Tag: ಪಂಕಜ್

  • ‘ಮುದುಡಿದ ಎಲೆಗಳು’ ಚಿತ್ರಕ್ಕೆ ಮುಹೂರ್ತ: ಪಂಕಜ್ ಸೇರಿ ಮೂವರು ನಾಯಕರು

    ‘ಮುದುಡಿದ ಎಲೆಗಳು’ ಚಿತ್ರಕ್ಕೆ ಮುಹೂರ್ತ: ಪಂಕಜ್ ಸೇರಿ ಮೂವರು ನಾಯಕರು

    ರಂಜನಿ ಅವರು ನಿರ್ಮಿಸುತ್ತಿರುವ ಹಾಗೂ ಎಂ.ಶಂಕರ್ (M. Shankar) ನಿರ್ದೇಶನದ ‘ಮುದುಡಿದ ಎಲೆಗಳು’ (Mududida Yelegalu) ಚಿತ್ರದ ಮುಹೂರ್ತ (Muhurta) ಸಮಾರಂಭ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಆರಂಭವಾಗಿತು. ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರು. ಚಿತ್ರತಂಡದವರು ಹಾಗೂ ಅನೇಕ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಭಾಗಿಯಾಗಿದ್ದರು.

    ಚಿತ್ರದ ಕುರಿತು ಮೊದಲು ಮಾತನಾಡಿದ ನಿರ್ಮಾಪಕ ಹಾಗೂ ನಿರ್ದೇಶಕ ಎಂ.ಶಂಕರ್, ನಮ್ಮ ರಿಯೊ ಪ್ರೊಡಕ್ಷನ್ ಮೂಲಕ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಿದು‌. ನನ್ನ ಪತ್ನಿ ರಂಜನಿ ಈ ಚಿತ್ರದ ಸಹ ನಿರ್ಮಾಪಕಿ.ಮನುಷ್ಯ ದಿನನಿತ್ಯ ಎದುರಿಸುವ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಕಥೆ ಬರೆದಿದ್ದೇನೆ. ಮುದುಡಿದ ಎಲೆಗಳು ಹೇಗೆ ಚದರಿ ಹೋಗುತ್ತದೆ. ಮತ್ತೆ ಹೇಗೆ  ಒಂದಾಗುತ್ತದೆ ಎಂಬ ಅಂಶವನ್ನೂ ಕಥೆ ಆಧರಿಸಿದೆ. ಮೂವತ್ತು ದಿನಗಳ ಒಂದೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಹಾಡುಗಳು ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಳ್ಳಲಿದೆ‌.

    ಈ ಚಿತ್ರದಲ್ಲಿ ರಂಜಿತ್ ಕುಮಾರ್, ಪಂಕಜ್ ಎಸ್ ನಾರಾಯಣ್ (Pankaj) ಹಾಗೂ ದರ್ಶನ್ ಸೂರ್ಯ ಮೂವರು ನಾಯಕರು. ಊರ್ವಶಿ ರಾಯ್, ಸೀಮಾ ವಸಂತ್ ಹಾಗೂ ಸುಶ್ಮಿತ ನಾಯಕಿಯರು. ಹಿರಿಯ ನಟ ಭವ್ಯ, ಶೋಭ್ ರಾಜ್, ಶಂಕರ್ ಅಶ್ವಥ್, ಹರ್ಷಿಕಾ ಪೂಣ್ಣಚ್ಚ, ಸಂತೋಷ್ ರೆಡ್ಡಿ, ಅಮಿತ್ ರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ರಮೇಶ್ ಕೋಟೆ ಸಹ ನಿರ್ದೇಶನ, ಶ್ಯಾಮ್ ಸಿಂಧನೂರು ಛಾಯಾಗ್ರಹಣ ಹಾಗೂ ವಿಕಾಸ್ ವಸಿಷ್ಠ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ ಎಂದರು.

    ನನ್ನ ಪತಿ ಶಂಕರ್ ಅವರ ಸಾರಥ್ಯದಲ್ಲಿ ಮುದುಡಿದ ಎಲೆಗಳು ಚಿತ್ರ ಉತ್ತಮವಾಗಿ ಮೂಡಿ ಬರಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಸಹ ನಿರ್ಮಾಪಕಿ ರಂಜನಿ.  ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ಸಹ ನಿರ್ದೇಶಕ ರಮೇಶ್ ಕೋಟೆ ನೀಡಿದರು.

    ಚಿತ್ರದಲ್ಲಿ ನಟಿಸುತ್ತಿರುವ ಭವ್ಯ, ಅಮಿತ್ ರಾಜ್, ರಂಜಿತ್ ಕುಮಾರ್, ಪಂಕಜ್ ಎಸ್ ನಾರಾಯಣ್, ದರ್ಶನ್ ಸೂರ್ಯ, ಊರ್ವಶಿ ರಾಯ್, ಸುಶ್ಮಿತ, ಸೀಮಾ ವಸಂತ್ ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ಮಾತನಾಡಿದರು.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್.ನಾರಾಯಣ್ ಪುತ್ರ ಪಂಕಜ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್.ನಾರಾಯಣ್ ಪುತ್ರ ಪಂಕಜ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರ ಕುಟುಂಬದಲ್ಲಿ ಶುಭ ಸಮಾರಂಭ ನೆರವೇರಿದೆ. ಇತ್ತೀಚೆಗೆ ಎರಡನೇ ಮಗ ಪವನ್ ಅವರ ಮದುವೆ ನಡೆದಿತ್ತು, ಈಗ ಪಂಕಜ್ ಅವರ ಮದುವೆ ನಡೆದಿದೆ.

    ಮೈಸೂರಿನಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ಪಂಕಜ್ ಅವರ ಮದುವೆ ನಡೆದಿದೆ. ಪಂಕಜ್ ಅವರನ್ನು ಮದುವೆ ಆಗಿರುವ ಹುಡುಗಿಯ ಹೆಸರು ರಕ್ಷಿತಾ ಸುರೇಂದರ್. ಕಳೆದ ತಿಂಗಳು ಪಂಕಜ್ ಮತ್ತು ರಕ್ಷಿತಾ ನಿಶ್ಚಿತಾರ್ಥ ನಡೆದಿತ್ತು. ಇದೀಗ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಅಪ್ಪು ಪುತ್ಥಳಿಗೆ ಮುತ್ತಿಟ್ಟು ರಾಘವೇಂದ್ರ ರಾಜ್‍ಕುಮಾರ್ ಭಾವುಕ

    ಗುರುಹಿರಿಯರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ಸ್ಯಾಂಡಲ್‍ವುಡ್ ಸೆಲೆಬ್ರಿಟಿಗಳು ಮದುವೆಯಲ್ಲಿ ಭಾಗಿಯಾಗಿ ನವ ವಧು, ವರರನ್ನು ಆಶಿರ್ವದಿಸಿದ್ದಾರೆ. ಪಂಕಜ್ ಮತ್ತು ರಕ್ಷಿತಾ ದಂಪತಿಗೆ ಶುಭ ಕೋರಿ, ಆಶೀರ್ವಾದ ಮಾಡಲು ಕನ್ನಡ ಚಿತ್ರರಂಗದ ಗಣ್ಯರು ಮತ್ತು ಇಬ್ಬರ ಸ್ನೇಹಿತರು ಮತ್ತು ಕುಟುಂಬದವರು ಮದುವೆಗೆ ಬಂದು ಶುಭ ಕೋರಿದ್ದಾರೆ. ಇದನ್ನೂ ಓದಿ: ನಿಕ್ ಜೊತೆಗಿನ ವಿಚ್ಛೇದನ ಗಾಸಿಪ್​ಗೆ ಬ್ರೇಕ್ ಹಾಕಿದ ಪ್ರಿಯಾಂಕ ಚೋಪ್ರಾ

    ಪಂಕಜ್ ಅವರು ಚಂದನವನದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಪಂಕಜ್ ಮದುವೆಯ ಸುಂದರ ಕ್ಷಣದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

  • ಅಂದು ತನಗೆ ದಾರಿ ತೋರಿಸಿದ ನಿರ್ದೇಶಕರ ಪುತ್ರನಿಗೆ ದಚ್ಚು ಸಾಥ್!

    ಅಂದು ತನಗೆ ದಾರಿ ತೋರಿಸಿದ ನಿರ್ದೇಶಕರ ಪುತ್ರನಿಗೆ ದಚ್ಚು ಸಾಥ್!

    ಬೆಂಗಳೂರು: ಬೆಳೆಯೋವರೆಗೂ ಅಷ್ಟೇ, ಬೆಳೆದು ನಿಂತ್ಮೇಲೆ ನೀನ್ ಯಾರೋ ನನಗೆ ಗೊತ್ತಿಲ್ಲ ಅನ್ನೋರೆ ಹೆಚ್ಚು. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮಗೆ ಸಹಾಯ ಮಾಡಿದ ವ್ಯಕ್ತಿಯನ್ನು ಮರೆಯದೆ ಇಂದಿಗೂ ಅವರ ಸಹಾಯವನ್ನು ಸ್ಮರಿಸುತ್ತಾರೆ.

    20 ವರ್ಷಗಳ ಹಿಂದೆ ದರ್ಶನ್ ಗೆ ನಿರ್ದೇಶಕರೊಬ್ಬರು ಸಹಾಯ ಮಾಡಿದ್ದರು. ಆ ಸಹಾಯವನ್ನು ದರ್ಶನ್ ಇದೂವರೆಗೂ ಮರೆತಿಲ್ಲ. ಸಿನಿಮಾರಂಗಕ್ಕೆ ಬರುವ ಮೊದಲು ತೂಗುದೀಪ್ ಶ್ರೀನಿವಾಸ್ ಕನ್ನಡದ ಖ್ಯಾತ ಖಳನಟನ ಪುತ್ರ ಎನ್ನುವ ಕ್ರೆಡಿಟ್ ಇತ್ತು. ಆದರೆ ಅದನ್ನು ನೋಡಿ ಯಾರೊಬ್ಬರು ಅವರಿಗೆ ಅವಕಾಶ ಕೊಟ್ಟಿಲ್ಲ. ನಟನ ಮಗನಾಗಿದ್ದರೂ ಲೈಟ್ ಮ್ಯಾನ್, ಕ್ಯಾಮೆರಾ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದರು.

    ಈ ವೇಳೆ ನಿರ್ದೇಶಕ ಎಸ್. ನಾರಾಯಣ್ ತಮ್ಮ ಅಂಬಿಕಾ ಸೀರಿಯಲ್ ಮೂಲಕ ದರ್ಶನ್ ಅವರನ್ನ ಕಿರುತೆರೆಗೆ ಪರಿಚಯಿಸಿದ್ದರು. ಅಂಬಿಕಾ ಆದಮೇಲೆ ಶ್ರೀಮತಿ, ವೈಷ್ಣವಿ ಸೀರಿಯಲ್ ಗಳಲ್ಲಿಯೂ ದರ್ಶನ್ ಮಿಂಚಿದ್ದಾರೆ. ಸೀರಿಯಲ್‍ ನಲ್ಲಿ ದರ್ಶನ್ ಅಭಿನಯಕ್ಕೆ ಜನರಿಂದ ಪ್ರಶಂಸೆ ಸಿಗುತ್ತದೆ. ಇದನ್ನ ನೋಡಿದ ಎಸ್.ನಾರಾಯಣ್ ಅವರು `ಮಹಾಭಾರತ’ ಸಿನಿಮಾದಲ್ಲಿ ದರ್ಶನ್ ಗೆ ಖಳನಾಯಕನ ಪಾತ್ರವನ್ನ ಕೊಡುತ್ತಾರೆ. ನಂತರ ದೇವರ ಮಗ, ಭೂತಯ್ಯನ ಮಕ್ಕಳು ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಪೋರ್ಟಿಂಗ್ ಕ್ಯಾರೆಕ್ಟರ್ ಮಾಡುತ್ತಾರೆ. ಬಳಿಕ ಸಿನಿಮಾರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ.

    ಅಂಬಿಕಾ ಹಾಗೂ ಮಹಾಭಾರತ ದರ್ಶನ್ ಲೈಫ್ ನಲ್ಲಿ ಮೊದಲ ಹೆಜ್ಜೆ. ಅಂದು ಎಸ್. ನಾರಾಯಣ್ ಮಾಡಿದ್ದ ಸಹಾಯಕ್ಕೆ ಬೇರೊಂದು ರೂಪದಲ್ಲಿ ಸಹಾಯ ಮಾಡಿದ್ದಾರೆ. ಹೊಸಬರ ಹೊಸಪ್ರಯತ್ನಕ್ಕೆ ಸದಾ ಕೈಜೋಡಿಸುವ ದರ್ಶನ್, ಎಸ್.ನಾರಾಯಣ್ ಪುತ್ರ ಪಂಕಜ್ ರ ಹೊಸ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ. ಪಂಕಜ್ ಒಡೆತನದ ಬ್ಯೂಟಿ ಸೆಲೂನ್ ಉದ್ಘಾಟನೆಗೆ ಅತಿಥಿಯಾಗಿ ಆಗಮಿಸಿ ಪಂಕಜ್ ಬೆನ್ನುತಟ್ಟಿದ್ದಾರೆ. ಬಿಡುವಿಲ್ಲದ ಚಿತ್ರೀಕರಣದ ನಡುವೆಯೂ ಫ್ರೀ ಮಾಡ್ಕೊಂಡು ಸಲೂನ್ ಉದ್ಘಾಟನೆ ಮಾಡಿದ್ದಾರೆ.

    ಅಂಬಿಕಾ ಸೀರಿಯಲ್ ಟೈಮ್‍ನಲ್ಲಿದ್ದ ದರ್ಶನ್ ಗೂ ಇವತ್ತಿನ ದರ್ಶನ್‍ಗೂ ಯಾವುದೇ ವ್ಯತ್ಯಾಸವಿಲ್ಲ. ಸ್ಟಾರ್ ನಟನಾಗಿ ಬೆಳೆದರೂ ಕಿಂಚಿತ್ತೂ ಅಹಂ ಇಲ್ಲ. ಸಾಧನೆಯ ಕಡೆ ಸಾಗ್ತಿರುವ ದರ್ಶನ್ ರನ್ನ ನೋಡಿ ತುಂಬಾ ಖುಷಿಯಾಗುತ್ತೆ. ಈ ಸರಳತೆ, ಕೆಲಸದ ಮೇಲಿರುವ ಭಕ್ತಿ ಅವರನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲಿ. ದೇಶ ತಿರುಗಿ ನೋಡುವಂತಹ ಎತ್ತರದ ಸ್ಥಾನಕ್ಕೆ ಸಾರಥಿ ಏರಲಿ ಎಂದು ಎಸ್. ನಾರಾಯಣ್ ಹೇಳಿದ್ದಾರೆ.

  • ಸ್ಟಾರ್ ನಿರ್ದೇಶಕನ ಸಿನಿಮಾಗೆ ನಾಯಕಿಯಾಗಿ ಬಿಗ್ ಬಾಸ್ ಸ್ಪರ್ಧಿ ಶೃತಿ, ಚಂದನ್ ಶೆಟ್ಟಿ ಸಂಗೀತ ಸಂಯೋಜಕ

    ಸ್ಟಾರ್ ನಿರ್ದೇಶಕನ ಸಿನಿಮಾಗೆ ನಾಯಕಿಯಾಗಿ ಬಿಗ್ ಬಾಸ್ ಸ್ಪರ್ಧಿ ಶೃತಿ, ಚಂದನ್ ಶೆಟ್ಟಿ ಸಂಗೀತ ಸಂಯೋಜಕ

    ಬೆಂಗಳೂರು: ಬಿಗ್ ಬಾಸ್ ಕನ್ನಡದ 5ನೇ ಆವೃತ್ತಿಯಲ್ಲಿ ಸ್ಪರ್ಧಿಸಿದ್ದ ಶ್ರುತಿ ಪ್ರಕಾಶ್ ಗೆ ಕಾರ್ಯಕ್ರಮ ಮುಗಿದ ಮೇಲೆ ಸಿನಿಮಾ ಮಾಡುವ ಅವಕಾಶ ಸಿಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಅದರಂತೆ ಈಗ ಶ್ರುತಿಗೆ ಸ್ಯಾಂಡಲ್ ವುಡ್ ನಿಂದ ಆಫರ್ ಗಳೇ ಹರಿದುಬರುತ್ತಿವೆ.

    ಇದುವರೆಗೂ ಯಾವ ಚಿತ್ರವನ್ನು ಒಪ್ಪಿಕೊಳ್ಳದ ಶ್ರುತಿ ಪ್ರಕಾಶ್, ಈಗ ಕನ್ನಡದ ಸ್ಟಾರ್ ನಿರ್ದೇಶಕರೊಬ್ಬರ ಚಿತ್ರಕ್ಕೆ ನಾಯಕಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬೆಳಗಾವಿ ಮೂಲದ ಶ್ರುತಿ ಪ್ರಕಾಶ್ ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಗಾಯಕಿಯಾಗಿರುವ ಶ್ರುತಿ, ಅಭಿನಯದಲ್ಲೂ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅಲ್ಲದೇ ಶೃತಿ ಅದ್ಭುತವಾಗಿ ಡ್ಯಾನ್ಸ್ ಮಾಡುತ್ತಾರೆ.

    ಕಲಾ ಸಾಮ್ರಾಟ್ ಎಸ್.ನಾರಾಯಣ್ ನಿರ್ದೇಶನ ಮಾಡಲಿರುವ ಮುಂದಿನ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ನಾಯಕಿಯಾಗಲಿದ್ದಾರೆ. ಈ ಬಗ್ಗೆ ಈಗಾಗಲೇ ಕಲಾ ಸಾಮ್ರಾಟ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ನಾಯಕಿ ಆಗಿ ಅಭಿನಯಿಸುವುದರ ಬಗ್ಗೆ ಮಾತುಕತೆ ನಡೆಯುತ್ತಿದೆ. ಆದರೆ ಅಂತಿಮ ನಿರ್ಧಾರ ಇನ್ನಷ್ಟೆ ಹೊರಬೀಳಬೇಕಿದೆ.

    ಎಸ್ ನಾರಾಯಣ್ ನಿರ್ದೇಶನ ಮಾಡಲಿರುವ ಹೊಸ ಚಿತ್ರಕ್ಕೆ ತಮ್ಮ ಮಗ ಪಂಕಜ್ ನಾಯಕನಾಗಿದ್ದು, ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿಸಿದ್ದಾರೆ. ಸಿನಿಮಾ ಆರಂಭ ಮಾಡುವ ತಯಾರಿಯಲ್ಲಿದ್ದಾರೆ. ಈ ಚಿತ್ರದ ಇನ್ನೊಂದು ವಿಶೇಷ ಅಂದರೆ ಬಿಗ್ ಬಾಸ್ ಕನ್ನಡ 5 ವಿನ್ನರ್ ಚಂದನ್ ಶೆಟ್ಟಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ ಎನ್ನಲಾಗಿದೆ. ಹಲವು ವಿಶೇಷತೆಗಳೊಂದಿಗೆ ಆರಂಭವಾಗಲಿರುವ ಈ ಚಿತ್ರದ ಬಗ್ಗೆ ಅಧಿಕೃತವಾಗಿ ಬಹಿರಂಗವಾಗಬೇಕಿದೆ.