Tag: ನೋಟೀಸ್

  • ಕೈ ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್

    ಕೈ ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್

    ಬೆಂಗಳೂರು: ಪಿಎಸ್‍ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಆಡಿಯೋ ರಿಲೀಸ್ ಮಾಡಿದ್ದ ಕಾಂಗ್ರೆಸ್ ಶಾಸಕ ಪ್ರಿಯಾಂಕ್‍ಗೆ ಸಿಐಡಿ (Crime Investigation Department) ನೋಟಿಸ್ ನೀಡಿದೆ.

    ತಮ್ಮ ಬಳಿ ಇರುವ ದಾಖಲೆ, ಸಾಕ್ಷಿಗಳನ್ನು ಸಿಐಡಿಗೆ ನೀಡುವಂತೆ ಸೂಚಿಸಿದೆ. ಇಂದು ಬೆಳಗ್ಗೆ 11.30ಕ್ಕೆ ದಾಖಲೆ ಸಮೇತ ಬೆಂಗಳೂರಿನ ಸಿಐಡಿ ಕಚೇರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: ಕ್ರೈಸ್ತ ಶಾಲೆಯೊಂದರಲ್ಲಿ ಕ್ರೈಸ್ತ ಧರ್ಮ ಹೇರಿಕೆ ಆರೋಪ – ಪ್ರಮೋದ್ ಮುತಾಲಿಕ್ ಕಿಡಿ

    ಸಿಐಡಿ ನೋಟಿಸ್‍ಗೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಪ್ರಿಯಾಂಕ್ ಖರ್ಗೆ, ಇದೊಂದು ಉಲ್ಲಾಸದಾಯಕ ವಿಚಾರ ಸಿಐಡಿ ದಾಖಲೆ ನೀಡುವಂತೆ ನನಗೆ ಸೂಚಿಸಿದೆ. ಪ್ರಕರಣ ಸಂಬಂಧ ಪುರಾವೆಗಳನ್ನು ಗ್ರಹಿಸಲು ಆಗದ ಇಲಾಖೆಯ ಅಸಮರ್ಥತೆಯನ್ನು ಇದು ತೋರಿಸುತ್ತದೆ. ಈ ರೀತಿಯ ಬೆದರಿಸುವ ತಂತ್ರ ನಡೆಯಲ್ಲ. ಸರ್ಕಾರ ಪಿಎಸ್‍ಐ ಪರೀಕ್ಷೆ ಪಡೆದಿರುವ 57,000 ಯುವಕರಿಗೆ ಉತ್ತರಿಸಬೇಕಿದೆ ಎಂದಿದ್ದಾರೆ.

  • ಬಸ್ಸಿನಲ್ಲೇ ಎಣ್ಣೆ ಹೊಡೆದ ಶಾಲಾ ಹೆಣ್ಮಕ್ಳು: ವಿಡಿಯೋ ವೈರಲ್

    ಬಸ್ಸಿನಲ್ಲೇ ಎಣ್ಣೆ ಹೊಡೆದ ಶಾಲಾ ಹೆಣ್ಮಕ್ಳು: ವಿಡಿಯೋ ವೈರಲ್

    ಚೆನ್ನೈ: ತಮಿಳುನಾಡಿನ ತಿರುಕಝುಕುಂದ್ರಂ ನಿಂದ ಥಾಚೂರ್ ಮಾರ್ಗವಾಗಿ ತೆರಳುತ್ತಿದ್ದ ಬಸ್‍ನಲ್ಲಿ ಶಾಲಾ ಹೆಣ್ಣುಮಕ್ಕಳು ಮದ್ಯ ಸೇವಿಸುತ್ತಿರುವ ವೀಡಿಯೋ ವೈರಲ್ ಆಗಿದೆ.

    ಚೆಂಗ್ಲಪಟ್ಟು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿಯರು ಮದ್ಯ ಸೇವಿಸುತ್ತಿರುವ ದೃಶ್ಯವನ್ನು ಅಲ್ಲೇ ಇದ್ದ ವಿದ್ಯಾರ್ಥಿಯೊಬ್ಬ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ. ವಿದ್ಯಾರ್ಥಿಗಳು ಶಾಲಾ ಸಮವಸ್ತ್ರವನ್ನು ಧರಿಸಿ ಇಂತಹ ಕೆಲಸ ಮಾಡಿರುವುದು, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ನನಗೆ ವಯಸ್ಸಾಯ್ತು ಅಂತ ಕಾಲೆಳೆಯುತ್ತಾರೆ ಅದಕ್ಕೆ ವಾರಕ್ಕೊಮ್ಮೆ ಶೇವ್ ಮಾಡಿಸ್ತೀನಿ: ಸಿದ್ದರಾಮಯ್ಯ

    ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಶಿಕ್ಷಣಾಧಿಕಾರಿ, ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಈಗಾಗಲೇ ನೋಟೀಸ್ ನೀಡಲಾಗಿದೆ. ಪೊಲೀಸರಿಂದಲೂ ತನಿಖೆ ನಡೆಸಲಾಗುತ್ತದೆ. ಈಗಾಗಲೇ ಒಂದು ಸುತ್ತಿನ ತನಿಖೆ ನಡೆದಿದ್ದು, ಅಂತಹ ವಿದ್ಯಾರ್ಥಿಗಳ ವಿರುದ್ಧ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಾಲಿವುಡ್ ಗಲ್ಲಿ ಬಾಯ್ ಖ್ಯಾತಿಯ ರಾಪರ್ ಧರ್ಮೇಶ್ ಪರ್ಮಾರ್ ಇನ್ನಿಲ್ಲ

  • ವ್ಯಾಕ್ಸಿನ್ ಕೇಳಿದ್ದೇ ತಪ್ಪಾ, ಪೊಲೀಸರು ನೋಟೀಸ್ ಕೊಟ್ಟು ಕಿರುಕುಳ ನೀಡ್ತಿದ್ದಾರೆ: ವೆಂಕಟೇಶ್

    ವ್ಯಾಕ್ಸಿನ್ ಕೇಳಿದ್ದೇ ತಪ್ಪಾ, ಪೊಲೀಸರು ನೋಟೀಸ್ ಕೊಟ್ಟು ಕಿರುಕುಳ ನೀಡ್ತಿದ್ದಾರೆ: ವೆಂಕಟೇಶ್

    ಬೆಂಗಳೂರು: ವ್ಯಾಕ್ಸಿನ್ ಕೇಳುವುದೇ ತಪ್ಪಾ, ಪೊಲೀಸರು ನೋಟೀಸ್ ಕೊಟ್ಟು ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಹೆಚ್.ಎಮ್ ವೆಂಕಟೇಶ್ ಕಿಡಿಕಾರಿದ್ದಾರೆ.

    ಮೇ ತಿಂಗಳಿನಲ್ಲಿ ಖಾಸಗಿ ಆಸ್ಪತ್ರೆಯೊಂದರಲ್ಲಿ ವ್ಯಾಕ್ಸಿನ್ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವ ಬಗ್ಗೆ ಹಾಗೂ ಆ ಹಣ ಸ್ಥಳೀಯ ಶಾಸಕರಿಗೆ ಹೋಗುತ್ತಿದೆ ಎಂಬ ಆಡಿಯೋವೊಂದು ಭಾರೀ ಸದ್ದು ಮಾಡಿತ್ತು. ಆದರೆ ಇದೀಗ ಸಾಮಾಜಿಕ ಕಾರ್ಯಕರ್ತ ಹೆಚ್.ಎಮ್ ವೆಂಕಟೇಶ್‍ಗೆ ಸ್ಥಳೀಯ ಪೊಲೀಸ್ ಠಾಣೆಗಳಿಂದಲೇ ನೋಟೀಸ್ ಮೇಲೆ ನೋಟೀಸ್ ಜಾರಿ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ಈ ಬಗ್ಗೆ ವೀಡಿಯೋ ಬಿಡುಗಡೆ ಮಾಡಿ ಮಾತಾಡಿರುವ ವೆಂಕಟೇಶ್, ವ್ಯಾಕ್ಸಿನ್ ಕೇಳುವುದೇ ತಪ್ಪಾ, ಪೊಲೀಸರು ನೋಟೀಸ್ ಕೊಟ್ಟು ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನು ಓದಿ: ಶಿಲ್ಪಾ ನಾಗ್‍ರಂತಹ ದಕ್ಷ ಅಧಿಕಾರಿಗಳ ಸೇವೆ ಅಗತ್ಯ, ಸಿಎಂ ಗಮನಕ್ಕೆ ತರುತ್ತೇನೆ: ರಾಮ್‍ದಾಸ್

    ವೀಡಿಯೋದಲ್ಲಿ ಮೇ 28 ರಂದು ಅನುಗ್ರಹ ಆಸ್ಪತ್ರೆಗೆ ಪೊಲೀಸ್ ಮಾಡಿ ವ್ಯಾಕ್ಸಿನ್ ಬೇಕು ಅಂತ ಕೇಳಿದ್ದೆ. ವ್ಯಾಕ್ಸಿನ್ ಒಂದಕ್ಕೆ 900 ರೂ. ಕೊಡಲು ಕಷ್ಟ ಆಗುತ್ತೆ ಅಂದಾಗ, ಆಸ್ಪತ್ರೆ ಸಿಬ್ಬಂದಿಯೇ 700 ರೂ. ಸ್ಥಳೀಯ ಶಾಸಕರಿಗೆ ಹೋಗುತ್ತದೆ. 200 ರೂ. ಮಾತ್ರ ಆಸ್ಪತ್ರೆಗೆ ಸಿಗುತ್ತದೆ ಎಂದಿದ್ದರು. ಹೀಗೆ ವ್ಯಾಕ್ಸಿನ್ ಬಿಬಿಎಂಪಿ ಕಚೇರಿಯಿಂದ ಶಾಸಕರ ಕಚೇರಿಗೆ ಬರುತ್ತದೆ ಎಂದು ಅವರೇ ಹೇಳಿದ್ದು, ಯಾವ ರೀತಿ ಮಾರಾಟ ಆಗ್ತಿದೆ ಎಂಬ ಬಗ್ಗೆ ವಿವರಿಸಿದ್ದರು.

    ತಾನು ಯಾರ ಮೇಲೆಯೂ ಆರೋಪ ಮಾಡಿಲ್ಲ. ದುರುದ್ದೇಶದಿಂದ ಯಾರನ್ನೂ ಸಿಕ್ಕಿಸಿಹಾಕಲು ಮಾಡಿದ ಕೆಲಸವೂ ಅಲ್ಲ. ಆದರೆ ಹೆಚ್ಚು ದುಡ್ಡು ಕೇಳುತ್ತಿರುವ ವಿಚಾರ ಮಾಧ್ಯಮಗಳಲ್ಲಿ ಪ್ರಸಾರ ಆದ ನಂತರ, ಸ್ಥಳೀಯ ಶಾಸಕರು ನನ್ನ ಮೇಲೆ ಗರಂ ಆದರು, ಏಕವಚನದಲ್ಲಿ ಬೈದಾಡಿದರು. ಇದರಿಂದ ರಕ್ಷಣೆ ಕೊಡಿ ಎಂದು ಮೇ 29 ರಂದೇ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಜೊತೆಗೆ ವ್ಯಾಕ್ಸಿನ್ ಮಾರಾಟದ ಬಗ್ಗೆ ತನಿಖೆ ನಡೆಸುವಂತೆ ಗಿರಿನಗರ, ಬಸವನಗುಡಿ ಪೊಲೀಸ್ ಠಾಣೆಗಳಿಗೆ ದೂರು ನೀಡಿದ್ದೆ. ಇದನ್ನು ಓದಿ: ಗೊಬ್ಬರದ ಕೃತಕ ಅಭಾವ ಸೃಷ್ಟಿಸಿದರೆ ಅಂತವರ ಮೇಲೆ ನಿರ್ದಾಕ್ಷಿಣ್ಯ ಕ್ರಮ-ಬಿ.ಸಿ ಪಾಟೀಲ್

    ಆದರೆ ಮಾರನೇ ದಿನ ಗಿರಿನಗರ, ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯವರು ಮನೆಗೆ ಬಂದು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡದ್ದಾರೆ. ಯಾವುದೇ ರೀತಿ ತಪ್ಪು ಮಾಡದಿದ್ದರೂ ವಿಚಾರಣೆಗೆ ಬರಬೇಕೆಂದು ನನಗ್ಯಾಕೆ ನೋಟೀಸ್ ಕೊಟ್ಟಿದ್ದೀರಾ ಎಂದು ಕೇಳಿದಾಗ ಬೇರೆಯವರು ನನ್ನ ವಿರುದ್ಧ ದೂರು ಕೊಟ್ಟಿದ್ದಾರೆ ಎಂದಿದ್ದಾರೆ.

    ಕೋವಿಡ್ ಕಾರಣದಿಂದ ವಿಚಾರಣೆಗೆ ಬರಲು ಸಾಧ್ಯವಿಲ್ಲ ಎಂದಾಗ, ಪೊಲೀಸ್ ಮೂಲಕವೂ ನಿರಂತರವಾಗಿ ವಿಚಾರಣೆಗೆ ಬನ್ನಿ ಎಂದು ಒತ್ತಡ ಹಾಕುತ್ತಿದ್ದಾರೆ. ಎರಡು ನೋಟೀಸ್‍ಗಳಿಗೂ ವಿವರವಾದ ಮಾಹಿತಿ, ಉತ್ತರವನ್ನು ಇ-ಮೈಲ್‍ಗೆ ಕಳಿಸಲಾಗಿದೆ. ಇಷ್ಟಾದರೂ ಮತ್ತೆ ಫೋನ್ ಮಾಡಿ ಸ್ಟೇಷನ್‍ಗೆ ಬರುವಂತೆ ಹೇಳಿದ್ದಾರೆ. ಜೊತೆಗೆ ಗಿರಿನಗರ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರೂ, ಕೊಟ್ಟಿಲ್ಲ ಎಂದು ಹೇಳುತ್ತಾರೆ. ಇದರಲ್ಲಿ ಏನೋ ಷಡ್ಯಂತ್ರ ಮಾಡಿ ಸಿಕ್ಕಿಹಾಕಿಸುವ ಕೆಲಸ ನಡೆಯುತ್ತಿದೆ. ಗಿರಿನಗರ ಪೊಲೀಸ್ ಠಾಣೆಯವರು ಖಾಸಗಿ ವಾಹನದಲ್ಲಿ ಬಂದು ಮತ್ತೆ ನೋಟೀಸ್ ಜಾರಿ ಮಾಡಿದ್ದಾರೆ. ಈಗಾಗಲೇ ಉತ್ತರ ಕೊಟ್ಟಿರುವುದರಿಂದ ಮತ್ತೆ ವಿಚಾರಣೆಗೆ ಬರಲು ಸಾಧ್ಯವಿಲ್ಲ ಎಂದರೂ, ಗಿರಿನಗರ ಹಾಗೂ ಕುಮಾರಸ್ವಾಮಿ ಪೊಲೀಸ್ ಠಾಣೆಯಿಂದ ತುಂಬಾ ಕಿರುಕುಳ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ: ರೋಹಿಣಿ ಸಿಂಧೂರಿ ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ: ರಾಜೀನಾಮೆ ನೀಡಿ ಕಣ್ಣೀರಿಟ್ಟ ಶಿಲ್ಪಾನಾಗ್

    ಆರೋಪಕ್ಕೆ ಒಳಗಾದವರ ಮೇಲೆ ತನಿಖೆ ನಡೆಯುತ್ತಿಲ್ಲ. ಆದರೆ ವ್ಯಾಕ್ಸಿನ್ ಕೇಳಿದ್ದಕ್ಕೆ ನನಗೆ ನೋಟೀಸ್ ಕೊಡುತ್ತಿದ್ದಾರೆ. ಆಸ್ಪತ್ರೆ ಕಂಪ್ಲೈಂಟ್ ಅನ್ನೂ ನನ್ನಿಂದ ಮುಚ್ಚಿಡಲಾಗಿದೆ. ಹೀಗಾಗಿ ವ್ಯಾಕ್ಸಿನೇಷನ್ ಕೇಳಿದ್ದೇ ತಪ್ಪಾ. ಈ ಷಡ್ಯಂತ್ರವನ್ನು ಎಲ್ಲರೂ ಗಮನಿಸಬೇಕಿದೆ. ನಾನೂ ಕಾನೂನು ಹೋರಾಟ ಮುಂದುವರಿಸುತ್ತೇನೆ. ಬಡವರು, ನಿರ್ಗತಿಕರ ಪರವಾಗಿ ನಿಂತು ಎಲ್ಲರೂ ವ್ಯಾಕ್ಸಿನ್ ಮಾರಾಟದ ವಿರುದ್ಧವಾಗಿ ಹೋರಾಡಬೇಕಿದೆ. ಸ್ಥಳೀಯ ಪೊಲೀಸರಿಂದ ನ್ಯಾಯ ಸಿಗುವುದಿಲ್ಲ, ನ್ಯಾಯಾಂಗ ತನಿಖೆಗೆ ಒತ್ತಾಯಿಸಬೇಕಿದೆ ಎಂದು ಹೇಳಿದರು.

  • ನಾಳೆ ವಿಚಾರಣೆಗೆ ಹಾಜರಾಗಿ- ಡಿಕೆಶಿ ತಾಯಿಗೆ ಐಟಿ ಸೂಚನೆ

    ನಾಳೆ ವಿಚಾರಣೆಗೆ ಹಾಜರಾಗಿ- ಡಿಕೆಶಿ ತಾಯಿಗೆ ಐಟಿ ಸೂಚನೆ

    ಬೆಂಗಳೂರು: ಬೇನಾಮಿ ಆಸ್ತಿ ಪ್ರಕರಣ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ ಶಿವಕುಮಾರ್ ಅವರ ತಾಯಿಗೆ ಐಟಿ ಬೇನಾಮಿ ಸೆಲ್ ನಿಂದ ಮತ್ತೆ ನೋಟಿಸ್ ನೀಡಲಾಗಿದ್ದು, ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.

    ಕಳೆದ ನಾಲ್ಕು ದಿನದ ಹಿಂದೆಯೇ ಡಿಕೆಶಿ ಅವರ ತಾಯಿಗೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದ್ರೆ ಇಂದು ಮತ್ತೆ ಡಿಕೆಶಿ ಹಾಗೂ ಅವರ ತಾಯಿ ಗೌರಮ್ಮ ಇಬ್ಬರೂ ನಾಳೆ ವಿಚಾರಣೆಗೆ ಹಾಜರಾಬೇಕು ಎಂದು ಸೂಚಿಸಿ ನೋಟಿಸ್ ಜಾರಿಮಾಡಲಾಗಿದೆ.

    ಪ್ರಾಪರ್ಟಿ ಅಟ್ಯಾಚ್‍ಮೆಂಟ್ ನೋಟಿಸ್ ನೀಡಿ ಒಂದು ತಿಂಗಳಾಗಿದ್ದರೂ ಪದೇ ಪದೇ ಡಿಕೆಶಿ ಅವರು ಉತ್ತರ ನೀಡಲು ಕಾಲಾವಕಾಶ ಕೇಳಿತ್ತಿದ್ದಾರೆ. ಇದರಿಂದ ಐಟಿ ಬೇನಾಮಿ ಸೆಲ್ ಅಧಿಕಾರಿಗಳು ಗರಂ ಆಗಿದ್ದಾರೆ.

    ಬೇನಾಮಿ ಆಸ್ತಿ ಬಗ್ಗೆ ತನಿಖೆ ನಡೆಸುತ್ತಿರುವ ಐಟಿ 15 ದಿನಗಳ ಒಳಗಡೆ ಉತ್ತರ ನೀಡುವಂತೆ ನಿನ್ನೆ ಡಿಕೆಶಿಗೆ ಸೂಚಿಸಿತ್ತು. ಒಂದು ವೇಳೆ ಈ ನೋಟಿಸಿಗೆ ಸರಿಯಾದ ಉತ್ತರ ನೀಡದೇ ಇದ್ದಲ್ಲಿ ಡಿಕೆ ಶಿವಕುಮಾರ್ ಆಸ್ತಿ ಜಪ್ತಿಯಾಗುವ ಸಾಧ್ಯತೆಯಿದೆ.

    ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದ ಐಟಿ:
    2008 ರಲ್ಲಿ 75 ಕೋಟಿ ರೂ. 2013 ರಲ್ಲಿ 251 ಕೋಟಿ ರೂ. ಆದಾಯವನ್ನು ಡಿಕೆ ಶಿವಕುಮಾರ್ ಘೋಷಿಸಿದ್ದರೆ, 2018ರ ವಿಧಾನಸಭಾ ಚುನಾವಣೆ ವೇಳೆ 840 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ. ಸಚಿವರ ಆದಾಯ ಪ್ರತಿ 5 ವರ್ಷಗಳಿಗೊಮ್ಮೆ ಶೇ.230 ರಷ್ಟು ಹೆಚ್ಚಳ ಕಂಡಿದೆ. ಶಿವಕುಮಾರ್ ಅವರ ಸಂಪಾದನೆಗೂ ಅವರಲ್ಲಿರುವ ಆದಾಯಕ್ಕೆ ತಾಳೆ ಆಗುತ್ತಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಚುನಾವಣಾ ಆಯೋಗಕ್ಕೆ ಈ ಹಿಂದೆ ಐಟಿ ಪತ್ರ ಬರೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬ್ಯಾಂಕ್ ನೋಟಿಸ್ ನೋಡಿ ಸಿ.ಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದ ಮಂಡ್ಯ ರೈತ

    ಬ್ಯಾಂಕ್ ನೋಟಿಸ್ ನೋಡಿ ಸಿ.ಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದ ಮಂಡ್ಯ ರೈತ

    ಮಂಡ್ಯ: ಸಾಲ ಮರುಪಾವತಿಸುವಂತೆ ಸಹಕಾರಿ ಬ್ಯಾಂಕ್‍ನಿಂದ ರೈತನಿಗೆ ನೋಟೀಸ್ ನೀಡಿದ್ದರಿಂದ ನೊಂದ ರೈತ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಹಕ್ಕಿಮಂಚನಹಳ್ಳಿ ಗ್ರಾಮದ ರೈತ ಹೊನ್ನೇಗೌಡ ಶೀಳನೆರೆ ಆಕ್ರೋಶ ಹೊರಹಾಕಿದ ರೈತ. ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ 09-08-17 ರಂದು 60 ಸಾವಿರ ಬೆಳೆ ಸಾಲ ಪಡೆದಿದ್ದರು. ಇದೀಗ ರೈತ ಪಡೆದ ಸಾಲಕ್ಕೆ ನೋಟಿಸ್ ನೀಡಲಾಗಿದ್ದು, 09-08-18ಕ್ಕೆ ನೀವು ಸುಸ್ತಿದಾರರಾಗಿದ್ದು, 15 ದಿನದೊಳಗೆ ಸಾಲ ಮರುಪಾವತಿಸಿ ಮುಂದೆ ಸಾಲ ಪಡೆಯಲು ಅರ್ಹತೆ ಪಡೆಯಿರಿ. ತಪ್ಪಿದರೆ ನಿಯಮದ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ನೋಟಿಸ್‍ನಲ್ಲಿ ರೈತನಿಗೆ ಸೂಚಿಸಲಾಗಿದೆ.

    ನೋಟಿಸ್‍ನಿಂದ ಆಕ್ರೋಶಗೊಂಡಿರುವ ರೈತ, ಮುಖ್ಯಮಂತ್ರಿ ಕುಮಾರಸ್ವಾಮಿಯವರು 2018 ಜುಲೈ 10ರವರೆಗೆ ರೈತರ ಸಾಲಮನ್ನಾ ಎಂದಿದ್ದಾರೆ. ಆದರೆ ಸಾಲ ಕಟ್ಟಿ, ಇಲ್ಲದಿದರೆ ಕಾನೂನಿನ ರೀತಿ ಕ್ರಮ ಕೈಗೊಳ್ಳುತ್ತೇನೆ ಎಂದು ನೋಟಿಸ್ ನೀಡಿದ್ದಾರೆ. ಈ ಸಂಕಷ್ಟದಲ್ಲಿ ರೈತ ಸಾಯಬೇಕ? ಬದುಕಬೇಕ? ರೈತನ ಬದುಕು ಅತಂತ್ರ ಮಾಡಿರುವ ಕುಮಾರಸ್ವಾಮಿಯವರೇ ಇದರ ಬಗ್ಗೆ ಯೋಚಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

  • ಜಯನಗರ ಸೋಲು: ಬಿಜೆಪಿ ಪಾಲಿಕೆ ಸದಸ್ಯನಿಗೆ ಶೋಕಾಸು ನೋಟಿಸ್ ಜಾರಿ

    ಜಯನಗರ ಸೋಲು: ಬಿಜೆಪಿ ಪಾಲಿಕೆ ಸದಸ್ಯನಿಗೆ ಶೋಕಾಸು ನೋಟಿಸ್ ಜಾರಿ

    ಬೆಂಗಳೂರು: ಜಯನಗರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಿದ ಆರೋಪದ ಹಿನ್ನೆಲೆಯಲ್ಲಿ ಭೈರಸಂದ್ರದ ಪಾಲಿಕೆ ಸದಸ್ಯ ಎನ್ ನಾಗರಾಜು ಅವರಿಗೆ ಬಿಜೆಪಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ.

    ಬಿಜೆಪಿ ಪಕ್ಷದಿಂದ ಭೈರಸಂದ್ರ ವಾರ್ಡ್ ನ ಕಾರ್ಪೊರೇಟರ್ ಆಗಿ ಆಯ್ಕೆಯಾಗಿ ಜಯನಗರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡದೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದೀರಿ. ಇದು ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸವಾಗಿದ್ದು, ಪಕ್ಷ ವಿರೋಧಿ ಚಟುವಟಿಕೆಯಾಗಿರುತ್ತದೆ ಎಂದು ನೋಟಿಸ್ ನಲ್ಲಿ ತಿಳಿಸಿದ್ದಾರೆ.

    ಈ ಬಗ್ಗೆ 7 ದಿನಗಳ ಒಳಗೆ ಸಮರ್ಪಕವಾದ ಉತ್ತರವನ್ನು ನೀಡಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಬೆಂಗಳೂರು ಬಿಜೆಪಿ ನಗರಾಧ್ಯಕ್ಷ ಪಿ.ಎನ್. ಸದಾಶಿವ ಶೋಕಾಸು ನೋಟಿಸಿನಲ್ಲಿ ಎಚ್ಚರಿಕೆ ನೀಡಿದ್ದಾರೆ.

    ಬಿಜೆಪಿ ಮಾಜಿ ಶಾಸಕ ಬಿ ಎನ್ ವಿಜಯಕುಮಾರ್ ನಿಧನದಿಂದ ತೆರೆವಾದ ಜಯನಗರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ರಾಮಲಿಂಗ ರೆಡ್ಡಿ ಅವರ ಪುತ್ರಿ ಸೌಮ್ಯ ರೆಡ್ಡಿ ಅವರು 2889 ಮತಗಳ ಅಂತರದಿಂದ ವಿಜಯ್ ಕುಮಾರ್ ಸಹೋದರ ಪ್ರಹ್ಲಾದ್ ಬಾಬು ಅವರನ್ನು ಸೋಲಿಸಿದ್ದರು.

    ಬಿಜೆಪಿ ಭದ್ರ ಕೋಟೆಯಾಗಿದ್ದ ಜಯನಗರದಲ್ಲಿ ಹಿರಿಯ ಬಿಜೆಪಿ ನಾಯಕರುಗಳಾದ ಕೇಂದ್ರ ಸಚಿವ ಅನಂತ್ ಕುಮಾರ್, ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್ ಸೇರಿದಂತೆ ಹಲವು ನಾಯಕರುಗಳು ಬಿರುಸಿನ ಪ್ರಚಾರ ನಡೆಸಿದ್ದರು. ಸೋಲಿನ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿತ್ತು.ಇದನ್ನೂ ಓದಿ:ಜಯನಗರ ಸೋಲಿನ ಬಳಿಕ ಅನಂತ್‍ಕುಮಾರ್ ಗೆ ‘ಶಾ’ ಫುಲ್ ಕ್ಲಾಸ್!