Tag: ನೋಟ್ ಬ್ಯಾನ್

  • ಮತ್ತೆ 2,000 ನೋಟು ನಿಷೇಧವಾಗುತ್ತಾ: ಜನ್ರಲ್ಲಿ ಮೂಡಿದ್ದ ಪ್ರಶ್ನೆಗೆ ಜೇಟ್ಲಿ ಉತ್ತರಿಸಿದ್ರು

    ಮತ್ತೆ 2,000 ನೋಟು ನಿಷೇಧವಾಗುತ್ತಾ: ಜನ್ರಲ್ಲಿ ಮೂಡಿದ್ದ ಪ್ರಶ್ನೆಗೆ ಜೇಟ್ಲಿ ಉತ್ತರಿಸಿದ್ರು

    ನವದೆಹಲಿ: ನೋಟ್ ನಿಷೇಧದ ಬಳಿಕ ಆರ್‍ಬಿಐ ಬಿಡುಗಡೆ ಮಾಡಿರುವ 2,000ರೂ. ನೋಟನ್ನು ಹಿಂಪಡೆಯುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಅಂತಾ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

    ಸಚಿವರು ಈ ಬಗ್ಗೆ ಇಂದು ಲೋಕಸಭೆಗೆ ಲಿಖಿತ  ಉತ್ತರವನ್ನು ನೀಡಿದ್ದಾರೆ. ಕಳೆದ ವರ್ಷ ನವೆಂಬರ್ 9 ರಿಂದ 500 ಹಾಗೂ 1000 ರೂ. ನೋಟ್ ನಿಷೇಧಿಸಿದ ನಂತರ, ಡಿಸೆಂಬರ್ 10, 2016ರರವರೆಗೆ ಆರ್ ಬಿಐಗೆ ಒಟ್ಟು 12.44 ಲಕ್ಷ ಕೋಟಿ ರೂ. ಮೌಲ್ಯದ ನಿಷೇಧಿತ ನೋಟ್ ಗಳು ಜಮೆಯಾಗಿದೆ. ಬಳಿಕ ಜನವರಿ 27ರವರೆಗೆ ಒಟ್ಟು 9.921 ಲಕ್ಷ ಕೋಟಿ ಹಾಗೂ ಮಾರ್ಚ್ 3ರರವರೆಗೆ ಒಟ್ಟು 12 ಲಕ್ಷ ಕೋಟಿ ರೂ. ಮೌಲ್ಯದ 500 ಹಾಗೂ 2000 ರೂ. ಹೊಸ ನೋಟುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಅವರು ಜೇಟ್ಲಿ ಹೇಳಿದ್ದಾರೆ.

    ದೇಶದಲ್ಲಿ ಕಪ್ಪುಹಣ, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆಯನ್ನು ಮಟ್ಟ ಹಾಕುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ವರ್ಷ ನವೆಂಬರ್ 8ರ ರಾತ್ರಿ ಏಕಾಏಕಿಯಾಗಿ 500ರೂ ಹಾಗೂ 1,000 ರೂ. ನೋಟುಗಳನ್ನು ನಿಷೇಧ ಮಾಡಿತ್ತು. ಸರ್ಕಾರದ ಈ ನಿರ್ಧಾರದಿಂದಾಗಿ ಬ್ಯಾಂಕ್ ಡೆಪಾಸಿಟ್ ಹೆಚ್ಚಾಗಿದೆ ಎಂದು ಜೇಟ್ಲಿ ವಿವರಿಸಿದ್ದಾರೆ.

    ನೋಟ್‍ಬ್ಯಾನ್ ಮಾಡಿದ ಬಳಿಕ ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿತ್ತು. ಈ ಹಿನ್ನೆಲೆಯಲ್ಲಿ ಮತ್ತೆ ಕೇಂದ್ರ ಸರ್ಕಾರ 2 ಸಾವಿರ ರೂ. ನೋಟನ್ನು ಬ್ಯಾನ್ ಮಾಡುತ್ತಾರೆ ಎಂಬ ವದಂತಿ ಎಲ್ಲೆಡೆ ಹರಡಿತ್ತು. ಇದೀಗ ಹಣಕಾಸು ಸಚಿವರು ಲಿಖಿತ ಉತ್ತರ ನೀಡುವ ಮೂಲಕ ಈ ವದಂತಿ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.

  • ಮೋದಿ ‘ನೋಟ್ ಬ್ಯಾನ್’ಗೆ ಬಜೆಟ್‍ನಲ್ಲಿ ಟಾಂಗ್ ನೀಡಿದ ಸಿದ್ದರಾಮಯ್ಯ!

    ಮೋದಿ ‘ನೋಟ್ ಬ್ಯಾನ್’ಗೆ ಬಜೆಟ್‍ನಲ್ಲಿ ಟಾಂಗ್ ನೀಡಿದ ಸಿದ್ದರಾಮಯ್ಯ!

    ಬೆಂಗಳೂರು: ಕೇಂದ್ರ ಸರ್ಕಾರದ 500 ಹಾಗೂ 1000 ರೂ.ಗಳ ನೋಟ್ ಬ್ಯಾನ್ ವಿಚಾರವನ್ನು ಸಿಎಂ ಸಿದ್ದರಾಮಯ್ಯ ಇಂದು ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದರು.

    ನೋಟ್ ಬ್ಯಾನ್‍ನಿಂದಾಗಿ ಜನರು ಸಂಕಷ್ಟ ಎದುರಿಸಿದರು. ಒಟ್ಟಾರೆ ನೋಟ್ ಬ್ಯಾನ್‍ನಿಂದ ಆಗಿರುವ ಫಲಶೃತಿಯೇನು ಎನ್ನುವುದನ್ನು ಕೇಂದ್ರ ಸರ್ಕಾರ ತಿಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ ಪದೇ ಪದೇ ನಿಯಮಗಳನ್ನು ಬದಲಾಯಿಸಿದ ಆರ್‍ಬಿಐ ಕ್ರಮ, ಇದರಿಂದ ಜನರು ಎದುರಿಸಿದ ಸಂಕಷ್ಟದ ಬಗ್ಗೆಯೂ ಬಜೆಟ್ ಭಾಷಣದಲ್ಲಿ ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.

    ಸಿಎಂ ಬಜೆಟ್ ಭಾಷಣದಲ್ಲಿ ಹೇಳಿದ್ದೇನು?: ‘ಯಾವುದೇ ಸಾರ್ವಜನಿಕ ನೀತಿಯು ನಿಗದಿತ ಗುರಿಯನ್ನು ಸಾಧಿಸುವ ಉದ್ದೇಶದ ಜೊತೆಗೆ ಅದನ್ನು ಕಾರ್ಯಗತಗೊಳಿಸುವುದರಲ್ಲಿಯೂ ಹೆಚ್ಚು ಸಮರ್ಥವಾಗಿರಬೇಕು. ಅಪಮೌಲ್ಯೀಕರಣವು ಜನಸಾಮಾನ್ಯರಿಗೆ ಅಪಾರ ಸಂಕಷ್ಟ ಉಂಟು ಮಾಡಿತು. ಆದರೆ, ಅದರಿಂದ ಸಾಧಿಸಿದ ಫಲಶೃತಿಯೇನು ಎಂಬುದನ್ನು ಕೇಂದ್ರ ಸರ್ಕಾರವು ಇನ್ನೂ ತಿಳಿಸಬೇಕಾಗಿದೆ. ರೈತರು ಹಾಗೂ ಗ್ರಾಮೀಣ ಜನತೆಗೆ ಸೇವೆ ನೀಡುವಲ್ಲಿ ಅತ್ಯಂತ ನಿರ್ಣಾಯಕ ಪಾತ್ರವಹಿಸುವ ಇಡೀ ಸಹಕಾರ ವಲಯವು ಅಕ್ಷರಶಃ ಸ್ತಬ್ಧ ಗೊಂಡಿತು.

    ತಮಗೆ ವಹಿಸಿದ್ದ ಜವಾಬ್ದಾರಿಯನ್ನು ನಿರ್ವಹಿಸಲು ಬ್ಯಾಂಕಿಂಗ್ ವ್ಯವಸ್ಥೆಯು ಸನ್ನದ್ಧರಾಗಿಲ್ಲದೇ ಇದ್ದದ್ದು ಅದರ ಅನುಷ್ಠಾನದ ರೀತಿಯಲ್ಲಿನ ಸಿದ್ಧತೆಯ ಕೊರತೆಯನ್ನು ಜಾಹೀರುಪಡಿಸಿತು. ಅನುಷ್ಠಾನದ ನಡುವೆಯೇ ಗುರಿಯ ದಿಕ್ಕನ್ನು ಬದಲಿಸಲಾಯಿತು ಹಾಗೂ ನಿಯಮಗಳನ್ನು ಪದೇ ಪದೇ ಪರಿಷ್ಕರಿಸಲಾಯಿತು.

    ಅಪಮೌಲ್ಯೀಕರಣದ ಅಗತ್ಯತೆಯೇ ಚರ್ಚಾಸ್ಪದವಾಗಿದ್ದು, ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‍ಗಳು ಕನಿಷ್ಠ ಪಕ್ಷ ಮುಂದೆ ಒದಗಬಹುದಾದ ತೊಂದರೆಗಳನ್ನು ಮುಂದಾಲೋಚಿಸಿ, ಸಾಮಾನ್ಯ ಜನರಿಗೆ ಯಾವುದೇ ತೊಂದರೆಯಾಗದಂತೆ ಕಾರ್ಯಸಾಧ್ಯ ಹಾಗೂ ಸಶಕ್ತವಾದ ವ್ಯವಸ್ಥೆಯನ್ನು ಆಚರಣೆಗೆ ತರಬೇಕಿತ್ತು ಎಂಬುದು ನನ್ನ ಅನಿಸಿಕೆ.

    ಕಳೆದ ನಾಲ್ಕು ವರ್ಷಗಳ ನಮ್ಮ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಕಳೆದೆರಡು ವರ್ಷಗಳ ನಿರಂತರ ಬರಗಾಲ, ಇತ್ತೀಚಿನ ನೋಟು ಅಮಾನ್ಯೀಕರಣದಿಂದಾಗಿ ಕುಂಠಿತಗೊಂಡ ಆರ್ಥಿಕ ಚಟುವಟಿಕೆಯಿಂದಾದ ನಷ್ಟವೂ ಸೇರಿದಂತೆ ಎದುರಾದ ಪ್ರತಿಕೂಲಗಳನ್ನು ಆರ್ಥಿಕ ಶಿಸ್ತು, ಸಂಪನ್ಮೂಲ ಸಂಗ್ರಹಣೆಯ ಬದ್ಧತೆ ಮತ್ತು ದಕ್ಷ ಆಡಳಿತ ಮೂಲಕ ಎದುರಿಸುತ್ತಾ ಬಂದಿದ್ದೇವೆ’ ಎಂದು ಸಿದ್ದರಾಮಯ್ಯ ಭಾಷಣದಲ್ಲಿ ಹೇಳಿದರು.

  • ದಾವಣಗೆರೆ: ಹಳೇ ನೋಟು ಬದಲಾವಣೆ ಕಾರ್ಯದಲ್ಲಿ ತೊಡಗಿದ್ದ ಮೂವರ ಬಂಧನ

    ದಾವಣಗೆರೆ: ಹಳೇ ನೋಟು ಬದಲಾವಣೆ ಕಾರ್ಯದಲ್ಲಿ ತೊಡಗಿದ್ದ ಮೂವರ ಬಂಧನ

    ದಾವಣಗೆರೆ: ಹಳೆಯ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಬದಲಾವಣೆಯಲ್ಲಿ ತೊಡಗಿದ್ದ ಮೂವರನ್ನು ಜಿಲ್ಲೆಯ ಹರಿಹರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

    ಮೂಲತಃ ಹಾಸನದ ಸುನೀಲ್ ಕುಮಾರ್, ಚನ್ನಪಟ್ಟಣದ ಪ್ರದೀಪ್, ಶಿರಾ ತಾಲೂಕಿನ ಲಕ್ಷ್ಮೀಕಾಂತ್ ಬಂಧಿತರಾಗಿದ್ದಾರೆ. ಈ ಮೂವರು ನಗರದಲ್ಲಿ ಅಕ್ರಮವಾಗಿ ಹಣ ಬದಲಾವಣೆ ಮಾಡಲು ಪ್ರಯತ್ನಿಸುತ್ತಿದ್ದರು. ಇದೇ ಮೂವರು ಎರಡು ದಿನಗಳ ಹಿಂದೆ ದಾವಣಗೆರೆಯ ಲಾಡ್ಜ್‍ನಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ.

    ದಾವಣಗರೆರಯಿಂದ ಹರಿಹರಕ್ಕೆ ಹೋಗುವ ಮಾರ್ಗದಲ್ಲಿ ಚೆಕ್‍ಪೋಸ್ಟ್ ಬಳಿ ಪೊಲೀಸರು ವಾಹನ ಪರಿಶೀಲಿಸುವಾಗ ಹಳೇ ನೋಟು ಪತ್ತೆಯಾಗಿದೆ. ಬಂಧಿತರಿಂದ 500 ಮುಖಬೆಲೆಯ 50 ಸಾವಿರ ರೂಪಾಯಿ ಹಾಗೂ 1000 ಮುಖಬೆಲೆಯ 20.5 ಲಕ್ಷ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

     

  • ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ 10 ಅಂಶಗಳು

    ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಕಾರಣವಾದ 10 ಅಂಶಗಳು

    ನವದೆಹಲಿ: ಉತ್ತರ ಪ್ರದೇಶದಲ್ಲಿ ಮೋದಿ ಸುನಾಮಿಗೆ ಎಸ್‍ಪಿ ಕಾಂಗ್ರೆಸ್ ಮೈತ್ರಿಕೂಟ, ಬಿಎಸ್‍ಪಿ ಧೂಳೀಪಟವಾಗಿದೆ. ಹೀಗಾಗಿ ಬಿಜೆಪಿ ಗೆಲುವಿಗೆ ಕಾರಣವಾದ 10 ಅಂಶಗಳನ್ನು ಇಲ್ಲಿ ನೀಡಲಾಗಿದೆ.

    1. ಮೋದಿ ಮುಖ:
    ಉತ್ತರ ಪ್ರದೇಶದಲ್ಲಿ ಮೋದಿ ಮುಖವನ್ನು ಇಟ್ಟುಕೊಂಡೇ ಬಿಜೆಪಿ ನಾಯಕರು ಪ್ರಚಾರ ಮಾಡಿದ್ದರು. ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಮೋದಿಗಾಗಿ ಬಿಜೆಪಿ ಮತ ನೀಡಿ ಎಂದಿದ್ದು ವರವಾಗಿದೆ. ಅಷ್ಟೇ ಅಲ್ಲದೇ ಮೋದಿ ತಮ್ಮ ಭಾಷಣದಲ್ಲಿ ಸ್ಕ್ಯಾಮ್(ಸಮಾಜವಾದಿ, ಕಾಂಗ್ರೆಸ್, ಅಖಿಲೇಶ್ ಯಾದವ್, ಮಾಯಾವತಿ), ಕಸಬ್ (ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಬಹುಜನ ಸಮಾಜವಾದಿ ಪಾರ್ಟಿ) ಹೋಲಿಸಿ ವಾಗ್ದಾಳಿ ನಡೆಸುವ ಮೂಲಕ ಮೂರು ಪಕ್ಷಗಳ ಒಂದೇ ತಟ್ಟೆಗೆ ತಂದು ಬಿಜೆಪಿ ಪರ ಅಲೆಯನ್ನು ಸೃಷ್ಟಿಸುವಲ್ಲಿ ಸಫಲರಾದರು.

    2. ನೋಟ್‍ಬ್ಯಾನ್:
    ನವೆಂಬರ್ 8ರ ನೋಟು ಬ್ಯಾನ್ ಬಳಿಕ ಬಿಜೆಪಿ ವಿವಿಧ ರಾಜ್ಯಗಳ ಸ್ಥಳೀಯ ಆಡಳಿತ ಮತ್ತು ಪಾಲಿಕೆ ಚುನಾವಣೆ ಯಶಸ್ಸನ್ನು ಗಳಿಸಿತ್ತು. ಈ ಫಲಿತಾಂಶ ಉತ್ತರ ಪ್ರದೇಶದಲ್ಲಿ ಪರಿವರ್ತನೆಯಾಗಿದೆ. ಬಿಎಸ್‍ಪಿ, ಕಾಂಗ್ರೆಸ್, ಎಸ್‍ಪಿ ನೋಟ್‍ಬ್ಯಾನ್ ವಿರುದ್ಧ ಎಷ್ಟೇ ಪ್ರತಿಭಟಿಸಿದರೂ ಜನ ಮಾತ್ರ ಬಿಜೆಪಿಗೆ ಮತ ನೀಡಿದ್ದಾರೆ.

    3. ಎಸ್‍ಪಿ ಆಂತರಿಕ ಕಿತ್ತಾಟ:
    ಅಖಿಲೇಶ್ ಯಾದವ್, ಮುಲಾಯಂ ಸಿಂಗ್ ಯಾದವ್, ಶಿವಪಾಲ್ ಜಗಳದಿಂದಾಗಿ ಜನ ರೋಸಿ ಹೋಗಿದ್ದರು. ತದ ನಂತರ ನಮ್ಮಲ್ಲಿ ಒಗ್ಗಟ್ಟು ಇದೆ ಎಂದು ಬಿಂಬಿಸಿದ್ದರು. ಆದರೆ ಇವರ ಕಿತ್ತಾಟ ನಾಟಕವನ್ನು ನೋಡುತ್ತಿದ್ದ ಜನ ಈ ಬಾರಿ ಬಿಜೆಪಿಯ ಕೈ ಹಿಡಿದಿದ್ದಾರೆ.

    4. ಕಾಂಗ್ರೆಸ್ ಮೈತ್ರಿಕೂಟ:
    ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ಕಾಂಗ್ರೆಸ್ ಬಿಹಾರದಲ್ಲಿ ಯಶಸ್ವಿಯಾದಂತೆ ಉತ್ತರ ಪ್ರದೇಶಲ್ಲಿ ಎಸ್‍ಪಿ ಜೊತೆಗೂಡಿ ಮೈತ್ರಿ ಮಾಡಿಕೊಂಡಿತ್ತು. ಆದರೆ ಪ್ರಶಾಂತ್ ಕಿಶೋರ್ ಈ ತಂತ್ರಗಾರಿಕೆ ವೈಫಲ್ಯ ಕಂಡಿದ್ದು ಮೈತ್ರಿಕೂಟಕ್ಕೆ ಹೀನಾಯ ಸೋಲಾಗಿದೆ. ಆಡಳಿತ ವಿರೋಧಿ ಅಲೆ ಇರುವಾಗಲೇ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು ಬಿಜೆಪಿ ಗೆಲ್ಲಲು ವರದಾನವಾಯ್ತು.

    5. ಮಾಯಾವತಿ ವೈಫಲ್ಯ:
    ಹಿಂದುಳಿದ ವರ್ಗಗಳ ಮತಗಳನ್ನು ಪಡೆದು ದಲಿತ ಮಹಿಳಾ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ಈ ಬಾರಿ ಚುನಾವಣಾ ನಡೆಯುವ ಮೊದಲೇ ಸೋಲನ್ನು ಒಪ್ಪಿಕೊಂಡಿದ್ದಂತೆ ಕಾಣುತಿತ್ತು. ಎಸ್‍ಪಿ ಕಾಂಗ್ರೆಸ್ ಮೈತ್ರಿ ಕೂಟ ಮತ್ತು ಬಿಜೆಪಿಯ ಅಬ್ಬರದ ಪ್ರಚಾರ ನಡುವೆ ಬಿಎಸ್‍ಪಿ ಮಂಕಾಗಿತ್ತು. ಇದರ ಜೊತೆ ಹಣ ಪಡೆದು ಟಿಕೆಟ್ ಹಂಚಿಕೆ ಮಾಡಿದ್ದರು ಎನ್ನುವ ಆರೋಪವೂ ಮಾಯಾವತಿ ವಿರುದ್ಧ ಕೇಳಿ ಬಂದಿತ್ತು.

    6. ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲ:
    ಕಾಂಗ್ರೆಸ್ ಎಸ್‍ಪಿಯ ಅಖಿಲೇಶ್ ಯಾದವ್ ಮುಂದಿನ ಮುಖ್ಯಮಂತ್ರಿ ಎಂದು ಪ್ರಕಟಿಸಿದ್ದರೆ, ಬಿಎಸ್‍ಪಿಯಿಂದ ಮಾಯಾವತಿ ಮುಖ್ಯಮಂತ್ರಿ ರೇಸ್‍ನಲ್ಲಿದ್ದರು. ಆದರೆ ಈ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಪ್ರಕಟಿದೇ ಚುನಾವಣೆಗೆ ಇಳಿದಿತ್ತು. ಇದರಿಂದಾಗಿ ಬಿಜೆಪಿ ನಾಯಕರ ಆಂತರಿಕ ಜಗಳಕ್ಕೆ ಆಸ್ಪದವೇ ಇರಲಿಲ್ಲ. ಎಲ್ಲ ನಾಯಕರ ಹೋರಾಟ ಮತ್ತು ತಳ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿದ್ದು ಬಿಜೆಪಿಯ ಗೆಲುವಿಗೆ ಕಾರಣವಾಯ್ತು.

    7. ಕೈ ಹಿಡಿದ ಯುವ ಮತದಾರರು:
    ಈ ಹಿಂದಿನ ಜಾತಿ ರಾಜಕಾರಣವನ್ನು ಬಿಟ್ಟು ಬಿಜೆಪಿ ಈ ಬಾರಿ ಯುವ ಜನತೆಯನ್ನು ಗುರಿಯಾಗಿಸಿಕೊಂಡು ಪ್ರಚಾರ ನಡೆಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಐಟಿ ಸೆಲ್ ಕಾಂಗ್ರೆಸ್, ಎಸ್‍ಪಿ, ಬಿಎಸ್‍ಪಿ ವೈಫಲ್ಯಗಳನ್ನು ಪ್ರಚಾರ ಮಾಡಿತ್ತು. ಈ ಪ್ರಚಾರದಿಂದಾಗಿ ಹೊಸ ಮತದಾರರು ಬಿಜೆಪಿಗೆ ಮತ ನೀಡಿದ್ದಾರೆ ಎನ್ನುವ ವಿಶ್ಲೇಷಣೆ ಈಗ ಆರಂಭವಾಗಿದೆ.

    8. ಮೈತ್ರಿ ಲಾಭ:
    ಬಿಜೆಪಿ ಅಪ್ನಾ ದಳ(ಎಸ್) ಮತ್ತು ಸುಹಲ್ದೇವ್ ಭಾರತೀಯ ಸಮಾಜ ಪಾರ್ಟಿ (ಎಸ್‍ಬಿಎಸ್‍ಪಿ) ಜೊತೆ ಮೈತ್ರಿ ಮಾಡಿಕೊಂಡಿತ್ತು ಪೂರ್ವಾಂಚಲ ಮತ್ತು ಮಧ್ಯ ಉತ್ತರ ಪ್ರದೇಶದ ಪಟೇಲ್ ಕುಮಿ ದಳವನ್ನು ಅಪ್ನಾ ದಳ ಪ್ರತಿನಿಧಿಸಿದರೆ, ಎಸ್‍ಬಿಎಸ್‍ಪಿ 17 ಹಿಂದುಳಿದ ವರ್ಗಗಳನ್ನು ಪೂರ್ವ ಉತ್ತರ ಪ್ರದೇಶ ಪ್ರತಿನಿದಿಸುತ್ತದೆ. ಈ ಎರಡು ಪಕ್ಷಗಳ ಜೊತೆಗಿನ ಮೈತ್ರಿ ಬಿಜೆಪಿಗೆ ವರವಾಗಿದೆ.

    9. ಹಿಂದುತ್ವ ಟ್ರಂಪ್ ಕಾರ್ಡ್:
    19.98 ಕೋಟಿ ಜನ ಸಂಖ್ಯೆಯಲ್ಲಿ 14.05 ಕೋಟಿ ಮತದರಾರ ಪೈಕಿ ಹಿಂದುಳಿದ ವರ್ಗ ಶೇ.34.7, ದಲಿತರು ಶೇ. 20.5, ಮುಸ್ಲಿಮ್ ಶೇ.19, ಬ್ರಾಹ್ಮಣ ಶೇ.10.5, ಬುಡಕಟ್ಟು ಜನಾಂಗ ಶೇ.2, ವೈಶ್ಯ ಶೇ.4.3, ಠಾಕೂರ್ ಶೇ.7.6 ಮಂದಿ ಇದ್ದರು. ಆದರೆ ಬಿಜೆಪಿ ಯಾವೊಬ್ಬ ಮುಸ್ಲಿಮ್ ಧರ್ಮದ ವ್ಯಕ್ತಿಗೆ ಟಿಕೆಟ್ ಹಂಚಿಕೆ ಮಾಡಿರಲಿಲ್ಲ. ಈ ವಿಚಾರವನ್ನೇ ಇಟ್ಟುಕೊಂಡು ವಿರೋಧಿಗಳು ಬಿಜೆಪಿ ವಿರುದ್ಧ ಪ್ರಚಾರ ಮಾಡಿದ್ದರು. ಆದರೆ ಬಿಜೆಪಿ ಹಿಂದುಳಿದ ವರ್ಗ, ಮೇಲ್ವರ್ಗ, ದಲಿತರ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ವಿಜಯ ಸಾಧಿಸಿದೆ.

    10. ಕೋಮು ಗಲಾಟೆ ಇಲ್ಲ:
    ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗೆ ಮುನ್ನ ಕೋಮು ಗಲಾಟೆ ನಡೆಯುವುದು ಉತ್ತರಪ್ರದೇಶಲ್ಲಿ ಸಾಮಾನ್ಯ. ಆದರೆ ಈ ಬಾರಿ ಒಂದೇ ಒಂದು ಕೋಮು ಗಲಾಟೆಯಾಗಿಲ್ಲ. ಮಂಗಳವಾರ ಲಕ್ನೋದಲ್ಲಿ ಶಂಕಿತ ಐಸಿಸ್ ಉಗ್ರನ ಹತ್ಯೆ ಮಾಡಲಾಗಿತ್ತು. ಆದರೆ ಈ ಎನ್‍ಕೌಂಟರ್ ಫೇಕ್ ಆಗಿದ್ದು, ಅಖಿಲೇಶ್ ಯಾದವ್ ಸರ್ಕಾರ ಚುನಾವಣೆಗೂ ಮುನ್ನ ಕೋಮುಗಲಾಟೆ ಸೃಷ್ಟಿಸಲು ಉಗ್ರ ನಿಗ್ರಹ ದಳದ ಮೂಲಕ ಈ ಎನ್‍ಕೌಂಟರ್ ಮಾಡಲಾಗಿದೆ ಎಂದು ಈಗ ಅಲ್ಲಿನ ಸ್ಥಳಿಯ ಮುಸ್ಲಿಮ್ ನಾಯಕರು ಆರೋಪಿಸಿದ್ದಾರೆ.

    ಈ ಎಲ್ಲ ಕಾರಣದ ಜೊತೆಗೆ ಸರ್ಜಿಕಲ್ ಸ್ಟ್ರೈಕ್ ಎಫೆಕ್ಟ್, ಕೇಂದ್ರ ಸರ್ಕಾರದ ಯಶಸ್ವಿ ಯೋಜನೆಗಳು, ಮುಸ್ಲಿಂಯೇತರ ಓಬಿಸಿ ವರ್ಗ ಬಿಜೆಪಿಯನ್ನು ಕೈ ಹಿಡಿದ ಕಾರಣ ಬಿಜೆಪಿ ಈ ಬಾರಿ ಉತ್ತರ ಪ್ರದೇಶದಲ್ಲಿ ಜಯಭೇರಿ ಬಾರಿಸಿದೆ.

    ಮಧ್ಯಾಹ್ನ 1 ಗಂಟೆಯ ಟ್ರೆಂಡ್ಸ್ ಪ್ರಕಾರ ಬಿಜೆಪಿ 307 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಎಸ್‍ಪಿ ಕಾಂಗ್ರೆಸ್ 82, ಬಿಎಸ್‍ಪಿ 18, ಇತರರು 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

    2012ರ ಚುನಾವಣೆಯಲ್ಲಿ ಎಸ್‍ಪಿ 224, ಬಿಎಸ್‍ಪಿ 80, ಬಿಜೆಪಿ 47, ಕಾಂಗ್ರೆಸ್ 28 ಸ್ಥಾನಗಳನ್ನು ಗೆದ್ದುಕೊಂಡಿತ್ತು.

    ಇದನ್ನೂ ಓದಿ: ಬಿಹಾರ ಚುನಾವಣೆಯ ಸೋಲಿನ ಪಾಠದಿಂದಾಗಿ ಉತ್ತರಪ್ರದೇಶದಲ್ಲಿ ಜಯಭೇರಿ ಬಾರಿಸಿತು ಬಿಜೆಪಿ. ಪಕ್ಷ ಸಂಘಟನೆಯಾಗಿದ್ದು ಹೇಗೆ?

  • ಬಾಗಲಕೋಟೆ: ನೋಟ್‍ಬ್ಯಾನ್ ಪ್ರತಿಭಟನೆ ವೇಳೆ ವೇದಿಕೆಯಲ್ಲೇ ಅಸ್ವಸ್ಥರಾದ ಸಚಿವೆ ಉಮಾಶ್ರೀ

    ಬಾಗಲಕೋಟೆ: ನೋಟ್‍ಬ್ಯಾನ್ ಪ್ರತಿಭಟನೆ ವೇಳೆ ವೇದಿಕೆಯಲ್ಲೇ ಅಸ್ವಸ್ಥರಾದ ಸಚಿವೆ ಉಮಾಶ್ರೀ

    ಬಾಗಲಕೋಟೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಇಂದು ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದ ಪ್ರತಿಭಟನಾ ಸಮಾವೇಶದ ವೇದಿಕೆಯಲ್ಲಿ ಅಸ್ವಸ್ಥರಾಗಿ ಸುಸ್ತಾದಂತೆ ಕಂಡುಬಂದರು.

    ಇಂದು ಕೇಂದ್ರ ಸರ್ಕಾರದ ನೋಟ್ ಬ್ಯಾನ್ ಕ್ರಮ ಖಂಡಿಸಿ, ಹುನಗುಂದ ತಾಲೂಕು ಕಾಂಗ್ರೆಸ್ ಕರೆ ನೀಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ಉಮಾಶ್ರೀ ಅವರು ಭಾಗವಹಿಸಿದ್ದರು. ವೇದಿಕೆಯಲ್ಲಿ ಉಮಾಶ್ರೀ ಅಸ್ವಸ್ಥರಾಗುತ್ತಿದ್ದಂತೆ ಶಾಸಕ ವಿಜಯಾನಂದ್ ಕಾಶಪ್ಪನವರ್ ಹಾಗೂ ಕಾಂಗ್ರೆಸ್ ಮುಖಂಡರು ಅವರನ್ನು ಹುನಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ರು.

    ಉಮಾಶ್ರೀ ಅವರಿಗೆ ಯಾವುದೇ ತೊಂದರೆಯಿಲ್ಲ, ವಿಶ್ರಾಂತಿ ಅಗತ್ಯವಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಕುಸುಮಾ ಮಾಗಿ ಹೇಳಿದ್ದಾರೆ.

     

  • ಸ್ವಚ್ಛನಗರಿ ಮೈಸೂರಿನ ಶೌಚಾಲಯದಲ್ಲೂ ಈಗ ಡಿಜಿಟಲ್ ಪೇಮೆಂಟ್

    ಸ್ವಚ್ಛನಗರಿ ಮೈಸೂರಿನ ಶೌಚಾಲಯದಲ್ಲೂ ಈಗ ಡಿಜಿಟಲ್ ಪೇಮೆಂಟ್

    ಮೈಸೂರು: ದೇಶದ ಎಲ್ಲೆಡೆ ಡಿಜಿಟಲ್ ಪೇಮೆಂಟ್‍ನದ್ದೇ ಸದ್ದು. ಅದರಲ್ಲೂ ನೋಟ್ ಬ್ಯಾನ್ ಆದ ಮೇಲಂತೂ ಡಿಜಿಟಲ್ ಪೇಮೆಂಟ್ ದೊಡ್ಡ ಕ್ರಾಂತಿಯ ರೀತಿ ಮಾರ್ಪಟಿದ್ದೆ. ಮೈಸೂರಿನ ಶೌಚಾಲಯದಲ್ಲೂ ಇದೀಗ ಡಿಜಿಟಲ್ ಪೇಮೆಂಟ್ ಶುರುವಾಗಿದೆ.

    ನೋಟ್ ಬ್ಯಾನ್ ಬಳಿಕವಂತೂ ಬೀದಿ ವ್ಯಾಪಾರಿಗಳಿಂದ ಹಿಡಿದು ಚಿಕ್ಕ ಚಿಕ್ಕ ಅಂಗಡಿ ಮಂದಿ ಡಿಜಿಟಲ್ ಪೇಮೆಂಟ್‍ಗೆ ಜೈ ಅಂದಿದ್ರು. ಆದ್ರೆ ಸಾರ್ವಜನಿಕ ಶೌಚಾಲಯಗಳಲ್ಲಿ ಮಾತ್ರ ಚಿಲ್ಲರೆ ಸಮಸ್ಯೆ ಎದುರಾಗಿ ಜನ ಪರದಾಡಿದ್ದಂತೂ ಸತ್ಯ. ಇದರ ಮಧ್ಯೆ ಸ್ವಚ್ಛನಗರಿ ಮೈಸೂರಿನಲ್ಲಿ ಅಪರೂಪದ ಶೌಚಾಲಯವಿದೆ. ಇಲ್ಲಿ ನಿಮಗೆ ಚಿಲ್ಲರೆ ಸಮಸ್ಯೆ ಎದುರಾಗಲ್ಲ. ಕಾರಣ ಈ ಶೌಚಾಲಯ ನಡೆಸುವವರು ಡಿಜಿಟಲ್ ಪೇಮೆಂಟ್ ವ್ಯವಸ್ಥೆಗೆ ಮೊರೆಹೋಗಿದ್ದಾರೆ. ಶೌಚಾಲಯ ಬಳಸುವವರಿಗಾಗಿ ಪೇಟಿಎಂ ಅಳವಡಿಸಿದ್ದಾರೆ.

    ಮೈಸೂರಿನ ಮಹಾನಗರ ಪಾಲಿಕೆ ಹಿಂಭಾಗದಲ್ಲಿನ ಸಾರ್ವಜನಿಕ ಶೌಚಾಲಯಕ್ಕೆ ನಿತ್ಯ ಬರುವ ನೂರಾರು ಜನರಲ್ಲಿ ಶೇ. 20ರಷ್ಟು ಮಂದಿ ಪೇಟಿಎಂ ಮೂಲಕವೇ ಹಣ ಪಾವತಿ ಮಾಡುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಒಟ್ಟಿನಲ್ಲಿ ಸಾರ್ವಜನಿಕ ಶೌಚಾಲಯಗಳಲ್ಲಿಯೇ ಮೈಸೂರಿನ ಈ ಶೌಚಾಲಯ ಮಾದರಿಯಾಗಿದ್ದು. ಇದನ್ನು ನೋಡಿದ ಇನ್ನಷ್ಟು ಮಂದಿ ಡಿಜಿಟಲ್ ಪೇಮೆಂಟ್‍ನತ್ತ ಒಲವು ತೋರಿದ್ದಾರೆ.

  • 500, 1000 ರೂ. ನೋಟು ವಿನಿಮಯ: ರಾಯಚೂರಿನಲ್ಲಿ ಮೂವರ ಬಂಧನ

    500, 1000 ರೂ. ನೋಟು ವಿನಿಮಯ: ರಾಯಚೂರಿನಲ್ಲಿ ಮೂವರ ಬಂಧನ

    – 16.70 ಲಕ್ಷ ರೂಪಾಯಿ ಹಳೆಯ ನೋಟು, ಒಂದು ಕಾರು ಜಪ್ತಿ

    ರಾಯಚೂರು: ರದ್ದಾಗಿರುವ 500, 1000 ಮುಖಬೆಲೆಯ ನೋಟುಗಳ ವಿನಿಮಯ ಮಾಡುತ್ತಿದ್ದ ಮೂವರು ದಂಧೆಕೋರರನ್ನು ರಾಯಚೂರು ಪೊಲೀಸರು ಬಂಧಿಸಿದ್ದಾರೆ.

    ನಗರದ ಪಶ್ಚಿಮ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಮೂರು ಜನ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಧಾರವಾಡ ಮೂಲದ ರವಿಕುಮಾರ್, ರಾಯಚೂರಿನ ಅನ್ವರ್, ಮಾನ್ವಿಯ ಪರಶುರಾಮ ನೋಟು ವಿನಿಮಯ ವೇಳೆ ಸಿಕ್ಕಿಬಿದ್ದ ಆರೋಪಿಗಳು. ಬಂಧಿತರಿಂದ ಒಟ್ಟು 16 ಲಕ್ಷ 70 ಸಾವಿರ ರೂಪಾಯಿ ಹಳೆಯ ನೋಟುಗಳನ್ನ ಜಪ್ತಿ ಮಾಡಲಾಗಿದೆ. ಇದರಲ್ಲಿ 3 ಲಕ್ಷ 82 ಸಾವಿರ ರೂಪಾಯಿ ಸಾವಿರ ರೂಪಾಯಿ ಮುಖಬೆಲೆಯ ನೋಟು, 12 ಲಕ್ಷ 88 ಸಾವಿರ ರೂಪಾಯಿ 500 ರೂಪಾಯಿ ಮುಖಬೆಲೆಯ ನೋಟುಗಳಾಗಿವೆ.

    ರಾಯಚೂರಿನ ಮಂತ್ರಾಲಯ ರಸ್ತೆಯ ಅತಿಥಿ ಹೋಟೆಲ್ ಎದುರು ಆರೋಪಿಗಳು ಹಣ ವಿನಿಮಯಕ್ಕೆ ಮುಂದಾಗಿದ್ದರು. ದಾಳಿ ವೇಳೆ ಪೊಲೀಸರು ಆರೋಪಿಗಳ ಕಾರನ್ನೂ ಜಪ್ತಿ ಮಾಡಿದ್ದಾರೆ. ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

     

  • ನೋಟ್‍ಬ್ಯಾನ್ ಗೆ 100 ದಿನ: ಬೆಂಗಳೂರಿನಲ್ಲಿ ಸಿಕ್ತು ಪುಡಿಪುಡಿಯಾಗೋ 2,000 ನೋಟು!

    ನೋಟ್‍ಬ್ಯಾನ್ ಗೆ 100 ದಿನ: ಬೆಂಗಳೂರಿನಲ್ಲಿ ಸಿಕ್ತು ಪುಡಿಪುಡಿಯಾಗೋ 2,000 ನೋಟು!

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500ರೂ. ಹಾಗೂ 1,000ರೂ. ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿ ಇಂದಿಗೆ 100 ದಿನ. ಹೊಸ 2000 ಸಾವಿರ ನೋಟ್ ಕೈಗೆ ಬಂದು ಮೂರು ತಿಂಗಳೇ ಕಳೆದಿವೆ. ಈ ಮಧ್ಯೆ ಮೈಸೂರಿನಲ್ಲಿ 2000 ನೋಟು ಪುಡಿ ಪುಡಿಯಾಗಿದ್ದ ಸುದ್ದಿ ನೋಡಿದ್ರಿ. ಅದೇ ರೀತಿಯ ಘಟನೆ ಬೆಂಗಳೂರಿನ ಪೀಣ್ಯದಲ್ಲೂ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಪೀಣ್ಯ ದಾಸರಹಳ್ಳಿಯ ನಿರಂಜನ್ ಹೆಗಡೆಯವರಿಗೆ ಸಿಕ್ಕಿರುವ 2000 ಸಾವಿರ ರೂ. ಹೊಸ ನೋಟ್ ಕೂಡ ಪುಡಿ ಪುಡಿಯಾಗಿ ಉದುರುತ್ತಿದೆ.

    ಕಳೆದ ಮೂರು ದಿನಗಳ ಹಿಂದೆ ನಿರಂಜನ್ ಹೆಗಡೆಯವರ ಹಾರ್ಡ್‍ವೇರ್ ಶಾಪ್‍ಗೆ ಬಂದ ಗ್ರಾಹಕರೊಬ್ಬರು ಈ ನೋಟನ್ನ ಕೊಟ್ಟಿದ್ದಾರೆ. ಆದ್ರೆ ಇದೀಗ ಈ ನೋಟ್‍ನ್ನು ಬ್ಯಾಂಕ್‍ನವರಿಗೆ ತೋರಿಸಿದ್ರೆ ಇದು ನಕಲಿ ನೋಟ್ ಅಲ್ಲ ಒರಿಜಿನಲ್ ನೋಟು ಅದ್ರೆ ಯಾಕೆ ಹೀಗೆ ಆಗ್ತಿದೆ ಅಂತಾ ಗೊತ್ತಿಲ್ಲ ಅಂತಾರೆ ಎಂಬುವುದಾಗಿ ತಿಳಿದುಬಂದಿದೆ.

    https://www.youtube.com/watch?v=VqP0ijlkl6Q&feature=youtu.be

  • ರೇನ್ ಕೋಟ್ ಹಾಕಿ ಸ್ನಾನ ಮಾಡೋದು ಮನಮೋಹನ್ ಸಿಂಗ್‍ಗೆ ಗೊತ್ತು: ಮೋದಿ

    ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆದರಣೀಯ ವ್ಯಕ್ತಿ. ಅಷ್ಟು ಹಗರಣಗಳು ನಡೆದರೂ ಮನಮೋಹನ್ ಸಿಂಗ್ ಮೇಲೆ ಒಂದು ಕಪ್ಪು ಚುಕ್ಕೆಯೂ ಬರಲಿಲ್ಲ. ರೇನ್ ಕೋಟ್ ಹಾಕಿ ಸ್ನಾನ ಮಾಡುವುದು ಮನಮೋಹನ್‍ಗೆ ಚೆನ್ನಾಗಿ ಗೊತ್ತು ಅಂತಾ ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.

    ರಾಜ್ಯಸಭೆಯಲ್ಲಿ ಮಾತನಾಡಿದ ಮೋದಿ, ನೋಟ್ ಬ್ಯಾನ್, ಕಪ್ಪು ಹಣ ಹಾಗೂ ಭ್ರಷ್ಟಾಚಾರದ ವಿರುದ್ಧದ ಹೋರಾಟ ಯಾವುದೇ ರಾಜಕೀಯ ಪಕ್ಷವೊಂದರ ವಿರುದ್ಧದ ಹೋರಾಟವಲ್ಲ ಎಂದು ಹೇಳಿದರು. ಮನಮೋಹನ್ ಸಿಂಗ್ ವಿರುದ್ಧದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ಸದಸ್ಯರು ಪ್ರಧಾನಿ ಭಾಷಣದ ನಡುವೆಯೇ ಸಭಾತ್ಯಾಗ ಮಾಡಿದರು.

    ನಿನ್ನೆ ಲೋಕಸಭೆಯಲ್ಲಿ ಮಾಡಿದ ಭಾಷಣದಂತೆಯೇ ಇಂದು ಕೂಡಾ ಮೋದಿ ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದರು. ವಿಪಕ್ಷಗಳು 70 ವರ್ಷದ ಬಗ್ಗೆ ಟೀಕೆ ಮಾಡುತ್ತಿವೆ. ಆದರೆ ನನ್ನ ಸರ್ಕಾರಕ್ಕೆ ಈಗ ಕೇವಲ ಎರಡೂವರೆ ವರ್ಷ. ನಿಮ್ಮ ಅವಧಿಯ ಟಾಯ್ಲೆಟ್‍ಗಳಿಗೆ ಬೀಗ ಹಾಕಿದ್ನಾ?, ನಿಮ್ಮ ಅವಧಿಯ ರಸ್ತೆ ಕಿತ್ತು ಹಾಕಿದ್ನಾ?. ಎಲ್ಲದಕ್ಕೂ ನಾನೇ ಕಾರಣ ಎಂದು ಯಾಕೆ ಅಂದ್ಕೋತೀರಿ ಎಂದು ಮೋದಿ ಪ್ರಶ್ನಿಸಿದರು.

    1971ರಲ್ಲಿ ಇಂದಿರಾ ಗಾಂಧಿಗೆ ಅಂದಿನ ಹಣಕಾಸು ಸಚಿವರು ನೋಟ್ ಬ್ಯಾನ್‍ಗೆ ಸಲಹೆ ನೀಡಿದ್ದರು. ಆದರೆ ಇಂದಿರಾಗಾಂಧಿ ಅವರು ಇದನ್ನು ತಿರಸ್ಕರಿಸಿದ್ದರು. 1972ರಲ್ಲಿ ಜ್ಯೋತಿ ಬಸು ನೋಟ್ ಬ್ಯಾನ್ ಬಗ್ಗೆ ಮಾತನಾಡಿದರು. 1981ರಲ್ಲಿ ಹರ್‍ಕಿಶನ್ ಸಿಂಗ್ ಸುರ್ಜಿತ್ ಉಲ್ಲೇಖಿಸಿದ್ದರು ಎಂದು ಮೋದಿ ಹೇಳಿದರು.

    ನಾನು ಓಕೆ, ಆರ್‍ಬಿಐಗೆ ವಿರೋಧ ಯಾಕೆ?: ನೋಟ್ ಬ್ಯಾನ್‍ಗೆ ಸಂಬಂಧಪಟ್ಟ ವಿಚಾರದಲ್ಲಿ ನನ್ನ ಹಾಗೂ ಸರ್ಕಾರದ ವಿರುದ್ಧದ ಟೀಕೆಗಳು ನನಗೆ ಅರ್ಥವಾಗುತ್ತದೆ. ಆದರೆ ಆರ್‍ಬಿಐ, ಆರ್‍ಬಿಐ ಗವರ್ನರ್‍ರನ್ನು ವಿವಾದದಲ್ಲಿ ತರಬೇಡಿ. ಅವರಿಗೆ ಅವರದೇ ಆದ ಗೌರವವಿದೆ. ಅದನ್ನು ಹಾಳು ಮಾಡುವುದು ಸರಿಯಲ್ಲ ಎಂದು ವಿಪಕ್ಷಗಳಿಗೆ ಕಿವಿಮಾತು ಹೇಳಿದರು.

    ದೇಶದಲ್ಲಿ ಒಂದೇ ಬಾರಿ ಬದಲಾವಣೆ ಅಸಾಧ್ಯ. ಬದಲಾವಣೆಗೆ ನಾವೆಲ್ಲರೂ ತಯಾರಾಗಬೇಕು. ನಾವೇನಾದರೂ ಬದಲಾವಣೆ ತರಲು ಯತ್ನಿಸಿದರೆ ಟೀಕೆಗಳೇ ಬರುತ್ತವೆ. ದೊಡ್ಡ ನಿರ್ಧಾರಗಳನ್ನು ಜಾರುಗೆ ತರುವಾಗ ತೊಂದರೆ ಸಹಜ. ಯಾವ ಸರ್ಕಾರವೂ ಮಲಗಬೇಕೆಂದು ಬರುವುದಿಲ್ಲ. ಕೆಂಪುಕೋಟೆಯ ಭಾಷಣದಲ್ಲಿ ನಾನು ಇದೇ ಮಾತನ್ನು ನಾನು ಹೇಳಿದ್ದೆ. ನಾನು ಸ್ವಚ್ಛ ಭಾರತದ ಬಗ್ಗೆ ಮಾತನಾಡಿದೆ. ಆದರೆ ಅದರ ಬಗ್ಗೆ ಲೇವಡಿ ಮಾಡುತ್ತಾರೆ. ಸ್ವಚ್ಛತಾ ಆಂದೋಲನದಲ್ಲಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದು ಎಂದರು.

    ಮಹಿಳೆಯರ ಸುರಕ್ಷತೆಗಾಗಿ 24 ಗಂಟೆಗಳ ಹೆಲ್ಪ್‍ಲೈನ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಡಿಜಿಟಲ್ ಪಾವತಿಗೆ ನಾವೆಲ್ಲರೂ ಒತ್ತು ನೀಡಬೇಕಿದೆ. ನೋಟ್ ಬ್ಯಾನ್ ಮಾಡಿದ 40 ದಿನಗಳಲ್ಲಿ 700 ಮಾವೋವಾದಿಗಳು ಶರಣಾದರು. ಇದು ಮೊದಲ ಬಾರಿಗೆ ಆಯಿತು. ಅಪ್ರಮಾಣಿಕರಿಗೆ ಶಿಕ್ಷೆಯಾಗುವವರೆಗೆ ಪ್ರಾಮಾಣಿಕರಿಗೆ ಬಲ ಬರಲ್ಲ. ಬ್ಯಾಂಕ್‍ಗಳಿಗೆ ನಗದು ಹರಿದು ಬಂದಿದೆ. ಇದರಿಂದಾಗಿ ಬ್ಯಾಂಕ್‍ಗಳ ಬಡ್ಡಿ ದರದಲ್ಲಿ ಕಡಿತವಾಗಿವೆ. ಜನರ ಮೂಡ್ ರಾಜಕಾರಣಿಗಳ ಮೂಡ್‍ಗಿಂತ ತುಂಬಾ ಭಿನ್ನವಾಗಿದೆ ಎಂದು ಮೋದಿ ಹೇಳಿದರು.

    ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಬ್ಯಾಲಟ್ ಪೇಪರ್ ಬದಲು ಬಟನ್ ಒತ್ತಬಹುದು ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ವಿಶ್ವವೇ ಕಾಗದರಹಿತವಾಗಿ ಸಾಗುತ್ತದೆ ಎಂದಾದರೆ ಇದು ನಮಗೇಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.

  • ಉತ್ತರ ಕರ್ನಾಟಕದಲ್ಲಿ 10 ರೂ. ಕಾಯಿನ್ ತಗೊಳ್ಳೋಕ್ಕೆ ಹೆದರ್ತಾರೆ ಜನ!

    ಹುಬ್ಬಳ್ಳಿ: ನೋಟ್ ಬ್ಯಾನ್‍ನಿಂದ ಕಂಗೆಟ್ಟಿದ್ದ ಜನಕ್ಕೆ ಮತ್ತೊಂದು ಶಾಕ್ ಎದುರಾಗಿದೆ. 10 ರೂಪಾಯಿ ಕಾಯಿನ್ ಬ್ಯಾನ್ ಆಗಿದೆ ಎಂಬ ಸುಳ್ಳು ಸುದ್ದಿ ಹರಿದಾಡ್ತಿದ್ದು, ಇದ್ರಿಂದ ಉತ್ತರ ಕರ್ನಾಟಕದ ಜನ 10 ರೂ, ಕಾಯಿನ್ ಸ್ವೀಕರಿಸೋಕೆ ಹಿಂಜರಿಯುತ್ತಿದ್ದಾರೆ.

    ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ 10 ರೂಪಾಯಿ ನಾಣ್ಯವನ್ನ ಯಾರೂ ಸ್ವೀಕರಿಸ್ತಿಲ್ಲ. ಕೇಂದ್ರವಾಗಲೀ ಅಥವಾ ಆರ್‍ಬಿಐ ಆಗಲೀ ಕಾಯಿನ್ ಬ್ಯಾನ್ ಬಗ್ಗೆ ಆದೇಶ ಹೊರಡಿಸಿಲ್ಲ. ಆದಾಗ್ಯೂ, ಜನ 10 ರೂಪಾಯಿ ನಾಣ್ಯ ಸ್ವೀಕರಿಸಲು ಹಿಂದೇಟು ಹಾಕ್ತಿದ್ದಾರೆ.

    ಹುಬ್ಬಳ್ಳಿ ನಗರದ ಕೆಲ ಬ್ಯಾಂಕ್‍ಗಳಲ್ಲಿಯೂ 10 ರೂಪಾಯಿ ಕಾಯಿನ್‍ಗಳನ್ನ ತೆಗೆದುಕೊಳ್ಳುತಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ. ಚಿಲ್ಲರೆ ವ್ಯಾಪಾರಿಗಳು, ಬಸ್ ಕಂಡಕ್ಟರ್‍ಗಳು ಈ ಸುಳ್ಳು ಸುದ್ದಿಯಿಂದ ಪರದಾಡ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಕೋಲಾರ ಮತ್ತು ಆನೇಕಲ್‍ನಲ್ಲೂ ಇಂಥದ್ದೇ ಸುದ್ದಿ ಹರಿದಾಡಿತ್ತು.