ನವದೆಹಲಿ: ನ್ಯಾಷನಲ್ ಹೆರಾಲ್ಡ್ ಹಣ ವರ್ಗಾವಣೆ ಪ್ರಕರಣಕ್ಕೆ (National Herald Case) ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ (Sonia Gandhi), ರಾಹುಲ್ ಗಾಂಧಿಗೆ (Rahul Gandhi) ದೆಹಲಿ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ಯಾವುದೇ ಹಂತದಲ್ಲಿ ವಿಚಾರಣೆ ನಡೆಸುವ ಹಕ್ಕು ನ್ಯಾಯಯುತ ವಿಚಾರಣೆಗೆ ಜೀವ ತುಂಬುತ್ತದೆ ಎಂದು ನ್ಯಾಯಾಧೀಶರಾದ ವಿಶಾಲ್ ಗೋಗ್ನೆ ತಿಳಿಸಿದ್ದಾರೆ. ಮುಂದಿನ ವಿಚಾರಣೆಯನ್ನು ಮೇ 8ಕ್ಕೆ ನಿಗದಿಪಡಿಸಿದ್ದಾರೆ.
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು 2014 ರ ಜೂನ್‌ನಲ್ಲಿ ಸಲ್ಲಿಸಿದ ಖಾಸಗಿ ಕ್ರಿಮಿನಲ್ ದೂರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕೈಗೆತ್ತಿಕೊಂಡ ನಂತರ 2021 ರಲ್ಲಿ ಜಾರಿ ನಿರ್ದೇಶನಾಲಯದ ತನಿಖೆ ಔಪಚಾರಿಕವಾಗಿ ಪ್ರಾರಂಭವಾಯಿತು. ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಉನ್ನತ ನಾಯಕತ್ವವನ್ನು ಒಳಗೊಂಡ ಕ್ರಿಮಿನಲ್ ಪಿತೂರಿ ಮತ್ತು ಆರ್ಥಿಕ ದುರುಪಯೋಗದ ಬಗ್ಗೆ ದೂರಿನಲ್ಲಿ ಆರೋಪಿಸಲಾಗಿದೆ. ಇದನ್ನೂ ಓದಿ: ಭಾರತದ ಮೊದಲ ಟ್ರಾನ್ಸ್‌ಶಿಪ್‌ಮೆಂಟ್ ಹಬ್‌ಗೆ ಪ್ರಧಾನಿ ಮೋದಿ ಚಾಲನೆ
ನವದೆಹಲಿ: ಸಾಂವಿಧಾನಿಕ ತನಿಖಾ ಸಂಸ್ಥೆಗಳ ದುರುಪಯೋಗದ ಆರೋಪದ ನಡುವೆ ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ರಾಹುಲ್ ಗಾಂಧಿಯನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸುತ್ತಿದೆ. ದೆಹಲಿಯ ಇ.ಡಿ (ಜಾರಿ ನಿರ್ದೇಶನಾಲಯ) ಕಚೇರಿ ಮೂರನೇ ಅಂತಸ್ತಿನಲ್ಲಿ ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳು ರಾಹುಲ್ ಗಾಂಧಿಯನ್ನು ಕಳೆದ 9 ಗಂಟೆಗಳಿಂದ ಸುದೀರ್ಘ ವಿಚಾರಣೆ ಮಾಡ್ತಿದ್ದಾರೆ.
ಮನಿ ಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿ ಹಲವು ಪ್ರಶ್ನೆ ಕೇಳಿದ್ದಾರೆ. ಬೆಳಗ್ಗೆ 11ರಿಂದ ಮಧ್ಯಾಹ್ನ 2.30ರವರೆಗೂ ಮೊದಲ ಹಂತದ ವಿಚಾರಣೆ ನಡೆದಿತ್ತು. ಊಟದ ವಿರಾಮದ ವೇಳೆ ರಾಹುಲ್ ಗಾಂಧಿ ಗಂಗಾರಾಮ್ ಆಸ್ಪತ್ರೆಗೆ ತೆರಳಿ ತಾಯಿ ಸೋನಿಯಾ ಆರೋಗ್ಯ ವಿಚಾರಿಸಿದ್ರು.
#WATCH | Congress leader Rahul Gandhi reaches the Enforcement Directorate office in Delhi for the second round of interrogation after a break, to appear in the National Herald case. pic.twitter.com/rbDddTibRU
ಮಧ್ಯಾಹ್ನ ಮೂರೂವರೆಗೆ ಮತ್ತೆ ಇ.ಡಿ ಕಚೇರಿಗೆ ವಾಪಸ್ಸಾದ ರಾಹುಲ್ ಗಾಂಧಿಯನ್ನು ಈ ಕ್ಷಣದವರೆಗೂ ಈಚೆ ಬಿಟ್ಟಿಲ್ಲ. ಯಾವಾಗ ಬಿಡ್ತಾರೋ ಗೊತ್ತಿಲ್ಲ. ಇಡಿ ಅಧಿಕಾರಿಗಳ ನಡೆ ಕುತೂಹಲ ಮೂಡಿಸಿದೆ. ಇ.ಡಿ ಸಮನ್ಸ್ ಪ್ರಕಾರ ಜೂನ್ ಏಳರಂದೇ ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಬೇಕಿತ್ತು. ಆದ್ರೆ, ರಾಹುಲ್ ವಿದೇಶ ಪ್ರವಾಸದಲ್ಲಿದ್ದ ಕಾರಣ ಕಾಲಾವಕಾಶ ಕೇಳಿದ್ರು. ಇದಕ್ಕೆ ಸ್ಪಂದಿಸಿದ್ದ ಇ.ಡಿ ವಿಚಾರಣೆ ಇಂದಿಗೆ ನಿಗದಿ ಮಾಡಿತ್ತು.
#WATCH Congress leader Rahul Gandhi surrounded by hundreds of party workers marches to the Enforcement Directorate office to appear before the agency in the National Herald case pic.twitter.com/EN1sjuOqfx
ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ?: ಮಾಜಿ ಪ್ರಧಾನಿ ದಿ. ಜವಾಹರ್ ಲಾಲಾ ನೆಹರೂ ಅವರ ಕನಸಿನ ಪತ್ರಿಕೆ ನ್ಯಾಷನಲ್ ಹೆರಾಲ್ಡ್. 1938ರಲ್ಲಿ ಮಾತೃಸಂಸ್ಥೆ ನ್ಯಾಷನಲ್ ಹೆರಾಲ್ಡ್ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ಸ್ಥಾಪಿಸಿ, ಅಲ್ಲಿಂದ ನ್ಯಾಷನಲ್ ಹೆರಾಲ್ಡ್ ಸ್ಥಾಪಿಸಿದ್ರು. ಸದ್ಯ ಇದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಕಂಪನಿಯ ಯಂಗ್ ಇಂಡಿಯಾ ಲಿಮಿಟೆಡ್ ಒಡೆತನದಲ್ಲಿದೆ. ಇದನ್ನೂ ಓದಿ: ಬಿಜೆಪಿ ಹಿರಿಯ ಮುಖಂಡ ಎ.ಜಿ.ಕೊಡ್ಗಿ ನಿಧನ- ಸಿಎಂ, ಕಟೀಲ್ ಸಂತಾಪ
Congress leader Rahul Gandhi leaves from the Enforcement Directorate office in Delhi after appearing in the National Herald case pic.twitter.com/8CdbXho6Id
ಮಾತೃಸಂಸ್ಥೆಯು ಸಾಲದ ಸುಳಿಯಲ್ಲಿ ಸಿಲುಕಿದ ನಂತರ 2008 ರಲ್ಲಿ ಪತ್ರಿಕೆಗಳನ್ನು ಮುಚ್ಚಲಾಯಿತು. ಈ ಹಿಂದೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನಿಂದ 90.25 ಕೋಟಿ ಬಡ್ಡಿ ರಹಿತ ಸಾಲವನ್ನು ತೆಗೆದುಕೊಂಡಿತ್ತು. 2010ರ ವೇಳೆಗೆ ಎಜಿಎಲ್ 1057 ಷೇರುದಾರರನ್ನು ಹೊಂದಿತ್ತು, ಆದರೆ ತೀವ್ರ ನಷ್ಟದಲ್ಲಿದ್ದ ಈ ಕಂಪನಿಯ ಷೇರುಗಳನ್ನು 2011ರಲ್ಲಿ ಯಂಗ್ ಇಂಡಿಯಾ ಸಂಸ್ಥೆಗೆ ವರ್ಗಾವಣೆ ಮಾಡಲಾಗಿತ್ತು. 2016ರಿಂದ ಮ್ತತೊಮ್ಮೆ ಮುದ್ರಣ ಪ್ರಾರಂಭಿಸಿತು.
2013ರಲ್ಲಿ ಜನವರಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿರುವ ಕುರಿತು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ದೆಹಲಿ ಪಟಿಯಾಲಾ ಹೌಸ್ ಕೋರ್ಟ್‍ನಲ್ಲಿ ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಅವರ ಕಂಪೆನಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಸೇರಿದಂತೆ ಸೋನಿಯಾ ಗಾಂಧಿ ಸಂಬಂಧಿತ ವ್ಯಕ್ತಿಗಳ ವಿರುದ್ಧ ದೂರು ಸಲ್ಲಿಸಿದ್ದರು. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ – ಶರದ್ ಪವಾರ್ ಒಮ್ಮತದ ಅಭ್ಯರ್ಥಿ?
Gujarat | Congress workers in Ahmedabad being detained as they protest ED probe against party leader Rahul Gandhi in the National Herald case pic.twitter.com/O6anDxiMrq
ಕಾಂಗ್ರೆಸ್ ಹೇಳೋದೇನು?: ಯಂಗ್ ಇಂಡಿಯಾ ಯಾವುದೇ ಲಾಭಾಪೇಕ್ಷೆ ಇಲ್ಲದ ಸಂಸ್ಥೆಯಾಗಿದೆ. ಆಡಳಿತ ಮಂಡಳಿಯ ಸದಸ್ಯರು, ಪಾಲುದಾರರಿಗೆ ಲಾಭ ಹಂಚಿಕೆಯಾಗಿಲ್ಲ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಒಡೆತನ ಎಜೆಎಲ್ ಸಂಸ್ಥೆಯ ಬಳಿಯೇ ಇದೆ. ಯಂಗ್ ಇಂಡಿಯಾಗೆ ಎಜೆಎಲ್ ಆಸ್ತಿಗಳನ್ನು ಹಸ್ತಾಂತರ ಮಾಡಲಾಗಿಲ್ಲ. ದುಡ್ಡೇ ಇಲ್ಲದೇ ಮನಿಲಾಂಡ್ರಿಂಗ್ ಕೇಸ್ ಹೇಗೆ ನಡೆಯುತ್ತೆ ಎಮದು ಕಾಂಗ್ರೆಸ್ ಪ್ರಶ್ನಿಸಿದೆ.
ನಮ್ಮ ಧ್ವನಿಯ ದಮನಕ್ಕಾಗಿ ಹಾಕಲಾದ ರಾಜಕೀಯ ಪ್ರೇರಿತ ಕೇಸ್ ಇದಾಗಿದೆ. ಇದು ವಿಚಿತ್ರ ಪ್ರಕರಣವಾಗಿದ್ದು, ಸಾಂವಿಧಾನಿಕ ಸಂಸ್ಥೆಯ ದುರುಪಯೋಗ. ಬಿಜೆಪಿ ಸರ್ಕಾರದ ಷಡ್ಯಂತ್ರ್ಯಗಳಿಗೆ ಹೆದರಲ್ಲ, ಹೋರಾಟ ನಿಲ್ಲಿಸಲ್ಲ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಹೇಳಿದ್ದಾರೆ.