Tag: ನ್ಯಾಯಾಲಯ

  • ಕೋಲ್ಕತ್ತಾ ವೈದ್ಯೆ ಅತ್ಯಾಚಾರಿ ಆರೋಪಿಗೆ ಜಾಮೀನು ನೀಡಬೇಕೆ? – ಸಿಬಿಐ ಪರ ವಕೀಲರ ವಿರುದ್ಧ ಕೋರ್ಟ್‌ ಗರಂ

    ಕೋಲ್ಕತ್ತಾ ವೈದ್ಯೆ ಅತ್ಯಾಚಾರಿ ಆರೋಪಿಗೆ ಜಾಮೀನು ನೀಡಬೇಕೆ? – ಸಿಬಿಐ ಪರ ವಕೀಲರ ವಿರುದ್ಧ ಕೋರ್ಟ್‌ ಗರಂ

    – ವಾದ ಮಂಡಿಸಲು ಕೋರ್ಟ್‌ಗೆ ತಡವಾಗಿ ಬಂದಿದ್ದಕ್ಕೆ ತರಾಟೆ

    ಕೋಲ್ಕತ್ತಾ: ಟ್ರೈನಿ ವೈದ್ಯೆ ಅತ್ಯಾಚಾರ ಪ್ರಕರಣದ ವಿಚಾರಣೆ ವೇಳೆ ಕೋರ್ಟ್‌ಗೆ ಸಕಾಲಕ್ಕೆ ಹಾಜರಾಗದಿದ್ದಕ್ಕೆ ಸಿಬಿಐ ತನಿಖಾಧಿಕಾರಿ ಹಾಗೂ ವಕೀಲರ ವಿರುದ್ಧ ಸೀಲ್ದಾ ಕೋರ್ಟ್‌ ಗರಂ ಆಗಿದೆ. ಅತ್ಯಾಚಾರ ಮತ್ತು ಕೊಲೆ ಆರೋಪಿಗೆ ಜಾಮೀನು ನೀಡಬೇಕಾ ಎಂದು ಕೋರ್ಟ್‌ ತರಾಟೆಗೆ ತೆಗೆದುಕೊಂಡಿತು.

    ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ನಡೆಯಿತು. ಆದರೆ, ಸಿಬಿಐನ ತನಿಖಾಧಿಕಾರಿ ಕೋರ್ಟ್‌ನಲ್ಲಿ ಹಾಜರಿರಲಿಲ್ಲ. ಇತ್ತ ತನಿಖಾ ಸಂಸ್ಥೆಯ ವಕೀಲರು 40 ನಿಮಿಷ ತಡವಾಗಿ ಹಾಜರಾದರು. ಇದರಿಂದ ಕೋಪಗೊಂಡ ನ್ಯಾಯಾಲಯ, ಪ್ರಕರಣದ ಪ್ರಮುಖ ಆರೋಪಿಗೆ ಜಾಮೀನು ನೀಡಬೇಕೆ ಎಂದು ಗರಂ ಆಯಿತು. ತನಿಖಾ ಸಂಸ್ಥೆಯ ಈ ನಡೆ ಆಲಸ್ಯ ಮನೋಭಾವವನ್ನು ತೋರಿಸುತ್ತದೆ ಎಂದು ಚಾಟಿ ಬೀಸಿತು.

    ಆರ್‌ಜಿ ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಂದ ಪ್ರಕರಣದಲ್ಲಿ ಬಂಧಿತನಾಗಿರುವ ಸಂಜಯ್‌ ರಾಯ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು.

    ರಾಯ್ ಪರ ವಕೀಲರು ಜಾಮೀನಿಗಾಗಿ ವಾದ ಮಂಡಿಸುತ್ತಿದ್ದಂತೆ, ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಪಮೇಲಾ ಗುಪ್ತಾ ಅವರಿಗೆ ಪಬ್ಲಿಕ್ ಪ್ರಾಸಿಕ್ಯೂಟರ್ ತಡವಾಗಿ ಬರುತ್ತಾರೆ ಎಂದು ತಿಳಿಸಲಾಯಿತು. ಅದಕ್ಕೆ ಮ್ಯಾಜಿಸ್ಟ್ರೇಟ್, ನಾನು ಸಂಜಯ್ ರಾಯ್‌ಗೆ ಜಾಮೀನು ನೀಡಬೇಕೇ? ಇದು ಸಿಬಿಐನ ಆಲಸ್ಯ ಮನೋಭಾವ ತೋರಿಸುತ್ತದೆ. ಇದು ಅತ್ಯಂತ ದುರದೃಷ್ಟಕರ ಎಂದು ಗರಂ ಆದರು.

    ವಕೀಲರು ಅಂತಿಮವಾಗಿ ಸುಮಾರು 40 ನಿಮಿಷಗಳ ಕೋರ್ಟ್‌ಗೆ ಬಂದರು. ವಿಳಂಬಕ್ಕೆ ಕಾರಣ ತಿಳಿಸಿದರು. ನಂತರ ವಾದಗಳು ಮುಂದುವರೆದವು. ಎರಡೂ ಕಡೆಯವರ ವಾದ-ಪ್ರತಿವಾದ ಆಲಿಸಿದ ಕೋರ್ಟ್‌ ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿತು.

  • ಉದ್ಯಮಿ ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್

    ಉದ್ಯಮಿ ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್

    ನವದೆಹಲಿ: ಉದ್ಯಮಿ ವಿಜಯ್ ಮಲ್ಯ (Vijay Mallya) ವಿರುದ್ಧ ಮುಂಬೈ (Mumbai) ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರೆಂಟ್ (Non Bailable Warrant)  ಜಾರಿ ಮಾಡಿದೆ.

    ಬ್ಯಾಂಕ್‌ಗೆ ಸಾಲ ಮರು ಪಾವತಿಸದ ಹಿನ್ನೆಲೆ ವಾರೆಂಟ್ ಜಾರಿ ಮಾಡಲಾಗಿದೆ. ವಿಜಯ್ ಮಲ್ಯ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಿಂದ ಲೋನ್ ಪಡೆದಿದ್ದು, ಸಾಲ ಮರುಪಾವತಿ ಮಾಡಿಲ್ಲ. ಮಲ್ಯ 2007-2012ರ ಅವಧಿಯಲ್ಲಿ 180 ಕೋಟಿ ರೂ. ಸಾಲ ಪಡೆದಿದ್ದರು. ಇದನ್ನೂ ಓದಿ: ಮುಂದಿನ 3 ಗಂಟೆಗಳಲ್ಲಿ ಕರಾವಳಿ, ಮಧ್ಯ ಕರ್ನಾಟಕದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸಾಧ್ಯತೆ

    ಪ್ರಕರಣದಲ್ಲಿ ಮಲ್ಯ ಸೇರಿ ಹತ್ತು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದೀಗ ವಿಜಯ್ ಮಲ್ಯಗೆ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದ್ದು, ಬಾಕಿ ಉಳಿದ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಇಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

  • ಸ್ವಾತಿ ಮಲಿವಾಲ್ ದೌರ್ಜನ್ಯ ಪ್ರಕರಣ – ಬಿಭವ್ ಕುಮಾರ್ ಜಾಮೀನು ಅರ್ಜಿ ವಜಾ

    ಸ್ವಾತಿ ಮಲಿವಾಲ್ ದೌರ್ಜನ್ಯ ಪ್ರಕರಣ – ಬಿಭವ್ ಕುಮಾರ್ ಜಾಮೀನು ಅರ್ಜಿ ವಜಾ

    ನವದೆಹಲಿ: ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ (Swati Maliwal) ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಪಟ್ಟಿರುವ ಸಿಎಂ ಅರವಿಂದ್ ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್‌ಗೆ‌ (Bibhav Kumar) ಜಾಮೀನು ನೀಡಲು ತೀಸ್ ಹಜಾರಿ ಕೋರ್ಟ್ ನಿರಾಕರಿಸಿದೆ. ಎರಡೂ ಕಡೆಯ ವಾದ ಆಲಿಸಿದ ಬಳಿಕ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಗೌರವ್ ಗೋಯಲ್ ಅವರು ಬಿಭವ್ ಜಾಮೀನು (Bail) ಅರ್ಜಿಯನ್ನು ತಿರಸ್ಕರಿಸಿದರು.

    ಬಿಭವ್ ಕುಮಾರ್ ಪರ ವಾದ ಮಂಡಿಸಿದ ಹಿರಿಯ ವಕೀಲ ಎನ್ ಹರಿಹರನ್, ಸಂಸದೆ ಸ್ವಾತಿ ಮಲಿವಾಲ್ ಸಮಯ ಪಡೆಯದೇ ಕೇಜ್ರಿವಾಲ್ ಅವರ ನಿವಾಸಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಈ ವೇಳೆ ಬಿಭವ್ ಕುಮಾರ್ ಸಿಎಂ ಮನೆಯೊಳಗೆ ಇರಲಿಲ್ಲ. ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನು ಯಾರಾದಾರೂ ಹೀಗೆ ಪ್ರವೇಶಿಸಬಹುದೇ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಅದಾನಿ ಗ್ರೂಪ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಮೋದಿ, ರಾಹುಲ್‌ಗೆ ನಿರ್ದೇಶಿಸಿ: ಕೋರ್ಟ್‌ಗೆ ಅರ್ಜಿ ಸಲ್ಲಿಕೆ

     

    ಭೇಟಿ ಸಮಯ ನಿಗಧಿಯಾಗದ ಹಿನ್ನೆಲೆ ಅವರನ್ನು ಭದ್ರತಾ ಸಿಬ್ಬಂದಿ ತಡೆದರು. ಕಾಯುವ ಕೊಠಡಿಯಲ್ಲಿ ಕೂರಿಸಲು ಮುಂದಾದರು. ಬಳಿಕ ಬಿಭವ್ ಕುಮಾರ್ ಅವರೊಂದಿಗೆ ಮಾತನಾಡಲು ಸೆಕ್ಯೂರಿಟಿಯನ್ನು ಹೇಳಿದರು ಎಂದು ರಕ್ಷಣಾ ವಕೀಲರು ಹೇಳಿದರು. ಅವರ ಮೇಲೆ ಹಲ್ಲೆಯಾಗಿದೆ ಎನ್ನಲಾಗುತ್ತಿದೆ. ಆದರೆ ಅವರಿಗೆ ಯಾವುದೇ ಗಂಭೀರ ಗಾಯವಾಗಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನೂ ಓದಿ: ಮುಂಬೈ ತಾಜ್‌ ಹೋಟೆಲ್‌, ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ – ಉತ್ತರ ಪ್ರದೇಶದಲ್ಲಿ ಲೊಕೇಶನ್‌ ಪತ್ತೆ!

    ಘಟನೆ ನಡೆದ ಸ್ಥಳವನ್ನು ಒಮ್ಮೆ ನೋಡಿ. ಇಂತಹ ಘಟನೆ ಅಲ್ಲಿ ಹೇಗೆ ನಡೆಯುತ್ತದೆ? ದೇಹದ ಪ್ರಮುಖ ಭಾಗದಲ್ಲಿ ಯಾವುದೇ ಘೋರವಾದ ಗಾಯವಿಲ್ಲ. ಗಾಯಗಳು ಸ್ವಯಂ ಪ್ರೇರಿತವಾಗಬಹುದು. ಮಲಿವಾಲ್ ಮಾಡಿದ ಎಲ್ಲಾ ಆರೋಪಗಳು ಪೂರ್ವ ಯೋಜಿತ ಮತ್ತು ಅವಳ ಕಥೆಗೆ ಸರಿಹೊಂದುವಂತೆ ಟೈಲರ್-ಮೇಡ್. ಈ ಸಂಪೂರ್ಣ ಎಫ್‌ಐಆರ್ ನಂತರದ ಚಿಂತನೆಯ ಫಲಿತಾಂಶವಾಗಿದೆ. ನಾನು ಜಾಮೀನು ಮಾತ್ರ ಬಯಸುತ್ತಿದ್ದೇನೆ, ಖುಲಾಸೆಗೊಳಿಸುವುದಲ್ಲ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಸಮಗ್ರ ಕಾರ್ಯಾಚರಣೆಗೆ ಟಾಸ್ಕ್‌ ಫೋರ್ಸ್‌ ರಚನೆ

    ಸ್ವಾತಿ ಮಲಿವಾಲ್ ಪರ ವಾದ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್, ಆರೋಪಿ ಪ್ರಭಾವಿಯಾಗಿದ್ದು, ಸಾಕ್ಷಿಗಳ ಮೇಲೆ ಮತ್ತು ಪ್ರಕರಣದ ಮೇಲೆ ಪರಿಣಾಮ ಬೀರಬಹುದು. ತನಿಖೆ ನಡೆಯುತ್ತಿರುವ ಹೊತ್ತಲ್ಲಿ ಪ್ರಭಾವಿ ಸ್ಥಾನದಲ್ಲಿರುವ ಆರೋಪಿ ತನಿಖೆಯ ದಿಕ್ಕು ತಪ್ಪಿಸಬಹುದು ಎಂದು ಹೇಳಿದರು. ವಾದ ಆಲಿಸಿದ ಬಳಿಕ ಕೋರ್ಟ್ ಜಾಮೀನು ಅರ್ಜಿ ವಜಾ ಮಾಡಿತು. ಈ ಹಿನ್ನೆಲೆ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ಬಿಹಾರದಲ್ಲಿ ರಾಹುಲ್‌ ಪ್ರಚಾರದ ವೇಳೆ ಕುಸಿದ ವೇದಿಕೆ

  • ಪೆನ್‌ಡ್ರೈವ್ ಪ್ರಕರಣ – ಲಿಖಿತ್ ಗೌಡ, ಚೇತನ್ ಜಾಮೀನು ಅರ್ಜಿ ವಜಾ

    ಪೆನ್‌ಡ್ರೈವ್ ಪ್ರಕರಣ – ಲಿಖಿತ್ ಗೌಡ, ಚೇತನ್ ಜಾಮೀನು ಅರ್ಜಿ ವಜಾ

    ಹಾಸನ: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರದ್ದು ಎನ್ನಲಾದ ಅಶ್ಲೀಲ ವೀಡಿಯೋ ವೈರಲ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಲಿಖಿತ್ ಗೌಡ ಹಾಗೂ ಚೇತನ್ ಪರ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು(Bail Application) ನ್ಯಾಯಾಲಯ ವಜಾಗೊಳಿಸಿದೆ.

    ಹಾಸನದ ಒಂದನೇ ಅಧಿಕ ಹಿರಿಯ ಸಿವಿಲ್ ನ್ಯಾಯಾಲಯ (Court) ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ನೀಡಿದೆ. ಮೇ 12ರಂದು ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣಕ್ಕೆ (Prndrive Case) ಸಂಬಂಧಿಸಿ ಲಿಖಿತ್ ಹಾಗೂ ಚೇತನ್‌ರನ್ನು ಎಸ್‌ಐಟಿ (SIT) ಪೊಲೀಸರು ವಶಕ್ಕೆ ಪಡೆದಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪೆನ್‌ಡ್ರೈವ್ ಇಟ್ಟುಕೊಂಡಿದ್ದ ಆರೋಪದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಜೈಲುವಾಸದಿಂದ ಮುಕ್ತಿ- ಪರಪ್ಪನ ಅಗ್ರಹಾರದಿಂದ ಹೊರಬಂದ ರೇವಣ್ಣ

    ಸೋಮವಾರ ಆರೋಪಿಗಳ ಪರ ವಕೀಲರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಇದನ್ನೂ ಓದಿ: ಸಂಬಳ ಪಾವತಿ ಮಾಡದ್ದಕ್ಕೆ ಬಿಎಂಟಿಸಿ ಎಲೆಕ್ಟ್ರಿಕ್‌ ಬಸ್‌ ಚಾಲಕರಿಂದ ದಿಢೀರ್‌ ಪ್ರತಿಭಟನೆ

  • ಹುಬ್ಬಳ್ಳಿ ನೇಹಾ ಹತ್ಯೆ ಕೇಸ್‌ – ಚಾರ್ಜ್ ಶೀಟ್ ಸಲ್ಲಿಸಲು ಸಿಐಡಿ ತಯಾರಿ‌

    ಹುಬ್ಬಳ್ಳಿ ನೇಹಾ ಹತ್ಯೆ ಕೇಸ್‌ – ಚಾರ್ಜ್ ಶೀಟ್ ಸಲ್ಲಿಸಲು ಸಿಐಡಿ ತಯಾರಿ‌

    ಹುಬ್ಬಳ್ಳಿ: ಇಲ್ಲಿನ ಬಿವಿಬಿ ಕಾಲೇಜಿನಲ್ಲಿ ನಡೆದಿದ್ದ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣದ (Neha Hiremath Murder) ಚಾರ್ಜ್ ಶೀಟ್ ಸಲ್ಲಿಸಲು ಸಿಐಡಿ ತಂಡ (CID Investigation) ತಯಾರಿ ನಡೆಸಿದೆ. ಇನ್ನು ಒಂದು ವಾರದಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ಕಳೆದ ಏಪ್ರಿಲ್ 18 ರಂದು ಹುಬ್ಬಳ್ಳಿ ನಗರ ಪಾಲಿಕೆ ಕಾಂಗ್ರೆಸ್‌ (congress) ಸದಸ್ಯ ನಿರಂಜನ್ ಹಿರೇಮಠ ಅವರ ಪುತ್ರಿ ನೇಹಾಳ ಭೀಕರ ಕೊಲೆಯಾಗಿತ್ತು. ಬಳಿಕ ನಿರಂಜನ್‌ ಅವರು ಈ ಪ್ರಕರಣದಲ್ಲಿ ಹಂತಕ ಫಯಾಜ್ ಅಷ್ಟೇ ಅಲ್ಲ ಇನ್ನೂ ಕೆಲವರು ಶಾಮೀಲಾಗಿದ್ದಾರೆ ಎಂದು ಆರೋಪ ಮಾಡಿದ್ದರು. ಅಲ್ಲದೇ ಲವ್‌ ಜಿಹಾದ್ ಇರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಮೋದಿಯಂಥ ವ್ಯಕ್ತಿಯೊಂದಿಗೆ ಚರ್ಚಿಸಲು ರಾಹುಲ್‌ ಗಾಂಧಿ ಪ್ರಧಾನಿ ಅಭ್ಯರ್ಥಿಯೇ? – ಸ್ಮೃತಿ ಇರಾನಿ ವ್ಯಂಗ್ಯ

    ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ, ತನಿಖೆ ನಡೆಸಲು ಸಿಐಡಿಗೆ ವಹಿಸಿತ್ತು. ಬಳಿಕ ತನಿಖೆ ಚುರುಕುಗೊಳಿಸಿದ್ದ ಸಿಐಡಿ ಅಧಿಕಾರಿಗಳ ತಂಡ ಫಯಾಜ್ ಪೋಷಕರು ಹಾಗೂ ಇತರೇ 10 ಮಂದಿಯನ್ನು ತನಿಖೆಗೆ ಒಳಪಡಿಸಿತ್ತು.

    ಇದೀಗ ವಿಚಾರಣೆ ಪ್ರಕ್ರಿಯೆ ಪೂರ್ಣಗೊಳಿಸಿರುವ ಸಿಐಡಿ ತಂಡ ಚಾರ್ಜ್‌ ಶೀಟ್‌ ಸಲ್ಲಿಸಲು ಸಕಲ ತಯಾರಿ ಮಾಡಿಕೊಂಡಿದೆ. ಇನ್ನೊಂದೇ ವಾರದಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್‌ ಸಲ್ಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮಹಿಳೆಯರು ಯಾರಾದ್ರು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ರಾಜ್ಯ ಸರ್ಕಾರವೇ ಕಾರಣ: ಹೆಚ್‌ಡಿಕೆ

  • ಮುಂಬೈ ಪೊಲೀಸರ ಸೋಗಿನಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ – ಎಫ್‍ಐಆರ್ ದಾಖಲು

    ಬೆಂಗಳೂರು: ನಿಮ್ಮ ಸಿಮ್ ಕಾರ್ಡ್‍ನಿಂದ ಕಾನೂನುಬಾಹಿರವಾಗಿ ಆಕ್ಷೇಪಾರ್ಹ ಸಂದೇಶಗಳನ್ನು ಪ್ರಕಟಿಸುತಿದ್ದೀರಿ ಎಂದು ಇಬ್ಬರು ಹೈಕೋರ್ಟ್ (High Court) ನ್ಯಾಯಮೂರ್ತಿಗಳಿಗೆ (Judge) ಮುಂಬೈ ಪೊಲೀಸರ (Police) ಸೋಗಿನಲ್ಲಿ ಬೆದರಿಕೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ (Vidhana Soudha Police Station) ಪ್ರಕರಣ ದಾಖಲಾಗಿದೆ.

    ಕರೆ ಮಾಡಿದ ಸೈಬರ್ ವಂಚಕರು (Cyber Crime) ನ್ಯಾಯಮೂರ್ತಿಗಳೊಂದಿಗೆ ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ನೀವು ಆಕ್ಷೇಪಾರ್ಹ ಸಂದೇಶಗಳನ್ನು ಪ್ರಕಟಿಸುತ್ತಿದ್ದೀರಿ. ನಿಮ್ಮ ವಿರುದ್ಧ ಮುಂಬೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕರೆಯನ್ನು ಪೊಲೀಸರಿಗೆ ವರ್ಗಾವಣೆ ಮಾಡುತ್ತೇನೆ. ಅವರ ಜೊತೆ ಮಾತನಾಡಿ ಇತ್ಯರ್ಥ ಪಡಿಸಿಕೊಳ್ಳಿ ಎಂದಿದ್ದರು. ಅಲ್ಲದೇ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನೂ ಓದಿ: ಇಂದು ಮಂಡ್ಯ‌ ಮೈತ್ರಿ ಅಭ್ಯರ್ಥಿ ಘೋಷಣೆ – ಸಕ್ಕರೆ ನಾಡಿನಿಂದ ಹೆಚ್‌ಡಿಕೆ ಸ್ಪರ್ಧೆ ಫಿಕ್ಸ್?

    ಈ ಸಂಬಂಧ ಹೈಕೋರ್ಟ್ ಭದ್ರತಾ ಇನ್ಸ್‍ಪೆಕ್ಟರ್‍ಗಳಿಗೆ ನ್ಯಾಯಮೂರ್ತಿಗಳು ದೂರು ನೀಡುವಂತೆ ಸೂಚಿಸಿದ್ದರು. ನ್ಯಾಯಮೂರ್ತಿಗಳ ನಿರ್ದೇಶನದ ಮೇರೆಗೆ ಹೈಕೋರ್ಟ್ ಭದ್ರತಾ ಪೊಲೀಸ್ ಅಧಿಕಾರಿಗಳು ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೀಗ ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಇದನ್ನೂ ಓದಿ: ಪಾಕಿಸ್ತಾನದ 2ನೇ ಅತಿ ದೊಡ್ಡ ನೌಕಾ ವಿಮಾನ ನಿಲ್ದಾಣದ ಮೇಲೆ ದಾಳಿ

  • ವಿಚಾರಣೆಗೆ ಖುದ್ದು ಹಾಜರಾಗುವಂತೆ ಕೇಜ್ರಿವಾಲ್‍ಗೆ ಕೋರ್ಟ್ ಆದೇಶ

    ವಿಚಾರಣೆಗೆ ಖುದ್ದು ಹಾಜರಾಗುವಂತೆ ಕೇಜ್ರಿವಾಲ್‍ಗೆ ಕೋರ್ಟ್ ಆದೇಶ

    – ಮಾರ್ಚ್ 16 ರಂದು ವಿಚಾರಣೆ

    ನವದೆಹಲಿ: ಹೊಸ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರಿಗೆ ಮಾರ್ಚ್ 16 ರಂದು ಖುದ್ದು ಹಾಜರಾಗಲು ರೋಸ್ ಅವೆನ್ಯೂ ಕೋರ್ಟ್ (Rouse Avenue court) ಅನುಮತಿ ನೀಡಿದೆ. ಜಾರಿ ನಿರ್ದೇಶನಾಲಯ (Enforecement Directorate) ನೀಡಿದ ಐದು ಸಮನ್ಸ್‌ಗಳಿಗೆ ಹಾಜರಾಗದ ಹಿನ್ನಲೆ ಅಧಿಕಾರಿಗಳು ಕೋರ್ಟ್ ಮೊರೆ ಹೋಗಿದ್ದರು.

    ಈ ಮೊದಲು ಇಂದು ವಿಚಾರಣೆಗೆ ಹಾಜರಾಗಲು ಕೋರ್ಟ್ ಸೂಚನೆ ನೀಡಿತ್ತು. ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆಯಲ್ಲಿ ಭಾಗಿಯಾದ ಅರವಿಂದ್ ಕೇಜ್ರಿವಾಲ್, ಇವತ್ತು ವಿಚಾರಣೆಗೆ ಹಾಜರಾಗಬೇಕು ಎಂದುಕೊಂಡಿದ್ದೆ ಆದರೆ ವಿಧಾನಸಭೆಯಲ್ಲಿ ಇಂದು ನಡೆಯಲಿರುವ ವಿಶ್ವಾಸ ನಿರ್ಣಯದ ಚರ್ಚೆಯಿಂದಾಗಿ ನ್ಯಾಯಾಲಯದ ಮುಂದೆ ನೇರವಾಗಿ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಬಜೆಟ್ ಅಧಿವೇಶನವೂ ನಡೆಯುತ್ತಿದೆ. ಇದು ಮಾರ್ಚ್ 1 ರವರೆಗೆ ನಡೆಯಲಿದೆ. ತದನಂತರ ಯಾವುದೇ ದಿನಾಂಕವನ್ನು ನೀಡಬಹುದು ಎಂದು ಅವರು ಕೋರ್ಟ್‍ಗೆ ಮನವಿ ಮಾಡಿಕೊಂಡರು. ಮನವಿ ಆಲಿಸಿದ ಕೋರ್ಟ್ ಕೇಜ್ರಿವಾಲ್ ಅವರ ಮುಂದೆ ದೈಹಿಕವಾಗಿ ಹಾಜರಾಗಲು ಮುಂದಿನ ದಿನಾಂಕವನ್ನು ಮಾರ್ಚ್ 16ರ ಬೆಳಿಗ್ಗೆ 10 ಗಂಟೆಗೆ ನಿಗದಿಪಡಿಸಿತು. ಇದನ್ನೂ ಓದಿ: ಸಿಎಂಗೆ ಗೌರವ ಕೊಡುವುದು ನಮ್ಮ ಜವಾಬ್ದಾರಿ- ಅನಂತ್ ಕುಮಾರ್ ಹೆಗಡೆಗೆ ಹೈಕೋರ್ಟ್ ತರಾಟೆ

    ನ್ಯಾಯಾಲಯದ ಆದೇಶದ ನಂತರ ಮಾತನಾಡಿದ ಕೇಜ್ರಿವಾಲ್ ಅವರ ವಕೀಲ ರಮೇಶ್ ಗುಪ್ತಾ, ಮುಖ್ಯಮಂತ್ರಿಯವರು ರೋಸ್ ಅವೆನ್ಯೂ ನ್ಯಾಯಾಲಯದ ಮುಂದೆ ವೈಯಕ್ತಿಕ ಹಾಜರಾತಿಯಿಂದ ವಿನಾಯಿತಿಗಾಗಿ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಿದೆ. ಇಡಿಯನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ ರಾಜು ಅವರು ಅರ್ಜಿಯನ್ನು ವಿರೋಧಿಸಿಲ್ಲ. ಮುಂದಿನ ವಿಚಾರಣೆಗೆ ನ್ಯಾಯಾಲಯಕ್ಕೆ ಕೇಜ್ರಿವಾಲ್ ಹಾಜರಾಗಿ ಜಾಮೀನು ಪಡೆಯಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ ಅಂಜಾರಿಯಾ ನೇಮಕ

  • ಮಕ್ಕಳನ್ನು ಪಾಕ್‌ಗೆ ಕರೆದೊಯ್ಯಲು ಸೀಮಾ ಮೊದಲ ಪತಿ ನಿರ್ಧಾರ – ಕಾನೂನು ಹೋರಾಟಕ್ಕೆ ಭಾರತೀಯ ವಕೀಲರ ನೇಮಕ

    ಮಕ್ಕಳನ್ನು ಪಾಕ್‌ಗೆ ಕರೆದೊಯ್ಯಲು ಸೀಮಾ ಮೊದಲ ಪತಿ ನಿರ್ಧಾರ – ಕಾನೂನು ಹೋರಾಟಕ್ಕೆ ಭಾರತೀಯ ವಕೀಲರ ನೇಮಕ

    ಇಸ್ಲಾಮಾಬಾದ್‌/ಲಕ್ನೋ: ಪಬ್‌ಜಿ (PUBG) ಪ್ರೇಮಿಗಾಗಿ ವೀಸಾ ಇಲ್ಲದೇ ಭಾರತಕ್ಕೆ ಪ್ರವೇಶಿಸಿದ್ದ ಪಾಕಿಸ್ತಾನಿ ಮಹಿಳೆ (Pakistani Woman) ಸೀಮಾ ಹೈದರ್‌ ಮೊದಲ ಪತಿ ಗುಲಾಮ್‌ ಹೈದರ್‌, ತನ್ನ ಮಕ್ಕಳನ್ನು ಭಾರತದಿಂದ ವಾಪಸ್‌ ಕರೆದುಕೊಂಡು ಹೋಗಲು ನಿರ್ಧಾರ ಮಾಡಿದ್ದಾರೆ.

    ತನ್ನ ಅಪ್ರಾಪ್ತ ಮಕ್ಕಳನ್ನು ಭಾರತದಿಂದ ವಾಪಸ್‌ ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗಲು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಅದಕ್ಕಾಗಿ ಭಾರತೀಯ ವಕೀಲನನ್ನು ನೇಮಿಸಿಕೊಂಡಿದ್ದಾರೆ ಎಂದು ಪಾಕ್‌ ವಕೀಲ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಅನ್ಸಾರ್ ಬರ್ನಿ ತಿಳಿಸಿದ್ದಾರೆ.

    ಅಲಿ ಮೊಮಿನ್ ಎಂಬ ಭಾರತೀಯ ವಕೀಲರನ್ನು ನೇಮಿಸಿಕೊಂಡಿದ್ದು, ಭಾರತದಲ್ಲಿ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಪವರ್ ಆಫ್ ಅಟಾರ್ನಿ ಕಳುಹಿಸಲಾಗಿದೆ ಎಂದು ಬರ್ನಿ ಹೇಳಿದ್ದಾರೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಭಾರತದಲ್ಲೇ ಇರಲು ಅವಕಾಶ ಕೊಡಿ – ರಾಷ್ಟ್ರಪತಿಗೆ ಸೀಮಾ ಹೈದರ್‌ ಪತ್ರ

    ಗುಲಾಮ್‌ ಹೈದರ್‌ ಮಕ್ಕಳು ಇನ್ನೂ ಅಪ್ರಾಪ್ತ ವಯಸ್ಸಿನವರು ಆಗಿರುವುದರಿಂದ ಹಾಗೂ ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಧಾರ್ಮಿಕ ಮತಾಂತರ ನಿಷೇಧ ಇರೋದ್ರಿಂದ ಮಕ್ಕಳನ್ನು ಕರೆತರಲು ಮುಂದಾಗಿದ್ದಾರೆ. ಅಲ್ಲದೇ ಸೀಮಾ ನೋಯ್ಡಾದಲ್ಲಿ ನೆಲೆಸಿದ್ದರೂ ಅವರಿನ್ನೂ ಪಾಕಿಸ್ತಾನಿ ಪ್ರಜೆಯೇ ಆಗಿರುವುದರಿಂದ ಮೊದಲ ಪತಿ ಗುಲಾಮ್‌ ಹೈದರ್‌ ಮಕ್ಕಳ ಮೇಲೆ ಎಲ್ಲಾ ಹಕ್ಕುಗಳನ್ನು ಹೊಂದಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ. ಇದನ್ನೂ ಓದಿ: ಬೇಗ ಬಂದುಬಿಡು ಸೀಮಾ, ಹೊಸ ಜೀವನ ಶುರು ಮಾಡೋಣ – ಸೌದಿಯಲ್ಲಿ ಮೊದಲ ಪತಿಯ ಗೋಳಾಟ

    ಸೀಮಾ ಹೇಳಿದ್ದೇನು?
    ತಾನು ಎಂದೂ ಕಾಣದ ಪ್ರೀತಿಯನ್ನು ನನ್ನ ಪತಿ ಸಚಿನ್‌ ಮೀನಾ ಹಾಗೂ ಅವರ ತಂದೆ-ತಾಯಿಯಿಂದ ಕಂಡಿದ್ದೇನೆ. ನಾನು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ. ನನ್ನ ನಾಲ್ವರು ಮಕ್ಕಳೊಂದಿಗೆ ಭಾರತದಲ್ಲೇ ಉಳಿಯಲು ಅವಕಾಶ ಕೊಡಿ ಎಂದು ಈ ಹಿಂದೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರಿಗೆ ಪತ್ರ ಬರೆದಿದ್ದರು. ಅಲ್ಲದೇ ಪಾಕಿಸ್ತಾನಕ್ಕೆ ಹಿಂತಿರುಗುವ ಬಯಕೆ ನನಗಿಲ್ಲ. ನಾನು ವಾಪಸ್‌ ಹೋದರೂ ನನ್ನನ್ನು ಕೊಲ್ಲುತ್ತಾರೆ ಎಂದು ಹೇಳಿಕೊಂಡಿದ್ದರು.

    ಈ ಬೆನ್ನಲ್ಲೇ ಸೌದಿಯಲ್ಲಿ ಕೆಲಸ ಮಾಡುತ್ತಿದ್ದ ಸೀಮಾ ಪತಿ, ನಾನು ನಿನ್ನನ್ನ ಎಷ್ಟು ಪ್ರೀತಿಸುತ್ತೇನೆ ಅನ್ನೋದು ನಿನಗೇ ಚೆನ್ನಾಗಿ ಗೊತ್ತು. ಈಗಲೂ ಅಷ್ಟೇ ಪ್ರೀತಿ (Love) ಮಾಡ್ತೀನಿ ಸೀಮಾ, ದಯವಿಟ್ಟು ಹಿಂತಿರುಗಿ ಬಂದುಬಿಡು, ನಿನಗೆ ಏನಾದ್ರೂ ಆದ್ರೆ ಯಾರು ನೋಡಿಕೊಳ್ತಾರೆ? ಮಕ್ಕಳ ಜವಾಬ್ದಾರಿ ಯಾರು ತೆಗೆದುಕೊಳ್ತಾರೆ? ವಾಪಸ್‌ ಬಂದುಬಿಡು ನಾವಿಬ್ಬರು ಹೊಸ ಜೀವನ ಶುರು ಮಾಡೋಣ ಎಂದು ಕೋರಿದ್ದರು. ತನ್ನ ಪತ್ನಿ-ಮಕ್ಕಳನ್ನು ವಾಪಸ್‌ ಕಳುಹಿಸಿಕೊಡುವಂತೆ ಭಾರತ ಸರ್ಕಾರಕ್ಕೂ ಮನವಿ ಮಾಡಿದ್ದರು. ಆದರೀಗ ಸೀಮಾ ಬರದಿದ್ದರೂ ಚಿಂತೆಯಿಲ್ಲ. ತನ್ನ ಮಕ್ಕಳನ್ನು ಪಾಕಿಸ್ತಾನಕ್ಕೆ ಹಿಂದಿರುಗಿಸುವಂತೆ ಕೇಳಿಕೊಂಡಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.

    ಪಬ್‌ಜೀ ಪ್ರೇಮಕಥೆ ಶುರುವಾಗಿದ್ದೇ ಥ್ರಿಲ್ಲಿಂಗ್:
    ಸೀಮಾ ಹಾಗೂ ಸಚಿನ್ ಲವ್‌ಸ್ಟೋರಿ ಬಾಲಿವುಡ್ ಸಿನಿಮಾದಷ್ಟೇ ಥ್ರಿಲ್ಲಿಂಗ್ ಆಗಿದೆ. ಸಚಿನ್ ಮೀನಾ ಮೂಲತಃ ಉತ್ತರಪ್ರದೇಶದವನಾಗಿದ್ದು, 2019ರಲ್ಲಿ ಆನ್‌ಲೈನ್ ಗೇಮ್ ಪಬ್‌ಜೀ ಆಡುತ್ತಿದ್ದ. ಈ ವೇಳೆ ಇವರಿಬ್ಬರ ಪರಿಚಯವಾಗಿ, ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು. ಬಳಿಕ ಸೀಮಾ ಹೈದರ್ ಆತನೊಂದಿಗೆ ನೋಯ್ಡಾದಲ್ಲಿ ವಾಸಿಸುವ ಸಲುವಾಗಿ ಪಾಕಿಸ್ತಾನದಿಂದ ತನ್ನ ನಾಲ್ವರು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಬಂದಿದ್ದಳು. ಇದನ್ನೂ ಓದಿ: NRIಗಳ ನಡುವಿನ ವಿವಾಹಗಳನ್ನು ಭಾರತದಲ್ಲಿ ಕಡ್ಡಾಯವಾಗಿ ನೋಂದಾಯಿಸಬೇಕು: ಕಾನೂನು ಆಯೋಗ ಶಿಫಾರಸು

  • ಕಾನೂನುಬಾಹಿರ ವಿವಾಹ – ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ದಂಪತಿಗೆ 7 ವರ್ಷ ಜೈಲು

    ಕಾನೂನುಬಾಹಿರ ವಿವಾಹ – ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ದಂಪತಿಗೆ 7 ವರ್ಷ ಜೈಲು

    ಇಸ್ಲಮಾಬಾದ್: ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಮತ್ತು ಅವರ ಪತ್ನಿ ಬುಶ್ರಾ ಖಾನ್ (Bushra Khan) ಅವರ ವಿವಾಹವು ಕಾನೂನುಬಾಹಿರ ಎಂದು ತೀರ್ಪು ನೀಡಿರುವ ನ್ಯಾಯಾಲಯವು (Court), ಅವರಿಗೆ ಏಳು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿದೆ.

    ಅಲ್ಲದೇ ಗುರುವಾರ ರಾಷ್ಟ್ರೀಯ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧಿಸಲಾಗಿದೆ. ಈಗಾಗಲೇ ಜೈಲಿನಲ್ಲಿರುವ ಇಮ್ರಾನ್ ಖಾನ್ ಅವರಿಗೆ ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯದ ರಹಸ್ಯಗಳನ್ನು ಸೋರಿಕೆ ಮಾಡಿದ್ದಕ್ಕಾಗಿ 10 ವರ್ಷಗಳು ಮತ್ತು ಅಕ್ರಮವಾಗಿ ರಾಜ್ಯದ ಉಡುಗೊರೆಗಳನ್ನು ಮಾರಾಟ ಮಾಡಿದ್ದಕ್ಕಾಗಿ ಅವರ ಪತ್ನಿಯೊಂದಿಗೆ 14 ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿತ್ತು. ಇಬ್ಬರಿಗೂ ತಲಾ 5,00,000 ರೂ. (ಪಾಕಿಸ್ತಾನ ರೂಪಾಯಿ) ದಂಡ ವಿಧಿಸಲಾಗಿದೆ. ಇದನ್ನೂ ಓದಿ: 6 ತಿಂಗಳಿಂದ ಪಾಕ್‌ನ ಹಾಕಿ ಆಟಗಾರರಿಗಿಲ್ಲ ಸಂಬಳ – ಮ್ಯಾನೇಜ್‌ಮೆಂಟ್‌ನೊಂದಿಗೆ ಆಟಗಾರರ ಸಂಘರ್ಷ

    ಬುಶ್ರಾ ತನ್ನ ಹಿಂದಿನ ಪತಿಗೆ ವಿಚ್ಛೇದನ ನೀಡಿದ ನಂತರ ಮತ್ತು ಖಾನ್ ಅವರನ್ನು ವಿವಾಹವಾದ ನಂತರ `ಇದ್ದತ್’ ಎಂದು ಕರೆಯಲ್ಪಡುವ ಇಸ್ಲಾಂನಿಂದ ಕಡ್ಡಾಯವಾದ ಕಾಯುವ ಅವಧಿಯನ್ನು ಪೂರ್ಣಗೊಳಿಸಲಿಲ್ಲ ಎಂದು ಆರೋಪಿಸಲಾಗಿತ್ತು. ಈ ಆರೋಪಗಳನ್ನು ಖಾನ್ ದಂಪತಿ ನಿರಾಕರಿಸಿದ್ದರು. ವಿಚಾರಣೆ ವೇಳೆ ಇದೀಗ ಆರೋಪ ಸಾಬೀತಾಗಿದೆ.

    ಇಮ್ರಾನ್ ಖಾನ್ ಅವರು ರಾವಲ್ಪಿಂಡಿಯ ಗ್ಯಾರಿಸನ್ ಸಿಟಿಯಲ್ಲಿ ಜೈಲಿನಲ್ಲಿದ್ದಾರೆ. ಅವರ ಪತ್ನಿ ಇಸ್ಲಾಮಾಬಾದ್‍ನಲ್ಲಿರುವ ಅವರ ಭವನದಲ್ಲಿ ಶಿಕ್ಷೆಯನ್ನು ಅನುಭವಿಸಲು ಅನುಮತಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತೀಯ ಮೂಲದ ವಿದ್ಯಾರ್ಥಿ ಅಮೆರಿಕಾದಲ್ಲಿ ಸಾವು- ಜನವರಿಯಿಂದ ಇದು ನಾಲ್ಕನೇ ಕೇಸ್

  • ದತ್ತಪೀಠದ ಗೋರಿ ಧ್ವಂಸ ಪ್ರಕರಣ – ನ್ಯಾಯಾಲಯಕ್ಕೆ ಹಾಜರಾದ 14 ಹಿಂದೂ ಕಾರ್ಯರ್ತರು

    ದತ್ತಪೀಠದ ಗೋರಿ ಧ್ವಂಸ ಪ್ರಕರಣ – ನ್ಯಾಯಾಲಯಕ್ಕೆ ಹಾಜರಾದ 14 ಹಿಂದೂ ಕಾರ್ಯರ್ತರು

    ಚಿಕ್ಕಮಗಳೂರು: ದತ್ತಪೀಠದ (Datta Peeta) ಗೋರಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಜನ ಆರೋಪಿಗಳು ನ್ಯಾಯಾಲಯಕ್ಕೆ (Court) ಹಾಜರಾಗಿದ್ದಾರೆ.

    2017ರ ಡಿ.3 ರಂದು ನಡೆದಿದ್ದ ದತ್ತಪೀಠದ ಗೋರಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಜನ ಹಿಂದೂ ಕಾರ್ಯಕರ್ತರು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಇಂದು (ಸೋಮವಾರ) ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಇದನ್ನೂ ಓದಿ: ಬಿಲ್ಕಿಸ್ ಬಾನೋ ಗ್ಯಾಂಗ್‌ ರೇಪ್‌ ಕೇಸ್‌ – ಅಪರಾಧಿಗಳ ಬಿಡುಗಡೆ ಮಾಡಿದ ಗುಜರಾತ್‌ ಸರ್ಕಾರದ ಆದೇಶ ರದ್ದು

    2017ರಲ್ಲಿ ಕಾಂಗ್ರೆಸ್ (Congress) ಸರ್ಕಾರದ ಅವಧಿಯಲ್ಲಿ ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಗಿರಿಯ ದರ್ಗಾದ ವಿಚಾರವಾಗಿ ದತ್ತಜಯಂತಿ ವೇಳೆ ಗಲಾಟೆ ನಡೆದಿತ್ತು. ಈ ವೇಳೆ ಉದ್ರಿಕ್ತರ ಗುಂಪು ಗೋರಿಗಳನ್ನು ಧ್ವಂಸಗೊಳಿಸಿತ್ತು. ಈ ಸಂಬಂಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲು ಸರ್ಕಾರ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ, 2023ರ ಅ.24ರಂದು ಚಿಕ್ಕಮಗಳೂರು (Chikkamagaluru) ಗ್ರಾಮಾಂತರ ಪೊಲೀಸರು (Police) ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.

    ನ್ಯಾಯಾಲಯದ ಕಲಾಪ ಮುಗಿದ ಬಳಿಕ ಕೋರ್ಟ್ ಪಕ್ಕದಲ್ಲಿರುವ ಗಾಂಧಿ ಪ್ರತಿಮೆ ಮುಂದೆ ಹಿಂದೂ ಕಾರ್ಯಕರ್ತರು ಸಕಾರದ ವಿರುದ್ಧ ಪ್ರತಿಭಟನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನವರು ವೋಟಿಗಾಗಿ ಕಾಶ್ಮೀರ ಸಹ ಪಾಕಿಸ್ತಾನಕ್ಕೆ ಸೇರಿದ್ದು ಅಂತಾರೆ – ವಿಶ್ವನಾಥ್ ಕಿಡಿ