Tag: ನೋಟ್ ಬದಲಾವಣೆ

  • ಅವಧಿ ಮೀರಿದ ಬಳಿಕವೂ 96,500 ರೂ. ಹಳೇ ನೋಟು ಹೊಂದಿದ್ದ ಅನಾಥ ಮಕ್ಕಳಿಗೆ ಮೋದಿಯಿಂದ ನೆರವು

    ಅವಧಿ ಮೀರಿದ ಬಳಿಕವೂ 96,500 ರೂ. ಹಳೇ ನೋಟು ಹೊಂದಿದ್ದ ಅನಾಥ ಮಕ್ಕಳಿಗೆ ಮೋದಿಯಿಂದ ನೆರವು

    ಜೈಪುರ: ನೋಟು ಬದಲಾವಣೆಗೆ ಅವಧಿ ಮೀರಿದ ಬಳಿಕವೂ ಹಳೆಯ ನೋಟು ಹೊಂದಿದ್ದ ಅನಾಥರಿಬ್ಬರಿಗೆ ಪ್ರಧಾನಿ ನರೇಂದ್ರ ಮೋದಿ ನೆರವು ನೀಡಿದ್ದಾರೆ.

    ರಾಜಸ್ಥಾನದ ಕೋಟಾದ 17 ವರ್ಷದ ಸೂರಜ್ ಬಂಜಾರಾ ಮತ್ತು ಆತನ ಸಹೋದರಿ ಸಲೋನಿಗೆ 96 ಸಾವಿರ ರೂಪಾಯಿ ಮೊತ್ತದ ಹಳೆಯ ನೋಟು ಸಿಕ್ಕಿತ್ತು. ಆದ್ರೆ ಅಷ್ಟೊತ್ತಿಗೆ ನೋಟು ವಿನಿಮಯಕ್ಕೆ ನೀಡಲಾಗಿದ್ದ ಅವಧಿ ಕೂಡಾ ಮುಗಿದುಹೋಗಿತ್ತು. ಇದರಿಂದ ಏನ್ ಮಾಡೋದು ಅಂತಾ ಗೊತ್ತಾಗದೇ ಇಬ್ಬರೂ ಪ್ರಧಾನಿಯವರಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಮೋದಿ ಈ ಮಕ್ಕಳಿಗೆ 50 ಸಾವಿರ ರೂಪಾಯಿ ನೆರವು ನೀಡಿದ್ದಾರೆ. ಅಲ್ಲದೆ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ ಮತ್ತು ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯಡಿ ವಿಮೆ ಪಾಲಿಸಿಯನ್ನೂ ಮಾಡಿಸಿದ್ದಾರೆ. ಈ ಎರಡೂ ಪಾಲಿಸಿಗಳಿಗಾಗಿ ಐದು ವರ್ಷದ ಮಟ್ಟಿಗೆ 1,170 ರೂಪಾಯಿಯ ಇನ್ಶೂರೆನ್ಸ್ ಪ್ರೀಮಿಯಮ್ ಹಣವನ್ನು ಬಿಡುಗಡೆ ಮಾಡಿಸಿದ್ದಾರೆ.

    ಬಿಡುಗಡೆ ಮಾಡಲಾಗಿರುವ ಹಣ ಹಾಗೂ ವಿಮೆಯ ಪ್ರೀಮಿಯಮ್ ಹಣ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಾಕಾಗದಿದ್ದರೂ, ಈ ನೆರವಿನಿಂದ ನಿಮ್ಮ ಕಷ್ಟಗಳು ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗಬಹುದು ಎಂದು ನಂಬಿದ್ದೇನೆ. ಪತ್ರದ ಮೂಲಕ ನಿಮ್ಮ ಈಗಿನ ಪರಿಸ್ಥಿತಿ ಬಗ್ಗೆ ತಿಳಿದು ನನಗೆ ದುಃಖವಾಗಿದೆ ಎಂದು ಮೋದಿ ಈ ಮಕ್ಕಳಿಗೆ ಪತ್ರದಲ್ಲಿ ಹೇಳಿದ್ದಾರೆ.

    ಈ ಮಕ್ಕಳು ಸದ್ಯ ಕೋಟಾದ ಮಕ್ಕಳ ರಕ್ಷಣಾ ಗೃಹದಲ್ಲಿದ್ದಾರೆ. ಪ್ರಧಾನಿಯಿಂದ ಬಿಡುಗಡೆಯಾಗಿರುವ ಹಣ ಈಗಾಗಲೇ ಮಕ್ಕಳ ಖಾತೆಗೆ ಸೇರಿದೆ ಎಂದು ಕೋಟಾದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಹರೀಶ್ ಹೇಳಿದ್ದಾರೆ.

    ಮಕ್ಕಳಿಗೆ ಅಷ್ಟೊಂದು ಹಣ ಸಿಕ್ಕಿದ್ದು ಹೇಗೆ?: 4 ವರ್ಷಗಳ ಹಿಂದೆ ಈ ಮಕ್ಕಳ ತಾಯಿಯನ್ನು ಕೊಲೆ ಮಾಡಲಾಗಿತ್ತು. ಇವರ ತಂದೆ ಅದಕ್ಕೂ ಮೊದಲೇ ತೀರಿಕೊಂಡಿದ್ದರು. ನಂತರ ಅನಾಥರಾಗಿದ್ದ ಇವರನ್ನ ಮಕ್ಕಳ ರಕ್ಷಣಾ ಗೃಹಕ್ಕೆ ಕರೆತರಲಾಗಿತ್ತು. ಇದೇ ವರ್ಷ ಮಾರ್ಚ್‍ನಲ್ಲಿ ಕೋಟಾ ಮಕ್ಕಳ ಕಲ್ಯಾಣ ಸಮಿತಿ ಮಕ್ಕಳನ್ನ ಅವರ ಸಹರ್‍ವಾಡಾ ಗ್ರಾಮದ ಮನೆಗೆ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಿದಾಗ ಮಕ್ಕಳ ತಾಯಿ ಕೂಡಿಟ್ಟಿದ್ದ ಹಣ ಹಾಗೂ ಚಿನ್ನಾಭರಣ ಪತ್ತೆಯಾಗಿತ್ತು. ಮಕ್ಕಳಿಗೆ ಸಿಕ್ಕ ಹಣವನ್ನು ಬದಲಾವಣೆ ಮಾಡಲು ಅವಧಿ ಮೀರಿದ್ದರಿಂದ ಅಧಿಕಾರಿಗಳು ಆರ್‍ಬಿಐ ಮೊರೆ ಹೋಗಿದ್ದರು. ಆದ್ರೆ ಆರ್‍ಬಿಐ ಕೂಡ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನ ಬದಲಾವಣೆ ಮಾಡಿಕೊಡಲು ಅಸಹಾಯಕತೆ ತೋರಿತ್ತು. ನಂತರ ಈ ಮಕ್ಕಳು ಸಹಾಯ ಕೋರಿ ಮೋದಿಗೆ ಪತ್ರ ಬರೆದಿದ್ದರು.

  • ನಾಗನ ಮೇಲೆ ಮತ್ತೆ ರೌಡಿಶೀಟ್ ಓಪನ್- ಪತ್ನಿಯ ವಿರುದ್ಧ ದಾಖಲಾಗಿವೆ 4 ಕೇಸ್

    ನಾಗನ ಮೇಲೆ ಮತ್ತೆ ರೌಡಿಶೀಟ್ ಓಪನ್- ಪತ್ನಿಯ ವಿರುದ್ಧ ದಾಖಲಾಗಿವೆ 4 ಕೇಸ್

    ಬೆಂಗಳೂರು: ಕೋಟ್ಯಾಂತರ ರೂಪಾಯಿ ಹಳೇ ನೋಟು ಬದಲಾವಣೆ ದಂಧೆ ಪ್ರಕರಣದ ಹಿನ್ನೆಲೆಯಲ್ಲಿ ಪರಾರಿಯಾಗಿರೋ ನಾಗರಾಜ್ ಅಲಿಯಾಸ್ ನಾಗನ ಮೇಲೆ ಮತ್ತೆ ರೌಡಿಶೀಟ್ ಓಪನ್ ಆಗಿದೆ.

    ಕೊಲೆ ಯತ್ನ, ದರೋಡೆ ಪ್ರಕರಣದಲ್ಲಿ ಮಾರ್ಚ್‍ನಲ್ಲೇ ರೌಡಿಶೀಟರ್ ಪಟ್ಟಿಗೆ ನಾಗನ ಹೆಸರನ್ನು ಮತ್ತೆ ಸೇರಿಸಲಾಗಿದೆ. ಡಿಸೆಂಬರ್‍ನಲ್ಲಿ ನಾಗನ ವಿರುದ್ಧ ಕಿಡ್ನ್ಯಾಪ್, ರಾಬರಿ ಪ್ರಕರಣ ದಾಖಲಾಗಿತ್ತು. ಪೆಟ್ರೋಲ್ ಬಂಕ್ ಆರಂಭಕ್ಕೆ ಜಾಗ ಕೊಡಿಸುವುದಾಗಿ ವೃದ್ಧರೊಬ್ಬರ ಅಪಹರಣ ಮಾಡಿ 6.5 ಲಕ್ಷ ರಾಬರಿ ಮಾಡಿದ್ದ. ಡಿಸೆಂಬರ್‍ನಲ್ಲೇ ದಾಬಸ್‍ಪೇಟೆಯಲ್ಲಿ ಮತ್ತೊಂದು ಕಿಡ್ನ್ಯಾಪ್ ಪ್ರಕರಣ ಕೂಡ ದಾಖಲಾಗಿತ್ತು. ಫೆಬ್ರವರಿ ಅಂತ್ಯದಲ್ಲಿ ನಾಗನ ಇಬ್ಬರು ಮಕ್ಕಳಾದ ಗಾಂಧಿ ಹಾಗೂ ಶಾಸ್ತ್ರಿಯನ್ನೂ ಪೊಲೀಸರು ರೌಡಿಶೀಟರ್ ಪಟ್ಟಿಗೆ ಸೇರಿಸಿದ್ದರು. ಕೊಲೆ ಯತ್ನ, ರಾಬರಿ, ಕಿಡ್ನ್ಯಾಪ್ ಸೇರಿದಂತೆ ಮಕ್ಕಳ ಮೇಲೆ 7 ಪ್ರಕರಣ ದಾಖಲಾಗಿತ್ತು. ನಾಗನ ಪತ್ನಿ ಲಕ್ಷ್ಮಿ ವಿರುದ್ಧವೂ 4 ಪ್ರಕರಣ ದಾಖಲಾಗಿದೆ.

    ನಾಗನ ಮನೆಯಲ್ಲಿ ಪತ್ತೆಯಾದ 14.80 ಕೋಟಿ ಹಳೆ ನೋಟುಗಳನ್ನ ಆರ್‍ಬಿಐ ವಶಕ್ಕೆ ಒಪ್ಪಿಸಲಾಗಿದೆ. ಪ್ರಕರಣವನ್ನ ಇಡಿಗೆ ನೀಡಲು ಹಿರಿಯ ಪೊಲೀಸ್ ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.

    ನಾಪತ್ತೆಯಾಗಿರುವ ನಾಗನಿಗಾಗಿ ಬೆಂಗಳೂರು ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ. ತಮಿಳುನಾಡಿನ ಜೋಲಾರ್ ಪೇಟೆ ಬಳಿ ಇರುವ ಕಾಟ್‍ಪಾಡಿಯಲ್ಲಿ ಕರ್ನಾಟಕ ಪೊಲೀಸರ ತಂಡ ಬೀಡು ಬಿಟ್ಟಿದೆ. ಶುಕ್ರವಾರದಂದು ಎಸ್ಕೇಪ್ ಆಗಿರುವ ನಾಗ ದಾಬಸ್‍ಪೇಟೆಯ ರೆಸಾರ್ಟ್‍ವೊಂದಕ್ಕೆ ತೆರಳಿ ಅಲ್ಲಿ ಹಣ ವಸೂಲಿ ಮಾಡಿ ಅಲ್ಲಿಂದ ಧರ್ಮಪುರಿಗೆ ಹೋಗಿ ಸಂಬಂಧಿಕರ ಮನೆಯಲ್ಲಿರುವ ಶಂಕೆ ಇದೆ. ನಾಗನ ಹುಡುಕಾಟಕ್ಕಾಗಿ ನಾಲ್ಕು ವಿಶೇಷ ತಂಡಗಳನ್ನ ರಚಿಸಲಾಗಿದೆ. ಹೆಣ್ಣೂರು, ಶ್ರೀರಾಮಪುರ ಹಾಗೂ ಸಿಸಿಬಿ ಸೇರಿದಂತೆ ನಾಲ್ಕು ತಂಡಗಳಿಂದ ನಾಗನಿಗಾಗಿ ಶೋಧ ನಡೆಯುತ್ತಿದೆ. ನಾಗ ಮೊಬೈಲ್ ಬಳಕೆ ಮಾಡದ್ದರಿಂದ ಪೊಲೀಸರ ಶೋಧಕ್ಕೆ ತೊಂದರೆಯಾಗಿದೆ. ತಾಂತ್ರಿಕವಾಗಿ ಯಾವುದೇ ವಸ್ತುಗಳನ್ನ ನಾಗ ಬಳಕೆ ಮಾಡಿಲ್ಲ.

    https://www.youtube.com/watch?v=ehMXPLXNDUc

  • ಮನೆಯಲ್ಲಿ ಸಿಕ್ಕ 96,500 ರೂ. ಹಳೇ ನೋಟ್ ಬದಲಾವಣೆಗೆ ಮೋದಿಗೆ ಪತ್ರ ಬರೆದ ಅನಾಥ ಮಕ್ಕಳು

    ಮನೆಯಲ್ಲಿ ಸಿಕ್ಕ 96,500 ರೂ. ಹಳೇ ನೋಟ್ ಬದಲಾವಣೆಗೆ ಮೋದಿಗೆ ಪತ್ರ ಬರೆದ ಅನಾಥ ಮಕ್ಕಳು

    ಜೈಪುರ: ನವೆಂಬರ್ 8 ರಂದು ಕೇಂದ್ರ ಸರ್ಕಾರ ನೋಟ್‍ಬ್ಯಾನ್ ನಿರ್ಧಾರವನ್ನು ಘೋಷಿಸಿದ ನಂತರ ಹಳೆಯ 500 ಹಾಗೂ 1000 ರೂ. ನೋಟ್‍ಗಳನ್ನು ಬದಲಾಯಿಸಿಕೊಳ್ಳಲು ನೀಡಲಾಗಿದ್ದ ಕಾಲಾವಕಾಶ ಈಗಾಗಲೇ ಮುಗಿದಿದೆ. ಆದ್ರೆ ಇಲ್ಲಿಬ್ಬರು ಅನಾಥ ಮಕ್ಕಳು ತಮ್ಮ ಮೃತ ತಾಯಿ ಮನೆಯಲ್ಲಿಟ್ಟಿದ್ದ 96 ಸಾವಿರದ 500 ರೂ. ಮೊತ್ತದ ಹಳೇ ನೋಟ್‍ಗಳನ್ನು ಬದಲಾಯಿಸಿಕೊಳ್ಳಬೇಕಿದ್ದು ಈಗ ಕಂಗಾಲಾಗಿದ್ದಾರೆ.

    ರಾಜಸ್ಥಾನದ ಕೋಟಾದಲ್ಲಿ 16 ವರ್ಷದ ಹುಡುಗ ಹಾಗೂ ಆತನ 12ರ ವಯಸ್ಸಿನ ತಂಗಿ ಈಗ ನೋಟ್ ಬದಲಾವಣೆ ಮಾಡಿಕೊಳ್ಳೋದು ಹೇಗೆ ಅನ್ನೋ ಚಿಂತೆಯಲ್ಲಿದ್ದಾರೆ. ನೋಟ್ ಬಲದಾವಣೆಗೆ ನೀಡಲಾಗಿದ್ದ ಗಡುವು ಈಗಾಗಲೇ ಮುಗಿದಿರೋ ಕಾರಣ ಪ್ರಧಾನಿ ಮೋದಿ ಅವರು ಮಧ್ಯಸ್ಥಿಕೆ ವಹಿಸಿ ನೋಟ್ ಬದಲಾವಣೆಗೆ ಸಹಾಯ ಮಾಡಬೇಕು ಅಂತ ಮನವಿ ಮಾಡಿದ್ದಾರೆ.

    ಇದೇ ತಿಂಗಳ ಆರಂಭದಲ್ಲಿ ಇಲ್ಲಿನ ಸರವಾಡ ಗ್ರಾಮದಲ್ಲಿ ಈ ಮಕ್ಕಳ ತಾಯಿ ವಾಸವಿದ್ದ ಮನೆಯೊಂದರಲ್ಲಿ ಪೊಲೀಸರು ಸರ್ವೇ ಮಾಡಿದಾಗ ಹಳೇ ನೋಟ್‍ಗಳು ಇದ್ದಿದ್ದು ಪತ್ತೆಯಾಗಿದೆ. ಈ ನೋಟ್‍ಗಳನ್ನು ಬದಲಾಯಿಸಿಕೊಡಲು ಆರ್‍ಬಿಐ ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಮಕ್ಕಳು ಈಗ ಪ್ರಧಾನಿ ಮೋದಿಗೆ ಪತ್ರ ಬರದಿದ್ದಾರೆ.

    96,500 ರೂಪಾಯಿ ಮಕ್ಕಳ ತಾಯಿ ತನ್ನ ಜೀವಿತಾವಧಿಯಲ್ಲಿ ಕೂಡಿಟ್ಟಿದ್ದ ಹಣ ಎಂದು ಕೋಟಾದ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಹರೀಶ್ ಗುರುಬಕ್ಸಾನಿ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಹಣವನ್ನು ಹುಡುಗ ತನ್ನ ತಂಗಿಯ ಹೆಸರಿನಲ್ಲಿ ಫಿಕ್ಸ್ಡ್ ಡೆಪಾಸಿಟ್ ಮಾಡಲು ಬಯಸಿದ್ದಾನೆ. ತನ್ನ ಕೈಯ್ಯಾರೆ ಬರದಿರೋ ಪತ್ರ ಈಗಾಗಲೇ ಪ್ರಧಾನಿ ಸಚಿವಾಲಯಕ್ಕೆ ಕಳುಹಿಸಲಾಗಿದೆ ಎಂದು ಹರೀಶ್ ತಿಳಿಸಿದ್ದಾರೆ.

    ಮಕ್ಕಳ ತಾಯಿ ಪೂಜಾ ಬಂಜಾರಾ ದಿನಗೂಲಿ ನೌಕರರಾಗಿದ್ದು, 2013ರಲ್ಲಿ ಅವರನ್ನು ಕೊಲೆ ಮಾಡಲಾಗಿತ್ತು. ಇನ್ನು ಮಕ್ಕಳ ತಂದೆ ರಾಜು ಬಂಜಾರಾ ಅದ್ಕಕೂ ಮೊದಲೇ ಮೃತಪಟ್ಟಿದ್ದರು. ತಾಯಿಯ ಸಾವಿನ ನಂತರ ಮಕ್ಕಳು ಮಕ್ಕಳ ಕಲ್ಯಾಣ ಸಮಿತಿಯ ಆಶ್ರಯದಲ್ಲಿದ್ದಾರೆ. ಇವರನ್ನು ಕೌನ್ಸೆಲಿಂಗ್ ಮಾಡಿದಾಗ, ಆರ್‍ಕೆ ಪುರಂ ಹಾಗೂ ಸರವಾಡಾ ಗ್ರಾಮದಲ್ಲಿ ಮನೆ ಇರುವುದಾಗಿ ತಿಳಿಸಿದ್ರು. ಇದಾದ ಬಳಿಕ ಮಕ್ಕಳ ಕಲ್ಯಾಣ ಸಮಿತಿಯ ನಿರ್ದೇಶನದಂತೆ ಪೊಲೀಸರು ಬೀಗ ಹಕಲಾಗಿದ್ದ ಸರವಾಡಾ ಮನೆಯಲ್ಲಿ ಸರ್ವೇ ಮಾಡಿದಾಗ ಒಂದು ಬಾಕ್ಸ್‍ನಲ್ಲಿ ಹಳೇ 500 ಹಾಗೂ 1000 ರೂ ನೋಟ್‍ಗಳಲ್ಲಿ 96,500 ರೂ. ಹಣ ಜೊತೆಗೆ ಕೆಲವು ಚಿನ್ನಾಭರಣಗಳು ಪತ್ತೆಯಾಗಿದೆ ಎಂದು ಹರೀಶ್ ತಿಳಿಸಿದ್ದಾರೆ.

    ಹಳೇ ನೋಟ್‍ಗಳ ಬದಲಾವಣೆಗೆ ಸಹಕರಿಸುವಂತೆ ಮಾರ್ಚ್ 17ರಂದು ಮ್ಕಕಳ ಕಲ್ಯಾಣ ಸಮಿತಿ ಆರ್‍ಬಿಐಗೆ ಪತ್ರ ಬರೆದಿತ್ತು. ಆದ್ರೆ ಮಾರ್ಚ್ 22ರಂದು ಆರ್‍ಬಿಐ ಇ-ಮೇಲ್ ಮಾಡಿ ನೋಟ್ ಬದಲಾವಣೆ ಮಾಡಲು ತಮ್ಮಿಂದ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಮಕ್ಕಳ ಬಳಿಯಿರುವ ಒಟ್ಟು ಹಣದಲ್ಲಿ 500 ಹಾಗೂ 1000 ರೂ. ಮುಖಬೆಲೆಯ 171 ನೋಟ್‍ಗಳಿವೆ ಎಂದು ಹರೀಶ್ ತಿಳಿಸಿದ್ದಾರೆ.

    ನವೆಂಬರ್ 8 ರಂದು ಕೇಂದ್ರ ಸರ್ಕಾರ ಹಳೇ 500 ಹಾಗೂ 1000 ರೂ. ನೋಟ್‍ಗಳ ಮೇಲೆ ನಿಷೇಧ ಹೇರಿ, ಬ್ಯಾಂಕ್‍ಗಳಲ್ಲಿ ಹಳೇ ನೋಟ್ ಬದಲಾವಣೆ ಮಾಡಿಕೊಳ್ಳಲು ಡಿಸೆಂಬರ್ 30ರವರೆಗೆ ಕಾಲಾವಕಾಶ ನೀಡಿತ್ತು. ಇನ್ನು ನವೆಂಬರ್ 9ರಿಂದ ಡಿಸೆಂಬರ್ 30ರವರೆಗೆ ವಿದೇಶದಲಿದ್ದ ಭಾರತೀಯರು ಆರ್‍ಬಿಐ ಕಚೇರಿಗಳಲ್ಲಿ ಮಾರ್ಚ್ 31ರವರೆಗೆ ನೋಟ್ ಬದಲಾವಣೆ ಮಾಡಿಕೊಳ್ಳಬಹುದು ಎಂದು ಹೇಳಿತ್ತು.

  • ನೋಟ್ ಬದಲಿಸಿಕೊಟ್ಟ ಚಂದ್ರಕಾಂತ್‍ಗೆ ಸರ್ಕಾರದ ಕೊಡುಗೆ – ರಾಮಲಿಂಗಂ ಕಂಪನಿಗೆ 150 ಕೋಟಿ ಕಾಮಗಾರಿ

    ನೋಟ್ ಬದಲಿಸಿಕೊಟ್ಟ ಚಂದ್ರಕಾಂತ್‍ಗೆ ಸರ್ಕಾರದ ಕೊಡುಗೆ – ರಾಮಲಿಂಗಂ ಕಂಪನಿಗೆ 150 ಕೋಟಿ ಕಾಮಗಾರಿ

    ಬೆಂಗಳೂರು: ಸಿಎಂ ಆಪ್ತ ಅಧಿಕಾರಿ ಜಯಚಂದ್ರಗೆ ಹಳೆಯ ನೋಟುಗಳಿಗೆ ಹೊಸ 2 ಸಾವಿರ ಮುಖಬೆಲೆ ನೋಟನ್ನು ಬದಲಾಯಿಸಿಕೊಟ್ಟಿದ್ದ ಪ್ರಮುಖ ಆರೋಪಿ ಚಂದ್ರಕಾಂತ್‍ಗೆ ರಾಜ್ಯ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ.

    ಬಿಬಿಎಂಪಿ ನಗರೋತ್ಥಾನ ನಿಧಿಯಿಂದ 150 ಕೋಟಿ ವೆಚ್ಚದ ಮಳೆ ನೀರು ಕಾಲುವೆ ಕಾಮಗಾರಿ ಯೋಜನೆಯನ್ನು ಚಂದ್ರಕಾಂತ್ ಒಡೆತನದ ರಾಮಲಿಂಗಂ ಅಂಡ್ ಸನ್ಸ್ ಕಂಪನಿಗೆ ನೀಡಲಾಗಿದೆ. ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಬಿಎಂಪಿಯ ಈ ಟೆಂಡರ್‍ಗೆ ಗ್ರೀನ್ ಸಿಗ್ನಲ್ ದೊರೆತಿದ್ದು, ಒಟ್ಟು 850 ಕೋಟಿ ರೂಪಾಯಿ ಯೋಜನೆಯಲ್ಲಿ 150 ಕೋಟಿ ರೂಪಾಯಿ ಕಾಮಗಾರಿ ಚಂದ್ರಕಾಂತ್ ಕಂಪನಿ ಪಾಲಾಗಿದೆ.

    ಸರ್ಕಾರದ ಈ ಕೊಡುಗೆ ನೋಡಿದ್ರೆ ಚಂದ್ರಕಾಂತ್ ಹೊಸ ನೋಟು ಬದಲಾವಣೆ ಕಾರ್ಯಕ್ಕೆ ಸರ್ಕಾರ ಋಣ ತೀರಿಸುತ್ತಿದ್ಯಾ ಅನ್ನೋ ಅನುಮಾನ ಮೂಡಿದೆ. ಇದು ಹೊಸ ವಿವಾದಕ್ಕೆ ನಾಂದಿ ಹಾಡುವ ಸಾಧ್ಯತೆ ಹೆಚ್ಚಾಗಿದೆ.