Tag: ನೌಟಂಕಿ

  • ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಮತ್ತೊಂದು ನೌಟಂಕಿ: ಸದ್ದಿಲ್ಲದೇ ಶೂಟಿಂಗ್ ಕೂಡ ಮುಗಿದಿದೆ

    ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಮತ್ತೊಂದು ನೌಟಂಕಿ: ಸದ್ದಿಲ್ಲದೇ ಶೂಟಿಂಗ್ ಕೂಡ ಮುಗಿದಿದೆ

    ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮೂಲಕವಾಗಿ ನ್ಯಾಷನಲ್, ಇಂಟ್ರನ್ಯಾಷನಲ್ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇವರ ನಿರ್ದೇಶನದಲ್ಲಿ ಮೂಡಿ ಬರುವ ಮುಂದಿನ ಸಿನಿಮಾ ಯಾವುದು ಎಂದು ಅಭಿಮಾನಿಗಳಿಗೆ ಕುತೂಹಲವಿತ್ತು. ಸದ್ದಿಲ್ಲದೇ ವಿವೇಕ್ ಮತ್ತೊಂದು ಸಿನಿಮಾ ರೆಡಿ ಮಾಡಿದ್ದಾರೆ. ಅದು ಈಗ ತೆರೆಗೆ ಬರಲು ಸಿದ್ಧವಾಗಿದೆ.


    ಈ ಚಿತ್ರಕ್ಕೆ ಅವರು ನೌಟಂಕಿ ಎಂದು ಹೆಸರಿಟ್ಟಿದ್ದು, ಅನುಪಮ್ ಖೇರ್ ಲೀಡ್ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಗೆಳೆಯ ಸತೀಶ್ ಕೌಶಿಕ್ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರೂಮಿ ಜಫ್ರಿ ಅವರು ಈ ಚಿತ್ರಕ್ಕೆ ಸ್ಕ್ರಿಪ್ಟ್ ಬರೆದಿದ್ದರೆ, ವಿವೇಕ್ ಕೇವಲ  ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಇದನ್ನು ಓದಿ:ಕುವೈತ್‌ನಲ್ಲಿ ದಳಪತಿ ವಿಜಯ್ ನಟನೆಯ `ಬೀಸ್ಟ್’ ಸಿನಿಮಾ ಬ್ಯಾನ್

    “2021ರ ಮಾರ್ಚ್ ತಿಂಗಳಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಶೂಟಿಂಗ್ನಲ್ಲಿ ತೊಡಗಿದ್ದೆವು. ಆ ಸಂದರ್ಭದಲ್ಲಿ ಕೊರೊನಾದಿಂದ ಲಾಕ್ಡೌನ್ ಘೋಷಣೆ ಆಯಿತು. ಅನುಪಮ್ ಖೇರ್ ಅವರು ಅಮೆರಿಕದಿಂದ ಶೂಟಿಂಗ್‌ಗಾಗಿ ಭಾರತಕ್ಕೆ ಬಂದಿದ್ದರು. ಲಾಕ್‌ಡೌನ್‌ನಿಂದ ಅವರು ಕೂಡ ಇಲ್ಲೇ ಉಳಿಯಬೇಕಾಯಿತು. ಈ ಸಮಯವನ್ನು ಬಳಕೆ ಮಾಡಿಕೊಳ್ಳಲು ಮತ್ತೊಂದು ಸಿನಿಮಾದ ಶೂಟಿಂಗ್ ಭೋಪಾಲ್‌ನಲ್ಲಿ ಪೂರ್ಣಗೊಳಿಸಿದೆವು” ಎಂದಿದ್ದಾರೆ ವಿವೇಕ್ ಹೇಳಿದ್ದಾರೆ.

    kashmir
    ಇದು ತುಂಬಾ ಕಡಿಮೆ ಬಜೆಟ್‌ನಲ್ಲಿ ಸಿದ್ಧಗೊಂಡ ಸಿನಿಮಾ ಎನ್ನಲಾಗುತ್ತಿದೆ. ಕಲೆ, ಸೃಜನಶೀಲತೆ, ರಂಗಭೂಮಿ ಹಾಗೂ ಸಿನಿಮಾಗೆ ನಾವು ನೀಡುತ್ತಿರುವ ಟ್ರಿಬ್ಯೂಟ್ ಎಂದು ವಿವೇಕ್ ಹೇಳಿಕೊಂಡಿದ್ದಾರೆ. “ನೌಟಂಕಿ ನನಗೆ ವಿಶೇಷ ಸಿನಿಮಾವಾಗಿದೆ. ನನ್ನ ಹಳೆಯ ಮತ್ತು ಆತ್ಮೀಯ ಸ್ನೇಹಿತ ಸತೀಶ್ ಕೌಶಿಕ್ ಈ ಬಾರಿ ನನ್ನ ಸಹನಟನಾಗಿ ನಟಿಸಿದ್ದಾರೆ. ನಾವು ಹಲವು ವರ್ಷಗಳ ನಂತರ ಒಟ್ಟಿಗೆ ಕೆಲಸ ಮಾಡಿದ್ದೇವೆ’ ಎಂದು ಅನುಪಮ್ ಖೇರ್ ಹೇಳಿದ್ದಾರೆ.

    ವಿವೇಕ್ ಅಗ್ನಿಹೋತ್ರಿ ಮಾಡುವ ಸಿನಿಮಾಗಳ ಬಜೆಟ್ ತುಂಬಾನೇ ಕಡಿಮೆ ಇರುತ್ತದೆ. ದಿ ಕಾಶ್ಮೀರ್ ಫೈಲ್ಸ್ ಅಂದಾಜು 20 ಕೋಟಿಯಲ್ಲಿ ಸಿದ್ಧಗೊಂಡ ಚಿತ್ರ. ಈ ಸಿನಿಮಾ ಶೂಟಿಂಗ್ ಲಾಕ್‌ಡೌನ್‌ನಿಂದ ಅರ್ಧಕ್ಕೆ ನಿಂತಾಗ ಸೈಡ್‌ಲೈನ್‌ನಲ್ಲಿ ಮತ್ತೊಂದು ಸಿನಿಮಾದ ಶೂಟಿಂಗ್ ಪೂರ್ಣಗೊಳಿಸಿದ್ದಾರೆ ನಿರ್ದೇಶಕರು.