Tag: ಪಂಚರಾಜ್ಯಗಳ ಚುನಾವಣೆ

  • ಪಂಚರಾಜ್ಯಗಳ ಚುನಾವಣೆ: ಸೋಮವಾರ ಅಂತಿಮ ಹಂತದ ಮತದಾನ – ಮಾರ್ಚ್ 10ಕ್ಕೆ ಫಲಿತಾಂಶ

    ಪಂಚರಾಜ್ಯಗಳ ಚುನಾವಣೆ: ಸೋಮವಾರ ಅಂತಿಮ ಹಂತದ ಮತದಾನ – ಮಾರ್ಚ್ 10ಕ್ಕೆ ಫಲಿತಾಂಶ

    ನವದೆಹಲಿ: ದೇಶದ ಚಿತ್ತ ಸೆಳೆದಿರುವ ಪಂಚರಾಜ್ಯಗಳ ಚುನಾವಣೆ ಕೊನೆಘಟ್ಟಕ್ಕೆ ಬಂದಿದೆ. ನಾಳೆ ಉತ್ತರ ಪ್ರದೇಶದ 54 ವಿಧಾನಸಭಾ ಕ್ಷೇತ್ರಗಳಲ್ಲಿ ಅಂತಿಮ ಹಂತದ ಮತದಾನ ನಡೆಯಲಿದೆ.

    ಕಳೆದ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಗೆದ್ದಿದ್ದ ಬಿಜೆಪಿಗೆ ಈ ಬಾರಿ ಕಠಿಣ ಸ್ಪರ್ಧೆ ಎದುರಾಗಿದೆ. ಸಮಾಜವಾದಿ ಪಕ್ಷ ಪ್ರಬಲ ಪೈಪೋಟಿ ನೀಡಿದ್ದು ಬಹುಕೋನ ಸ್ಪರ್ಧೆ ಇದೆ. ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಾಣಾಸಿಯಲ್ಲಿಯೂ ನಾಳೆ ಮತದಾನ ನಡೆಯಲಿದೆ. ಪೂರ್ವಾಚಲದಲ್ಲಿ ಸಣ್ಣ ಪಕ್ಷಗಳು ಪ್ರಮುಖ ಪಾತ್ರ ವಹಿಸುವ ಸಂಭವ ಇದೆ. ನಲೆ ಸಂಜೆ ಆರು ಗಂಟೆ ನಂತರ ಐದು ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಲಿದೆ. ಇದನ್ನೂ ಓದಿ: ಶೇನ್ ವಾರ್ನ್ ಕೋಣೆ, ಟವೆಲ್‍ನಲ್ಲಿ ರಕ್ತದ ಕಣ ಇತ್ತು: ಥಾಯ್ಲೆಂಡ್ ಪೊಲೀಸ್

    ಯಾವ ರಾಜ್ಯದಲ್ಲಿ ಯಾವ ಪಕ್ಷ ಗೆಲ್ಲಬಹುದು ಎಂಬ ಬಗ್ಗೆ ಹಲವು ಸಂಸ್ಥೆಗಳು, ಹಲವು ವಾಹಿನಿಗಳ ಜೊತೆಗೂಡಿ ಎಕ್ಸಿಟ್ ಪೋಲ್ ಪ್ರಕಟಿಸಲಿವೆ. ಪಂಚರಾಜ್ಯಗಳ ಅಸಲಿ ಫಲಿತಾಂಶ ಮಾರ್ಚ್ 10 ರಂದು ಪ್ರಕಟವಾಗಲಿದೆ. ಇದನ್ನೂ ಓದಿ: ಶ್ರೀನಗರದಲ್ಲಿ ಉಗ್ರರ ಅಟ್ಟಹಾಸ – ಗ್ರೆನೇಡ್ ದಾಳಿಗೆ ಓರ್ವ ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

  • ರಾಜಸ್ಥಾನದಲ್ಲಿ ಕಾಂಗ್ರೆಸ್, ತೆಲಂಗಾಣದಲ್ಲಿ ಟಿಆರ್‌ಎಸ್‌ – ಮಧ್ಯಪ್ರದೇಶ, ಛತ್ತೀಸ್‍ಗಢ ಕೈ, ಕಮಲ ಮಧ್ಯೆ ಭಾರೀ ಫೈಟ್

    ರಾಜಸ್ಥಾನದಲ್ಲಿ ಕಾಂಗ್ರೆಸ್, ತೆಲಂಗಾಣದಲ್ಲಿ ಟಿಆರ್‌ಎಸ್‌ – ಮಧ್ಯಪ್ರದೇಶ, ಛತ್ತೀಸ್‍ಗಢ ಕೈ, ಕಮಲ ಮಧ್ಯೆ ಭಾರೀ ಫೈಟ್

    ನವದೆಹಲಿ: ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿಸಲಾಗಿರುವ ಪಂಚರಾಜ್ಯಗಳ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಪ್ರಕಟಗೊಂಡಿದ್ದು ರಾಜಸ್ಥಾನದಲ್ಲಿ ಕಾಂಗ್ರೆಸ್ ಕಮಾಲ್ ಮಾಡಲಿದ್ದರೆ, ಛತ್ತೀಸ್‍ಗಢ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಕಂಡುಬಂದಿದೆ. ತೆಲಂಗಾಣದಲ್ಲಿ ನಿರೀಕ್ಷೆಯಂತೆ ಚಂದ್ರಶೇಖರ್ ರಾವ್ ಅವರ ಟಿಆರ್‌ಎಸ್‌ ಜಯಗಳಿಸಲಿದ್ದ, ಚಿಕ್ಕ ರಾಜ್ಯವಾದ ಮಿಜೋರಾಂ ನಲ್ಲಿ ಕಾಂಗ್ರೆಸ್ ಮತ್ತು ಎಂಎನ್‍ಎಫ್ ನಡುವೆ ನಡುವೆ ಭಾರೀ ಸ್ಪರ್ಧೆಯಿದೆ ಎಂದು ಸಮೀಕ್ಷೆಗಳು ತಿಳಿಸಿವೆ.

    ರಾಜಸ್ಥಾನ
    ಒಟ್ಟು ಸ್ಥಾನ – 199
    ಮ್ಯಾಜಿಕ್ ಸಂಖ್ಯೆ – 100

    ರಿಪಬ್ಲಿಕ್ ಟಿವಿ ಜನಕೀ ಬಾತ್ : 83-103(ಬಿಜೆಪಿ),81-101(ಕಾಂಗ್ರೆಸ್+), 0(ಬಿಎಸ್‍ಪಿ), 15(ಇತರೇ)
    ನ್ಯೂಸ್ ನೇಷನ್ : 89-93(ಬಿಜೆಪಿ), 99-103(ಕಾಂಗ್ರೆಸ್+), 0(ಬಿಎಸ್‍ಪಿ), 5-9(ಇತರೇ)
    ಇಂಡಿಯಾ ಟುಡೇ : 55-72(ಬಿಜೆಪಿ), 119-141(ಕಾಂಗ್ರೆಸ್+), 1-3(ಬಿಎಸ್‍ಪಿ), 3-8(ಇತರೇ)
    ಟೈಮ್ಸ್ ನೌ : 85(ಬಿಜೆಪಿ), 105(ಕಾಂಗ್ರೆಸ್+), 2(ಬಿಎಸ್‍ಪಿ), 7(ಇತರೇ)


    ಛತ್ತೀಸ್‍ಗಢ
    ಒಟ್ಟು ಸ್ಥಾನ – 90
    ಮ್ಯಾಜಿಕ್ ಸಂಖ್ಯೆ – 46

    ರಿಪಬ್ಲಿಕ್ ಟಿವಿ ಜನಕೀ ಬಾತ್ : 40-48(ಬಿಜೆಪಿ), 37-43(ಕಾಂಗ್ರೆಸ್), 5-6(ಬಿಎಸ್‍ಪಿ+), 0(ಇತರೇ)
    ಟೈಮ್ಸ್ ನೌ : 46(ಬಿಜೆಪಿ), 35(ಕಾಂಗ್ರೆಸ್), 7(ಬಿಎಸ್‍ಪಿ+), 0(ಇತರೇ)
    ನ್ಯೂಸ್ ನೇಷನ್ : 38-42(ಬಿಜೆಪಿ), 40-44(ಕಾಂಗ್ರೆಸ್), 4-8(ಬಿಎಸ್‍ಪಿ+) 0-4(ಇತರೇ)
    ಇಂಡಿಯಾ ಟುಡೇ : 21-31(ಬಿಜೆಪಿ), 55-65(ಕಾಂಗ್ರೆಸ್),4-8(ಬಿಎಸ್‍ಪಿ+), 0(ಇತರೇ)

    ಮಧ್ಯಪ್ರದೇಶ
    ಒಟ್ಟು ಸ್ಥಾನ – 230
    ಮ್ಯಾಜಿಕ್ ಸಂಖ್ಯೆ – 116

    ರಿಪಬ್ಲಿಕ್ ಟಿವಿ ಜನ್‍ಕೀ ಬಾತ್ : 108-128(ಬಿಜೆಪಿ), 95-115(ಕಾಂಗ್ರೆಸ್), 7(ಇತರೆ), 0(ಬಿಎಸ್‍ಪಿ)
    ಟೈಮ್ಸ್ ನೌ- ಸಿಎನ್‍ಎಕ್ಸ್ : 126(ಬಿಜಿಪಿ), 89(ಕಾಂಗ್ರೆಸ್), ಬಿಎಸ್‍ಪಿ(6), ಇತರೇ(9)
    ಇಂಡಿಯಾ ನ್ಯೂಸ್ : 106(ಬಿಜೆಪಿ), 112(ಕಾಂಗ್ರೆಸ್), 0(ಬಿಎಸ್‍ಪಿ), 12(ಇತರೇ)
    ಇಂಡಿಯಾ ಟುಡೇ : 102-120(ಬಿಜೆಪಿ), 104-122(ಕಾಂಗ್ರೆಸ್), 1-3(ಬಿಎಸ್‍ಪಿ), 3-8(ಇತರೇ)

    ತೆಲಂಗಾಣ
    ಒಟ್ಟು ಸ್ಥಾನಗಳು – 119
    ಮ್ಯಾಜಿಕ್ ಸಂಖ್ಯೆ – 60

    ರಿಪಬ್ಲಿಕ್ ಜನ್ ಕೀ ಬಾತ್ : 50-65(ಟಿಆರ್‍ಎಸ್), 38-52(ಕಾಂಗ್ರೆಸ್+), 4-7(ಬಿಜೆಪಿ), 9-14(ಇತರೇ)
    ಟೈಮ್ಸ್ ನೌ : 66(ಟಿಆರ್‍ಎಸ್), 37(ಕಾಂಗ್ರೆಸ್+), 7(ಬಿಜೆಪಿ), 7-11(ಇತರೇ)
    ಇಂಡಿಯಾ ಟುಡೇ : 79-91(ಟಿಆರ್‍ಎಸ್), 21-33(ಕಾಂಗ್ರೆಸ್+), 1-3(ಬಿಜೆಪಿ), 4-7(ಇತರೇ)
    ನ್ಯೂಸ್ ಎಕ್ಸ್ : 57(ಟಿಆರ್‍ಎಸ್), 46(ಕಾಂಗ್ರೆಸ್+), 6(ಬಿಜೆಪಿ), 10(ಇತರೇ)

    ಮಿಜೋರಾಂ
    ಒಟ್ಟು ಸ್ಥಾನಗಳು : 40
    ಮ್ಯಾಜಿಕ್ ಸಂಖ್ಯೆ : 21

    ರಿಪಬ್ಲಿಕ್ ಸಿ ವೋಟರ್ : 0(ಬಿಜೆಪಿ), 14-18(ಕಾಂಗ್ರೆಸ್)
    ಎಂಎನ್‍ಎಫ್(16-20), ಇತರೇ(3-10)

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv