Tag: ಪಂಚರತ್ನ

  • ಮಂಡ್ಯ ಬಿಟ್ಟು ಬೇರೆ ಯಾವ ಜಿಲ್ಲೆ ಜನರಿಗೂ ಹೆಚ್‌ಡಿಕೆ ಭರವಸೆ ಮೇಲೆ ನಂಬಿಕೆಯಿಲ್ಲ – ಚಲುವರಾಯಸ್ವಾಮಿ

    ಮಂಡ್ಯ ಬಿಟ್ಟು ಬೇರೆ ಯಾವ ಜಿಲ್ಲೆ ಜನರಿಗೂ ಹೆಚ್‌ಡಿಕೆ ಭರವಸೆ ಮೇಲೆ ನಂಬಿಕೆಯಿಲ್ಲ – ಚಲುವರಾಯಸ್ವಾಮಿ

    ಮಂಡ್ಯ: ಮಂಡ್ಯ ಬಿಟ್ಟು ಬೇರೆ ಯಾವ ಜಿಲ್ಲೆಯಲ್ಲೂ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರ ಭರವಸೆಯ ಮೇಲೆ ಜನರಿಗೆ ನಂಬಿಕೆ ಇಲ್ಲ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ (Chaluvaraya Swamy) ಕಾಲೆಳೆದಿದ್ದಾರೆ.

    ಮಂಡ್ಯ (Mandya) ಜಿಲ್ಲೆಯ ನಾಗಮಂಗಲ (Nagamangala) ಕ್ಷೇತ್ರದಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ನನಗೆ 123 ಸೀಟು ಬಂದರೆ ಪಂಚರತ್ನ (Pancharathna) ಯೋಜನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹಾಗೂ 123 ಸೀಟು ಬರಲಿಲ್ಲ ಅಂದರೆ ನೀವ್ಯಾರು ನನ್ನನ್ನು ಏನೂ ಕೇಳಬಾರದು ಎಂದು ಕೂಡಾ ಹೇಳಿದ್ದಾರೆ. ಬೆಳಗಾವಿ, ಮಂಗಳೂರು, ಗುಲ್ಬರ್ಗ, ಕೋಲಾರದಲ್ಲಿ ಅವರು ಭರವಸೆ ಕೇಳಲ್ಲ. ಬರೀ ಮಂಡ್ಯದಲ್ಲಿ ಕೇಳಿದರೆ ಏನು ಪ್ರಯೋಜನ ಎನ್ನುವ ಮೂಲಕ ಈ ಬಾರಿ ಮಂಡ್ಯ ಜನರು ಜೆಡಿಎಸ್ (JDS) ಬೆಂಬಲಿಸದೆ ಕಾಂಗ್ರೆಸ್ (Congress) ಬೆಂಬಲಿಸಿ ಎಂದರು. ಇದನ್ನೂ ಓದಿ: ನನ್ನ ಹೇಳಿಕೆ ತಿರುಚಿದ್ದಾರೆ: ಡಿಕೆಶಿನ ಹೈಕಮಾಂಡ್ ಸಿಎಂ ಮಾಡಲ್ಲ ಹೇಳಿಕೆಗೆ ಸಿದ್ದು ಸ್ಪಷ್ಟನೆ 

    31 ಜಿಲ್ಲೆಯ ಎಲ್ಲಾ ವರ್ಗದ ಜನ ಅವರ ಭರವಸೆಯ ಬಗ್ಗೆ ನಂಬಿಕೆ ಇಟ್ಟರೆ ಜೆಡಿಎಸ್‌ಗೆ 123 ಸೀಟ್ ಬರಬಹುದು. ಆದರೆ ಮಂಡ್ಯ ಬಿಟ್ಟು ಬೇರೆ ಯಾವ ಜಿಲ್ಲೆಯಲ್ಲೂ ಅವರ ಭರವಸೆಯ ಮೇಲೆ ನಂಬಿಕೆ ಇಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸಿಎಂ ಆಗೋ ಕನಸು ನನಸಾಗಲ್ಲ: ಬೊಮ್ಮಾಯಿ

    ಕುಮಾರಸ್ವಾಮಿ ಅವರಿಗೆ ಯಾವ ಪಕ್ಷವೂ ಅಧಿಕಾರಕ್ಕೆ ಬರಬಾರದು. ನಮ್ಮನ್ನು ಮಧ್ಯದಲ್ಲಿ ಉಪಯೋಗಿಸಿಕೊಳ್ಳಬೇಕು ಎಂದು ಅಂದುಕೊಂಡಿದ್ದಾರೆ. ಕಳೆದ ಬಾರಿ ಮಂಡ್ಯ ಜಿಲ್ಲೆಯ ಜನರ ಆಶೀರ್ವಾದದಿಂದ 37 ಸೀಟ್ ಬಂತು. ಹೀಗಾಗಿ ಕಾಂಗ್ರೆಸ್, ಬಿಜೆಪಿ (BJP) 113 ಸೀಟ್ ದಾಟಲಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಕುಮಾರಸ್ವಾಮಿಯವರ ಮನೆಗೆ ಹೋಗಿ ಅವರನ್ನು ಸಿಎಂ ಮಾಡಿತ್ತು. ಆದರೆ ಅವರು ಸರಿಯಾಗಿ ಅಧಿಕಾರ ಮಾಡಲಿಲ್ಲ. ಈ ಬಾರಿಯಾದರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಜನರಲ್ಲಿ ಮನವಿ ಮಾಡಿದರು. ಇದನ್ನೂ ಓದಿ: ಶಾಸಕ ಟಿ.ಡಿ ರಾಜೇಗೌಡ ಹಂಚಿದ್ದ ಕುಕ್ಕರ್ ಬ್ಲಾಸ್ಟ್- ರೊಚ್ಚಿಗೆದ್ದ ಹಳ್ಳಿಗರು

  • 12ನೇ ತರಗತಿವರೆಗೆ ಉಚಿತ ಶಿಕ್ಷಣ, ಪ್ರತಿ ಯುವಕರಿಗೆ ಉದ್ಯೋಗ – ಎಚ್‌ಡಿಕೆ ಘೋಷಣೆ

    12ನೇ ತರಗತಿವರೆಗೆ ಉಚಿತ ಶಿಕ್ಷಣ, ಪ್ರತಿ ಯುವಕರಿಗೆ ಉದ್ಯೋಗ – ಎಚ್‌ಡಿಕೆ ಘೋಷಣೆ

    ಬೆಂಗಳೂರು:2023 ರಲ್ಲಿ ಜೆಡಿಎಸ್‌ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತಂದರೆ ಪಂಚರತ್ನ ಯೋಜನೆ ಜಾರಿಗೆ ತರುವುದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.

    ಜೆಪಿ ಭವನದಲ್ಲಿ ನಡೆದ ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿದ ಅವರು, ಪ್ರತಿ ಕುಟುಂಬಕ್ಕೆ ಒಂದು ಸೂರು, ಎಲ್.ಕೆ.ಜಿಯಿಂದ 12 ನೇ ತರಗತಿವರೆಗೆ ಉಚಿತ ಗುಣಮಟ್ಟದ ಶಿಕ್ಷಣ, ರಾಜ್ಯದ ಎಲ್ಲಾ ಜನರಿಗೆ ವಿಶೇಷ ಆರೋಗ್ಯ ಕಾರ್ಯಕ್ರಮ, ರಾಜ್ಯದ ರೈತರ ಅಭಿವೃದ್ಧಿಗೆ ವಿಶೇಷ ಯೋಜನೆ, ಪ್ರತಿ ಯುವಕರಿಗೂ ಉದ್ಯೋಗ ನೀಡುವ ಮಹತ್ವದ ಕಾರ್ಯಕ್ರಮಗಳನ್ನ ಅನುಷ್ಠಾನ ಮಾಡುವುದಾಗಿ ಕುಮಾರಸ್ವಾಮಿ ತಿಳಿಸಿದರು.

     

    ಒಂದು ವೇಳೆ ನನ್ನ ಅಧಿಕಾರದಲ್ಲಿ ಈ ಯೋಜನೆಗೆಗಳನ್ನ ಜಾರಿಗೆ ತರದೇ ಹೋದರೆ ನನ್ನ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂದು ಸವಾಲು ಎಸೆದ ಎಚ್‌ಡಿಕೆ ಪಕ್ಷ ಸಂಘಟನೆ ಮಾಡಲು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಮೊದಲ ಪ್ರವಾಸ ಜನವರಿ 29, 30 ರಂದು ಹುಬ್ಬಳ್ಳಿ ಭಾಗದಿಂದ ಪ್ರಾರಂಭ ಮಾಡುವುದಾಗಿ ತಿಳಿಸಿದರು.

    ಪಕ್ಷ ಸಂಘನೆಗಾಗಿ ಜೆಡಿಎಸ್ ಸಂಘಟನೆ ಮಾಡಲಾಗುತ್ತಿದೆ. ಹೀಗಾಗಿ ಹೊಸ ತಂಡ ರಚನೆ ಮಾಡುವ ನಿಟ್ಟಿನಲ್ಲಿ ಈಗ ಇರುವ ಎಲ್ಲಾ ಘಟಕಗಳನ್ನ ವಿಸರ್ಜನೆ ಮಾಡಲಾಗಿದೆ. ಮಧ್ಯ ಕರ್ನಾಟಕ, ಹೈದರಾಬಾದ್‌ ಕರ್ನಾಟಕ, ಮುಂಬೈ ಕರ್ನಾಟಕ, ಮೈಸೂರು ಭಾಗ, ಬೆಂಗಳೂರು ನಗರ, ಕರಾವಳಿ ಭಾಗ, ಕೋಲಾರ, ಚಿಕ್ಕಬಳ್ಳಾಪುರ ಭಾಗ ಸೇರಿ 7 ವಿಭಾಗ ಮಟ್ಟದಲ್ಲಿ ವಿಶೇಷ ಸಮಿತಿ ರಚಿಸಲಾಗುತ್ತದೆ. ಅ ಸಮಿತಿಯು ಪ್ರತಿ ಜಿಲ್ಲೆಗೆ ಪ್ರವಾಸ ಮಾಡಿ ಅಲ್ಲಿನ ನಾಯಕರು, ಕಾರ್ಯಕರ್ತರು ಜೊತೆ ಸಂವಾದ, ಅಭಿಪ್ರಾಯ ನಡೆಸಿ ಸಮಿತಿ ರಚನೆ ಮಾಡಿ ಪಕ್ಷ ಸಂಘಟನೆ ಮಾಡಲಾಗುತ್ತದೆ ಎಂದು ತಿಳಿಸಿದರು.

    ಬೂತ್ ಮಟ್ಟದಿಂದ ಪಕ್ಷ ಸಂಘಟನೆಗೆ ಕೋರ್ ಕಮಿಟಿ ನಿರ್ಧಾರ ಮಾಡಿದೆ. ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗೂ ಪಕ್ಷ ಸಿದ್ದವಾಗಲಿದೆ ಎಂದು ವಿವರಿಸಿದರು.