Tag: ಪಂಚರಂಗಿ

  • ಪಡ್ಡೆಹುಡುಗರ ನಿದ್ದೆಗೆಡಿಸಿದ ನಟಿ ನಿಧಿ ಸುಬ್ಬಯ್ಯ ಹಾಟ್‌ ಫೋಟೋಶೂಟ್

    ಪಡ್ಡೆಹುಡುಗರ ನಿದ್ದೆಗೆಡಿಸಿದ ನಟಿ ನಿಧಿ ಸುಬ್ಬಯ್ಯ ಹಾಟ್‌ ಫೋಟೋಶೂಟ್

    `ಪಂಚರಂಗಿ’ (Pancharangi) ಬೆಡಗಿ ನಿಧಿ ಸುಬ್ಬಯ್ಯ (Nidhi Subbaiah) ಮತ್ತಷ್ಟು ಫಿಟ್ ಆಗಿ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ. 36ರ ವಯಸ್ಸಿನ ನಟಿ ನಿಧಿ, 20ರ ಯುವತಿಯಂತೆ ಹಾಟ್ ಹಾಟ್ ಫೋಟೋಶೂಟ್ ಮಾಡಿಸಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಸದ್ಯ ನಟಿ ತುಂಡು ಬಟ್ಟೆ ಸುತ್ತಿಕೊಂಡಿರುವ ನಯಾ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡ್ತಿದೆ. ಇದನ್ನೂ ಓದಿ: ಸಾಲು ಸಾಲು ಸಿನಿಮಾಗಳ ಸೋಲಿನ ಬಗ್ಗೆ ಮೌನ ಮುರಿದ ಕನ್ನಡದ `ಗಿಲ್ಲಿ’ ನಟಿ ರಾಕುಲ್

    ದಿಗಂತ್‌ಗೆ (Diganth) ನಾಯಕಿಯಾಗಿ ನಟಿಸಿದ್ದ ʻಪಂಚರಂಗಿʼ ಚಿತ್ರದಿಂದ ಗಮನ ಸೆಳೆದ ಕೊಡಗಿನ ಸುಂದರಿ ನಿಧಿ ಸುಬ್ಬಯ್ಯ ಬಾಲಿವುಡ್‌ನಲ್ಲೂ ನಟಿಸಿ ಬಂದರು. ಆದರೂ ಕೊಡಗಿನ ಚೆಲುವೆಯ ಲಕ್ ಕೈ ಹಿಡಿಯಲಿಲ್ಲ. ಬಿಗ್ ಬಾಸ್ ಕನ್ನಡ 8ರ ಶೋನಿಂದ ಜನಪ್ರಿಯತೆ ಗಟ್ಟಿಸಿಕೊಂಡ ನಟಿ ಈಗ ಮತ್ತೆ ಕನ್ನಡ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ.

    ನಟಿ ನಿಧಿ ಸದ್ಯ ತಮ್ಮ ಹಸಿ ಬಿಸಿ ಫೋಟೋಶೂಟ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಬಿಸಿಲಿಗೆ ಮೈ ತೋರಿಸಿ, ತುಂಡು ಬಟ್ಟೆಯನ್ನ ಸುತ್ತಿಕೊಂಡು ಫೋಟೋಗ್ರಾಫರ್ ನಿಮಿಷ್ ಜೈನ್ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಈ ಫೋಟೋಶೂಟ್ ನೋಡಿದ ಕೆಲ ನೆಟ್ಟಿಗರು, ಮೈ ತುಂಬಾ ಬಟ್ಟೆ ಹಾಕೋಳೋದು ಬಿಟ್ಟು ಏನೀದು ಹುಚ್ಚಾಟ ಎಂದು ಕಾಮೆಂಟ್ ಮಾಡಿದ್ದಾರೆ.

     

    View this post on Instagram

     

    A post shared by Nidhi Subbaiah (@nidhisubbaiah)

    13 ಕೆಜಿ ತೂಕ ಇಳಿಸಿಕೊಂಡಿರುವ ನಿಧಿ ಅವರು ಡಯೆಟ್ ಮತ್ತು ವರ್ಕೌಟ್ ಅಂತಾ ಫಿಟ್‌ನೆಸ್ ಕಡೆ ಗಮನ ಕೊಡುತ್ತಿದ್ದಾರೆ. ಇನ್ನೂ ಉಪೇಂದ್ರ (Upendra) ನಟನೆಯ `UI’ ಚಿತ್ರದಲ್ಲಿ ನಿಧಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಟಿಯ ಮತ್ತಷ್ಟು ಸಿನಿಮಾಗಳ ಬಗ್ಗೆ ಸದ್ಯದಲ್ಲೇ ಅಪ್‌ಡೇಟ್ ಸಿಗಲಿದೆ.