Tag: ನ್ಯಾನ್ಸಿ ಪೆಲೊಸಿ

  • ಅಮೆರಿಕ ಸ್ಪೀಕರ್‌ ಭೇಟಿ ಬೆನ್ನಲ್ಲೇ ತೈವಾನ್‌ ವಾಯು ರಕ್ಷಣಾ ವಲಯಕ್ಕೆ ಚೀನಾ ಯುದ್ಧ ವಿಮಾನಗಳು ಎಂಟ್ರಿ

    ಅಮೆರಿಕ ಸ್ಪೀಕರ್‌ ಭೇಟಿ ಬೆನ್ನಲ್ಲೇ ತೈವಾನ್‌ ವಾಯು ರಕ್ಷಣಾ ವಲಯಕ್ಕೆ ಚೀನಾ ಯುದ್ಧ ವಿಮಾನಗಳು ಎಂಟ್ರಿ

    ತೈಪೆ/ಬೀಜಿಂಗ್‌: ಅಮೆರಿಕ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿರುವುದಕ್ಕೆ ಚೀನಾ ಕೆಂಡಾಮಂಡಲವಾಗಿದೆ. ತೈವಾನ್‌ ಮೇಲೆ ಮುಗಿಬಿದ್ದಿರುವ ಚೀನಾದ 27 ಯುದ್ಧ ವಿಮಾನಗಳು, ತೈವಾನ್‌ ವಾಯು ರಕ್ಷಣಾ ವಲಯವನ್ನು ಪ್ರವೇಶಿಸಿವೆ.

    27 ಪಿಎಲ್‌ಎ ಯುದ್ಧ ವಿಮಾನಗಳು ಇಂದು ನಮ್ಮ ಪ್ರದೇಶವನ್ನು (ರಿಪಬ್ಲಿಕ್‌ ಆಫ್‌ ಚೀನಾ) ಸುತ್ತುವರಿದಿವೆ ಎಂದು ತೈವಾನ್‌ ರಕ್ಷಣಾ ಇಲಾಖೆ ದೃಢಪಡಿಸಿದೆ. ಇದನ್ನೂ ಓದಿ: ತೈವಾನ್‌ನಲ್ಲಿ ಅಮೆರಿಕ ಸ್ಪೀಕರ್ – ಚೀನಾ ಕೆಂಡಾಮಂಡಲ

    ಚೀನಾದ ವಿರೋಧದ ನಡುವೆಯೂ ಪೆಲೊಸಿ ಮಂಗಳವಾರ ತೈವಾನ್‌ಗೆ ಭೇಟಿ ನೀಡಿದ್ದರು. ಅಲ್ಲದೇ ಇಂದು ತೈವಾನ್‌ ಅಧ್ಯಕ್ಷೆ ಸಾಯ್‌ ಇಂಗ್‌ ವೆನ್‌ ಅವರೊಂದಿಗೆ ಸಭೆ ಕೂಡ ಮಾಡಿದರು. ನಂತರ ವಿಶೇಷ ವಿಮಾನದಲ್ಲಿ ದಕ್ಷಿಣ ಕೊರಿಯಾಗೆ ತೆರಳಿದರು.

    ತೈವಾನ್‌ ತನ್ನ ದೇಶದ ಭಾಗವೆಂದೇ ಪರಿಗಣಿಸಿರುವ ಚೀನಾವು ನ್ಯಾನ್ಸಿ ಭೇಟಿಗೆ ವಿರೋಧ ವ್ಯಕ್ತಪಡಿಸಿದೆ. ಅಲ್ಲದೇ ತೈವಾನ್‌ ಸುತ್ತ ಯುದ್ಧ ವಿಮಾನಗಳನ್ನು ಹಾರಾಡಿಸುತ್ತಿದೆ. ಇದನ್ನೂ ಓದಿ: ಅಲ್‌ಖೈದಾ ಮುಖ್ಯಸ್ಥ ಝವಾಹಿರಿ ಹತ್ಯೆ- ಮೋಸ್ಟ್ ವಾಂಟೆಡ್ ಉಗ್ರನ ಮೇಲೆ ಡ್ರೋಣ್ ಸ್ಟ್ರೈಕ್‌

    ಆದರೆ ಚೀನಾದ ಎಚ್ಚರಿಕೆಗೆ ಕ್ಯಾರೆ ಎನ್ನದ ಅಮೆರಿಕ ಸ್ಪೀಕರ್‌ ನ್ಯಾನ್ಸಿ ಅವರು, ಪ್ರಸ್ತುತ ಜಗತ್ತಿನ ಮುಂದೆ ಪ್ರಜಾಪ್ರಭುತ್ವ ಮತ್ತು ನಿರಂಕುಶಪ್ರಭುತ್ವದ ಆಯ್ಕೆಗಳಿವೆ. ತೈವಾನ್‌ ಸೇರಿದಂತೆ ವಿಶ್ವದ ಎಲ್ಲ ಕಡೆ ಪ್ರಜಾಪ್ರಭುತ್ವ ರಕ್ಷಿಸಲು ಅಮೆರಿಕ ಬದ್ಧವಾಗಿದೆ. ಜಾಗತಿಕ ನಾಯಕರು ತೈವಾನ್‌ಗೆ ಭೇಟಿ ನೀಡುವುದನ್ನು ಚೀನಾದಿಂದ ತಡೆಯಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

    ತೈವಾನ್‌ ಅಧ್ಯಕ್ಷೆ ಸಾಯ್‌ ಇಂಗ್‌ ವೆನ್‌ ಅವರು, ಚೀನಾದ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ದೇಶದ 2.3 ಕೋಟಿ ಜನರು ಹೇಡಿಗಳಲ್ಲ ಎಂದು ಚೀನಾಗೆ ಟಾಂಗ್‌ ಕೊಟ್ಟಿದ್ದಾರೆ.

    ತೈವಾನ್‌ ಮೇಲೆ ಚೀನಾ ನಿರ್ಬಂಧ                                                                                                                                     ಚೀನಾ ಗೊಡ್ಡು ಬೆದರಿಕೆ ನಡ್ವೆಯೂ ಅಮೆರಿಕಾದ ಹಿರಿಯ ಸೆನೆಟರ್, ಸ್ಪೀಕರ್‌ ನ್ಯಾನ್ಸಿ ಪೆಲೋಸಿ ತೈವಾನ್ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ತೈವಾನ್‍ಗೆ ಎಲ್ಲಾ ವಿಧದಲ್ಲೂ ಅಮೆರಿಕ ಬೆಂಬಲವಾಗಿ ನಿಲ್ಲಲಿದೆ ಎಂದು ಘೋಷಣೆ ಮಾಡಿದ್ದಾರೆ. ಈ ಮೂಲಕ ಜಿನ್‍ಪಿಂಗ್ ಬೆದರಿಕೆಗಳಿಗೆ ಡೋಂಟ್‍ಕೇರ್ ಎಂದಿದ್ದಾರೆ.

    ಈ ಬೆನ್ನಲ್ಲೇ ಚೀನಾ, ತೈವಾನ್ ಮೇಲೆ ಆಮದು ರಫ್ತು ಮೇಲೆ ನಿರ್ಬಂಧ ಹೇರಿದೆ. ತೈವಾನ್‍ಗೆ ನೈಸರ್ಗಿಕ ಮರಳು ರಫ್ತು ರದ್ದು ಮಾಡಿದೆ. ಹಣ್ಣು, ಮೀನುಗಳ ಉತ್ಪನ್ನಗಳ ಆಮದನ್ನು ತಡೆ ಹಿಡಿದಿದೆ. ನ್ಯಾನ್ಸಿ ಭೇಟಿಗೆ ಮುನ್ನವೇ ತೈವಾನ್‍ನಿಂದ ಬಿಸ್ಕೆಟ್ ಸೇರಿ 35 ವಸ್ತುಗಳ ರಫ್ತಿಗೆ ಚೀನಾ ಕೊಕ್ಕೆ ಹಾಕಿತ್ತು.

    ತೈವಾನ್ ಮೇಲೆ ಸೈನಿಕ ಕಾರ್ಯಾಚರಣೆಗೆ ಚೀನಾ ಪ್ಲಾನ್ ಮಾಡಿದೆ ಎಂದು ಕೂಡ ಹೇಳಲಾಗುತ್ತಿದೆ. ಈಗಾಗಲೇ ಯುದ್ಧ ನೌಕೆಗಳನ್ನು ತೈವಾನ್‌ನತ್ತ ಕಳುಹಿಸಿದೆ. ತೈವಾನ್‌ಗೆ ಭಯ ಹುಟ್ಟಿಸಲು ಚೀನಾ ಸೈನ್ಯವನ್ನು ಕಳುಹಿಸಿದೆ ಎಂದು ಒಂದು ಕಡೆ ವರದಿಯಾದರೆ ಇನ್ನೊಂದು ತೈವಾನ್‌ ಮೇಲೆ ಯುದ್ಧಕ್ಕೆ ಸಾರಲು ಸೇನೆಯನ್ನುಯ ಕಳುಹಿಸಿಕೊಟ್ಟಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಝವಾಹಿರಿಗೆ ಆಶ್ರಯ ನೀಡುವ ಮೂಲಕ ತಾಲಿಬಾನ್ ದೋಹಾ ಒಪ್ಪಂದ ಉಲ್ಲಂಘಿಸಿದೆ: ಆಂಟನಿ ಬ್ಲಿಂಕೆನ್

    ತೈವಾನ್‌ಗೆ ಪೆಲೋಸಿ ಪ್ರವಾಸವು ರಾಜತಾಂತ್ರಿಕ ಬಿರುಗಾಳಿಯನ್ನು ಹೊತ್ತಿಸಿದ್ದು, ತೈವಾನ್‌ನ ಹಲವು ಆಹಾರೋತ್ಪನ್ನ ಕಂಪನಿಗಳಿಂದ ಮಂಗಳವಾರವೇ ಚೀನಾ ಆಮದನ್ನು ನಿಲ್ಲಿಸಿರುವುದನ್ನು ತೈವಾನ್‌ನ ಕೃಷಿ ಮಂಡಳಿ ಕೂಡ ಖಚಿತಪಡಿಸಿದೆ.

    ರಷ್ಯಾ ಉಕ್ರೇನ್‌ ಮೇಲೆ ದಾಳಿ ಮಾಡಿದಂತೆ ಚೀನಾ ತೈವಾನ್‌ ಮೇಲೆ ದಾಳಿ ಮಾಡುತ್ತಾ ಎಂಬ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.

    Live Tv
    [brid partner=56869869 player=32851 video=960834 autoplay=true]