Tag: ನೌಕಾ ಅಧಿಕಾರಿ

  • ನೌಕಾ ಅಧಿಕಾರಿ ಪತ್ನಿಗೆ ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚಿದ ವ್ಯಕ್ತಿ

    ನೌಕಾ ಅಧಿಕಾರಿ ಪತ್ನಿಗೆ ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚಿದ ವ್ಯಕ್ತಿ

    ಮುಂಬೈ: ವ್ಯಕ್ತಿಯೊಬ್ಬ ನೌಕಾ ಅಧಿಕಾರಿ ಪತ್ನಿಗೆ ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚಿ ಅಶ್ಲೀಲವಾಗಿ ವರ್ತಿಸಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.

    ರವಿಕಾಂತ್ ತಿವಾರಿ(36) ಬಂಧನಕ್ಕೊಳಗಾದ ಆರೋಪಿ. ರವಿಕಾಂತ್ ಮೊದಲು ನೌಕಾ ಅಧಿಕಾರಿ ಪತ್ನಿಗೆ ವಿಡಿಯೋ ಕಾಲ್ ಮಾಡಿದ್ದಾನೆ. ಬಟ್ಟೆ ಬಿಚ್ಚಿ ಅಶ್ಲೀಲವಾಗಿ ವರ್ತಿಸಲು ಶುರು ಮಾಡಿದ್ದಾನೆ. ಇದನ್ನು ನೋಡಿ ಮಹಿಳೆ ಗಾಬರಿಗೊಂಡು ತನ್ನ ಪತಿಗೆ ವಿಷಯವನ್ನು ತಿಳಿಸಿದ್ದಾರೆ.

    ಮಹಿಳೆ ಹಾಗೂ ಅವರ ಪತಿ ಆರೋಪಿ ರವಿಕಾಂತ್ ವಿರುದ್ಧ ಕಫ್ ಪರೇಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವೇಳೆ ಮಹಿಳೆ, ಆರೋಪಿ ಎರಡು ಬಾರಿ ನನಗೆ ಕರೆ ಮಾಡಿ ಈ ರೀತಿ ಅಶ್ಲೀಲವಾಗಿ ವರ್ತಿಸಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

    ಮಹಿಳೆಯ ಘನತೆಗೆ ಧಕ್ಕೆ ತಂದಿದ್ದಕ್ಕಾಗಿ ಮತ್ತು ವಿಡಿಯೋ ಕಾಲ್ ಮಾಡಿ ಅಸಭ್ಯವಾಗಿ ವರ್ತಿಸಿದ್ದಕ್ಕೆ ಆರೋಪಿ ರವಿಕಾಂತ್‍ನನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ಆರೋಪಿ ರವಿಕಾಂತ್‍ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ಆರೋಪಿ ರವಿಕಾಂತ್ ಬಳಿ ಇದ್ದ ಎರಡು ಮೊಬೈಲ್‍ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಳಿಕ ಪೊಲೀಸರ ಈ ಮೊಬೈಲ್ ಪರಿಶೀಲಿಸಿದಾಗ ಅಶ್ಲೀಲ ವಿಡಿಯೋ ಇರುವುದು ಪತ್ತೆ ಆಗಿದೆ. ಆರೋಪಿ ರವಿಕಾಂತ್ ಮಹಿಳೆಗೆ ಕರೆ ಮಾಡುತ್ತಿರುವ ನಂಬರ್ ರಾಧಾ ಎಂಬ ಹೆಸರಿನಲ್ಲಿ ನೊಂದಾಯಿಸಲಾಗಿದೆ.