Tag: ನ್ಯಾಯಾಲಯ

  • ಹಿಂದೂ ಸಂಪ್ರದಾಯದಂತೆ ಉಪವಾಸ ಆಚರಿಸಿದ ಪಾಕ್‌ ಮಹಿಳೆ ಸೀಮಾ – ಕಾರಣ ಗೊತ್ತಾ.?

    ಹಿಂದೂ ಸಂಪ್ರದಾಯದಂತೆ ಉಪವಾಸ ಆಚರಿಸಿದ ಪಾಕ್‌ ಮಹಿಳೆ ಸೀಮಾ – ಕಾರಣ ಗೊತ್ತಾ.?

    – ಹಸಿರು ಸೀರೆ, ಒಡವೆ ತೊಟ್ಟು ಫುಲ್‌ ಮಿಂಚಿಂಗ್‌

    ಲಕ್ನೋ: ಪಬ್‌ಜಿ ಪ್ರಿಯಕರನಿಗಾಗಿ (PUBG Lover) ಅಕ್ರಮವಾಗಿ ಪ್ರವೇಶಿಸಿದ್ದ ಪಾಕಿಸ್ತಾನದ (Pakistan) ಮಹಿಳೆ ಸೀಮಾ ಹೈದರ್‌ (Seema Haider) ಇದೀಗ ಭಾರತದಲ್ಲೇ ಪತಿ ಸಚಿನ್‌ ಮೀನಾ ಜೊತೆಗೆ ಸುಖ ಸಂಸಾರ ನಡೆಸುತ್ತಿದ್ದಾರೆ. ಬುಧವಾರ (ಇಂದು) ಪತಿ ಸಚಿನ್ ಮೀನಾಗಾಗಿ ಮೊದಲ ಕರ್ವಾ ಚೌತ್ ಉಪವಾಸ ಆಚರಿಸಿದ್ದಾರೆ.

    ಹಿಂದೂ ಸಂಪ್ರದಾಯದಂತೆ ಹಸಿರು ಸೀರೆ, ಒಡವೆ ತೊಟ್ಟು ಕಳಶ ಪೂಜೆ ಮಾಡಿ ಉಪವಾಸ ಆಚರಿಸಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿವೆ. ಇದನ್ನೂ ಓದಿ: ಪಬ್‌ಜೀ ಮೂಲಕವೇ ಭಾರತದ ಹಲವರನ್ನ ಸಂಪರ್ಕಿಸಿದ್ದಾಳೆ ಸೀಮಾ – ಸ್ಫೋಟಕ ರಹಸ್ಯ ಬಯಲು

    ದೇಶದ ವಿವಿಧೆಡೆ ಕರ್ವ ಚೌತ್‌ (Karva Chauth) ಹಬ್ಬವನ್ನು ಮಹಿಳೆಯರು ಉಪವಾಸ ಮಾಡುವ ಮೂಲಕ ಆಚರಿಸುತ್ತಾರೆ. ತಮ್ಮ ಗಂಡನ ದೀರ್ಘಾಯುಷ್ಯಕ್ಕಾಗಿ ಮಹಿಳೆಯರು ಆಚರಿಸುವ ಹಬ್ಬ ಇದಾಗಿದೆ. ಈ ಹಿಂದೆ ಪಬ್ಜಿಯಲ್ಲಿ ಸಚಿನ್‌ ಪರಿಚಯವಾಗಿದ್ದಾಗ, ಪಾಕಿಸ್ತಾನದಲ್ಲಿದ್ದುಕೊಂಡೇ 2 ಬಾರಿ ಕರ್ವ ಚೌತ್‌ ಆಚರಿದ್ದಳು. ಆಗ ಮೊಬೈಲ್‌ನಲ್ಲೇ ಸಚಿನ್‌ ಫೋಟೋ ನೋಡಿಕೊಂಡು ಪೂಜೆ ಕೂಡ ಮಾಡಿದ್ದಳಂತೆ. ಭಾರತಕ್ಕೆ ಬಂದ ಬಳಿಕ ತನ್ನ ಪತಿಗಾಗಿ ಇದೇ ಮೊದಲಬಾರಿಗೆ ಉಪವಾಸ ಆಚರಿಸಿದ್ದಾಳೆ ಎನ್ನಲಾಗಿದೆ. ಕರ್ವ ಚೌತ್‌ ಆಚರಣೆಗಾಗಿ ಸೀಮಾ ತಾಯಿ ಮನೆಯಿಂದ ಕೆಂಪು ಬಣ್ಣದ ಲೆಹೆಂಗಾ, ಕರ್ವಾ ಚೌತ್ ಥಾಲಿ ಹಾಗೂ ಇತರ ಮೇಕಪ್‌ ಆಭರಣಗಳು ಬಂದಿರುವುದಾಗಿ ತೋರಿಸಿದ್ದಾಳೆ.

    ಈ ನಡುವೆ ಮಾತನಾಡಿರುವ ಸೀಮಾ, ಭಾರತವು ಅತ್ಯಂತ ಉತ್ತಮ ದೇಶವಾಗಿದೆ. ಇತರ ದೇಶಗಳ ಜನರನ್ನೂ ತನ್ನವರಾಗಿಸುವ ಮೂಲಕ ಅವರಿಗೆ ಹೆಚ್ಚಿನ ಗೌರವ ನೀಡುತ್ತದೆ. ಬದುಕಲು ಅವಕಾಶ ಮಾಡಿಕೊಡುತ್ತದೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಬೇಗ ಬಂದುಬಿಡು ಸೀಮಾ, ಹೊಸ ಜೀವನ ಶುರು ಮಾಡೋಣ – ಸೌದಿಯಲ್ಲಿ ಮೊದಲ ಪತಿಯ ಗೋಳಾಟ

    ಪಬ್‌ಜೀ ಪ್ರೇಮಕಥೆ ಸಿನಿಮಾದಷ್ಟೇ ರೋಚಕ: ಸೀಮಾ ಹಾಗೂ ಸಚಿನ್ ಲವ್‌ಸ್ಟೋರಿ ಬಾಲಿವುಡ್ ಸಿನಿಮಾದಷ್ಟೇ ಥ್ರಿಲ್ಲಿಂಗ್ ಆಗಿದೆ. ಸಚಿನ್ ಮೀನಾ ಮೂಲತಃ ಉತ್ತರ ಪ್ರದೇಶದವನು. 2019ರಲ್ಲಿ ಆನ್‌ಲೈನ್ ಗೇಮ್ ಪಬ್‌ಜೀ ಆಡುತ್ತಿದ್ದ. ಈ ವೇಳೆ ಇವರಿಬ್ಬರ ಪರಿಚಯವಾಗಿ, ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು. ಬಳಿಕ ಸೀಮಾ ಹೈದರ್ ಆತನೊಂದಿಗೆ ನೋಯ್ಡಾದಲ್ಲಿ ವಾಸಿಸುವ ಸಲುವಾಗಿ ಪಾಕಿಸ್ತಾನದಿಂದ ತನ್ನ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದಿದ್ದಳು. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಭಾರತದಲ್ಲೇ ಇರಲು ಅವಕಾಶ ಕೊಡಿ – ರಾಷ್ಟ್ರಪತಿಗೆ ಸೀಮಾ ಹೈದರ್‌ ಪತ್ರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವೃದ್ಧೆಯ ಮೇಲೆ ಅತ್ಯಾಚಾರ – ಅಪರಾಧಿಗೆ 10 ವರ್ಷ ಜೈಲು, 10 ಸಾವಿರ ದಂಡ

    ವೃದ್ಧೆಯ ಮೇಲೆ ಅತ್ಯಾಚಾರ – ಅಪರಾಧಿಗೆ 10 ವರ್ಷ ಜೈಲು, 10 ಸಾವಿರ ದಂಡ

    ಹಾಸನ: ವೃದ್ಧೆಯ (Old Woman) ಮೇಲೆ ಅತ್ಯಾಚಾರ (Rape) ಎಸಗಿದ್ದ ಅಪರಾಧಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ (Rigorous Imprisonment) ಹಾಗೂ 10 ಸಾವಿರ ರೂ. ದಂಡ (Penalty) ವಿಧಿಸಿ ಹಾಸನದ (Hassan) ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Court) ತೀರ್ಪು ನೀಡಿದೆ.

    ಹಾಸನ ತಾಲೂಕು ಕಟ್ಟಾಯ ಹೋಬಳಿ ಬನವಾಸೆ ಗ್ರಾಮದ ರಮೇಶ್ ಶಿಕ್ಷೆಗೆ ಒಳಗಾದ ಅಪರಾಧಿ. 2020ರ ಜುಲೈ 29ರಂದು ರಾತ್ರಿ ಅಪರಾಧಿ ರಮೇಶ್ 69 ವರ್ಷದ ವೃದ್ಧೆಯ ಮನೆಯ ಛಾವಣಿಯ ಕಿಟಕಿಯನ್ನು ಕಲ್ಲಿನಿಂದ ಒಡೆದು ಹಾಕಿ ಮನೆಯೊಳಗೆ ನುಗ್ಗಿ, ವೃದ್ಧೆಯ ಕುತ್ತಿಗೆಯನ್ನು ಹಿಸುಕಿ, ದೇಹದ ನಾನಾ ಭಾಗಗಳಿಗೆ ಕಚ್ಚಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಈ ಬಗ್ಗೆ ಹಾಸನ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: 25 ವರ್ಷಗಳ ಹಿಂದೆ ವ್ಯಕ್ತಿ ಸಾವು- ನಕಲಿ ವ್ಯಕ್ತಿ, ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ

    ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ಐಪಿಸಿ ಕಲಂ 448, 323, 341, 376, 506 ಅಡಿಯಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹಾಸನದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎ.ಹಿದಾಯತ್ ಉಲ್ಲಾ ಷರೀಫ್ ಅವರು ಪ್ರಕರಣದ ಎಲ್ಲಾ ಸಾಕ್ಷಿದಾರರು ಪೂರಕವಾಗಿ ಸಾಕ್ಷ್ಯ ನುಡಿದಿರುವ ಕಾರಣ ಆರೋಪಿಯ ಮೇಲಿರುವ ದೋಷಾರೋಪಣೆ ಸಾಬೀತಾಗಿದೆ ಎಂದು ತೀರ್ಮಾನಿಸಿ, ರಮೇಶ್‌ಗೆ ಭಾರತೀಯ ದಂಡ ಸಂಹಿತೆ ಕಲಂ 376, 506, 323ರ ಅಡಿ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಇದನ್ನೂ ಓದಿ: ಕೋರಮಂಗಲ ಕೆಫೆಯಲ್ಲಿ ಅಗ್ನಿ ಅವಘಡ – 54 ಪಬ್‌ಗಳಿಗೆ ಬಿಬಿಎಂಪಿಯಿಂದ ಬೀಗ

    ಸಂತ್ರಸ್ತೆಗೆ 4 ಲಕ್ಷ ರೂ. ಮೊತ್ತವನ್ನು ಡಿಎಲ್‌ಎಸ್‌ಎಯಿಂದ ಪರಿಹಾರವಾಗಿ ನೀಡುವಂತೆ ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಎಸ್ ನಾಗೇಂದ್ರ ಅವರು ವಾದ ಮಂಡಿಸಿದ್ದರು. ಇದನ್ನೂ ಓದಿ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ- ಕೊಲೆ ಶಂಕೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ಷುಲ್ಲಕ ಮೇಲ್ಮನವಿ – ಅರ್ಜಿದಾರನಿಗೆ 5 ಲಕ್ಷ ರೂ. ದಂಡ ವಿಧಿಸಿದ ಸುಪ್ರೀಂ ಕೋರ್ಟ್

    ನವದೆಹಲಿ: ಬಾಂಬೆ ಹೈಕೋರ್ಟ್‍ನ (Bombay High Court) ಮುಖ್ಯ ನ್ಯಾಯಮೂರ್ತಿಗಳ ಪ್ರಮಾಣ ವಚನ ದೋಷಪೂರಿತವಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬನಿಗೆ ಸುಪ್ರೀಂ ಕೋರ್ಟ್ (Supreme Court) 5 ಲಕ್ಷ ರೂ. ದಂಡ ವಿಧಿಸಿದೆ. ಇದು ಪ್ರಚಾರ ಪಡೆಯುವ ಕ್ಷುಲ್ಲಕ ಪ್ರಯತ್ನ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

    ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (Justice DY Chandrachud) ನೇತೃತ್ವದ ಪೀಠವು, ರಾಜ್ಯಪಾಲರಿಂದ ಪ್ರಮಾಣ ವಚನ ಬೋಧಿಸಲ್ಪಟ್ಟಿದೆ. ಪ್ರಮಾಣ ವಚನ ಸ್ವೀಕಾರದ ನಂತರ ಅಂತಹ ಆಕ್ಷೇಪಣೆಗಳನ್ನು ಎತ್ತುವಂತಿಲ್ಲ. ಅರ್ಜಿದಾರ ಕೇವಲ ಪ್ರಚಾರಕ್ಕಾಗಿ ನ್ಯಾಯಾಲಯವನ್ನು ಬಳಸಿಕೊಳ್ಳುತ್ತಿದ್ದಾನೆ. ಇಂತಹ ಕ್ಷುಲ್ಲಕ ಮೇಲ್ಮನವಿಗಳನ್ನು ನ್ಯಾಯಾಲಯದ ಸಮಯವನ್ನು ಹಾಳು ಮಾಡುತ್ತವೆ. ಆ ಮೂಲಕ ನ್ಯಾಯಾಲಯದ ಗಮನವನ್ನು ಹೆಚ್ಚು ಗಂಭೀರ ವಿಷಯಗಳಿಂದ ತಿರುಗಿಸುತ್ತವೆ ಎಂದು ಹೇಳಿದೆ. ಇದನ್ನೂ ಓದಿ: ಲಗ್ಗೆರೆಯಲ್ಲಿ ಭಾರೀ ಅಗ್ನಿ ಅವಘಡ – ಗುಜರಿ ಅಂಗಡಿ ಸೇರಿ 5 ಬೈಕ್‍ಗಳು ಭಸ್ಮ

    ಇಂತಹ ಕ್ಷುಲ್ಲಕ ಅರ್ಜಿಗೆ ನ್ಯಾಯಾಲಯವು ಗಮನಾರ್ಹ ದಂಡ ವಿಧಿಸುವ ಸಮಯ ಬಂದಿದೆ. ಅದರಂತೆ ನಾವು 5,00,000 ರೂ. ದಂಡ ವಿಧಿಸುವ ಮೂಲಕ ಅರ್ಜಿಯನ್ನು ವಜಾಗೊಳಿಸುತ್ತೇವೆ. ಅದನ್ನು ಅರ್ಜಿದಾರರು ನಾಲ್ಕು ವಾರಗಳ ಅವಧಿಯಲ್ಲಿ ಈ ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ ಠೇವಣಿ ಇಡಬೇಕು ಎಂದು ಪೀಠ ಹೇಳಿದೆ.

    ಮೇಲಿನ ಅವಧಿಯೊಳಗೆ ವೆಚ್ಚವನ್ನು ಠೇವಣಿ ಮಾಡದಿದ್ದರೆ ಲಕ್ನೋದಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಮೂಲಕ ಭೂ ಕಂದಾಯದ ಬಾಕಿಯನ್ನು ಸಂಗ್ರಹಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

    ನ್ಯಾಯಮೂರ್ತಿಗಳಿಗೆ ಬೋಧಿಸಲಾದ ಪ್ರಮಾಣ ವಚನದಿಂದ ತಾನು ಅಸಮಾಧಾನಗೊಂಡಿದ್ದೇನೆ ಎಂದು ಅಶೋಕ್ ಪಾಂಡೆ ಅರ್ಜಿ ಸಲ್ಲಿಸಿದ್ದ. ಅರ್ಜಿಯಲ್ಲಿ ಪ್ರಮಾಣ ವಚನ ಸ್ವೀಕರಿಸುವಾಗ ಮುಖ್ಯ ನ್ಯಾಯಾಧೀಶರು ತಮ್ಮ ಹೆಸರಿನ ಮುಂದೆ “I” ಎಂಬ ಅಭಿವ್ಯಕ್ತಿಯನ್ನು ಬಳಸಲಿಲ್ಲ ಎಂದಿದ್ದ. ಕೇಂದ್ರಾಡಳಿತ ಪ್ರದೇಶವಾದ ದಾಮನ್, ದಿಯು, ದಾದರ್ ಮತ್ತು ನಗರ್ ಹವೇಲಿ ಸರ್ಕಾರದ ಪ್ರತಿನಿಧಿಗಳು ಹಾಗೂ ಆಡಳಿತಾಧಿಕಾರಿಗಳನ್ನು ಪ್ರಮಾಣ ವಚನ ಸಮಾರಂಭಕ್ಕೆ ಆಹ್ವಾನಿಸಲಾಗಿಲ್ಲ. ಇದು ಸಂವಿಧಾನದ ವಿರುದ್ಧವಾಗಿದೆ ಎಂದು ಅವರು ವಾದಿಸಿದ್ದ. ಇದನ್ನೂ ಓದಿ: ಎಕ್ಸ್‌ಪ್ರೆಸ್ ವೇಯಲ್ಲಿ ಸರಣಿ ಅಪಘಾತ – ಹಲವರಿಗೆ ಗಾಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರೈಲ್ವೆಯಲ್ಲಿ ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣ – ಲಾಲು ಕುಟುಂಬಕ್ಕೆ ಜಾಮೀನು

    ರೈಲ್ವೆಯಲ್ಲಿ ಉದ್ಯೋಗಕ್ಕಾಗಿ ಭೂಮಿ ಹಗರಣ ಪ್ರಕರಣ – ಲಾಲು ಕುಟುಂಬಕ್ಕೆ ಜಾಮೀನು

    ನವದೆಹಲಿ: ಭಾರತೀಯ ರೈಲ್ವೆಯಲ್ಲಿ ಉದ್ಯೋಗಕ್ಕಾಗಿ ಭೂಮಿ ನೀಡುವ ಹರಗಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಗಳಾದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ (Lalu Prasad Yadav), ರಾಬ್ರಿ ದೇವಿ, ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಮತ್ತು ಸಂಸದೆ ಮೀಸಾ ಭಾರತಿಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಜಾಮೀನು (Bail) ನೀಡಿದೆ.

    ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ಸಿಬಿಐ ನ್ಯಾಯಾಧೀಶೆ ಗೀತಾಂಜಲಿ ಗೋಯೆಲ್ ಅವರು ಆದೇಶ ಹೊರಡಿಸಿದ್ದಾರೆ. ಜುಲೈ 3 ರಂದು ಸಿಬಿಐ ಹೊಸ ಚಾರ್ಜ್ಶೀಟ್ ಸಲ್ಲಿಸಿದ ಬಳಿಕ ನ್ಯಾಯಾಲಯವು ಸೆಪ್ಟೆಂಬರ್ 22 ರಂದು ತೇಜಸ್ವಿ ಯಾದವ್, ಲಾಲು ಯಾದವ್, ರಾಬ್ರಿ ದೇವಿ ಮತ್ತು ಇತರ 14 ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿತ್ತು.

    ಲಾಲು ಪ್ರಸಾದ್ ಅವರು 2004 ರಿಂದ 2009 ರವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ರೈಲ್ವೆಯಲ್ಲಿ ನೇಮಕಾತಿಗಳನ್ನು ಮಾಡಲು ಬದಲಿಯಾಗಿ ಅವರ ಕುಟುಂಬಕ್ಕೆ ಆಕಾಂಕ್ಷಿಗಳು ಭೂಮಿ ನೀಡಿದ್ದರು ಎಂದು ಆರೋಪಿಸಲಾಗಿದೆ. ಕೇಂದ್ರೀಯ ತನಿಖಾ ದಳ (CBI) ರೈಲ್ವೆಯಲ್ಲಿ ಮಾಡಿದ ನೇಮಕಾತಿಗಳು ಭಾರತೀಯ ರೈಲ್ವೆ ಸ್ಥಾಪಿಸಿದ ಮಾನದಂಡಗಳು ಮತ್ತು ಮಾರ್ಗಸೂಚಿಗಳಿಗೆ ಅನುಗುಣವಾಗಿಲ್ಲ ಎಂದು ಹೇಳಿಕೊಂಡಿದೆ. ಇದನ್ನೂ ಓದಿ: ಮಹಿಷಾ ದಸರಾ ದಿನವೇ ಚಾಮುಂಡಿ ಬೆಟ್ಟಕ್ಕೆ ಬಿಜೆಪಿಯಿಂದ ಜಾಥಾ – 5 ಸಾವಿರ ಮಂದಿ ಭಾಗಿ

    2022 ರ ಮೇ 18 ರಂದು ಸಿಬಿಐ ಪ್ರಕರಣವನ್ನು ದಾಖಲಿಸಿಕೊಂಡು, 2022 ರ ಅಕ್ಟೋಬರ್ 7 ರಂದು ಚಾರ್ಜ್ಶೀಟ್ ಸಲ್ಲಿಸಿತ್ತು. 2023 ರ ಫೆಬ್ರವರಿ 27 ರಂದು ನ್ಯಾಯಾಲಯವು ಮೊದಲ ಚಾರ್ಜ್ಶೀಟ್ ಗಮನಹರಿಸಿತು. ನಂತರ ಅದು ಮಾರ್ಚ್ 15 ರೊಳಗೆ ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಿತು. ಯಾವುದೇ ಬಂಧನವಿಲ್ಲದೆ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ. ಇದನ್ನೂ ಓದಿ: ಸಿಕ್ಕಿಂನಲ್ಲಿ ಮೇಘಸ್ಫೋಟ – ಹಠಾತ್ ಪ್ರವಾಹದಲ್ಲಿ 23 ಸೈನಿಕರು ನಾಪತ್ತೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚೈತ್ರಾ ಕುಂದಾಪುರ 10 ದಿನ ಪೊಲೀಸ್ ಕಸ್ಟಡಿಗೆ

    ಚೈತ್ರಾ ಕುಂದಾಪುರ 10 ದಿನ ಪೊಲೀಸ್ ಕಸ್ಟಡಿಗೆ

    ಬೆಂಗಳೂರು: ವಂಚನೆ (Fraud) ಆರೋಪದಡಿ ಚೈತ್ರಾ ಕುಂದಾಪುರ (Chaithra Kundapura) ಮತ್ತು ತಂಡವನ್ನು ಬಂಧಿಸಿ ಸಿಸಿಬಿ (CCB) ಕಚೇರಿಗೆ ಹಾಜರುಪಡಿಸಿದ್ದು, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ (Police Custody) ತೆಗೆದುಕೊಳ್ಳುವಂತೆ 1ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.

    ಇವರೊಂದಿಗೆ 6 ಜನ ಆರೋಪಿಗಳನ್ನೂ ಸಹ ಸೆಪ್ಟೆಂಬರ್ 23 ರವರೆಗೆ ಸಿಸಿಬಿ ಪೊಲೀಸ್ ಕಸ್ಟಡಿಯಲ್ಲಿರಿಸಿ ವಿಚಾರಣೆ ನಡೆಸುವಂತೆ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಈ ವೇಳೆ ಪೊಲೀಸರು ನನಗೆ ತುಂಬಾ ಹೊಡೆದಿದ್ದಾರೆ ಎಂದು ಚೈತ್ರಾ ಕುಂದಾಪುರ ನ್ಯಾಯಾಧೀಶರ ಬಳಿ ಕಣ್ಣೀರಿಟ್ಟಿದ್ದು, ನಾನು ಇವರ ವಿರುದ್ಧ ದೂರು ಕೊಡಬೇಕು. ಯಾರಿಗೆ ಕೊಡಲಿ ಎಂದು ನ್ಯಾಯಾಧೀಶರಿಗೆ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸರ್ಕಾರ ಅವಕಾಶ ಕೊಡ್ತಿಲ್ಲ: ಅರವಿಂದ ಬೆಲ್ಲದ್

    ನನಗೆ ಉಡುಪಿ ಪೊಲೀಸರು ತೊಂದರೆ ಕೊಟ್ಟಿದ್ದಾರೆ. ಬೆಂಗಳೂರು ಪೊಲೀಸರು ಯಾವುದೇ ತೊಂದರೆ ಕೊಟ್ಟಿಲ್ಲ. ಬಂಧನದ ಕುರಿತು ನಮ್ಮ ಕುಟುಂಬಸ್ಥರಿಗೆ ಮಾಹಿತಿ ನೀಡಿಲ್ಲ. ಫೋನ್ ನಂಬರ್ ಕೊಟ್ಟರೂ ಕಾಲ್ ಮಾಡಿಲ್ಲ. ದೂರು ಯಾರು ಕೊಟ್ಟಿದ್ದಾರೆ? ಏನು ದೂರು ಎಂಬ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಚೈತ್ರಾ ಕುಂದಾಪುರ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ನಿಫಾ ವೈರಸ್ – ಎಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಅಧಿಕಾರಿಗಳಿಗೆ ಗುಂಡೂರಾವ್ ಸೂಚನೆ

    ಎಲ್ಲಾ ಆರೋಪಿಗಳನ್ನು ಯಾವಾಗ ಅರೆಸ್ಟ್ ಮಾಡಿದ್ದಾರೆ ಎಂದು ನ್ಯಾಯಾಧೀಶರು ಚೈತ್ರಾ ಅವರನ್ನು ಪ್ರಶ್ನೆ ಮಾಡಿದ್ದು, ಮಂಗಳವಾರ ಸಂಜೆ 6 ಗಂಟೆಗೆ ನನ್ನನ್ನು ಅರೆಸ್ಟ್ ಮಾಡಿದ್ದಾರೆ. ಅಲ್ಲದೇ ನನ್ನ ತಾಯಿ ಜೊತೆ ಮಾತನಾಡಲು ಅವಕಾಶ ನೀಡಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡಲ್ಲ: ಸರ್ವಪಕ್ಷ ಸಭೆಯಲ್ಲಿ ಒಮ್ಮತದ ನಿರ್ಣಯ

    ಉದ್ಯಮಿಗೆ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ವಂಚಿಸಿ ತಲೆಮರೆಸಿಕೊಂಡಿದ್ದ ಚೈತ್ರಾ ಕುಂದಾಪುರ ಮತ್ತು ಸಹಚರರನ್ನು ಉಡುಪಿಯಲ್ಲಿ (Udupi) ಸಿಸಿಬಿ ಪೊಲೀಸರು ಬಂಧಿಸಿ ಬೆಂಗಳೂರಿನ (Bengaluru) 1ನೇ ಎಸಿಎಂಎಂ ಕೋರ್ಟ್‌ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು. ವಂಚನೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಚೈತ್ರಾ ಕುಂದಾಪುರ, ಶ್ರೀಕಾಂತ್, ಗಗನ್, ರಮೇಶ್, ಧನ್ ರಾಜ್, ಪ್ರಜ್ವಲ್ ಸೇರಿ ಆರು ಮಂದಿ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಇದನ್ನೂ ಓದಿ: ಕುಡಿಯುವ ನೀರಿನ ಹೆಸರಿನಲ್ಲಿ ತಮಿಳುನಾಡು ರೈತರಿಗೆ ಅನ್ಯಾಯ: ತ.ನಾಡು ಸಚಿವ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 22ರ ಹರೆಯದಲ್ಲಿ ಎಮ್ಮೆ ಕದ್ದವ 80ನೇ ವಯಸ್ಸಿನಲ್ಲಿ ಸಿಕ್ಕಿ ಬಿದ್ದ!

    22ರ ಹರೆಯದಲ್ಲಿ ಎಮ್ಮೆ ಕದ್ದವ 80ನೇ ವಯಸ್ಸಿನಲ್ಲಿ ಸಿಕ್ಕಿ ಬಿದ್ದ!

    ಬೀದರ್: 58 ವರ್ಷಗಳಿಂದ ಪೊಲೀಸರ (Police) ಕೈಗೇ ಸಿಗದೇ ನ್ಯಾಯಾಲಯಕ್ಕೂ (Court) ಹಾಜರಾಗದೇ ತಲೆ ಮರೆಸಿಕೊಂಡಿದ್ದ ಎಮ್ಮೆ ಕಳ್ಳನನ್ನು ಬೀದರ್ ಪೊಲೀಸರು (Bidar Police) ಬಂಧಿಸಿದ್ದಾರೆ.

    ಮಹಾರಾಷ್ಟ್ರದ ಮೂಲದ ಕಿಶನ್ ಚಂದರ್ ಹಾಗೂ ಗಣಪತಿ ವಿಠಲ್ ವಾಗ್ಮೋರೆ 1965ರಲ್ಲಿ 2 ಎಮ್ಮೆ, 1 ಕರು ಕದ್ದಿದ್ದರು. ಎಮ್ಮೆ ಮಾಲೀಕ ಮರಳೀಧರಾವ್ ಕುಲಕರ್ಣಿ ಎಂಬುವರು ಭಾಲ್ಕಿಯ ಮಹಕರ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಇದನ್ನೂ ಓದಿ: ಎಂಜಿನಿಯರ್‌ ಮಿದುಳು ನಿಷ್ಕ್ರಿಯ –ಬೆಂಗಳೂರಿನಿಂದ ತಮಿಳುನಾಡಿಗೆ ಜೀವಂತ ಹೃದಯ ರವಾನೆ

     

    ಜಾಮೀನು ಸಿಕ್ಕಿದ ಬಳಿಕ ಇಬ್ಬರು ಕೋರ್ಟ್‌ಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದರು. ಸಮನ್ಸ್, ನೋಟಿಸ್, ವಾರೆಂಟ್ ನೀಡಿದ್ದರೂ ಆರೋಪಿಗಳು ಕ್ಯಾರೇ ಅಂದಿರಲಿಲ್ಲ. ಈ ಪೈಕಿ 2006 ರಲ್ಲಿ ಮೊದಲ ಆರೋಪಿ ಕಿಶನ್ ಚಂದರ್ ಮೃತ ಪಟ್ಟಿದ್ದು, ಈ ಪ್ರಕರಣದ ಎರಡನೇ ಆರೋಪಿ ಪತ್ತೆಗಾಗಿ ಎಸ್‌ಪಿ ಚೆನ್ನಬಸವಣ್ಣ ಲಂಗೋಟಿ ವಿಶೇಷ ತಂಡ ರಚನೆ ಮಾಡಿದ್ದರು.

    ಈಗ ಮಹಾರಾಷ್ಟ್ರದ ಲಾತೂರಿನ ಟಾಕಳಗಾಂವ್ ಗ್ರಾಮದಲ್ಲಿ ಬೀದರ್ ಪೊಲೀಸರು ಎರಡನೇ ಆರೋಪಿ ಗಣಪತಿ ವಿಠಲ್ ವಾಗ್ಮೋರೆಯನ್ನು ಬಂಧಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಬ್ರೇಕ್- 14 ಉಗ್ರರ ಆಸ್ತಿ ಮುಟ್ಟುಗೋಲಿಗೆ ಪೊಲೀಸರ ಕ್ರಮ

    ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಬ್ರೇಕ್- 14 ಉಗ್ರರ ಆಸ್ತಿ ಮುಟ್ಟುಗೋಲಿಗೆ ಪೊಲೀಸರ ಕ್ರಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದ್ದ ಪಾಕ್ (Pakistan) ಮೂಲದ ಭಯೋತ್ಪಾದಕರ ಆಸ್ತಿಯನ್ನು ಪೊಲೀಸರು (Police) ಮುಟ್ಟುಗೋಲು ಹಾಕಿಕೊಂಡಿದ್ದಾರೆ.

    ಈಗಾಗಲೇ ಇಬ್ಬರು ಭಯೋತ್ಪಾದಕರ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ. ಅಲ್ಲದೇ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಿಂದ (POK) ಕಾರ್ಯನಿರ್ವಹಿಸುತ್ತಿರುವ ಇತರ 14 ಭಯೋತ್ಪಾದಕರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ. ಶೀಘ್ರದಲ್ಲೇ ಎಲ್ಲಾ ಭಯೋತ್ಪಾದಕರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬಾಲಕಿಯನ್ನು ಅಪಹರಿಸಿ, ಒಂದೂವರೆ ತಿಂಗಳು ನಿರಂತರವಾಗಿ ರೇಪ್-‌ ವ್ಯಕ್ತಿ ಅರೆಸ್ಟ್

    ಜಮ್ಮುವಿನ ದೋಡಾ ಜಿಲ್ಲೆಯಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುತ್ತಿರುವ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಘೋಷಿತ ಅಪರಾಧಿಗಳಾದ ಲಾಲ್ ದಿನ್‍ಗೆ ಸೇರಿದ ಕಿಶ್ತ್‍ವಾರ್‍ನ ಮುಗಲ್ ಮೈದಾನದಲ್ಲಿರುವ ಹಾಗೂ ಅಬ್ದುಲ್ ರಶೀದ್‍ಗೆ ಸೇರಿದ ಫಾಗ್ಸೂ ಥಾತ್ರಿ ಗ್ರಾಮದಲ್ಲಿರುವ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು 16 ಘೋರ ಭಯೋತ್ಪಾದಕ ಕೃತ್ಯಗಳಲ್ಲಿ ಈ ಇಬ್ಬರೂ ಭಾಗಿಯಾಗಿದ್ದಾರೆ. ಈ ಇಬ್ಬರೂ ತಲೆ ಮರೆಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ದೋಡಾ ಎಸ್‍ಎಸ್‍ಪಿ ಅಬ್ದುಲ್ ಖಯ್ಯೂಮ್ ನ್ಯಾಯಾಲಯದ (Court) ಆದೇಶದಂತೆ ನಾವು 14 ಪ್ರಕರಣಗಳಲ್ಲಿ ಆಸ್ತಿ ವಿವರಗಳನ್ನು ಕಂದಾಯ ಇಲಾಖೆಯಿಂದ ಕೇಳುತ್ತಿದ್ದೇವೆ. ವಿವರ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಚಾಲಕನಿಗೆ ತಲೆ ಸುತ್ತು ಬಂದು ಡಿವೈಡರ್‌ಗೆ ಡಿಕ್ಕಿಯಾಗಿ BMTC ವೋಲ್ವೋ ಬಸ್ ಪಲ್ಟಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಗ್ರಾ.ಪಂ. ಅಧಿಕಾರ ಅನುಭವಿಸಿದ ಮಹಿಳೆಗೆ 7 ವರ್ಷ ಜೈಲು

    ಹಾವೇರಿ: ಪರಿಶಿಷ್ಟ ಜಾತಿ ಪ್ರಮಾಣಪತ್ರ (Caste Certificate) ಪಡೆಯಲು ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿದ ಶಿಗ್ಗಾಂವಿ (Shiggavi) ತಾಲೂಕು ವನಹಳ್ಳಿ ಗ್ರಾಮದ ಲಕ್ಷ್ಮಿ ಕೋಂ.ಮಾರುತಿ ಕಬ್ಬೇರ ಎಂಬಾಕೆಗೆ 7 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 19,000 ರೂ. ದಂಡ (Penalty) ವಿಧಿಸಿ ಹಾವೇರಿಯ (Haveri) ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಎಲ್.ಲಕ್ಷ್ಮೀ ನಾರಾಯಣ ತೀರ್ಪು ನೀಡಿದ್ದಾರೆ.

    ಶಿಗ್ಗಾಂವಿ ತಾಲೂಕು ವನಹಳ್ಳಿ ಗ್ರಾಮದ ಲಕ್ಷ್ಮಿ ಹಿಂದೂ ಗಂಗಾಮತಕ್ಕೆ (ಪ. ವರ್ಗ-01) ಸೇರಿದ್ದರೂ ಸಹ, ಸುಳ್ಳು ವ್ಯಾಸಂಗ ಪ್ರಮಾಣಪತ್ರ ಹಾಗೂ ಸುಳ್ಳು ಅಫಿಡವಿಟ್ ಘೋಷಣಾ ಪತ್ರ ಮತ್ತು ಇತರೆ ದಾಖಲಾತಿಗಳನ್ನು ಸೃಷ್ಟಿಸಿ ಜೂನ್ 04, 2015ರಂದು ಶಿಗ್ಗಾಂವಿ ತಹಶೀಲ್ದಾರ್ ಕಚೇರಿಯಲ್ಲಿ ಸಲ್ಲಿಸಿದ್ದಾರೆ. ಹಿಂದೂ ಗಂಟಿಚೋರ್ಸ್ ಪರಿಶಿಷ್ಠ ಜಾತಿಯ ಪ್ರಮಾಣಪತ್ರ ಪಡೆದು ಹನುಮರಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಸ್ಥಾನಕ್ಕೆ ಪರಿಶಿಷ್ಠ ಜಾತಿ ಮಹಿಳೆಗೆ ಮೀಸಲಿದ್ದ ಸ್ಥಾನಕ್ಕೆ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ನಂತರ ಎಸ್‌ಸಿ ಸ್ಥಾನಕ್ಕೆ ಮೀಸಲಾಗಿದ್ದ ಗ್ರಾ.ಪಂ (Grama Panchayat) ಅಧ್ಯಕ್ಷೆಯಾಗಿಯೂ ಆಯ್ಕೆಯಾಗಿದ್ದರು. ಇದನ್ನೂ ಓದಿ: ಇನ್ಮುಂದೆ ನೂತನ ಇಂದಿರಾ ಕ್ಯಾಂಟೀನ್ ಊಟದ ದರ 60 ರೂ.!

    ಸುಳ್ಳು ಜಾತಿಪ್ರಮಾಣಪತ್ರ ಪಡೆದು ಸರ್ಕಾರಕ್ಕೆ ಮತ್ತು ನೈಜ ಪರಿಶಿಷ್ಠ ಜಾತಿಯ ಅಭ್ಯರ್ಥಿಗೆ ಮೋಸಮಾಡಿದ ಕುರಿತಂತೆ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ತನಿಖಾಧಿಕಾರಿ ದಾವಣಗೆರೆ ಡಿಸಿಆರ್‌ಒ ಪೊಲೀಸ್ ಇನ್ಸ್ಪೆಕ್ಟರ್ ಟಿಜಿ ಶ್ರೀಧರ ಶಾಸ್ತ್ರಿ ಅವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದನ್ನೂ ಓದಿ: ಸ್ನೇಹಿತನ ಮಗನನ್ನು ಅಪಹರಿಸಿ ಕೊಲೆ- ಅಪರಾಧಿಗೆ ಜೀವಾವಧಿ ಶಿಕ್ಷೆ, 3.25 ಲಕ್ಷ ರೂ. ದಂಡ

    ಲಕ್ಷ್ಮಿ ಮೇಲೆ ಕಲಂ:198, 420, 465, 468, 471 ಭಾ.ದಂ.ಸಂ. ಮತ್ತು 3(1)ಕ್ಯೂ ಎಸ್‌ಸಿ/ಎಸ್‌ಟಿ (ಪಿಎ) ತಿದ್ದುಪಡಿ ಕಾಯ್ದೆ 2015ರ ಅಡಿಯಲ್ಲಿ ಆಪಾದನೆಗಳು ರುಜುವಾತದ ಹಿನ್ನೆಲೆಯಲ್ಲಿ ಶಿಕ್ಷೆ ಹಾಗೂ ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಸರೋಜಾ ಜಿ.ಕೂಲಗಿಮಠ ಅವರು ವಾದ ಮಂಡಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ – ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಗೆ ನ್ಯಾಯಾಂಗ ಬಂಧನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ನೇಹಿತನ ಮಗನನ್ನು ಅಪಹರಿಸಿ ಕೊಲೆ- ಅಪರಾಧಿಗೆ ಜೀವಾವಧಿ ಶಿಕ್ಷೆ, 3.25 ಲಕ್ಷ ರೂ. ದಂಡ

    ಸ್ನೇಹಿತನ ಮಗನನ್ನು ಅಪಹರಿಸಿ ಕೊಲೆ- ಅಪರಾಧಿಗೆ ಜೀವಾವಧಿ ಶಿಕ್ಷೆ, 3.25 ಲಕ್ಷ ರೂ. ದಂಡ

    ಶಿವಮೊಗ್ಗ: ಸ್ನೇಹಿತನ ಮೇಲಿನ ದ್ವೇಷಕ್ಕೆ ಆತನ ಮಗನನ್ನು ಅಪಹರಿಸಿ, ನದಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದ ವ್ಯಕ್ತಿಗೆ ಶಿವಮೊಗ್ಗ (Shivamogga) ನ್ಯಾಯಾಲಯ (Court) ಜೀವಾವಧಿ ಶಿಕ್ಷೆ (Life Imprisonment) ಮತ್ತು 3.25 ಲಕ್ಷ ರೂ. ದಂಡ (Penalty) ವಿಧಿಸಿದೆ.

    ಜಿಲ್ಲೆಯ ಶಿಕಾರಿಪುರ (Shikaripura) ತಾಲೂಕಿನ ಚುರ್ಚಿಗುಂಡಿ ಗ್ರಾಮದ ಎನ್‌ಎಂ ಬಸವರಾಜಪ್ಪ (40) ಶಿಕ್ಷೆಗೆ ಒಳಗಾದ ಅಪರಾಧಿ. ಶಿವಮೊಗ್ಗದ ಆಲ್ಕೊಳ ನಿವಾಸಿ ನಿಂಗರಾಜು ಮತ್ತು ಬಸವರಾಜಪ್ಪ ಮೊದಲಿನಿಂದ ಪರಿಚಿತರು. ನಿಂಗರಾಜು ಮೇಲಿನ ಹಳೇ ದ್ವೇಷಕ್ಕೆ (Feud) ಆತನ ಮಗ ಪ್ರೇಮ್ ಕುಮಾರ್‌ನನ್ನು (8) ಬಸವರಾಜಪ್ಪ ಅಪಹರಣ (Kidnap) ಮಾಡಿದ್ದ. 2017ರ ಮಾರ್ಚ್ 2 ರಂದು ಆಳ್ಕೊಳ ಸರ್ಕಲ್‌ನಿಂದ ಅಪಹರಣ ಮಾಡಿ, ಚುರ್ಚಿಗುಂಡಿ ಹತ್ತಿರ ಕುಮದ್ವತಿ ನದಿ ಬಳಿ ಕರೆದೊಯ್ದು ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ – ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿಗೆ ನ್ಯಾಯಾಂಗ ಬಂಧನ

    ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿತ್ತು. ದೊಡ್ಡಪೇಟೆ ಠಾಣೆ ಇನ್ಸ್ಪೆಕ್ಟರ್ ಕೆಟಿ ಗುರುರಾಜ್ ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಲ್ಲದೇ ಆತನ ವಿರುದ್ಧ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದನ್ನೂ ಓದಿ: ವಿಪಕ್ಷಗಳ ಮೈತ್ರಿಯಲ್ಲಿರುವ INDIA ಹೆಸರನ್ನು ನಿರ್ಬಂಧಿಸಿ – ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

    ಸರ್ಕಾರದ ಪರವಾಗಿ ವಕೀಲೆ ಪುಷ್ಪಾ ವಾದ ಮಂಡಿಸಿದ್ದು, ವಿಚಾರಣೆ ನಡೆಸಿದ ಬಳಿಕ ನ್ಯಾಯಾಧೀಶೆ ಬಿಆರ್ ಪಲ್ಲವಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಇದನ್ನೂ ಓದಿ: ಭಾಷಣದಲ್ಲಿ ಮತದಾರರಿಗೆ ಆಮಿಷ – ಜೆಪಿ ನಡ್ಡಾ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ ರದ್ದು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬುರ್ಖಾ ಧರಿಸಿ ಲೇಡಿಸ್ ವಾಶ್ ರೂಮ್‍ನಲ್ಲಿ ಕ್ಯಾಮೆರಾ ಇರಿಸಿದ ಯುವಕ ಅರೆಸ್ಟ್

    ಬುರ್ಖಾ ಧರಿಸಿ ಲೇಡಿಸ್ ವಾಶ್ ರೂಮ್‍ನಲ್ಲಿ ಕ್ಯಾಮೆರಾ ಇರಿಸಿದ ಯುವಕ ಅರೆಸ್ಟ್

    ತಿರುವನಂತನಪುರಂ: ಕೇರಳದ (Kerala) ಜನಪ್ರಿಯ ಲುಲು ಮಾಲ್‍ನಲ್ಲಿ ಮಹಿಳೆಯಂತೆ ಬುರ್ಖಾ ಧರಿಸಿ ಮಹಿಳೆಯರ ವಾಶ್‍ರೂಮ್‍ಗೆ ತೆರಳಿ ಕ್ಯಾಮೆರಾ ಇರಿಸಿದ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.

    ಆರೋಪಿ 23 ವರ್ಷದ ಐಟಿ ಉದ್ಯೋಗಿಯಾಗಿದ್ದಾನೆ. ಆರೋಪಿ ಮೊಬೈಲ್ (Mobile) ಫೋನ್‍ನಲ್ಲಿ ವೀಡಿಯೋ ರೆಕಾರ್ಡ್ ಮಾಡಿದ್ದಾನೆ. ಆತನ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66 ಇ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿ ವಿಡಿಯೋ ಚಿತ್ರೀಕರಣ ಕೇಸ್ – ವಿದ್ಯಾರ್ಥಿನಿಯರು, ಕಾಲೇಜ್ ವಿರುದ್ಧ ಎಫ್‌ಐಆರ್ ದಾಖಲು

    ಆರೋಪಿ ತನ್ನ ಫೋನ್‍ನ್ನು ಸಣ್ಣ ರಟ್ಟಿನ ಬಾಕ್ಸ್‌ನಲ್ಲಿ ಇರಿಸಿದ್ದ. ದೃಶ್ಯಗಳನ್ನು ರೆಕಾರ್ಡ್ ಮಾಡಲು ಕ್ಯಾಮೆರಾ ಬಳಿ ರಂಧ್ರ ಮಾಡಿ ಅದನ್ನು ವಾಶ್ ರೂಂನ ಬಾಗಿಲಿಗೆ ಅಂಟಿಸಿದ್ದ. ಬಳಿಕ ಆತ ಬಾಗಿಲಿನ ಮುಂದೆ ನಿಂತಿದ್ದ. ಆತನ ಅನುಮಾನಾಸ್ಪದ ವರ್ತನೆಯ ಮೇಲೆ ಮಾಲ್‍ನ ಭದ್ರತಾ ಸಿಬ್ಬಂದಿ ವಿಚಾರಿಸಿದ್ದಾರೆ. ಬಳಿಕ ಮೊಬೈಲ್ ವಶಕ್ಕೆ ಪಡೆದು ಪರಿಶೀಲಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

    ಆರೋಪಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ (Court) ಹಾಜರುಪಡಿಸಲಾಗಿದ್ದು, ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ಈ ಹಿಂದೆ ಈ ರೀತಿಯ ಕೃತ್ಯ ಎಸಗಿರುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿ ಮಾದರಿ ಮತ್ತೊಂದು ಕೇಸ್‌; ಹಾಸ್ಟೆಲ್‌ ಹುಡ್ಗೀರ ಬೆತ್ತಲೆ ವೀಡಿಯೋ ಸೆರೆ ಹಿಡಿದು ಸೀನಿಯರ್‌ಗೆ ಕಳಿಸ್ತಿದ್ದ ವಿದ್ಯಾರ್ಥಿನಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]