Tag: ನೌಕರಿ ಕೀ ಬಾತ್ ಅಭಿಯಾನ

  • ಬಿಜೆಪಿ ಪೌರತ್ವ ನೋಂದಣಿಗೆ ವಿರುದ್ಧವಾಗಿ ಕಾಂಗ್ರೆಸ್ಸಿನಿಂದ ನಿರುದ್ಯೋಗ ನೋಂದಣಿ ಅಭಿಯಾನ

    ಬಿಜೆಪಿ ಪೌರತ್ವ ನೋಂದಣಿಗೆ ವಿರುದ್ಧವಾಗಿ ಕಾಂಗ್ರೆಸ್ಸಿನಿಂದ ನಿರುದ್ಯೋಗ ನೋಂದಣಿ ಅಭಿಯಾನ

    – ನೌಕರಿ ಕೀ ಬಾತ್ ಟ್ರೆಂಡ್ ಅಲರ್ಟ್

    ಬೆಂಗಳೂರು: ಪೌರತ್ವ ನೋಂದಣಿಗೆ ಎದುರಾಗಿ ಯುವ ಕಾಂಗ್ರೆಸ್ ವತಿಯಿಂದ ಇಂದಿನಿಂದ ಮುಂದಿನ 5 ದಿನಗಳವರೆಗೆ ಅಂದರೆ ಜ. 23ರಿಂದ 28ರವರೆಗೆ ನಿರುದ್ಯೋಗ ನೋಂದಾವಣೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, 8151994411 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ನಿರುದ್ಯೋಗಿಗಳು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಿದೆ ಎಂದು ಯುವ ಕಾಂಗ್ರೆಸ್ ಮನವಿ ಮಾಡಿದೆ.

    ಕೇವಲ ನಿರುದ್ಯೋಗಿಗಳು ಮಾತ್ರವಲ್ಲದೇ ನಿರುದ್ಯೋಗದ ಅಪಾಯದ ಕುರಿತು ಅರಿವು ಇರುವಂತಹ ನಾಡಿನ ಎಲ್ಲಾ ಯುವ ಮಿತ್ರರೂ ಸಹ ಈ ನಿರುದ್ಯೋಗ ನೋಂದಾವಣೆ ಅಭಿಯಾನದಲ್ಲಿ ಪಾಲ್ಗೊಳ್ಳಿ. ಈ ಮೂಲಕ ಯುವಕರ ಭವಿಷ್ಯಕ್ಕಾಗಿ ಹೋರಾಟ ನಡೆಸೋಣ ಎನ್ನುವ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ನಿರುದ್ಯೋಗಿಗಳು ಹತಾಶೆಯಿಂದ ಭಯೋತ್ಪಾದನೆ ಮಾಡುವಂತಹ ಉದಾಹರಣೆಯನ್ನು ಆದಿತ್ಯಾ ರಾವ್ ವಿಷಯದಲ್ಲಿ ಕಂಡಿದ್ದೇವೆ. ಹೀಗಾಗಿ ಯುವ ಜನತೆ ನಿರುದ್ಯೋಗದಿಂದ ತಪ್ಪು ದಾರಿಗೆ ಇಳಿಯುವ ಮುನ್ನ ನಿರುದ್ಯೋಗದ ಸಮಸ್ಯೆಯ ಬಗ್ಗೆ ಜಾಗೃತಿ ಮೂಡಿಸೋಣ, ಸುಳ್ಳು ಭರವಸೆ ನೀಡಿದ ಸರ್ಕಾರವನ್ನು ಎಚ್ಚರಿಸೋಣ ಎಂದು ಯುವ ಕಾಂಗ್ರೆಸ್ ಎಚ್ಚರಿಕೆ ನೀಡಿದೆ.

    ದಯಮಾಡಿ ಮಧ್ಯಾಹ್ನ 1:30ರಿಂದ ಎಲ್ಲಾ ಯುವಕರೂ ಸಹ #NaukariKiBaat ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್‍ಗಳನ್ನು ಮಾಡಿರಿ. ಈ ಮೂಲಕ ಸಾಮಾಜಿಕ ಜಾಲತಾಣದ ಜಾಗೃತಿ ಅಭಿಯಾನದಲ್ಲಿ ಯಶಸ್ವಿಯಾಗಿ ಪಾಲ್ಗೊಳ್ಳಿರಿ ಎಂದು ಭಾರತೀಯ ಯುವ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದೆ.

    ಮಂಗಳೂರು ಬಾಂಬರ್ ಆದಿತ್ಯ ರಾವ್ ವಿಷಯವನ್ನ ಮುಂದೆ ಇಟ್ಟುಕೊಂಡು ಯುವ ಜನರನ್ನ ನಿರುದ್ಯೋಗದ ಮೂಲಕ ಪೌರತ್ವನ್ನ ವಿರೋಧಿಸಲು ಕಾಂಗ್ರೆಸ್ ನೌಕರಿ ಕೀ ಬಾತ್ ಅನ್ನೊ ಅಭಿಯಾನವನ್ನ ಶುರು ಮಾಡಿದೆ.