Tag: ನೋಟ್ ಬ್ಯಾನ್ ಸಮೀಕ್ಷೆ

  • ನೋಟ್ ಬ್ಯಾನ್‍ಗೆ ಆಯ್ತು 365 ದಿನ: ಪಬ್ಲಿಕ್ ಪರೀಕ್ಷೆಯಲ್ಲಿ ಮೋದಿ ಗೆದ್ರಾ? ಸೋತ್ರಾ?

    ನೋಟ್ ಬ್ಯಾನ್‍ಗೆ ಆಯ್ತು 365 ದಿನ: ಪಬ್ಲಿಕ್ ಪರೀಕ್ಷೆಯಲ್ಲಿ ಮೋದಿ ಗೆದ್ರಾ? ಸೋತ್ರಾ?

    ಬೆಂಗಳೂರು: ನವೆಂಬರ್ 8, 2016. ಭಾರತದ ಭವ್ಯ ಇತಿಹಾಸ ಪುಟಗಳಲ್ಲಿ ದಾಖಲಾದ ಮಹಾ ದಿನ. 500 ಹಾಗೂ 1000 ರೂಪಾಯಿ ಮುಖ ಬೆಲೆಯ ದೊಡ್ಡ ನೋಟುಗಳ ಮೇಲೆ ನಿಷೇಧ ಹೇರುವ ಮೂಲಕ ನರೇಂದ್ರ ಮೋದಿ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದರು. ಅಭಿವೃದ್ಧಿ ಯಜ್ಞಕ್ಕೆ ದೊಡ್ಡ ನೋಟುಗಳನ್ನು ಆಹುತಿ ಕೊಟ್ಟು ಹೊಸ ಅರ್ಥ ಕ್ರಾಂತಿಗೆ ಮುನ್ನುಡಿ ಬರೆದರು.

    ಕಪ್ಪು ಹಣ, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ ಮುಕ್ತ ಭಾರತಕ್ಕೆ ಈ ನಿರ್ದಾಕ್ಷಿಣ್ಯ ನಿರ್ಧಾರ ಅಗತ್ಯ ಎಂದು ಘಂಟಾಘೋಷವಾಗಿ ನರೇಂದ್ರ ಮೋದಿ ಹೇಳಿಬಿಟ್ರು. ಇದಾದ ನಂತರ ಶುರುವಾಗಿದ್ದೇ ಹೊಗಳಿಕೆ ತೆಗಳಿಕೆ ಪರ್ವ. ಮೋದಿಯನ್ನು ಪ್ರಜೆಗಳು ನವ ಭಾರತದ ಹರಿಕಾರ, ವಿಶ್ವ ನಾಯಕ, ಜಗದೇಕವೀರ ಅಂತೆಲ್ಲಾ ಭಜಿಸಿ ಸ್ತುತಿಸಿದರೆ, ಹಲವರು ಶ್ರೀಸಾಮಾನ್ಯರನ್ನು ಸಂಕಟದ ಕೂಪಕ್ಕೆ ದೂಡಿ ಸಂಭ್ರಮ ಪಡುವ ಢೋಂಗಿ ದೇಶಭಕ್ತ ಅಂತೆಲ್ಲಾ ಜರಿದರು.

    ಹಾಗಾದ್ರೆ ಒಂದು ವರ್ಷದ ಬಳಿಕವೂ ಮೋದಿ ನೋಟು ಬ್ಯಾನ್ ನಿರ್ಧಾರದ ಬಗ್ಗೆ ನಾಗರಿಕರ ಮೂಡ್ ಹೇಗಿದೆ? ಈ ಸತ್ಯವನ್ನು ಅರಿಯಲು ಸಂಕಲ್ಪ ಮಾಡಿದ ನಿಮ್ಮ ಪಬ್ಲಿಕ್ ಟಿವಿ ಸಾಕ್ಷಾತ್ ಸಮೀಕ್ಷೆ ನಡೆಸಲು ತೀರ್ಮಾನಿಸಿತು.

    ಹೌದು ವೀಕ್ಷಕರೇ ನೋಟು ನಿಷೇಧಕ್ಕೆ ಸಂಬಂಧಿಸಿದಂತೆ 17 ಪ್ರಮುಖ ಪ್ರಶ್ನೆಗಳನ್ನಿಟ್ಟುಕೊಂಡು ಜನರ ಮನದಾಳ ತಿಳಿಯುವ ಅತ್ಯಂತ ಪ್ರಾಮಾಣಿಕ ಪ್ರಯತ್ನ ಮಾಡಿದೆ ನಿಮ್ಮ ಪಬ್ಲಿಕ್ ಟಿವಿ. ಇದೊಂದು ಉಹಾಪೋಹ ಅಥವಾ ಅಂದಾಜಿನ ಸರ್ವೇ ಅಲ್ಲವೇ ಇಲ್ಲ. ಸತ್ಯನಿಷ್ಠ, ವಿಶ್ವಾಸಾರ್ಹ, ನಂಬಲು ಯೋಗ್ಯವಾದ ಸಮೀಕ್ಷೆ ಅಂತ ಹೇಳಲು ನಮಗೆ ಹೆಮ್ಮೆಯಿದೆ. ಸರ್ವೇ ಕಾರ್ಯದಲ್ಲಿ ಅನುಸರಿಸಬೇಕಾದ ಎಲ್ಲಾ ಸಿದ್ಧ ಸೂತ್ರಗಳನ್ನು ಅಳತೆಗೋಲಾಗಿ ಸ್ವೀಕರಿಸಿ ಪಬ್ಲಿಕ್ ಫಲಿತಾಂಶ ಸಿದ್ಧಪಡಿಸಿದ್ದೇವೆ. ಯಾವುದೇ ರಾಗದ್ವೇಷ, ಸ್ವಹಿತಾಸಕ್ತಿ ಇಲ್ಲದೇ ಸಮೀಕ್ಷೆಯನ್ನು ಮಾಡಿದ್ದೇವೆ. ಬೆಂಗಳೂರು ಸೇರಿದಂತೆ ಎಲ್ಲಾ 30 ಜಿಲ್ಲೆಗಳಲ್ಲೂ ನಮ್ಮ ಪ್ರತಿನಿಧಿಗಳು ಜನಾಭಿಪ್ರಾಯ ಸಂಗ್ರಹಿಸಿದ್ದಾರೆ.

    ರಾಜ್ಯದ ಅಷ್ಟ ದಿಕ್ಕುಗಳಲ್ಲೂ ಸಂಚರಿಸಿ 1,800 ಸ್ಯಾಂಪಲ್ ಗಳನ್ನು ಸಂಗ್ರಹಿಸಿದ್ದೇವೆ. ಇನ್ನು ಪ್ರಶ್ನೆ ಕೇಳುವಾಗ ಬೇಕಾಬಿಟ್ಟಿ ಮಾರ್ಗ ಅನುಸರಿಸಿಲ್ಲ. ಸಾಮಾಜಿಕ ಹಾಗೂ ಆರ್ಥಿಕ ಸ್ಥರಗಳ ಆಧಾರದ ಮೇಲೆ ವರ್ಗೀಕರಣ ಮಾಡಿಯೇ ಜನಮತ ಕ್ರೋಢೀಕರಿಸಲಾಗಿದೆ.

    ಪ್ರತಿ 50 ಸ್ಯಾಂಪಲ್‍ಗಳಲ್ಲಿ 10 ಶ್ರೀಸಾಮಾನ್ಯರು, 10 ಗೃಹಿಣಿಯರು, 10 ಯುವಕರು/ ವಿದ್ಯಾರ್ಥಿಗಳು, 10 ಹಿರಿಯ ನಾಗರಿಕರು/ಪಿಂಚಣಿದಾರರು, 10 ವ್ಯಾಪಾರಸ್ಥರು/ಕಾರ್ಮಿಕರು/ ಗ್ರಾಮಸ್ಥರ ಅಭಿಮತ ಸಂಗ್ರಹಿಸಲಾಗಿದೆ. ಕರ್ನಾಟಕದಾದ್ಯಂತ ಬಂದ ಅಭಿಪ್ರಾಯಗಳನ್ನು ಅತ್ಯಂತ ಜಾಗರೂಕತೆಯಿಂದ ಹಾಗೂ ಶಿಸ್ತಿನಿಂದ ಒಟ್ಟು ಮಾಡಿ, ಅದಕ್ಕೆ ಪಕ್ಕಾ ಲೆಕ್ಕ ಇಟ್ಟು ಶೇಕಡವಾರು ಫಲಿತಾಂಶವನ್ನು ತಯಾರು ಮಾಡಿದ್ದೇವೆ. ಈ ಸಮೀಕ್ಷೆಯಲ್ಲಿ ಬಂದಿರುವ ಫಲಿತಾಂಶ ಇಲ್ಲಿದೆ

    1. ನೋಟ್ ಬ್ಯಾನ್ ನಿಂದ ಭ್ರಷ್ಟಾಚಾರ ಹಾಗೂ ಕಪ್ಪು ಹಣಕ್ಕೆ ಕಡಿವಾಣ ಬಿದ್ದಿದ್ಯಾ..?
    ಕರ್ನಾಟಕ
    ಹೌದು – 36.54%
    ಪರವಾಗಿಲ್ಲ – 31.59%
    ಇಲ್ಲ – 28.26%
    ಗೊತ್ತಿಲ್ಲ – 3.61%

    ಬೆಂಗಳೂರು
    ಹೌದು – 21.55%
    ಪರವಾಗಿಲ್ಲ – 37.93%
    ಇಲ್ಲ – 37.07%
    ಗೊತ್ತಿಲ್ಲ – 3.45%

    2. ನೋಟ್ ಬ್ಯಾನ್ ನಿಂದ ಭಯೋತ್ಪಾದನೆ ಹಾಗೂ ನಕಲಿ ನೋಟು ಹಾವಳಿ ಕಮ್ಮಿಯಾಗಿದ್ಯಾ?
    ಹೌದು – 39.92%
    ಪರವಾಗಿಲ್ಲ – 28.50%
    ಇಲ್ಲ – 26.34%
    ಗೊತ್ತಿಲ್ಲ – 5.24%

    3. ನೋಟ್ ಬ್ಯಾನ್ ಪರಿಣಾಮ ಇನ್ನೂ ಅನುಭವಿಸುತ್ತಿದ್ದೀರಾ..?
    ಕರ್ನಾಟಕ
    ಹೌದು – 33.57%
    ಇಲ್ಲ – 60.95%
    ಗೊತ್ತಿಲ್ಲ – 5.48%

    ಬೆಂಗಳೂರು
    ಹೌದು – 47.41%
    ಇಲ್ಲ – 43.11%
    ಗೊತ್ತಿಲ್ಲ – 9.48%

    4. ನೋಟ್ ಬ್ಯಾನ್ ನಿಂದ ಹೆಚ್ಚು ಕಷ್ಟ ಅನುಭವಿಸಿದ್ದು ಯಾರು..?
    ಕರ್ನಾಟಕ
    ಬಡವರು – 37.76%
    ಮಧ್ಯಮ ವರ್ಗದವರು – 38.05%
    ಶ್ರೀಮಂತರು – 21.15%
    ಗೊತ್ತಿಲ್ಲ – 3.04%

    ಬೆಂಗಳೂರು
    ಬಡವರು – 34.48%
    ಮಧ್ಯಮ ವರ್ಗದವರು – 50%
    ಶ್ರೀಮಂತರು – 12.93%
    ಗೊತ್ತಿಲ್ಲ – 2.59%

    5. ನೋಟು ನಿಷೇಧದಿಂದ ಈ ಒಂದು ವರ್ಷದಲ್ಲಿ ನೀವು ಅನುಭವಿಸಿದ ಕಷ್ಟಗಳು ಏನು?
    ದುಡ್ಡಿಗೆ ಬರ – 18.04%
    ಚಿಲ್ಲರೆ ಸಮಸ್ಯೆ – 30.11%
    ವ್ಯಾಪಾರಕ್ಕೆ ಹೊಡೆತ – 18.04%
    ಜೀವನ ನಿರ್ವಹಣೆ ಕಷ್ಟ -15.70%
    ಯಾವುದೇ ಸಮಸ್ಯೆ ಇಲ್ಲ – 18.10%

    6. ನೋಟ್ ಬ್ಯಾನ್ ನಂತರ ಜಾರಿಯಾದ ಹೊಸ ಕಠಿಣ ನಿಯಮಗಳಿಂದ ಬೇಸತ್ತಿದ್ದೀರಾ?
    ಹೌದು – 44.70%
    ಇಲ್ಲ – 47.55%
    ಗೊತ್ತಿಲ್ಲ – 7.75%

    7. ಮೋದಿ ಇನ್ನಷ್ಟು ಚೆನ್ನಾಗಿ ನೋಟ್ ಬ್ಯಾನ್ ಯೋಜನೆ ರೂಪಿಸಬಹುದಿತ್ತಾ?
    ಹೌದು – 65.68%
    ಇಲ್ಲ – 20.68%
    ಗೊತ್ತಿಲ್ಲ – 13.64%

    8. ನೋಟ್ ಬ್ಯಾನ್ ನಿಂದ ದೇಶಕ್ಕಾದ ಲಾಭ ಏನು?
    ತಕ್ಕಮಟ್ಟಿಗೆ ಕಪ್ಪು ಹಣ ವಾಪಸ್ಸಾಯ್ತು – 25.92%
    ಹೊಸ ತೆರಿಗೆದಾರರು ಸೇರ್ಪಡೆಯಾದ್ರು – 22.39%
    ಡಿಜಿಟಲ್ ವಹಿವಾಟು ಜಾಸ್ತಿಯಾಯ್ತು – 8.39%
    ತೆರಿಗೆ ವಂಚಿಸೋ ಕಳ್ಳ ಕಂಪೆನಿಗಳು ಕಮ್ಮಿಯಾದ್ವು – 22.65%
    ಏನೂ ಲಾಭ ಆಗಿಲ್ಲ – 20.64%

    9. ಮೋದಿಯ ನಗದು ರಹಿತ ವ್ಯವಹಾರದ ಕನಸು ಈಡೇರಿದ್ಯಾ?
    ಹೌದು – 29.55%
    ಇಲ್ಲ – 56.35%
    ಗೊತ್ತಿಲ್ಲ – 14.10%

    10. ನೋಟ್ ಬ್ಯಾನ್ ನಿಂದ ದೇಶದ ಆರ್ಥಿಕ ಪ್ರಗತಿ ಕುಸಿಯಿತಾ?
    ಹೌದು – 39.39%
    ಇಲ್ಲ – 45.86%
    ಗೊತ್ತಿಲ್ಲ – 14.75%

    11. ನೋಟ್ ಬ್ಯಾನ್ ನಿಂದ ಮೋದಿ ವರ್ಚಸ್ಸು ಹೆಚ್ಚಾಯ್ತಾ.. ಕಮ್ಮಿಯಾಯ್ತಾ?
    ಕರ್ನಾಟಕ
    ಹೆಚ್ಚಾಯ್ತು – 47.21%
    ಕಮ್ಮಿಯಾಯ್ತು – 22.61%
    ಏನೂ ವ್ಯತ್ಯಾಸ ಇಲ್ಲ – 21.79%
    ಗೊತ್ತಿಲ್ಲ – 8.39%

    ಬೆಂಗಳೂರು
    ಹೆಚ್ಚಾಯ್ತು – 38.79%
    ಕಮ್ಮಿಯಾಯ್ತು – 22.41%
    ಏನೂ ವ್ಯತ್ಯಾಸ ಇಲ್ಲ – 32.76%
    ಗೊತ್ತಿಲ್ಲ – 6.04%

    12. ನೋಟ್ ಬ್ಯಾನ್ ಕರ್ನಾಟಕ ಚುನಾವಣೆ ಮೇಲೆ ಪರಿಣಾಮ ಬೀರುತ್ತಾ?
    ಕರ್ನಾಟಕ
    ಮೋದಿ ಪರ ಅಲೆ – 38.46%
    ಮೋದಿ ವಿರೋಧಿ ಅಲೆ – 33.10%
    ಗೊತ್ತಿಲ್ಲ – 28.44%

    ಬೆಂಗಳೂರು
    ಮೋದಿ ಪರ ಅಲೆ – 32.76%
    ಮೋದಿ ವಿರೋಧಿ ಅಲೆ – 36.21%
    ಗೊತ್ತಿಲ್ಲ – 31.03%

    13. ನೋಟ್ ಬ್ಯಾನ್ ನಿಂದ ನಿಮಗೆ ಲಾಭ ಆಗುತ್ತೆ ಅಂತ ಇನ್ನೂ ಅನ್ಸುತ್ತಾ?
    ಕರ್ನಾಟಕ
    ಹೌದು – 44.17%
    ಇಲ್ಲ – 42.31%
    ಗೊತ್ತಿಲ್ಲ – 13.52%

    ಬೆಂಗಳೂರು
    ಹೌದು – 33.62%
    ಇಲ್ಲ – 49.14%
    ಗೊತ್ತಿಲ್ಲ – 17.24%

    14. ಮೋದಿ ಮತ್ತೆ ನೋಟ್ ಬ್ಯಾನ್ ಮಾಡಬೇಕಾ?
    ಕರ್ನಾಟಕ
    ಹೌದು – 30.59%
    ಬೇಡಪ್ಪಾ ಬೇಡ – 52.97%
    ಗೊತ್ತಿಲ್ಲ – 16.44%

    ಬೆಂಗಳೂರು
    ಹೌದು- 18.10%
    ಬೇಡಪ್ಪಾ ಬೇಡ – 64.66%
    ಗೊತ್ತಿಲ್ಲ -17.24%

    15. ಮೋದಿ ಮತ್ತೆ 1000 ರೂ. ತರಬೇಕಾ?
    ಬೇಕು – 69.58%
    ಬೇಡ – 25.70%
    ಗೊತ್ತಿಲ್ಲ – 4.72%

    16. ನೋಟ್ ಬ್ಯಾನ್ 1 ವರ್ಷ.. ಮೋದಿ ನಿರ್ಧಾರಕ್ಕೆ ಏನಂತೀರಾ?
    ಕರ್ನಾಟಕ
    ಕ್ರಾಂತಿಕಾರಿ ನಿರ್ಧಾರ – 63.64%
    ಕರಾಳ ನಿರ್ಧಾರ – 28.09%
    ಗೊತ್ತಿಲ್ಲ – 8.27%

    ಬೆಂಗಳೂರು
    ಕ್ರಾಂತಿಕಾರಿ ನಿರ್ಧಾರ – 62.07%
    ಕರಾಳ ನಿರ್ಧಾರ – 29.31%
    ಗೊತ್ತಿಲ್ಲ – 8.62%

    17. ನೋಟ್ ಬ್ಯಾನ್ ಪರೀಕ್ಷೆಯಲ್ಲಿ ಮೋದಿ ಪಾಸಾ.. ಫೇಲಾ?
    ಡಿಸ್ಟಿಂಕ್ಷನ್ – 20.86%
    ಫಸ್ಟ್ ಕ್ಲಾಸ್ – 26.34%
    ಸೆಕೆಂಡ್ ಕ್ಲಾಸ್ – 13.64%
    ಜಸ್ಟ್ ಪಾಸ್ – 17.54%
    ಫೇಲ್ – 21.62%

    https://youtu.be/czB0cmvGqDg

    https://youtu.be/p9IUJ0n3kc0