Tag: ನ್ಯಾಷನಲ್ ಸ್ಟಾರ್ ಯಶ್

  • ರಿಯಲ್ ಸ್ಟಾರ್: ಪಾನ್ ಮಸಾಲ ಆಫರ್ ತಿರಸ್ಕರಿಸಿದ ಯಶ್

    ರಿಯಲ್ ಸ್ಟಾರ್: ಪಾನ್ ಮಸಾಲ ಆಫರ್ ತಿರಸ್ಕರಿಸಿದ ಯಶ್

    ನ್ನಡದ ಮಾಸ್ಟರ್ ಪೀಸ್ ಯಶ್ ಈಗ ವರ್ಲ್ಡ್ ವೈಡ್ ಸೂಪರ್ ಸ್ಟಾರ್ ಆಗಿ ಮಿಂಚ್ತಿರೋ ನಟ, `ಕೆಜಿಎಫ್ 2′ ವಿಚಾರವಾಗಿ ಬಾಕ್ಸ್ಆಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಬೆನ್ನಲ್ಲೇ ಸಮಾಜಕ್ಕೆ ಉತ್ತಮ ಸಂದೇಶ ಕೊಡಬೇಕು ಅನ್ನೋ ದೃಷ್ಟಿಯಿಂದ ಯಶ್‌ ಮಹತ್ವ ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ತಾವು ರಿಯಲ್‌ ಲೈಫ್‌ನಲ್ಲೂ ಹೀರೋ ಅನ್ನೋದನ್ನ ಸಾಬೀತು ಮಾಡಿದ್ದಾರೆ.

    ನ್ಯಾಷನಲ್ ಸ್ಟಾರ್ ಯಶ್ ಸದ್ಯ `ಕೆಜಿಎಫ್ 2′ ಸಕ್ಸಸ್ ಖುಷಿಯಲ್ಲಿದ್ದಾರೆ. ವರ್ಲ್ಡ್ ವೈಡ್ ತಮ್ಮ ಖಡಕ್ ಆಕ್ಟಿಂಗ್ ಮೂಲಕ ಗುರುತಿಸಿಕೊಂಡಿದ್ದಾರೆ. ತೆರೆಯ ಮೇಲೆ ಮಾತ್ರ ನಾನೋಬ್ಬ ಹೀರೋ ಅಲ್ಲ, ರಿಯಲ್ ಲೈಫ್ ಹೀರೋ ಅನ್ನೋದನ್ನ ಪ್ರೂವ್ ಮಾಡಿದ್ದಾರೆ. `ಕೆಜಿಎಫ್ 1′ ಮತ್ತು `ಚಾಪ್ಟರ್ 2′ ನಂತರ ನಂತರ ಕೋಟ್ಯಾಂತರ ಅಭಿಮಾನಿಗಳನ್ನ ಹೊಂದಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ಕೊಡುವಂತಾ ಜಾಹೀರಾತನ್ನು ನೀಡುವ ಉದೇಶದಿಂದ ಪ್ರತಿಷ್ಠಿತ ಸಂಸ್ಥೆಯ ಪಾನ್ ಮಸಾಲ  ಮತ್ತು ಎಲೈಚಿ ಬ್ರ್ಯಾಂಡ್‌ನ ಬಿಗ್ ಆಫರ್‌ನ್ನೇ ಯಶ್ ತಿರಸ್ಕರಿಸಿದ್ದಾರೆ.

    ದೇಶದ ಪ್ರತಿಷ್ಠಿತ ಸಂಸ್ಥೆಯೊಂದು ರಾಕಿಂಗ್ ಸ್ಟಾರ್ ಯಶ್ ಅವರನ್ನ ಪಾನ್ ಮಸಾಲ ಮತ್ತು ಎಲೈಚಿ ಬ್ರ್ಯಾಂಡ್‌ನ ರಾಯಭಾರಿಯಾಗಿ ಪ್ರಮೋಟ್ ಮಾಡಲು ಅಪ್ರೋಚ್ ಮಾಡಲಾಗಿತ್ತು. ಆದರೆ ಈ ಜಾಹೀರಾತನ್ನ ಮಾಡುವುದರಿಂದ ಆರೋಗ್ಯದ ಹಿತದೃಷ್ಟಿ ಮತ್ತು ಸಮಾಜಕ್ಕೆ ಮಾರಕವಾಗುವಂತಹ ವಸ್ತುಗಳನ್ನ ಪ್ರಮೋಟ್ ಮಾಡಬಾರದು ಎಂದು ನಿರ್ಧರಿಸಿ ಕೋಟ್ಯಾಂತರ ಮೌಲ್ಯದ ಆಫರ್‌ನ್ನೇ ಯಶ್ ಕೈ ಬಿಟ್ಟಿದ್ದಾರೆ. ಇದನ್ನೂ ಓದಿ: ಸ್ಯಾಂಡಲ್‌ವುಡ್‌ ಸಿಂಡ್ರೆಲಾ ರಾಧಿಕಾ ಪಂಡಿತ್‌ಗೆ ಭಯಂಕರ ಬೇಡಿಕೆ ಇಟ್ಟ ಫ್ಯಾನ್ಸ್

    ಯಶ್ ಅವರನ್ನ ಕೋಟ್ಯಾಂತರ ಅಭಿಮಾನಿಗಳು ಫಾಲೋವ್ ಮಾಡ್ತಿದ್ದಾರೆ. ಹೀಗಿರುವಾಗ ತಾವು ಪ್ರಚಾರ ಮಾಡೋ ಪ್ರಾಡೆಕ್ಟ್‌ನಿಂದ ಸಮಾಜಕ್ಕೆ ಉಪಯೋಗವಾಗಬೇಕು ಅನ್ನೋದು ಯಶ್ ಯೋಚನೆ. ಸಿನಿಮಾಗಳಲ್ಲಿ ಮಾತ್ರ ಮೆಸೇಜ್ ಕೊಡೋದಲ್ಲ, ಈ ಮೂಲಕ ತಾವು ರೀಲ್‌ನಲ್ಲಿ ಮಾತ್ರ ಅಲ್ಲ ರಿಯಲ್ ಲೈಫ್‌ನಲ್ಲೂ ಹೀರೋ ಅನ್ನೋದನ್ನ ಯಶ್ ಪ್ರೂವ್ ಮಾಡಿದ್ದಾರೆ. ಇನ್ನು ಈ ಸುದ್ದಿ ಕೇಳಿದ್ರೆ ಯಶ್‌ ಅಭಿಮಾನಿಗಳು ಸಲಾಮ್‌ ರಾಕಿಭಾಯ್‌ ಅನ್ನೋದು ಗ್ಯಾರೆಂಟಿ.

  • ಬಾಲಿವುಡ್‌ 3ನೇ ದಿನದ ಕಲೆಕ್ಷನ್‌ನಲ್ಲೂ ಹವಾ ಕ್ರಿಯೇಟ್‌ ಮಾಡಿದ ʻಕೆಜಿಎಫ್‌ 2ʼ

    ಬಾಲಿವುಡ್‌ 3ನೇ ದಿನದ ಕಲೆಕ್ಷನ್‌ನಲ್ಲೂ ಹವಾ ಕ್ರಿಯೇಟ್‌ ಮಾಡಿದ ʻಕೆಜಿಎಫ್‌ 2ʼ

    ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಲಿವುಡ್ ಅಂಗಳದಲ್ಲಿ ಯಶ್ ಮೇನಿಯಾ ನಿಲ್ಲುವ ಸೂಚನೆ ಸಿಗ್ತಿಲ್ಲ. ಬಿಟೌನ್ ಗಲ್ಲಿಯಲ್ಲಿ ರಾಕಿಭಾಯ್ ಸಿನಿಮಾ ತೂಫಾನ್ ಎಬ್ಬಿಸಿದೆ. ರಿಲೀಸ್ ಆದ ಎರಡೇ ದಿನಕ್ಕೆ ನೂರು ಕೋಟಿ ಕ್ಲಬ್ ಮಾಡಿತ್ತು. ಈಗ ಮೂರನೇ ದಿನದ ಕಲೆಕ್ಷನ್ 143 ಕೋಟಿ ಬಾಕ್ಸ್ಆಫೀಸ್‌ನಲ್ಲಿ ಲೂಟಿ ಮಾಡಿದೆ. ನಾಲ್ಕೇ ದಿನಕ್ಕೆ ಚಿತ್ರದ ಕಲೆಕ್ಷನ್ 200 ಕೋಟಿ ರೂಪಾಯಿ ಗಡಿ ದಾಟುವ ಸೂಚನೆ ಕೊಟ್ಟಿದೆ.

    kgf 2

    ರಿಲೀಸ್ ಆದ ಫಸ್ಟ್ ಡೇ `ಕೆಜಿಎಫ್ 2′ 53.95 ಕೋಟಿ ಬಾಚಿಕೊಂಡಿತ್ತು. ಹಿಂದಿಯ ʻವಾರ್ʼ ಮತ್ತು ʻಥಗ್ಸ್ ಆಫ್ ಹಿಂದೂಸ್ತಾನ್ʼ ಚಿತ್ರಗಳ ದಾಖಲೆ ಉಡೀಸ್ ಮಾಡಿತ್ತು. ಈಗ ಮೂರನೇ ದಿನವೂ 143 ಕೋಟಿ ಬಾಚುವ ಮೂಲಕ `ಕೆಜಿಎಫ್ 2′ ಅಬ್ಬರ ಜೋರಾಗಿದೆ.

    ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಕಿಭಾಯ್ ಚಿತ್ರವನ್ನ ಸಿನಿಪ್ರಿಯರು ಮುಗಿಬಿದ್ದು ನೋಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನ ಮತ್ತು ರಾಕಿಭಾಯ್ ಆಕ್ಟಿಂಗ್‌ಗೆ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಹಿಂದಿ ಬಾಕ್ಸ್ಆಫೀಸ್‌ನಲ್ಲಿ 53.95 ಕೋಟಿ, ಎರಡನೇ ದಿನ 46.79 ಕೋಟಿ, ಮೂರನೇ ದಿನ 42.90 ಕೋಟಿ, ಒಟ್ಟು 143.64 ಕೋಟಿ ಬಾಚುವ ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಕ್ರಿಯೇಟ್ ಮಾಡಿದೆ. ಇದನ್ನೂ ಓದಿ:`ಚಂದ್ರಲೇಖ ರಿಟರ್ನ್ಸ್’ ಅಂತಿದ್ದಾರೆ ನಿರ್ದೇಶಕ ಓಂಪ್ರಕಾಶ್ ರಾವ್

    ಭಾರತದ ಎಲ್ಲಾ ರಾಜ್ಯಗಳಲ್ಲೂ `ಕೆಜಿಎಫ್ ಚಾಪ್ಟರ್ 2′ ಕಲೆಕ್ಷನ್ ನಲ್ಲಿ ನಂಬರ್ 1 ಸ್ಥಾನ ಗಿಟ್ಟಿಸಿಕೊಂಡಿದೆ. ಹಾಗೆಯೇ ವಿದೇಶಗಳಲ್ಲಿ ಕೂಡ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸದ್ಯ ಎಲ್ಲೆಲ್ಲೂ ಯಶ್ ಮೇನಿಯಾ ಜೋರಾಗಿದೆ.

  • `ಕೆಜಿಎಫ್ 2′ ಟೀಮ್‌ನಿಂದ ಪ್ರಭಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್

    `ಕೆಜಿಎಫ್ 2′ ಟೀಮ್‌ನಿಂದ ಪ್ರಭಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್

    ಪ್ರಶಾಂತ್‌ ನೀಲ್ ಮತ್ತು ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ಸಿನಿಮಾ ರಿಲೀಸ್ ಆಗೋಕೆ ದಿನಗಣನೆ ಶುರುವಾಗಿದೆ. ಇದೇ ಏಪ್ರಿಲ್‌ 14ಕ್ಕೆ ತೆರೆಗೆ ಅಪ್ಪಳಿಸಲಿದೆ. ಚಿತ್ರತಂಡ ಕೂಡ ಬ್ಯಾಕ್ ಟು ಬ್ಯಾಕ್ ಅಪ್‌ಡೇಟ್‌ನಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಡ್ತಿದ್ದಾರೆ. ಈಗ `ಕೆಜಿಎಫ್ ೨’ ಸಿನಿಮಾದಲ್ಲಿ ಸಿನಿರಸಿಕರಿಗೆ ಬಿಗ್ ಸಪ್ರೈಸ್‌ ಇರಲಿದೆ.

    `ಕೆಜಿಎಫ್ 2′ ಶೂಟಿಂಗ್ ಗ್ಯಾಪ್‌ನಲ್ಲೇ ಶೂಟಿಂಗ್ ಮಾಡಿರೋ, ಪ್ರಶಾಂತ್‌ ನೀಲ್ ನಿರ್ದೇಶನದ `ಕೆಜಿಎಫ್ 2′ ರಿಲೀಸ್‌ನಲ್ಲಿ ಪ್ರಭಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಇರಲಿದೆ. ಪ್ರಭಾಸ್ ನಟನೆಯ ʼಸಲಾರ್’ ಚಿತ್ರದ ಟೀಸರ್ ಕೂಡ `ಕೆಜಿಎಫ್ 2’ನಲ್ಲಿ ಅಟ್ಯಾಚ್ ಆಗಿರಲಿದೆ. ಈ ಸುದ್ದಿ ಕೇಳಿ ರಾಕಿಭಾಯ್ ಫ್ಯಾನ್ಸ್ ಜೊತೆಗೆ ಪ್ರಭಾಸ್ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.

    ಬಿಗ್ ಬಜೆಜ್ ಸಿನಿಮಾಗಳು ರಿಲೀಸ್ ಆಗುವಾಗ ಬಿಡುಗಡೆಗೆ ಸಿದ್ಧವಿರೋ ಚಿತ್ರಗಳ ಟ್ರೇಲರ್ ಮತ್ತು ಟೀಸರ್‌ಗಳನ್ನ ಅಟ್ಯಾಚ್ ಮಾಡುವ ಪದ್ಧತಿಯಿದೆ. ಅದರಂತೆಯೇ ಪುನೀತ್ ರಾಜ್‌ಕುಮಾರ್ ನಟನೆಯ ಮಾರ್ಚ್.17ಕ್ಕೆ ರಿಲೀಸ್ ಆಗಿದ್ದ `ಜೇಮ್ಸ್’ ಚಿತ್ರದ ವೇಳೆ ಶಿವರಾಜ್‌ಕುಮಾರ್ ನಟನೆಯ `ಬೈರಾಗಿ’ ಚಿತ್ರದ ಟೀಸರ್ ಕೂಡ ಪ್ರಸಾರಗೊಂಡಿತ್ತು. ಅದೇ ರೀತಿ `ಕೆಜಿಎಫ್ 2′ ಸಿನಿಮಾ ಜೊತೆಗೆ `ಸಲಾರ್’ ಚಿತ್ರದ ಟೀಸರ್ ಕೂಡ ಪ್ರಸಾರ ಮಾಡಲಾಗುತ್ತದೆ.

    `ಕೆಜಿಎಫ್ 2’ನಂತೆ `ಸಲಾರ್’ ಚಿತ್ರಕ್ಕೂ ಕೂಡ ಪ್ರಶಾಂತ್‌ನೀಲ್ ನಿರ್ದೇಶನದ ಜೊತೆಗೆ ಹೊಂಬಾಳೆ ಬ್ಯಾನರ್ ನಿರ್ಮಾಣ ಮಾಡುತ್ತಿದೆ. ಪ್ರಭಾಸ್ ಶ್ರುತಿ ಹಾಸನ್ ನಟನೆಯ `ಸಲಾರ್’ ಚಿತ್ರದ ಯಾವೊಂದು ಅಪ್‌ಡೇಟ್ ಸಿಗ್ತಿರಲಿಲ್ಲ. ಚಿತ್ರದ ಪ್ರಚಾರ ನಿಟ್ಟಿನಲ್ಲಿ `ಕೆಜಿಎಫ್ 2′ ಚಿತ್ರದ ವೇಳೆ `ಸಲಾರ್’ ಟೀಸರ್ ಕೂಡ ಅಟ್ಯಾಚ್ ಮಾಡಲಾಗುತ್ತಿದೆ. ಇದನ್ನು ಓದಿ:ಶಕ್ತಿಧಾಮ ವಿದ್ಯಾಶಾಲೆಗೆ ಶಂಕುಸ್ಥಾಪನೆ – ಜೀವ ಇರೋತನಕ ಇಲ್ಲಿನ ಮಕ್ಕಳ ಜತೆ ಇರುತ್ತೇನೆ: ಶಿವಣ್ಣ

    `ಸಲಾರ್’ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಯಿದೆ. ಚಿತ್ರದ ಶೂಟಿಂಗ್ ಇನ್ನು ಬಾಕಿಯಿದ್ದು, ಟೀಸರ್ ಗ್ಲಿಂಪ್ಸ್‌ನಿಂದ ಚಿತ್ರ ಹೇಗಿರಬಹುದು ಅಂತಾ ಊಹಿಸಬಹುದಾಗಿದೆ. ಒಟ್ನಲ್ಲಿ ನಿರೀಕ್ಷಿಸದೆ `ಸಲಾರ್’ ಕುರಿತು ಗುಡ್ ನ್ಯೂಸ್ ಕೊಟ್ಟಿರೋ `ಕೆಜಿಎಫ್ ೨’ ಚಿತ್ರವನ್ನ ನೋಡೋಕೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ರಾಕಿಭಾಯ್‌ನ ಕಣ್ತುಂಬಿಕೊಳ್ಳೊಕೆ ಫ್ಯಾನ್ಸ್‌ ಕಾಯ್ತಿದ್ದಾರೆ.

  • `ಕೆಜಿಎಫ್-2′ ಅಡ್ವಾನ್ಸ್ ಬುಕ್ಕಿಂಗ್ ಸ್ಟಾರ್ಟ್ – ಯಾವಾಗ, ಎಲ್ಲೆಲ್ಲಿ? ಇಲ್ಲಿದೆ ಡಿಟೈಲ್ಸ್

    `ಕೆಜಿಎಫ್-2′ ಅಡ್ವಾನ್ಸ್ ಬುಕ್ಕಿಂಗ್ ಸ್ಟಾರ್ಟ್ – ಯಾವಾಗ, ಎಲ್ಲೆಲ್ಲಿ? ಇಲ್ಲಿದೆ ಡಿಟೈಲ್ಸ್

    ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್-2′ ಸಿನಿಮಾ ರಿಲೀಸ್‌ಗೂ ಮುಂಚೆ ಒಂದಲ್ಲ ಒಂದು ವಿಚಾರವಾಗಿ ಸಖತ್ ಸೌಂಡ್ ಮಾಡ್ತಿದೆ. ಚಿತ್ರದ ಪ್ರಚಾರದಲ್ಲಿ ಪ್ರಶಾಂತ್ ನೀಲ್ ಮತ್ತು ರಾಕಿಭಾಯ್ ಟೀಮ್ ಬ್ಯುಸಿಯಾಗಿದೆ. ಸದ್ಯ ರಿಲೀಸ್ ಆಗಿರೋ `ಗಗನ ನೀ’ ಸಾಂಗ್‌ನಿಂದ ಭಾರೀ ಸದ್ದು ಮಾಡ್ತಿರೋ ಬೆನ್ನಲ್ಲೆ ಹೊಂಬಾಳೆ ಬ್ಯಾನರ್‌ ಚಿತ್ರದ ಬುಕ್ಕಿಂಗ್ ಕುರಿತು ಮಾಹಿತಿ ಹಂಚಿಕೊಂಡಿದೆ.

    ರಾಕಿಭಾಯ್ ಎಂಟ್ರಿಗೆ ಕೆಲವೇ ದಿನಗಳು ಬಾಕಿಯಿದ್ದು, ಪ್ರತಿದಿನವೂ ಚಿತ್ರದ ಹೊಸ ಹೊಸ ಅಪ್‌ಡೇಟ್‌ಗಳನ್ನು ಹೇಳಲಾಗುತ್ತಿದೆ. ಬ್ರಿಟನ್‌ನಲ್ಲಿ ಯಾರು ಊಹಿಸದ ಮಟ್ಟದಲ್ಲಿ ಟಿಕೆಟ್‌ಗಳು ಈಗಾಗಲೇ ಬುಕ್ಕಿಂಗ್ ಆಗಿದೆ. ಇದೀಗ ಭಾರತದ ಹಲವು ಭಾಗಗಳಲ್ಲಿ ಟಿಕೆಟ್ ಬುಕ್ಕಿಂಗ್ ಕುರಿತು ಹೊಂಬಾಳೆ ಬ್ಯಾನರ್ ಟ್ವಿಟರ್ ಮೂಲಕ ತಿಳಿಸಿದೆ.

    `ಕೆಜಿಎಫ್ 2′ ನಿರ್ಮಾಣದ ಸಂಸ್ಥೆ ಟ್ವಿಟರ್ ಮೂಲಕ ಅಡ್ವಾನ್ಸ್ ಬುಕ್ಕಿಂಗ್ ಆರಂಭದ ಕುರಿತು ತಿಳಿಸಲಾಗಿದೆ. ಕೇರಳ, ತಮಿಳುನಾಡು, ಹಾಗೂ ಉತ್ತರಭಾರತದಲ್ಲಿ ಏಪ್ರಿಲ್ 7ರಿಂದ ಬುಕ್ಕಿಂಗ್ ಆರಂಭದ ಕುರಿತು ಘೋಷಿಸಲಾಗಿದೆ. ಇದನ್ನು ಓದಿ:ಸಿನಿಮಾ ಮುಹೂರ್ತದಲ್ಲೇ ನೆಚ್ಚಿನ ನಟನಿಗೆ ದೃಷ್ಟಿ ತಗೆದ ರಶ್ಮಿಕಾ ಮಂದಣ್ಣ

    `ಕೆಜಿಎಫ್ 2′ ಚಿತ್ರತಂಡ ಇದುವರೆಗೆ ಬಹುತೇಕ ಎಲ್ಲೆಡೆ ಮುಂಗಡ ಟಿಕೆಟ್ ಬುಕ್ಕಿಂಗ್ ಘೋಷಿಸಿದ್ರು. ಇನ್ನು ಕರ್ನಾಟಕದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆಯಾಗಿಲ್ಲ. ಕನ್ನಡಿಗರು ಸೇರಿದಂತೆ ವಿಶ್ವದೆಲ್ಲೆಡೆ `ಕೆಜಿಎಫ್-2′ ರಾಕಿಭಾಯ್ ಅವತಾರ ನೋಡಲು ಕಾಯ್ತಿದ್ದಾರೆ.