Tag: ಪಂಚೆ

  • ಚನ್ನಪಟ್ಟಣ ಉಪಚುನಾವಣೆ; ಗೋಡೌನ್‌ನಲ್ಲಿ ಶೇಖರಿಸಿಟ್ಟಿದ್ದ ಬಂಡಲ್‌ಗಟ್ಟಲೇ ಸೀರೆ, ಪಂಚೆ ಜಪ್ತಿ

    ಚನ್ನಪಟ್ಟಣ ಉಪಚುನಾವಣೆ; ಗೋಡೌನ್‌ನಲ್ಲಿ ಶೇಖರಿಸಿಟ್ಟಿದ್ದ ಬಂಡಲ್‌ಗಟ್ಟಲೇ ಸೀರೆ, ಪಂಚೆ ಜಪ್ತಿ

    – ಚುನಾವಣಾಧಿಕಾರಿಗಳ ಭರ್ಜರಿ ಕಾರ್ಯಾಚರಣೆ

    ರಾಮನಗರ: ಚನ್ನಪಟ್ಟಣ ಉಪಚುನಾವಣೆ (Channapatna By Election) ಹಿನ್ನೆಲೆ ಚುನಾವಣಾಧಿಕಾರಿಗಳು (Election Officers) ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಗೋಡೌನ್‌ನಲ್ಲಿ ಶೇಖರಿಸಿಟ್ಟಿದ್ದ ಬಂಡಲ್‌ಗಟ್ಟಲೇ ಸೀರೆ, ಪಂಚೆಗಳನ್ನು ಜಪ್ತಿ ಮಾಡಿದ್ದಾರೆ.

    ಬಿಡದಿಯ (Bidadi) ಹೊಸದೊಡ್ಡಿ ಗ್ರಾಮದ ಬಳಿ ಇರುವ ಗೋಡೌನ್‌ನಲ್ಲಿ ಅಕ್ರಮವಾಗಿ ಸೀರೆ ಮತ್ತು ಪಂಚೆಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಚನ್ನಪಟ್ಟಣ ಮತದಾರರಿಗೆ ಹಂಚಲು ಶೇಖರಿಸಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಯಾವುದೇ ದಾಖಲೆ ಇಲ್ಲದೇ ಶೇಖರಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಸೀರೆ ಮತ್ತು ಪಂಚೆಯನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಸಾಗಿಸುತ್ತಿದ್ದ ‘ಈರುಳ್ಳಿ ಬಾಂಬ್’‌ ಸ್ಫೋಟಗೊಂಡು ಓರ್ವ ಸಾವು

    ಇನ್ನು ಈ ಕುರಿತು ಚುನಾವಣೆನೀತಿ ಸಂಹಿತೆ ಉಲ್ಲಂಘನೆ ಅಡಿ ದೂರು ದಾಖಲಿಸಲಾಗಿದೆ. ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾಲೀಕನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: 44 ವರ್ಷಗಳ ನಂಟು ಕಡಿದುಕೊಂಡ ಮುಂಬೈ ಕಾಂಗ್ರೆಸ್ ಮುಖಂಡ – 5 ಬಾರಿ ಕಾರ್ಪೋರೇಟರ್ ಆಗಿದ್ದ ರವಿರಾಜ ಬಿಜೆಪಿ ಸೇರ್ಪಡೆ

  • ಪಂಚೆ ಧರಿಸಿ ಪೊಂಗಲ್‌ ಆಚರಿಸಿದ ಪ್ರಧಾನಿ ಮೋದಿ- ವೀಡಿಯೋ ವೈರಲ್‌

    ಪಂಚೆ ಧರಿಸಿ ಪೊಂಗಲ್‌ ಆಚರಿಸಿದ ಪ್ರಧಾನಿ ಮೋದಿ- ವೀಡಿಯೋ ವೈರಲ್‌

    ನವದೆಹಲಿ: ಇಷ್ಟು ದಿನ ಕುರ್ತಾ, ಪೈಜಾಮಾದಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಇದೀಗ ದಕ್ಷಿಣ ಭಾರತದ ಉಡುಗೆ ಪಂಚೆಯಲ್ಲಿ (Lungi) ಮಿಂಚಿದ್ದಾರೆ.

    ಹೌದು. ಮೋದಿಯವರು ಸದ್ಯ ಪಂಚೆ ಧರಿಸುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ದೆಹಲಿಯ ರಾಜ್ಯ ಸಚಿವ ಎಲ್ ಮುರುಗನ್ (L Murugan) ಅವರ ನಿವಾಸದಲ್ಲಿನಡೆದ ಪೊಂಗಲ್ ಆಚರಣೆಯಲ್ಲಿ ಭಾಗವಹಿಸಲು ಪ್ರಧಾನಿಯವರು ದಕ್ಷಿಣ ಭಾರತದ ಪಂಚೆಯನ್ನು ಧರಿಸಿದ್ದರು. ಸದ್ಯ ನರೇಂದ್ರ ಮೋದಿಯವರು ಪೊಂಗಲ್‌ (Pongal) ಆಚರಣೆಯ ವಿಧಿ-ವಿಧಾನಗಳನ್ನು ನಡೆಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ವೀಡಿಯೋದಲ್ಲಿ ಏನಿದೆ..?: ಪ್ರಧಾನಿ ಎಡ ಭುಜದ ಮೇಲೆ ಶಾಲು ಹೊದ್ದು, ಕಪ್ಪು ಕೋಟ್ ಜೊತೆಗೆ ಬಿಳಿ ಪಂಚೆ ಧರಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಅಲ್ಲದೆ ಒಲೆಯ ಮೇಲಿದ್ದ ಪಾತ್ರೆಗೆ ಏನೋ ಹಾಕುತ್ತಿರುವುದನ್ನು ಕೂಡ ಗಮನಿಸಬಹುದು. ಇದಾದ ಬಳಿಕ ಮಂಟಪದೊಳಗೆ ನಿಂತಿರುವ ಹಸುವಿನ ಕಡೆಗೆ ಹೋಗುತ್ತಾರೆ. ಹಸುವಿನ ಮೇಲೆ ಹೂವು ಹಾಕಿ ಅದಕ್ಕೆ ತಿನ್ನಿಸುವುದನ್ನು ಕೂಡ ವೀಡಿಯೋದಲ್ಲಿ ಕಾಣಬಹುದಾಗಿದೆ. ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿಯವರು ಸಮಸ್ತ ಜನತೆಗೆ ಪೊಂಗಲ್ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

    ಇದೇ ವೇಳೆ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಮತ್ತು ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರು ಸಹ MoS ಮುರುಗನ್ ಅವರ ನಿವಾಸದಲ್ಲಿ ಉಪಸ್ಥಿತರಿದ್ದರು.

    ಒಟ್ಟಿನಲ್ಲಿ ಪ್ರಧಾನಿ ಪಂಚೆ ಧರಿಸಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್‌ಗಳಲ್ಲಿ ಚಿತ್ರೀಕರಿಸಿದ್ದು, ಬಳಿಕ ಅದನ್ನು ಸೋಶಿಯಲ್‌ ಮೀಡಿಯಾಕ್ಕೆ ಹರಿಯಲು ಬಿಟ್ಟಿದ್ದಾರೆ.

  • ಅಕ್ಕಿ ರಾಜಕೀಯದ ನಡುವೆ ರಾಜ್ಯದಲ್ಲಿ ಪಂಚೆ ಪಾಲಿಟಿಕ್ಸ್

    ಅಕ್ಕಿ ರಾಜಕೀಯದ ನಡುವೆ ರಾಜ್ಯದಲ್ಲಿ ಪಂಚೆ ಪಾಲಿಟಿಕ್ಸ್

    – ವಿಪಕ್ಷ ನಾಯಕನ ಆಯ್ಕೆ ವಿಳಂಬಕ್ಕೆ ಕಾಲೆಳೆದ `ಕೈ’

    ಬೆಂಗಳೂರು: ರಾಜ್ಯದಲ್ಲಿ ಅಕ್ಕಿ ರಾಜಕೀಯ ಮಧ್ಯೆ `ಪಂಚೆ’ ಪಾಲಿಟಿಕ್ಸ್ ಶುರುವಾಗಿದೆ. ಕಾಂಗ್ರೆಸ್‍ಗೆ (Congress) ಟಕ್ಕರ್ ಕೊಡುವ ಮಧ್ಯೆಯೇ ಬಿಜೆಪಿಯೊಳಗಿನ ಅಸಮಾಧಾನ ತಣ್ಣಗಾಗುತ್ತಿಲ್ಲ. ವಿಪಕ್ಷ ನಾಯಕನ ಆಯ್ಕೆ ವಿಳಂಬ ಕಾಂಗ್ರೆಸ್‍ಗೆ ಅಸ್ತ್ರವಾಗಿದೆ. ಈ ನಡುವೆ ಶನಿವಾರವೂ ಕೂಡ ರೇಣುಕಾಚಾರ್ಯ (MP Renukacharya) ವಾಗ್ದಾಳಿ ಮುಂದುವರಿದಿದೆ.

    ವಿವಾದದ ಕಿಡಿ ಎಬ್ಬಿಸಿದ ಕಾಂಗ್ರೆಸ್ಸಿನ `ಪಂಚೆ’ ಟ್ವೀಟ್ ರಾಜಕೀಯ ಕದನಕ್ಕೆ ವೇದಿಕೆ ಆಗಿದೆ. ರೇಣುಕಾಚಾರ್ಯ ಬಿಜೆಪಿ (BJP) ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯನ್ನು ಟೀಕಿಸಲು ಕಾಂಗ್ರೆಸ್ `ಪಂಚೆ’ ಅಸ್ತ್ರ ಪ್ರಯೋಗಿಸಿದೆ. ಪಂಚೆಯೊಳಗೆ ಬಿಜೆಪಿ ಸಿಲುಕಿ ಒದ್ದಾಡ್ತಿದೆ. `ಪಂಚೆ’ ಪಡೆ ಗೆಲ್ಲುವುದೋ…? ಬಿಎಸ್‍ವೈ ಬ್ರಿಗೇಡ್ ಗೆಲ್ಲುತ್ತೋ…? ಅಂತಾ ಸರಣಿ ಟ್ವೀಟ್ ಮೂಲಕ ಕಾಲೆಳೆದಿತ್ತು. ಇದಕ್ಕೆ ಸಿ.ಟಿ.ರವಿ ಟಕ್ಕರ್ ಕೊಟ್ಟು ಪಂಚೆ ಟ್ವೀಟ್ ಮಾಡಿ ಸಿದ್ದರಾಮಯ್ಯಗೆ ಡಿಕೆ ಗ್ಯಾಂಗ್ ಹೇಳಿರಬೇಕು. ಸಿದ್ದರಾಮಯ್ಯ (Siddaramaiah) ಹುಷಾರಾಗಿ ಇರೋಕೆ ಹೇಳಿ ಅಂತೇಳಿ ವ್ಯಂಗ್ಯವಾಡಿದ್ರು. ಇತ್ತ ಸಿದ್ದರಾಮಯ್ಯ ಲುಂಗಿ ಲೀಡರ್ ಅನ್ನೋದು ಮರೀಬಾರದು ಎಂದು ಪ್ರಹ್ಲಾದ್ ಜೋಶಿ (Pralhad Joshi) ಟಾಂಗ್ ಕೊಟ್ಟರೆ, ಪಂಚೆ ಲೀಡರ್‍ಗಳಿಗೆ ಜನ ಪಾಠ ಕಲಿಸಿದ್ದಾರೆಂದ ಚಲುವರಾಯಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಇಲಿಗಳು ಅಕ್ಕಿ ತಿನ್ನಲಿ ಅಂತಾ ಬಿಜೆಪಿಯವರು ಗೋದಾಮುಗಳಲ್ಲಿ ಮುಚ್ಚಿಟ್ಟಿದ್ದಾರೆ: ಈಶ್ವರ್ ಖಂಡ್ರೆ

    ಈ ನಡುವೆ ಬಿಜೆಪಿ ವಿಪಕ್ಷ ನಾಯಕನ ಆಯ್ಕೆ ವಿಳಂಬಕ್ಕೆ ಕಾಂಗ್ರೆಸ್ ವ್ಯಂಗ್ಯವಾಡಿದೆ. ನಾಳೆಯೇ ವಿಪಕ್ಷ ನಾಯಕನ ಆಯ್ಕೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಬಹಿರಂಗ ಕದನವೂ ಮುಂದುವರಿದಿದೆ. ಶುಕ್ರವಾರ ಶಿಸ್ತಿನ ಗೆರೆ ಎಳೆದು ಖಡಕ್ ಸೂಚನೆ ಕೊಟ್ಟಿದ್ದರೂ ರೇಣುಕಾಚಾರ್ಯ ಮಾತು ನಿಂತಿಲ್ಲ. ನಿನ್ನೆ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದು ಡೋಂಟ್ ಕೇರ್ ಎಂದಿದ್ದ ರೇಣುಕಾಚಾರ್ಯ ಇವತ್ತು ಬಿಎಸ್‍ವೈ (B S Yediyurappa) ನಿವಾಸಕ್ಕೆ ದೌಡಾಯಿಸಿ ವಿವರಣೆ ಕೊಟ್ಟರು. ಬಿಎಸ್‍ವೈ ಭೇಟಿ ಬಳಿಕವೂ ಬಹಿರಂಗ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ ರಾಷ್ಟ್ರೀಯ ನಾಯಕರಿಗೆ ಪತ್ರ ಬರೆಯುತ್ತೇನೆ. ಯಡಿಯೂರಪ್ಪರನ್ನ ಟೀಕಿಸಿದಾಗ ನೋಟೀಸ್ ಕೊಡದವರು ಈಗ ಏಕೆ ಕೊಟ್ಟರು..? ನಾನು ಕಾಂಗ್ರೆಸ್ ಸೇರಲ್ಲ, ಬಿಜೆಪಿಯಲ್ಲೇ ಇರುತ್ತೇನೆ ಅಂತಾ ವಿರೋಧಿಗಳಿಗೆ ಟಾಂಗ್ ಕೊಟ್ಟರು.

    ಒಟ್ಟಿನಲ್ಲಿ ಬಿಜೆಪಿ ಎರಡು ಹೋರಾಟಗಳ ಸಂಕಟದಲ್ಲಿದ್ದು, ಕಾಂಗ್ರೆಸ್ ಪಕ್ಷದ ಸರ್ಕಾರದ ವಿರುದ್ಧ ಅಸ್ತ್ರ ಪ್ರಯೋಗ ಒಂದೆಡೆಯಾದರೆ ಪಕ್ಷದೊಳಗಿನ ಕೊತ ಕೊತ ಅಸಮಾಧಾನಕ್ಕೆ ತಣ್ಣೀರು ಹಾಕಲು ಹರಸಾಹಸಪಡಬೇಕಾಗಿದ್ದು, ಹೈಕಮಾಂಡ್ ನಡೆ ಕುತೂಹಲ ಮೂಡಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉಚಿತ ಸೀರೆ ಪಡೆಯಲು ನೂಕುನುಗ್ಗಲು – ನಾಲ್ವರು ಮಹಿಳೆಯರು ಸಾವು

    ಉಚಿತ ಸೀರೆ ಪಡೆಯಲು ನೂಕುನುಗ್ಗಲು – ನಾಲ್ವರು ಮಹಿಳೆಯರು ಸಾವು

    ಚೆನ್ನೈ: ಉಚಿತ ಸೀರೆಯನ್ನು (Saree) ಪಡೆಯಲು ನೂಕು ನುಗ್ಗಲು ಉಂಟಾಗಿ, ಕಾಲ್ತುಳಿತದಿಂದ ನಾಲ್ವರು ವೃದ್ಧ ಮಹಿಳೆಯರು (Women) ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡ ಘಟನೆ ತಮಿಳುನಾಡಿನ (Tamil Nadu) ತಿರುಪತ್ತೂರು ಜಿಲ್ಲೆಯ ವನ್ನಿಯಂಬಾಡಿ ಬಳಿ ನಡೆದಿದೆ.

    ಸೀರೆ ವಿತರಣಾ ಕಾರ್ಯಕ್ರಮದ ವೇಳೆ ಈ ಘಟನೆ ಸಂಭವಿಸಿದೆ. ತೈಪೂಸಂ ಹಬ್ಬದ ಮುನ್ನ ಅಯ್ಯಪ್ಪನ್ ಎಂಬಾತ ಉಚಿತ ಸೀರೆ ವಿತರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಟೋಕನ್‍ಗಳನ್ನು ಸಂಗ್ರಹಿಸಲು ಹೆಚ್ಚಿನ ಸಂಖ್ಯೆಯ ಜನರು ಜಮಾಯಿಸಿದ್ದರು.

    ಉಚಿತ ಸೀರೆ ಪಡೆಯಲು ನೂಕು ನುಗ್ಗಲು ಉಂಟಾಗಿದೆ. ಈ ವೇಳೆ ಕಾಲ್ತುಳಿತಕ್ಕೆ ನಾಲ್ವರು ವೃದ್ಧ ಮಹಿಳೆಯರು ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೇ ಅನೇಕರು ಗಾಯಗೊಂಡಿದ್ದಾರೆ. ಜೊತೆಗೆ ಪ್ರಜ್ಞೆ ಕಳೆದುಕೊಂಡಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಸಿದ್ದಗಂಗೆ, ಆದಿ ಚುಂಚನಗಿರಿ ಗುರುಗಳ ಪರಮ ಶಿಷ್ಯ, ಅಭಿವೃದ್ಧಿ ಜಪ ಮಾಡೋನು: ಸೋಮಣ್ಣ

    crime

    ತೈಪೂಸಂ ಎಂಬುದು ತಮಿಳು ತಿಂಗಳ ಥಾಯ್‍ನಲ್ಲಿ ಹುಣ್ಣಿಮೆಯಂದು ಹಿಂದೂ ತಮಿಳು ಸಮುದಾಯದಿಂದ ಆಚರಿಸಲಾಗುವ ಹಬ್ಬವಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ಹಿಟ್ & ರನ್ ಕೇಸ್ – ಕಾರು ಡಿಕ್ಕಿ, ಮೇಲಿಂದ ಹಾರಿದ ಯುವತಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಂಚೆ ಕಳಚಿದೆ ಅಂತ ಸಿದ್ದರಾಮಯ್ಯನವರ ಕಿವಿಯಲ್ಲಿ ಹೇಳಿದ್ರು ಡಿಕೆಶಿ!

    ಪಂಚೆ ಕಳಚಿದೆ ಅಂತ ಸಿದ್ದರಾಮಯ್ಯನವರ ಕಿವಿಯಲ್ಲಿ ಹೇಳಿದ್ರು ಡಿಕೆಶಿ!

    – ಕಲಾಪವನ್ನು ನಗೆಗಡಲಲ್ಲಿ ತೇಲಿಸಿದ ಸಿದ್ದು ಪಂಚೆ ಪ್ರಸಂಗ

    ಬೆಂಗಳೂರು: ಇಂದು ನಡೆಯುತ್ತಿದ್ದ ವಿಧಾನಸಭಾ ಕಲಾಪದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಂಚೆ ಪ್ರಸಂಗ ಕಲಾಪದಲ್ಲಿ ಇರುವವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.

    ಸದನದ ಕಲಾಪದ ವೇಳೆ ಸಿದ್ದರಾಮಯ್ಯ ಅವರ ಪಂಚೆ ಬಿಚ್ಚಿರುವುದನ್ನು ಗಮನಿಸಿದ ಡಿಕೆ ಶಿವಕುಮಾರ್, ಪಂಚೆ ಕಳಚಿದೆ ಎಂದು ಸಿದ್ದರಾಮಯ್ಯ ಅವರ ಕಿವಿಯಲ್ಲಿ ಹೇಳಿದ್ದಾರೆ. ಆಗ ಸಿದ್ದರಾಮಯ್ಯ ಅವರು ಯಾಕೋ ಇತ್ತೀಚೆಗೆ ಹೊಟ್ಟೆ ಸ್ವಲ್ಪ ದಪ್ಪ ಆಗಿದೆ. ಪಂಚೆ ಬಿಚ್ಚಿ ಹೋಗಿದೆ. ನಾನು ಪಂಚೆ ಕಟ್ಟಿಕೊಂಡು ಬಂದು ಭಾಷಣವನ್ನು ಮಂದುವರಿಸುತ್ತೇನೆ ಎಂದು ಹೇಳಿದ್ದಾರೆ. ಆಗ ಕಲಾಪದಲ್ಲಿ ಇದ್ದವರು ನಗೆಗಡಲಲ್ಲಿ ತೇಲಿದ್ದಾರೆ.

    ಆಗ ಮಧ್ಯ ಪ್ರವೇಶಿಸಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ನಮ್ಮ ಅಧ್ಯಕ್ಷರು ಬಂದು ಪಕ್ಷದ ಮಾನ ಎಂದು ಕಿವಿಯಲ್ಲಿ ಗುಟ್ಟಾಗಿ ಹೇಳಿದ್ದಾರೆ. ಆದರೆ ನೀವು ಊರಿಗೆಲ್ಲ ಹೇಳಿಬಿಟ್ಟ್ರಿ. ಅವರ ಶ್ರಮ ವ್ಯರ್ಥವಾಯಿತ್ತು ಎಂದಿದ್ದಾರೆ.  ಸದನದಲ್ಲಿ ಇದ್ದವರು ಸಹಾಯಬೇಕಾ ಎಂದು ಕೇಳಿದ್ದಾರೆ. ಆಗ ರಮೇಶ್ ಕುಮಾರ್ ಅವರ ಉದ್ಯೋಗವೇ ನಮ್ಮ ಪಕ್ಷವನ್ನು ಕಳಚೋದು ಆಗಿದೆ. ನೋಡಿ ಹೇಗೆ ಕಾಯುತ್ತಾ ಕುಳಿತ್ತಿದ್ದಾರೆ ಈಶ್ವರಪ್ಪ ಅವರು ಎಂದು ಹಾಸ್ಯ ಚಟಾಕೆ ಹಾರಿಸಿದ್ದಾರೆ.

    ಇಲ್ಲ ಅವರು ಕಳಚಲು ಪ್ರಯತ್ನ ಮಾಡುತ್ತಾರೆ. ಆದರೆ ಸಾಧ್ಯವಾಗಲ್ಲ. ಪಂಚೆ ಕಳಚಿ ಬಿಟ್ಟಿದೆ. ಮೊದಲು ಬಿಚ್ಚು ಹೋಗುತ್ತಿರಲಿಲ್ಲ. ಕೊರೊನಾ ಬಂದ ಮೇಲೆ ಹೊಟ್ಟೆ ಸ್ವಲ್ಪ ದಪ್ಪವಾಯಿತ್ತು, ಹೀಗಾಗಿ ಪಂಚೆ ಬಿಚ್ಚಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

    ಕಲಾಪದಲ್ಲಿ ಸಿದ್ದರಾಮಯ್ಯ ಅವರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣದಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಪ್ರವಾಸೋದ್ಯಮದ ಮೇಲೂ ದೊಡ್ಡ ಪರಿಣಾಮ ಬೀರಿದೆ. ಸಾಂಸ್ಕೃತಿಕ ನಗರಿ ಎಂಬುದಕ್ಕೆ ಕಳಂಕ ಬರುತ್ತದೆ ಎಂದು ಈ ವಿಚಾರವಾಗಿ ಮಾತನಾಡುತ್ತಿದ್ದರು. ಆಗ ಈ ಘಟನೆ ನಡೆದಿದೆ.

  • ಸೊಂಟದಿಂದ ಜಾರುತ್ತಿದ್ದ ಪಂಚೆಯನ್ನ ತುಂಬು ವೇದಿಕೆಯಲ್ಲಿಯೇ ಕಟ್ಟಿಕೊಂಡ ಸಿಎಂ: ವಿಡಿಯೋ ವೈರಲ್

    ಸೊಂಟದಿಂದ ಜಾರುತ್ತಿದ್ದ ಪಂಚೆಯನ್ನ ತುಂಬು ವೇದಿಕೆಯಲ್ಲಿಯೇ ಕಟ್ಟಿಕೊಂಡ ಸಿಎಂ: ವಿಡಿಯೋ ವೈರಲ್

    ಕಲಬುರಗಿ: ಸೊಂಟದಿಂದ ಜಾರುತ್ತಿದ್ದ ಪಂಚೆಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಯಲ್ಲಿಯೇ ಕಟ್ಟಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಸೋಮವಾರ ಸಂಜೆ ಕಲಬುರಗಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಲಬುರಗಿಯ ವೀರಶೈವ ಕಲ್ಯಾಣ ಮಂಟಪದ ಮುಂಬಾಗದಲ್ಲಿ ನಡೆದ ದಕ್ಷಿಣ ಮತ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಗೆ ಸಿದ್ದರಾಮಯ್ಯ ಅವರು ಬಂದಿದ್ದರು.

    ಈ ವೇಳೆ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಸಿಎಂ ವೇದಿಕೆ ಏರುತ್ತಿರುವಾಗ ಸೊಂಟದಿಂದ ಪಂಚೆ ಕಳಚುತ್ತಿರುವ ಅನುಭವಕ್ಕೆ ಬಂದಿದೆ. ತಕ್ಷಣ ಸಿದ್ದರಾಮಯ್ಯ ತಡವರಿಸಿಕೊಂಡು ಸೊಂಟಕ್ಕೆ ಕೈ ಹಾಕಿ ವೇದಿಕೆಯಲ್ಲೇ ಪಂಚೆ ಕಟ್ಟಿಕೊಂಡಿದ್ದಾರೆ.

    ಕಾರ್ಯಕರ್ತರು ಸಿದ್ದರಾಮಯ್ಯ ಪಂಚೆ ಕಟ್ಟಿಕೊಳ್ಳುತ್ತಿದ್ದಾಗಲೇ ಹಾರ ಹಾಕಿ ಸನ್ಮಾನಿಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ತಮ್ಮ ಪಂಚೆ ಕಟ್ಟಿಕೊಳ್ಳುವುದರಲ್ಲಿ ಮಗ್ನವಾಗಿದ್ದರು.

    https://www.youtube.com/watch?v=Ddpn4PiE4SI

  • ಪಂಚೆ ಹರೀತು, ಬೆಂಗಾವಲು ವಾಹನ ಆಕ್ಸಿಡೆಂಟಾಯ್ತು, ಹೆಲಿಕಾಪ್ಟರ್ ಹಾರಾಟಕ್ಕೆ ಕುತ್ತು ಬಂತು – ಇವತ್ತು ಸಿಎಂ ಟೈಂ ಚೆನ್ನಾಗಿರ್ಲಿಲ್ಲ..!

    ಪಂಚೆ ಹರೀತು, ಬೆಂಗಾವಲು ವಾಹನ ಆಕ್ಸಿಡೆಂಟಾಯ್ತು, ಹೆಲಿಕಾಪ್ಟರ್ ಹಾರಾಟಕ್ಕೆ ಕುತ್ತು ಬಂತು – ಇವತ್ತು ಸಿಎಂ ಟೈಂ ಚೆನ್ನಾಗಿರ್ಲಿಲ್ಲ..!

    ಚಿಕ್ಕಬಳ್ಳಾಪುರ: ಅದ್ಯಾಕೋ ಗೊತ್ತಿಲ್ಲ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟೈಂ ಚೆನ್ನಾಗಿಲ್ಲ ಅನಿಸತ್ತೆ. ಮೈಸೂರಿನಿಂದ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರ ಪಂಚೆ ಹರಿದಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದೇವಸ್ಥಾನ ಉದ್ಘಾಟನೆ ಬಳಿಕ ಹವಮಾನ ವೈಪರೀತ್ಯದಿಂದಾಗಿ ಸಿಎಂ ಹೆಲಿಕಾಪ್ಟರ್ ಪ್ರಯಾಣ ರದ್ದಾಯ್ತು. ಇದಾದ ಬಳಿಕ ಬೆಂಗಳೂರಿಗೆ ರಸ್ತೆ ಮಾರ್ಗದಲ್ಲಿ ಹೊರಟಿದ್ದ ಸಿಎಂ ಬೆಂಗಾವಲು ವಾಹನಗಳು ಅಪಘಾತಕ್ಕೀಡಾಯಿತು.

    ಚಿಕ್ಕಬಳ್ಳಾಪುರದಲ್ಲಿ ಏನೇನಾಯ್ತು?: ಮೈಸೂರಿನಿಂದ ಸಿಎಂ ನೇರವಾಗಿ ಹೆಲಿಕಾಪ್ಟರ್ ಮೂಲಕ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ರು. ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮದ ನೂತನ ಬಿರೇಶ್ವರ ಸ್ವಾಮಿ ದೇಗುಲದ ಉದ್ಘಾಟನೆಗೆಂದು ಜಿಲ್ಲೆಗೆ ಆಗಮಿಸಿದ್ದ ವೇಳೆ ಅಲ್ಲಿ ಅವರ ಪಂಚೆ ಹರಿದು ಇರುಸು ಮುರುಸು ಉಂಟಾಗಿತ್ತು. ದೇಗುಲ ಉದ್ಘಾಟನೆ ಕಾರ್ಯಕ್ರಮ ಮುಗಿಸಿ ಅಲ್ಲಿಂದ ಹೆಲಿಕಾಪ್ಟರ್ ಮೂಲಕವೇ ಮರಳಿ ಬೆಂಗಳೂರಿಗೆ ತೆರಳಲು ಪ್ರವಾಸ ನಿಗದಿಯಾಗಿತ್ತು. ಆದರೆ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಸಿಎಂ ಚಿಕ್ಕಬಳ್ಳಾಪುರದಿಂದ ಕಾರಿನಲ್ಲೇ ಬೆಂಗಳೂರಿನತ್ತ ಪ್ರಯಾಣ ಬೆಳೆಸುವಂತಾಯಿತು.

    ಆದರೆ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಸಿಎಂ ಕಾರಿನ ಹಿಂಭಾಗದಲ್ಲಿ ಸಂಚರಿಸುತ್ತಿದ್ದ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ಚಿಕ್ಕಬಳ್ಳಾಪುರ ತಾಲೂಕು ಸಬ್ಬೇನಹಳ್ಳಿ ಗ್ರಾಮದ ಬಳಿ ಆಂಬ್ಯುಲೆನ್ಸ್, ಶಾಸಕರ ಕಾರು ಹಾಗೂ ಮತ್ತೊಂದು ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಸಿಎಂ ಕಾರ್ಯಕ್ರಮಕ್ಕೆ ನಿಯೋಜನೆ ಮಾಡಲಾಗಿದ್ದ ಆಂಬ್ಯುಲೆನ್ಸ್ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ. ಸುಧಾಕರ್ ಅವರಿಗೆ ಸೇರಿದ್ದ ಕಾರು ಜಖಂಗೊಂಡಿದೆ. ಇದರಿಂದ ಶಾಸಕರ ಕಾರು ಸ್ಟಾರ್ಟ್ ಆಗದೇ ಸ್ಥಳದಲ್ಲೇ ಕೆಟ್ಟು ನಿಂತಿತ್ತು. ಆದ್ರೆ ಈ ಅಪಘಾತದ ವೇಳೆ ಸುಧಾಕರ್ ಕಾರಿನಲ್ಲಿ ಇರಲಿಲ್ಲ. ಒಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಇಂದು ಚಿಕ್ಕಬಳ್ಳಾಪುರಕ್ಕೆ ಭೇಟಿ ಕೊಟ್ಟ ಬಳಿಕ ಒಂದಲ್ಲಾ ಒಂದು ಅವಘಡ ಅವರಿಗೆ ಎದುರಾಗುತ್ತಿದೆ. ಕಳೆದ ವಾರವಷ್ಟೇ ಸಿಎಂ ಸಿದ್ದರಾಮಯ್ಯ ಮೀನೂಟ ತಿಂದು ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆದರೆ ತನ್ನ ಈ ನಡೆಯನ್ನು ಸಿಎಂ ಸಿದ್ದರಾಮಯ್ಯ ಅವರು ಸಮರ್ಥಿಸಿಕೊಂಡಿದ್ದರು.

    ಇಂದು ಬೆಳಗ್ಗೆ ಮೈಸೂರಿನಲ್ಲಿ ಪ್ರಧಾನಿ ಮೋದಿ ಕರ್ನಾಟಕ ಭೇಟಿ ಬಗ್ಗೆ ಮಾತನಾಡಿ, ಬಿಜೆಪಿಯವರಿಗೆ ನನ್ನ ಕಂಡರೆ ಭಯ ಇದೆ. ನಾನು ವೀಕ್ ಇದ್ದಿದ್ದರೆ ಪದೇ ಪದೇ ನನ್ನ ಮೇಲೆ ಯಾಕೆ ವಾಗ್ದಾಳಿ ಮಾಡುತ್ತಿದ್ದರು. ಈಗ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾಕೆ ಎಲ್ಲರೂ ಒಂದಾಗಿ ನನ್ನ ವಿರುದ್ಧ ತೊಡೆ ತಟ್ಟಿದ್ದಾರೆ. ಅವರೆಲ್ಲರಿಗೂ ನನ್ನ ಕಂಡರೆ ಭಯ ಇದೆ. ಸಿದ್ದರಾಮಯ್ಯ ಎಂದರೆ ಜೆಡಿಎಸ್, ಬಿಜೆಪಿ ಎಲ್ಲರಿಗೂ ಭಯ ಆರಂಭವಾಗಿದೆ. ರಾಜ್ಯದ ಜನ ಸಿದ್ದರಾಮಯ್ಯ ಪರ ಇದ್ದಾರೆ ಅನ್ನೋ ಭಯ ಇದೆ. ಬಿಜೆಪಿಯದ್ದು ಮಿಷನ್, ಕಾಂಗ್ರೆಸ್ ನದ್ದು ವಿಷನ್. ಬಿಜೆಪಿಯವರ ಮಿಷನ್ 150 ಈಗ 50ಕ್ಕೆ ಇಳಿದಿದೆ. ಚುನಾವಣೆ ವೇಳೆಗೆ ಅವರ ಮಿಷನ್ ಸಂಖ್ಯೆ ಇನ್ನೆಷ್ಟಕ್ಕೆ ಬರಲಿದೆಯೋ ಗೊತ್ತಿಲ್ಲ. ಅವರ ಮಿಷನ್ ವ್ಯಾಪ್ತಿ ಕಡಿಮೆ ಆಗಿದೆ ಎಂದು ಹೇಳಿದ್ದರು.

    ಭಾನುವಾರ ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಉಪವಾಸ ವ್ರತದಲ್ಲಿ ಭೇಟಿ ನೀಡಿದ ನಂತರ ಸಿಎಂ ಸಿದ್ದರಾಮಯ್ಯ ಭೇಟಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಈ ಚರ್ಚೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಇನ್ನು ಅಪಶಕುನಗಳು ಸಂಭವಿಸಲಿದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಈ ನಡುವೆ ಕಾಕತಾಳೀಯ ಎಂಬಂತೆ ಇವತ್ತು ಸಿಎಂ ಪಂಚೆ ಹರಿಯಿತು, ಬೆಂಗಾವಲು ವಾಹನ ಆಕ್ಸಿಡೆಂಟಾಯ್ತು, ಹೆಲಿಕಾಪ್ಟರ್ ಹಾರಾಟಕ್ಕೆ ಕುತ್ತು ಬಂದಿತ್ತು. ಹೀಗಾಗಿ ಮೀನೂಟ ಸೇವಿಸಿದ್ದರಿಂದಲೇ ಸಿಎಂಗೆ ಈ ರೀತಿ ಆಯ್ತು ಎನ್ನುವ ಮಾತುಗಳು ಈಗ ಕೇಳಿ ಬರುತಿದ್ದು, ಈ ಮಾತನ್ನು ನೀವು ಒಪ್ಪುತ್ತೀರಾ?

    https://www.youtube.com/watch?v=J7BS4S3mGUc

    https://www.youtube.com/watch?v=MA7MBr2r_ro

  • ದೇಗುಲ ಉದ್ಘಾಟನೆಗೆ ಬಂದ ಸಿಎಂ ಸಿದ್ದರಾಮಯ್ಯ ಪಂಚೆ ಹರಿದೋಯ್ತು..!

    ದೇಗುಲ ಉದ್ಘಾಟನೆಗೆ ಬಂದ ಸಿಎಂ ಸಿದ್ದರಾಮಯ್ಯ ಪಂಚೆ ಹರಿದೋಯ್ತು..!

    ಚಿಕ್ಕಬಳ್ಳಾಪುರ: ಹೊಸ ಪಂಚೆ, ಹೊಸ ಶಲ್ಯ ಧರಿಸಿ ಹೆಲಿಕಾಪ್ಟರ್ ನಲ್ಲಿ ಚಿಕ್ಕಬಳ್ಳಾಪುರಕ್ಕೆ ಬಂದಿಳಿದ ಸಿಎಂ ಸಿದ್ದರಾಮಯ್ಯನವರು ಅರೆಕ್ಷಣ ಕಸಿವಿಸಿಗೊಂಡ ಘಟನೆ ನಡೆದಿದೆ.

    ಅದಕ್ಕೆ ಕಾರಣವಾಗಿದ್ದು ಅವರ ಪಂಚೆ. ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ಗ್ರಾಮದ ನೂತನ ಬಿರೇಶ್ವರ ಸ್ವಾಮಿ ದೇಗುಲದ ಉದ್ಘಾಟನೆಗೆಂದು ಜಿಲ್ಲೆಗೆ ಆಗಮಿಸಿದ್ದರು.

    ಇದನ್ನೂ ಓದಿ: ಪ್ಯಾಂಟ್ ಬದ್ಲು ಪಂಚೆ ಉಡೋದ್ಯಾಕೆ: ಸಿಎಂ ಮಾತಲ್ಲೇ ಕೇಳಿ

    ಹೆಲಿಕಾಪ್ಟರ್ ನಿಂದ ಇಳಿದು ನಡೆದುಕೊಂಡು ಬರುವಾಗ ಮುಖ್ಯಮಂತ್ರಿಯವರಿಗೆ ತನ್ನ ಪಂಚೆಯ ಕೊನೆ ಹರಿದಿರುವ ವಿಚಾರ ಗಮನಕ್ಕೆ ಬಂತು. ಅಂತೆಯೇ ಸಿಎಂ ಅವರು ಅಲ್ಲಿಯೇ ಹರಿಯಲು ಯತ್ನಿಸಿದರಾದ್ರೂ ಅದು ಸಾಧ್ಯವಾಗಲಿಲ್ಲ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಲು ನಿಂತಿದ್ದ ವೇಳೆ ಪಂಚೆಯ ಕೊನೆಯನ್ನು ತನ್ನ ಕೈಯಲ್ಲಿ ಕಿತ್ತಾಕಿದ್ರು.

    ನಂತರ ಎಸ್ ಜೆ ಸಿ ಐಟಿ ಕಾಲೇಜಿನ ಪ್ರಾಂಶುಪಾಲರ ಕಚೇರಿಗೆ ಬಂದ ಸಿಎಂ ಸಿದ್ದರಾಮಯ್ಯ, ಹರಿದ ಪಂಚೆಯನ್ನ ಬದಲಿಸಿ, ಹೊಸ ಪಂಚೆ ಉಟ್ಟುಕೊಂಡು ದೇವರ ದರ್ಶನಕ್ಕೆ ತೆರಳಿದ್ರು.

    https://www.youtube.com/watch?v=w3IRCe2EFgk

  • ಪ್ಯಾಂಟ್ ಬದ್ಲು ಪಂಚೆ ಉಡೋದ್ಯಾಕೆ: ಸಿಎಂ ಮಾತಲ್ಲೇ ಕೇಳಿ

    ಪ್ಯಾಂಟ್ ಬದ್ಲು ಪಂಚೆ ಉಡೋದ್ಯಾಕೆ: ಸಿಎಂ ಮಾತಲ್ಲೇ ಕೇಳಿ

    ಬೆಂಗಳೂರು: ಪ್ಯಾಂಟ್ ಬದಲು ಪಂಚೆ ಉಡೋದು ಯಾಕೆ ಅನ್ನೊ ಸೀಕ್ರೇಟ್ ಅನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಬಿಚ್ಚಿಟ್ಟಿದ್ದಾರೆ.

    ವಿಕ್ಟೋರಿಯ ಆವಾರಣದಲ್ಲಿನ ನೆಫ್ರೊ ಯುರಾಲಜಿ ಅನೆಕ್ಸ್ ಕಟ್ಟಡ ಶಂಕು ಸ್ಥಾಪನೆ ಬಳಿಕ ಮಾತನಾಡಿದ ಸಿಎಂ, ನನಗೆ ಡ್ರೈ ಸ್ಕಿನ್ ಇತ್ತು. ಅದಕ್ಕೆ ನಾನು ಪಂಚೆ ಉಡುವಂತಾಯ್ತು ಅಂತ ತಮ್ಮ ಇತಿಹಾಸ ಹೇಳಿಕೊಂಡ್ರು.

    ನಂಗೆ ಚರ್ಮದ ಸಮಸ್ಯೆ ಇತ್ತು. ಒಬ್ಬ ಡಾಕ್ಟರ್ ಬಳಿ ಹೋಗಿದ್ದೆ ಅವ್ನು ಯಾವನೋ ಯಾವುದೋ ಯಾವುದೋ ಆಯಿಂಟ್ ಮೆಂಟ್ ಕೊಟ್ಟು ಸಮಸ್ಯೆ ತಂದಿಟ್ಟಿದ್ದ. ನಂಗೆ ಇದರಿಂದ ಸಿಕ್ಕಾಪಟ್ಟೆ ಸಮಸ್ಯೆ ಆಯ್ತು. ಮತ್ತೊಬ್ಬ ಡಾಕ್ಟರ್ ಪಂಚೆ ಉಟ್ಟುಕೊಳ್ಳಿ ಅಂತ ಹೇಳಿದ್ರು. ಅದಕ್ಕೆ ಪಂಚೆ ಉಡುತ್ತಿದ್ದೇನೆ ಅಂತ ಪಂಚೆ ರಹಸ್ಯ ಬಿಚ್ವಿಟ್ರು.

    ಬಳಿಕ ಇಂದಿರಾ ಕ್ಯಾಂಟೀನ್ ಬಗ್ಗೆ ಮಾತನಾಡಿದ ಸಿಎಂ, ಸರ್ಕಾರಿ ಆಸ್ಪತ್ರೆಯಲ್ಲಿ ಇಂದಿರಾ ಕ್ಯಾಂಟಿನ್ ಮಾಡುವ ನಿರ್ಧಾರ ಪ್ರಕಟಿಸಿದ್ರು. ವಿಕ್ಟೋರಿಯಾ, ಬೌರಿಂಗ್, ಕಿ ದ್ವಾಯ್, ಕೆಸಿ ಜನರಲ್, ಜೈದೇವಾದಲ್ಲಿ ಇಂದಿರಾ ಕ್ಯಾಂಟಿನ್ ಮಾಡ್ತೀವಿ. ರೋಗಿಗಳ ಜೊತೆ ಬರುವವರಿಗೂ ಊಟ ನೀಡುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡ್ತೀವಿ ಅಂದ್ರು.

    ಇದರ ಜೊತೆಗೆ ಬಡವರಿಗೆ ಉಚಿತ ವಾಗಿ ಆರೋಗ್ಯ ಚಿಕತ್ಸೆ ನೀಡುವ `ಆರೋಗ್ಯ ಭಾಗ್ಯ’ ಯೋಜನೆಯನ್ನ ಜಾರಿಗೆ ತರುತ್ತಿದ್ದು, ನವೆಂಬರ್ 1 ರಿಂದ ಯೋಜನೆ ಜಾರಿಗೆ ಬರುತ್ತೆ ಅಂದ್ರು.

    ನಮ್ಮ ಸರ್ಕಾರ ಬಂದ ಮೇಲೆ 12 ಹೊಸ ಮೆಡಿಕಲ್ ಕಾಲೇಜ್ ಮಾಡಿದ್ದೇವೆ. ಮತ್ತೆ ಹೊಸ 6 ಮೆಡಿಕಲ್ ಕಾಲೇಜು ಮಾಡ್ತೀವಿ. ಹೀಗೆ ಹಂತ ಹಂತವಾಗಿ 30 ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜ್ ಪ್ರಾರಂಭ ಮಾಡ್ತೀವಿ ಅಂತ ತಿಳಿಸಿದ್ರು. ಕಾರ್ಯಕ್ರಮದಲ್ಲಿ ವೈದ್ಯಕೀಯ ಸಚಿವ ಶರಣ ಪ್ರಕಾಶ ಪಾಟೀಲ್, ಮಾಜಿ ಸಚಿವ ಪರಿಷತ್ ಸದಸ್ಯ ರಾಮಚಂದ್ರಗೌಡ ಇನ್ನಿತರರು ಉಪಸ್ಥಿತರಿದ್ದರು.

    https://www.youtube.com/watch?v=w3IRCe2EFgk