Tag: ನೋಟಿಸ್

  • ಅಶ್ಲೀಲ ಎಮೋಜಿ: ವಾಟ್ಸಪ್ ಗೆ ಭಾರತೀಯ ವಕೀಲನಿಂದ ನೋಟಿಸ್

    ಅಶ್ಲೀಲ ಎಮೋಜಿ: ವಾಟ್ಸಪ್ ಗೆ ಭಾರತೀಯ ವಕೀಲನಿಂದ ನೋಟಿಸ್

    ನವದೆಹಲಿ: ಮಧ್ಯದ ಬೆರಳಿನ ಅಶ್ಲೀಲ ಎಮೋಜಿಯನ್ನು 15 ದಿನಗಳ ಒಳಗೆ ತೆಗೆದು ಹಾಕುವಂತೆ ದೆಹಲಿಯ ವಕೀಲರೊಬ್ಬರು ಮಂಗಳವಾರ ವಾಟ್ಸಪ್ ಕಂಪೆನಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

    ಮತ್ತೊಬ್ಬರಿಗೆ ಮಧ್ಯದ ಬೆರಳನ್ನು ತೋರಿಸುವುದು ಕಾನೂನುಬಾಹಿರ ಮಾತ್ರವಲ್ಲ, ಇದು ಅಶ್ಲೀಲ ಹಾಗೂ ಕೆಟ್ಟ ಸಂಜ್ಞೆ. ಭಾರತದಲ್ಲಿ ಇದು ಅಪರಾಧ ಎಂದು ದೆಹಲಿಯ ಸಿಟಿ ಕೋರ್ಟ್ ನಲ್ಲಿ ವಕೀಲರಾಗಿ ಅಭ್ಯಾಸ ಮಾಡ್ತಿರೋ ಗುರುಮೀತ್ ಸಿಂಗ್ ಹೇಳಿದ್ದಾರೆ.

    ಐಪಿಸಿ ಸೆಕ್ಷನ್ 354 ಮತ್ತು 509ರ ಪ್ರಕಾರ, ಅಶ್ಲೀಲ, ಕೆಟ್ಟದಾದ ಹಾಗೂ ರೇಗಿಸುವಂತಹ ಸಂಜ್ಞೆಗಳನ್ನ ಮಹಿಳೆಯರಿಗೆ ತೋರಿಸುವುದು ಅಪರಾಧ. ಆದ್ದರಿಂದ ಅಶ್ಲೀಲ ಸಂಜ್ಞೆಯನ್ನು ಯಾರೇ ಬಳಸಿದರೂ ಅದು ಕಾನೂನುಬಾಹಿರ. ಅಲ್ಲದೆ 1994ರ ಕ್ರಿಮಿನಲ್ ಜಸ್ಟಿಸ್ ಆ್ಯಕ್ಟ್ ನ ಸೆಕ್ಷನ್ 6ರ ಪ್ರಕಾರ ಮಧ್ಯದ ಬೆರಳು ತೋರಿಸುವುದನ್ನು ಐರ್ಲೆಂಡಿನಲ್ಲಿ ಅಪರಾಧ ಎಂದು ಪರಿಗಣಿಸಲಾಗಿದೆ ಅಂತ ಸಿಂಗ್ ನೋಟಿಸ್‍ನಲ್ಲಿ ಉಲ್ಲೇಖಿಸಿದ್ದಾರೆ.

    ವಾಟ್ಸಪ್ ಆ್ಯಪ್ ನಲ್ಲಿ ಮಧ್ಯದ ಬೆರಳಿನ ಎಮೋಜಿಯನ್ನು ಬಳಕೆದಾರರಿಗೆ ನೀಡುವ ಮೂಲಕ ನೀವು(ವಾಟ್ಸಪ್) ನೇರವಾಗಿ ಅಶ್ಲೀಲ ಸಂಜ್ಞೆಯ ಬಳಕೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

    ನೋಟಿಸ್ ನೀಡಲಾದ 15 ದಿನಗಳಲ್ಲಿ ವಾಟ್ಸಪ್ ಬಳಕೆದಾರರಿಗೆ ಲಭ್ಯವಿರುವ ಎಲ್ಲ ಮಾದರಿಯ ಮಧ್ಯದ ಬೆರಳಿನ ಎಮೋಜಿ, ಗ್ರಾಫಿಕ್ಸ್ ಮತ್ತು ಚಿತ್ರಗಳನ್ನು ತೆಗೆಯುವಂತೆ ಸೂಚಿಸಲಾಗಿದೆ. ಒಂದು ವೇಳೆ ಎಮೋಜಿಯನ್ನು ತೆಗೆಯುವಲ್ಲಿ ವಿಫಲವಾದಲ್ಲಿ ಕಂಪೆನಿ ವಿರುದ್ಧ ಸಿವಿಲ್ ಅಥವಾ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

    ಯಾವುದೇ ಭಾವನೆ ಅಥವಾ ಚಿಂತನೆಯನ್ನು ವ್ಯಕ್ತಪಡಿಸಲು ಬಳಸುವ ಡಿಜಿಟಲ್ ಚಿತ್ರ ಅಥವಾ ಚಿಹ್ನೆಯನ್ನ ಎಮೋಜಿ ಅಂತಾರೆ.

  • ಕನ್ನಡ ಚಲನಚಿತ್ರ ಮಂಡಳಿಯಲ್ಲಿ ಇನ್ಮುಂದೆ ಸರ್ಕಾರದ ಆಡಳಿತ?

    ಕನ್ನಡ ಚಲನಚಿತ್ರ ಮಂಡಳಿಯಲ್ಲಿ ಇನ್ಮುಂದೆ ಸರ್ಕಾರದ ಆಡಳಿತ?

    ಬೆಂಗಳೂರು: ಫಿಲಂ ಚೇಂಬರ್‍ಗೆ ಸರ್ಕಾರದ ವತಿಯಿಂದ ಆಡಳಿತಾಧಿಕಾರಿಯನ್ನು ನೇಮಿಸಲು ಸರ್ಕಾರ ಮುಂದಾಗಿದೆ. ಈ ಕುರಿತು ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಟಿ ಪ್ರಕಾಶ್ ಅವರು ಫಿಲಂ ಚೇಂಬರ್ ಗೆ ನೋಟಿಸ್ ಜಾರಿ ಮಾಡಿದ್ದಾರೆ.

    ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ ಗೋವಿಂದು ಅವರ ಅಧಿಕಾರಾವಧಿ ಮುಗಿದು 9 ತಿಂಗಳು ಕಳೆದರೂ ಮುಂದಿನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೇ ನಡೆಯದಿರುವುದೇ ಪ್ರಮುಖ ಕಾರಣವಾಗಿದೆ.

    ಇದೀಗ ಸರ್ಕಾರ, ಚುನಾವಣೆ ನಡೆಸಿ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ಸೂಚಿಸಿ ಈಗಾಗಲೇ 2 ನೋಟಿಸ್ ಕಳುಹಿಸಿಕೊಟ್ಟಿದೆ. ಆದರೆ ಈ ಕುರಿತು ಫಿಲಂ ಚೇಂಬರ್‍ನಿಂದ ಯಾವುದೇ ಪ್ರತಿಕ್ರಿಯೇ ಬಾರದ ಹಿನ್ನೆಯಲ್ಲಿ ಸರ್ಕಾರದ ಆಡಳಿತ ಅಧಿಕಾರಿಯನ್ನು ನೇಮಕ ಮಾಡಲು ಮುಂದಾಗಿದೆ. ಈ ಕುರಿತು ನೋಟಿಸ್ ಕಳುಹಿಸಿಕೊಡಲಾಗಿದ್ದು 15 ದಿನಗಳ ಒಳಗೆ ಲಿಖಿತ ರೂಪದ ಉತ್ತರವನ್ನು ನೀಡಬೇಕು ಎಂದು ಸೂಚಿಸಿದೆ.

  • ಸಾಲ ಹಿಂದಿರುಗಿಸಿಲ್ಲವೆಂದು ವ್ಯಕ್ತಿಯ ಮನೆಯಲ್ಲೇ ಠಿಕಾಣಿ ಹೂಡಿದ ಮಹಿಳೆ

    ಸಾಲ ಹಿಂದಿರುಗಿಸಿಲ್ಲವೆಂದು ವ್ಯಕ್ತಿಯ ಮನೆಯಲ್ಲೇ ಠಿಕಾಣಿ ಹೂಡಿದ ಮಹಿಳೆ

    ಕೊಪ್ಪಳ: ಸಾಲ ಕೊಟ್ಟ ಮಹಿಳೆಯೊಬ್ಬಳು ಮನೆ ಹೊಕ್ಕು ಸಾಲ ಪಡೆದವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೊಪ್ಪಳದಲ್ಲಿ ಕೇಳಿಬಂದಿದೆ.

    ಕೊಪ್ಪಳದ ಗಂಗಾವತಿ ತಾಲೂಕಿನ ಯರಡೋಣ ಗ್ರಾಮದ ಅಮೃತ ಹಾಗೂ ಕಿಂದಿ ಕ್ಯಾಂಪ್ ನಿವಾಸಿ ಶ್ರೀನಿವಾಸ್ ನಡುವಿನ ಹಣಕಾಸು ತಗಾದೆ ವಿಚಿತ್ರ ತಿರುವು ಪಡೆದುಕೊಂಡಿದೆ. ಅಮೃತ ಶ್ರೀನಿವಾಸ್‍ ಗೆ 12 ಲಕ್ಷ ರೂಪಾಯಿ ಸಾಲಕೊಟ್ಟಿದ್ದು, ಪಡೆದ ಸಾಲದ ಹಣ ವಾಪಸ್ ಕೊಡುವವರೆಗೂ ಶ್ರೀನಿವಾಸ್ ಮನೆಯಲ್ಲಿ ಠಿಕಾಣಿ ಹೂಡಿದ್ದಾರೆ.

    ಒಟ್ಟು 12 ಲಕ್ಷಕ್ಕೆ ಬಡ್ಡಿ ಸೇರಿ 15 ಲಕ್ಷ ಕೊಡುವಂತೆ ಅಮೃತಾ ಕೋರ್ಟ್ ನಿಂದ ಕಾನೂನು ರೀತಿ ನೋಟಿಸ್ ಕೊಡಿಸಿದ್ದಾಳೆ. ಆದರೆ ಆಗ ಶ್ರೀನಿವಾಸ್ ಚೆಕ್ ಕೊಟ್ಟಿದ್ದು ಬೌನ್ಸ್ ಆಗಿದೆಯಂತೆ. ಹೀಗಾಗಿ ಸಾಲ ಕೊಟ್ಟ ಅಮೃತಾ, ಶ್ರೀನಿವಾಸ್ ನ ಮನೆಯಲ್ಲಿ ಕಳೆದ ಒಂದು ತಿಂಗಳನಿಂದ ಠಿಕಾಣಿ ಹೂಡಿ ಶ್ರೀನಿವಾಸ್ ತಾಯಿಗೆ ಕಿರುಕುಳ ನೀಡುತ್ತಿರೋ ಆರೋಪ ಕೇಳಿಬಂದಿದೆ.

    ಆದರೆ ಸಾಲ ಪಡೆದ ಶ್ರೀನಿವಾಸ್ ಮನೆ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಇದರಿಂದ ಶ್ರೀನಿವಾಸ್ ಮನೆಯಲ್ಲಿ ಅಮೃತಾಳ ಅಂಧಾ ದರ್ಬಾರ್ ಶುರುವಾಗಿದೆ. ಅಮೃತಾಳ ಕಿರುಕುಳಕ್ಕೆ ರೋಸಿ ಹೋದ ಶ್ರೀನಿವಾಸ್ ಕುಟುಂಬ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

     

  • ಉದ್ಯಮಿ ಆದಿಕೇಶವುಲು ಮೊಮ್ಮಗನ ಕಾರಿನಲ್ಲಿ ಇದ್ದದ್ದು ಪ್ರಜ್ವಲ್ ಅಲ್ಲ ಪ್ರಣಾಮ್?

    ಉದ್ಯಮಿ ಆದಿಕೇಶವುಲು ಮೊಮ್ಮಗನ ಕಾರಿನಲ್ಲಿ ಇದ್ದದ್ದು ಪ್ರಜ್ವಲ್ ಅಲ್ಲ ಪ್ರಣಾಮ್?

    ಬೆಂಗಳೂರು: ನಗರದಲ್ಲಿ ಉದ್ಯಮಿ ಮೊಮ್ಮಗನ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಸಿಕ್ಕಿದೆ.

    ಘಟನೆ ನಡೆದ ವೇಳೆ ಉದ್ಯಮಿ ಆದಿಕೇಶವುಲು ಮೊಮ್ಮಗನ ಕಾರಿನಲ್ಲಿ ಸ್ಯಾಂಡಲ್‍ವುಡ್ ನಟರು ಇದ್ದರು ಎಂದು ತಿಳಿದುಬಂದಿತ್ತು. ನಟ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಕಾರಿನಲ್ಲಿ ಇದ್ದರೆಂಬ ಸುದ್ದಿ ಹರಿದಾಡಿತ್ತು. ಆದ್ರೆ ಇದನ್ನು ಅಲ್ಲಗಳೆದಿದ್ದ ಪ್ರಜ್ವಲ್ ದೇವರಾಜ್ ಹಾಗೂ ದಿಗಂತ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ಆದ್ರೆ ಆದಿಕೇಶವುಲು ಮೊಮ್ಮಗನ ಜೊತೆ ಕಾರಿನಲ್ಲಿ ಇದ್ದದ್ದು ಪ್ರಜ್ವಲ್ ದೇವರಾಜ್ ಅಲ್ಲ, ಅವರ ಸಹೋದರ ಪ್ರಣಾಮ್ ದೇವರಾಜ್ ಎಂದು ತಿಳಿದುಬಂದಿದೆ.

     

    ಪ್ರಜ್ವಲ್ ಸಹೋದರ ಪ್ರಣಾಮ್ ದೇವರಾಜ್‍ನನ್ನು ನೋಡಿ ಜನರು ಗೊಂದಲಕ್ಕೀಡಾದರು. ನೋಡೋದಕ್ಕೆ ಇಬ್ಬರೂ ಒಂದೇ ರೀತಿ ಇದ್ದ ಹಿನ್ನೆಲೆಯಲ್ಲಿ ಜನ ಗೊಂದಲಕ್ಕೀಡಾಗಿದ್ದರು. ನಂತರ ಪ್ರಜ್ವಲ್ ದೇವರಾಜು ಅಂತ ತಪ್ಪಾಗಿ ಗ್ರಹಿಸಿದ್ದರು.

    ಇದನ್ನೂ ಓದಿ: ಅಪಘಾತಕ್ಕೂ ನನಗೂ ಸಂಬಂಧವಿಲ್ಲ-ಅಭಿಮಾನಿಗಳಿಗೆ ವಿಡಿಯೋ ಶೇರ್ ಮಾಡಿದ ದಿಗಂತ್

    ಪ್ರಣಾಮ್ ದೇವರಾಜು ಕೂಡ ನಟರಾಗಿದ್ದು, ಒಂದೆರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಣಾಮ್ ದೇವರಾಜ್ ಘಟನೆ ನಡೆದ ದಿನದಂದು ಸ್ಥಳದಲ್ಲೇ ಇದ್ದರು ಎಂಬ ಬಗ್ಗೆ ತಾಂತ್ರಿಕವಾಗಿ ಮಾಹಿತಿ ಕಲೆಹಾಕಿದ ಪೊಲೀಸರು ಪ್ರಣಾಮ್‍ಗೆ ಈಗ ನೋಟಿಸ್ ಜಾರಿ ಮಾಡಿದ್ದಾರೆ ನಾಳೆಯೊಳಗಾಗಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದಾರೆ.

    ಉದ್ಯಮಿಯ ಮೊಮ್ಮಗನ ಪುಂಡಾಟ ಪ್ರಕರಣದಲ್ಲಿ ವಿಷ್ಣುವಿಗಾಗಿ ತೀವ್ರ ಶೋಧದ ಬೆನ್ನಲ್ಲೆ ಪೊಲೀಸರು ಆಕ್ಟೀವ್ ಆಗಿದ್ದಾರೆ.

    ಇದನ್ನೂ ಓದಿ: ಅಪಘಾತದ ಬಗ್ಗೆ ನಟರಾದ ದಿಗಂತ್, ಪ್ರಜ್ವಲ್ ಹೇಳಿದ್ದು ಹೀಗೆ

    https://www.youtube.com/watch?v=XkSGJRHTDEw

  • ಖಾಸಗಿ ಫೈನಾನ್ಸ್ ಕಂಪೆನಿಯಿಂದ ನೋಟಿಸ್ ಪಡೆಯುತ್ತಿದ್ದಂತೆ ಹೃದಯಾಘಾತವಾಗಿ ರೈತ ಸಾವು

    ಖಾಸಗಿ ಫೈನಾನ್ಸ್ ಕಂಪೆನಿಯಿಂದ ನೋಟಿಸ್ ಪಡೆಯುತ್ತಿದ್ದಂತೆ ಹೃದಯಾಘಾತವಾಗಿ ರೈತ ಸಾವು

    ಮೈಸೂರು: ಖಾಸಗಿ ಫೈನಾನ್ಸ್ ಕಂಪೆನಿಯಿಂದ ನೋಟಿಸ್ ಪಡೆದ ರೈತ ಕುಸಿದು ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ.

    30 ವರ್ಷದ ಪುಟ್ಟೇಗೌಡ ಮೃತ ರೈತ. ನಂಜನಗೂಡು ತಾಲೂಕು ಕಂದೇಗಾಲ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಎರಡು ವರ್ಷಗಳ ಹಿಂದೆ ಮಹೇಂದ್ರ ಫೈನಾನ್ಸ್ ಸಂಸ್ಥೆಯಿಂದ ಪುಟ್ಟೇಗೌಡ ಅವರು ಟ್ರ್ಯಾಕ್ಟರ್ ಖರೀದಿಗಾಗಿ 6 ಲಕ್ಷ ರೂ. ಸಾಲ ಪಡೆದಿದ್ದರು. ಆದ್ರೆ ಸಾಲದ ಹಣ ಹಿಂದಿರುಗಿಸಲು ವಿಳಂಬವಾದ ಹಿನ್ನಲೆಯಲ್ಲಿ ಇಂದು ಬ್ಯಾಂಕ್ ಸಿಬ್ಬಂದಿ ಮನೆಗೆ ಬಂದು ಟ್ರ್ಯಾಕ್ಟರ್ ಜಪ್ತಿ ಮಾಡುವುದಾಗಿ ನೊಟೀಸ್ ನೀಡಿದ್ದಾರೆ.

    ನೋಟಿಸ್ ಪಡೆಯುತ್ತಿದ್ದಂತೆಯೇ ಪುಟ್ಟೇಗೌಡ ಅವರು ಕುಸಿದು ಬಿದ್ದಿದ್ದು, ಕೆಲ ಕ್ಷಣಗಳಲ್ಲೇ ಸಾವನ್ನಪ್ಪಿದ್ದಾರೆ. ನೋಟಿಸ್ ನಿಂದ ಪುಟ್ಟೇಗೌಡ ಅವರಿಗೆ ಅಘಾತವಾಗಿ ಹೃದಯಾಘಾತವಾಗಿರುವ ಶಂಕೆ ವ್ಯಕ್ತವಾಗಿದೆ.

  • ನನಗೆ ಮಾತ್ರ ನೋಟಿಸ್ ನೀಡಿ ಟಾರ್ಗೆಟ್ ಮಾಡಿದ್ದು ಯಾಕೆ: ಸಿಎಂಗೆ ರೂಪಾ ಪ್ರಶ್ನೆ

    ನನಗೆ ಮಾತ್ರ ನೋಟಿಸ್ ನೀಡಿ ಟಾರ್ಗೆಟ್ ಮಾಡಿದ್ದು ಯಾಕೆ: ಸಿಎಂಗೆ ರೂಪಾ ಪ್ರಶ್ನೆ

    ಬೆಂಗಳೂರು: ಪರಪ್ಪನ ಅಗ್ರಹಾರದ ಅವ್ಯವಹಾರವನ್ನು ಬಯಲು ಮಾಡಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವ ಡಿಐಜಿ ರೂಪಾ ಅವರು ನನಗೆ ಮಾತ್ರ ನೋಟಿಸ್ ನೀಡಿದ್ದು ಯಾಕೆ ಎಲ್ಲರ ಬಗ್ಗೆಯೂ ತನಿಖೆ ನಡೆಯಲಿ ಎಂದು ಆಗ್ರಹಿಸಿದ್ದಾರೆ.

    ಈ ಹಿಂದೆ ಐಪಿಎಸ್ ಅಧಿಕಾರಿಯಾಗಿದ್ದ ಸೋನಿಯಾ ನಾರಂಗ್ ಮೇಲೆ ಗಣಿಗಾರಿಕೆ ಆರೋಪದ ಬಂದಿತ್ತು. ಈ ವೇಳೆ ಅವರೇ ಮಾಧ್ಯಮಗಳ ಮುಂದೆ ಬಂದು ನನ್ನ ಮೇಲಿನ ಆರೋಪ ಸುಳ್ಳು ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಸಿಎಂ ಈ ರೀತಿಯ ಆರೋಪ ಮಾಡುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಈಗ ನಾನು ಮಾಧ್ಯಮದ ಮುಂದೆ ಬಂದಿದ್ದೆ ತಪ್ಪಾಯ್ತು ಎನ್ನುವ ಹಾಗೆ ಸಿಎಂ ಮಾತನಾಡ್ತಿದ್ದಾರೆ ಎಂದು ಹೇಳಿದರು.

    ಮಾಧ್ಯಮ ಮುಂದೆ ನಾನು ಯಾವುದೇ ವರದಿ ಕೊಟ್ಟಿಲ್ಲ. ಅನ್ಯಾಯ ನಡೆಯುತ್ತಿದೆ ಅಂತ ಅಷ್ಟೇ ಹೇಳಿದ್ದೆ. ಆದ್ರೆ ನನ್ನನ್ನೇ ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಎಲ್ಲರ ಬಗ್ಗೆಯೂ ತನಿಖೆಗೆ ಆದೇಶ ಮಾಡಲಿ ಎಂದು ಸವಾಲು ಹಾಕಿದರು.

    ಮಾಧ್ಯಮದ ಮುಂದೆ ನಾನು ಹೋಗಿಲ್ಲ. ಅಷ್ಟೇ ಅಲ್ಲದೇ ವರದಿ ಬಗ್ಗೆ ನಾನು ಮಾತನಾಡಿಲ್ಲ, ವರದಿ ಕೊಟ್ಟಿದ್ದೇನೆ ಎಂದು ಹೇಳಿದ್ದೇನೆ. ಆದರೆ ವರದಿ ಬಗ್ಗೆ ಮಾತನಾಡಿದ್ದು ಡಿಜಿ ಅವರು. ತನಿಖೆಗೆ ಆದೇಶ ನೀಡಿದ್ದನ್ನು ಸ್ವಾಗತ ಮಾಡುತ್ತೇನೆ. ನನ್ನನ್ನ ಸೇರಿದಂತೆ ಎಲ್ಲಾ ಅಧಿಕಾರಿಗಳನ್ನ ತನಿಖೆಗೆ ಒಳಪಡಿಸಿ. ಈ ವಿಚಾರಕ್ಕೆ ನನ್ನನ್ನು ಮಾತ್ರ ಟಾರ್ಗೆಟ್ ಮಾಡುವುದು ಸರಿಯಲ್ಲ ಎಂದು ಹೇಳಿದರು.

    ಇದನ್ನೂ ಓದಿ: ಪದೇ ಪದೇ ಮಾಧ್ಯಮಗಳ ಮುಂದೆ ಹೋಗುವ ಅಧಿಕಾರಿಗಳಿಗೆ ನೋಟಿಸ್: ಸಿಎಂ

     

    https://youtu.be/VUvHqCfFg0E

     

    https://youtu.be/5NYUIeTEy-8

  • 2500 ರೂ. ಕಟ್ಟದೆ ನೋಟಿಸ್ ಪಡೆದ ಸ್ಯಾಂಡಲ್‍ವುಡ್ ನಟ-ನಟಿಯರು

    2500 ರೂ. ಕಟ್ಟದೆ ನೋಟಿಸ್ ಪಡೆದ ಸ್ಯಾಂಡಲ್‍ವುಡ್ ನಟ-ನಟಿಯರು

    ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್‍ಗಳಿಗೆ ತೆರಿಗೆ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕ ತಾರೆಯರು ವೃತ್ತಿ ತೆರಿಗೆ ಕಟ್ಟಿಲ್ಲ. ವೃತ್ತಿ ತೆರಿಗೆ ಪಾವತಿಸದ ಸ್ಟಾರ್ ನಟನಟಿಯರಿಗೆ ತೆರಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಘಟಾನುಘಟಿ ನಟನಟಿಯರಿಂದ ಹಿಡಿದು ಹಲವಾರು ಕಿರುತೆರೆ ಸ್ಟಾರ್ಸ್ ವೃತ್ತಿ ತೆರಿಗೆ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಸುಮಾರು 800 ಕ್ಕೂ ಹೆಚ್ಚು ಕಲಾವಿದರಿಗೆ ತೆರಿಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

    ನೋಟಿಸ್ ಪಡೆದ ನಟರು: ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಯಲ್ ಸ್ಟಾರ್ ಉಪೇಂದ್ರ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್ ರಾಕಿಂಗ್ ಸ್ಟಾರ್ ಯಶ್, ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ, ರಕ್ಷಿತ್ ಶೆಟ್ಟಿ, ರಮೇಶ್ ಅರವಿಂದ್, ಶ್ರೀ ಮುರಳಿ, ವಿಜಯ್ ರಾಘವೇಂದ್ರ, ದೇವರಾಜ್, ಪ್ರಜ್ವಲ್ ದೇವರಾಜ್, ಶರಣ್, ದೂದ್‍ಪೇಡ ದಿಗಂತ್, ಲೂಸ್ ಮಾದ ಯೋಗಿ, ಜೋಗಿ ಪ್ರೇಮ್, ದುನಿಯಾ ವಿಜಿ, ವಿನೋದ್ ಪ್ರಭಾಕರ್, ಚಿರು ಸರ್ಜಾ

    ನೋಟಿಸ್ ಪಡೆದ ನಟಿಯರು: ರಾಧಿಕ ಪಂಡಿತ್, ಪ್ರಿಯಾಂಕ ಉಪೇಂದ್ರ, ಸ್ಯಾಂಡಲ್‍ವುಡ್ ಕ್ವೀನ್ ರಮ್ಯ, ರಕ್ಷಿತಾ ಪ್ರೇಮ್, ರಚಿತಾ ರಾಮ್, ರಾಗಿಣಿ ದ್ವಿವೇದಿ, ಅಮೂಲ್ಯ, ಮಾಲಾಶ್ರೀ, ಭಾವನ, ಪೂಜಾ ಗಾಂಧಿ, ಶೃತಿ, ಅನು ಪ್ರಭಾಕರ್

    ಇವರಷ್ಟೇ ಅಲ್ಲದೆ ಹಾಸ್ಯ ನಟರಾದ ಚಿಕ್ಕಣ್ಣ, ಸಾಧು ಕೋಕಿಲಾ, ರಂಗಾಯಣ ರಘು, ರವಿಶಂಕರ್, ಬುಲೆಟ್ ಪ್ರಕಾಶ್ ಹಾಗೂ ಹಿರಿಯ ನಟ ನಟಿಯರಾದ ಅವಿನಾಶ್, ಸುಮಲತಾ ಅಂಬರೀಶ್ ಕೂಡ ತೆರಿಗೆಯನ್ನ ಕಟ್ಟದೆ ನೋಟಿಸ್ ಪಡೆದಿದ್ದಾರೆ.

    ನೋಟಿಸ್ ಪಡೆದ ಮೇಲೆ ನೇರವಾಗಿ ಕಚೇರಿಗೆ ಬಂದು ತೆರಿಗೆ ಜೊತೆಗೆ ದಂಡ ಮತ್ತು ಬಡ್ಡಿಯನ್ನ ನಟ ಜಗ್ಗೇಶ್, ಮಾಸ್ಟರ್ ಆನಂದ್, ನಿರೂಪಕಿ ಅನುಶ್ರೀ, ರಾಜೇಶ್ ಕೃಷ್ಣನ್, ಡಿಂಗ್ರಿ ನಾಗರಾಜ್, ಹೊನ್ನವಳ್ಳಿ ಕೃಷ್ಣ ಮತ್ತಿತರೆ ನಟರು ಪಾವತಿ ಮಾಡಿದ್ದಾರೆ. ಎಜಿ ವರದಿಯ ಪ್ರಕಾರ ಕೇವಲ 70 ಜನ ಮಾತ್ರ ಇಲ್ಲಿವರೆಗೆ ವೃತ್ತಿ ತೆರಿಗೆ ಪಾವತಿಸಿದ್ದಾರಂತೆ.

    ಕರ್ನಾಟಕದಲ್ಲಿ ಎಲ್ಲಿ ಯಾವುದೇ ವೃತ್ತಿ ಮಾಡ್ತಿದ್ರೂ ವೃತ್ತಿ ತೆರಿಗೆ ಅಂತ ವಾರ್ಷಿಕವಾಗಿ 2,500 ರೂಪಾಯಿ ಪಾವತಿಸಲೇಬೇಕು. ಆದ್ರೆ ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು, ನಿರೂಪಕರು, ಗಾಯಕರು, ನಿರ್ದೇಶಕರು, ವಿತಕರು ವೃತ್ತಿ ತೆರಿಗೆಯನ್ನ ಕಳೆದ ಐದು ವರ್ಷದಿಂದ ಕಟ್ಟಿಲ್ಲ ಎಂದು ವೃತ್ತಿ ತೆರಿಗೆ ಜಂಟಿ ಆಯುಕ್ತರಾದ ಕೆ ರಾಮನ್ ಹೇಳಿದ್ದಾರೆ.

    ಬೆಂಗಳೂರು ಮಹಾನಗರ ಪಾಲಿಕೆ ಒಂದ್ರಲ್ಲಿಯೇ ತಿಂಗಳಿಗೆ 50 ರಿಂದ 55 ಕೋಟಿ ರೂ. ವೃತ್ತಿ ತೆರಿಗೆ ಸಂಗ್ರಹವಾಗುತ್ತೆ. ಅದ್ರೇ ಚಿತ್ರರಂಗದ ಅನೇಕ ತಾರೆಯರು ವೃತ್ತಿ ತೆರಿಗೆ ಕಟ್ಟಿಲ್ಲ. ಅವ್ರಿಗೆಲ್ಲಾ ಇ-ಮೇಲ್‍ನಲ್ಲೂ ನೋಟಿಸ್ ನೀಡಿದ್ದಾರೆ. ಈ ವಿಚಾರದಲ್ಲಿ ಟೈಗರ್ ಪ್ರಭಾಕರ್ ಎಲ್ಲರಿಗೂ ಮಾದರಿಯಾಗಿದ್ದಾರೆ. ತಾವು ಬದುಕಿರುವವರೆಗೂ ವೃತ್ತಿ ತೆರಿಗೆಯನ್ನ ಪ್ರತೀ ವರ್ಷ ತಪ್ಪದೇ ಕಟ್ಟಿದ್ದಾರೆ ಅಂತ ತಿಳಿದುಬಂದಿದೆ.

    https://www.youtube.com/watch?v=jogPlQH6UmQ

  • ಸ್ವಚ್ಛ್ ಧನ್: ವಿಶೇಷ ಸಾಫ್ಟ್ ವೇರ್ ಬಳಸಿ ಐಟಿ ಶೋಧ- 18 ಲಕ್ಷ ಖಾತೆದಾರರಿಗೆ ನೋಟಿಸ್

    ನವದೆಹಲಿ: ನೋಟ್‍ಬ್ಯಾನ್ ಬಳಿಕ ನವೆಂಬರ್ 9ರಿಂದ ಡಿಸೆಂಬರ್ 31ರವರೆಗೆ ಬ್ಯಾಂಕ್‍ಗಳಲ್ಲಿ ಡೆಪಾಸಿಟ್ ಮಾಡಿರುವ ಹಣದ ಮೇಲೆ ಐಟಿ ಈ ಮೊದಲೇ ಕಣ್ಣಿಟ್ಟಿತ್ತು. ಮಂಗಳವಾರದಂದು ಸ್ವಚ್ಛ್ ಧನ್/ಕ್ಲೀನ್ ಮನಿ ಅಭಿಯಾನವನ್ನು ಆರಂಭಿಸಿರೋ ಕೇಂದ್ರ ಸರ್ಕಾರ ವಿಶೇಷ ಸಾಫ್ಟ್‍ವೇರ್ ಬಳಸಿ ಬ್ಯಾಂಕ್‍ಗಳ ಬಗ್ಗೆ ಶೋಧ ಕಾರ್ಯ ನಡೆಸಿದ್ದು, ಖಾತೆದಾರರ ಡೆಪಾಸಿಟ್ ಮಾಹಿತಿ ಹೊಂದಾಣಿಕೆ ಆಗದ ಕಾರಣ 18 ಲಕ್ಷ ಮಂದಿಗೆ ನೋಟಿಸ್ ನೀಡಿದೆ.

    ಇ-ಮೇಲ್, ಎಸ್‍ಎಂಎಸ್ ಮೂಲಕ ನೊಟೀಸ್ ರವಾನಿಸಲಾಗಿದ್ದು, 10 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ ಅವರಿಂದ ಪ್ರತಿಕ್ರಿಯೆ ಬರದಿದ್ರೆ ಐಟಿಯಿಂದ ಮತ್ತೊಮ್ಮೆ ನೋಟಿಸ್ ಸಿಗಲಿದ್ದು ಕ್ರಮ ಕೈಗೊಳ್ಳಲಾಗುತ್ತದೆ. ಹೊಸ ಪ್ರೋಗ್ರಾಮಿಂಗ್ ಸಾಫ್ಟ್‍ವೇರ್‍ನಿಂದ ನೋಟ್‍ಬ್ಯಾನ್ ನಂತರ ಬ್ಯಾಂಕ್‍ಗಳಲ್ಲಾಗಿರುವ ಎಲ್ಲಾ ಠೇವಣಿಗಳ ಬಗ್ಗೆ ಇ- ವೇರಿಫಿಕೇಷನ್ ಮಾಡಬಹುದಾಗಿದೆ ಎಂದು ಕಂದಾಯ ಕಾರ್ಯದರ್ಶಿ ಹಸ್ಮುಕ್ ಅಧಿಯಾ ಹೇಳಿದ್ದಾರೆ.

    ಈ ಮಧ್ಯೆ, ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ 4 ಕೋಟಿ 12 ಲಕ್ಷ ರೂ. ಹವಾಲಾ ಹಣ ಸಾಗಿಸುತ್ತಿದ್ದ ಮೂವರನ್ನ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನ ಅಬ್ದುಲ್, ಶಂಶುದ್ದೀನ್, ಅಫ್ಜಲ್ ಅಂತ ಗುರುತಿಸಲಾಗಿದೆ. ಇವರ ಬಳಿ ಹೊಸ 2000 ರೂಪಾಯಿಯ 3 ಕೋಟಿ 10 ಲಕ್ಷ ರೂ. ಹಾಗೂ 1 ಕೋಟಿ ರೂ. ಮೌಲ್ಯದಷ್ಟು ಹೊಸ 500 ಹಾಗು 100 ರೂಪಾಯಿಗಳ 193 ಕಂತೆಗಳಿದ್ದವು.