದಲ್ಲಿ ಗಂಭೀರ ಗಾಯಗಳಾಗಿದ್ದವು. ಜೊತೆಗೆ ಬಾಲಕಿಯ ತೊಡೆಯ ಭಾಗದಲ್ಲಿ ಗಾಯವಾಗಿದ್ದ ಕಾರಣ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರಬವುದು ಎಂದು ಶಂಕಿಸಲಾಗಿದೆ ಎಂದು ಹೇಳಿದ್ದಾರೆ.

    ಜೊಹ್ರಾಳನ್ನು ಚಿಕ್ಕಮಕ್ಕಳನ್ನು ನೋಡಿಕೊಳ್ಳುವ ಮನೆಯ ಕೆಲಸಕ್ಕೆ ಇಟ್ಟಿಕೊಳ್ಳಲಾಗಿತ್ತು. ಈ ಕೆಲಸಕ್ಕೆ ಹಣದ ರೂಪದಲ್ಲಿ ಅವಳ ಓದಿಗೆ ಸಹಾಯ ಮಾಡುವುದಾಗಿ ಮಾಲೀಕರು ಹೇಳಿದ್ದರು. ಆದರೆ ಗಿಳಿಗಾಗಿ ಆಕೆಯಯನ್ನು ಕ್ರೂರವಾಗಿ ಕೊಂದಿದ್ದಾರೆ. ಈ ವಿಚಾರವಾಗಿ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಜೊತೆಗೆ ತನಿಖೆ ಮುಂದುವರೆದಿದೆ ಎಂದು ಜಿಯಾ ಉದ್ದೀನ್ ಮಾಹಿತಿ ನೀಡಿದ್ದಾರೆ.

  • ಲವ್ ಬರ್ಡ್ಸ್ ಪಂಜರದಲ್ಲಿ ನಾಗರಹಾವು

    ಲವ್ ಬರ್ಡ್ಸ್ ಪಂಜರದಲ್ಲಿ ನಾಗರಹಾವು

    ಮೈಸೂರು: ಲವ್ ಬರ್ಡ್ಸ್ ಪಂಜರದೊಳಕ್ಕೆ ನಾಗರಹಾವು ನುಗ್ಗಿ ಎರಡು ಪಕ್ಷಿಗಳನ್ನು ತಿಂದ ಘಟನೆ ಮೈಸೂರು ಹೊರವಲಯದ ರೂಪನಗರದಲ್ಲಿ ನಡೆದಿದೆ.

    ಜಯಪ್ರಕಾಶ್ ಮನೆಯಲ್ಲಿ ಪಂಜರದೊಳಗಿದ್ದ ಎರಡು ಲವ್ ಬರ್ಡ್ಸ್ ಗಳನ್ನು ತಿಂದು ತೇಗಿದ ನಾಗರಹಾವು ಉಳಿದ ಲವ್ ಪಕ್ಷಿಗಳನ್ನು ತಿನ್ನಲು ಪಂಜರದೊಳಗೆ ಅಡಗಿ ಕುಳಿತಿತ್ತು. ಈ ವೇಳೆ ಪಕ್ಷಿಗಳು ಭಯದಿಂದ ಪಂಜರದೊಳಗೆ ಚೀರಾಡಿಕೊಂಡು ಹಾರಾಡುತ್ತಿದ್ದವು.

    ಪಕ್ಷಿಗಳ ಅತಿಯಾದ ಚೀರಾಟ ಕೇಳಿ ಮನೆ ಮಂದಿ ಓಡಿ ಬಂದಿದ್ದಾರೆ. ಆಗ ಪಂಜರದಲ್ಲಿದ್ದ ನಾಗರಹಾವು ಕಂಡು ತಬ್ಬಿಬ್ಬಾಗಿದ್ದಾರೆ. ಕೂಡಲೇ ಮನೆಯವರು ಉರಗ ತಜ್ಞ ಸ್ನೇಕ್ ಶಾಮ್‍ಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ಶ್ಯಾಂ ಪಂಜರದೊಳಗಿದ್ದ ನಾಗರಹಾವನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ. ಆದರೆ ಪಂಜರದೊಳಗೆ ಸೇರಿಕೊಂಡು ಎರಡು ಲವ್ ಬರ್ಡ್ಸ್ ತಿಂದು ಹಾಕಿರುವುದರಿಂದ ಮನೆಯವರು ಬೇಸರ ವ್ಯಕ್ತಪಡಿಸಿದ್ದಾರೆ.