Tag: ಪಂಚರತ್ನ ಯಾತ್ರೆ

  • ಮೈಸೂರಿನಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆಗೆ ಅದ್ದೂರಿ ತೆರೆ

    ಮೈಸೂರಿನಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆಗೆ ಅದ್ದೂರಿ ತೆರೆ

    ಮೈಸೂರು: ಚುನಾವಣೆ ಹಿನ್ನೆಲೆಯಲ್ಲಿ ನಡೆಸಿದ ಜೆಡಿಎಸ್ ಪಂಚರತ್ನ ಯಾತ್ರೆಗೆ (JDS Pancharatna Yatra) ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅದ್ದೂರಿ ತೆರೆ ಬಿದ್ದಿದೆ.

    ಉತ್ತನಹಳ್ಳಿ ಗ್ರಾಮದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿದ್ದರು. ಸಮಾರೋಪದಲ್ಲಿ ಆಕರ್ಷಣಾ ಕೇಂದ್ರಬಿಂದುವಾಗಿದ್ದು ಮಾಜಿ ಪ್ರಧಾನಿ ದೇವೇಗೌಡರು. ಅನಾರೋಗ್ಯದ ಕಾರಣ ಟ್ರಾಲಿಯಲ್ಲಿ ಕೂತೇ ಕಾರ್ಯಕರ್ತರಿಗೆ ಚೈತನ್ಯ ತುಂಬಿದರು. ಈ ವೇಳೆ ದೇವೇಗೌಡರಿಗೆ (HD Deve Gowda) ಮಕ್ಕಳು-ಮೊಮ್ಮಕ್ಕಳು ಸಾಥ್ ನೀಡಿದರು.

    ದೇವೇಗೌಡರಿಗೆ ಇಮ್ಮಡಿ ಪುಲಕೇಶಿ ಮಾದರಿ ಕಿರೀಟ, ಚಿನ್ನದ ಲೇಪನದ ನೇಗಿಲು-ನೊಗ ಕೊಡಲಾಯಿತು. ದೇವೇಗೌಡರು ಮಾತಾಡಿ, ನಿಮ್ಮೆಲ್ಲರ ಹಾರೈಕೆಯಿಂದ ನಿಮ್ಮ ಮುಂದೆ ಬಂದಿದ್ದೇನೆ. ಜಾತಿ-ಧರ್ಮ ಆಧಾರದ ಮೇಲೆ ಮತ ಕೇಳಬೇಡಿ. ಕೇವಲ ಅಭಿವೃದ್ಧಿ ವಿಷಯದಲ್ಲಿ ಮತ ಕೇಳಲು ಸೂಚನೆ ನೀಡಿದ್ದೇನೆ. ನಮ್ಮನ್ನು ನಂಬಿ ನಮ್ಮ ಪಕ್ಷಕ್ಕೆ ಮತ ನೀಡಿ ಗೆಲುವು ನೀಡಿಯೆಂದು ಮನವಿ ಮಾಡ್ತೇನೆ ಅಂದರು. ಇದನ್ನೂ ಓದಿ: ಗೋ ಬ್ಯಾಕ್ ಅಭಿಯಾನ – ನನ್ನನ್ನು ಸುಳ್ಳುಗಾರ ಅಂತಾ ಕರೆಯೋದು ಎಷ್ಟು ಸರಿ?: ಸೋಮಣ್ಣ ಭಾವುಕ

    ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮಾತಾಡಿ, ಸ್ವತಂತ್ರ ಜೆಡಿಎಸ್ ಸರ್ಕಾರ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದರು. ಗ್ರಾಮೀಣ ಮಟ್ಟದ ರೈತರಿಗೆ ಉಚಿತ ಚಿಕಿತ್ಸೆ ಕಲ್ಪಸಲು ವ್ಯವಸ್ಥೆ ಮಾಡುತ್ತೇನೆ ಎಂದು ವಾಗ್ದಾನ ಕೊಟ್ಟರು. ಇದನ್ನೂ ಓದಿ: ಮುಸ್ಲಿಮರು 3 ಕಡೆ ಲಾಭ ಪಡೆಯುತ್ತಿದ್ದಾರೆ; ಮೀಸಲಾತಿ ಇವರಪ್ಪನ ಮನೆಯದ್ದಾ – ಯತ್ನಾಳ್‌ ಪ್ರಶ್ನೆ

  • ಮೈಸೂರಿನ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೊರಟಾಗ ದೊಡ್ಡಗೌಡ್ರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಪತ್ನಿ

    ಮೈಸೂರಿನ ಸಮಾರಂಭದಲ್ಲಿ ಪಾಲ್ಗೊಳ್ಳಲು ಹೊರಟಾಗ ದೊಡ್ಡಗೌಡ್ರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಪತ್ನಿ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ನಡೆಸಿದ 90 ದಿನಗಳ ಪಂಚರತ್ನ ಯಾತ್ರೆಗೆ ಇಂದು (ಮಾ.26) ಮೈಸೂರಿನಲ್ಲಿ ತೆರೆ ಬೀಳಲಿದೆ. ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸಿಲು ಮನೆಯಿಂದ ಹೊರಟಿದ್ದ ಹೆಚ್.ಡಿ.ದೇವೇಗೌಡರ ಕಾಲಿಗೆ ನಮಸ್ಕರಿಸಿ ಪತ್ನಿ ಚೆನ್ನಮ್ಮ ದೇವೇಗೌಡರು ಒಳ್ಳೆಯದಾಗಲಿ ಎಂದು ಶುಭಕೋರಿದರು.

    ಮೈಸೂರಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಭಾಗವಹಿಸಲು ಹೆಚ್.ಡಿ.ದೇವೇಗೌಡರು ಕಾರಿ ಹತ್ತಿದರು. ಈ ವೇಳೆ ಪತಿಯನ್ನು ಎದುರುಗೊಂಡ ಚೆನ್ನಮ್ಮ ದೇವೇಗೌಡ ಅವರು ಪತಿ ಕಾಲಿಗೆ ನಮಸ್ಕರಿಸಿದರು. ಸಮಾರಂಭ ಯಶಸ್ವಿಯಾಗಲಿ ಎಂದು ಇದೇ ವೇಳೆ ಹರಸಿದರು. ಎದುರು ನೆರೆದಿದ್ದವರು ಈ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದರು. ಇದನ್ನೂ ಓದಿ: ಕೆಲಸ ಮಾಡುವವರನ್ನು ಗಮನದಲ್ಲಿಟ್ಟುಕೊಂಡು ಮೊದಲ ಹಂತದ ಟಿಕೆಟ್ ಘೋಷಣೆ – ಡಿ.ಕೆ.ಸುರೇಶ್

    ಚುನಾವಣೆ ಹೊತ್ತಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯವ್ಯಾಪಿ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಪಂಚರತ್ನ ಯಾತ್ರೆ ಮೂಲಕ ರಾಜ್ಯದ 88 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದಾರೆ. ನವೆಂಬರ್ 16ರಂದು ಕೋಲಾರದಲ್ಲಿ ಯಾತ್ರೆ ಪ್ರಾರಂಭಗೊಂಡಿತ್ತು. ಯಾತ್ರೆ ಮುಕ್ತಾಯ ಹಂತ ತಲುಪಿದ್ದು, ಇಂದು ಮೈಸೂರಿನ ರಿಂಗ್ ರಸ್ತೆಯಲ್ಲಿ ಬೃಹತ್ ಸಮಾರೂಪ ಸಮಾರಂಭ ಆಯೋಜನೆಗೊಂಡಿದೆ. ಆರೋಗ್ಯ ಚೇತರಿಕೆ ಬಳಿಕ ಇಂದು ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪಾಲ್ಗೊಂಡಿದ್ದಾರೆ.

    ಪಂಚರತ್ನ ಯಾತ್ರೆ ಸಮಾರೋಪ ಸಮಾರಂಭದ ಮೂಲಕ ಮೈಸೂರಿನಲ್ಲಿ ಜೆಡಿಎಸ್ ಶಕ್ತಿ ಪ್ರದರ್ಶನ ಮಾಡಿದೆ. ಮೈಸೂರು ತಾಲ್ಲೂಕು ಉತ್ತನಹಳ್ಳಿ ಗ್ರಾಮದ ಬಳಿ ಸುಮಾರು 100 ಎಕರೆ ಪ್ರದೇಶದಲ್ಲಿ ಸಮಾರೋಪ ಸಮಾರಂಭ ಆಯೋಜಿಸಲಾಗಿದೆ. ಮೈಸೂರು, ಮಂಡ್ಯ, ಹಾಸನ, ರಾಮನಗರ, ತುಮಕೂರು, ಚಾಮರಾಜನಗರ ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದ 11ನೇ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಖಾಸಗಿ ಬಸ್ ಏಜೆಂಟ್ ಆಗಿದ್ರು

    ಸಮಾರಂಭಕ್ಕೂ ಮುನ್ನ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಹೆಚ್‌ಡಿಕೆಗೆ ಶಾಸಕ ಜಿ.ಟಿ.ದೇವೇಗೌಡ, ಬಂಡೆಪ್ಪ ಕಾಶೆಂಪುರ ಸಾಥ್ ನೀಡದರು.

  • ಪಂಚರತ್ನ ಪ್ರಚಾರದ ವೇಳೆ ಜೆಡಿಎಸ್ ವಾಹನದ ಮೇಲೆ ಕಲ್ಲುತೂರಾಟ – ಚಾಲಕನಿಗೆ ಗಾಯ

    ಪಂಚರತ್ನ ಪ್ರಚಾರದ ವೇಳೆ ಜೆಡಿಎಸ್ ವಾಹನದ ಮೇಲೆ ಕಲ್ಲುತೂರಾಟ – ಚಾಲಕನಿಗೆ ಗಾಯ

    ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ದೇವತಗಲ್ ಗ್ರಾಮದಲ್ಲಿ ಜೆಡಿಎಸ್ (JDS) ಪಂಚರತ್ನ ಪ್ರಚಾರದ (Pancharatna Campaign) ವೇಳೆ ಗಲಾಟೆ ನಡೆದಿದೆ. ಜೆಡಿಎಸ್ ಪ್ರಚಾರದ ಸ್ಕ್ರೀನ್ ವಾಹನದ ಮೇಲೆ ಕಲ್ಲುತೂರಾಟ (Stone Pelting) ನಡೆದಿದ್ದು, ಚಾಲಕನ ತಲೆಗೆ ಗಾಯವಾಗಿದೆ.

    ದೇವತಗಲ್ ಗ್ರಾಮದಲ್ಲಿ ಜೆಡಿಎಸ್ ಪ್ರಚಾರ ಮಾಡದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ವಾಹನದ ಮೇಲೆ ಕಲ್ಲುತೂರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಚಾಲಕನನ್ನು ದೇವದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ದೇವಸ್ಥಾನ ಪ್ರವೇಶ ವಿಚಾರಕ್ಕೆ ಹಲ್ಲೆ- ಕಲ್ಲು ತೂರಾಟ, ಬೈಕ್ ಜಖಂ, 30 ಮಂದಿ ವಿರುದ್ಧ ದೂರು

    ಕಲ್ಲು ತೂರಾಟ ಮಾಡಿದವರ ಮೇಲೆ ಕ್ರಮಕ್ಕೆ ಒತ್ತಾಯಿಸಲಾಗಿದೆ. ದೇವದುರ್ಗ ಜೆಡಿಎಸ್ ಅಭ್ಯರ್ಥಿ ಕರೆಮ್ಮ ನಾಯಕ್ ಜಾಲಹಳ್ಳಿ ಪೊಲೀಸ್ ಠಾಣೆಗೆ ದೌಡಾಯಿಸಿದ್ದು ದೂರು ನೀಡಿದ್ದಾರೆ. ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಕರೆಮ್ಮ ನಾಯಕ್ ಒತ್ತಾಯಿಸಿದ್ದಾರೆ. ಜಾಲಹಳ್ಳಿ ಪೊಲೀಸ್ ಠಾಣೆ ಎದುರು ಜೆಡಿಎಸ್ ಕಾರ್ಯಕರ್ತರು ಜಮಾಯಿಸಿದ್ದಾರೆ. ಇದನ್ನೂ ಓದಿ: ಚಾರ್ಮಾಡಿ ಘಾಟಿಯಲ್ಲಿ ಬೆಂಕಿ- ಹೊತ್ತಿ ಉರಿದ ನೂರಾರು ಎಕರೆ ಅರಣ್ಯ ಪ್ರದೇಶ

  • ತೆರೆದ ವಾಹನದಲ್ಲಿ ಎಚ್‌ಡಿಡಿ 100 ಕಿ.ಮೀ. ರೋಡ್ ಶೋ

    ತೆರೆದ ವಾಹನದಲ್ಲಿ ಎಚ್‌ಡಿಡಿ 100 ಕಿ.ಮೀ. ರೋಡ್ ಶೋ

    ಬೆಂಗಳೂರು: ಪಂಚರತ್ನ (Pancha Ratha) ರಥಯಾತ್ರೆಯ ಸಮಾರೋಪ ಕಾರ್ಯಕ್ರಮ ನಡೆಯುವ ಮೊದಲು 100 ಕಿ.ಮೀ ರೋಡ್‌ ಶೋ ನಡೆಸಲು ಜೆಡಿಎಸ್‌ (JDS) ಮುಂದಾಗಿದೆ.

    ಈ ತಿಂಗಳ 26ರಂದು ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ಮೈಸೂರಿನಲ್ಲಿ (Mysuru) ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಹೇಳಿದರು.

    ಪಕ್ಷದ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ  ಅವರು, ಇದು ನನ್ನ ರಾಜಕೀಯ ಜೀವನದ ಇತಿಹಾಸದಲ್ಲಿಯೇ ಮಹೋನ್ನತ ಸಮಾವೇಶ ಆಗಲಿದೆ. ಈವರೆಗೂ ಯಾರೂ ಮಾಡಿರದಂಥ ಸಮಾವೇಶ ಅದಾಗಿರುತ್ತದೆ ಎಂದರು. ಇದನ್ನೂ ಓದಿ: HDK ಕುಟುಂಬದಿಂದ ದೇವರ ಮೊರೆ – ಚಂಡಿಕಾ ಯಾಗ, ಮಹಾಮೃತ್ಯುಂಜಯ ಜಪ ಆಯೋಜನೆ

    ಕುಂಬಳಗೋಡಿನಿಂದ ಪ್ರಾರಂಭವಾಗಿ ಮೈಸೂರಿನವರೆಗೆ ಸುಮಾರು 100 ಕೀ.ಮೀ ದೂರ ಬೃಹತ್ ರೋಡ್ ಶೋ ಮಾಡಲಾಗುವುದು. ಆ ರೋಡ್ ಶೋ ದಲ್ಲಿ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರನ್ನು (HD Devegowda) ತೆರೆದ ವಾಹನದಲ್ಲಿ ಕರೆದುಕೊಂಡು ಹೋಗಲಾಗುವುದು. ಈ ಸಮಾವೇಶದಲ್ಲಿ ಹತ್ತು ಲಕ್ಷ ಜನ ಸೇರಲಿದ್ದಾರೆ. ಇದೊಂದು ಐತಿಹಾಸಿಕ ಸಮಾವೇಶ ಆಗಲಿದೆ ಎಂದು ಕುಮಾರಸ್ವಾಮಿ ಅವರು ನುಡಿದರು.

  • ನಾನು ವೀರಶೈವ, ದಲಿತ ಸಮುದಾಯಕ್ಕೂ ಗೌರವ ನೀಡಿದ್ದೇನೆ: ಹೆಚ್‌ಡಿಕೆ

    ನಾನು ವೀರಶೈವ, ದಲಿತ ಸಮುದಾಯಕ್ಕೂ ಗೌರವ ನೀಡಿದ್ದೇನೆ: ಹೆಚ್‌ಡಿಕೆ

    ಕಾರವಾರ: ನಾನು ವೀರಶೈವ, ದಲಿತ ಎಲ್ಲಾ ಸಮುದಾಯಕ್ಕೂ ಗೌರವ ನೀಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಿಳಿಸಿದರು.

    ಪಂಚರತ್ನ ಯಾತ್ರೆ ಕಾರ್ಯಕ್ರಮದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಾಹ್ಮಣ ಹೇಳಿಕೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಅವರವರೇ ಅರ್ಥ ಮಾಡಿಕೊಂಡು ಹೇಳಿಕೆ ಕೊಡುತ್ತಿದ್ದಾರೆ. ಶೀಘ್ರದಲ್ಲೇ ಟ್ವೀಟ್ ಮಾಡಿ ಉತ್ತರ ಕೊಡ್ತೇನೆ. ನನ್ನ ಪ್ರಶ್ನೆಗೆ ಯಾರೂ ಉತ್ತರ ಕೊಟ್ಟಿಲ್ಲ. ಟ್ವೀಟ್ ಮಾಡಿ ಈ ಗೊಂದಲಕ್ಕೆ ತೆರೆ ಎಳೆಯುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಸೇರಿದ್ರೆ 50 ಸಾವಿರ ಲೀಡ್‌ನಲ್ಲಿ ಗೆಲ್ತೀನಿ – ಶಾಸಕ ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೋ ವೈರಲ್

    ನಾನು ಯಡಿಯೂರಪ್ಪ (Yediyurappa) ಜೊತೆ ಕೈ ಜೋಡಿಸದಿದ್ದರೆ ಅವರು ನಿರ್ನಾಮ ಆಗುತ್ತಿದ್ದರು. ವಿಜಯೇಂದ್ರ ಆಗ ಎಲ್ಲಿ ಬರುತ್ತಿದ್ದರು? ಸಿದ್ದಲಿಂಗಯ್ಯ ಎನ್ನುವವರು ನನಗೆ ಚೀಟಿ ನೀಡಿದ್ದರು. ಯಡಿಯೂರಪ್ಪ ಅವರನ್ನ ಮಂತ್ರಿ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಆಗ ನಾನು ನಿಮ್ಮ ನಾಯಕತ್ವ ಇರಲಿ ಎಂದು ಸಮ್ಮಿಶ್ರ ಸರ್ಕಾರ ಮಾಡಲು ಸಿಎಂ ಮಾಡಿದ್ದೆ. ವೀರಶೈವರಿಗೆ ಏನು ಮಾಡಿದೆ ಎಂದು ವಿಜಯೇಂದ್ರ ಅವರಿಗೆ ಗೊತ್ತಿಲ್ಲ. ನಮ್ಮ ತಂದೆ ವಿಧಾನಸಭೆ ವಿಸರ್ಜನೆ ಮಾಡಲು ಹೋಗಿದ್ದರು. ಆಗ ಯಡಿಯೂರಪ್ಪ ಜೊತೆ ಸೇರಿ ಸರ್ಕಾರ ಮಾಡಿದ್ದೆವು. ಅಧಿಕಾರದಲ್ಲಿ ಇದ್ದ ವೇಳೆ ಬಿಜೆಪಿಗರನ್ನ ಗೌರವದಿಂದ ಕಂಡಿದ್ದೇನೆ. ಬಿಜೆಪಿ ಬೆಳವಣಿಗೆಗೆ ಇದೇ ಸಹಕಾರಿ ಆಗಿತ್ತು. ಪೇಶ್ವೆ ವಂಶಸ್ಥರು ಅವರಿಗೆ ಅಧಿಕಾರವನ್ನ ಕೊಡಲು ಬಿಡಲಿಲ್ಲ. ಅವರೇ ಯಡಿಯೂರಪ್ಪ ಸರ್ಕಾರವನ್ನ ತೆಗೆದರು. ಎರಡನೇ ಬಾರಿ ಕಷ್ಟ ಪಟ್ಟು ಯಡಿಯೂರಪ್ಪ ಸಿಎಂ ಆದರು. ಅವರನ್ನ ಹೇಗೆ ನಡೆಸಿಕೊಂಡಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ನಾನು ವೀರಶೈವ, ದಲಿತ ಎಲ್ಲಾ ಸಮುದಾಯಕ್ಕೂ ಗೌರವ ನೀಡಿದ್ದೇನೆ ಎಂದರು.

    ವಂಶಾಡಳಿತ ಕುರಿತು ಮಾತನಾಡಿದ ಅವರು, ವಂಶಾಡಳಿತ ಬಿಜೆಪಿ, ಕಾಂಗ್ರೆಸ್‌ನಲ್ಲಿ ಇಲ್ಲವೇ? ನನ್ನ ಕುಟುಂಬದ ಮೇಲೆ ಟಾರ್ಗೆಟ್ ಮಾಡಿದ್ದಾರೆ. ಜನರ ಮೇಲೆ ನಮ್ಮ ಕುಟುಂಬದ ಪ್ರೀತಿಯನ್ನ ನೋಡಿ ಟಾರ್ಗೆಟ್ ಮಾಡ್ತಾ ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಅಧಿವೇಶನ ಬಳಿಕ 4 ಕಡೆಗಳಿಂದ ರಥಯಾತ್ರೆ, ಮತ್ತೊಮ್ಮೆ ಬಿಜೆಪಿ ಸರ್ಕಾರ ನಿಶ್ಚಿತ: ಬಿಎಸ್‌ವೈ

    ಗಣೇಶನ ಆಶೀರ್ವಾದ, ಆತ್ಮಲಿಂಗದ ಪ್ರಸಾದವೂ ನನಗೆ ಸಿಕ್ಕಿದೆ. ಅಲ್ಲದೇ ಬೋಲೋ ಶಂಕರ ದೇವರ ಪ್ರಸಾದ ಕೂಡ ಸಿಕ್ಕಿದೆ. ದೈವ ಅನುಗ್ರಹ ಜನತಾದಳದ ಮೇಲೆ ಇದೆ. ನಾಡಿನ ಜನತೆಗೆ ದೇವರ ಆಶೀರ್ವಾದ ಇದೆ. ಜೆಡಿಎಸ್ ಅಧಿಕಾರಕ್ಕೆ ಬಂದು ನಾಡಿನ ಜನರ ಕ್ಷೇಮ ಕಾಪಾಡಲಾಗುವುದು ಎಂದು ಭರವಸೆ ನೀಡಿದರು.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತೆನೆ ಹೊಲದಲ್ಲಿ ಇರಲಿ ಎಂದಿದ್ದಾರೆ. ಹೊಲದಲ್ಲಿ ತೆನೆ ಇದ್ದರೆ ಕೈಗೆ ಕೆಲಸ. ‘ಕೈ’ ನಾಡಿನ ಜನತೆಗೆ ಸರಿಯಾಗಿ ಕೆಲಸ ಮಾಡಿಲ್ಲ ಎಂದು ರೇಖೆ ಅಳಿಸಿದ್ದಾರೆ. ತೆನೆ ಜನರನ್ನ ನೆಮ್ಮದಿಯಿಂದ ಬದುಕುವಂತೆ ಮಾಡುತ್ತದೆ. ಕಾಂಗ್ರೆಸ್ ವಿಫಲವಾಗಿದ್ದಕ್ಕೆ ‘ಕೈ’ ಮೇಲೆ ಜನರು ರೇಖೆ ಎಳೆದಿದ್ದಾರೆ ಎಂದು ಮಾರ್ಮಿಕವಾಗಿ ಡಿಕೆಶಿಗೆ ಟಾಂಗ್ ಕೊಟ್ಟರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ: ಹೆಚ್‌ಡಿಕೆ

    ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ: ಹೆಚ್‌ಡಿಕೆ

    ಕೊಪ್ಪಳ: ರಾಜ್ಯದಲ್ಲಿ ಈ ಬಾರಿ ಜೆಡಿಎಸ್ (JDS) ಸಂಪೂರ್ಣ ಅಧಿಕಾರಕ್ಕೆ ಬಂದರೆ ಸ್ತ್ರೀಶಕ್ತಿ ಸಂಘಗಳ 1 ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡುವೆ. ನಮಗೆ ಪೂರ್ಣ ಬಹುಮತ ಕೊಡಿ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಹೇಳಿದರು.

    ಕೊಪ್ಪಳದ (Koppala) ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿ ಪಂಚರತ್ನ ಯಾತ್ರೆಯಲ್ಲಿ (Pancharatna Yatra) ಪಾಲ್ಗೊಂಡು ಅವರು ಮಾತನಾಡಿದರು. ಸಾವಿರಾರು ರೈತರು, ಮಹಿಳೆಯರು ತಮ್ಮ ಕಷ್ಟ ಹೇಳಿಕೊಂಡು ನಮ್ಮ ಬಳಿ ಬರುತ್ತಿದ್ದಾರೆ. ಯುವಕರು ಕೆಲಸ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಜನರು ಮನೆ ಇಲ್ಲ ಎಂದು ನೋವು ಹೇಳಿಕೊಳ್ಳುತ್ತಿದ್ದಾರೆ. ಕೋವಿಡ್ ವೇಳೆ ಮೃತಪಟ್ಟವರ ಕುಟುಂಬಕ್ಕೆ ಇನ್ನೂ ಪರಿಹಾರ ಬಂದಿಲ್ಲ ಎನ್ನುತ್ತಾರೆ. ಅವರ ಕಷ್ಟಕ್ಕೆ ನಾನು ಸ್ಪಂದಿಸುತ್ತಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕೋಮು ದ್ವೇಷದ ಭಾಷಣ ಮಾಡೋರನ್ನು ಗಡಿಪಾರು ಮಾಡಿ: ಖಾದರ್

    ಫಸಲ್ ಬಿಮಾ ಯೋಜನೆ ಹೆಸರಲ್ಲಿ ವಿಮಾ ಕಂಪನಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿದೆ. ಈ ಹಿಂದೆ ರೈತರ ಆತ್ಮಹತ್ಯೆ ಹೆಚ್ಚಾದವು. ಅವರ ನೋವು ಅರಿತು ರೈತರ ಸಾಲ ಮನ್ನಾ ಮಾಡುವೆ ಎಂದು ಹೇಳಿದ್ದೆ. ನನಗೆ ಪೂರ್ಣ ಬಹುಮತ ಬರಲಿಲ್ಲ. ಆದರೂ ರೈತರ ಸಾಲ ಮನ್ನಾ ಮಾಡಿದೆ. ಕಾಂಗ್ರೆಸ್ ನನಗೆ ಒತ್ತಡ ಹಾಕಿದ್ರೂ, ನಿಮ್ಮ ಕಾರ್ಯಕ್ರಮಕ್ಕೆ ಹಣ ಹೊಂದಿಸಿ ಕೊಡುವೆ ಎಂದಿದ್ದೆ. ಆದರೂ ಸರ್ಕಾರ ಕೆಡವಿದರು. ಆ ಮಧ್ಯೆ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ನಂತರ ಬಂದಿರುವ ಬಿಜೆಪಿ ಸರ್ಕಾರ ಇನ್ನೂ 2 ಲಕ್ಷ ಕುಟುಂಬಕ್ಕೆ ಸಾಲ ಮನ್ನಾ ಹಣ ಬಂದಿಲ್ಲ. ನಾನು ಮತ್ತೆ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವೆ ಎಂದರು.

    ಪಂಚರತ್ನ ಯೋಜನೆಯಡಿ ಪ್ರತಿ ಗ್ರಾಪಂನಲ್ಲಿ ಆಧುನಿಕ ಶಾಲೆ ಕಟ್ಟುವೆ. ಯುವಕರಿಗೆ ಕೆಲಸ ಕೊಡುವೆ. ಪ್ರತಿ ಗ್ರಾಪಂನಲ್ಲಿ 30 ಬೆಡ್ ಆಸ್ಪತ್ರೆ, ಮೂರು ಸಿಬ್ಬಂದಿ ನೇಮಕ ಮಾಡುವೆ. ಹೆಚ್ಚಿನ ಚಿಕಿತ್ಸೆ ಪಡೆಯುವ ಕುಟುಂಬಕ್ಕೆ 30-35 ಲಕ್ಷ ಮೇಲ್ಪಟ್ಟು ಖರ್ಚಾಗುವ ಕಾಯಿಲೆಗೆ ಸರ್ಕಾರವೇ ಭರಿಸಲಿದೆ. ನನ್ನ ಸರ್ಕಾರ ಅಧಿಕಾರಕ್ಕೆ ಬಂದರೆ ಬಿತ್ತನೆ ಬೀಜಕ್ಕೆ, ಗೊಬ್ಬರ ಖರೀದಿಗೆ ಎಕರೆಗೆ 10 ಸಾವಿರ ರೂ. ಹಾಗೂ 10 ಎಕರೆ ಇದ್ದರೆ 1 ಲಕ್ಷ ರೂ. ರೈತರ ಖಾತೆಗೆ ಹಾಕಿವೆ. 24 ಗಂಟೆ ರೈತರ ಪಂಪ್‌ಸೆಟ್‌ಗೆ ವಿದ್ಯುತ್ ಪೂರೈಕೆ ಮಾಡುವೆ. ಯುವಕರಿಗೆ ತರಬೇತಿ, ಹಣಕಾಸಿನ ನೆರವು ಕಲ್ಪಿಸುವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸಿದ್ದರಾಮಯ್ಯಗೆ ರಾಯಚೂರಿನಿಂದ ಸ್ಪರ್ಧಿಸಲು ಆಹ್ವಾನ – ಆಸ್ತಿ ಮಾರಲು ಮುಂದಾದ ಅಭಿಮಾನಿ

    ಮನೆಯಿಲ್ಲದ ಕುಟುಂಬಕ್ಕೆ ಮನೆ ಕಟ್ಟಿ ಕೊಡುವೆ. ಹಳ್ಳಿಗಳ ಬದುಕು ಕಂಡಿರುವೆ. ಮತ್ತೆ ಸುವರ್ಣ ಗ್ರಾಮೋದಯದಡಿ ಕುಡಿಯುವ ನೀರು, ಶೌಚಾಲಯ ಅಭಿವೃದ್ಧಿ ಮಾಡುವೆ. ಸ್ತ್ರೀಶಕ್ತಿ ಗುಂಪಿನ ಸಾಲವನ್ನು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ಮನ್ನಾ ಮಾಡುವೆ. 65 ವರ್ಷ ಮೇಲ್ಪಟ್ಟವರಿಗೆ 5 ಸಾವಿರ, ವಿಧವೆಯರಿಗೆ 2,500 ಮಾಸಾಶನ ಜಾರಿ ಮಾಡುವೆ. ಪಂಚರತ್ನ ಯೋಜನೆಗಳಿಗೆ 2.50 ಲಕ್ಷ ಕೋಟಿ ಬಜೆಟ್ ಬೇಕು. ಹೊಂದಿಕೆ ಮಾಡುವೆ. ಜಲಧಾರೆ ಯೋಜನೆ ಮಾಡುವೆ. ಐದು ವರ್ಷ ಅಧಿಕಾರ ಕೊಡಿ, ಸ್ಪಷ್ಟ ಬಹುಮತ ಕೊಡಬೇಕು. ನನ್ನ ಸ್ವಾರ್ಥಕ್ಕೆ ಹೋರಾಟ ಮಾಡುತ್ತಿಲ್ಲ. ಜಾತಿ, ಹಣದ ವ್ಯಾಮೋಹಕ್ಕೆ ನಿಮ್ಮ ಮತ ಮಾರಬೇಡಿ. ನನಗೆ ಐದು ವರ್ಷ ಅಧಿಕಾರ ಕೊಡಿ. ಒಂದು ಬಾರಿ ಪರೀಕ್ಷೆ ಮಾಡಿ, ಇಲ್ಲದಿದ್ದರೆ ಪಕ್ಷ ವಿಸರ್ಜನೆ ಮಾಡುವೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಯಾವ ಮುಖ ಇಟ್ಕೊಂಡು ಮೋದಿ ರಾಜ್ಯದಲ್ಲಿ ವೋಟು ಕೇಳ್ತಾರೆ – ಹೆಚ್‌ಡಿಕೆ ಪ್ರಶ್ನೆ

    ಯಾವ ಮುಖ ಇಟ್ಕೊಂಡು ಮೋದಿ ರಾಜ್ಯದಲ್ಲಿ ವೋಟು ಕೇಳ್ತಾರೆ – ಹೆಚ್‌ಡಿಕೆ ಪ್ರಶ್ನೆ

    ರಾಯಚೂರು: ಕರ್ನಾಟಕಕ್ಕೆ ಬಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಏನು ಮಾಡಿ ಹೋಗಿದ್ದಾರೆ? ಯಾವ ಮುಖ ಇಟ್ಕೊಂಡು ಮೋದಿ ರಾಜ್ಯದಲ್ಲಿ ವೋಟು ಕೇಳ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ (H.D.Kumaraswamy) ಬಿಜೆಪಿ (BJP) ವಿರುದ್ಧ ಟೀಕಾಪ್ರಹಾರ ನಡೆಸಿದರು.

    ರಾಯಚೂರು (Raichuru) ಜಿಲ್ಲೆಯಲ್ಲಿ ಇಂದಿನಿಂದ ಪಂಚರತ್ನ ಯಾತ್ರೆ (Pancharatna Yatra) ಆರಂಭವಾಗಿದ್ದು, ಲಿಂಗಸುಗೂರಿನ ಮುದಗಲ್‌ನಲ್ಲಿ ಮಾತನಾಡಿದ ಹೆಚ್‌ಡಿಕೆ, ರಾಜ್ಯದಲ್ಲಿ ‌ಮೋದಿ ಸರಣಿ ಕಾರ್ಯಕ್ರಮ ವಿಚಾರವಾಗಿ ಮಾತನಾಡಿ, ಎಲ್ಲಾ ಪಕ್ಷಗಳು ತಮ್ಮ ಸಂಖ್ಯೆ ಏರಿಕೆ ಮಾಡಿಕೊಳ್ಳಲು ಹೋರಾಟ ಮಾಡುತ್ತಿವೆ. ಮಂಡ್ಯದಲ್ಲಿ ಜೆಡಿಎಸ್ (JDS) ಭದ್ರಕೋಟೆ ‌ಈ ಸಲ ಮುಗಿಸಬೇಕು ಅಂತಾ ಹೊರಟಿದ್ದಾರೆ. ಅದು ಮುಗಿಸಲು ಅವರ ಕೈಯಲ್ಲಿ ಇದೀಯಾ? ಜನರ ತೀರ್ಮಾನ ಮಾಡಬೇಕು ಎಂದರು. ಇದನ್ನೂ ಓದಿ: ಡೊಳ್ಳಿನ ಬೃಹತ್ ಹಾರದಿಂದ ಹೆಚ್‌ಡಿಕೆಗೆ ಅದ್ದೂರಿ ಸನ್ಮಾನ

    ಮೋದಿ ಅವರು ಯಾದಗಿರಿ ಮತ್ತು ಕಲಬುರಗಿಗೆ ‌ಬಂದು ಹೋದರು. ಈ ಜಿಲ್ಲೆಗಳಿಗೆ ಮೋದಿ ಏನು ಮಾಡಿದ್ದಾರೆ? ತೊಗರಿ ಬೆಳೆದ 25 ಜನರು ಆತ್ಮಹತ್ಯೆ ‌ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಮೋದಿ ಚಕಾರ ಎತ್ತಲಿಲ್ಲ. ಇವರು ಏನು ಮಾಡಿದ್ದಾರೆ ಅಂತಾ ನರೇಂದ್ರ ಮೋದಿ ನೋಡಿ ವೋಟು ಹಾಕುತ್ತಾರೆ. ಕೈಗಾರಿಕೆಗಳನ್ನು ಉತ್ತರ ಭಾರತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಈ ಭಾಗದ ಯುವಕರನ್ನು ಬೀದಿಪಾಲು ಮಾಡಿದ್ದಾರೆ. ಯಾವ ಮುಖ ಇಟ್ಕೊಂಡು ವೋಟು ಕೇಳುತ್ತಾರೆ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಕಲ್ಯಾಣ ಕರ್ನಾಟಕದ ಕೆಲ ಹಳ್ಳಿಗಳು ಇನ್ನೂ ಶಿಲಾಯುಗದಲ್ಲಿ ಇದ್ದಂತೆ ಇವೆ ಎಂದು ಬೇಸರ ವ್ಯಕ್ತಪಡಿಸಿದರು.

    ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ. ಬಡವರು ಬಡವರಾಗೇ ಇದ್ದಾರೆ, ಶ್ರೀಮಂತರು ಶ್ರೀಮಂತರಾಗಿ ಬೆಳೆಯುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಅಂತಾ ಹೆಸರು ಬದಲು ಮಾಡಿದ್ದಾರೆ. ಆದ್ರೆ ಅಭಿವೃದ್ಧಿಗಾಗಿ ಬಂದ ಹಣ ಖರ್ಚು ಮಾಡುತ್ತಿಲ್ಲ. ಈಗಿನ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಗುಜರಾತ್ ಮಾಡೆಲ್ ಜಾರಿ?

    ಕಲ್ಯಾಣ ಕರ್ನಾಟಕದ ಹಳ್ಳಿಯಲ್ಲಿ ಇವತ್ತಿಗೂ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಈ ಸರ್ಕಾರ ಬಂದ ಮೇಲೆ ಶೇ.20, 30ರಷ್ಟು ಕೆಲಸವೇ ಆಗಿಲ್ಲ. ಕೊಟ್ಟ ಅನುದಾನ ಬೇರೆ ಕಡೆ ಡೈವರ್ಟ್ ಮಾಡುತ್ತಿದ್ದಾರೆ. ಪಂಚರತ್ನ ಯಾತ್ರೆ ಪ್ರತಿಯೊಂದು ಕುಟುಂಬಕ್ಕೂ ಅನುಕೂಲವಾಗುವ ಕಾರ್ಯಕ್ರಮ. ಇದನ್ನು ಜನರಿಗೆ ತಿಳಿಸಲು ಪಂಚರತ್ನ ಯಾತ್ರೆ ಶುರು ಮಾಡಿದ್ದೇವೆ ಎಂದರು.

    ಗಾಣಗಾಪೂರ ಕ್ಷೇತ್ರ ಕಾಶಿ ಮಾದರಿ ಅಭಿವೃದ್ಧಿ ಮಾಡುವ ವಿಚಾರವಾಗಿ ಸಿಎಂ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಮೂರು ತಿಂಗಳಲ್ಲಿ ಈ ಸರ್ಕಾರ ಹೋದ್ರೆ ಸಿಎಂ ಮಾತು ಯಾವನು ಕೇಳ್ತಾನೆ. ಮೂರು ವರ್ಷ ಮಾಡದೇ ಇರುವವರು ಈಗ ಮಾಡುತ್ತಾರಾ? ಜನರ ಮತ ಪಡೆಯಲು ದಾರಿ ತಪ್ಪಿಸುವ ಘೋಷಣೆ ಮಾಡುತ್ತಾರೆಯೇ ವಿನಃ ಇವರಿಂದ ಯಾವ ಕೆಲಸವೂ ಆಗಲ್ಲ ಎಂದು ಲೇವಡಿ ಮಾಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡೊಳ್ಳಿನ ಬೃಹತ್ ಹಾರದಿಂದ ಹೆಚ್‌ಡಿಕೆಗೆ ಅದ್ದೂರಿ ಸನ್ಮಾನ

    ಡೊಳ್ಳಿನ ಬೃಹತ್ ಹಾರದಿಂದ ಹೆಚ್‌ಡಿಕೆಗೆ ಅದ್ದೂರಿ ಸನ್ಮಾನ

    ರಾಯಚೂರು: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ನೇತೃತ್ವದ ಜೆಡಿಎಸ್ ಪಂಚರತ್ನ ಯಾತ್ರೆ ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು ತಾಲೂಕು ಮುದಗಲ್ ಪಟ್ಟಣದಿಂದ ಆರಂಭವಾಗಿದೆ. ಈ ವೇಳೆ ಅಲ್ಲಿನ ಕಾರ್ಯಕರ್ತರು ಡೊಳ್ಳಿನ ಹಾರ ಹಾಕಿ ಸನ್ಮಾನಿಸಿದರು.

    ಹೆಚ್‌ಡಿಕೆಯನ್ನು ಅದ್ಧೂರಿಯಾಗಿ ಸ್ವಾಗತಿಸಿದ ನೂರಾರು ಕಾರ್ಯಕರ್ತರು ಮುದಗಲ್‌ನಲ್ಲಿ ಡೊಳ್ಳಿನ ಹಾರ ಹಾಕಿ ಸನ್ಮಾನಿಸಿದರು. 25ಕ್ಕೂ ಹೆಚ್ಚು ಡೊಳ್ಳುಗಳಿಂದ ತಯಾರಿಸಿದ ಬೃಹತ್ ಹಾರ ಹಾಕುವ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಮೇಲಿನ ಅಭಿಮಾನ ಮೆರೆದರು. ಇಂದಿನಿಂದ 5 ದಿನಗಳ ಕಾಲ ನಡೆಯುವ ಪಂಚರತ್ನ ಯಾತ್ರೆಯಲ್ಲಿ ಜೆಡಿಎಸ್‌ನ (JDS) ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಇದನ್ನೂ ಓದಿ: ಸಂಕಷ್ಟದಲ್ಲಿ ತೊಗರಿ ಬೆಳೆಗಾರರು : ಇಂದು ಸಂಜೆ ಪರಿಹಾರ ಘೋಷಣೆ – ಬೊಮ್ಮಾಯಿ

    ಮುದಗಲ್‌ನ ಪೊಲೀಸ್ ಠಾಣೆ ವೃತ್ತದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿದ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಹರಿಹಾಯ್ದರು. ಮುದಗಲ್‌ನಲ್ಲಿ ನಡೆದ ಸಮಾವೇಶದಲ್ಲಿ ಲಿಂಗಸುಗೂರು ನಿಯೋಜಿತ ಅಭ್ಯರ್ಥಿ ಸಿದ್ದು ಬಂಡಿ, ಶಂಸುಲ್ ಹಕ್ ಖಾನ್, ಶಾಸಕರಾದ ವೆಂಕಟರಾವ್ ನಾಡಗೌಡ, ಶರಣಗೌಡ ಕಂದಕೂರು ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದರು. ಇದನ್ನೂ ಓದಿ: ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಗುಜರಾತ್ ಮಾಡೆಲ್ ಜಾರಿ?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸುಮ್ಮನಿರದಿದ್ದರೇ ಸಿದ್ಧವನದಲ್ಲಿ ನಡೆಸಿದ ಷಡ್ಯಂತ್ರ ಬಿಚ್ಚಿಡುತ್ತೇನೆ – ಸಿದ್ದುಗೆ HDK ಎಚ್ಚರಿಕೆ

    ಸುಮ್ಮನಿರದಿದ್ದರೇ ಸಿದ್ಧವನದಲ್ಲಿ ನಡೆಸಿದ ಷಡ್ಯಂತ್ರ ಬಿಚ್ಚಿಡುತ್ತೇನೆ – ಸಿದ್ದುಗೆ HDK ಎಚ್ಚರಿಕೆ

    ಮುದ್ದೇಬಿಹಾಳ: ಸಿದ್ದರಾಮಯ್ಯ (Siddaramaiah) ಅವರು ಜೆಡಿಎಸ್ (JDS) ಪಕ್ಷದ ಬಗ್ಗೆ ನಾಲಿಗೆ ಹರಿಬಿಡುತ್ತಿದ್ದಾರೆ. ಸುಮ್ಮನಿರದಿದ್ದರೇ ನನ್ನ ನೇತೃತ್ವದ ಮೈತ್ರಿ ಸರ್ಕಾರ ಕೆಡವಲು ಧರ್ಮಸ್ಥಳದ ಸಿದ್ಧವನದಲ್ಲಿ ನಡೆಸಿದ ಷಡ್ಯಂತ್ರ ಬಿಚ್ಚಿಡಬೇಕಾಗುತ್ತದೆ ಎಂದು ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಎಚ್ಚರಿಸಿದ್ದಾರೆ.

    ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಬಳವಾಟ ಗ್ರಾಮದಲ್ಲಿ ಪಂಚರತ್ನ ರಥಯಾತ್ರೆ (Pancharatna Yatra) ಭಾಗವಾಗಿ ಗ್ರಾಮ ವಾಸ್ತವ್ಯ ಹೂಡಿದ್ದ ಹೆಚ್‌ಡಿಕೆ ಅವರಿಂದು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಇದನ್ನೂ ಓದಿ: ಹಿಟ್ಲರ್ ಸ್ವಲ್ಪ ದಿನ ಮೆರೆದ ಮೇಲೆ ಏನಾಯ್ತು? ಮೋದಿ 100 ಬಾರಿ ಬಂದರೂ ಬಿಜೆಪಿ ಬರಲ್ಲ: ಸಿದ್ದರಾಮಯ್ಯ

    ನಮ್ಮ ಬಳಿ ನಿರಂತರವಾಗಿ ಕಷ್ಟ ಹೇಳಿಕೊಂಡು ಜನ ಬರುತ್ತಾರೆ. ಸುಮ್ಮನೆ ಜೆಡಿಎಸ್ (JDS) ಪಕ್ಷದ ಬಗ್ಗೆ ಏನೇನೊ ಮಾತನಾಡಬೇಡಿ. ಮುಖ್ಯಮಂತ್ರಿ ಆಸೆಗಾಗಿ ಪಕ್ಷ ಬಿಟ್ಟು ಹೋಗಿದ್ದು ನೆನಪಿದೆಯಾ ನಿಮಗೆ? ನಿಮ್ಮಿಂದ ನಾನು ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಕಟ್ಟಿದ ಪಕ್ಷವನ್ನು ಉಳಿಸಿಕೊಂಡು ಹೊರಟಿದ್ದೇವೆ. ಅಂಥ ಪಕ್ಷವನ್ನು, ಅವರ ಸಿದ್ಧಾಂತವನ್ನು ಗಾಳಿಗೆ ತೂರಿ ಸಿಎಂ ಕುರ್ಚಿ ಹಿಂದೆ ಓಡಿ ಹೋದವರು ಯಾರು? ನಿಮ್ಮ ಯೋಗ್ಯತೆ ಏನು ಅಂತಾ ಗೊತ್ತಿದೆ ಎಂದು ಹೆಚ್‌ಡಿಕೆ ಎಂದು ಸಿದ್ದರಾಮಯ್ಯ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

    ನನ್ನ ನೇತೃತ್ವದ ಮೈತ್ರಿ ಸರ್ಕಾರ ಕೆಡವಲು ನೀವ್ ಏನು ಮಾಡಿದಿರಿ? ಯಾರ ಜೊತೆ ಕೂಡಿ ಕುತಂತ್ರ ಮಾಡಿದಿರಿ ಅನ್ನೋದು ತಿಳಿದಿದೆ. ಬಿಜೆಪಿಗೆ (JDS) ಅಧಿಕಾರ ಹೋಗಬಾರದು ಅಂತಾ ನಿಮ್ಮ ಪಕ್ಷದ ವರಿಷ್ಠರು ನಮ್ಮ ಬಾಗಿಲಿಗೆ ಬಂದಿದ್ದರು. ಖರ್ಗೆ, ಪರಮೇಶ್ವರ್, ಡಿ.ಕೆ ಶಿವಕುಮಾರ್ (DK Shivakumar) ಇದ್ದಾರೆ. ಅವರಿಗೆ ಇದೆಲ್ಲಾ ಗೊತ್ತಿಲ್ಲವೆ? ಆಗ ನೀವು ಎಲ್ಲಿದ್ದೀರಿ ಎಂದು ಪ್ರಶ್ನಿಸಿ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಪತ್ನಿಯ ಪ್ರಿಯಕರನನ್ನು ಕೊಂದು ದೇಹದ ಭಾಗಗಳನ್ನು ಕಸದ ರಾಶಿಯಲ್ಲಿ ಎಸೆದ

    ನನ್ನ ಸರ್ಕಾರ ಹೇಗೆ ಹೋಯಿತು? ಅದನ್ನು ತೆಗೆಯಲು ನಿಮ್ಮ ಕಾಣಿಕೆ ಏನು? ಬಿಜೆಪಿಯವರ ಜತೆ ಹೇಗೆಲ್ಲಾ ಕುಮ್ಮಕ್ಕು ಕೊಟ್ಟಿದ್ದೀರಿ? ಯಾರನ್ನೆಲ್ಲ ಎಲ್ಲೆಲ್ಲಿಗೆ ಕಳಿಸಿದಿರಿ ಎಂಬ ಮಾಹಿತಿ ನನಗಿದೆ. ಆದರೆ ಜಾತ್ಯಾತೀತ ತತ್ವ ತನ್ನ ಆಸ್ತಿ ಎನ್ನುವ ರೀತಿ ವರ್ತಿಸುತ್ತಿದ್ದಿರಿ. ಜಯಪ್ರಕಾಶ್ ನಾರಾಯಣ್ ಅವರ ಸಿದ್ಧಾಂತಕ್ಕೆ ನೀವು ಬದ್ಧರಾಗಿ ಇದ್ದಿದ್ದರೆ ನೀವು ಅಧಿಕಾರಕ್ಕಾಗಿ ಮಾತೃಪಕ್ಷವನ್ನ ಕಾಲಿನಲ್ಲಿ ಒದ್ದು ಹೋಗುತ್ತಿರಲಿಲ್ಲ ಎಂದು ಗುಡುಗಿದ್ದಾರೆ.

    ಬಿಜೆಪಿ ಪಕ್ಷದವರಿಗಿಂತ ಭ್ರಷ್ಟಾಚಾರದಲ್ಲಿ ನಿವೇನೂ ಕಮ್ಮಿ ಇಲ್ಲ. ನೀವು ಬೇಕಾದಷ್ಟು ಅಕ್ರಮ ನಡೆಸಿದ್ದೀರಿ. ನಾನು ಎತ್ತಿದ ಪ್ರಶ್ನೆಗಳಿಗೆ ಈವರೆಗೆ ಉತ್ತರ ಕೊಡಲು ನಿಮ್ಮಿಂದ ಆಗಿಲ್ಲ. ಮತ್ತೆ ನಮ್ಮ ಪಕ್ಷದ ಬಗ್ಗೆ ನಾಲಿಗೆ ಹರಿಯಬಿಡುತ್ತೀರಾ? ನಾಚಿಕೆ ಇಲ್ಲವೇ? ನಾನು ಸದಾ ಜನಗಳ ಮಧ್ಯೆ ಇರುವ ಸಾಮಾನ್ಯ ವ್ಯಕ್ತಿ. ಆದರೆ ನೀವು ಸಂಜೆ 6 ಗಂಟೆಯಾದ ಮೇಲೆ ಯಾರ ಕೈಗೆ ಸಿಗುತ್ತಿದ್ದೀರಿ? ಮಧ್ಯಾಹ್ನ ಊಟಕ್ಕೆಂದು ಹೋದರೆ ನಾಪತ್ತೆ ಆಗುತ್ತಿದ್ದ ಬಗ್ಗೆ ಕೂಡ ನೀವು ಭಾಷಣ ಮಾಡಬೇಕಲ್ಲವೇ ಎಂದು ಕುಟುಕಿದ್ದಾರೆ.

    ಈ ಸಂದರ್ಭದಲ್ಲಿ ಮುದ್ದೇಬಿಹಾಳ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ.ಸಿ.ಎನ್. ಸೋಲಾಪೂರ, ಪಕ್ಷದ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಉಪಸ್ಥಿತರಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k