Tag: ನೌಕಾ ಸೇನೆ

  • ಆಪರೇಷನ್‌ ಸಿಂಧೂರ| ಪಾಕ್‌ ಬೆಡಗಿಗೆ ಮಾಹಿತಿ ರವಾನೆ – ನೌಕಾ ಸೇನೆಯ ಪ್ರಧಾನ ಕಚೇರಿಯ ಉದ್ಯೋಗಿ ಅರೆಸ್ಟ್‌

    ಆಪರೇಷನ್‌ ಸಿಂಧೂರ| ಪಾಕ್‌ ಬೆಡಗಿಗೆ ಮಾಹಿತಿ ರವಾನೆ – ನೌಕಾ ಸೇನೆಯ ಪ್ರಧಾನ ಕಚೇರಿಯ ಉದ್ಯೋಗಿ ಅರೆಸ್ಟ್‌

    ನವದೆಹಲಿ: ಆಪರೇಷನ್‌ ಸಿಂಧೂರ (Operation Sindoor) ಕಾರ್ಯಾಚರಣೆ ವೇಳೆ ಪಾಕಿಸ್ತಾನದ (Pakistan) ಪರ ಬೇಹುಗಾರಿಕೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ದೆಹಲಿಯ ನೌಕಾ ಸೇನೆಯ ಪ್ರಧಾನ ಕಚೇರಿಯ ಉದ್ಯೋಗಿಯನ್ನು ರಾಜಸ್ಥಾನ ಪೊಲೀಸರ (Rajasthan Police) ಗುಪ್ತಚರ ವಿಭಾಗ ಬಂಧಿಸಿದೆ.

    ಹರಿಯಾಣದ ರೇವಾರಿಯದ ಪುನ್ಸಿಕಾ ನಿವಾಸಿ ವಿಶಾಲ್ ಯಾದವ್ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ. ಈತನನ್ನು 1923 ರ ಅಧಿಕೃತ ರಹಸ್ಯ ಕಾಯ್ದೆಯಡಿ ಪೊಲೀಸರು ಬಂಧಿಸಿದ್ದಾರೆ.

    ಯಾದವ್ ಡಾಕ್‌ಯಾರ್ಡ್ ನಿರ್ದೇಶನಾಲಯದಲ್ಲಿ ಕೆಲಸ ಮಾಡುತ್ತಿದ್ದ ಈತ ಸಾಮಾಜಿಕ ಜಾಲತಾಣದಲ್ಲಿ (Social Media) ಪ್ರಿಯಾ ಶರ್ಮಾ ಎಂಬಾಕೆಯ ಜೊತೆ ಸಂಪರ್ಕದಲ್ಲಿದ್ದ. ನೌಕಾ ಕಾರ್ಯಾಚರಣೆಯ ನಿರ್ಣಾಯಕ ಕಾರ್ಯತಂತ್ರದ ಬಗ್ಗೆ ಮಾಹಿತಿಯನ್ನು ಪಡೆಯಲು ಆಕೆ ವಿಶಾಲ್ ಯಾದವ್‌ಗೆ ಹಣದ ಆಮಿಷ ಒಡ್ಡಿದ್ದಳು. ಇದನ್ನೂ ಓದಿ: ಎಫ್‌ 35ಗೆ ಪಾರ್ಕಿಂಗ್‌ ಶುಲ್ಕ ವಿಧಿಸಲು ಮುಂದಾದ ತಿರುವನಂತಪುರ ಏರ್‌ಪೋರ್ಟ್‌

     

    ಯಾದವ್ ಆನ್‌ಲೈನ್ ಗೇಮಿಂಗ್‌ ವ್ಯಸನಿಯಾಗಿದ್ದ ಈತ ಹಣಕಾಸು ಸಂಕಷ್ಟಕ್ಕೆ ಸಿಲುಕಿದ್ದ. ಹೀಗಾಗಿ ಆತ ಸೂಕ್ಮ ಮಾಹಿತಿಯನ್ನು ಸೋರಿಕೆ ಮಾಡುತ್ತಿದ್ದ. ಈತನಿಗೆ ಕ್ರಿಪ್ಟೋ ಕರೆನ್ಸಿ ಮೂಲಕ ಹಣವನ್ನು ಪಾವತಿಸಲಾಗುತ್ತಿತ್ತು. ಇದನ್ನೂ ಓದಿ: ಕಬಿನಿ ಡ್ಯಾಂಗೆ ಶಿವಣ್ಣ ದಂಪತಿ ಭೇಟಿ

    ವಿಶಾಲ್‌ ಫೋನ್‌ ಚಾಟ್‌ ವಿವರ ಸೇರಿದಂತೆ ಹಲವು ದಾಖಲೆಗಳಿಂದ ಈತ ಮಾಹಿತಿ ಸೋರಿಕೆ ಮಾಡಿದ್ದಕ್ಕೆ ಸಾಕ್ಷ್ಯಗಳು ಲಭ್ಯವಾಗಿದೆ. ಈತ ದೀರ್ಘಕಾಲದಿಂದ ಬೇಹುಗಾರಿಕೆ ಮಾಡುತ್ತಿದ್ದು, ಅದರಲ್ಲೂ ಆಪರೇಷನ್ ಸಿಂಧೂರ್ ಸಮಯದಲ್ಲಿ ನೌಕಾ ಸೇನೆಯ ರಹಸ್ಯ ವಿವರ ಸೋರಿಕೆ ಮಾಡಿದ್ದ ಎಂದು ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ.

  • Anytime, Anywhere – ಬ್ರಹ್ಮೋಸ್‌ ಹಾರಿಸಿ ಎಲ್ಲದ್ದಕ್ಕೂ ಸಿದ್ಧ ಎಂದ ನೌಕಾಸೇನೆ

    Anytime, Anywhere – ಬ್ರಹ್ಮೋಸ್‌ ಹಾರಿಸಿ ಎಲ್ಲದ್ದಕ್ಕೂ ಸಿದ್ಧ ಎಂದ ನೌಕಾಸೇನೆ

    ನವದೆಹಲಿ: ಪಹಲ್ಗಾಮ್‌ ಉಗ್ರರ ದಾಳಿಯ (Pahalgam Terror Attack) ಬಳಿಕ ಭಾರತದ ನೌಕಾಸೇನೆ (Indian Navy) ಬ್ರಹ್ಮೋಸ್‌ ಕ್ಷಿಪಣಿಯನ್ನು ಯುದ್ಧನೌಕೆಯಿಂದ ಹಾರಿಸಿದೆ.

    ಯುದ್ಧ ನೌಕೆಯಿಂದ ಹಾರಿಸಿ Anytime, Anywhere ಎಂದು ಭಾರತೀಯ ನೌಕಾಸೇನೆ ಪೋಸ್ಟ್‌ ಮಾಡಿದೆ.

    ಪೋಸ್ಟ್‌ನಲ್ಲಿ ಏನಿದೆ?
    ಭಾರತೀಯ ಯುದ್ಧನೌಕೆಗಳು ಅರೇಬಿಯನ್ ಸಮುದ್ರದಲ್ಲಿ ಅನೇಕ ಹಡಗು ವಿರೋಧಿ ಗುಂಡಿನ ದಾಳಿಗಳನ್ನು ನಡೆಸಿದೆ. ನೌಕಾಪಡೆಯು ದೇಶದ ಹಿತಾಸಕ್ತಿಗಳನ್ನು ರಕ್ಷಿಸಲು ಸಿದ್ಧವಾಗಿದೆ ಎಂದು ಹೇಳಿದೆ.

    ಸಮುದ್ರದ ಮಧ್ಯದಲ್ಲಿರುವ ಯುದ್ಧನೌಕೆಯಿಂದ ಬ್ರಹ್ಮೋಸ್ (BrahMos) ಮತ್ತು ಮೇಲ್ಮೈ ವಿರೋಧಿ ಕ್ರೂಸ್ ಕ್ಷಿಪಣಿಗಳನ್ನು ಹಾರಿಸುತ್ತಿರುವ ದೃಶ್ಯಗಳನ್ನು ನೌಕಾಪಡೆಯು ಹಂಚಿಕೊಂಡಿದೆ.

    ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಭಾರತ ಮತ್ತು ಪಾಕಿಸ್ತಾನ ಸಂಬಂಧ ಮತ್ತಷ್ಟು ಹಳಸಿದೆ. ಪಾಕಿಸ್ತಾನ ಕ್ಷಿಪಣಿ ಪರೀಕ್ಷೆ ಮಾಡುತ್ತಿದ್ದರೆ ಇನ್ನೊಂದು ಕಡೆ ಭಾರತ ಅರಬ್ಬಿ ಸಮುದ್ರದಲ್ಲಿ ಕ್ಷಿಪಣಿ ಪರೀಕ್ಷೆ ನಡೆಸುತ್ತಿದೆ.

    ಬ್ರಹ್ಮೋಸ್‌ ವಿಶೇಷತೆ ಏನು?
    ಚಲಿಸುವ ಪಥದ ಆಧಾರದ ಮೇಲೆ ಕ್ಷಿಪಣಿಗಳನ್ನು ಬ್ಯಾಲಿಸ್ಟಿಕ್‌ ಮತ್ತು ಕ್ರೂಸ್‌ ಕ್ಷಿಪಣಿಗಳಾಗಿ ವಿಂಗಡಿಸಲಾಗುತ್ತದೆ. ಬ್ಯಾಲಿಸ್ಟಿಕ್‌ ಕ್ಷಿಪಣಿ ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ ನಂತರ ಭೂಮಿಗೆ ಅಪ್ಪಳಿಸುತ್ತದೆ. ಭಾರತದ ಅಗ್ನಿ, ಪೃಥ್ವಿ ಬ್ಯಾಲಿಸ್ಟಿಕ್‌ ಕ್ಷಿಪಣಿಗಳಾಗಿವೆ. ಇದನ್ನೂ ಓದಿ: ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮೋದಿ

    ಕ್ರೂಸ್‌ ಕ್ಷಿಪಣಿ ಶಬ್ಧದ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಹೋಗುತ್ತದೆ. ಆರಂಭದಲ್ಲಿ ಕ್ರೂಸ್‌ ಕ್ಷಿಪಣಿ ಕೆಳಹಂತದಲ್ಲಿ ಭೂಮಿಯ ಮೇಲ್ಮೆಗೆ ಸಮಾನಂತರವಾಗಿ ಶಬ್ಧದ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸಿ ಗುರಿ ತಲುಪುತ್ತಿದ್ದಂತೆ ಇದರ ವೇಗ ಶಬ್ಧದ ವೇಗಕ್ಕಿಂತ ಹೆಚ್ಚಾಗಿ ಕೊನೆಗೆ ಗುರಿಯನ್ನು ತಲುಪುತ್ತದೆ. ಈ ತಂತ್ರಜ್ಞಾನದಿಂದ ಶತ್ರುಗಳ ರೇಡಾರ್‌ಗಳಿಗೆ ಸಹ ಈ ಕ್ಷಿಪಣಿಯ ಪಥವನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಈ ಕ್ಷಿಪಣಿ ಸಮುದ್ರದ ಒಳಗೆ ಹೋಗಿ ಮತ್ತೆ ಮೇಲೆ ಬರುವ ಸಾಮರ್ಥ್ಯವನ್ನು ಹೊಂದಿದೆ. ಕ್ರೂಸ್‌ ಕ್ಷಿಪಣಿಯ ವರ್ಗಕ್ಕೆ ಸೇರುವ ಬ್ರಹ್ಮೋಸ್‌ 800 ಕಿ.ಮೀ ದೂರದಲ್ಲಿರುವ ಗುರಿಯನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ.

     

    ಈ ಕ್ಷಿಪಣಿಗಳನ್ನು ಭೂಮಿಯಿಂದ, ಬಾನಿನಿಂದ, ಸಮುದ್ರದಿಂದ, ಜಲಾಂತರ್ಗಮಿ, ಚಲಿಸುವ ವಾಹನಗಳಿಂದಲೂ ಉಡಾಯಿಸಬಹುದು. ಭೂ ನೆಲೆ ಮತ್ತು ಯುದ್ಧ ನೌಕೆ ಆಧಾರಿತ ಬ್ರಹ್ಮೋಸ್ ಕ್ಷಿಪಣಿಗಳು ಗರಿಷ್ಠ 200 ಕೆಜಿ ಸಿಡಿತಲೆಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದರೆ ಯುದ್ಧ ವಿಮಾನದಿಂದ ಉಡಾವಣೆಯಾಗುವ ವೇರಿಯೆಂಟ್‌ 300 ಕೆಜಿ ಭಾರವನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ.

    ಚಲಿಸುವ ಗುರಿಯನ್ನು ನಿಖರವಾಗಿ ಹೊಡೆದು ಉರುಳಿಸವ ಸಾಮರ್ಥ್ಯ ಬ್ರಹ್ಮೋಸ್‌ಗೆ ಇದೆ. ಶತ್ರು ನೆಲೆಗಳಿಂದ ಬರುವ ಕ್ಷಿಪಣಿ ಹಾದಿಯನ್ನು ತಪ್ಪಿಸುವ ಎಲೆಕ್ಟ್ರಾನ್‌ ಸಂಕೇತಗಳ ವಿರುದ್ಧ ತನ್ನನ್ನು ರಕ್ಷಿಸಿಕೊಳ್ಳುವ ಸಿಗ್ನಲ್‌ ಜಾಮಿಂಗ್‌ ವ್ಯವಸ್ಥೆ ಬ್ರಹ್ಮೋಸ್‌ನಲ್ಲಿದೆ. ಮೊದಲ ಬಾರಿಗೆ ಬ್ರಹ್ಮೋಸ್‌ ಕ್ಷಿಪಣಿಯನ್ನು 2001ರ ಜೂನ್‌ 12 ರಲ್ಲಿ ಒಡಿಶಾದ ತೀರಪ್ರದೇದೇಶದದಲ್ಲಿ ಪರೀಕ್ಷೆ ಮಾಡಿದ್ದು ಈಗ ಭಾರತದ ಭೂ, ವಾಯು, ನೌಕಾ ಸೇನೆಗೆ ಸೇರ್ಪಡೆಯಾಗಿದೆ.

    ಪಾಕಿಸ್ತಾನಕ್ಕೆ ಹಾರಿತ್ತು ಬ್ರಹ್ಮೋಸ್‌
    ಈ ಬ್ರಹ್ಮೋಸ್‌ ಕ್ಷಿಪಣಿ ಪಾಕಿಸ್ತಾನಕ್ಕೂ ಹಾರಿತ್ತು. 2022ರ ಮಾರ್ಚ್‌ 9ರ ಸಂಜೆಯ ವೇಳೆ ಹರ್ಯಾಣದ ಸಿರ್ಸಾದಿಂದ ಬ್ರಹ್ಮೋಸ್‌ ಕ್ಷಿಪಣಿ ಆಕಸ್ಮಿಕವಾಗಿ ಉಡಾವಣೆಯಾಗಿ ಕೇವಲ 3 ನಿಮಿಷ 44 ಸೆಕೆಂಡ್‌ನಲ್ಲಿ 124 ಕಿ.ಮೀ ಕ್ರಮಿಸಿ ಪಾಕಿಸ್ತಾನದ ಭೂ ಪ್ರದೇಶದ ಒಳಗಡೆ ಬಿದ್ದಿತ್ತು. ಈ ಘಟನೆಯಿಂದ ಯಾವುದೇ ಸಾವು,ನೋವು ಸಂಭವಿಸಲಿಲ್ಲ. ಈ ವಿಷಯವನ್ನು ಇಟ್ಟುಕೊಂಡು ಪಾಕಿಸ್ತಾನ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಕೊನೆಗೆ ಭಾರತ ತಾಂತ್ರಿಕ ಸಮಸ್ಯೆಯಿಂದ ಈ ಕ್ಷಿಪಣಿ ಉಡಾವಣೆಯಾಗಿದೆ ಎಂದು ಹೇಳಿ ವಿಷಾದ ವ್ಯಕ್ತಪಡಿಸಿ ತನಿಖೆ ನಡೆಸುವುದಾಗಿ ಹೇಳಿತ್ತು. ತನಿಖೆಯ ಬಳಿಕ ವಾಯುಸೇನೆಯ ಇಮೇಜ್‌ಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ವಿಂಗ್‌ ಕಮಾಂಡರ್‌ ಅಭಿನವ್‌ ಶರ್ಮಾ ಅವರನ್ನು ಸೇವೆಯಿಂದಲೇ ವಜಾಗೊಳಿಸಿತ್ತು. ಈ ಕ್ಷಿಪಣಿ ಪ್ರಕರಣದಿಂದ ಭಾರತ ಸರ್ಕಾರಕ್ಕೆ 24 ಕೋಟಿ ರೂ. ನಷ್ಟವಾಗಿತ್ತು.

  • ಭಾರತ Vs ಪಾಕಿಸ್ತಾನ – ಭೂಸೇನೆ, ನೌಕಾಸೇನೆ, ವಾಯು ಸೇನೆಯ ಸಾಮರ್ಥ್ಯಗಳ ಬಲಾಬಲ ಎಷ್ಟಿದೆ?

    ಭಾರತ Vs ಪಾಕಿಸ್ತಾನ – ಭೂಸೇನೆ, ನೌಕಾಸೇನೆ, ವಾಯು ಸೇನೆಯ ಸಾಮರ್ಥ್ಯಗಳ ಬಲಾಬಲ ಎಷ್ಟಿದೆ?

    ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ನರಮೇಧಕ್ಕೆ (Pahalgam Terror Attack ) ಭಾರತ ಪ್ರತೀಕಾರ ತೀರಿಸುವುದಾಗಿ ಹೇಳಿದ ಬೆನ್ನಲ್ಲೇ ಯಾವ ರೀತಿ ಪ್ರತೀಕಾರ ತೀರಿಸುತ್ತದೆ ಎಂಬ ಪ್ರಶ್ನೆ ಎದ್ದಿದೆ. ಈ ಹಿಂದೆ ಉರಿ ಮೇಲೆ ದಾಳಿ ಮಾಡಿದಾಗ ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ (PoK) ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಪುಲ್ವಾಮಾ (Pulwama) ಘಟನೆಯ ಬಳಿಕ ಪಾಕ್‌ ಆಕ್ರಮಿತ ಕಾಶ್ಮೀರ ದಾಟಿ ಬಾಲಾಕೋಟ್‌ನಲ್ಲಿದ್ದ ಉಗ್ರರ ಲಾಂಚ್‌ ಪ್ಯಾಡ್‌ಗೆ ಬಾಂಬ್‌ ಹಾಕಿತ್ತು. ಹೀಗಾಗಿ ಈಗ ಯಾವ ರೀತಿ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂಬ ಕುತೂಹಲ ಎದ್ದಿದೆ.

    ಬಿಹಾರದ ಭಾಷಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಉಗ್ರರು ಮತ್ತು ಉಗ್ರರಿಗೆ ಸಹಕಾರ ನೀಡುವುವರನ್ನು ಹೊಡೆದು ಹಾಕುತ್ತೇವೆ ಎಂದು ಗುಡುಗಿದ್ದರು. ಹೀಗಾಗಿ ಈ ಬಾರಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಯುದ್ಧ ನಡೆಯುತ್ತಾ ಎಂಬ ಪ್ರಶ್ನೆ ಎದ್ದಿದೆ. ಪಾಕಿಸ್ತಾನ ಈಗಾಗಲೇ ಯುದ್ಧ ಸನ್ನದ್ಧವಾಗಿದ್ದು ಸರ್ಕಾರದ ಮಂತ್ರಿಗಳು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ಒಂದು ವೇಳೆ ಯುದ್ಧ ಸಂಭವಿಸಿದರೆ ಭಾರತ (India) ಮತ್ತು ಪಾಕ್‌ ಮೂರು ದಳಗಳ ಸಾಮರ್ಥ್ಯದ ಬಗ್ಗೆ ಮಾಹಿತಿ ನೀಡಲಾಗಿದೆ.

    ಭೂಸೇನೆ
    ಟ್ಯಾಂಕ್
    ಭಾರತ – 4,201
    ಪಾಕ್ – 2,627

    ಶಸ್ತ್ರಸಜ್ಜಿತ ವಾಹನ
    ಭಾರತ – 148594
    ಪಾಕ್ – 17516

    ಸ್ವಯಂಚಾಲಿತ ಫಿರಂಗಿ
    ಭಾರತ – 100
    ಪಾಕ್ – 662

    ಟೋವ್ಡ್‌ ಫಿರಂಗಿ (Towed Artillery)
    ಭಾರತ – 3975
    ಪಾಕ್ – 2629

    ಮೊಬೈಲ್ ರಾಕೆಟ್ ಪ್ರಾಜೆಕ್ಟರ್ ಗಳು
    ಭಾರತ – 264
    ಪಾಕ್ – 600

    ವೈಮಾನಿಕ ಸಾಮರ್ಥ್ಯ

    ಒಟ್ಟು ವಿಮಾನ
    ಭಾರತ – 2,229
    ಪಾಕ್ – 1,399

    ಯುದ್ಧ ವಿಮಾನ
    ಭಾರತ – 513
    ಪಾಕ್ – 328 ಇದನ್ನೂ ಓದಿ: ನಾವು ಭಯೋತ್ಪಾದನೆಯನ್ನು ಬೆಂಬಲಿಸಿದ್ದೇವೆ – ಒಪ್ಪಿಕೊಂಡ ಪಾಕಿಸ್ತಾನ

    ಡೆಡಿಕೇಟೆಡ್ ಫೈಟರ್ ಅಟ್ಯಾಕ್ ಏರ್ ಕ್ರಾಫ್ಟ್
    ಭಾರತ – 130
    ಪಾಕ್ – 90

    ಹೆಲಿಕಾಪ್ಟರ್ ಗಳು
    ಭಾರತ – 899
    ಪಾಕ್ – 373

    ದಾಳಿ ಹೆಲಿಕಾಪ್ಟರ್ ಗಳು
    ಭಾರತ – 80
    ಪಾಕ್ – 57

    ಸಾರಿಗೆ ವ್ಯವಸ್ಥೆಗೆ
    ಭಾರತ – 270
    ಪಾಕ್ – 64

    ತರಬೇತುದಾರರು
    ಭಾರತ – 351
    ಪಾಕ್ – 565

    ವೈಮಾನಿಕ ಟ್ಯಾಂಕರ್ ಗಳು
    ಭಾರತ – 6
    ಪಾಕ್ – 4

    ಸ್ಪೆಷಲ್ ಮಿಷನ್ ಗೆ ಬಳಕೆ
    ಭಾರತ – 74
    ಪಾಕ್ – 27


    ನೌಕಾ ಸೇನೆ
    ನೌಕೆಗಳು
    ಭಾರತ – 293
    ಪಾಕ್ – 321

    ವಿಮಾನ ವಾಹಕ ನೌಕೆ
    ಭಾರತ – 2
    ಪಾಕ್ – 0

    ಸಬ್ ಮರೈನ್
    ಭಾರತ – 18
    ಪಾಕ್ – 8

    ಡೆಸ್ಟ್ರಾಯರ್ (ವಿಧ್ವಂಸಕ ನೌಕೆಗಳು)
    ಭಾರತ – 13
    ಪಾಕ್ – 0

    ಯುದ್ಧ ನಾವೆ (ಫ್ರಿಗೇಟ್)
    ಭಾರತ – 14
    ಪಾಕ್ – 9

    ಕಾರ್ವೆಟ್ (ಸಣ್ಣ ಯುದ್ಧ ನೌಕೆ)
    ಭಾರತ – 18
    ಪಾಕ್ – 9

    ಪಾಟ್ರೋಲ್ ವೆಸೆಲ್ಸ್ (ಗಸ್ತು ನೌಕೆ)
    ಭಾರತ – 135
    ಪಾಕ್ – 69

  • ಕರಾವಳಿಗೆ ಹೆಚ್ಚಿನ ಭದ್ರತೆ – ಕೋಸ್ಟ್‌ ಗಾರ್ಡ್‌ಗೆ 2 ಫಾಸ್ಟ್ ಪ್ಯಾಟ್ರೋಲ್ ಹಡಗುಗಳು ಸೇರ್ಪಡೆ

    ಕರಾವಳಿಗೆ ಹೆಚ್ಚಿನ ಭದ್ರತೆ – ಕೋಸ್ಟ್‌ ಗಾರ್ಡ್‌ಗೆ 2 ಫಾಸ್ಟ್ ಪ್ಯಾಟ್ರೋಲ್ ಹಡಗುಗಳು ಸೇರ್ಪಡೆ

    ಕಾರವಾರ: ಪಾಕಿಸ್ತಾನದಿಂದ ಉಗ್ರರು ಸಮುದ್ರ ಮಾರ್ಗ ಮೂಲಕ ಬಂದು ಮುಂಬೈ ಮೇಲೆ ದಾಳಿ ನಡೆಸಿದ ಬಳಿಕ ಭಾರತೀಯ ಕೋಸ್ಟ್ ಗಾರ್ಡ್ ತನ್ನ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುತ್ತಾ ಬಂದಿದ್ದು, ಈಗ ಎರಡು ಫಾಸ್ಟ್ ಪ್ಯಾಟ್ರೋಲ್ ಹಡಗುಗಳು(ಎಫ್‍ಪಿವಿ) ಸೇರ್ಪಡೆಯಾಗಿದೆ.

    ಭದ್ರತೆ, ಸಮುದ್ರಮಾರ್ಗದ ಕಳ್ಳಸಾಗಾಣಿಕೆ ತಡೆಯುವವ ಹಾಗೂ ಸಮುದ್ರದಲ್ಲಿ ತೊಂದರೆಗೆ ಸಿಲುಕುವ ಮೀನುಗಾರರ ರಕ್ಷಣೆಗೆ ಭಾರತೀಯ ಕೋಸ್ಟ್ ಗಾರ್ಡ್ ಎರಡು ಫಾಸ್ಟ್ ಪ್ಯಾಟ್ರೋಲ್ ಹಡಗುಗಳನ್ನು ಕಾರವಾರ ವಿಭಾಗಗಕ್ಕೆ ನಿಯೋಜಿಸುವ ಮೂಲಕ ಉತ್ತರ ಕನ್ನಡದ ಕರಾವಳಿಯ ಬಲವನ್ನು ಮತ್ತಷ್ಟು ಹೆಚ್ಚಿಸಿದೆ.

    ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿಎಸ್) ಕಾರವಾರ ಘಟಕವು ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಮಾಜಾಳಿಯಿಂದ ದಕ್ಷಿಣದ ಭಟ್ಕಳದವರೆಗೆ ತನ್ನ ವ್ಯಾಪ್ತಿ ಹೊಂದಿದೆ.

    ಕಾರವಾರದಲ್ಲಿ ಐಸಿಜಿಎಸ್ 2009ರ ನವೆಂಬರ್ 4 ರಿಂದ ಕಾರ್ಯಾರಂಭ ಮಾಡಿದಾಗಿನಿಂದ 2 ಇಂಟರ್‌ ಸೆಪ್ಟರ್‌ ಬೋಟ್‍ಗಳು ಮತ್ತು 2 ಇಂಟರ್‌ ಸೆಪ್ಟರ್‌ ಕ್ರಾಫ್ಟ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತಿತ್ತು.

    ಇಂದಿನಿಂದ ಐಸಿಜಿಎಸ್ ಸಾವಿತ್ರಿಬಾಯಿ ಪುಲೆ ಮತ್ತು ಐಸಿಜಿಎಸ್ ಕಸ್ತೂರ್ಬಾ ಗಾಂಧಿ ಎಂಬ ಎರಡು ಫಾಸ್ಟ್ ಪ್ಯಾಟ್ರೋಲ್ ಹಡಗುಗಳನ್ನು ಇದೀಗ ಕಾರವಾರಕ್ಕೆ ನಿಯೋಜಿಸಿದೆ. ಈ ಎರಡೂ ಹಡಗುಗಳು ಈ ಮೊದಲು ನವ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಈ ಹಡಗುಗಳು ಗೋವಾ ಶಿಪ್‍ಯಾರ್ಡ್ ಲಿಮಿಟೆಡ್ ನಿರ್ಮಿಸಿದ ಫಾಸ್ಟ್ ಪ್ಯಾಟ್ರೋಲ್ ಹಡಗುಗಳಾಗಿವೆ.

    ಹಡಗಿನ ವಿಶೇಷತೆ ಏನು?
    ಈ ಹಡಗುಗಳು ಗಂಟೆಗೆ 35 ನಾಟ್ಸ್ ವೇಗವನ್ನು ಕ್ರಮಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದು, ರಕ್ಷಣೆಗೆ 30 ಎಂ.ಎಂಸಿ.ಆರ್.ಎನ್ ಗನ್ ಹೊಂದಿದೆ. ಇವುಗಳನ್ನು ಉನ್ನತೀಕರಿಸಿ ಉಪಗ್ರಹ ಸಂವಹನ ಮತ್ತು ಸಂಚರಣೆ ವ್ಯವಸ್ಥೆಗಳೊಂದಿಗೆ ಅಳವಡಿಸಲಾಗಿದೆ. ಹಡಗುಗಳನ್ನು ಕಣ್ಗಾವಲು, ಗಸ್ತು ತಿರುಗಲು ವಿನ್ಯಾಸಗೊಳಿಸಲಾಗಿದೆ.

    ಇದು ಆಳವಿಲ್ಲದ ನೀರಿನ ಕಾರ್ಯಾಚರಣೆಗೂ ಸಮರ್ಥವಾಗಿದೆ. ಎಫ್‍ಪಿವಿಗಳು ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆ, ಕಡಲ್ಗಳ್ಳತನ ವಿರೋಧಿ ಗಸ್ತು, ಮೀನುಗಾರಿಕೆ ರಕ್ಷಣೆ ಮತ್ತು ಶೋಧ ಹಾಗೂ ಪಾರುಗಾಣಿಕಾ ಕಾರ್ಯಾಚರಣೆಗಳಿಗೆ ಸಹ ಸಮರ್ಥವಾಗಿ ಕಾರ್ಯನಿರ್ವಹಿಸಲಿದೆ.

    ಈ ಹಿಂದೆ ಈ ಎರಡೂ ಹಡಗುಗಳು ಹಲವಾರು ಎಸ್.ಎ.ಆರ್ ಕಾರ್ಯಾಚರಣೆಗಳು, ಕಡಲ್ಗಳ್ಳತನ ವಿರೋಧಿ ಗಸ್ತು ಮತ್ತು ಕಣ್ಗಾವಲು ಪ್ರಯತ್ನಗಳಲ್ಲಿ ಭಾಗಿಯಾಗಿವೆ. ಇದಲ್ಲದೆ ಹಲವಾರು ಸಂದರ್ಭಗಳಲ್ಲಿ ಸಮುದ್ರದಲ್ಲಿರುವ ಮೀನುಗಾರರಿಗೆ ಇವುಗಳ ಮೂಲಕ ನೆರವು ನೀಡಲಾಗಿದೆ.

    ಕದಂಬ ನೌಕಾ ನೆಲೆ, ಕೈಗಾ ಅಣು ಸ್ಥಾವರದಂತಹ ಮಹತ್ತರ ಯೋಜನೆಗಳ ಮೇಲೆ ಸಮುದ್ರ ಮಾರ್ಗದಿಂದ ದಾಳಿ ಮಾಡದಂತೆ ಕರಾವಳಿ ಭಾಗದಲ್ಲಿ ಭದ್ರತೆಗೆ ನೀಡಲಿದ್ದು ಕಾರವಾರ ಭಾಗದ ಕೋಸ್ಟ್ ಗಾರ್ಡ್‌ ವಿಭಾಗಕ್ಕೆ ಹೆಚ್ಚಿನ ಬಲ ಬಂದಂತಾಗಿದೆ.

  • ಭಾರತದ ಪಾಲಿಗೆ ಇಂದು ಮತ್ತೊಂದು ಐತಿಹಾಸಿಕ ದಿನ – ವಾಯು, ನೌಕಾ ಸೇನೆಯಿಂದ ಹೆಲ್ತ್ ವಾರಿಯರ್ಸ್‌ಗೆ ಗೌರವ

    ಭಾರತದ ಪಾಲಿಗೆ ಇಂದು ಮತ್ತೊಂದು ಐತಿಹಾಸಿಕ ದಿನ – ವಾಯು, ನೌಕಾ ಸೇನೆಯಿಂದ ಹೆಲ್ತ್ ವಾರಿಯರ್ಸ್‌ಗೆ ಗೌರವ

    – ಉತ್ತರ ಧ್ರುವದಿಮ್ ದಕ್ಷಿಣ ಧ್ರುವದವರೆಗೆ ಹೆಲಿಕಾಪ್ಟರ್‌ನಿಂದ ಹೂಮಳೆ

    ನವದೆಹಲಿ: ನಮ್ಮನ್ನು ರಕ್ಷಿಸಲು, ಕೊರೊನಾ ಹಿಮ್ಮೆಟ್ಟಿಸಲು ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ನಡೆಸುತ್ತಿರುವ ಹೆಲ್ತ್ ವಾರಿಯರ್ಸ್‌ಗೆ ಈಗಾಗಲೇ ಚಪ್ಪಾಳೆ ತಟ್ಟುವ ಮೂಲಕ ಜನರು ಗೌರವ ಸಲ್ಲಿಸಿದ್ದಾರೆ. ಆದರೆ ಇಂದು ಇಡೀ ದೇಶವನ್ನೇ ಕಾಯುವ ಮೂರು ಸೇನೆಗಳು ಹೆಲ್ತ್ ವಾರಿಯರ್ಸ್‌ಗೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿವೆ.

    ಈ ಬಾರಿ ಸಾಮಾನ್ಯ ಜನರ ಬದಲು, ಇಡೀ ದೇಶವನ್ನು ಫುಲ್ ಟೈಂ ಕಾಯುವ ಮೂರು ಸೇನೆಗಳು ಹೆಲ್ತ್ ವಾರಿಯರ್ಸ್‌ಗೆ ಗೌರವ ಸಲ್ಲಿಸಲು ಮುಂದಾಗಿದೆ. ಭೂಸೇನೆ, ವಾಯುಸೇನೆ ಹಾಗೂ ನೌಕಾ ಸೇನೆ ಇಂದು ದೇಶದ ಎಲ್ಲ ಹೆಲ್ತ್ ವಾರಿಯರ್ಸ್‌ಗೆ ಗೌರವ ಸಲ್ಲಿಸಲಿದೆ.

    ಶ್ರೀನಗರದಿಂದ ತಿರುವನಂತಪುರಂವರೆಗೆ ಹಾಗೂ ಅಸ್ಸಾಂನ ದಿಬ್ರುಗಡ್‍ದಿಂದ ಗುಜರಾತ್‍ನ ಕಛ್‍ವರೆಗೆ ಹೆಲಿಕಾಪ್ಟರ್‌ನಿಂದ ಹೂವಿನ ಮಳೆ ಸುರಿಯುವ ಮೂಲಕ ವಾಯುಸೇನೆ ಗೌರವ ಸಲ್ಲಿಸಲಾಗುತ್ತದೆ. ಇನ್ನೂ ಎಲ್ಲ ನೌಕಾ ನೆಲೆಗಳಲ್ಲಿ ದೀಪ ಹಚ್ಚಿ ಮೌಂಟೇನ್ ಬ್ಯಾಂಡ್ ನುಡಿಸುವ ಮೂಲಕ ಗೌರವ ಸಲ್ಲಿಸಲು ಭಾರತೀಯ ಸೇನೆ ಸಿದ್ಧವಾಗಿದೆ ಎಂದು 3 ಸೇನೆಗಳ ಮುಖ್ಯಸ್ಥ ಬಿಪಿನ್ ರಾವತ್ ತಿಳಿಸಿದ್ದಾರೆ.

    ಇಂದಿನ ಐತಿಹಾಸಿಕ ಕಾರ್ಯಕ್ರಮದ ಪ್ರಮುಖಕಾಂಶಗಳೇನು?
    * ಬೆಳಗ್ಗೆ 9 ಗಂಟೆಗೆ ದೆಹಲಿಯ ಪೊಲೀಸ್ ಯುದ್ಧ ಮೆಮೊರಿಯಲ್ ಮೇಲೆ ಪುಷ್ಪವೃಷ್ಟಿ
    * ಬೆಳಗ್ಗೆ 10-10:30 ನಡುವೆ ದೆಹಲಿ ವಿವಿಧ ಕೊರೊನಾ ಆಸ್ಪತ್ರೆಗಳ ಮೇಲೆ ಹೂಮಳೆ
    * ದೆಹಲಿ ಏಮ್ಸ್, ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆ, ಜಿಟಿಬಿ ಆಸ್ಪತ್ರೆ, ಲೋಕನಾಯಕ್ ಆಸ್ಪತ್ರೆ, ಆರ್.ಎಂ.ಎಲ್, ಸಬ್ದರ್‍ಜಂಗ್, ಗಂಗಾ ರಾಮ್, ಬಾಬಾ ಸಾಹೇಬ್ ಅಂಬೇಡ್ಕರ್ ಮ್ಯಾಕ್ಸ್ ಸಾಕೇತ್, ರೋಹಿನಿ, ಅಪೋಲೋ, ಇಂದ್ರಪ್ರಸ್ಥ, ಸೇನಾ ಆಸ್ಪತ್ರೆ ಮೇಲೆ ಹೂಮಳೆ


    * ಮಧ್ಯಾಹ್ನ 3:45ಕ್ಕೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಸೇನಾ ಆಸ್ಪತ್ರೆ ಮೇಲೆ ಹೂಮಳೆ
    * ಶ್ರೀನಗರದಿಂದ ತಿರುವನಂತಪುರಂವರೆಗೆ ಹಾಗೂ ಅಸ್ಸಾಂನ ದಿಬ್ರುಗಡ್‍ದಿಂದ ಗುಜರಾತ್‍ನ ಕಛ್‍ವರೆಗೆ ಇರುವ ಎಲ್ಲ ಪ್ರಮುಖ ಕೋವಿಡ್ 19 ಪ್ರಮುಖ ಆಸ್ಪತ್ರೆಗಳಿಗೆ ವಾಯುಸೇನೆ ಪುಷ್ಪನಮನ
    * ಸಂಜೆ ನೌಕಾಸೇನೆಯಿಂದ ಎಲ್ಲಾ ನೌಕಾನೆಲೆಯಲ್ಲಿ, ಹಡಗುಗಳಲ್ಲಿ ದೀಪ ಉರಿಸುವುದು
    * ನೌಕಾನೆಲೆಗಳಲ್ಲಿ ಮೌಂಟೇನ್ ಬ್ಯಾಂಡ್ ನುಡಿಸುವುದು

    ಪ್ರತಿ ಬಾರಿ ನಾವು ಗೌರವಿಸುವ ಮೂರು ಸೇನೆಗಳು ಇಂದು ಸ್ವತಃ ಹೆಲ್ತ್ ವಾರಿಯರ್ಸ್‌ಗೆ ಗೌರವ ಸಲ್ಲಿಸಲು ಮುಂದಾಗಿರವುದು ವಿಶೇಷ. ಈ ದಿನ ಭಾರತದ ಪಾಲಿಗೆ ಐತಿಹಾಸಿಕ ದಿನವಾಗಲಿದೆ.

  • ಸಮುದ್ರದ ಒಳಗಡೆಯಿಂದ ಭಾರತಕ್ಕೆ ನುಸುಳಲು ಉಗ್ರರಿಗೆ ವಿಶೇಷ ತರಬೇತಿ

    ಸಮುದ್ರದ ಒಳಗಡೆಯಿಂದ ಭಾರತಕ್ಕೆ ನುಸುಳಲು ಉಗ್ರರಿಗೆ ವಿಶೇಷ ತರಬೇತಿ

    ನವದೆಹಲಿ: ಸಮುದ್ರದ ಒಳಗಡೆಯಿಂದ ಭಾರತಕ್ಕೆ ಉಗ್ರರು ನುಸುಳಲು ಮುಂದಾಗುತ್ತಿದ್ದಾರೆ ಎನ್ನುವ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ಗಡಿಯಲ್ಲಿ ಉಗ್ರರು ನುಸುಳಲು ಒಂದು ಕಡೆ ಗುಂಡಿನ ದಾಳಿ ನಡೆಸಿ ಭಾರತದ ಸೈನ್ಯದ ಗಮನವನ್ನು ಸೆಳೆಯುತ್ತಿದ್ದ ಪಾಕ್ ತಂತ್ರ ಈಗಾಗಲೇ ವಿಫಲವಾಗಿದೆ. ಇದಾದ ಬಳಿಕ ಸುರಂಗದ ಮೂಲಕ ಪ್ರವೇಶಿಸುವ ಉಗ್ರರ ತಂತ್ರವನ್ನು ಭಾರತ ಬಯಲು ಮಾಡಿದೆ. ಮುಂಬೈ ದಾಳಿಯ ನಂತರ ನೌಕಾ ಸೇನೆ ಸಮುದ್ರದಲ್ಲಿ ಹದ್ದಿನ ಕಣ್ಣಿಟ್ಟಿದ್ದರಿಂದ ಬೋಟ್ ಮೂಲಕ ಭಾರತ ಪ್ರವೇಶಿಸವುದು ಅಷ್ಟು ಸುಲಭವಲ್ಲ ಎನ್ನುವುದು ಉಗ್ರರಿಗೆ ಗೊತ್ತಾಗಿದೆ. ಹೀಗಾಗಿ ಈಗ ನೀರಿನ ಅಡಿಯಲ್ಲಿ ಈಜಿಕೊಂಡು ಭಾರತ ಪ್ರವೇಶಿಸಲು ಈಗ ಉಗ್ರರು ಸಿದ್ಧತೆ ನಡೆಸುತ್ತಿದ್ದಾರೆ.

    ನೌಕಾ ಸೇನೆಯ ಮುಖ್ಯಸ್ಥ ಅಡ್ಮಿರಲ್ ಕರಂ ಬೀರ್ ಸಿಂಗ್ ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಗುಪ್ತಚರ ಇಲಾಖೆ ನೀಡಿದ ಮಾಹಿತಿ ಪ್ರಕಾರ ಜೈಷ್ ಸಂಘಟನೆಯಲ್ಲಿ ಅಂಡರ್ ವಾಟರ್ ವಿಭಾಗವಿದೆ. ಈ ಸಂಘಟನೆ ನೀರಿನ ಮೂಲಕ ಸಾಗಿ ಭಾರತಕ್ಕೆ ಹೇಗೆ ನುಸುಳಬೇಕು ಎನ್ನುವುದರ ಬಗ್ಗೆ ತರಬೇತಿ ನೀಡುತ್ತಿದೆ. ಆದರೆ ಭಾರತಕ್ಕೆ ಏನು ಆಗದಂತೆ ನಾವು ಭರವಸೆ ನೀಡುತ್ತೇವೆ. ನಾವು ಯಾವಾಗಲೂ ಹೈ ಅಲರ್ಟ್ ಆಗಿದ್ದೇವೆ ಎಂದು ತಿಳಿಸಿದ್ದಾರೆ.

    ಕಳೆದ ವಾರ ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಮಾತನಾಡಿ, ಶತ್ರುಗಳ ಚಲನೆ ಇರಲಿ ಅಥವಾ ಇಲ್ಲದಿರಲಿ ವಾಯುಸೇನೆ ಯಾವಾಗಲೂ ಗಡಿಯಲ್ಲಿ ಎಚ್ಚರದಲ್ಲಿ ಇರುತ್ತದೆ. ನಾಗರಿಕ ವಿಮಾನಗಳು ರೇಖೆಯನ್ನು ದಾಟಿದರೂ ಸಹ ನಾವು ನಿಯಂತ್ರಣ ಸಾಧಿಸುತ್ತೇವೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದರು.

    2019ರ ಪುಲ್ವಾಮಾ ದಾಳಿ ಬಳಿಕ ಸರ್ಕಾರ ಪ್ರತೀಕಾರ ತೀರಿಸಲು ಮೂರು ವಿಭಾಗಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿತ್ತು. ಈ ಸಂದರ್ಭದಲ್ಲಿ ಬಿಪಿನ್ ರಾವತ್ ಭೂಸೇನೆ ಯಾವುದೇ ಕಾರ್ಯಾಚರಣೆಗೆ ಸಿದ್ಧವಾಗಿದೆ. ಅಗತ್ಯ ಬಿದ್ದರೆ ಗಡಿ ದಾಟಿ ಹೋರಾಟ ಮಾಡಲು ನಾವು ಪೂರ್ಣವಾಗಿ ತಯಾರಿದ್ದೇವೆ ಎಂಬುದಾಗಿ ಭರವಸೆ ನೀಡಿದ್ದ ವಿಚಾರವನ್ನು ಸೇನೆಯ ಇಬ್ಬರು ಹಿರಿಯ ಅಧಿಕಾರಿಗಳು ತಿಳಿಸಿದ್ದರು.

    ಪುಲ್ವಾಮಾ ದಾಳಿಯ ಬಳಿಕ ಯಾವ ರೀತಿ ಸಿದ್ಧಗೊಂಡಿದೆ ಎಂದು ಸರ್ಕಾರ ಸೇನೆಯನ್ನು ಕೇಳಿತ್ತು. ಈ ಪ್ರಶ್ನೆಗೆ ಬಿಪಿನ್ ರಾವತ್, 2016ರ ಉರಿ ಮೇಲಿನ ದಾಳಿಯ ಬಳಿ ಬಳಿಕ ಸಾಕಷ್ಟು ಮದ್ದುಗುಂಡುಗಳ ಸಂಗ್ರಹವನ್ನು ಮಾಡಿಕೊಂಡಿದ್ದೇವೆ. ಹೀಗಾಗಿ ಗಡಿಯನ್ನು ದಾಟಿಯೂ ಹೋರಾಟ ನಡೆಸಲು ಸೇನೆ ಪೂರ್ಣವಾಗಿ ತಯಾರಾಗಿದೆ ಎಂದು ಉತ್ತರಿಸಿದ್ದರು.

  • ಲಂಬೋರ್ಗಿನಿ Vs ಮಿಗ್ ಫೈಟರ್ ಜೆಟ್- ವೈರಲ್ ರೇಸ್ ವಿಡಿಯೋ ನೋಡಿ

    ಲಂಬೋರ್ಗಿನಿ Vs ಮಿಗ್ ಫೈಟರ್ ಜೆಟ್- ವೈರಲ್ ರೇಸ್ ವಿಡಿಯೋ ನೋಡಿ

    ಪಣಜಿ: ಇಟಲಿಯ ಲಂಬೋರ್ಗಿನಿ ಹುರಕೇನ್ ಹಾಗೂ ಮಿಗ್ 29ಕೆ ಫೈಟರ್ ನಡುವೆ ಗೋವಾ ವಿಮಾನ ನಿಲ್ದಾಣದಲ್ಲಿ ರೇಸ್ ನಡೆದಿದೆ.

    ಲಂಬೋರ್ಗಿನಿ ವೇಗವಾಗಿ ಚಲಿಸಿದರೂ ಮಿಗ್ ವಿಮಾನವನ್ನು ಸೋಲಿಸಲು ಆಗಲಿಲ್ಲ. ಆರಂಭದಲ್ಲಿ ನಿಧಾನವಾಗಿ ಬಳಿಕ ವೇಗವನ್ನು ಹೆಚ್ಚಿಸಿಕೊಂಡ ವಿಮಾನ ಕೊನೆಗೆ ಲಂಬ ಕೋನದಲ್ಲಿ ಟೇಕಾಫ್ ಆಗಿದೆ. ಭಾರತೀಯ ನೌಕಾಪಡೆಯಿಂದ ಯುವ ಜನರನ್ನು ಭಾರತೀಯ ಸೇನೆ ಸೇರಲು ಪ್ರೇರೇಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ನೌಕಾ ಸೇನೆಯಲ್ಲಿ 735 ಪೈಲಟ್ ಗಳ ನೇಮಕಕ್ಕೆ ಅನುಮತಿ ಸಿಕ್ಕಿದ್ದು, 91 ಹುದ್ದೆ ಖಾಲಿಯಿದೆ. ಭಾರತೀಯ ಸೇನೆಯ 794 ಹುದ್ದೆ ಭರ್ತಿಗೆ ಅನುಮತಿ ಸಿಕ್ಕಿದ್ದರೂ 192 ಹುದ್ದೆಗಳು ಖಾಲಿಯಿದೆ.

    https://www.youtube.com/watch?v=mRr1v4XFZU0

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಭಾರತದ ನಿವೃತ್ತ ನೌಕಾ ಸೇನೆಯ ಅಧಿಕಾರಿಗೆ ಪಾಕ್‍ನಲ್ಲಿ ಗಲ್ಲು ಶಿಕ್ಷೆ

    ಭಾರತದ ನಿವೃತ್ತ ನೌಕಾ ಸೇನೆಯ ಅಧಿಕಾರಿಗೆ ಪಾಕ್‍ನಲ್ಲಿ ಗಲ್ಲು ಶಿಕ್ಷೆ

    ನವದೆಹಲಿ: ಭಾರತದ ಪರ ಗೂಢಚರ್ಯೆ ನಡೆಸುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ, ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿದೆ.

    ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್‍ಪಿಆರ್) ತಿಳಿಸಿದೆ.

    ವಿಚಾರಣೆ ವೇಳೆ ರಾ ಪರ ನಾನು ಗೂಢಚರ್ಯೆ ನಡೆಸುತ್ತಿದ್ದ ವಿಚಾರವನ್ನು ಕುಲಭೂಷಣ ಜಾಧವ್ ತಪ್ಪೊಪ್ಪಿಕೊಂಡಿದ್ದರು ಎಂದು ಐಎಸ್‍ಪಿಆರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಕೂಲಭೂಷಣ್ ಯಾದವ್ ನೌಕಾ ಸೇನೆಯ ನಿವೃತ್ತ ಅಧಿಕಾರಿಯಾಗಿದ್ದರು. ಆದರೆ ಅವರು ರಾ ಪರವಾಗಿ ಗೂಢಚರ್ಯೆ ನಡೆಸುತ್ತಿರುವ ಆರೋಪವನ್ನು ಭಾರತ ಸರ್ಕಾರ ನಿರಾಕರಿಸಿತ್ತು. 2016ರ ಮಾರ್ಚ್ 3ರಂದು ಬಲೂಚಿಸ್ತಾನದ ಮಶೇಕಲ್ ಎಂಬಲ್ಲಿ ಕುಲಭೂಷಣ್ ಜಾಧವ್ ಅವರು ಅರೆಸ್ಟ್ ಅಗಿದ್ದರು.

    ಇದನ್ನೂ ಓದಿ: 13 ವರ್ಷದ ಹಿಂದೆ ಸೆಹ್ವಾಗ್ ಮುಲ್ತಾನ್ ಸುಲ್ತಾನ್ ಆದ ಕಥೆ ಓದಿ