Tag: ನೋಟಿಸ್

  • Chitradurga | ಸಮೀಕ್ಷೆ ಕಾರ್ಯಕ್ಕೆ ಗೈರು – 68 ಸಿಬ್ಬಂದಿಗೆ ನೋಟಿಸ್

    Chitradurga | ಸಮೀಕ್ಷೆ ಕಾರ್ಯಕ್ಕೆ ಗೈರು – 68 ಸಿಬ್ಬಂದಿಗೆ ನೋಟಿಸ್

    – 5 ದಿನದಲ್ಲೇ ಸಮೀಕ್ಷೆ ಪೂರ್ಣಗೊಳಿಸಿದ ಶಿಕ್ಷಕಿ

    ಚಿತ್ರದುರ್ಗ: ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ (Caste Census) ಗೈರಾದ ಹಿನ್ನೆಲೆ ಚಿತ್ರದುರ್ಗದಲ್ಲಿ (Chitradurga) 68 ಸಿಬ್ಬಂದಿಗೆ ನೋಟಿಸ್ ನೀಡಿದ್ದು, ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

    68 ಗಣತಿದಾರರು ಈವರೆಗೆ ಸಮೀಕ್ಷೆಗೆ ವರದಿ ಮಾಡಿಕೊಂಡಿಲ್ಲ. ಈ ಹಿನ್ನೆಲೆ ಗೈರಾಗಿ ನಿರ್ಲಕ್ಷ್ಯ ವಹಿಸಿದ 68 ಮಂದಿ ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮುಡಾ ಕೇಸಲ್ಲಿ ಬಿ-ರಿಪೋರ್ಟ್‌ಗೆ ಸ್ನೇಹಮಯಿ ಆಕ್ಷೇಪ – ಅ.8ಕ್ಕೆ ಆದೇಶ ಕಾಯ್ದಿರಿಸಿದ ಜನಪ್ರತಿನಿಧಿಗಳ ನ್ಯಾಯಾಲಯ

    ಇನ್ನು ಗೈರಾದವರಿಗೆ ನೋಟಿಸ್ ಒಂದೆಡೆಯಾದರೆ ಇನ್ನೊಂದೆಡೆ ಶಿಕ್ಷಕಿಯೊಬ್ಬರು (Teacher) ಕೇವಲ 5 ದಿನದಲ್ಲೇ ಸಮೀಕ್ಷೆ ಕಾರ್ಯ ಮುಗಿಸಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದಾಸರ್ಲಹಳ್ಳಿ ಗ್ರಾಮದಲ್ಲಿ ಶಿಕ್ಷಕಿ ಎಂ.ರಾಧಾ ತ್ವರಿತಗತಿಯಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿದ್ದಾರೆ. ಗ್ರಾಮದ ಜನರು ಕೆಲಸಕ್ಕೆ ಹೋಗುವ ಮುನ್ನ ಶಿಕ್ಷಕಿ ಹಾಜರಾಗುತ್ತಿದ್ದು, ಗ್ರಾಮದಲ್ಲೇ ಉಳಿದುಕೊಂಡು ಸಮೀಕ್ಷೆ ಕಾರ್ಯ ಕೈಗೊಂಡಿದ್ದಾರೆ. ಶಿಕ್ಷಕಿ ಎಂ.ರಾಧಾ ಕಾರ್ಯಕ್ಕೆ ದಾಸರ್ಲಹಳ್ಳಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಸರ್ಕಾರದ ವಿರುದ್ಧ ಪಿಓಕೆಯಲ್ಲಿ ಭಾರೀ ಪ್ರತಿಭಟನೆ – ಷರೀಫ್‌, ಅಸಿಮ್ ಮುನೀರ್‌ಗೆ ಪುಕ ಪುಕ

  • ಶಿಸ್ತು ಉಲ್ಲಂಘನೆ – ಬಿಜೆಪಿಯ ಐದು ನಾಯಕರಿಗೆ ನೋಟಿಸ್

    ಶಿಸ್ತು ಉಲ್ಲಂಘನೆ – ಬಿಜೆಪಿಯ ಐದು ನಾಯಕರಿಗೆ ನೋಟಿಸ್

    ನವದೆಹಲಿ: ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಐವರು ಬಿಜೆಪಿ ಮುಖಂಡರಿಗೆ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ಜಾರಿ ಮಾಡಿದೆ.

    ಎಸ್‌ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿಪಿ ಹರೀಶ್, ರೇಣುಕಾಚಾರ್ಯಗೆ ಶೋಕಾಸ್ ನೋಟಿಸ್ ನೀಡಿದೆ.

    ಪದೇ ಪದೇ ಪಕ್ಷದ ಶಿಸ್ತು ಉಲ್ಲಂಘನೆ ಹಿನ್ನೆಲೆಯಲ್ಲಿ ಸ್ಪಷ್ಟೀಕರಣ ಕೇಳಿ ಶೋಕಾಸ್ ನೊಟೀಸ್ ಜಾರಿ ಮಾಡಿ 72 ಗಂಟೆಯೊಳಗೆ ಉತ್ತರಿಸುವಂತೆ ಸೂಚನೆ ನೀಡಿದೆ.

    ಯಾರಿಗೆ ಯಾಕೆ ನೋಟಿಸ್‌?
    ಎಸ್ ಟಿ ಸೋಮಶೇಖರ್/ಶಿವರಾಂ ಹೆಬ್ಬಾರ್: ಪದೇ ಪದೇ ಕಾಂಗ್ರೆಸ್ ನಾಯಕತ ಜತೆ, ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಳ್ಳುತ್ತಿರುವುದು. ಕಾಂಗ್ರೆಸ್ ನಾಯಕರನ್ನು ಹೊಗಳಿ ಬಿಜೆಪಿ ನಾಯಕರ ಟೀಕೆ. ಬಿಜೆಪಿ ಕಾರ್ಯಕ್ರಮಗಳಿಗೆ ಸರಣಿ ಗೈರು, ಪಕ್ಷದ ಸೂಚನೆಗಳ ಉಲ್ಲಂಘನೆ

    ರೇಣುಕಾಚಾರ್ಯ:
    ಬಹಿರಂಗ ಹೇಳಿಕೆಗಳನ್ನು ಕೊಟ್ಟಿರುವುದು. ಯತ್ನಾಳ್ ಟೀಮ್ ವಿರುದ್ಧ ಪಕ್ಷದ ವೇದಿಕೆ ಬಿಟ್ಟು ಬಹಿರಂಗವಾಗಿ ಚರ್ಚೆ. ಪಕ್ಷದಲ್ಲಿ ಗುಂಪುಗಾರಿಕೆ ನಡೆಸುತ್ತಿರುವುದು. ವಿಜಯೇಂದ್ರ, ಯಡಿಯೂರಪ್ಪ ಪರ ಪ್ರತ್ಯೇಕ ಸಭೆಗಳ ಆಯೋಜನೆ. ಲಿಂಗಾಯತ ಮುಖಂಡರ ಸಭೆಗಳ ಆಯೋಜನೆ ಮಾಡಿ ಪಕ್ಷದಲ್ಲಿ ಗೊಂದಲ ಮೂಡಿಸುತ್ತಿರುವುದು.

    ಕಟ್ಟಾ ಸುಬ್ರಹ್ಮಣ್ಯ ನಾಯ್ಡು
    ತಮ್ಮ ಮನೆಯಲ್ಲೇ ಯತ್ನಾಳ್ ತಂಡ್ ವಿರುದ್ಧ ಪ್ರತ್ಯೇಕ ಸಭೆಗಳ ಆಯೋಜನೆ. ಬಹಿರಂಗ ಹೇಳಿಕೆಗಳನ್ನು ಪಕ್ಷದ ಸೂಚನೆ, ಶಿಸ್ತು ಮೀರಿ ಕೊಟ್ಟಿರುವುದು.

    ಬಿ ಪಿ ಹರೀಶ್
    ಪಕ್ಷದ ನಾಯಕತ್ವ ವಿರುದ್ಧ ಬಹಿರಂಗ ಹೇಳಿಕೆ. ಯತ್ನಾಳ್ ಜತೆ ಸೇರಿಕೊಂಡು ಪ್ರತ್ಯೇಕ ಸಭೆಗಳಲ್ಲಿ ಭಾಗಿ. ಪಕ್ಷದ ಚೌಕಟ್ಟು ಮೀರಿ ಬಹಿರಂಗ ಹೇಳಿಕೆಗಳನ್ನು ನೀಡಿರುವುದು.

  • ವಿಜಯಪುರದಲ್ಲಿ ರೈತರಿಗೆ ನೀಡಿರೋ ನೋಟಿಸ್ ವಾಪಸ್ ಪಡೆಯುತ್ತೇವೆ: ಸಿಎಂ ಘೋಷಣೆ

    ವಿಜಯಪುರದಲ್ಲಿ ರೈತರಿಗೆ ನೀಡಿರೋ ನೋಟಿಸ್ ವಾಪಸ್ ಪಡೆಯುತ್ತೇವೆ: ಸಿಎಂ ಘೋಷಣೆ

    – ಯಾವುದೇ ರೈತರನ್ನ ಒಕ್ಕಲೆಬ್ಬಿಸೋದಿಲ್ಲ ಎಂದ ಸಿದ್ದರಾಮಯ್ಯ

    ಬೆಂಗಳೂರು: ವಿಜಯಪುರದಲ್ಲಿ (Vijayapura) ರೈತರ ಜಮೀನಿಗೆ ವಕ್ಫ್ ಬೋರ್ಡ್ (Waqf Board) ಕೊಟ್ಟಿರುವ ನೋಟಿಸನ್ನು ವಾಪಸ್ ಪಡೆಯೋದಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿದ್ದಾರೆ.

    ವಿಜಯಪುರದಲ್ಲಿ ರೈತರ ಜಮೀನಿಗೆ ವಕ್ಫ್ ಬೋರ್ಡ್ ಕೊಟ್ಟಿರುವ ನೋಟಿಸ್ ವಿಚಾರವಾಗಿ ಕೊನೆಗೂ ಸಿಎಂ ಸಿದ್ದರಾಮಯ್ಯ ಮೌನ ಮುರಿದಿದ್ದು, ಮೊದಲ ಬಾರಿಗೆ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಯಾವುದೇ ರೈತರನ್ನ ಸರ್ಕಾರ ಒಕ್ಕಲು ಎಬ್ಬಿಸಲ್ಲ. ಸೋಮವಾರ ಮೂರು ಜನ ಸಚಿವರು ಸುದ್ದಿಗೋಷ್ಠಿ ಮಾಡಿ ಮಾತನಾಡಿದ್ದಾರೆ. ವಿಜಯಪುರದಲ್ಲಿ ಯಾವುದೇ ರೈತರನ್ನು ಒಕ್ಕಲೆಬ್ಬಿಸೋದಿಲ್ಲ. ರೈತರಿಗೆ ನೋಟಿಸ್ ಕೊಟ್ಟಿದ್ದರೆ ಅದನ್ನು ವಾಪಸ್ ಪಡೆಯುತ್ತೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸಾಮಾಜಿಕ ನ್ಯಾಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ: ಸಿಎಂ

    ಇನ್ನು ಯಾದಗಿರಿ ಮತ್ತು ಧಾರವಾಡದಲ್ಲಿ ರೈತರಿಗೆ ನೋಟಿಸ್ ಕೊಟ್ಟಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ನೋಡುತ್ತೇನೆ. ಕಂದಾಯ ಸಚಿವರಿಗೆ ಅದನ್ನು ಪರಿಶೀಲಿಸಲು ತಿಳಿಸುತ್ತೇನೆ ಎಂದರು. ಇದನ್ನೂ ಓದಿ: ಜಾತಿಗಣತಿಯನ್ನ ಈ ಸರ್ಕಾರ ಯಾಕೆ ಬಿಡುಗಡೆ ಮಾಡ್ತಿಲ್ಲ: ಕುಮಾರಸ್ವಾಮಿ ಪ್ರಶ್ನೆ

  • ರೇಣುಕಾಸ್ವಾಮಿ ಕೊಲೆ ಪ್ರಕರಣ- ದರ್ಶನ್‍ಗೆ 40 ಲಕ್ಷ ಕೊಟ್ಟ ಮೋಹನ್ ರಾಜ್‍ಗೆ ಮತ್ತೆ ನೋಟಿಸ್

    ರೇಣುಕಾಸ್ವಾಮಿ ಕೊಲೆ ಪ್ರಕರಣ- ದರ್ಶನ್‍ಗೆ 40 ಲಕ್ಷ ಕೊಟ್ಟ ಮೋಹನ್ ರಾಜ್‍ಗೆ ಮತ್ತೆ ನೋಟಿಸ್

    – ಪವಿತ್ರಾ ಆಪ್ತೆ ಸಮತಾಗೂ ಟೆನ್ಶನ್
    – ಬಿಜೆಪಿ ಶಾಸಕನ ಕಾರು ಚಾಲಕ ಎಸ್ಕೇಪ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಹಾಗೂ ಗ್ಯಾಂಗ್‍ನಿಂದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೆ ಟ್ವಿಸ್ಟ್ ಸಿಗುತ್ತಿದೆ.

    ರೇಣುಕಾಸ್ವಾಮಿ ಹತ್ಯೆ ಕೇಸ್‍ನಲ್ಲಿ ಮೂವರಿಗೆ ನೋಟಿಸ್ ಕೊಡಲಾಗಿದೆ. ಅದರಲ್ಲೂ ಮಾಜಿ ಉಪಮೇಯರ್ ಮೋಹನ್ ರಾಜ್‍ಗೆ 2ನೇ ಬಾರಿ ನೋಟಿಸ್ ನೀಡಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಪ್ರಕರಣ ಸಂಬಂಧ ವಿಚಾರಣೆಯ ವೇಳೆ ಮೋಹನ್ ರಾಜ್ ರಿಂದ 40 ಲಕ್ಷ ಹಣ ಪಡೆದಿದ್ದ ಬಗ್ಗೆ ದರ್ಶನ್ ಬಾಯ್ಬಿಟ್ಟಿದ್ದಾರೆ. ಹೀಗಾಗಿ ಯಾವ ಉದ್ದೇಶಕ್ಕಾಗಿ ದರ್ಶನ್‍ಗೆ ಹಣ ನೀಡಿದ್ದಾರೆಂದು ತಿಳಿಸಲು ನೋಟಿಸ್ ನೀಡಲಾಗಿದೆ. ಬಸವೇಶ್ವರನಗರ ಪೊಲೀಸ್ ಠಾಣೆಗೆ ಖುದ್ದು ಹಾಜರಾಗುವಂತೆ ನೋಟಿಸ್‍ನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ; ದರ್ಶನ್ ಘಟನೆ ಕೇಳಿದ್ಮೇಲೆ ಶಾಕ್ ಆಯ್ತು: ‘ತಾರಕ್‌’ ನಟಿ ಶಾನ್ವಿ ಶ್ರೀವಾತ್ಸವ್

    ಪ್ರಕರಣ ಸಂಬಂಧ ಪವಿತ್ರಾಗೌಡ ಸ್ನೇಹಿತೆ ಸಮತಗೂ ನೋಟಿಸ್ ನೀಡಲಾಗಿದೆ. ಆರೋಪಿಯೊಬ್ಬನಿಗೆ ಹಣಕಾಸಿನ ಸಹಾಯ ಮಾಡಿರೋ ಆರೋಪ ಈಕೆಯ ಮೇಲಿದೆ. ಇನ್ನು ಬೆಂಗಳೂರಿನ ಬಿಜೆಪಿ ಶಾಸಕನ ಕಾರು ಚಾಲಕ ಕಾರ್ತಿಕ್ ಪುರೋಹಿತ್‍ನಿಗೂ ನೋಟಿಸ್ ಕೊಡಲಾಗಿದೆ. ಆದರೆ ನೋಟಿಸ್ ತಲುಪುತ್ತಿದ್ದಂತೆಯೇ ಈತ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ. ರೇಣುಕಾಸ್ವಾಮಿ ಹತ್ಯೆ ಕೇಸ್ ಆರೋಪಿ ಪ್ರದೋಷ್‍ಗೆ ಕಾರ್ತಿಕ್ ಪುರೋಹಿತ್ ಆಪ್ತ ಎಂಬ ಮಾಹಿತಿ ಲಭಿಸಿದೆ.

  • ಡ್ರಗ್ಸ್ ಪ್ರಕರಣ ನಟಿ ಹೇಮಾಗೆ 2ನೇ ನೋಟಿಸ್ : ಜೂ.1ಕ್ಕೆ ಹಾಜರಾಗಲು ಸೂಚನೆ

    ಡ್ರಗ್ಸ್ ಪ್ರಕರಣ ನಟಿ ಹೇಮಾಗೆ 2ನೇ ನೋಟಿಸ್ : ಜೂ.1ಕ್ಕೆ ಹಾಜರಾಗಲು ಸೂಚನೆ

    ಚಿತ್ರರಂಗದಲ್ಲಿ ರೇವ್ ಪಾರ್ಟಿ (Rave Party) ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಬಳಿಯ ಫಾರ್ಮ್ ಹೌಸ್‌ನಲ್ಲಿ ರೇವ್ ಪಾರ್ಟಿಯಲ್ಲಿ ಸೇರಿದ್ದ ಅನೇಕರನ್ನು ಸಿಸಿಬಿ ವಶಕ್ಕೆ ಪಡೆದುಕೊಂಡಿತ್ತು. ರೇವ್ ಪಾರ್ಟಿಯಲ್ಲಿ ಹೇಮಾ (Actress Hema) ಕೂಡ ಇದ್ದರು ಎಂದು ಪೊಲೀಸ್ ಕಮಿಷನರ್ ಕೂಡ ಸ್ಪಷ್ಟನೆ ನೀಡಿದ್ದರು. ತನಿಖೆ ಕೂಡ ಬಿರುಸಿನಿಂದ ನಡೆಯುತ್ತಿದೆ. ಈಗಾಗಲೇ ಅವರಿಗೆ 2ನೇ ನೋಟಿಸ್ ನೀಡಲಾಗಿದೆ. ಜೂನ್ 1ಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

    ಈ ನಡುವೆ ನಟಿ ಹೇಮಾ ಪರವಾಗಿ ತೆಲುಗು ಕಲಾವಿದರ ಸಂಘದ ಅಧ್ಯಕ್ಷ ವಿಷ್ಣು ಮಂಚು (Vishnu Manchu) ನಿಂತಿದ್ದಾರೆ. ಹೇಮಾರನ್ನು ಬೆಂಬಲಿಸಿ ಎಕ್ಸ್‌ನಲ್ಲಿ ವಿಷ್ಣು ಮಂಚು ಪೋಸ್ಟ್‌ವೊಂದು ಶೇರ್ ಮಾಡಿದ್ದಾರೆ. ಇತ್ತೀಚೆಗೆ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆಯಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಮಾಧ್ಯಮಗಳು ನಟಿ ಹೇಮಾ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿವೆ. ಯಾರೂ ಸಹ ಈಗಲೇ ನಿರ್ಧಾರಕ್ಕೆ ಬಂದು ಸತ್ಯವಲ್ಲದ ವರದಿಗಳನ್ನು ಇತರರಿಗೆ ಹಂಚಿಕೊಳ್ಳುವುದು ಬೇಡ ಎಂದು ಮನವಿ ಮಾಡಿದ್ದಾರೆ.

    ‘ಹೇಮಾ ಮೇಲಿನ ಆರೋಪಗಳು ಸಾಬೀತಾಗುವವರೆಗೂ ಅವರು ನಿರಪರಾಧಿ. ಆಕೆ ಒಬ್ಬ ತಾಯಿ, ಹೆಂಡತಿ ಹಾಗೂ ಮಹಿಳೆ ಅದರ ಬಗ್ಗೆಯೂ ನಾವು ಯೋಚಿಸಬೇಕಿದೆ. ಆಕೆಯ ವ್ಯಕ್ತಿತ್ವದ ಬಗ್ಗೆ ಕೆಲ ಹೇಳಿಕೆಗಳನ್ನು ಪಾಸ್ ಮಾಡುವುದು ಸೂಕ್ತವಲ್ಲ. ಮೂವಿ ಆರ್ಟಿಸ್ಟ್ ಅಸೋಸಿಯೇಷನ್ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳನ್ನು ವಿರೋಧಿಸುತ್ತದೆ. ಹೇಮಾ ಅವರ ವಿರುದ್ಧ ಪೊಲೀಸರು ಘನವಾದ ಸಾಕ್ಷಿಯನ್ನು ಸಾಭೀತುಪಡಿಸಿದರೆ ಕಲಾವಿದರ ಸಂಘವು ಹೇಮಾ ವಿರುದ್ಧ ಶಿಸ್ತು ಕ್ರಮವನ್ನು ಜರುಗಿಸಲಿದೆ. ಆದರೆ ಅಲ್ಲಿಯವರೆಗೆ ದಯವಿಟ್ಟು ಈ ವಿಷಯದ ಬಗ್ಗೆ ಚರ್ಚೆ ಬೇಡ ಎಂದಿದ್ದಾರೆ. ಈ ಮೂಲಕ ನಟಿ ಹೇಮಾ ಪರವಾಗಿ ವಿಷ್ಣು ಮಂಚು ಬೆಂಬಲಕ್ಕೆ ನಿಂತಿದ್ದಾರೆ.

     

    ಅಂದಹಾಗೆ, ಹೇಮಾ ಸುಮಾರು 250 ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲಿ ಖಾಯಂ ಪೋಷಕ ನಟಿಯಾಗಿ ಹೇಮಾ ಕೆಲಸ ಮಾಡಿದ್ದಾರೆ. ಕನ್ನಡದಲ್ಲೂ ಆಕ್ಟ್ ಮಾಡಿದ್ದ ಹೇಮಾ 2014ರಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ ‘ಪವರ್’ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ವಿನಯ ವಿಧೇಯ ರಾಮ, ಸನ್ ಆಫ್ ಸತ್ಯಮೂರ್ತಿ, ಡಿಕ್ಟೇಟರ್, ಅತ್ತಾರಿಂಟಿಕಿ ದಾರೇದಿ, ಮಿರ್ಚಿ, ರಭಸ, ಬೃಂದಾವನಂ, ರೆಬೆಲ್, ಜುಲಾಯ್, ಮಗಧೀರ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

  • ಸಂಸದ ಜಯಂತ್ ಸಿನ್ಹಾಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್ ಜಾರಿ

    ಸಂಸದ ಜಯಂತ್ ಸಿನ್ಹಾಗೆ ಬಿಜೆಪಿಯಿಂದ ಶೋಕಾಸ್ ನೋಟಿಸ್ ಜಾರಿ

    ರಾಂಚಿ: ಕೇಂದ್ರದ ಮಾಜಿ ಸಚಿವ ಯಶ್ವಂತ್ ಸಿನ್ಹಾ ಪುತ್ರ, ಸಂಸದ ಜಯಂತ್‌ ಸಿನ್ಹಾಗೆ (Jayant Sinha) ಭಾರತೀಯ ಜನತಾ ಪಕ್ಷವು (ಬಿಜೆಪಿ) ಶೋಕಾಸ್ ನೋಟಿಸ್ ಜಾರಿ ಮಾಡಿದೆ.

    ಜಾರ್ಖಂಡ್‌ನ ಹಜಾರಿಬಾಗ್ (Hazaribagh) ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮನೀಶ್ ಜೈಸ್ವಾಲ್ (Manish Jaiswal) ಅವರನ್ನು ಪಕ್ಷ ಘೋಷಣೆ ಮಾಡಿತ್ತು. ಈ ಮೂಲಕ ಲೋಕಸಭಾ ಚುನಾವಣೆಗೆ ಸಿನ್ಹಾ ಅವರಿಗೆ ಟಿಕೆಟ್‌ ನೀಡಲು ನಿರಾಕರಿಸಿತು. ಅಂದಿನಿಂದ ಜಯಂತ್‌ ಸಿನ್ಹಾ ಅವರು ಸಂಘಟನಾ ಕಾರ್ಯ ಮತ್ತು ಪ್ರಚಾರದಲ್ಲಿ ಆಸಕ್ತಿ ತೋರುತ್ತಿರಲಿಲ್ಲ. ಅಲ್ಲದೇ ಪಕ್ಷದ ಅಧಿಕೃತ ಅಭ್ಯರ್ಥಿ ಪರ ಕೆಲಸ ಮಾಡದ ಆರೋಪ ಹಾಗೂ ಈ ಬಾರಿ ಮತದಾನವನ್ನು ಕೂಡ ಮಾಡಿಲ್ಲ ಎಂಬ ಆರೋಪ ಕೇಳಿಬಂದಿತ್ತು.

    ಸಿನ್ಹಾ ನಡೆ ಪಕ್ಷದ ಹೈಕಮಾಂಡ್‌ ಗಮನಕ್ಕೆ ಬಂದಿದ್ದು, ಇದೀಗ ಶೋಕಾಸ್ ನೋಟಿಸ್ ಜಾರಿ ಮಾಡಿದೆ. 2 ದಿನದೊಳಗೆ ಉತ್ತರ ನೀಡುವಂತೆ ಸೂಚನೆ ನೀಡಿದೆ. ನಿಮ್ಮ ಹಕ್ಕನ್ನು ಚಲಾಯಿಸಲು ಸಹ ನೀವು ಮನಸ್ಸು ಮಾಡಿಲ್ಲ. ಹೀಗಾಗಿ ನಿಮ್ಮ ನಡವಳಿಕೆಯಿಂದಾಗಿ ಪಕ್ಷದ ಇಮೇಜ್‌ಗೆ ಧಕ್ಕೆಯಾಗಿದೆ ಎಂದು ಜಾರ್ಖಂಡ್ ಪ್ರಧಾನ ಕಾರ್ಯದರ್ಶಿ ಆದಿತ್ಯ ಸಾಹು (Aditya Sahu) ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: 2019; ಮೋದಿ ಅಲೆಯಲ್ಲಿ ಮತ್ತೆ ಅರಳಿದ ಕಮಲ

    ಇತ್ತೀಚೆಗೆ ಸಿನ್ಹಾ ಅವರ ಪುತ್ರ ಆಶಿಶ್ ಸಿನ್ಹಾ ಅವರು ಜಾರ್ಖಂಡ್‌ನ ಬರ್ಹಿಯಲ್ಲಿ ವಿರೋಧ ಪಕ್ಷದ ಇಂಡಿಯಾ ಬ್ಲಾಕ್‌ನಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಭಾಗವಹಿಸಿದ್ದರು. ಇದಾದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ರ್‍ಯಾಲಿಯಲ್ಲಿ ಆಶಿಶ್ ಸಿನ್ಹಾ ಅವರು ಕಾಂಗ್ರೆಸ್ ಅಭ್ಯರ್ಥಿ ಜೆಪಿ ಪಟೇಲ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಅಲ್ಲದೇ ಈ ವೇಳೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಕೂಡ ಭಾಗವಹಿಸಿದ್ದರು.

    ಜಯಂತ್ ಸಿನ್ಹಾ ಮತ್ತು ಅವರ ತಂದೆ ಯಶವಂತ್ ಸಿನ್ಹಾ ಅವರು 1998 ರಿಂದ 26 ವರ್ಷಗಳಿಗೂ ಹೆಚ್ಚು ಕಾಲ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

  • ರಜನಿಕಾಂತ್ ಸಿನಿಮಾಗೆ ನೋಟಿಸ್ ಕೊಟ್ಟ ಸಂಗೀತ ನಿರ್ದೇಶಕ ಇಳಯರಾಜ

    ರಜನಿಕಾಂತ್ ಸಿನಿಮಾಗೆ ನೋಟಿಸ್ ಕೊಟ್ಟ ಸಂಗೀತ ನಿರ್ದೇಶಕ ಇಳಯರಾಜ

    ಕ್ಷಿಣದ ಹೆಸರಾಂತ ನಟ ರಜನಿಕಾಂತ್ (Rajinikanth) ನಟನೆಯ ಕೂಲಿ (Coolie) ಸಿನಿಮಾ ತಂಡಕ್ಕೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ (Ilayaraja) ನೋಟಿಸ್ (Notice) ಕಳುಹಿಸಿದ್ದಾರೆ. ಈ ಸಿನಿಮಾದಲ್ಲಿ ತಮ್ಮ ಸಂಗೀತ ಸಂಯೋಜನೆಯನ್ನು ಅನುಮತಿ ಇಲ್ಲದೇ ಬಳಸಿದ್ದಾರೆ ಎಂದು ನೋಟಿಸ್ ನಲ್ಲಿ ಅವರು ಉಲ್ಲೇಖಿಸಿದ್ದಾರೆ.

    ಕೂಲಿ ಸಿನಿಮಾಗೆ ಅನಿರುದ್ಧ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರು ಇಳಯರಾಜ ಅವರ ವಾ ವಾ ಪಾಕಂ ವಾ ಹಾಡನ್ನು ಚಿತ್ರಕ್ಕಾಗಿ ಮರುಸೃಷ್ಟಿಸಲಾಗಿದೆ. ಇದಕ್ಕೆ ತಮ್ಮ ಅನುಮತಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ನಿರ್ಮಾಣ ಸಂಸ್ಥೆಗೆ ನೋಟಿಸ್ ನೀಡಲಾಗಿದೆ.

     

    ಕೂಲಿ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಪದೇ ಪದೇ ಇಂತಹ ತಪ್ಪುಗಳನ್ನು ಮಾಡುತ್ತಾರೆ ಎನ್ನುವ ಆರೋಪ ಕೂಡ ಇದೆ. ಈ ಹಿಂದೆ ವಿಕ್ರಮ್ ಸಿನಿಮಾದಲ್ಲೂ ಅವರು ಇಳಯರಾಜ ಅವರು ಹಾಡನ್ನು ಬಳಸಿಕೊಂಡಿದ್ದರು. ಆಗಲೂ ಇಳಯರಾಜ ಗರಂ ಆಗಿದ್ದರು. ಈಗ ಮತ್ತೆ ಲೋಕೇಶ್ ತಪ್ಪು ಮಾಡಿದ್ದಾರೆ.

  • ನಟಿ ಶ್ರುತಿಗೆ ಮಹಿಳಾ ಆಯೋಗದಿಂದ ನೋಟಿಸ್

    ನಟಿ ಶ್ರುತಿಗೆ ಮಹಿಳಾ ಆಯೋಗದಿಂದ ನೋಟಿಸ್

    ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಗ್ಯಾರಂಟಿ ಯೋಜನೆಯಿಂದ ಹಾಗೂ ಫ್ರೀ ಬಸ್ ಯೋಜನೆಯಿಂದ ತೀರ್ಥಯಾತ್ರೆಗೆಂದು ಹೋಗುತ್ತೇವೆ ಎಂದು ಹೇಳಿ ಹೆಣ್ಣು ಮಕ್ಕಳು ಎಲ್ಲೆಲ್ಲೂ ಹೋಗುತ್ತಿರುತ್ತಾರೆ ಅಂತಾ ನಟಿ ಶ್ರುತಿ (Shruti)  ಮಾತನಾಡಿರೋದು ಮಾಧ್ಯಮದಲ್ಲಿ ವರದಿಯಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿ ರಾಜ್ಯ ಮಹಿಳಾ ಆಯೋಗ ಅವರಿಗೆ ನೋಟಿಸ್ ಜಾರಿ ಮಾಡಿದೆ.

    ಶ್ರುತಿಗೆ ಕೊಟ್ಟಿ ನೋಟಿಸ್ (Notice) ನಲ್ಲಿ ಈ ರೀತಿ ಬಹಿರಂಗವಾಗಿ ಹೆಣ್ಣು ಮಕ್ಕಳನ್ನು ಅವಮಾನಿಸಿರೋದು ಖಂಡನೀಯ. ರಾಜ್ಯ ಮಹಿಳಾ ಆಯೋಗದ (Commission for Women) ಅಧಿನಿಯಮ 1995 ಪರಿಚಯ 10(ಎ)ಮೇರೆಗೆ ನೋಟಿಸ್ ಜಾರಿ ಮಾಡಿದೆ. ಏಳು‌ ದಿನದಲ್ಲಿ ಸ್ಪಷ್ಟೀಕರಣ ನೀಡುವಂತೆ ಸೂಚನೆ ನೀಡಲಾಗಿದೆ.

    ಉಡುಪಿ ಜಿಲ್ಲೆಯ ಬಂದೂರಿನಲ್ಲಿ ನಡೆದ ಚುನಾವಣಾ ಭಾಷಣದ ಅಬ್ಬರದಲ್ಲಿ ಮಹಿಳೆಯರನ್ನು ಶ್ರುತಿ ಟೀಕಿಸಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆ ನಡೆದಿತ್ತು. ಅವರು ಮಾಡಿದ ಭಾಷಣದ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಕೂಡ ಆಗಿತ್ತು. ನಂತರ ಮಹಿಳಾ ಆಯೋಗ ನೋಟಿಸ್ ನೀಡಿ, ಸ್ಪಷ್ಟೀಕರಣ ಕೇಳಿದೆ.

  • ಧನುಷ್-ಐಶ್ವರ್ಯ ರಜನಿಕಾಂತ್ ಡಿವೋರ್ಸ್: ಕೋರ್ಟ್ ನೋಟಿಸ್

    ಧನುಷ್-ಐಶ್ವರ್ಯ ರಜನಿಕಾಂತ್ ಡಿವೋರ್ಸ್: ಕೋರ್ಟ್ ನೋಟಿಸ್

    ನುಷ್ ಮತ್ತು ಐಶ್ವರ್ಯ ರಜನಿಕಾಂತ್ ತಮಗೆ ಡಿವೋಸ್ ಬೇಕೆಂದು ಒಟ್ಟಾಗಿಯೇ ಚೆನ್ನೈನ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿದ್ದು ಒಟ್ಟಾಗಿಯೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ (Notice) ನೀಡಿದೆ. ಅಕ್ಟೋಬರ್ 7ರಂದು ಇಬ್ಬರೂ ನ್ಯಾಯಾಲಯಕ್ಕೆ ಬರಬೇಕು ಎಂದು ನೋಟಿಸ್ ನಲ್ಲಿ ತಿಳಿಸಿದೆ.

    ಜನವರಿ 2022 ರಂದು ತಾವಿಬ್ಬರೂ ದೂರ ಆಗುತ್ತಿರುವ ವಿಷಯವನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದರು ಐಶ್ವರ್ಯ ರಜನಿಕಾಂತ್ (Aishwarya Rajinikanth). ಆ ನಂತರ ಅದನ್ನು ನಟ ಧನುಷ್ (Dhanush) ಕೂಡ ಖಚಿತ ಪಡಿಸಿದ್ದರು. ಅದಾದ ನಂತರ ಇಬ್ಬರನ್ನೂ ಒಟ್ಟಾಗಿಸುವ ಪ್ರಯತ್ನ ನಡೆಯಿತು. ಸ್ವತಃ ರಜನಿಕಾಂತ್ ಅವರೇ ಇಬ್ಬರೊಂದಿಗೂ ಮಾತನಾಡಿದ್ದರು. ಆದರೆ, ಪ್ರಯತ್ನ ವಿಫಲವಾಗಿತ್ತು.

    ಜನವರಿ 2022ರಲ್ಲೇ ಘೋಷಿಸಿದ್ದು ಈಗ ಕೋರ್ಟ್ (Court) ಮೆಟ್ಟಿಲು ಏರಿದೆ. ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ (Divorce) ಅರ್ಜಿ ಸಲ್ಲಿಸಿದ್ದಾರೆ ಎಂದು ಆಪ್ತರು ಖಚಿತ ಪಡಿಸಿದ್ದರು ಎಂದು ಆಗ್ಲಂ ವೆಬ್ ಸೈಟ್ ವೊಂದು ವರದಿ ಮಾಡಿತ್ತು.  ಪರಸ್ಪರ ಒಪ್ಪಿಗೆಯಿಂದ ಸೆಕ್ಷನ್ 13 ಬಿ ಅಡಿಯಲ್ಲಿ ಅವರು ಡಿವೋರ್ಸ್ ಗೆ ಅರ್ಜಿ ಸಲ್ಲಿಸಿದ್ದರು.

    ಪರಸ್ಪರ ಪ್ರೀತಿಸಿ ಮದುವೆಯಾದ ಈ ಜೋಡಿಗೆ 18 ವರ್ಷಗಳ ನೆನಪುಗಳಿವೆ. ಲಿಂಗ ಮತ್ತು ಯಾತ್ರಾ ಹೆಸರಿನ ಇಬ್ಬರು ಪುತ್ರರೂ ಇದ್ದಾರೆ. ಐಶ್ವರ್ಯ ನಿರ್ದೇಶಕಿಯಾಗಿ ಹಲವಾರು ಚಿತ್ರಗಳನ್ನು ಮಾಡಿದ್ದರೆ, ಧನುಷ್ ನಟನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಹಾಗಾಗಿ ಈ ಜೋಡಿ ದೂರ ಆಗುತ್ತಿರುವುದು ಸಹಜವಾಗಿಯೇ ಅಭಿಮಾನಿಗಳಿಗೆ ಶಾಕ್ ಆಗಿದೆ.

     

    ವಿಚ್ಛೇದನ ಘೋಷಿಸಿದ ನಂತರ ಇಬ್ಬರೂ ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದರು. ಧನುಷ್ ಸಿನಿಮಾಗೆ ಐಶ್ವರ್ಯ, ಪತ್ನಿಯ ಚಿತ್ರಕ್ಕೆ ಧನುಷ್ ಅಭಿನಂದನೆಗಳನ್ನು ಸಲ್ಲಿಸುತ್ತಾ, ಮತ್ತೆ ಒಂದಾಗುವ ಸೂಚನೆ ಎನ್ನುವಂತೆ ದಿನಗಳನ್ನು ದೂಡುತ್ತಿದ್ದರು. ಎರಡು ವರ್ಷಗಳ ಬಳಿಕ ಮತ್ತೆ ಶಾಕ್ ನೀಡಿದೆ ಈ ಜೋಡಿ.

  • ಹೆಚ್‍ಡಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

    ಹೆಚ್‍ಡಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

    – ಮಹಿಳಾ ಆಯೋಗದಿಂದ ಮಾಜಿ ಸಿಎಂಗೆ ನೋಟಿಸ್

    ಬೆಂಗಳೂರು: ಹೆಣ್ಣು ಮಕ್ಕಳ ಬಗ್ಗೆ ನೀಡಿರುವ ಹೇಳಿಕೆ ಸಂಬಂಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿದರೆ, ಇತ್ತ ಮಹಿಳಾ ಆಯೋಗವು ನೋಟಿಸ್ ಜಾರಿಗೊಳಿಸಿದೆ.

    ಮಹಿಳೆಯರ ಬಗ್ಗೆ ಲಘುವಾಗಿ ಮಾತಾಡಿದ್ದಾರೆ. ಮಹಿಳೆಯರು ದಾರಿ ತಪ್ಪಿದ್ದಾರೆ ಅಂತಾ ಮಾತಾಡಿದ್ದಾರೆ. ಮನುವಾದಿ ರೀತಿಯಲ್ಲಿ ಮನಸ್ಸು ಬಂದಂತೆ ಮಾತಾಡಿದ್ದಾರೆ. ಹೀಗಾಗಿ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ (Congress) ನಿಯೋಗ ದೂರಿನಲ್ಲಿ ಒತ್ತಾಯಿಸಿದೆ.

    ನೋಟಿಸ್ ಜಾರಿ: 15 ದಿನದ ಒಳಗಡೆ ಉತ್ತರಿಸುವಂತೆ ಮಹಿಳಾ ಆಯೋಗ ಜಾರಿಗೊಳಿಸಿದ ನೋಟಿಸ್‍ನಲ್ಲಿ ತಿಳಿಸಲಾಗಿದೆ. ರಾಜಕಾರಣಿಗಳು ಮತದ ಸಲುವಾಗಿ ಆಕ್ಷೇಪಾರ್ಹ ಮಾತಾಡೋದು ಸರಿಯಲ್ಲ. ಹೆಣ್ಣಿನ ಬಗ್ಗೆ ಕೀಳು ಮಟ್ಟದಲ್ಲಿ ಮಾತಾಡುವವರು ಎಚ್ಚರಿಕೆ ವಹಿಸಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ. ಇದನ್ನೂ ಓದಿ: ಮಹಿಳೆಯರನ್ನ ಅವಮಾನಿಸಿಲ್ಲ – ಹೆಣ್ಣುಮಕ್ಕಳ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಕುಮಾರಸ್ವಾಮಿ

    ಹೆಚ್‍ಡಿಕೆ ವಿಷಾದ: ತಮ್ಮ ಹೇಳಿಕೆ ಕುರಿತು ವಿಷಾದ ವ್ಯಕ್ತಪಡಿಸಿದ ಹೆಚ್‍ಡಿಕೆ, ಇತ್ತೀಚೆಗೆ ನಾನು ತುಮಕೂರಿನಲ್ಲಿ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದೆ. ಆ ಸಭೆಯಲ್ಲಿ ಹಲವಾರು ವಿಷಯಗಳನ್ನ ಪ್ರಸ್ತಾಪ ಮಾಡಿದ್ದೆ. ಆದರೆ ನಾನು ಹೆಣ್ಣುಮಕ್ಕಳನ್ನು ಅವಮಾನಿಸಿಲ್ಲ. ಮಹಿಳೆಯರ ಬದುಕು ಸರಿಪಡಿಸಬೇಕು ಅಂತ ಹೇಳಿದ್ದೇನೆ. ಗ್ಯಾರಂಟಿ ಕೊಟ್ಟು ಮಹಿಳೆಯರಿಗೆ ಅನ್ಯಾಯ ಮಾಡಿದ್ದಾರೆ ಅನ್ನೋದನ್ನ ಹೇಳಿದ್ದೇನೆ. ಆದರೆ ಕಾಂಗ್ರೆಸ್ ನಾಯಕರು ಅವರಿಗೆ ಬೇಕಾದಂತೆ ನನ್ನ ಹೇಳಿಕೆಯನ್ನ ಬಳಸಿಕೊಂಡಿದ್ದಾರೆ. ನನ್ನ ಹೇಳಿಕೆಯಿಂದ ಮಹಿಳೆಯರಿಗೆ ದುಃಖ ಆಗಿದ್ದರೆ ಈಗಲೂ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದರು.