Tag: ನ್ಯೂ ಲುಕ್

  • ಹೊಸ ಲುಕ್‍ನಲ್ಲಿ ಕಾಣಿಸಿಕೊಂಡ ಪ್ರಣೀತಾ

    ಹೊಸ ಲುಕ್‍ನಲ್ಲಿ ಕಾಣಿಸಿಕೊಂಡ ಪ್ರಣೀತಾ

    ಬೆಂಗಳೂರು: ಸ್ಯಾಂಡಲ್‍ವುಡ್‍ನಿಂದ ಬಾಲಿವುಡ್‍ಗೆ ಕಾಲಿಟ್ಟಿರುವ ಕನ್ನಡದ ಬೆಡಗಿ ಪ್ರಣೀತಾ ಸುಭಾಷ್ ತೆಲುಗು, ತಮಿಳಿನಲ್ಲೂ ಸಿನಿಮಾಗಳನ್ನು ಮಾಡಿದ್ದು, ಈ ಮೂಲಕ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಪ್ರಣೀತಾ, ಇದೀಗ ಹೊಸ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಶೂಟಿಂಗ್‍ಗೆ ಸಿದ್ಧವಾಗುತ್ತಿದ್ದಾರಾ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.

     

    View this post on Instagram

     

    A post shared by Pranitha Subhash ???? (@pranitha.insta) on

    ಪ್ರಣೀತಾ ಕೈಯ್ಯಲ್ಲಿ ಈಗಾಗಲೇ ಹಲವು ಸಿನಿಮಾಗಳಿದ್ದು, ಆ್ಯಕ್ಟಿಂಗ್‍ನಲ್ಲಿ ಫುಲ್ ಬ್ಯುಸಿಯಾಗಿದ್ದರು. ಇದೇ ಸಂದರ್ಭದಲ್ಲಿ ಲಾಕ್‍ಡೌನ್ ಘೋಷಣೆಯಾಯಿತು. ಹೀಗಾಗಿ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಇದರ ಜೊತೆಗೆ ಸಾಮಾಜಿಕ ಕೆಲಸಗಳಲ್ಲಿ ಸಹ ತೊಡಗಿಕೊಂಡಿದ್ದು, ಲಾಕ್‍ಡೌನ್‍ನಿಂದಾಗಿ ಸಂಕಷ್ಟ ಎದುರಿಸುತ್ತಿದ್ದ ವಲಸೆ ಕಾರ್ಮಿಕರು ಹಾಗೂ ನಿರ್ಗತಿಕರಿಗೆ ಸಹಾಯ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಇದೀಗ ಲಾಕ್‍ಡೌನ್ ಸಡಿಲಗೊಳಿಸಲಾಗಿದೆ, ಮನರಂಜನೆ ಹೊರತುಪಡಿಸಿ ಉಳಿದೆಲ್ಲ ವಲಯಗಳು ಮತ್ತೆ ಕಾರ್ಯಾರಂಭಿಸಿವೆ. ಸಿನಿಮಾ ಚಿತ್ರೀಕರಣಕ್ಕೂ ಇನ್ನೇನು ಅನುಮತಿ ಸಿಗಬೇಕಿದೆ. ಹೀಗಾಗಿ ಪ್ರಣೀತಾ ಸಿದ್ಧತೆ ನಡೆಸುತ್ತಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಪ್ರಣೀತಾ ಸಲೂನ್‍ಗೆ ಹೋಗಿ ಮೇಕ್‍ಒವರ್ ಮಾಡಿಸಿಕೊಂಡಿದ್ದಾರೆ. ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಲ್ಲಿ ಯಾವ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.

    ಹೇರ್ ಕಟಿಂಗ್ ಸಹ ಮಾಡಿಸಿಕೊಂಡಿರುವ ಪ್ರಣೀತಾ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಶೂಟಿಂಗ್ ಪ್ರಾರಂಭವಾದರೆ ಹಾಜರಾಗಲು ತಯಾರಿದ್ದೇನೆ ಎಂಬ ಮುನ್ಸೂಚನೆ ನೀಡಿದ್ದಾರೆ. ಬಹುತೇಕ ಎಲ್ಲ ವಲಯಗಳು ತರೆದಿದ್ದು, ಧಾರಾವಾಹಿ ಚಿತ್ರೀಕರಣಕ್ಕೂ ಅವಕಾಶ ಕಲ್ಪಿಸಲಾಗಿದೆ. ಆದರೆ ಸಿನಿಮಾ ಶೂಟಿಂಗ್‍ಗೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣಕ್ಕೂ ಅವಕಾಶ ಕಲ್ಪಿಸುವ ನಿರೀಕ್ಷೆ ಇದೆ.

     

    View this post on Instagram

     

    Post Covid world salon experience was nothing less than embarking on a space mission!

    A post shared by Pranitha Subhash ???? (@pranitha.insta) on

    ಪ್ರಣೀತಾ ಸದ್ಯ ಸ್ಯಾಂಡಲ್‍ವುಡ್‍ನ ರಾಮನ ಅವತಾರ ಹಾಗೂ ಬಾಲಿವುಡ್‍ನ ಭುಜ್: ದಿ ಪ್ರೈಡ್ ಆಫ್ ಇಂಡಿಯಾ, ಹಂಗಾಮಾ 2 ಚಿತ್ರಗಳಲ್ಲಿ ಬ್ಯಸಿಯಾಗಿದ್ದಾರೆ. ಹೀಗಾಗಿ ಮತ್ತೆ ಶೂಟಿಂಗ್‍ಗೆ ತೆರಳಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಾ ಎಂಬ ಪ್ರಶ್ನೆ ಇದೀಗ ಮೂಡಿದೆ.

  • ‘ನನ್ನ ಮಗನಿಗೆ ಅಷ್ಟು ವಯಸ್ಸಾಗಿಲ್ಲ’- ವೈರಲ್ ಫೋಟೋಗೆ ಧೋನಿ ತಾಯಿ ಪ್ರತಿಕ್ರಿಯೆ

    ‘ನನ್ನ ಮಗನಿಗೆ ಅಷ್ಟು ವಯಸ್ಸಾಗಿಲ್ಲ’- ವೈರಲ್ ಫೋಟೋಗೆ ಧೋನಿ ತಾಯಿ ಪ್ರತಿಕ್ರಿಯೆ

    ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕಳೆದ 10 ತಿಂಗಳಿನಿಂದ ಕ್ರಿಕೆಟ್‍ನಿಂದ ದೂರ ಉಳಿದಿದ್ದಾರೆ. 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಂತಿಮ ಬಾರಿಗೆ ಆಡಿದ್ದ ಧೋನಿ ಮತ್ತೆ 2020ರ ಐಪಿಎಲ್ ಟೂರ್ನಿಯ ತರಬೇತಿ ವೇಳೆ ಮತ್ತೆ ಅಭಿಮಾನಿಗಳಿಗೆ ಕ್ರಿಕೆಟ್ ಬ್ಯಾಟ್‍ನೊಂದಿಗೆ ಕಾಣಿಸಿಕೊಂಡಿದ್ದರು. ಆದರೆ ಕೊರೊನಾ ಕಾರಣದಿಂದ ಐಪಿಎಲ್ ಮುಂದೂಡುವುದರಿಂದ ಧೋನಿ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.

    ಧೋನಿ ಇತ್ತೀಚೆಗೆ ಪುತ್ರಿಯೊಂದಿಗೆ ಸೇರಿ ಮನೆಯ ಗಾರ್ಡನ್ ಪ್ರದೇಶದಲ್ಲಿ ಆಟವಾಡುತ್ತಿದ್ದ ವಿಡಿಯೋವನ್ನು ಸಾಕ್ಷಿ ಧೋನಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಕೂಡ ಆಗಿತ್ತು. 38 ವರ್ಷದ ಧೋನಿ ಹೊಸ ಲುಕ್‍ನಲ್ಲಿ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು. ಆದರೆ ವಿಡಿಯೋದಲ್ಲಿ ಧೋನಿ ಲುಕ್ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

    ಸಾಮಾಜಿಕ ಜಾಲತಾಣದಲ್ಲಿ ಧೋನಿರ ವಯಸ್ಸಿನ ಕುರಿತು ಹಲವು ಟ್ರೋಲ್‍ಗಳು ಹರಿದಾಡಿತ್ತು. ಪರಿಣಾಮ ಧೋನಿರ ತಾಯಿ ದೇವಕಿ ದೇವಿ ಪ್ರತಿಕ್ರಿಯೆ ನೀಡಿದ್ದು, ನಾನು ಧೋನಿ ಲುಕ್ ನೋಡಿದ್ದೇನೆ. ವಿಡಿಯೋದಲ್ಲಿ ಧೋನಿಗೆ ಅಷ್ಟು ವಯಸ್ಸಾಗಿದೆ ಎಂದು ಎನಿಸುವುದಿಲ್ಲ. ಯಾವುದೇ ತಾಯಿಗೂ ಕೂಡ ತಮ್ಮ ಮಗನಿಗೆ ವಯಸ್ಸಾಗಿಲ್ಲ ಎನ್ನಿಸಬಹುದೆನೋ? ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಆಡುವ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಸದ್ಯ ಕೊರೊನಾ ವೈರಸ್ ಅಂತ್ಯವಾಗಬೇಕಿದೆ. ನಿವೃತ್ತಿಯ ಕುರಿತು ಧೋನಿ ಒಳ್ಳೆಯ ಸಮಯದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

  • ದೀಪಿಕಾ ಹೊಸ ಲುಕ್ ನೋಡಿ ಅಭಿಮಾನಿಗಳು ಶಾಕ್!

    ದೀಪಿಕಾ ಹೊಸ ಲುಕ್ ನೋಡಿ ಅಭಿಮಾನಿಗಳು ಶಾಕ್!

    ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಅವರ ಹೊಸ ಲುಕ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

    ದೀಪಿಕಾ ಪಡುಕೋಣೆ ಮದುವೆ ನಂತರ ‘ಚಪಾಕ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಆ್ಯಸಿಡ್ ದಾಳಿಗೊಳಗಾದ ಲಕ್ಷ್ಮಿ ಅಗರ್‍ವಾಲ್ ಜೀವನಚರಿತ್ರೆ ಆಗಿದ್ದು, ದೀಪಿಕಾ ಮಾಲತಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಲಕ್ಷ್ಮಿ ಅಗರ್‍ವಾಲ್ ಈಗ ಟಿವಿ ನಿರೂಪಕಿ ಹಾಗೂ ಆ್ಯಸಿಡ್ ದಾಳಿ ತಡೆಯ ಪ್ರಚಾರಕಿ ಆಗಿದ್ದಾರೆ.

    ದೀಪಿಕಾ ಪಡುಕೋಣೆ ಚಪಾಕ್ ಚಿತ್ರದ ಫಸ್ಟ್ ಲುಕ್ ಅನ್ನು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ “ಈ ಒಂದು ಪಾತ್ರ ನನ್ನ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಮಾಲತಿ ಇಂದಿನಿಂದ ಚಿತ್ರೀಕರಣ ಪ್ರಾರಂಭ” ಚಪಾಕ್ ಎಂದು ಹ್ಯಾಶ್‍ಟ್ಯಾಗ್ ಬಳಸಿ ಬಿಡುಗಡೆಯ ದಿನಾಂಕ ಜನವರಿ 10, 2020″ ಎಂದು ಟ್ವೀಟ್ ಮಾಡಿದ್ದಾರೆ.

    https://twitter.com/deepikapadukone/status/1110022041950920710

    ಚಿತ್ರದ ನಿರ್ದೇಶಕಿ ಮೇಘನಾ ಗುಲ್ಜಾರ್ ಮಾಲತಿ ಪಾತ್ರವನ್ನು ವರ್ಣಿಸಿದ್ದಾರೆ. ಅವಳು ಧೈರ್ಯ, ಅವಳು ಭರವಸೆ, ಅವಳು ದೀಪಿಕಾ ಪಡುಕೋಣೆ ಚಾಪಕ್ ಚಿತ್ರದಲ್ಲಿ ಮಾಲತಿ ಪಾತ್ರ ನಿರ್ವಹಿಸುತ್ತಿದ್ದಾಳೆ. ಇಂದಿನಿಂದ ಚಿತ್ರೀಕರಣ ಪ್ರಾರಂಭವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

    ದೀಪಿಕಾ ಪಡುಕೋಣೆ ಮದುವೆಯಾದ ನಂತರ ಚಪಾಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಅವರು ಫಾಕ್ಸ್ ಸ್ಟಾರ್ ಸ್ಟುಡಿಯೋ ಜೊತೆ ಸೇರಿ ನಿರ್ಮಿಸುತ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷದ ಜನವರಿ 10ರಂದು ಬಿಡುಗಡೆ ಆಗಲಿದೆ.

  • ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬಂದ ಅನುಷ್ಕಾ ಶೆಟ್ಟಿ

    ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬಂದ ಅನುಷ್ಕಾ ಶೆಟ್ಟಿ

    ಹೈದರಾಬಾದ್: ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ರೀ-ಎಂಟ್ರಿ ನೀಡಿದ್ದಾರೆ.

    ಅನುಷ್ಕಾ ಶೆಟ್ಟಿ ಒಂದು ವರ್ಷದ ಹಿಂದೆ ‘ಭಾಗಮತಿ’ ಚಿತ್ರದಲ್ಲಿ ಕೊನೆಯದಾಗಿ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿದ್ದರು. ಈಗ ಅನುಷ್ಕಾ ಅವರ ಹೊಸ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಆಹಾರ ತಜ್ಞ ಆದ ಲ್ಯೂಕ್ ಕೌಟಿನ್ಹೂ ಅವರು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಅನುಷ್ಕಾ ಶೆಟ್ಟಿ ಅವರ ಜೊತೆಗೆ ಕುಳಿತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ “ಅತೀ ಶೀಘ್ರದಲ್ಲೇ ಏನೋ ಬರಲಿದೆ” ಎಂದು ಬರೆದುಕೊಂಡಿದ್ದಾರೆ.

    ಈ ಫೋಟೋದಲ್ಲಿ ಅನುಷ್ಕಾ ದೇಹದ ತೂಕ ಕಡಿಮೆ ಆಗಿದೆ. ಅನುಷ್ಕಾ ಈ ಹಿಂದೆ ತೆಲುಗಿನ ‘ಸೈಜ್ ಝೀರೋ’ ಚಿತ್ರಕ್ಕಾಗಿ ದೇಹದ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಬಳಿಕ ಅವರು ತೂಕ ಕಡಿಮೆ ಮಾಡಿಕೊಳ್ಳಲು ಹೆಚ್ಚು ಶ್ರಮವಹಿಸಿದ್ದಾರೆ. ಅನುಷ್ಕಾ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಸರ್ಜರಿ ಮೊರೆ ಹೋಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

    ಅನುಷ್ಕಾ ಶೀಘ್ರದಲ್ಲೇ ‘ಸೈಲೆನ್ಸ್’ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದು ಥ್ರಿಲ್ಲರ್ ಸಿನಿಮಾ ಆಗಿದ್ದು, ಈ ಸಿನಿಮಾದಲ್ಲಿ ಆರ್. ಮಾದವನ್ ಹಾಗೂ ಅಂಜಲಿ ನಟಿಸಲಿದ್ದಾರೆ. ಈ ಚಿತ್ರವನ್ನು ಹೇಮಂತ್ ಮಧುಕರ್ ನಿರ್ದೇಶನ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅರೇ, ಯಾಕಿಂಗಾದ್ರೂ ಮೆಗಾ ಸ್ಟಾರ್ ಚಿರಂಜೀವಿ?

    ಅರೇ, ಯಾಕಿಂಗಾದ್ರೂ ಮೆಗಾ ಸ್ಟಾರ್ ಚಿರಂಜೀವಿ?

    ಹೈದರಾಬಾದ್: ಟಾಲಿವುಡ್‍ನ ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ ‘ಜುವ್ವಾ’ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಚಿರಂಜೀವಿ ಅವರ ಹೊಸ ಲುಕ್ ನೋಡಿ ಎಲ್ಲರೂ ಒಂದು ಕ್ಷಣ ಆಶ್ಚರ್ಯಚಕಿತರಾಗಿದ್ದಾರೆ.

    ಚಿರಂಜೀವಿ ಸದ್ಯ ಟಾಲಿವುಡ್ ಬಿಗ್ ಬಜೆಟ್ ಸಿನಿಮಾ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಶೂಟಿಂಗ್‍ನಲ್ಲಿ ಬ್ಯೂಸಿಯಾಗಿದ್ದಾರೆ. ಯಾವಗಲೂ ಮುಖದ ಮೇಲೆ ಮೀಸೆ ಬಿಡುತ್ತಿದ್ದ ಚಿರಂಜೀವಿ ದಿಡೀರ್ ಅಂತಾ ಅದಕ್ಕೆ ಕತ್ತರಿ ಹಾಕಿದ್ದಾರೆ. ಜುವ್ವಾ ಟೀಸರ್ ಕಾರ್ಯಕ್ರಮದಲ್ಲಿ ಕ್ಲೀನ್ ಶೇವ್‍ನಲ್ಲಿ ಚಿರಂಜೀವಿಯರನ್ನು ನೋಡಿದ ಎಲ್ಲರೂ ಒಂದು ಕ್ಷಣ ಶಾಕ್ ಆಗಿದ್ದಾರೆ.

     

    ‘ಸೈರಾ’ ಐತಿಹಾಸಿಕ ಕಥಾನಕವುಳ್ಳ ಸಿನಿಮಾ. ಸಿನಿಮಾ ಹೆಚ್ಚಾಗಿ ಗ್ರಾಫಿಕ್ಸ್ ಒಳಗೊಂಡಿದ್ದು, ಈ ಹಿನ್ನೆಲೆಯಲ್ಲಿ ಚಿತ್ರದಲ್ಲಿ ಚಿರಂಜೀವಿ ಅವರ ಲುಕ್ ಬದಲಾಯಿಸಲು ಕ್ಲೀನ್ ಶೇವ್ ಮಾಡಿಸಲಾಗಿದೆ. ಚಿತ್ರದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಲಾಗಿದ್ದು, ಅಂದಿನ ರಾಜರ ಉಡುಪಿನಲ್ಲಿ ಚಿರಂಜೀವಿ ಮಿಂಚಲಿದ್ದಾರೆ. ಚಿರಂಜೀವಿ ನಟನೆಯ 151ನೇ ಸಿನಿಮಾ ಇದಾಗಿದ್ದು, ಟಾಲಿವುಡ್ ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಇದೇ ಸಿನಿಮಾದಲ್ಲಿ ಕನ್ನಡದ ಮಾಣಿಕ್ಯ ಸುದೀಪ್ ಕೂಡ ಬಣ್ಣ ಹಚ್ಚಿದ್ದಾರೆ.

    ಟಾಲಿವುಡ್ ಮತ್ತು ಬಾಲಿವುಡ್‍ನ ಮೆಗಾ ಸ್ಟಾರ್ ಗಳಾದ ಚಿರಂಜೀವಿ ಮತ್ತು ಅಮಿತಾಬ್ ಬಚ್ಚನ್ ಜೊತೆಯಾಗಿ ನಟಿಸುತ್ತಿರುವುದು ಚಿತ್ರದ ಮತ್ತೊಂದು ವಿಶೇಷವಾಗಿದೆ. ಸ್ವಾತಂತ್ರ್ಯ ಹೋರಾಟಗಾರ ನರಸಿಂಹರೆಡ್ಡಿ ಅವರ ಐತಿಹಾಸಿಕ ಕಥೆಯನ್ನು ಹೊಂದಿರುವ ಸೈರಾ ದೊಡ್ಡ ತಾರಾಬಳಗವನ್ನೇ ಹೊಂದಿದೆ. ಸಿಲ್ವರ್ ಸ್ಕ್ರೀನ್ ಕ್ವೀನ್ ನಯನತಾರಾ, ತಮಿಳಿನ ಸ್ಟಾರ್ ವಿಜಯ್ ಸೇಥುಪತಿ, ಟಾಲಿವುಡ್ ನ ಡೇರಿಂಗ್ ಸ್ಟಾರ್ ಜಗಪತಿ ಬಾಬು ಒಳಗೊಂಡಂತೆ ಅನುಭವಿ ಕಲಾವಿದರನ್ನೇ ಸಿನಿಮಾಗೆ ಆಯ್ಕೆ ಮಾಡಿಕೊಳ್ಳಲಾಗಿದೆ.

    ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಸಾರಥ್ಯದಲ್ಲಿ ಹಾಡುಗಳು ಮೂಡಿಬರಲಿವೆ. ಸೈರಾ ಗೆ ನಿರ್ದೇಶಕ ಸುರೇಂದ್ರ ರೆಡ್ಡಿ ಆ್ಯಕ್ಷನ್ ಕಟ್ ಹೇಳಲಿದ್ದು, ಚಿರಂಜೀವಿ ಪುತ್ರ, ನಟ ರಾಮ್ ಚರಣ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಸಿನಿಮಾ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಮೂಡಿ ಬರಲಿದೆ.

     

  • ನ್ಯೂ ಗೆಟಪ್ ನಲ್ಲಿ ಕನಸಿನ ರಾಣಿ ಮಾಲಾಶ್ರೀ-ಹೇಗಿದೆ ಹೊಸ ಲುಕ್?

    ನ್ಯೂ ಗೆಟಪ್ ನಲ್ಲಿ ಕನಸಿನ ರಾಣಿ ಮಾಲಾಶ್ರೀ-ಹೇಗಿದೆ ಹೊಸ ಲುಕ್?

    ಬೆಂಗಳೂರು: ಸ್ಯಾಂಡಲ್‍ವುಡ್ ನ ಕನಸಿನ ರಾಣಿ ಮಾಲಾಶ್ರೀ ತಮ್ಮ ಲುಕ್ ನ್ನು ಬದಲಿಸಿಕೊಂಡಿದ್ದಾರೆ. ಹೀರೋ ಇಲ್ಲದಿದ್ದರೂ ನಾನೇ ಸಿನಿಮಾ ಗೆಲ್ಲಿಸುತ್ತೇನೆ ಎಂದು ಸಾಬೀತು ಮಾಡಿದ ನಟಿ ಮಾಲಾಶ್ರೀ. ಅದೇ ಕನಸಿನ ರಾಣಿ ಮಾಲಾಶ್ರೀ ಹೊಸ ಗೆಟಪ್‍ನಲ್ಲಿ ಲಕಲಕಿಸಲಿದ್ದು, ಮತ್ತೆ ತೊಂಬತ್ತರ ದಶಕವನ್ನು ನೆನಪಿಸಲಿದ್ದಾರೆ.

    ಒಂದು ಕಡೆ ಹೊಡಿ ಬಡಿ ಸಿನಿಮಾಗಳನ್ನು ಮಾಡುತ್ತಿದ್ದ ಮಾಲಾಶ್ರೀ ಇನ್ನೊಂದು ಕಡೆ ಸಾಂಸಾರಿಕ ಚಿತ್ರಗಳಲ್ಲೂ ಮಿಂಚುತ್ತಿದ್ದರು. ಮುತ್ತಿನಂಥ ಹೆಂಡ್ತಿ, ಸಿಂಧೂರ ತಿಲಕ, ಬೆಳ್ಳಿ ಕಾಲುಂಗರ ಹೀಗೆ ಹಲವಾರು ವಿಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚಿದರು. ಪ್ರೇಮಿ, ತಾಯಿ, ಅಕ್ಕ, ಪತ್ನಿಯಾಗಿ ಹೊಸ ಹೊಸ ಅಭಿನಯದ ಸಾಧ್ಯತೆಗಳನ್ನು ತೋರಿಸಿದರು. ಮಾಲಾಶ್ರೀ ಮೇನಿಯಾ ಯಾವ ಮಟ್ಟಕ್ಕೆ ಇತ್ತೆಂದರೆ ಒಂದೇ ತಿಂಗಳಲ್ಲಿ ಇವರು ನಟಿಸಿದ ಎರಡು ಮೂರು ಸಿನಿಮಾ ರಿಲೀಸ್ ಆಗುವಷ್ಟು. ಅದು ಇವರಿಗಿದ್ದ ಕ್ರೇಜ್ ತೋರಿಸುತ್ತಿತ್ತು.

     

    ಡಾ.ರಾಜ್‍ಕುಮಾರ್ ಬ್ಯಾನರ್ ನ ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ ಮಾಲಾಶ್ರೀ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅದು ರಾಘವೇಂದ್ರ ರಾಜ್‍ಕುಮಾರ್ ನಟಿಸಿದ ಎರಡನೇ ಸಿನಿಮಾ. ರಾಘಣ್ಣನಿಗೆ ಜೋಡಿಯಾದ ಮಾಲಾಶ್ರೀ, ದುರ್ಗಿ ಪಾತ್ರದ ಮೂಲಕ ಕನ್ನಡ ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದರು. ಆ ಗಂಡುಬೀರಿ ಸ್ಟೈಲು, ಖಡಕ್ ಡೈಲಾಗ್ ಡೆಲಿವರಿ, ಕಣ್ಣಿನಲ್ಲೇ ಕೊಲ್ಲುವಂತೆ ನೋಡುತ್ತಿದ್ದ ರೀತಿ, ಎಲ್ಲವೂ ಸೇರಿಕೊಂಡು ಮಾಲಾಶ್ರೀಗೆ ಕನ್ನಡದಲ್ಲಿ ಭದ್ರ ಸ್ಥಾನ ಒದಗಿಸಿತು.

    ದಶಕಗಳ ಕಾಲ ಮಾಲಾಶ್ರೀ ಚಿತ್ರರಂಗವನ್ನು ಆಳಿದರು. ಬಹುತೇಕ ಎಲ್ಲಾ ಸ್ಟಾರ್‍ಗಳ ಜತೆ ನಟಿಸಿದರು. ಶಿವಣ್ಣ, ಅಂಬರೀಶ್, ರವಿಚಂದ್ರನ್, ಶಶಿಕುಮಾರ್, ಸುನೀಲ್…ಒಂದೊಂದು ಚಿತ್ರದಲ್ಲಿ ಒಂದೊಂದು ವಿಭಿನ್ನ ಪಾತ್ರ ಮಾಡಿದರು. ಈ ಹೊತ್ತಿನಲ್ಲೇ ಇವರು ನಿರ್ಮಾಪಕ ರಾಮುವನ್ನು ಮದುವೆಯಾಗಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟರು. ಕೆಲವು ವರ್ಷ ಚಿತ್ರರಂಗದಿಂದ ದೂರವಾದರು. ಪತಿ ರಾಮು ಒತ್ತಾಯಕ್ಕೆ ಮಣಿದು ಮತ್ತೆ ಬಣ್ಣ ಹಚ್ಚಿದರು. ಅಲ್ಲಿಂದ ಫುಲ್ ಆ್ಯಕ್ಷನ್ ಹೀರೋಯಿನ್ ಆದರು. ದೇಹದ ತೂಕ ಹೆಚ್ಚಿದ್ದರೂ ಮಾಲಾಶ್ರೀ ಫೈಟಿಂಗ್ ಸೀನ್‍ಗಳಲ್ಲಿ ಅದ್ಭುತವಾಗಿ ನಟಿಸುತ್ತಿದ್ದರು.

    ಕಳೆದ ಹದಿನೈದು ವರ್ಷಗಳಿಂದ ಅವರು ಆ್ಯಕ್ಷನ್ ಪಾತ್ರಗಳನ್ನೇ ಮಾಡುತ್ತಾ ಬಂದಿದ್ದಾರೆ. ಆದರೆ ಈಗ ಅದಕ್ಕೆ ಟ್ವಿಸ್ಟ್ ಕೊಟ್ಟಿದ್ದಾರೆ. ಅದೇ ಅವರ ನ್ಯೂ ಗೆಟಪ್ಪು. ಹೌದು, ಬಾಬ್ ಕಟ್ ಮಾಡಿಸಿಕೊಂಡಿದ್ದ ಮಾಲಾಶ್ರೀ ಈಗ ಉದ್ದುದ್ದ ಕೂದಲು ಬಿಡುತ್ತಿದ್ದಾರೆ. ಮತ್ತು ದೇಹದ ತೂಕವನ್ನು ಇಳಿಸುತ್ತಿದ್ದಾರೆ. ಒಂದೊಮ್ಮೆ ಕನಸಿನ ರಾಣಿಯಾಗಿ ಮೆರೆದಿದ್ದ ಇವರು ಮತ್ತದೆ ರೂಪ ಪಡೆಯಲು ರೆಡಿಯಾಗಿದ್ದಾರೆ. ಉಪ್ಪು ಹುಳಿ ಖಾರದ ನಂತರ ಸಾಂಸಾರಿಕ ಕತೆಯ ಸಿನಿಮಾದಲ್ಲಿ ಈ ಹೊಸ ಲುಕ್ ನಿಮಗೆ ನೋಡಲು ಸಿಗುತ್ತದೆ.