Tag: ಪಂಖೂರಿ ಪಾಠಕ್

  • ತಿಹಾರ್ ಜೈಲಿನ ಬಳಿಯೇ ಕೈ ನಾಯಕಿಯ ಕಾರು ಕಳ್ಳತನ – ವೀಡಿಯೋ ಪೋಸ್ಟ್ ಮಾಡಿ ಪಂಖೂರಿ ಪಾಠಕ್ ಕಿಡಿ

    ತಿಹಾರ್ ಜೈಲಿನ ಬಳಿಯೇ ಕೈ ನಾಯಕಿಯ ಕಾರು ಕಳ್ಳತನ – ವೀಡಿಯೋ ಪೋಸ್ಟ್ ಮಾಡಿ ಪಂಖೂರಿ ಪಾಠಕ್ ಕಿಡಿ

    ನವದೆಹಲಿ: ದೆಹಲಿಯ (Delhi) ಜನಕಪುರಿಯಲ್ಲಿರುವ (Janakpuri) ತಿಹಾರ್ ಜೈಲಿನ (Tihar Jail) ಬಳಿ ನಿಲ್ಲಿಸಿದ್ದ ಕಾರನ್ನು ಕಳ್ಳತನ ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕಿ ಪಂಖೂರಿ ಪಾಠಕ್ (Congress leader Pankhuri Patha) ಆರೋಪಿಸಿದ್ದು, ಈ ಘಟನೆಯ ದೃಶ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಕಳೆದ ರಾತ್ರಿ ನನ್ನ ಎಸ್‍ಯುವಿ (ಫಾರ್ಚುನರ್) ಕಾರನ್ನು ಜನಕಪುರಿಯ ಮುಖ್ಯ ರಸ್ತೆಯಿಂದ ಕಳ್ಳತನ ಮಾಡಲಾಗಿದೆ. ಸುಮಾರು ಅರ್ಧ ಗಂಟೆಗಳ ಕಾಲ ಹಲವಾರು ಪ್ರಯತ್ನಗಳ ಕಾಲ ಹಲವಾರು ಪ್ರಯತ್ನಗಳನ್ನು ನಡೆಸಿದ ಕಳ್ಳರ ಗ್ಯಾಂಗ್ ಕೊನೆಗೆ ಡೋರ್ ಓಪನ್ ಮಾಡಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ ಎಂದು ಪಂಖೂರಿ ಪಾಠಕ್ ತಿಳಿಸಿದ್ದಾರೆ. ಇದನ್ನೂ ಓದಿ: ಕದ್ರಿ ದೇಗುಲಕ್ಕೆ IRCಯಿಂದ ಬೆದರಿಕೆ ಪತ್ರ – ದೇಗುಲದ ಮಂಡಳಿಯಿಂದ ದೂರು

    ಹಲವು ಬ್ಯಾಂಕ್‍ಗಳಿರುವ ಸ್ಥಳದಲ್ಲಿ ಕಾರನ್ನು ನಿಲ್ಲಿಸಲಾಗಿತ್ತು. ಕಳ್ಳರು ಕಾರನ್ನು ಕದ್ದೊಯ್ಯುತ್ತಿದ್ದರೂ, ದೆಹಲಿ ಪೊಲೀಸರು ಮಾತ್ರ ನಿದ್ರೆ ಮಾಡುತ್ತಲೇ ಇದ್ದರು. ತಿಹಾರ್ ಜೈಲಿನ ಮುಂಭಾಗದಲ್ಲಿಯೇ ನನ್ನ ಕಾರು ಕಳ್ಳತನವಾಗಿದೆ ಎಂದರೆ, ನಗರದ ಉಳಿದ ಭಾಗಗಳ ಸ್ಥಿತಿ ಏನಾಗಬಹುದು ಎಂದು ನೀವು ಊಹಿಸಿ ಎಂದು ವೀಡಿಯೋ ಜೊತೆಗೆ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮಹಿಳಾ ನಾಯಕಿ ವಿರುದ್ಧ ಅಶ್ಲೀಲ ಟೀಕೆ ಆಡಿಯೋ ವೈರಲ್‌ – ಬಿಜೆಪಿ ನಾಯಕ ಸಸ್ಪೆಂಡ್

    ಸುಮಾರು ಅರ್ಧ ಗಂಟೆ ಕಾಲ ಕಾರು ಕದಿಯಲು ಯತ್ನಿಸಲಾಗುತ್ತಿತ್ತು. ಮೊದಲಿಗೆ ಕಳ್ಳರು ಕಾರಿನ ಬೀಗವನ್ನು ಒಡೆಯಲು ಎಲ್ಲಾ ರೀತಿಯಲ್ಲಿ ಪ್ರಯತ್ನಿಸಿದರು ಆದರೆ ಸಾಧ್ಯವಾಗಲಿಲ್ಲ ಹಾಗಾಗಿ ಬಿಟ್ಟು ಹೋದರು. ನಂತರ ದ್ವಿಚಕ್ರವಾಹನದಲ್ಲಿ ಬಂದ ಮತ್ತೋರ್ವ ಬೀಗವನ್ನು ಹೊಡೆದು ಹೋಗಿದ್ದಾನೆ. ಕೊನೆಗೆ ಕಾರಿನಲ್ಲಿ ಬಂದ ಕಳ್ಳರು, ಡೋರ್ ತೆಗೆದು ಕಾರನ್ನು ಕದ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]