– ರಷ್ಯಾದಿಂದ ತೈಲು ಖರೀದಿಸಿದ್ರೆ ಆರ್ಥಿಕ ನಿರ್ಬಂಧ ಹಾಕ್ತೀವಿ – ಶಾಂತಿ ಮಾತುಕತೆಗೆ ಒತ್ತಾಯಿಸಿ ಅಂತ ಭಾರತ, ಚೀನಾಗೆ ಒತ್ತಡ
ಬ್ರಸೆಲ್ಸ್: ರಷ್ಯಾದೊಂದಿಗೆ (Russia) ವ್ಯವಹಾರ ಮುಂದುವರಿಸಿದರೆ ತೀವ್ರ ಆರ್ಥಿಕ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಭಾರತ, ಚೀನಾ, ಬ್ರೆಜಿಲ್ ದೇಶಗಳಿಗೆ ನ್ಯಾಟೊ (Nato) ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ (Mark Rutte) ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಅಮೆರಿಕದ (America) ಸೆನೆಟರ್‌ಗಳನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರುಟ್ಟೆ, ಭಾರತ, ಚೀನಾ, ಬ್ರೆಜಿಲ್ ನಾಯಕರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಶಾಂತಿ ಮಾತುಕತೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಡ ಹೇರಬೇಕೆಂದು ಒತ್ತಾಯಿಸಿದರು. ಇದನ್ನೂ ಓದಿ: ನೀರಿಗಾಗಿ ಹಾಹಾಕಾರ – ಇನ್ನು 5ವರ್ಷ ಮಾತ್ರ ಬಾಕಿ.. ಈ ನಗರದಲ್ಲಿ ನೀರೇ ಇರಲ್ಲ!
ಚೀನಾ ಹಾಗೂ ಬ್ರೆಜಿಲ್ ಅಧ್ಯಕ್ಷ, ಭಾರತದ ಪ್ರಧಾನಿ ಅವರು, ರಷ್ಯಾದೊಂದಿಗೆ ವ್ಯಾಪಾರ ಮುಂದುವರಿಸಿದ್ದಾರೆ. ತೈಲ ಮತ್ತು ಅನಿಲ ಖರೀದಿಸುವುದನ್ನು ಮುಂದುವರಿಸುವುದಾದರೆ, ಉಕ್ರೇನ್ ಜೊತೆ ಶಾಂತಿ ಮಾತುಕತೆಗೆ ಒತ್ತಡ ಹಾಕಿ. ಇಲ್ಲದಿದ್ದರೆ, ನಾವು 100 ಪ್ರತಿಶತ ದ್ವಿತೀಯ ನಿರ್ಬಂಧಗಳನ್ನು ವಿಧಿಸುತ್ತೇನೆ ಎಂದು ಎಚ್ಚರಿಸಿದ್ದಾರೆ.
ಶಾಂತಿ ಮಾತುಕತೆಗೆ ಬದ್ಧರಾಗುವಂತೆ ಪುಟಿನ್‌ಗೆ ನೇರವಾಗಿ ಒತ್ತಾಯಿಸುವಂತೆ ರುಟ್ಟೆ ಮೂರು ರಾಷ್ಟ್ರಗಳ ನಾಯಕರಿಗೆ ಕರೆ ನೀಡಿದ್ದಾರೆ. ವ್ಲಾಡಿಮಿರ್ ಪುಟಿನ್ ಅವರಿಗೆ ಫೋನ್ ಕರೆ ಮಾಡಿ ಶಾಂತಿ ಮಾತುಕತೆಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕು ತಿಳಿಸಿ. ಇಲ್ಲದಿದ್ದರೆ ಇದು ಬ್ರೆಜಿಲ್, ಭಾರತ ಮತ್ತು ಚೀನಾದ ಮೇಲೆ ಭಾರಿ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ರಾಜೀನಾಮೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್‌ಗೆ ಹೊಸ ಮಿಲಿಟರಿ ಬೆಂಬಲವನ್ನು ಘೋಷಿಸಿದ್ದಾರೆ. ಅಲ್ಲದೇ, ರಷ್ಯಾ ಮತ್ತು ಅದರ ವ್ಯಾಪಾರ ಪಾಲುದಾರರ ಮೇಲೆ ವ್ಯಾಪಕ ಸುಂಕಗಳನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಅದರ ಬೆನ್ನಲ್ಲೇ ನ್ಯಾಟೋ ಅಧ್ಯಕ್ಷರು ಅದೇ ಮಾದರಿಯಲ್ಲಿ ನಿರ್ಬಂಧ ಹಾಕುವುದಾಗಿ ಬೆದರಿಸಿದ್ದಾರೆ.
ಡೊನಾಲ್ಡ್ ಟ್ರಂಪ್, ರಷ್ಯಾದ ರಫ್ತುಗಳ ಮೇಲೆ ಶೇ.100 ರಷ್ಟು ಸುಂಕ ವಿಧಿಸುವುದಾಗಿ ಎಚ್ಚರಿಸಿದ್ದಾರೆ. 50 ದಿನಗಳಲ್ಲಿ ಉಕ್ರೇನ್ ಜೊತೆ ಶಾಂತಿ ಒಪ್ಪಂದ ಮಾಡಿಕೊಳ್ಳದಿದ್ದರೆ ರಷ್ಯಾದ ತೈಲ ಖರೀದಿಸುವುದನ್ನು ಮುಂದುವರಿಸುವ ದೇಶಗಳ ಮೇಲೆ ದ್ವಿತೀಯ ನಿರ್ಬಂಧಗಳನ್ನು ವಿಧಿಸುವ ಬಗ್ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನ ಅಭಿವೃದ್ಧಿಗೆ ನೆರವು ನೀಡಿ: ಎಸ್‌ಸಿಒ ಸಭೆಯಲ್ಲಿ ಜೈಶಂಕರ್ ಒತ್ತಾಯ
– ಕಿಮ್ ಭೇಟಿಯಾಗಿದ್ಯಾಕೆ ಪುಟಿನ್? – ಉತ್ತರ ಕೊರಿಯಾ, ರಷ್ಯಾ ನಡುವೆ ಆದ ಒಪ್ಪಂದವೇನು?
24 ವರ್ಷಗಳ ಬಳಿಕ ಉತ್ತರ ಕೊರಿಯಾಗೆ (North Korea) ಭೇಟಿ ನೀಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಇನ್ನಷ್ಟು ಬಲ ಭೀಮನಾಗಿ ವಾಪಸ್ ಆಗಿದ್ದಾರೆ. ಉಕ್ರೇನ್ (Ukraine) ಮೇಲೆ ಯುದ್ಧ ಸಾರಿದಾಗ, ಹತ್ತಾರು ದೇಶಗಳ ನ್ಯಾಟೊ ಒಕ್ಕೂಟವೇ ತಿರುಗಿಬಿದ್ದರೂ ಎದೆಗುಂದದೇ ರಷ್ಯಾ ಏಕಾಂಗಿ ಹೋರಾಟ ನಡೆಸಿತ್ತು. ಆಗ ರಷ್ಯಾ ಬೆಂಬಲಕ್ಕೆ ನಿಂತ ರಾಷ್ಟ್ರ ಉತ್ತರ ಕೊರಿಯಾ. ಉಕ್ರೇನ್ ಮೇಲಿನ ಯುದ್ಧಕ್ಕೆ ರಷ್ಯಾಗೆ ಅಗತ್ಯ ಶಸ್ತ್ರಾಸ್ತ್ರ ನೆರವು ನೀಡಿ ಹೆಗಲು ಕೊಟ್ಟಿತ್ತು. ಈಗ ತನ್ನ ಆಪದ್ಭಾಂಧವ ರಾಷ್ಟ್ರಕ್ಕೆ ಪುಟಿನ್ ಭೇಟಿ ಕೊಟ್ಟರು. ಕೊರಿಯಾ ನಾಯಕ ಕಿಮ್ ಜಾಂಗ್ ಉನ್ (Kim Jong Un) ಅಷ್ಟೇ ಖುಷಿಯಿಂದ ಬರಮಾಡಿಕೊಂಡರು. ಉಭಯ ದೇಶಗಳ ನಾಯಕರು ಪರಸ್ಪರ ಹ್ಯಾಂಡ್‌ಶೇಕ್ ಮಾಡಿದರು. ನೆನಪಿನ ಕಾಣಿಕೆಗಳ ವಿನಿಮಯವಾಯಿತು. ಸಶಸ್ತ್ರ ನೆರವು ಒಪ್ಪಂದಕ್ಕೆ ಸಹಿ ಹಾಕಿದರು. ದಶಕಗಳ ನಂತರ ರಷ್ಯಾ ಅಧ್ಯಕ್ಷನ ಆ ಒಂದು ಭೇಟಿ ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ರಾಷ್ಟ್ರಗಳ ನಿದ್ದೆಗೆಡಿಸಿದೆ.
ರಷ್ಯಾವಾಗಲಿ ಅಥವಾ ಉಕ್ರೇನ್ ಆಗಲಿ ಹೊರಗಡೆಯಿಂದ ಸಶಸ್ತ್ರ ಆಕ್ರಮಣವನ್ನು ಎದುರಿಸಿದರೆ ಪರಸ್ಪರರು ತಕ್ಷಣದ ಮಿಲಿಟರಿ ನೆರವು ನೀಡುವ ಒಪ್ಪಂದಕ್ಕೆ ಪುಟಿನ್ ಮತ್ತು ಕಿಮ್ ಸಹಿ ಹಾಕಿದ್ದಾರೆ. ಜೊತೆಗೆ ಉತ್ತರ ಕೊರಿಯಾಗೆ ಸಶಸ್ತ್ರಗಳನ್ನು ನೀಡಲಾಗುವುದು ಎಂದು ರಷ್ಯಾ ಅಧ್ಯಕ್ಷರು ಒಪ್ಪಂದದಲ್ಲಿ ತಿಳಿಸಿದ್ದಾರೆ. ಉಭಯ ದೇಶಗಳು ಒಪ್ಪಂದವು ಅಮೆರಿಕಗೆ ಆತಂಕ ಮೂಡಿಸಿದೆ. ರಷ್ಯಾ-ಕೊರಿಯಾ ನಡುವಿನ ಈ ಒಪ್ಪಂದ ಈಗ ಏಕೆ ಮಹತ್ವದ್ದು? ಇದನ್ನೂ ಓದಿ: 24 ವರ್ಷಗಳ ಬಳಿಕ ಉತ್ತರ ಕೊರಿಯಾಗೆ ಪುಟಿನ್ ಭೇಟಿ – ರಷ್ಯಾ ಅಧ್ಯಕ್ಷನಿಗೆ ಭವ್ಯ ಸ್ವಾಗತ
ರಷ್ಯಾ-ಉ.ಕೊರಿಯಾ ಸ್ನೇಹದ ಒಂದು ಹಿನ್ನೋಟ
ಎರಡನೆಯ ಮಹಾಯುದ್ಧದ ನಂತರ, ಹಿಂದಿನ ಸೋವಿಯತ್ ಒಕ್ಕೂಟವು ಕೊರಿಯಾದಲ್ಲಿ ಕಮ್ಯುನಿಸ್ಟ್ ಆಡಳಿತವನ್ನು ಸ್ಥಾಪಿಸಲು ಬಯಸಿತು. ಕೊರಿಯನ್ ಯುದ್ಧದ ಸಮಯದಲ್ಲಿ ಉತ್ತರ ಕೊರಿಯಾದ ಸಂಸ್ಥಾಪಕ ಕಿಮ್ ಇಲ್ ಸುಂಗ್‌ಗೆ ಗಮನಾರ್ಹ ಮಿಲಿಟರಿ ಸಹಾಯವನ್ನು ನೀಡಿತು. ಯುದ್ಧಗಳು ಕೊನೆಗೊಂಡ ನಂತರ ಯುಎಸ್ಎಸ್ಆರ್, ಚೀನಾದೊಂದಿಗೆ ಕಮ್ಯುನಿಸ್ಟ್ ಉತ್ತರಕ್ಕೆ ಗಮನಾರ್ಹ ಮಿಲಿಟರಿ ಮತ್ತು ಇತರ ಸಹಾಯವನ್ನು ಒದಗಿಸಿತು. 1961 ರಲ್ಲಿ ಉಭಯ ರಾಷ್ಟ್ರಗಳು ತಮ್ಮ ಮೈತ್ರಿಯನ್ನು ಗಟ್ಟಿಗೊಳಿಸಿದವು. ರಷ್ಯಾ-ಉತ್ತರ ಕೊರಿಯಾ ಸ್ನೇಹ, ಸಹಕಾರ ಮತ್ತು ಪರಸ್ಪರ ಸಹಾಯದ ಒಪ್ಪಂದಕ್ಕೆ ಸಹಿ ಹಾಕಿದವು. ಇದು ಇತ್ತೀಚಿನ ಒಪ್ಪಂದದಂತೆ ಪರಸ್ಪರ ರಕ್ಷಣಾ ಒಪ್ಪಂದವನ್ನು ಹೊಂದಿದೆ. 1991 ರಲ್ಲಿ ಸೋವಿಯತ್ ಒಕ್ಕೂಟದ ವಿಸರ್ಜನೆಯ ನಂತರ, ಈ ಒಪ್ಪಂದವನ್ನು ರದ್ದುಗೊಳಿಸಲಾಯಿತು. ಪರಿಣಾಮವಾಗಿ ಸಂಬಂಧಗಳು ತಾತ್ಕಾಲಿಕವಾಗಿ ಹದಗೆಟ್ಟವು.
ಹೀಗಿದ್ದರೂ, 2000 ರ ದಶಕದ ಆರಂಭದಿಂದಲೂ ಪುಟಿನ್ ಆಡಳಿತದ ರಷ್ಯಾವು ಕಿಮ್ ಸರ್ವಾಧಿಕಾರದ ಉತ್ತರ ಕೊರಿಯಾಕ್ಕೆ ಹತ್ತಿರವಾಗಿದೆ. 2022 ರಲ್ಲಿ ಉಕ್ರೇನ್ ಮೇಲಿನ ಯುದ್ಧದಿಂದಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಆರ್ಥಿಕ ನಿರ್ಬಂಧಕ್ಕೆ ರಷ್ಯಾ ಗುರಿಯಾಯಿತು. ಆಗ ರಷ್ಯಾಗೆ ಬೆಂಬಲವಾಗಿ ನಿಂತಿದ್ದು ಉತ್ತರ ಕೊರಿಯಾ. ರಷ್ಯಾ ಮತ್ತು ಉತ್ತರ ಕೊರಿಯಾವು ಪಾಶ್ಚಿಮಾತ್ಯ ಉದಾರವಾದಿ ಕ್ರಮದ ವಿರುದ್ಧ ಒಟ್ಟಾಗಿ ಈಗಲೂ ನಿಂತಿವೆ. ಇದನ್ನೂ ಓದಿ: ಕುರಾನ್‌ಗೆ ಅಪಮಾನ – ಠಾಣೆಗೆ ನುಗ್ಗಿ ಆರೋಪಿಯನ್ನ ಗುಂಡಿಕ್ಕಿ ಕೊಂದ ಉದ್ರಿಕ್ತ ಗುಂಪು!
ಈಗಿನ ಒಪ್ಪಂದ ಏನು?
ರಷ್ಯಾ ಮತ್ತು ಉತ್ತರ ಕೊರಿಯಾ ನಡುವಿನ ಒಪ್ಪಂದವು ಪರಸ್ಪರ ಮಿಲಿಟರಿ ಬೆಂಬಲ ಮತ್ತು ತಾಂತ್ರಿಕ ನೆರವು ನೀಡುವುದು. ಪರಸ್ಪರ ರಕ್ಷಣಾ ನಿಬಂಧನೆಗಳು ಈ ಒಪ್ಪಂದದಲ್ಲಿ ನಿರ್ಣಾಯಕವಾಗಿದೆ. ಉದಾಹರಣೆಗೆ, ಉತ್ತರ ಕೊರಿಯಾ ಮೇಲೆ ಬೇರೊಂದು ರಾಷ್ಟ್ರ ಸಶಸ್ತ್ರ ಆಕ್ರಮಣ ನಡೆಸಿದರೆ ರಷ್ಯಾ ತಕ್ಷಣ ಕೊರಿಯಾಗೆ ಮಿಲಿಟರಿ ರಕ್ಷಣೆ ನೀಡುತ್ತದೆ. ಅದೇ ರೀತಿ, ರಷ್ಯಾ ಮೇಲೆ ಬೇರೊಂದು ರಾಷ್ಟ್ರ ಆಕ್ರಮಣ ಮಾಡಿದರೆ ಉತ್ತರ ಕೊರಿಯಾ ತಕ್ಷಣದ ಮಿಲಿಟರಿ ನೆರವು ನೀಡಬೇಕು. ಇದು ಉಭಯ ರಾಷ್ಟ್ರಗಳ ನಡುವೆ ಆಗಿರುವ ಪ್ರಮುಖ ಒಪ್ಪಂದ. ಇಬ್ಬರ ಈ ಒಪ್ಪಂದವು ಎರಡು ರಾಷ್ಟ್ರಗಳ ನಡುವಿನ 1961 ರ ಒಪ್ಪಂದವನ್ನು ಪ್ರತಿಧ್ವನಿಸುತ್ತದೆ ಎಂದು ಕೌನ್ಸಿಲ್ ಫಾರ್ ಫಾರಿನ್ ರಿಲೇಶನ್ಸ್‌ನಲ್ಲಿ ಕೊರಿಯಾ ಅಧ್ಯಯನಕಾರ ಫೆಲೋ ಸ್ಯೂ ಮಿ ಟೆರ್ರಿ ತಿಳಿಸಿದ್ದಾರೆ.
ಜಪಾನ್-ದಕ್ಷಿಣ ಕೊರಿಯಾಗೆ ನಡುಕ
ರಷ್ಯಾ ಮತ್ತು ಉತ್ತರ ಕೊರಿಯಾ ಮಿಲಿಟರಿ ಒಪ್ಪಂದದಿಂದ ದಕ್ಷಿಣ ಕೊರಿಯಾ ಮತ್ತು ಜಪಾನ್‌ಗೆ ನಡುಕ ಹುಟ್ಟಿದೆ. ಈ ಒಪ್ಪಂದವು ತಮಗೆ ನೇರ ಭದ್ರತಾ ಬೆದರಿಕೆ ಎಂದು ಎರಡೂ ರಾಷ್ಟ್ರಗಳು ಭಾವಿಸಿದಂತಿದೆ. ಉತ್ತರ ಕೊರಿಯಾದ ಪರಮಾಣು ಕಾರ್ಯಕ್ರಮ ಮತ್ತು ಮಿಲಿಟರಿ ಸಾಮರ್ಥ್ಯದ ಬಗ್ಗೆ ಎರಡೂ ದೇಶಗಳು ಬಹಳ ಹಿಂದಿನಿಂದಲೂ ಆತಂಕ ವ್ಯಕ್ತಪಡಿಸಿವೆ. ಹೀಗಾಗಿ ಜಪಾನ್ ಮತ್ತು ದಕ್ಷಿಣ ಕೊರಿಯಾ ರಾಷ್ಟ್ರಗಳು ತಮ್ಮ ರಕ್ಷಣಾ ವ್ಯವಸ್ಥೆ ಬಲಪಡಿಸುವ ಮತ್ತು ಭದ್ರತಾ ನೀತಿಗಳನ್ನು ಪರಾಮರ್ಶಿಸುವ ಕಡೆಗೆ ಮತ್ತೆ ಗಮನ ಕೇಂದ್ರೀಕರಿಸುವ ಸಾಧ್ಯತೆ ಇದೆ. ಜಪಾನ್ ಈಗಾಗಲೇ ತನ್ನ ದೀರ್ಘಕಾಲದ ಶಾಂತಿವಾದಿ ವಿದೇಶಾಂಗ ನೀತಿಯಿಂದ ದೂರ ಸರಿದಿದೆ. ತನ್ನ ಮಿಲಿಟರಿ ಶಕ್ತಿಯನ್ನು ನಿರ್ಮಿಸುವ ಪ್ರಕ್ರಿಯೆಯಲ್ಲಿದೆ. ಇತ್ತ ದಕ್ಷಿಣ ಕೊರಿಯಾ ತನ್ನ ರಾಷ್ಟ್ರೀಯ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಕರೆದಿದೆ. ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಕಳುಹಿಸುವ ವಿಚಾರವನ್ನು ಈಗ ಪರಿಗಣಿಸುವುದಾಗಿ ಹೇಳಿದೆ. ಇದು ಇಲ್ಲಿಯವರೆಗೆ ಅದನ್ನು ವಿರೋಧಿಸಿತ್ತು. ಇದನ್ನೂ ಓದಿ: ಸಮುದ್ರದ ಮಧ್ಯೆ ಚೀನಾ-ಫಿಲಿಪ್ಪೈನ್ಸ್ ಸೇನೆಗಳ ನಡುವೆ ಜಟಾಪಟಿ
ರಷ್ಯಾ-ಉತ್ತರ ಕೊರಿಯಾ ಒಪ್ಪಂದವು ಇತರೆಡೆಗಳಲ್ಲಿ, ವಿಶೇಷವಾಗಿ ಇರಾನ್‌ನೊಂದಿಗೆ ಇದೇ ರೀತಿಯ ಪಾಲುದಾರಿಕೆಯನ್ನು ಪ್ರೋತ್ಸಾಹಿಸಬಹುದು. ಪಾಶ್ಚಿಮಾತ್ಯರಿಗೆ ಇವುಗಳು ದೊಡ್ಡ ಬೆದರಿಕೆ ನೀಡುವುದು ಗ್ಯಾರಂಟಿ. ಉತ್ತರ ಕೊರಿಯಾದ ಸಾಂಪ್ರದಾಯಿಕ ಮಿತ್ರ ಚೀನಾ. ಒಪ್ಪಂದವು ಏಷ್ಯಾದಲ್ಲಿ ಪಾಶ್ಚಿಮಾತ್ಯ ವಿರೋಧಿ ಭದ್ರಕೋಟೆಯನ್ನು ಬಲಪಡಿಸುತ್ತದೆ. ಆದರೆ, ಉತ್ತರ ಕೊರಿಯಾದೊಂದಿಗೆ ರಷ್ಯಾದ ಮಿಲಿಟರಿ ಸಹಯೋಗದ ಬಗ್ಗೆ ಚೀನಾ ಜಾಗರೂಕತೆಯಿಂದ ಇರಬೇಕಾಗುತ್ತದೆ. ಈ ಒಪ್ಪಂದವು ಉತ್ತರ ಕೊರಿಯಾದ ಪ್ಯೊಂಗ್ಯಾಂಗ್ ಮೇಲೆ ಚೀನಾದ ಭೌಗೋಳಿಕ ರಾಜಕೀಯ ಪ್ರಭಾವವನ್ನು ದುರ್ಬಲಗೊಳಿಸಬಹುದು.
ನ್ಯಾಟೊ ಎದೆಯಲ್ಲಿ ಢವಢವ
ದಕ್ಷಿಣ ಕೊರಿಯಾ ಮತ್ತು ಜಪಾನ್ ಈಗ ಯುನೈಟೆಡ್ ಸ್ಟೇಟ್ಸ್ ಜೊತೆಗಿನ ತಮ್ಮ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸಲಿವೆ. ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಈಗಾಗಲೇ ತನ್ನ ಮಿತ್ರರಾಷ್ಟ್ರಗಳಿಗೆ ಬದ್ಧವಾಗಿರುವುದಾಗಿ ಪುನರುಚ್ಚರಿಸಿದೆ. NATO ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಕೂಡ, ರಷ್ಯಾ-ಉತ್ತರ ಕೊರಿಯಾ ಒಪ್ಪಂದದ ಬಗ್ಗೆ ಆಳವಾದ ಕಳವಳ ವ್ಯಕ್ತಪಡಿಸಿದ್ದಾರೆ. ‘ಈ ಒಪ್ಪಂದ ಜಾಗತಿಕ ಭದ್ರತೆಗೆ ಅಪಾಯಕಾರಿ ಮತ್ತು ಹೆಚ್ಚಿದ ಪರಮಾಣು ಬಳಕೆಯ ಸಾಧ್ಯತೆಯನ್ನು ಎತ್ತಿ ತೋರುತ್ತಿದೆ. ನಾವು ಹಿಂದೆಂದೂ ನೋಡಿರದ ರೀತಿಯಲ್ಲಿ ಸರ್ವಾಧಿಕಾರಿ ಶಕ್ತಿಗಳು ಹೆಚ್ಚೆಚ್ಚು ಪಡೆಗಳನ್ನು ಸೇರುತ್ತಿವೆ. ಪರಸ್ಪರ ಬೆಂಬಲಿಸುತ್ತಿವೆ’ ಎಂದಿದ್ದಾರೆ. ಇದನ್ನೂ ಓದಿ: ಹಜ್ ಯಾತ್ರೆಗೆ ತೆರಳಿದ್ದ ಬೆಂಗ್ಳೂರಿನ ಇಬ್ಬರು ಸಾವು – ಕರ್ನಾಟಕದ 10,000ಕ್ಕೂ ಹೆಚ್ಚು ಮಂದಿ ಸೇಫ್!
ರಷ್ಯಾ-ಉಕ್ರೇನ್ ಯುದ್ಧದ ಮೆಲುಕು
ಉತ್ತರ ಕೊರಿಯಾ ಜೊತೆಗಿನ ರಷ್ಯಾ ಒಪ್ಪಂದಕ್ಕೆ ಉಕ್ರೇನ್ ಮೇಲಿನ ಯುದ್ಧವೂ ಒಂದು ಕಾರಣ. ರಷ್ಯಾ ಮತ್ತು ಉಕ್ರೇನ್ ನಡುವಿನ ಪ್ರಸ್ತುತ ಬಿಕ್ಕಟ್ಟಿಗೆ ಮುಖ್ಯ ಕಾರಣ ನ್ಯಾಟೊ (ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆ). ಇದು ಯುಎಸ್, ಯುಕೆ, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ 30 ದೇಶಗಳ ಗುಂಪುಗಳನ್ನು ಒಳಗೊಂಡ ಸಂಸ್ಥೆಯಾಗಿದೆ. ಉಕ್ರೇನ್ ನ್ಯಾಟೊ ಸಂಸ್ಥೆಗೆ ಸೇರಲು ಬಯಸಿತ್ತು. NATO ಕೂಡ ಉಕ್ರೇನ್ ಅನ್ನು ತನ್ನ ಸದಸ್ಯರನ್ನಾಗಿ ಮಾಡಿಕೊಳ್ಳುವ ಬಗ್ಗೆ ಮುಕ್ತವಾಗಿತ್ತು. ಆದರೆ ಉಕ್ರೇನ್ ನಿರ್ಧಾರಕ್ಕೆ ರಷ್ಯಾ ವಿರೋಧ ವ್ಯಕ್ತಪಡಿಸಿತ್ತು. ನ್ಯಾಟೊ ಸೇರಿದಂತೆ ಯಾವುದೇ ಅಂತರರಾಷ್ಟ್ರೀಯ ಒಕ್ಕೂಟಕ್ಕೆ ಉಕ್ರೇನ್ ಸೇರಬಾರದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಎಚ್ಚರಿಸಿದ್ದರು. ಆದರೆ ಅವರ ಮಾತನ್ನು ಉಕ್ರೇನ್ ಕೇಳದೇ ನ್ಯಾಟೊ ಸೇರಲು ಮುಂದಾಯಿತು. ಇದರ ಪರಿಣಾಮದಿಂದ ರಷ್ಯಾ ಯುದ್ಧವನ್ನು ಎದುರಿಸಬೇಕಾಯಿತು.
ಉಕ್ರೇನ್ ನ್ಯಾಟೊ ಸೇರಲು ಪುಟಿನ್ ವಿರೋಧ ಯಾಕೆ?
ಉಕ್ರೇನ್ NATOದಲ್ಲಿ ತನ್ನ ಸದಸ್ಯ ಸ್ಥಾನ ಪಡೆಯಲು ರಷ್ಯಾ ಬಯಸುವುದಿಲ್ಲ. ಏಕೆಂದರೆ NATO ಸದಸ್ಯ ರಾಷ್ಟ್ರವು ಯಾವುದೇ ಬಾಹ್ಯ ದಾಳಿಯ ಸಂದರ್ಭದಲ್ಲಿ ಎಲ್ಲಾ ಸದಸ್ಯರ ಸಾಮೂಹಿಕ ಬೆಂಬಲಕ್ಕೆ ಅರ್ಹವಾಗಿರುತ್ತದೆ. ಹೀಗಾಗಿ ಉಕ್ರೇನ್ ಅನ್ನು NATOದಲ್ಲಿ ಸದಸ್ಯನಾಗಲು ರಷ್ಯಾ ಒಪ್ಪುತ್ತಿಲ್ಲ. ಉಕ್ರೇನ್ ನ್ಯಾಟೊ ಸೇರಿದರೆ ಅದರ ಒಕ್ಕೂಟ ರಾಷ್ಟ್ರಗಳ ಸೇನೆಯು, ಉಕ್ರೇನ್‌ನ ಗಡಿಯಲ್ಲಿ ಪಡೆಗಳನ್ನು ನಿಯೋಜಿಸುತ್ತವೆ. ಉಕ್ರೇನ್ ಮತ್ತು ರಷ್ಯಾ ಗಡಿಗೆ ನ್ಯಾಟೊ ಒಕ್ಕೂಟ ರಾಷ್ಟ್ರಗಳ ಸೇನೆ ನಿಯೋಜನೆ ಸಾಧ್ಯವಾಗಬಾರದು ಎಂಬುದು ಪುಟಿನ್ ನಿಲುವು. ಹೀಗಾಗಿ ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೆಕ್ಕಾದಲ್ಲಿ ಮೃತಪಟ್ಟ 645 ಹಜ್ ಯಾತ್ರಿಕರ ಪೈಕಿ 68 ಮಂದಿ ಭಾರತೀಯರು!
ಮಾಸ್ಕೋ: ನ್ಯಾಟೋಗೆ ಸೇರಲು ಮುಂದಾದ ಫಿನ್ಲೆಂಡ್‌ಗೆ ರಷ್ಯಾ ಈಗ ಶಾಕ್ ಕೊಟ್ಟಿದೆ. ಇಂದಿನಿಂದ ಫಿನ್ಲೆಂಡ್‌ಗೆ ನೈಸರ್ಗಿಕ ಅನಿಲ ಸರಬರಾಜನ್ನು ಸ್ಥಗಿತಗೊಳಿಸಿದೆ.
ರಷ್ಯಾ-ಉಕ್ರೇನ್ ಯುದ್ಧದ ನಡುವೆ ನ್ಯಾಟೋ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದ ಫಿನ್ಲೆಂಡ್ ರುಬೆಲ್‌ನಲ್ಲಿ ಪಾವತಿಸುವ ಷರತ್ತನ್ನು ನಿರಾಕರಿಸಿತ್ತು. ಈ ಕಾರಣಕ್ಕೆ ರಷ್ಯಾ ಫಿನ್ಲೆಂಡ್‌ಗೆ ನೈಸರ್ಗಿಕ ಅನಿಲ ಸರಬರಾಜನ್ನು ಸ್ಥಗಿತಗೊಳಿಸಿದೆ ಎಂದು ಫಿನ್ನಿಷ್ ಸರ್ಕಾರಿ ಸ್ವಾಮ್ಯದ ಕಂಪೆನಿ ಹೇಳಿದೆ. ಇದನ್ನೂ ಓದಿ: ಮಸ್ಕ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ – ಬಾಯಿ ಮುಚ್ಚಿಸಲು ಕೋಟಿ ಹಣ ಸಂದಾಯ
ಉಕ್ರೇನ್‌ನಲ್ಲಿನ ಯುದ್ಧದಿಂದಾಗಿ ರಷ್ಯಾದ ಕಚ್ಚಾತೈಲಗಳ ಮೇಲೆ ಯುರೋಪಿಯನ್ ಒಕ್ಕೂಟಗಳು ರಷ್ಯಾಮೇಲೆ ನಿರ್ಬಂಧ ಹೇರಲು ಮುಂದಾಗಿದ್ದವು. ಈ ವೇಳೆ ಸ್ನೇಹಪರವಲ್ಲದ ವಿದೇಶಿ ಖರೀದಿದಾರರು ರಷ್ಯಾದ ಕರೆನ್ಸಿಯಲ್ಲೇ ಗ್ಯಾಸ್‌ಗೆ ಖರೀದಿಸಬೇಕು ಎಂದು ರಷ್ಯಾ ಒತ್ತಾಯಿಸಿತ್ತು. ಫಿನ್ಲೆಂಡ್ ನ್ಯಾಟೋ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ ನಂತರ ರಷ್ಯಾ ಈ ಕ್ರಮಕೈಗೊಂಡಿರುವುದು ವಿಶೇಷ. ಇದನ್ನೂ ಓದಿ: ಜ್ಞಾನವಾಪಿ ಕೇಸ್ ವಾರಣಾಸಿ ಕೋರ್ಟ್‍ಗೆ ವರ್ಗಾವಣೆ – ವಾದ, ಪ್ರತಿವಾದ ಹೇಗಿತ್ತು?
ಕಳೆದ ತಿಂಗಳ ಕೊನೆಯಲ್ಲಿ ಪೋಲೆಂಡ್ ಮತ್ತು ಬಲ್ಗೇರಿಯಾಗೆ ನೈಸರ್ಗಿಕ ಅನಿಲವನ್ನು ಸ್ಥಗಿತಗೊಳಿಸಿತ್ತು. ಆದರೆ, ಫಿನ್ಲೆಂಡ್‌ಗೆ ಅನಿಲ ಕಡಿತಗೊಳಿಸಿದ್ದು, ಇದರೊಂದಿಗೆ ಇತರ ಸಣ್ಣ-ಸಣ್ಣ ಗ್ರಾಹಕರೂ ರಷ್ಯಾದ ನೈಸರ್ಗಿಕ ಅನಿಲದಿಂದ ದೂರ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
12 ಸೇನಾ ಘಟಕ ಸ್ಥಾಪಿಸಲು ನಿರ್ಧಾರ: ನ್ಯಾಟೋ ವಿಸ್ತರಣೆಗೆ ಪ್ರತಿಯಾಗಿ ಪಶ್ಚಿಮದ ಮಿಲಿಟರಿ ಜಿಲ್ಲೆಯಲ್ಲಿ 12 ಹೊಸ ಸೇನಾ ಘಟಕಗಳು ಮತ್ತು ವಿಭಾಗಗಳ ನೆಲೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವ ಸೆರ್ಗೈ ಶೋಯಿಗು ತಿಳಿಸಿದ್ದಾರೆ.
ಸ್ವೀಡನ್ ಮತ್ತು ಫಿನ್ಲೆಂಡ್ ನ್ಯಾಟೋ ಸೇರಲು ಅರ್ಜಿ ಸಲ್ಲಿಸಿರುವುದನ್ನು ವರ್ಚುವಲ್ ಸಭೆಯಲ್ಲಿ ಉಲ್ಲೇಖಿಸಿದ ಅವರು, ಪಶ್ಚಿಮದ ಮಿಲಿಟರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬೆದರಿಕೆಗೆ ಪ್ರತಿಯಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಸೇನೆಯು ಎರಡು ಸಾವಿರಕ್ಕೂ ಹೆಚ್ಚು ಯೂನಿಟ್ ಸೇನಾ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ಶೀಘ್ರವೇ ಪಡೆಯಲಿದೆ ಎಂದು ಹೇಳಿದ್ದಾರೆ.