Tag: ಪಂಜಬ್

  • ಭದ್ರತೆ ವಾಪಸ್: ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಗುಂಡಿಕ್ಕಿ ಹತ್ಯೆ

    ಭದ್ರತೆ ವಾಪಸ್: ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಗುಂಡಿಕ್ಕಿ ಹತ್ಯೆ

    ಚಂಡೀಗಢ: ಪಂಜಾಬಿ ಗಾಯಕ ಮತ್ತು ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಅವರನ್ನು ಭಾನುವಾರ ಮಾನ್ಸಾ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

    ಪಂಜಾಬ್‍ನಲ್ಲಿ ಸಿಎಂ ಭಗವಂತ್ ಮಾನ್ ಅವರು 424 ಮಂದಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆಯುವ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದರು. ಅದರಲ್ಲಿ ಮೂಸೆ ವಾಲಾ ಕೂಡ ಒಬ್ಬರಾಗಿದ್ದರು. ಅವರ ಭದ್ರತೆಯನ್ನು ಹಿಂತೆಗೆದುಕೊಂಡ ಒಂದು ದಿನದ ನಂತರ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: 424 ವಿಐಪಿಗಳಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆದ ಪಂಜಾಬ್ ಸರ್ಕಾರ

    ನಡೆದಿದ್ದೇನು?
    ಜವಾಹರ್ ಕೆ ಗ್ರಾಮದ ದೇವಸ್ಥಾನದ ಬಳಿ ಮೂಸೆ ವಾಲಾ ಅವರು ತಮ್ಮ ಕಾರಿನಲ್ಲಿ ಹೋಗುತ್ತಿದ್ದರು. ಈ ವೇಳೆ ಕಿಡಿಗೇಡಿಗಳು ಅವರ ಕಾರಿನ ಮೇಲೆ 10 ಬಾರಿ ಗುಂಡು ಹಾರಿಸಿದ್ದಾರೆ. ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರು ಅವರನ್ನು ಮಾನ್ಸಾದ ಸಿವಿಲ್ ಆಸ್ಪತ್ರೆಯಲ್ಲಿ ಕರೆದುಕೊಂಡು ಹೋಗಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗದೆ ಮೂಸೆ ವಾಲಾ ಸಾವನ್ನಪ್ಪಿದ್ದಾರೆ.

    ಸುದ್ದಿ ತಿಳಿದು ಭಗವಂತ್ ಮಾನ್ ಅವರು ಶಾಕ್ ಆಗಿದ್ದು, ಈ ಕುರಿತು ಟ್ವೀಟ್ ಮಾಡಿದ್ದಾರೆ. ಟ್ವೀಟ್‍ನಲ್ಲಿ, ಸಿದ್ದು ಮೂಸೆ ವಾಲಾ ಅವರ ಭೀಕರ ಹತ್ಯೆಯಿಂದ ನಾನು ಆಘಾತಗೊಂಡಿದ್ದೇನೆ, ತೀವ್ರ ದುಃಖಿತನಾಗಿದ್ದೇನೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡಲಾಗುವುದಿಲ್ಲ. ನನ್ನ ಪ್ರಾರ್ಥನೆ ಅವರ ಕುಟುಂಬ ಮತ್ತು ಪ್ರಪಂಚದಾದ್ಯಂತದ ಅವರ ಅಭಿಮಾನಿಗಳೊಂದಿಗೆ ಇವೆ. ಎಲ್ಲರೂ ಶಾಂತವಾಗಿರಲು ನಾನು ಮನವಿ ಮಾಡುತ್ತೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಯೋಗದಿಂದ ಸ್ಥಿತಪ್ರಜ್ಞೆ, ಸಮಯಪ್ರಜ್ಞೆ, ಸಾತ್ವಿಕತೆಯಿರುವ ಆರೋಗ್ಯಕರ ಸಮಾಜ ನಿರ್ಮಾಣ: ಸಿಎಂ 

    ಮೂಸ್ ವಾಲಾ ಅವರು ಮಾನ್ಸಾ ಬಳಿಯ ಮೂಸ್ ವಾಲಾ ಗ್ರಾಮಕ್ಕೆ ಸೇರಿದವರು. ಕಳೆದ ಕೆಲವು ವರ್ಷಗಳಲ್ಲಿ ಅನೇಕ ಸೂಪರ್‌ಹಿಟ್ ಹಾಡುಗಳಿಗೆ ಧ್ವನಿಯಾಗಿದ್ದರು. ಮೂಸ್ ವಾಲಾ ಅವರು ಕಳೆದ ವರ್ಷ ನವೆಂಬರ್‍ನಲ್ಲಿ ಭಾರೀ ಅಬ್ಬರದ ನಡುವೆ ಕಾಂಗ್ರೆಸ್‍ಗೆ ಸೇರಿದ್ದರು.