Tag: ನೋಟ್‌ ಬುಕ್

  • ನೋಟ್ ಬುಕ್, ಪಠ್ಯಪುಸ್ತಕ ದರದಲ್ಲಿ ಏರಿಕೆ- ಪೋಷಕರಿಗೆ ಆತಂಕ

    ನೋಟ್ ಬುಕ್, ಪಠ್ಯಪುಸ್ತಕ ದರದಲ್ಲಿ ಏರಿಕೆ- ಪೋಷಕರಿಗೆ ಆತಂಕ

    ಬೆಂಗಳೂರು: ಬೇಸಿಗೆ ಕಳೆದು, ಶಾಲೆ ಆರಂಭಗೊಳ್ಳುತ್ತಿದೆ. ಸ್ಕೂಲ್ ಸ್ಟಾರ್ಟ್ ಆಗ್ತಿದ್ದಂತೆ ಪೋಷಕರಿಗೆ ಶಾಕ್ ಕಾದಿದೆ. ನೋಟ್ ಬುಕ್ ಹಾಗೂ ಟೆಕ್ಸ್ಟ್ ಬುಕ್ ಬೆಲೆ ಗಗನಕ್ಕೇರಿದೆ.

    ಶಾಲಾ ಶುಲ್ಕದಲ್ಲಿ ಮಾತ್ರವಲ್ಲ ಈ ಬಾರಿ ನೋಟ್ ಪುಸ್ತಕಗಳು ಮತ್ತು ಪಠ್ಯಪುಸ್ತಕಗಳ ದರ ಕೂಡ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಪೋಷಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಕಳೆದ ಐದಾರು ತಿಂಗಳಿಂದೀಚೆಗೆ ನೋಟ್ ಬುಕ್ (Note Book) ಗಳ ದರ 25% ರಿಂದ 40% ರ ತನಕ ಹೆಚ್ಚಳವಾಗಿದ್ದು, ಪೋಷಕರ ಕೈ ಸುಡುತ್ತಿದೆ. ಇನ್ನೇನು ಶಾಲೆ (School) ಆರಂಭಗೊಂಡಾಗ ಪೋಷಕರಿಗೆ ಈಗ ನೋಟ್ ಬುಕ್ ದರ ಏರಿಕೆಯಿಂದ ಟೆನ್ಶನ್ ಶುರುವಾಗಿದೆ.

    ನೋಟ್ ಪುಸ್ತಕಗಳು ಕಳೆದ ಶೈಕ್ಷಣಿಕ ವರ್ಷದ ಆರಂಭದ ದರಕ್ಕೂ ಶೈಕ್ಷಣಿಕ ವರ್ಷದ ಅಂತ್ಯದ ದರಕ್ಕೂ ಹೋಲಿಸಿದರೆ ದರದ ವ್ಯತ್ಯಾಸ 50% ರಿಂದ 60% ರಷ್ಟು ಹೆಚ್ಚಿದೆ. ಮುಂದಿನ ಶೈಕ್ಷಣಿಕ ವರ್ಷದ ಆರಂಭದ ಬೇಡಿಕೆ ಇನ್ನೂ 10% ರಿಂದ 20% ರಷ್ಟು ದರ ಏರಿಕೆ ಆಗುವ ಸಂಭವವಿದೆ ಎಂದು ಸ್ಟೇಷನರಿ ಅಂಗಡಿಗಳ ಮಾಲೀಕರು ಹೇಳ್ತಿದ್ದಾರೆ. ಇದರಿಂದಾಗಿ ಮಕ್ಕಳ ಶಿಕ್ಷಣದ ಬಜೆಟ್ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗಲಿದ್ದು ಇದನ್ನು ಎದುರಿಸಲು ಮಾನಸಿಕವಾಗಿ ಮತ್ತು ಹಣಕಾಸು ದೃಷ್ಟಿಯಲ್ಲಿ ಪೋಷಕರು ಸಿದ್ಧರಾಗಬೇಕಿದೆ.

    ಒಂದು ಕಡೆ ಪೇಪರ್ ಬೆಲೆ ಏರಿಕೆ ಹಾಗೂ ಕಚ್ಚಾ ಸಾಮಗ್ರಿಗಳ ಬೆಲೆಗಳಲ್ಲೂ ಸಹ ಅಪಾರ ಪ್ರಮಾಣದಲ್ಲಿ ಏರಿಕೆ ಆಗಿದೆ. ಹೀಗಾಗಿ ಟೆಕ್ಸ್ಟ್ ಬುಕ್ (Text Book Price) ಬೆಲೆ ಏರಿಕೆ ಆಗಿದೆ. ಕಳೆದ ವರ್ಷ 100 ಪುಟದ ಖಾಲಿ ಅಥವಾ ಗೆರೆ ಪುಸ್ತಕಕ್ಕೆ 20 ರೂ. ನಿಂದ ಈ ಬಾರಿ 25 ರೂ. ಗಳಿಗೆ ಏರಿದೆ. ಇನ್ನು 200 ಪುಟದ ಪುಸ್ತಕಕ್ಕೆ 30 ರೂ.ಗಳಿದ್ದ ದರ ಈ ವರ್ಷ 37 ರೂ.ಗಳಿಗೆ ಜಿಗಿದಿದೆ. ಹೀಗಾಗಿ ಸಬ್ಸಿಡಿ ನೀಡಬೇಕೆಂಬ ಬೇಡಿಕೆ ಕೇಳಿ ಬರ್ತಿದೆ. ಇದನ್ನೂ ಓದಿ: ಪಠ್ಯ ಪುಸ್ತಕ ಪರಿಷ್ಕರಿಸ್ತೇವೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ

    ಒಟ್ಟಾರೆಯಾಗಿ ಒಂದುಕಡೆ ದೈನಂದಿನ ಅಗತ್ಯ ವಸ್ತುಗಳ ಬೆಲೆ ಎರಿಕೆ ಇನ್ನೊಂದು ಕಡೆ ನೋಟ್ ಬುಕ್ ಬೆಲೆ ಏರಿಕೆ ಇದರಿಂದ ಜನರಿಗೆ ಟೆನ್ಷನ್ ಶುರುವಾಗಿದೆ. ನೋಟ್ ಪುಸ್ತಕಗಳ ಖರೀದಿ ಜೋರಾಗಿದ್ದು ಸದ್ಯಕ್ಕೆ ಪುಸ್ತಕಗಳ ಬೆಲೆ 30% ರಿಂದ 40% ರಷ್ಟು ನೋಟ್ ಪುಸ್ತಕಗಳ ದರ ಏರಿಕೆಯಾಗಿದ್ದು, ಇದರಿಂದ ಪೋಷಕರು ಕಂಗಲಾಗಿದ್ದಾರೆ.

  • ಕೊನೆಗೂ ರಿವೀಲ್ ಆಯ್ತು ಸೋನಾಕ್ಷಿ ಸಿನ್ಹಾ ಲವ್ ಸ್ಟೋರಿ: ಹುಡುಗ ಯಾರು?

    ಕೊನೆಗೂ ರಿವೀಲ್ ಆಯ್ತು ಸೋನಾಕ್ಷಿ ಸಿನ್ಹಾ ಲವ್ ಸ್ಟೋರಿ: ಹುಡುಗ ಯಾರು?

    ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಸಿನಿಮಾಗಳಿಗಿಂತ ತಮ್ಮ ಖಾಸಗಿ ವಿಚಾರವಾಗಿ ಇತ್ತೀಚಿನ ದಿನಗಳಲ್ಲಿ ಚರ್ಚೆಯಲ್ಲಿದ್ದಾರೆ. ಜಹೀರ್ ಇಕ್ಬಾಲ್ ಜತೆ ಸೋನಾಕ್ಷಿ ಹೆಸರು ಕೇಳಿ ಬರುತ್ತಿತ್ತು. ಇಬ್ಬರ ಡೇಟಿಂಗ್ ವಿಚಾರ ಬಿಟೌನ್‌ನಲ್ಲಿ ಸಖತ್ ಸುದ್ದಿ ಮಾಡಿತ್ತು. ಈಗ ತಮ್ಮ ಸಂಬಂಧದ ಬಗ್ಗೆ ಸೋನಾಕ್ಷಿ ಬರ್ತಡೇಗೆ ವಿಶೇಷವಾಗಿ ವಿಶ್ ಮಾಡುವ ಮೂಲಕ ಅಧಿಕೃತವಾಗಿ ನಟ ಜಹೀರ್ ತಿಳಿಸಿದ್ದಾರೆ.

    `ದಬಾಂಗ್’ ಚಿತ್ರದ ಮೂಲಕ ಬಾಲಿವುಡ್ ಪರಿಚಿತರಾದ ನಟಿ ಸೋನಾಕ್ಷಿ ಸಿನ್ಹಾ ಬಳಿಕ ಸಾಲು ಸಾಲು ಸಿನಿಮಾಗಳ ಮೂಲಕ ಗುರುತಿಸಿಕೊಂಡರು. ಈಗಲೂ ಸಾಕಷ್ಟು ಚಿತ್ರಗಳಲ್ಲಿ ಆಕ್ಟೀವ್ ಇರುವ ಸೋನಾಕ್ಷಿ ಸದ್ಯ ತಮ್ಮ ಲವ್ ಲೈಫ್ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ. ಕೆಲ ವರ್ಷಗಳಿಂದ ಜಹೀರ್ ಇಕ್ಬಾಲ್ ಜತೆ ಡೇಟಿಂಗ್‌ನಲ್ಲಿದ್ದರು. ಈ ಕುರಿತು ಸಾಕಷ್ಟು ಸುದ್ದಿಯಾಗಿತ್ತು. ಆ ಸುದ್ದಿಗೆ ಬ್ರೇಕ್ ಹಾಕಿ, ತಮ್ಮ ಪ್ರೀತಿಯ ಕುರಿತು ಅಧಿಕೃತವಾಗಿ ಸೋಷಿಯಲ್ ಮೀಡಿಯಾದಲ್ಲಿ ನಟ ಜಹೀರ್ ತಿಳಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪರ್ ಶರ್ಮಾ ಪರ ಧ್ವನಿ ಎತ್ತಿದ ಕಂಗನಾ ರಣಾವತ್

    ಸೋನಾಕ್ಷಿ ಸಿನ್ಹಾ ಜೂನ್ 2ರಂದು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. 35ನೇ ವರ್ಷಕ್ಕೆ ಕಾಲಿಟ್ಟಿರೋ ಸಂದರ್ಭದಲ್ಲಿ ಜಹೀರ್ ವಿಶೇಷವಾಗಿ ಸೋನಾಕ್ಷಿಗೆ ವಿಶ್ ಮಾಡಿದ್ದಾರೆ. ಹ್ಯಾಪಿ ಬರ್ತಡೇ ಸೋನ್ಸ್, ನನ್ನ ಕೊಲ್ಲದಿದ್ದಕ್ಕಾಗಿ ಧನ್ಯವಾದಗಳು. ಐ ಲವ್ ಯೂ ಎಂದು ತಿಳಿಸುವ ಮೂಲಕ ತಮ್ಮ ಪ್ರೀತಿಯನ್ನು ಅಧಿಕೃತವಾಗಿ ತಿಳಿಸಿದ್ದಾರೆ. ಈ ಮೂಲಕ ಅಭಿಮಾನಿಗಳಿಗೂ ಗುಡ್ ನ್ಯೂಸ್ ಕೊಟ್ಟಿದ್ದಾರೆ.

     

    View this post on Instagram

     

    A post shared by Zaheer Iqbal (@iamzahero)

    ಜಹೀರ್ ಇಕ್ಬಾಲ್ ನೋಟ್‌ಬುಕ್, ಕಮಲ್ ಖಾನ್ ಚಿತ್ರಗಳಲ್ಲಿ ನಟಿಸಿದ್ದಾರೆ. `ಡಬಲ್ ಎಕ್ಸಲ್’ ಚಿತ್ರದಲ್ಲಿ ಸೋನಾಕ್ಷಿ ಮತ್ತು ಜಹೀರ್ ಒಟ್ಟಿಗೆ ನಟಿಸಿದ್ದಾರೆ. ಸದ್ಯದಲ್ಲೇ ಚಿತ್ರ ರಿಲೀಸ್ ಆಗಲಿದೆ.