Tag: ಪಂಚಾಯಿತಿ

  • ರಸ್ತೆ ಕಾಂಕ್ರೀಟಿಕರಣ ತಡೆದ ಮಹಿಳೆ – ಛತ್ರಿಯ ಹಿಡಿಯಲ್ಲಿ ತಲೆ ಒಡೆದ ಪಂಚಾಯಿತಿ ಸದಸ್ಯ

    ರಸ್ತೆ ಕಾಂಕ್ರೀಟಿಕರಣ ತಡೆದ ಮಹಿಳೆ – ಛತ್ರಿಯ ಹಿಡಿಯಲ್ಲಿ ತಲೆ ಒಡೆದ ಪಂಚಾಯಿತಿ ಸದಸ್ಯ

    ಉಡುಪಿ: ನಮ್ಮ ಮನೆಯ ಮುಂದೆ ರಸ್ತೆ ಆಗಲಿ, ನಮ್ಮ ಊರು ಉದ್ಧಾರ ಆಗಲಿ ಅಂತ ಎಲ್ಲರೂ ಅಪೇಕ್ಷಿಸುತ್ತಾರೆ. ಆದರೆ ಉಡುಪಿಯ ಆತ್ರಾಡಿಯಲ್ಲೊಂದು ವಿಚಿತ್ರ ಘಟನೆ ನಡೆದಿದೆ. ನಮ್ಮ ಮನೆಯ ಮುಂದೆ ರಸ್ತೆ ಬೇಡ ಎಂದು ಮಹಿಳೆಯೊಬ್ಬರು ರಂಪಾಟ ಮಾಡಿದ್ದಾರೆ. ಇದರಿಂದ ಕೋಪಗೊಂಡ ಪಂಚಾಯಿತಿ ಸದಸ್ಯ ಛತ್ರಿಯ ಹಿಡಿಯಲ್ಲಿ ಮಹಿಳೆಯ ತಲೆ ಒಡೆದಿದ್ದಾರೆ.

    ಉಡುಪಿ ಸಮೀಪದ ಆತ್ರಾಡಿ ಗ್ರಾಮ ಪಂಚಾಯಿತಿ ಸದಸ್ಯ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಸಂಗ ನಡೆದಿದೆ. ಖಾಸಗಿ ಜಾಗದಲ್ಲಿ ರಸ್ತೆ ನಿರ್ಮಿಸಲು ತಡೆಯೊಡ್ಡಿದ್ದಕ್ಕಾಗಿ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಹಲ್ಲೆ ನಡೆಸಲಾಗಿದೆ. ಆತ್ರಾಡಿ ಸಮೀಪದ ಪಡುಮನೆ ನಾಗಬನ ನಿವಾಸಿ ಆರತಿ(45) ಹಲ್ಲೆಗೊಳಗಾದ ಮಹಿಳೆ. ಆಕೆ ರಸ್ತೆ ಅಭಿವೃದ್ಧಿಗೆ ಅಡ್ಡಿಪಡಿಸಿದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ.

    ಆರತಿಯವರ ಪಟ್ಟಾ ಜಾಗದಲ್ಲಿ ವಿರೋಧದ ನಡುವೆಯೂ ಆತ್ರಾಡಿ ಗ್ರಾಮ ಪಂಚಾಯಿತಿ ಕಾಂಕ್ರೀಟ್ ರಸ್ತೆ ನಿರ್ಮಿಸಲು ತಯಾರು ನಡೆಸಿತ್ತು. ಮನೆಯವರ ಆಕ್ಷೇಪ ಇದ್ದರೂ ರಸ್ತೆ ಕಾಮಗಾರಿ ಪ್ರಾರಂಭಿಸಿದ್ದನ್ನು ಆರತಿ ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಸ್ಥಳದಲ್ಲಿದ್ದ ಪಂಚಾಯಿತಿ ಸದಸ್ಯ ರತ್ನಾಕರ್ ಶೆಟ್ಟಿ ತಳ್ಳಿದ್ದಾರೆ. ಆರತಿ ತನ್ನ ಚಪ್ಪಲಿ ತೆಗೆದು ರತ್ನಾಕರ್ ಶೆಟ್ಟಿ ಮತ್ತು ಪಕ್ಕದಲ್ಲಿದ್ದವರ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗದಿದ್ದರೇ ಕೊಲೆ ಮಾಡುವುದಾಗಿ ಬೆದರಿಕೆ- ಇಬ್ಬರ ವಿರುದ್ಧ ಎಫ್‍ಐಆರ್

    ಕೋಪಗೊಂಡ ಚಂದ್ರಹಾಸ್ ಶೆಟ್ಟಿ ಹಾಗೂ ಸಂತೋಷ್ ಪೂಜಾರಿ ಆರತಿಯ ಮೇಲೆ ಹಲ್ಲೆ ನಡೆಸಿದ್ದಾರೆ. ವಾಗ್ವಾದದ ಸಂದರ್ಭ ರತ್ನಾಕರ್ ಶೆಟ್ಟಿ ಛತ್ರಿಯ ಹಿಡಿಯಲ್ಲಿ ಹೊಡೆದು ಆರತಿಯವರನ್ನು ತಳ್ಳಿದ ಪರಿಣಾಮ ಅವರ ತಲೆಗೆ ಗಂಭೀರ ಗಾಯವಾಗಿದೆ. ಗಲಾಟೆಯನ್ನು ತಡೆಯಲು ಬಂದ ಆರತಿ ಅವರ ಮಗಳ ಮೇಲೂ ಹಲ್ಲೆ ನಡೆಸಲಾಗಿದೆ.

    ಇದೀಗ ಆರತಿ ಅವರು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ರತ್ನಾಕರ್ ಶೆಟ್ಟಿ ಮತ್ತು ತಂಡ ಈ ಬಗ್ಗೆ ಇನ್ನಷ್ಟೇ ಸ್ಪಷ್ಟನೆ ಕೊಡಬೇಕಾಗಿದೆ. ಇದನ್ನೂ ಓದಿ: ಕೋರ್ಟ್ ಮುಂದೆಯೇ ರೌಡಿಶೀಟರ್ ಮೇಲೆ ಅಟ್ಯಾಕ್ – ದುಷ್ಕರ್ಮಿಗಳನ್ನು ಹಿಡಿದು ಠಾಣೆಗೆ ದಬ್ಬಿದ ಪೊಲೀಸ್ರು

    Live Tv
    [brid partner=56869869 player=32851 video=960834 autoplay=true]

  • ಓಬಿಸಿ ಮೀಸಲಾತಿ ಕೈಬಿಟ್ಟು ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸುವುದಿಲ್ಲ: ಈಶ್ವರಪ್ಪ

    ಓಬಿಸಿ ಮೀಸಲಾತಿ ಕೈಬಿಟ್ಟು ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸುವುದಿಲ್ಲ: ಈಶ್ವರಪ್ಪ

    ಬೆಂಗಳೂರು: ಹಿಂದುಳಿದ ವರ್ಗಗಳ ಮೀಸಲಾತಿ ಬಿಟ್ಟು ಯಾವುದೇ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ‌ಮಾಡೋದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌ ಈಶ್ವರಪ್ಪ ಭರವಸೆ ನೀಡಿದ್ದಾರೆ.

    ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಮರಿತಿಬ್ಬೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಮೀಸಲಾತಿ‌ ಬಿಟ್ಟು ಚುನಾವಣೆ ಮಾಡೋದಿಲ್ಲ ಎಂದು ಭರವಸೆ ಕೊಟ್ಟಿದ್ದಾರೆ.

    ಜಿಲ್ಲಾ ಪಂಚಾಯಿತಿ ಚುನಾವಣೆ ಯಾಕೆ ಮಾಡುತ್ತಿಲ್ಲ.‌ ಯಾವಾಗ ಜಿಲ್ಲಾ ಪಂಚಾಯಿತ ಚುನಾವಣೆ ನಡೆಸುತ್ತೀರಾ? ಈಗಾಗಲೇ 11 ತಿಂಗಳಿಂದ ಆಡಳಿತ ಅಧಿಕಾರಿಗಳು ಜಿಲ್ಲಾ ಪಂಚಾಯಿತಿಯಲ್ಲಿ ಕೆಲಸ ನಡೆಸುತ್ತಿದ್ದಾರೆ.  ಎಷ್ಟು ದಿನಗಳಲ್ಲಿ ಚುನಾವಣೆ ಮಾಡ್ತೀರಾ.?ವಿಧಾನಸಭೆ ಮಾತ್ರ ಇಟ್ಟುಕೊಂಡು ಎಲ್ಲಾ ಇಲಾಖೆ ಮುಚ್ಚಿ ಬಿಡಿ ಅಂತ ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: ಗೋವಾದಲ್ಲಿ ಅತಂತ್ರ ಫಲಿತಾಂಶ – ಕುದುರೆ ವ್ಯಾಪಾರಕ್ಕೆ ವೇದಿಕೆ ಸಜ್ಜು

    ಚುನಾವಣೆ ಆಯೋಗಕ್ಕೆ ಚುನಾವಣೆ ಮಾಡಲು ನಾವು ಪತ್ರ ಬರೆದೇವು. ಆಗ ಚುನಾವಣೆ ಆಯೋಗ ಚುನಾವಣೆ ಕ್ಷೇತ್ರಗಳ ಸೀಮಾ ನಿರ್ಣಯ ಮಾಡಿತು.‌ ಇದರ ವಿರುದ್ದ 888 ಆಕ್ಷೆಪಣೆ ಬಂದವು.‌ ಹೀಗಾಗಿ ಸೀಮಾ ನಿರ್ಣಯ ಮಾಡಲು ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಸಮಿತಿ ವರದಿ ಬಂದ ಕೂಡಲೇ ಚುನಾವಣೆ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗೋವಾದಲ್ಲಿ ಕಾಂಗ್ರೆಸ್ ಸೋಲಿನ ಅಸಲಿಯತ್ತು ಬಹಿರಂಗ

    ಆತಂಕ ವಿಚಾರ ಅಂದರೆ ಓಬಿಸಿ ವಿಚಾರವಾಗಿ ಸುಪ್ರೀಂಕೋರ್ಟ್ ಒಂದು ತೀರ್ಪು ನೀಡಿದೆ. ಓಬಿಸಿ ಮೀಸಲಾತಿ ಬಿಟ್ಟು ಚುನಾವಣೆ ನಡೆಸುವಂತೆ ಹೇಳಿದೆ. ಇದು ನಮಗೆ ಸಮಸ್ಯೆ ಆಗ್ತಿದೆ. ಹೀಗಾಗಿ ಓಬಿಸಿ ಮೀಸಲಾತಿ ಇಟ್ಟುಕೊಂಡು ಚುನಾವಣೆ ಮಾಡಲು ಸರ್ಕಾರ ಚರ್ಚೆ ಮಾಡುತ್ತೇವೆ. ಈಗಾಗಲೇ ಸಿಎಂ ಜೊತೆ ಸಭೆ ಮಾಡಲಾಗಿದೆ. ಓಬಿಸಿ ಮೀಸಲಾತಿ ಸೇರಿಸಿಕೊಂಡು ಚುನಾವಣೆ ಮಾಡಲು ಕಾನೂನು ತಜ್ಞರ ಜೊತೆ ಚರ್ಚೆ ಆಗ್ತಿದೆ. ಈ ಬಗ್ಗೆ ಚರ್ಚೆ ಮಾಡಿ ಶೀಘ್ರವೇ ನಿರ್ಧಾರ ಮಾಡುತ್ತೇವೆ. ಓಬಿಸಿ ಮೀಸಲಾತಿ ಬಿಟ್ಟು ಸರ್ಕಾರ ಯಾವುದೇ ಕಾರಣಕ್ಕೂ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ನಡೆಸೊಲ್ಲ ಅಂತ ಭರವಸೆ ಕೊಟ್ಟರು.

    ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸಿದ್ದರಾಮಯ್ಯರಿಂದ ಮೋಸ: ಚರ್ಚೆ ವೇಳೆ‌ ವಿಪಕ್ಷ ನಾಯಕ ಹರಿಪ್ರಸಾದ್,‌ ಸಿದ್ದರಾಮಯ್ಯ ಅವಧಿಯಲ್ಲಿ ಜಾತಿ ಗಣತಿ ಆಗಿದೆ. ಕಾಂತರಾಜು ಆಯೋಗದ ಗಣತಿ ಅಂಕಿಅಂಶಗಳನ್ನ ಸುಪ್ರೀಂಕೋರ್ಟ್‌ಗೆ ನೀಡಿ‌ ಮೀಸಲಾತಿ ಬಗ್ಗೆ ತೀರ್ಮಾನ ಮಾಡಿ ಅಂತ ಸಲಹೆ ನೀಡಿದರು. ಅಲ್ಲದೆ ನೀವು ಅಧಿಕಾರದಿಂದ ಇಳಿಯೋ ಮುನ್ನ ಓಬಿಸಿಗೆ ಒಳ್ಳೆ ಕೆಲಸ ಮಾಡಿ ಎಂದರು.‌ ಇದಕ್ಕೆ ತಿರುಗೇಟು ಕೊಟ್ಟ ಸಚಿವ ಈಶ್ವರಪ್ಪ, ನಿಮ್ಮ ಬಾಯಿಗೆ ಸಕ್ಕರೆ ಹಾಕಲಾ? ಚಿಕನ್ ಹಾಕಲಾ? ಮೀನು ಹಾಕಲಾ ಸಿದ್ದರಾಮಯ್ಯ, ಸಿದ್ದರಾಮಯ್ಯ ಅಂತೀರಾ ನೀವು. ಹಿಂದುಳಿದ ವರ್ಗಗಳಿಗೆ ರಾಜ್ಯದಲ್ಲಿ ಯಾರಾದ್ರು ಮೋಸ ಮಾಡಿದ್ರೆ ಅದು ಸಿದ್ದರಾಮಯ್ಯ ಮಾತ್ರ . ಓಬಿಸಿ ಜನಾಂಗಕ್ಕೆ‌ ಸಿದ್ದರಾಮಯ್ಯ ಏನು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು. ಮಧ್ಯೆ ಪ್ರವೇಶ ಮಾಡಿದ ಹರಿಪ್ರಸಾದ್, ನಿಮ್ಮ ಮತ್ತು ಸಿದ್ದರಾಮಯ್ಯ ನಡುವೆ ಇರೋ ಮ್ಯಾಚ್ ಫಿಕ್ಸಿಂಗ್ ನಮಗೆ ಗೊತ್ತಿಲ್ಲ. ಅದಕ್ಕೆ ಸಚಿವ ಈಶ್ವರಪ್ಪ, ನನ್ನ ಸಿದ್ದರಾಮಯ್ಯ ಸಂಬಂಧ ಈ ಜನ್ಮದಲ್ಲಿ ಯಾರಿಗೂ ಗೊತ್ತಾಗೊಲ್ಲ ಎಂದು ಟಾಂಗ್ ಕೊಟ್ಟರು. ಅಲ್ಲದೆ ಕಾಂತರಾಜು ವರದಿ ಆಯೋಗದ ಅಂಕಿಅಂಶಗಳನ್ನ ಬಳಕೆ ಮಾಡಲು ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.

  • ಜೈಲಿನಲ್ಲಿ 6 ವರ್ಷ ಇದ್ದವನು ಇದೀಗ ಊರಿನ ಮುಖ್ಯಸ್ಥ

    ಜೈಲಿನಲ್ಲಿ 6 ವರ್ಷ ಇದ್ದವನು ಇದೀಗ ಊರಿನ ಮುಖ್ಯಸ್ಥ

    ಲಕ್ನೋ: ಆರು ವರ್ಷಗಳ ಕಾಲ ಜೈಲಲ್ಲಿದ್ದವ ಈಗ ಗ್ರಾಮದ ಮುಖ್ಯಸ್ಥನಾಗಿದ್ದಾನೆ. ಜೈಲಿನಿಂದಲೇ ನಾಮಪತ್ರಸಲ್ಲಿಸಿದ್ದವ ಭಾರೀ ಅಂತರದೊಂದಿಗೆ ಗೆದ್ದಿದ್ದಾನೆ.

    ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಛುನಾವ್ ಗ್ರಾಮದಲ್ಲಿನ ರಾಮದಾಸ್ ಕಳೆದ 6 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದಾನೆ. ಕಳ್ಳತನ, ಮೋಸ, ವಂಚೆನ, ಕೊಲೆ ಸೇರಿ ಒಟ್ಟು 12 ಪ್ರಕರಣಗಳು ಆತನ ವಿದುದ್ಧವಿದೆ. ಹಾಗಿದ್ದರು ಗ್ರಾಮಸ್ಥರು ಆತನನ್ನೇ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆ ಮಾಡಿದ್ದಾರೆ.

    ರಾಮದಾಸ್ ಪಂಚಾಯಿತಿ ಚುನಾವಣೆಗೆ ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ್ದನಂತೆ. ರಾಮದಾಸ್‍ಗೆ 786 ಮತಗಳು ಬಂದಿವೆ. ಇವನ ಪ್ರತಿಸ್ಪರ್ಧಿಗೆ 300 ಮತಗಳು ಬಂದಿದೆ. ಗ್ರಾಮಸ್ಥರು ಇಟ್ಟಿರುವ ನಂಬಿಕೆ ಬಗ್ಗೆ ಸಂತೋಷವಾಗಿದೆ. ಇನ್ನೆಂದೂ ತಪ್ಪು ಕೆಲಸ ಮಾಡುವುದಿಲ್ಲ. ಗ್ರಾಮಕ್ಕಾಗಿ ದುಡಿಯುತ್ತೇನೆ ಎಂದು ರಾಮದಾಸ್ ಭರವಸೆ ನೀಡಿದ್ದಾನೆ.

  • 15ರ ಬಾಲಕಿ ಮೇಲೆ ರೇಪ್ – ಮಗುವನ್ನೇ ಮಾರಿ ಸಂತ್ರಸ್ತೆಗೆ ಪರಿಹಾರ ನೀಡಲು ಆದೇಶ

    15ರ ಬಾಲಕಿ ಮೇಲೆ ರೇಪ್ – ಮಗುವನ್ನೇ ಮಾರಿ ಸಂತ್ರಸ್ತೆಗೆ ಪರಿಹಾರ ನೀಡಲು ಆದೇಶ

    ಪಾಟ್ನಾ: 15 ವರ್ಷದ ಬಾಲಕಿ ಮೇಲೆ ಇಬ್ಬರು ಅತ್ಯಾಚಾರ ಎಸಗಿದ್ದು, ಬಾಲಕಿ ಗರ್ಭಿಣಿಯಾಗಿದ್ದಾಳೆ. ಇದಕ್ಕೆ ಪರಿಹಾರ ಕೇಳಿದರೆ ಮಗುವನ್ನು ಮಾರಿ ಸಂತ್ರಸ್ತೆಗೆ ಪರಿಹಾರ ನೀಡಿ ಎಂದು ಅಲ್ಲಿನ ಸ್ಥಳೀಯ ಪಂಚಾಯಿತಿ ಆರೋಪಿಗಳಿಗೆ ಆದೇಶಿಸಿರುವ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ.

    ಬಿಹಾರದ ಮುಜಫರ್ಪುರದ ಕತ್ರಾದಲ್ಲಿ ಘಟನೆ ನಡೆದಿದ್ದು, 15 ವರ್ಷದ ಬಾಲಕಿ ಮೇಲೆ ಮೌಲಾನಾ ಮಕ್ಬೂಲ್ ಹಾಗೂ ಮಹಮ್ಮದ್ ಶೋಯೆಬ್ ಅತ್ಯಾಚಾರ ಎಸಗಿದ್ದಾರೆ. ಬಾಲಕಿ ಗರ್ಭಿಣಿಯಾಗಿದ್ದಾಳೆ. ಇದಕ್ಕೆ ಪರಿಹಾರ ಕೇಳಲು ಅಲ್ಲಿನ ಸಮುದಾಯ ಪಂಚಾಯಿತಿ ಮೊರೆ ಹೋದರೆ, ಅದೇ ಮಗುವನ್ನು ಮಾರಾಟ ಮಾಡಿ ಬಂದ ಹಣವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡುವಂತೆ ಆದೇಶಿಸಿದೆ.

    ಸಮುದಾಯ ಪಂಚಾಯಿತಿಯಲ್ಲಿ ನ್ಯಾಯ ಸಿಗದ ಕಾರಣ ಬಾಲಕಿ ಮುಜಾಫರ್ಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದ್ದು, ಆರೋಪಿಗಳಾದ ಮೌಲಾನಾ ಮಕ್ಬೂಲ್ ಹಾಗೂ ಮಹಮ್ಮದ್ ಶೋಯೆಬ್ ಬಂಧಿಸಲು ಪೊಲೀಸರು ದಾಳಿ ನಡೆಸುತ್ತಿದ್ದಾರೆ.

    ಕತ್ರ ಮಸೀದಿ ಸಮಿತಿಯ ಸದಸ್ಯ ಮುಹಮ್ಮದ್ ಸದ್ರೆ ಈ ಕುರಿತು ಮಾಹಿತಿ ನೀಡಿ, ಈ ವರ್ಷದ ಆರಂಭದಿಂದಲೂ ಸಮುದಾಯ ಪಂಚಾಯಿತಿಯಲ್ಲಿ ಈ ಪ್ರಕರಣ ವಿಚಾರಣೆ ನಡೆಯುತ್ತಿದ್ದು, ಅತ್ಯಾಚಾರ ನಡೆದಿರುವ ಕುರಿತು ಅಪ್ರಾಪ್ತ ಬಾಲಕಿ ನ್ಯಾಯ ಕೇಳುತ್ತಿದ್ದಾಳೆ. ಕಳೆದ ತಿಂಗಳು ಅವಳು ಮಗುವಿಗೆ ಜನ್ಮ ನೀಡಿದ್ದಾಳೆ. ಈ ದುಃಸ್ಥಿತಿಗೆ ನಮ್ಮ ಸಮುದಾಯ ಪಂಚಾಯಿತಿಯೇ ಕಾರಣ. ಮಗುವನ್ನು ಮಾರಿ ಬಂದ ಹಣವನ್ನು ಅವಳಿಗೆ ನೀಡುವಂತೆ ಆದೇಶಿಸಿದೆ ಎಂದರು.

    ಸಮಸ್ತಿಪುರ ಜಿಲ್ಲೆಯ ತಾಜ್‍ಪುರದಲ್ಲಿ ಈ ಕುರಿತು ಕುಟುಂಬದವರೊಂದಿಗೆ ಮಾತುಕತೆ ನಡೆಸಲಾಯಿತು. ಮಗುವನ್ನು ಒಂದು ಲಕ್ಷಕ್ಕೆ ಅವರಿಗೆ ಮಾರಾಟ ಮಾಡಬೇಕಾಗಿತ್ತು. ಆದರೆ ನಾನು ಅದರಲ್ಲಿ ಮಧ್ಯ ಪ್ರವೇಶಿಸಲಿಲ್ಲ. ಮಗುವನ್ನು ಮಾರಾಟ ಮಾಡಿರುವ ಕುರಿತು ನನಗೆ ತಿಳಿದಿಲ್ಲ ಎಂದು ಮಾಹಿತಿ ನೀಡಿದರು.

    ಕತ್ರಾ ಪಂಚಾಯತ್‍ನ ಚುನಾಯಿತ ಸದಸ್ಯ ಅರುಣ್ ಕುಮಾರ್ ಈ ಕುರಿತು ಮಾಹಿತಿ ನೀಡಿ, ನಾನು ಈ ಕುರಿತು ಮಧ್ಯ ಪ್ರವೇಶಿಸಿ ನ್ಯಾಯ ಕೊಡಿಸಬೇಕೆಂದು ಬಾಲಕಿ ನನ್ನನ್ನು ಸಂಪರ್ಕಿಸಿದಳು. ಇಂತಹ ಅಪರಾಧಗಳು ಪಂಚಾಯಿತಿಗಳಿಂದ ಇತ್ಯರ್ಥವಾಗುವುದಿಲ್ಲ. ಪೊಲೀಸರಿಗೆ ಈ ಕುರಿತು ದೂರು ನೀಡುಂತೆ ಸಲಹೆ ನೀಡಿದೆ. ಅಲ್ಲದೆ ಪೊಲೀಸರಿಗೆ ಬರೆಯುವ ಅರ್ಜಿ ಎಲ್ಲಿ ಸಿಗುತ್ತದೆ ಎಂಬುದನ್ನು ಸಹ ಅವಳಿಗೆ ಹೇಳಿದ್ದೆ ಎಂದು ತಿಳಿಸಿದರು. ಆದರೂ ಅವರು ಮಸೀದಿಯ ಸಮಿತಿಯನ್ನು ಸಂಪರ್ಕಿಸಲು ನಿರ್ಧರಿಸಿದರು. ಸಮಸ್ಯೆ ಬಗೆಹರಿಸಲು ಸಮಿತಿ ಒಂದೆರಡು ಬಾರಿ ಪಂಚಾಯಿತಿ ನಡೆಸಿತು. ಆದರೆ ಪ್ರಯೋಜನವಾಗಲಿಲ್ಲ ಎಂದು ತಿಳಿಸಿದರು.

    ಮಗುವನ್ನು ಮಾರಾಟ ಮಾಡಲು ಪಂಚಾಯಿತಿ ಆದೇಶ ನೀಡಿದ ನಂತರ ಬಾಲಕಿ ಜಿಲ್ಲಾ ಮಹಿಳಾ ಪೊಲೀಸರಿಗೆ ದೂರು ನೀಡಿದ್ದಾಳೆ. ಮೌಲಾನಾ ಮಕ್ಬೂಲ್‍ಗೆ ಅಲ್ಲಿನ ಕುಟುಂಬದ ಸದಸ್ಯರು ಆಹಾರವನ್ನು ಕಳುಹಿಸುತ್ತಿದ್ದರು. ಕೆಲವೊಮ್ಮೆ ಕುಟುಂಬಗಳು ಹುಡುಗಿಯರ ಬಳಿ ಅವನಿಗೆ ಆಹಾರ ಕಳುಹಿಸುತ್ತಿದ್ದರು. ಅದೆ ರೀತಿ ಬಾಲಕಿ ಆಹಾರ ನೀಡಲು ತೆರಳಿದಾಗ ಆರೋಪಿ ಮಾದಕ ವಸ್ತುಗಳನ್ನು ಲೇಪಿಸಿದ ಸಿಹಿ ತಿಂಡಿಯನ್ನು ನೀಡಿದ್ದ. ಆಹಾರ ನೀಡಿ ಹೊರ ಬರುತ್ತಿದ್ದಂತೆಯೇ ಅವಳ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂಬುದಾಗಿ ದೂರು ದಾಖಲಾಗಿದೆ ಎಂಧು ಎಂದು ಪೊಲೀಸರು ತಿಳಿಸಿದ್ದಾರೆ.

    ಅತ್ಯಾಚಾರ ಎಸಗಿದ ನಂತರ ಎರಡು ತಿಂಗಳುಗಳ ಕಾಲ ಬಾಲಕಿಗೆ ಆರೋಪಿ ಬೆದರಿಕೆ ಒಡ್ಡಿದ್ದು, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ನಂತರ ಸ್ಥಳೀಯ ಯುವಕ ಶೋಯೆಬ್ ಪರಿಸ್ಥಿತಿಯ ಬಗ್ಗೆ ತಿಳಿದಿದ್ದು, ಅವನೂ ಸಹ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಸವಿತಾ ದೇವಿ ತಿಳಿಸಿದ್ದಾರೆ.

    ಪರಿಹಾರದ ಎಲ್ಲ ಬಾಗಿಲುಗಳು ಮುಚ್ಚಿದ ನಂತರ ಬಾಲಕಿ ನಮ್ಮ ಬಳಿ ಬಂದಿದ್ದಾಳೆ. ಈ ಕುರಿತು ಐಪಿಸಿ ಮತ್ತು ಪೋಕ್ಸೋ ಕೇಸ್ ಅಡಿ ಪ್ರಕರಣ ದಾಖಲಿಸಿದ್ದೇವೆ. ಹಳ್ಳಿಯಲ್ಲಿ ಮೂರು ಬಾರಿ ದಾಳಿ ನಡೆಸಲಾಗಿದ್ದು, ಆರೋಪಿಗಳು ಪತ್ತೆಯಾಗಿಲ್ಲ. ಆರೋಪಿಗಳ ಮಾಹಿತಿ ನೀಡುವಂತೆ ಪೋಸ್ಟರ್ ಅಂಟಿಸುತ್ತೇವೆ ಎಂದು ತಿಳಿಸಿದ್ದಾರೆ.

    ಮಗುವಿನ ಹುಟ್ಟಿಗೆ ಇಬ್ಬರಲ್ಲಿ ಕಾರಣ ಯಾರು ಎಂಬುದನ್ನು ತಿಳಿಯಲು ಡಿಎನ್‍ಎ ಪರೀಕ್ಷೆ ಮಾಡಿಸುತ್ತಿದ್ದೇವೆ ಎಂದು ಹಿರಿಯ ಅಧೀಕಾರಿಗಳು ಮಾಹಿತಿ ನೀಡಿದ್ದಾರೆ.