Tag: ಪಂಚಪೀಠ

  • ದಾವಣಗೆರೆ ಶೃಂಗ ಸಮ್ಮೇಳನ – 15 ವರ್ಷಗಳ ಬಳಿಕ ಒಂದಾದ ಪಂಚಪೀಠಾಧೀಶರು

    ದಾವಣಗೆರೆ ಶೃಂಗ ಸಮ್ಮೇಳನ – 15 ವರ್ಷಗಳ ಬಳಿಕ ಒಂದಾದ ಪಂಚಪೀಠಾಧೀಶರು

    ದಾವಣಗೆರೆ: 40 ವರ್ಷಗಳ ಬಳಿಕ ಜಿಲ್ಲೆಯಲ್ಲಿ ನಡೆಯುತ್ತಿರುವ ಶೃಂಗ ಸಮ್ಮೇಳನದಲ್ಲಿ 15 ವರ್ಷಗಳ ನಂತರ ಪಂಚಪೀಠಾಧೀಶರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

    ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ದಾವಣಗೆರೆಯ ರೇಣುಕಾ ಮಂದಿರದಲ್ಲಿ ಶೃಂಗಾ ಸಮ್ಮೇಳನ ಜರುಗಿತು. ಇದೇ ಮೊದಲ ಬಾರಿ ಪಂಚಪೀಠಗಳಾದ ಕೇದಾರ, ರಂಭಾಪುರಿ, ಉಜ್ಜಯಿನಿ, ಕಾಶಿ, ಶ್ರೀಶೈಲ ಪೀಠದ ಸ್ವಾಮೀಜಿಗಳು ಒಂದೇ ವೇದಿಕೆಯಲ್ಲಿ ಕಂಡು ಬರುವ ಮೂಲಕ ಒಗ್ಗಟ್ಟು ಪ್ರದರ್ಶಿಸುವಂತೆ ಕರೆ ನೀಡಿದರು. ಕಳೆದ 15 ವರ್ಷದ ನಂತರ ಪಂಚಪೀಠಾಧೀಶರು ಒಂದಾಗಿ ಸಮಾವೇಶದಲ್ಲಿ ಭಾಗಿಯಾಗಿ ಉಪಜಾತಿಗಳನ್ನ ಬಳಸುವ ಬದಲು ಅಖಂಡವಾಗಿ ವೀರಶೈವ ಲಿಂಗಾಯತವೆಂದು ಬಳಕೆ ಮಾಡುವಂತೆ ದೇಶದ ಎಲ್ಲಾ ವೀರಶೈವ ಲಿಂಗಾಯತ ಸಮಾಜದ ಜನರಿಗೆ ಕರೆನೀಡಿದರು.ಇದನ್ನೂ ಓದಿ: 1.25 ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಮಹಿಳಾ ಪಿಎಸ್‌ಐ

    ಇದೇ ವೇಳೆ ಶ್ರೀಶೈಲ ಪೀಠದ ಡಾ. ಚನ್ನಸಿದ್ದರಾಮ ಪಂಡೀತಾರಾಧ್ಯ ಶಿವಾಚಾರ್ಯ ಜಗದ್ಗುರು ಮಾತನಾಡಿ, ಇಸ್ಲಾಂ ಧರ್ಮದಲ್ಲಿ 786 ಇದ್ದ ಹಾಗೇ ನಮ್ಮ ಸಮುದಾಯಕ್ಕೆ 856 (8- ಅಷ್ಟಾವರ್ಣ. 5- ಪಂಚಾಚಾರ್ಯ. 6- ಶಟಸ್ಥಳ) ಕೋಡ್ ಇದೆ. ಇಡೀ ವೀರಶೈವ ಸಮಗ್ರ ಸಮುದಾಯವನ್ನು ಒಂದುಗೂಡಿಸುವ ಕೆಲಸವಾಗುತ್ತಿದೆ. ಸರ್ಕಾರಿ ಸೌಲಭ್ಯ ಹಾಗೂ ಮೀಸಲಾತಿಯನ್ನು ಪಡೆದುಕೊಳ್ಳಲು ಉಪಜಾತಿ ಬರೆಸಿ. ಆದರೆ ಜಾತಿ ಮಾತ್ರ ವೀರಶೈವ ಲಿಂಗಾಯತ ಎಂದು ಬರೆಸಿ. ಅದೇ ರೀತಿ ಕೇಂದ್ರ ಸರ್ಕಾರ ಜಾತಿ ಸಮೀಕ್ಷೆಯಲ್ಲಿ ಜಾತಿ ಬದಲು ಸಂಪ್ರದಾಯ. ಉಪಜಾತಿ ಕಾಲಂ ಮಾಡಲು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.

    ಬಳಿಕ ರಂಭಾಪುರಿ ಶ್ರೀಗಳು ಮಾತನಾಡಿ, ಬಿಎಸ್ ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರು. ಆದರೆ ಒಮ್ಮೆ ಕೂಡ ಪೂರ್ಣ ಅವಧಿ ಅಧಿಕಾರ ಮಾಡಲು ಬಿಡಲಿಲ್ಲ, ಇದರಿಂದ ಇಡೀ ಸಮಾಜಕ್ಕೆ ಆಘಾತ ಉಂಟಾಯಿತು. ಜೊತೆಗೆ ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಯಿತು. ಅವರನ್ನು ನೆಮ್ಮದಿಯಿಂದ ಇರಲು ಬಿಡಲಿಲ್ಲ, ಕಿರುಕುಳಕೊಟ್ಟರು. ಅವರು ಬಹಳ ನೋವು ಅನುಭವಿಸಿದರು. ಆದ್ದರಿಂದ ಅವರು ಎಲ್ಲೇ ಹೋದರೂ ಹೆಚ್ಚು ಮಾತನಾಡುವುದಿಲ್ಲ. ಇನ್ನು ಬಿವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ, ಕ್ರಿಯಾಶೀಲರಾಗಿ ಸಂಘಟನೆ ಮಾಡ್ತಿದ್ದಾರೆ. ಅವರ ಮುಂದಿನ ದಿನ ರಾಜಕೀಯ ಜೀವನದಲ್ಲಿ ಉಜ್ವಲವಾಗಲಿದೆ ಎಂದು ಹೇಳಿದರು.

    ಕೇದಾರ ಪೀಠದ ಭೀಮಾಶಂಕರಲಿಂಗ ಸ್ವಾಮೀಜಿ ಮಾತನಾಡಿ, ಜಾತಿಗಣತಿ ವಿಚಾರದಲ್ಲಿ ಅಖಿಲ ಭಾರತ ವೀರಶೈವ ಸಮಾಜದ ಅಧ್ಯಯನ ಆಗಬೇಕಾಗಿದೆ. ಜಾತಿಗಣತಿ ಮಾಡುವ ಯಾವುದೇ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಇದೇ ಕಾರಣಕ್ಕೆ ವೀರಶೈವ ಲಿಂಗಾಯತರು ಒಂದು ಸಮಿತಿ ಮಾಡಿ, ಜಾತಿಗಣತಿ ಯಾವ ಜಾತಿ ಎಂದು ಸರಿಯಾಗಿ ಭರ್ತಿ ಮಾಡಬೇಕು. ಸರ್ಕಾರದ ಸೌಲಭ್ಯಕ್ಕಾಗಿ ಬೇರೆ ಬೇರೆ ಜಾತಿ ಬರೆಸುವುದು ಸರಿಯಲ್ಲ. ಕೇದಾರಕ್ಕೆ ಪ್ರಧಾನಿಗಳು ಬಂದಾಗ ಈ ವಿಚಾರ ಅವರ ಗಮನಕ್ಕೆ ತಂದಿದ್ದೇವೆ. ಲಿಂಗಾಯತ ಮತ್ತು ವೀರಶೈವ ಒಂದೇ ಎಂಬುದನ್ನ ಸ್ಪಷ್ಟಪಡಿಸಲಾಗಿದೆ. ಪಂಚಪೀಠಗಳು ಹಿಂದೇ ಕೂಡಾ ಒಂದೇ ಇದ್ದವು, ಮುಂದೇ ಕೂಡಾ ಒಂದೇ ಆಗಿರುತ್ತವೆ ಎಂದು ಘೋಷಣೆ ಮಾಡಿದರು.

    ಉಜ್ಜಯನಿ ಪೀಠದ ಜಗದ್ಗುರುಗಳು ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಕಥೆ ಹೇಳುವ ಮೂಲಕ ಗುರು ವಿರಕ್ತರು ಒಂದಾಗಬೇಕು. ಹಾಗೆಯೇ ವೀರಶೈವ ಲಿಂಗಾಯತರು ಎಲ್ಲಾರೂ ಒಟ್ಟಾಗಿ ಇರಬೇಕಿದೆ. ಸಮಾಜದ ಎಲ್ಲಾ ರಾಜಕೀಯ ಮುಖಂಡರು ಸಮಾಜದ ಒಳಿತಿಗಾಗಿ ಒಂದಾಗಬೇಕಿದೆ. ಸಮಾಜದ ಕೆಲಸಕ್ಕೆ ಪಂಚಾಚಾರ್ಯರು ಕರೆ ಕೊಟ್ಟ ತಕ್ಷಣ ಮುಂದಾಗಬೇಕು. ಮಹಾರಾಷ್ಟ್ರದಲ್ಲಿ ಒಂದೂವರೆ ಕೋಟಿ ಜನರು ವೀರಶೈವ ಲಿಂಗಾಯತರಿದ್ದಾರೆ. ಕರ್ನಾಟಕದಲ್ಲಿ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತರು ಇದ್ದಾರೆ. ಕೇಂದ್ರ ಸರ್ಕಾರ ತರುವ ಜಾತಿಗಣತಿಯಲ್ಲಿ ಮೂರು ಕಾಲಂಗಳನ್ನು ಮಾಡಬೇಕು. ಆಗ ಮಾತ್ರ ಜಾತಿಗಣತಿಯಲ್ಲಿ ವೀರಶೈವ ಲಿಂಗಾಯತರ ಸಂಖ್ಯೆ ಸ್ಪಷ್ಟವಾಗಲಿದೆ ಎಂದರು.ಇದನ್ನೂ ಓದಿ: D-CET ಶುಲ್ಕ ಪಾವತಿಗೆ ದಿನಾಂಕ ವಿಸ್ತರಣೆ: KEA

  • ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆ: ಡಾ.ಸಿದ್ದರಾಮ ಶ್ರೀ

    ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆ: ಡಾ.ಸಿದ್ದರಾಮ ಶ್ರೀ

    – ಮೂರು ಪ್ರಶ್ನೆಗಳಿಗೆ ಪಂಚಪೀಠ ಶ್ರೀಗಳು ಉತ್ತರಿಸಿಲಿ: ಎಸ್.ಎಂ ಜಾಮದಾರ್ ಸವಾಲು

    ಗದಗ: ಹಿಂದುತ್ವವಾದಿ ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆಯಾಗಿದೆ ಎಂದು ಗದಗ ತೋಂಟದಾರ್ಯ ಮಠದ ಡಾ.ಸಿದ್ದರಾಮ ಶ್ರೀಗಳು ಆರೋಪಿಸಿದ್ದಾರೆ.

    ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನಡೆದ ಲಿಂಗಾಯತ ಧರ್ಮ ಮತ್ತು ಚಿಂತನಾ ಗೋಷ್ಠಿ ಬಳಿಕ ಮಾತನಾಡಿದ ಶ್ರೀಗಳು, ಬಿಜೆಪಿ ಹಿಂದುತ್ವ ರಕ್ಷಕ ಪಕ್ಷ. ಲಿಂಗಾಯತರು ಹಿಂದೂ ಧರ್ಮದಿಂದ ಹೊರಗೆ ಹೋಗಬಾರದು ಎನ್ನುವುದು ಉದ್ದೇಶವನ್ನು ಬಿಜೆಪಿ ಹೊಂದಿದೆ ಎಂದು ದೂರಿದರು.

    ಜೈನರು ಹಾಗೂ ಬೌದ್ಧರು ಮೊದಲು ಹಿಂದೂಗಳಾಗಿದ್ದರು. ಆದರ ಈಗ ಹಿಂದೂ ಧರ್ಮದಿಂದ ಹೊರಗೆ ಹೋಗಿದ್ದಾರೆ. ಇದರಿಂದ ಹಿಂದೂ ಧರ್ಮಕ್ಕೆ ಏನು ಹಾನಿಯಾಗಿದೆ? ಲಿಂಗಾಯತರು ದೇಶಪ್ರೇಮಿಗಳು ದೇಶದ್ರೋಹಿಗಳಲ್ಲ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಯಾವತ್ತೂ ನಿಲ್ಲಲ್ಲ ಎಂದು ಸ್ಪಷ್ಟಪಡಿಸಿದರು.

    ಲಿಂಗಾಯತ ಮಹಾಸಭಾ ಮಹಾಪ್ರಧಾನ ಕಾರ್ಯದರ್ಶಿ ಎಸ್.ಎಂ ಜಾಮದಾರ್ ಅವರು ಮಾತನಾಡಿ, ಲಿಂಗಾಯತ ಧರ್ಮ ಹಾಳಾಗಿದ್ದೇ ಪಂಚಪೀಠದ ಶ್ರೀಗಳಿಂದ ಎಂದು ಗಂಭೀರ ಆರೋಪ ಮಾಡಿದರು. ಪಂಚಪೀಠ ಶ್ರೀಗಳಿಗೆ ಜಾಮದಾರ್ 3 ಪ್ರಶ್ನೆಗಳನ್ನು ಉತ್ತರಿಸುವಂತೆ ಕೇಳಿದ್ದಾರೆ.

    ಪಂಚಪೀಠ ಶ್ರೀಗಳು ತಮ್ಮ ಮಠಗಳಲ್ಲಿ ಬಸವಣ್ಣನವರ ಫೋಟೋ ಹಾಕಿಕೊಂಡಿದ್ದಾರೆ. ಕಳೆದ 200 ವರ್ಷಗಳಿಂದ ಸುಮಾರು 160ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆಸಿದ್ದಾರೆ. ಆ ಪುಸ್ತಕಗಳ ಮೂಲಕ ಬಸವಣ್ಣನವರ ಹಾಗೂ ಅವರ ಜೊತೆಗಿದ್ದ ಶರಣದ ಚಾರಿತ್ರ್ಯವದೆಯನ್ನು ಮಾಡಿದ್ದಾರೆ. ನೀವು ಹೀಗೆ ಮಾಡಿದ್ದು ಯಾಕೆ? ಇದಕ್ಕೆ ಪಂಚಪೀಠ ಶ್ರೀಗಳು ಉತ್ತರ ನೀಡಿಲಿ ಎಂದು ಆಗ್ರಹಿಸಿದರು.

    ನಿಮ್ಮ ಧರ್ಮ ಪ್ರಚಾರಕ್ಕಾಗಿ ಲಿಂಗಾಯತ ಧರ್ಮವನ್ನು ಭ್ರಷ್ಟಗೊಳಿಸಿದ್ದಿರಿ. ಆದರೆ ಈಗ ವೀರಶೈವ ಹಾಗೂ ಲಿಂಗಾಯತ ಧರ್ಮ ಒಂದೇ ಆಗಬೇಕೆಂದು ಯಾಕೆ ಹೇಳುತ್ತಿರಿ? ಎಂದ ಅವರು, ನನ್ನ ಮೂರನೇ ಪ್ರಶ್ನೆ ನೀವು ಬ್ರಾಹ್ಮಣರೋ, ವೀರಶೈವ ಬ್ರಾಹ್ಮಣರೋ? ಲಿಂಗಾಯತರೋ? ಎನ್ನುದನ್ನು ಸ್ಪಷ್ಟಪಡಿಸಿ ಎಂದು ಪಂಚಪೀಠ ಶ್ರೀಗಳಿಗೆ ಕೇಳಿದರು.

    ನೀವು ಲಿಂಗಾಯತರು ಬಸವಾದಿ ಶರಣರ ತತ್ವ ಒಪ್ಪುವುದಾದರೆ ನಾವು ಗೌರವಯುತವಾಗಿ ಸ್ವಾಗತಿಸುತ್ತೇವೆ. ಆದರೆ ಬಸವಣ್ಣನವರ ಚಾರಿತ್ರ್ಯವದೆ ಮಾಡಿ ಅಮಾಯಕ ಜನರ ದಾರಿತಪ್ಪಿಸುವ ಕೆಲವನ್ನು ಮಾಡಬಾರದು ಎಂದು ಗುಡುಗಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv