Tag: ನ್ಯೂಜಿಲೆಂಡ್ ಜೋ ಬೈಡನ್

  • ಅಮೆರಿಕದಲ್ಲಿ ಗನ್ ಸಂಸ್ಕೃತಿಗೆ ಕಡಿವಾಣ ಹಾಕಲು ನ್ಯೂಜಿಲೆಂಡ್‍ನ ಸಹಕಾರ ಕೇಳಿದ ಬೈಡನ್

    ಅಮೆರಿಕದಲ್ಲಿ ಗನ್ ಸಂಸ್ಕೃತಿಗೆ ಕಡಿವಾಣ ಹಾಕಲು ನ್ಯೂಜಿಲೆಂಡ್‍ನ ಸಹಕಾರ ಕೇಳಿದ ಬೈಡನ್

    ವಾಷಿಂಗ್ಟನ್: ಉವಾಲ್ಡೆ, ಟೆಕ್ಸಾಸ್ ಮತ್ತು ನ್ಯೂಯಾರ್ಕ್‍ನ ಬಫಲೋದಲ್ಲಿ ನಡೆದ ಭೀಕರ ಗುಂಡಿನ ದಾಳಿಯ ಬೆನ್ನಲ್ಲೆ ಗನ್ ಸಂಸ್ಕೃತಿಗೆ ಕಡಿವಾಣ ಹಾಕಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆನ್ ಅವರ ಸಹಕಾರ ಕೇಳಿದ್ದಾರೆ.

    ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆನ್ ಹಾಗೂ ಜೋ ಬೈಡನ್ ನಡುವಿನ ಮಾತುಕತೆಗಳು ಇಂಡೋ-ಪೆಸಿಫಿಕ್‍ನಲ್ಲಿ ವ್ಯಾಪಾರ, ಹವಾಮಾನ ಮತ್ತು ಭದ್ರತೆಯ ಮೇಲೆ ಕೇಂದ್ರೀಕೃತವಾಗಿತ್ತು. ಆದರೆ ಈ ವೇಳೆ ಬಂದೂಕು ನಿಯಂತ್ರಣಕ್ಕೆ ಕಡಿವಾಣ ಹಾಕಲು ಇಬ್ಬರು ನಾಯಕರು ವಿಭಿನ್ನ ಅನುಭವಗಳನ್ನು ತಿಳಿಸಿದ್ದಾರೆ.

    Joe Biden

    2019ರಲ್ಲಿ ಎರಡು ಚರ್ಚ್, ಮಸೀದಿಗಳಲ್ಲಿ 51 ಮಂದಿ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅರ್ಡೆನ್ ಅವರು ನ್ಯೂಜಿಲೆಂಡ್‍ನಲ್ಲಿ ಬಂದೂಕು ನಿಯಂತ್ರಣ ಕ್ರಮಕ್ಕೆ ಅಂಗೀಕಾರವನ್ನು ಮಾಡುವಲ್ಲಿ ಯಶಸ್ಸು ಪಡೆದಿದ್ದರು. ಇದಕ್ಕೆ ದೇಶದ 120 ಶಾಸಕರಲ್ಲಿ ಒಬ್ಬರನ್ನು ಹೊರತುಪಡಿಸಿ ಇದಕ್ಕೆ ಪರವಾಗಿ ಮತ ಹಾಕಿದ್ದರು. ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಎಲ್ಲ ನಾಮಪತ್ರಗಳು ಕ್ರಮಬದ್ಧ

    ಈ ಕ್ರಮವನ್ನು ಶ್ಲಾಘಿಸಿದ ಜೋ ಬೈಡನ್ ಅಮೆರಿಕದಲ್ಲಿ ಗನ್ ಸಂಸ್ಕೃತಿಗೆ ಕಡಿವಾಣ ಹಾಕಲು ಸಹಕಾರ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯೂಜಿಲೆಂಡ್‍ನ ಪ್ರಧಾನಿ ಎಲ್ಲಾ ರೀತಿಯ ರೀತಿಯ ಸಹಕಾರವನ್ನು ನೀಡಲು ಸಿದ್ಧ ಎಂದು ತಿಳಿಸಿದರು. ಇದನ್ನೂ ಓದಿ: ಉಕ್ರೇನ್‌ಗೆ ಸುಧಾರಿತ ಲಾಂಗ್ ರೇಂಜ್ ರಾಕೆಟ್ ಸಿಸ್ಟಮ್ ಕಳುಹಿಸುತ್ತೇವೆ: ಬೈಡನ್

    ವಾರಾಂತ್ಯದಲ್ಲಿ ಬೈಡೆನ್ ಟೆಕ್ಸಾಸ್‍ನ ಉವಾಲ್ಡೆಗೆ ಭೇಟಿ ನೀಡಿ, ಗುಂಡಿನ ದಾಳಿಗೆ ಬಲಿಯಾಗಿದ್ದ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದರು. ನಂತರ ವಾಷಿಂಗ್ಟನ್‍ನಲ್ಲಿ ಗನ್ ಕಾನೂನುಗಳನ್ನು ಬಿಗಿಗೊಳಿಸಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.