Tag: ನ್ಯೂರಾಲಿಂಕ್

  • ಮಿದುಳಿಗೂ ಬಂತು ಚಿಪ್‌; ಏನಿದು ತಂತ್ರಜ್ಞಾನ? ಹೇಗೆ ಕೆಲಸ ಮಾಡುತ್ತೆ?

    ಮಿದುಳಿಗೂ ಬಂತು ಚಿಪ್‌; ಏನಿದು ತಂತ್ರಜ್ಞಾನ? ಹೇಗೆ ಕೆಲಸ ಮಾಡುತ್ತೆ?

    ಜಗತ್ತಿನ ಸರ್ವಾಂತರ್ಯಾಮಿ ತಾಂತ್ರಿಕ ವ್ಯವಸ್ಥೆ ಎಂದರೆ ಅದು ಕಂಪ್ಯೂಟರ್. ಇದರ ಆವಿಷ್ಕಾರದ ಮೂಲವೇ ಮಾನವನ ಮಿದುಳು. ಈ ಕಂಪ್ಯೂಟರ್‌ಗೂ ಮನುಷ್ಯರಿಗೆ ಇರುವಂತೆಯೇ ಒಂದು ಮಿದುಳಿದೆ. ಕಂಪ್ಯೂಟರ್ ಸಮರ್ಪಕವಾಗಿ ಕೆಲಸ ನಿರ್ವಹಿಸಲು ಇದು ಬೇಕೇ ಬೇಕು. ಅಂತೆಯೇ ಮನುಷ್ಯನಿಗೂ ಅಷ್ಟೇ. ಮಾನವ ಚಲನಶೀಲನಾಗಿರಬೇಕು ಎಂದರೆ ಮಿದುಳು ಇರಲೇಬೇಕು. ಅದು ಇಲ್ಲ ಎಂದರೆ ನಾವು, ನೀವೆಲ್ಲ ಜೀವಂತ ಶವ ಅಷ್ಟೇ. ತನ್ನ ಆಲೋಚನೆ, ವಿವೇಚನೆ, ಪರಾಮರ್ಶೆ, ವಿಶ್ಲೇಷಣಾ ಸಾಮರ್ಥ್ಯದಿಂದಾಗಿ ಜಗತ್ತಿನ ನಿಗೂಢಗಳನ್ನು ಭೇದಿಸುತ್ತಿದೆ. ಕಲೆ, ಸಾಹಿತ್ಯ, ವಿಜ್ಞಾನ-ತಂತ್ರಜ್ಞಾನ ಎಲ್ಲದಕ್ಕೂ ಮಿಳಿತಗೊಂಡು ಕೆಲಸ ಮಾಡುವ ವಿಶೇಷ ರಚನೆಯೇ ಮಿದುಳು. ಈಗ ಕ್ರಾಂತಿಕಾರಿ ತಂತ್ರಜ್ಞಾನ ವ್ಯವಸ್ಥೆಯ ಕಂಪ್ಯೂಟರ್ ಹಾಗೂ ಮನುಷ್ಯನ ಮುಖ್ಯ ಅಂಗ ಮಿದುಳು ಒಟ್ಟಿಗೆ ಸೇರಿದರೆ ಹೇಗಿರಬಹುದು?

    ನೀವು ಮೊಬೈಲ್, ಕಂಪ್ಯೂಟರ್ ಅಥವಾ ಯಾವುದಾದರೂ ಎಲೆಕ್ಟ್ರಿಕ್ ಉಪಕರಣಗಳಿಗೆ ಚಿಪ್ ಅಳವಡಿಸೋದನ್ನ ಕೇಳಿದ್ದೀರಿ. ಆದರೆ ಮನುಷ್ಯನ ಮಿದುಳಿಗೆ ಚಿಪ್ ಅಳವಡಿಸುವ ಬಗ್ಗೆ ಕೇಳಿದ್ದೀರಾ? ಹೌದು, ಅಂತಹ ಸಾಹಸಕ್ಕೆ ಕೈಹಾಕಿ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ (Elon Musk) ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: PublicTV Explainer: ಕಾಶಿ ವಿಶ್ವನಾಥ ದೇವಾಲಯದಿಂದ ಜ್ಞಾನವಾಪಿ ಮಸೀದಿ ವರೆಗೆ!

    ಮಾನವನ ಮಿದುಳಿಗೆ ಚಿಪ್ಪಾ? ಯಾರು ಇದನ್ನ ತಯಾರಿಸಿದ್ದು? ಏಕೆ ಅಳವಡಿಸುತ್ತಾರೆ? ಹೇಗೆ? ಇದರಿಂದ ಏನು ಪ್ರಯೋಜನ ಎಂಬ ಪ್ರಶ್ನೆಗಳು ಮೂಡುವುದು ಸಹಜ. ನಿಜಕ್ಕೂ ಇದೊಂದು ಕುತೂಹಲಕಾರಿ ವಿಷಯ. ಮಿದುಳಿಗೆ ಅಳವಡಿಸುವ ಚಿಪ್ ಬಗ್ಗೆ ತಿಳಿಯುವ ಮೊದಲು ಮಿದುಳಿನ ಬಗ್ಗೆ ತಿಳಿದುಕೊಳ್ಳೋಣ.

    ಏನಿದು ಮಿದುಳು?
    ಮಿದುಳು ಮನುಷ್ಯನ ಬದುಕಿನಲ್ಲಿ ಬಲು ಮುಖ್ಯ ಅಂಗ. ಇದನ್ನ ದೇಹದ ಕಂಟ್ರೋಲ್ ಯೂನಿಟ್ ಎಂದರೆ ತಪ್ಪಾಗಲಾರದು. ದೇಹದಲ್ಲಿರುವ ಪ್ರತಿಯೊಂದು ಅಂಗದ ಚಟುವಟಿಕೆಯನ್ನೂ ಇದು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲ, ಹೊರ ಜಗತ್ತಿನ ಆಗುಹೋಗುಗಳನ್ನು ಅರ್ಥೈಸುವ ಅಂಗವೂ ಹೌದು. ನಮ್ಮ ಪಂಚೇಂದ್ರಿಯಗಳು ಗ್ರಹಿಸಿ ಕಳುಹಿಸುವ ಸಂದೇಶಗಳನ್ನು ಪಡೆದು ಏನಾಗುತ್ತಿದೆ ಎಂಬುದು ನಮಗೆ ಅರಿವಿಗೆ ಬರುವಂತೆ ಮಾಡುತ್ತದೆ. ಇದನ್ನೂ ಓದಿ: ನಟ, ನಿರ್ದೇಶಕರಾಗೋ ಕನಸಿನ ಕೈ ಹಿಡಿಯಲಿದೆ ‘ಫಿಲ್ಮ್ ಒಡಿಸಿ 360’!

    ಮಿದುಳಿನ ಆ ಮೂರು ಭಾಗಗಳ್ಯಾವುವು?
    ಮಿದುಳು ಮೂರು ಭಾಗಗಳನ್ನು ಹೊಂದಿದೆ. ಸೆರೆಬ್ರಮ್, ಸೆರೆಬೆಲ್ಲಮ್, ಬ್ರೇನ್‌ಸ್ಟೀಮ್. ಸೆರೆಬ್ರಮ್ ಮಿದುಳಿನ ದೊಡ್ಡ ಭಾಗ. ಇದು ಮಿದುಳಿನ ಚಿಂತನೆಯ ಅಂಶವಾಗಿದೆ. ಸ್ನಾಯುಗಳನ್ನು ಸ್ವಯಂಪ್ರೇರಿತವಾಗಿ ನಿಯಂತ್ರಿಸುತ್ತದೆ. ಸೆರೆಬೆಲ್ಲಮ್, ಮಿದುಳಿನ ಹಿಂಭಾಗದಲ್ಲಿ ಇರುತ್ತದೆ. ಮಿದುಳಿನ ಅತ್ಯಂತ ನಿರ್ಣಾಯ ಭಾಗವಿದು. ದೇಹದ ಸಮತೋಲನ, ಚಲನೆ, ಸಮನ್ವಯವನ್ನು ನಿರ್ವಹಿಸುತ್ತದೆ. ಮಿದುಳಿನ ಕಾಂಡವು ಮಿದುಳಿನ ಉಳಿದ ಭಾಗವನ್ನು ಬೆನ್ನುಹುರಿಗೆ ಲಿಂಕ್ ಮಾಡುತ್ತದೆ. ಉಸಿರಾಟ, ಆಹಾರ ಜೀರ್ಣಕ್ರಿಯೆ, ರಕ್ತ ಪರಿಚಲನೆಯ ಉಸ್ತುವಾರಿ ಇದರದ್ದೇ.

    ಮಿದುಳು ಎಷ್ಟು ಮುಖ್ಯ?
    ನಾವು ಮೊದಲೇ ಚರ್ಚಿಸಿದಂತೆ, ಮನುಷ್ಯ ಚಲನಶೀಲ ಹಾಗೂ ಕ್ರಿಯಾಶೀಲನಾಗಿರಬೇಕು ಎಂದರೆ ಮಿದುಳು ತುಂಬಾ ಅವಶ್ಯ. ಒಂದು ವೇಳೆ ಮಿದುಳಿನ ಜೀವಕೋಶಗಳಿಗೆ ಹಾನಿಯಾದರೆ, ದೈಹಿಕ ತೊಂದರೆಗಳು ಉದ್ಭವಿಸುತ್ತವೆ. ನೀವು ದೇಹದ ಯಾವುದೇ ಅಂಗದ ಸಮಸ್ಯೆ ತೆಗೆದುಕೊಳ್ಳಬಹುದು. ಅದಕ್ಕೂ ಮಿದುಳಿನ ಜೀವಕೋಶಗಳಿಗೂ ಸಂಬಂಧ ಇರುತ್ತೆ. ಉದಾಹರಣೆಗೆ ಪಾರ್ಶ್ವವಾಯು ಸಮಸ್ಯೆಯನ್ನೇ ತೆಗೆದುಕೊಳ್ಳಿ. ಮಿದುಳಿನ ಜೀವಕೋಶಗಳಿಗೆ ಹಾನಿಯಾದಾಗ ಉದ್ಭವಿಸುವ ದೈಹಿಕ ತೊಂದರೆ ಪಾರ್ಶ್ವವಾಯು. ಅಂಗಾಂಗಗಳ ಸ್ವಾಧೀನ ತಪ್ಪುವುದು, ಸಮತೋಲನ, ಮಾತು ಮತ್ತು ದೃಷ್ಟಿ ಸಾಮರ್ಥ್ಯ ಮಂಕಾಗುವುದು (ಅಥವಾ ಪೂರ್ತಿ ಇಲ್ಲದಂತಾಗುವುದು).. ಇದೇ ಮೊದಲಾದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅದಕ್ಕೇ ಮನುಷ್ಯನಿಗೆ ಮಿದುಳು ತುಂಬಾ ಮುಖ್ಯ. ಇದನ್ನೂ ಓದಿ: PublicTV Explainer: ‘ಸೋಷಿಯಲ್‌’ನಲ್ಲಿ ಬೆತ್ತಲಾದ ‘ಡೀಪ್‌ಫೇಕ್’; ಏನಿದು ತಂತ್ರಜ್ಞಾನ? ಇದರ ಆಳ ಎಷ್ಟು? ಅಪರಾಧಕ್ಕೆ ಶಿಕ್ಷೆ ಏನು?

    ಮಾನವನ ಮಿದುಳಿಗೆ ಚಿಪ್?
    ಮಾನವನ ಮಿದುಳಿಗೆ ಮೈಕ್ರೋಚಿಪ್‌ನ್ನು ಅಳವಡಿಸಲಾಗಿದೆ ಎಂದು ಎಲೋನ್ ಮಸ್ಕ್ ಈಚೆಗೆ ಘೋಷಿಸಿದ್ದಾರೆ. ಮಾನವನ ಮಿದುಳಿನಿಂದ ನೇರವಾಗಿ ಕಂಪ್ಯೂಟರ್ ಹಾಗೂ ಮೊಬೈಲ್‌ಗೆ ಸಂವಹನ ಮಾಡಲು ಈ ಮೈಕ್ರೋಚಿಪ್‌ನ್ನು ಅಳವಡಿಸಲಾಗಿದೆ. ಮಸ್ಕ್ ಒಡೆತನದ ನ್ಯೂರಾಲಿಂಕ್ ಅಭಿವೃದ್ಧಿಪಡಿಸಿರುವ ಚಿಪ್ ಇದು. ನ್ಯೂರಾಲಿಂಕ್‌ನ ಮೊದಲ ಉತ್ಪನ್ನವನ್ನು ಟೆಲಿಪತಿ ಎಂದು ಕರೆಯಲಾಗಿದೆ.

    ಏನಿದು ನ್ಯೂರಾಲಿಂಕ್?
    ನ್ಯೂರಾಲಿಂಕ್ (Neuralink Brain Implant) ಒಂದು ನರತಂತ್ರಜ್ಞಾನ ಕಂಪನಿಯಾಗಿದೆ. ಮಿದುಳುನಿಂದ ಕಂಪ್ಯೂಟರ್ ನಡುವೆ ನೇರ ಸಂವಹನ ಏರ್ಪಡಿಸಲು 2016 ರಲ್ಲಿ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ತಂಡದೊಂದಿಗೆ ಮಸ್ಕ್ ಈ ಕಂಪನಿ ಸ್ಥಾಪಿಸಿದ್ದಾರೆ. ಮಾನವ ಸಾಮರ್ಥ್ಯಗಳನ್ನು ಸೂಪರ್ಚಾರ್ಜ್ ಮಾಡುವುದು, ಎಎಲ್‌ಎಸ್ (ನರ ಸಂಬಂಧಿತ ಮಾರಣಾಂತಿಕ ಕಾಯಿಲೆ) ಅಥವಾ ಪಾರ್ಕಿನ್ಸನ್‌ನಂತಹ ನರವೈಜ್ಞಾನಿಕ ಕಾಯಿಲೆ ಇರುವವರಿಗೆ ಸಹಕಾರಿಯಾಗುವುದು, ಅಂತಿಮವಾಗಿ ಮಾನವರು ಮತ್ತು ಕೃತಕ ಬುದ್ಧಿಮತ್ತೆಯ ನಡುವೆ ಸಂವಹನ ಸಾಧಿಸುವುದು ಇದರ ಗುರಿಯಾಗಿದೆ.

    ಈ ತಂತ್ರಜ್ಞಾನವು ನರ ಸಂಕೇತಗಳನ್ನು ರೆಕಾರ್ಡ್ ಮಾಡಲು ಮತ್ತು ಡಿಕೋಡ್ ಮಾಡಲು ಸಮರ್ಥವಾಗಿದೆ. ನಂತರ ವಿದ್ಯುತ್ ಪ್ರಚೋದಕ ಬಳಸಿಕೊಂಡು ಮಿದುಳಿಗೆ ಮಾಹಿತಿಯನ್ನು ರವಾನಿಸುತ್ತದೆ. ಅಷ್ಟೇ ಅಲ್ಲ, ಒಬ್ಬ ವ್ಯಕ್ತಿಯು ಕೈಗಳನ್ನು ಬಳಸದೆಯೇ ತನ್ನ ಮನಸ್ಸನ್ನು ಮಾತ್ರ ಬಳಸಿಕೊಂಡು ಕೀಬೋರ್ಡ್ ಮತ್ತು ಮೌಸ್ ಅನ್ನು ಕುಶಲತೆಯಿಂದ ನಿರ್ವಹಿಸಲು ಅನುಮತಿಸುವ ಅಪ್ಲಿಕೇಶನ್ ಅನ್ನು ಸಹ ಅಭಿವೃದ್ಧಿಪಡಿಸುತ್ತಿದೆ. ಇದನ್ನೂ ಓದಿ: ಸ್ವದೇಶಿ ಆಯುಧ ನಿರ್ಮಾಣ ತಂತ್ರಜ್ಞಾನದಲ್ಲಿ ಭಾರತದ ಸಾಧನೆ; ಶತ್ರುಗಳ ನಿದ್ದೆಗೆಡಿಸಲಿದೆ ಧ್ರುವಾಸ್ತ್ರ

    ನ್ಯೂರಾಲಿಂಕ್ ಮೈಕ್ರೋಚಿಪ್ ಹೇಗೆ ಕೆಲಸ ಮಾಡುತ್ತೆ?
    ನ್ಯೂರಾಲಿಂಕ್ ಅಭಿವೃದ್ಧಿಪಡಿಸಿರುವ ಮೈಕ್ರೋಚಿಪ್ ಅನ್ನು ಮಾನವನ ಮೇಲೆ ಪ್ರಯೋಗ ಮಾಡಲು ಅಮೆರಿಕ ಆಹಾರ ಹಾಗೂ ಔಷಧಿ ಆಡಳಿತ (ಎಫ್‌ಡಿಎ) ಅನುಮತಿ ನೀಡಿತ್ತು. ಈ ತಂತ್ರಜ್ಞಾನವು ಮುಖ್ಯವಾಗಿ “ಲಿಂಕ್” ಎಂಬ ಇಂಪ್ಲಾಂಟ್ ಮೂಲಕ ಕಾರ್ಯನಿರ್ವಹಿಸುತ್ತದೆ. ಶಸ್ತ್ರಚಿಕಿತ್ಸೆಯ ಮೂಲಕ ಮಾನವ ಮಿದುಳಿನೊಳಗೆ ಇರಿಸಲಾದ ಐದು ನಾಣ್ಯಗಳ ಗಾತ್ರದ ಸಾಧನ ಇದಾಗಿದೆ. ಮಾನವನ ಮಿದುಳು ನೇರವಾಗಿ ಕಂಪ್ಯೂಟರ್‌ನೊಂದಿಗೆ ಸಂವಹನ ನಡೆಸಲು ಈ ಸಾಧನವನ್ನು ವಿನ್ಯಾಸಗೊಳಿಸಲಾಗಿದೆ.

    ಅಂಧರು, ಪಾರ್ಶ್ವವಾಯು ಪೀಡಿತರಿಗೆ ಸಹಕಾರಿ?
    ಈ ತಂತ್ರಜ್ಞಾನವು ಎಲೆಕ್ಟ್ರೋಫಿಸಿಯಾಲಜಿಯಂತೆಯೇ ಕಾರ್ಯನಿರ್ವಹಿಸುತ್ತದೆ. ನರಮಂಡಲದ ವಿದ್ಯುತ್ ರಾಸಾಯನಿಕ ಸಂಕೇತಗಳು ಸಿನಾಪ್ಸೆಸ್ ಎಂದು ಕರೆಯಲ್ಪಡುವ ನರಕೋಶಗಳ ನಡುವೆ ಪರಸ್ಪರ ಸಂವಹನ ನಡೆಸುತ್ತವೆ. ಅಂಧರು ಅಥವಾ ಪಾರ್ಶ್ವವಾಯು ಪೀಡಿತರು ಯೋಚಿಸುವಂತೆ ಕಂಪ್ಯೂಟರ್ ಹಾಗೂ ಮೊಬೈಲ್ ಬಳಕೆ ಮಾಡಲು ಇದರಿಂದ ಸಾಧ್ಯವಾಗುತ್ತದೆ.

  • ಮಾನವನ ಮೆದುಳಿಗೆ ಚಿಪ್ – ಶೀಘ್ರವೇ ಪರೀಕ್ಷಿಸಲಿದೆ ಮಸ್ಕ್ ಕಂಪನಿ

    ಮಾನವನ ಮೆದುಳಿಗೆ ಚಿಪ್ – ಶೀಘ್ರವೇ ಪರೀಕ್ಷಿಸಲಿದೆ ಮಸ್ಕ್ ಕಂಪನಿ

    ವಾಷಿಂಗ್ಟನ್: ವಿಶ್ವದ ಶ್ರೀಮಂತ ಎಲೋನ್ ಮಸ್ಕ್ (Elon Musk) ಅವರ ನ್ಯೂರಾಲಿಂಕ್ (Neuralink) ಕಂಪನಿ ಮಾನವರ ಮೆದುಳಿಗೆ ಅಳವಡಿಸಬಹುದಾದ ರೋಬೋಟ್ ಚಿಪ್ (Chip) ಅನ್ನು ಶೀಘ್ರವೇ ಪರೀಕ್ಷಿಸಲಿದೆ ಎಂದು ತಿಳಿಸಿದ್ದಾರೆ. ಈ ತಂತ್ರಜ್ಞಾನದ ಪರೀಕ್ಷೆಯ ಬಳಿಕ ಮಸ್ಕ್ ಸ್ವತಃ ಈ ಚಿಪ್ ಅನ್ನು ಹೊಂದಲು ಬಯಸಿರುವುದಾಗಿ ಹೇಳಿದ್ದಾರೆ.

    ಮಸ್ಕ್‌ನ ಸ್ಟಾರ್ಟ್ಅಪ್ ನ್ಯೂರಾಲಿಂಕ್ ನಿರ್ಮಿಸಿರುವ ಈ ಚಿಪ್ ಮನುಷ್ಯನಿಗೆ ಅಳವಡಿಸಲಾದಲ್ಲಿ ಆತ ತನ್ನ ಆಲೋಚನೆಗಳ ಮೂಲಕ ನೇರವಾಗಿ ಕಂಪ್ಯೂಟರ್‌ಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

    ಈ ಚಿಪ್‌ಗೆ ಸಂಬಂಧಪಟ್ಟ ದಾಖಲೆಗಳನ್ನು ನಾವು ಎಫ್‌ಡಿಎಗೆ (ಅಮೆರಿಕದ ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್) ಸಲ್ಲಿಸಿದ್ದೇವೆ. ಅಲ್ಲಿಂದ ಅನುಮತಿ ಪಡೆದರೆ, ಇನ್ನು ಕೇವಲ 6 ತಿಂಗಳುಗಳಲ್ಲಿ ನಾವು ಮಾನವರಲ್ಲಿ ಮೊದಲ ಬಾರಿಗೆ ಚಿಪ್ ಅಳವಡಿಸಲು ಸಾಧ್ಯವಾಗಲಿದೆ ಎಂದು ಮಸ್ಕ್ ಹೇಳಿದ್ದಾರೆ. ಇದನ್ನೂ ಓದಿ: iPhone ತಯಾರಿಸುವ ಕೋಲಾರದ ವಿಸ್ಟ್ರಾನ್‌ ಖರೀದಿಗೆ ಮುಂದಾದ ಟಾಟಾ

    2019ರ ಜುಲೈನಲ್ಲಿ ನ್ಯೂರಾಲಿಂಕ್ 2020ರಲ್ಲಿಯೇ ಮಾನವರ ಮೇಲೆ ಈ ಚಿಪ್‌ನ ಮೊದಲ ಪರೀಕ್ಷೆ ನಡೆಸುವುದಾಗಿ ತಿಳಿಸಿತ್ತು. ಈಗಾಗಲೇ ಈ ನಾಣ್ಯದ ಗಾತ್ರದ ಚಿಪ್‌ಗಳನ್ನು ಪ್ರಾಣಿಗಳ ತಲೆಬುರುಡೆಗಳಲ್ಲಿ ಅಳವಡಿಸಿ ಪರೀಕ್ಷೆ ನಡೆಸಲಾಗಿದೆ.

    ನ್ಯೂರಾಲಿಂಕ್ ಅಭಿವೃದ್ಧಿಪಡಿಸಿರುವ ಚಿಪ್ ಒಂದು ವೇಳೆ ಯಶಸ್ವಿಯಾದರೆ, ಇದು ಮಾನವನ ಮೆದುಳನ್ನು ನಿಯಂತ್ರಿಸಲು ಸಹಾಯ ಮಾಡಲಿದೆ. ಸ್ನಾಯುಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರದ ವ್ಯಕ್ತಿಗಳೂ ಸಕ್ರಿಯರಾಗುತ್ತಾರೆ. ಮಾನವನ ಬೆನ್ನುಹುರಿ ತುಂಡಾಗಿದ್ದರೂ ಆತನ ದೇಹ ಸಂಪೂರ್ಣವಾಗಿ ಕೆಲಸ ಮಾಡಲು ಸಾಧ್ಯವಾಗಿಸುವ ಸಾಮರ್ಥ್ಯ ಇದೆ. ಆ ವ್ಯಕ್ತಿ ಮೆದುಳಿನಿಂದಲೇ ಯಂತ್ರಗಳ ಜೊತೆ ಸಂವಹಿಸಬಹುದು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಟ್ವಿಟ್ಟರ್‌ ಅಕ್ಷರ ಮಿತಿ 280ರಿಂದ 1,000ಕ್ಕೆ ಏರಿಕೆ – ಸುಳಿವು ನೀಡಿದ ಮಸ್ಕ್‌

    Live Tv
    [brid partner=56869869 player=32851 video=960834 autoplay=true]